ದಶಕ -133
ಬಣ್ಣದ ಚಿಟ್ಟೆಯ ಹಾರಲು ಬಿಡದೆ
ಕಣ್ಣಲ್ಲಿ ಕಣ್ಣಿಟ್ಟು ಹಿಡಿದು ತಂದೆ
ಗೂಡಲಿ ಹಾಕಿ ಚೆನ್ನಾಗಿ ಸಾಕಿದೆ
ಎನ್ನುತ ಖುಷಿಯಲಿ ಗೆದ್ದು ಬೀಗಿದೆ
ಸ್ವಾತಂತ್ರ್ಯ ಬಯಸಿ ಹಾರಿ ಹೋದಳು
ಅಂದದಿ ಸಾಕಿದ ಅಕ್ಕರೆ ಮರೆತಳು
ಸಂಬಂಧ ಕಳಚಿ ಹೊರಟೇ ಬಿಟ್ಟಳು
ಕಂಪಿನ ಸ್ವತಂತ್ರ ಬದುಕನು ಕಲಿತಳು
ಪ್ರೀತಿ ಪ್ರೇಮ ಸ್ವಾತಂತ್ಯ ಬೇಕು
ಹಣವೂ ಗುಣವೂ ಜೊತೆಗಿರೆ ಸಾಕು
@ಹನಿಬಿಂದು@
01.03.2025
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ