ಮನದನ್ನೆ ...
ಮನದನ್ನೆ ಕೈಹಿಡಿದು ಮನದೊಳಗೆ ಬರುವಾಗ
ಮನಸಿನ ಒಳಗೆ ತಕದಿಮಿತ
ಮನಸಿನ ಒಳಗೆ ತಕದಿಮಿತ ಕಣ್ಣಲ್ಲಿ
ಮದನನ ಬಾಣ ನೆಟ್ಟಂತೆ..
ಜೊತೆಯಾಗಿ ಕೈ ಹಿಡಿದು ನಡೆಯುತ್ತಾ ಸಾಗಲು
ಸ್ವರ್ಗವೇ ಧರೆಗೆ ಇಳಿದಂತೆ
ಸ್ವರ್ಗವೇ ಧರಿಗೆ ಇಳಿದಂತೆ ಎದೆಯೊಳಗೆ
ಸಾವಿರ ಕುದುರೆಗಳು ಕುಣಿದಂತೆ
ಒಟ್ಟಾಗಿ ಕುಳಿತು ಊಟವ ಮಾಡಲು
ಒಂದೆರಡು ತುತ್ತು ಹೆಚ್ಚಾಗಿ
ಒಂದೆರಡು ತುತ್ತು ಹೆಚ್ಚಾಗಿ ತಿನ್ನುತ್ತ
ಸಮಯ ಕಳೆದದ್ದೆ ಅರಿವಿಲ್ಲ
@ಹನಿಬಿಂದು@
20.04.2026
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ