ನವಪುರಂ ಯಾನ
ಬಂತದೋ ಮಹಾಲಕ್ಷ್ಮಿ ಬಿಳಿಯ ಬಸ್ಸು
ಬೆಟ್ಟ ಹತ್ತುವಾಗಲೇ ಎಲ್ಲರೂ ಅಲ್ಲೇ ಸುಸ್ತು
ಆಗಲೇ ಬಂತು ಇಡಿಯಪ್ಪ , ಶ್ಯಾವಿಗೆ ಕಡ್ಲೆ ಗಸಿ
ತಂದಿತು ಕವಿ ಹೃದಯಕೆ ಭಾರಿ ಹುಮ್ಮಸ್ಸು
ಸೆಕೆಯನು ತಡೆವುದೇ ಪ್ರಯಾಸದ ಮಾತು
ಹತ್ತಲು ಸರಿಯಿತು ಬೇಸರದ ಮಾತು
ಹಸಿರಿನ ಪರಿಸರ ಸ್ವಾಗತ ಮಾಡಿತು
ಚಂಡೆಯ ನಾದ ಮನ ಸಂತೋಷ ತಂದಿತು
ಪುಸ್ತಕ ಸಮರ್ಪಣೆ ಮಾಡಲು ಖುಷಿಯೂ
ಮುತ್ತು ಕೊಡೆಯ ಬಣ್ಣದ ಹಿತವೂ
ಕನ್ನಡ ಮಲಯಾಳಂ ಭಾಷೆಗಳೈಕ್ಯವೂ
ಹಿರಿ ಕಿರಿಯರ ಬಳಗದ ಸಖ್ಯವೂ
ಅಂದದ ಪ್ರಶಸ್ತಿ ಪ್ರಧಾನ ಕಾರ್ಯ
ಚಂದದ ಮಕ್ಕಳ ನೃತ್ಯದ ಶೌರ್ಯ
ಬೆಂದ ಸಾಗರದ ಮಾತಿನ ಮೌಲ್ಯ
ವಂದ್ಯ ನಾರಾಯಣ ಗುರುಗಳ ಕಾರ್ಯ
ಅಲ್ಲಲ್ಲಿ ಹಾಸ್ಯ ಚಟಾಕಿಯ ಲೇಪ
ಭಾಷಣ ಹಾಡು ಕಲಿಯಲು ಇದು ನೆಪ
ಹಂಚಿ ತಿನ್ನುವ ಗುಣದ ಪಾಲನೆ ಇಲ್ಲಿ
ಬೇಧವೇ ಇಲ್ಲದ ಭಾವನೆ ಎಲ್ಲರಲಿ
ಚುರುಕಿನ ಪಟಾಕಿ ಹಾರಲು ನಗುವು
ಮೂಕಾಭಿನಯಕೆ ಭಟ್ಟರ ಒಲವು
ಪುಸ್ತಕ ದೇವಿಗೆ ಸಾಹಿತ್ಯದ ಹರಿವು
ಹಲವು ಭಾಷೆಗಳ ನುಡಿ ಸಂಗಮವು
ಮಾವಿನ ಹಣ್ಣು ಚಕ್ಕುಲಿ ಹಾಗಲ
ತಿನ್ನುತ ಸಾಗಿತು ಪಯಣದ ಜಾಲ
ಹಳೆಯ ಹಾಡಲಿ ನೆನಪಿನ ಕಲರವ
ಹೊಸ ತಲೆಮಾರಿಗೆ ಸಿಂಚನ ಸೌರವ
ಸವಿ ಹೃದಯದ ಕವಿ ಮಿತ್ರರ ಸಂಗಮ
ಕವಿ ಮನಗಳ ಜೊತೆ ಬೆರೆಯುವ ಸಂಭ್ರಮ
ಹೋಳಿಗೆ ಪಾಯಸ ಪರಿಮಳ ಘಮಘಮ
ಸಹಾಯ ಹಸ್ತವ ನೆನೆಯುವ ಹೃನ್ಮನ
ತಂಪಿನ ಮಳೆಯು ಸುರಿಯಲು ಗಗನದಿ
ಕಂಪಿನ ಕವಿ ಸಂಕುಲ ಮೆರೆಯಿತು ಹರುಷದಿ
ಬಿಸಿ ಬಿಸಿ ನೀರು ತಂಪಿನ ಮಜ್ಜಿಗೆ
ನಗುಮೊಗದಿಂದಲೇ ಬಡಿಸಿದ ಆ ಬಗೆ
ಸರ್ವರು ಖುಷಿಯನು ಪಡಲದು ಪಾವನ
ಕವಿಗಳ ಬಳಗಕೆ ನನ್ನಯ ನಮನ🙏
@ಹನಿಬಿಂದು@
28.04.2026
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ