ಗುರುವಾರ, ಜೂನ್ 4, 2026

ನಮಗೆ ಬೆಲೆ ಇಲ್ಲ

ಬೆಲೆ ಇಲ್ಲ ನಮಗೆ

ನಾವು ಮಾನವೀಯ ಮೌಲ್ಯಗಳು 
ಇಂದು ಬೆಲೆ ಇಲ್ಲ ನಮಗೆ 
ಸತ್ಯವನು ಹೇಳಿದವ ಸತ್ತೇ ಹೋಗುವ
ಅನ್ಯಾಯ ಮಾಡಿದವ ಅನ್ನ ತಿನ್ನುವ

ಸುಳ್ಳಿನ ಅರಮನೆ ಕಟ್ಟಿದವ ಮಿತ್ರ
ನೇರ ನುಡಿಯವನು ಎಲ್ಲರ ಶತ್ರು
ಕರುಣೆ ನೆಮ್ಮದಿಗೆ ಜಾಗವಿಲ್ಲ ಇಲ್ಲಿ
ಮರಣ ಸನ್ನಿಹಿತ ಒಳ್ಳೆಯತನಕಿಲ್ಲಿ

ಜಾತಿ ನೀತಿ ಮತ ಧರ್ಮಗಳ ಗೂಡಿನೊಳಗೆ
ಸಿಲುಕಿ ಬಿದ್ದ ಪಾರಿವಾಳ ನಾವು
ಹೊಡೆದಾಡಿ ಪೇಚಿಗೆ ಸಿಲುಕಿ
ನಲುಗಿದ ಗಾಂಧೀಜಿ ಪಟ್ಟ

ಮರಣದವರೆಗೂ ಮೋಸ ವಂಚನೆಯ ಭಯ
ಯಾರೂ ನೀಡುವರಿಲ್ಲ ಅಭಯ
ನಮ್ಮ ಸಹಾಯಕ್ಕೆ ಇಲ್ಲಿ ಯಾರಿಲ್ಲ
ಹಾಗಾಗಿ ದೇವರೇ ಬಂದಿಲ್ಲಿ ನಿಲ್ಲಬಲ್ಲ
@ಹನಿಬಿಂದು@
04.06.2026 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ