ಮಂಗಳವಾರ, ಮೇ 26, 2020

1424. ರಾವಣ

ರಾವಣ

ರಾವಣಾಸುರನಿಗೆ ಹತ್ತು ತಲೆಗಳೆಂಬ ಪ್ರತೀತಿ. ಅಂದರೆ ಅವನು ಒಮ್ಮೆಲೇ ಹತ್ತು ರೀತಿ ವಿವಿಧ ಯೋಚನೆಗಳನ್ನು ಮಾಡಬಲ್ಲ ಶಕ್ತಿಯನ್ನು ಹೊಂದಿರುವ ಬುದ್ಧಿವಂತನಾಗಿದ್ದ. ಈಗಿನ ಹಂಲಿಕ್ಯಾಪ್ಟರ್ ಗಳಂತೆ ಆಗಿನ ಕಾಲದಲ್ಲೆ ಅವನಿಗೆ ಓಡಾಡಲು ಪುಷ್ಪಕ ವಿಮಾನವಿತ್ತು. ಯಾರ ಮಾತನ್ನೂ ಕೇಳದ ತನಗೆ ತೋಚಿದಂತೆ ಮಾಡುವ ಪಾತ್ರ ರಾವಣನದು. ಈ ಪಾತ್ರ ಹೊಸದಲ್ಲ, ಹಲವಾರು ಸಿನೆಮಾಗಳ ವಿಲನ್ ಗಳದ್ದು ಇದೇ ಪಾಡು. ಹಾಗಾಗಿ ಅವರ ಅವನತಿಯನ್ನು ಅವರೇ ತಂದುಕೊಳ್ತಾರೆ. ರಾವಣನದ್ದೂ ಇದೇ ರೀತಿಯ ಜೀವನ.
    ಸಣ್ಣದೊಂದು ಆಸೆ, ಸೀತೆಯನ್ನು ತನ್ನವಳಾಗಿಸಬೇಕೆಂಬುದು. ಅದೇ ಅವನ ಬದುಕಿಗೆ ಮುಳುವಾಗಿ 'ರಾವಣ ಹೆಣ್ಣಿನಿಂದ ಕೆಟ್ಟ' ಎಂಬ ಮಾತುಳಿಯುವಂತೆ ಮಾಡಿತು. ತನಗೇನೇ ಬೇಕೆನಿಸಿದರೂ ಪಡೆದೇ ತೀರುತ್ತೇನೆಂಬ ಅಹಂಕಾರ ರಾವಣನಿಗೆ ಇತ್ತು.  ಆದರೆ ಸೀತೆಯನ್ನು ಕೊನೆವರೆಗೂ ಪಡೆಯಲು ಆಗಲೇ ಇಲ್ಲ.

   ಅಪ್ಪಟ ಶಿವಭಕ್ತ ರಾವಣ ಶಿವನನೊಲಿಸಲು ತಪಸ್ಸು ಮಾಡಿ ಆತ್ಮಲಿಂಗವ ಪಡೆದ. ಆದರೆ ದೇವತೆಗಳೆಲ್ಲರೂ ಸೇರಿ ಗಣಪನ ಮುಖಾಂತರ ಅವನಿಗದು ದಕ್ಕದಂತೆ ಎಚ್ತರವಹಿಸಿದರು. ಉತ್ತಮ ಬುದ್ಧಿಯ ತನ್ನ ತಮ್ಮನ ಮಾತನೆಂದೂ ಕೇಳದ ರಾವಣ ಅಧರ್ಮ ಸೂಚಕ ಪಾತ್ರ. ಅಧರ್ಮಕೆಂದೂ ಬೆಲೆಯಿಲ್ಲವೆಂದೂ, ಅದು ಸೋಲುವುದೆಂದೂ ಸಾರಿದ ಪಾತ್ರ.
@ಪ್ರೇಮ್@
10.05.2020

1423. ಕಸುವು ಬೇಕು

ಕಸುವು ಬೇಕು

ಕಂದಕವೇಕೆ ಕನ್ನಡ ಕಂದನೆ
ಕುಂದದಿರು ಕಪ್ಪಿನ ಕಳೆಯಲ್ಲಿ!
ಕಂದೀಲಿನ ತೆರದಿ ಕಲೆಯುತಲಿ
ಕುಂದದೆ ಕನಸನು ಕಟ್ಟುತಿರು!

ಕೊಂದುಬಿಡು ಕೆಟ್ಟತನದ ಕಸವ
ಕೆಂದಾವರೆ ಕೆನ್ನೆಯಲಿರಲಿ ಕಂಪು
ಕೂದಲ ಎಳೆಯಲು ಕಲಿಯುತಿರು
ಕೈಂಕರ್ಯವ ಕಟ್ಟಿ ಕದಲದಿರು..

ಕೋಪವ ಕೆಸರಲಿ ಹೂತುಬಿಡು
ಕೆಲಸ ಕಾಯಕ ಕಲಿಯುತುರು
ಕನಸಲು ಕಸಿಯುವ ಕಾರ್ಯವನು
ಕವಲಾಗಿಸಿ ಕಿತ್ತೆಸೆಯುತಿರು..

ಕೂಗದೆ ಕುಂದದೆ ಕುಸಿಯದೆ
ಕರಗದೆ ಕನಲದೆ ಕನವರಿಸದೆ
ಕತೃವು ಬಾಳಕಡಲನು ಕಳಿಸಲಿಲ್ಲ
ಕುಳಿತುಂಡರೆ ಆಗದು ಕಸುವ ಕರಗಿಸಬೇಕು
ಕಷ್ಟ ಪಟ್ಟವ ಕನಸಲೂ ಖುಷಿ ಪಡುವ..

ಕೋಶವ ಕರಗಿಸಿ ಕಲಿತಿರಬೇಕು
ಕೋಣೆ ಕೋಣೆಗೂ ತಿರುಗಿರಬೇಕು
ಕೂಸನು ಸಂಬಾಳಿಸೋ ತಾಳ್ಮೆಯು ಬೇಕು
ಕರಗದ ನಿಧಿಯಂಥ ಗುಣವಿರಬೇಕು..
@ಪ್ರೇಮ್@
11.05.2020

1422. 2 ಶಾಯರಿಗಳು

ಶಾಯರಿ-1

ಹುಡುಗಿಯರ ಬಟ್ಟೆಗಳೆಲ್ಲ
ಕಟ್ ಕಟ್, ತುಂಡು - ತುಂಡು!!
ಮುಂದೆ ಬರಬಹುದೇ
ಉಡಲು ಮರದ ಬೆಂಡು?

ಶಾಯರಿ-2

ನಮ್ಮೂರ ಚೆಲುವೆಯರು
ಹೊರಟಿಹರು ವಾಕಿಂಗು!
ಅದ ನೋಡಿ ಹೊರಟವ್ನೆ
ಪಕ್ಕದ ಮನೆ ಪಂಚಿಂಗ್ ಕಿಂಗ್
ತೆಗೆದುಕೊಳ್ಳಲು ಸಿಗರೇಟು ಕಿಂಗ್!!!
@ಪ್ರೇಮ್@ 
15.05.2020

1421. ಹನುಮಾನ್ ಸ್ತುತಿ

ಭಕ್ತಿಗೀತೆ

ಹನುಮಾನ್ ಸ್ತುತಿ


ಜಯ ಜಯ ಹೇ ಮಾರುತಿ ರಾಮ ಪರಿಚಾರಕ
ಜಯ ಜಯ ರಾಮ ಬಂಟನೆ ನಮ್ಮ ಸುಧಾರಕ//

ಸಂಜೀವಿನಿ ಪರ್ವತವ ಹೊತ್ತ ಧೀರನು ನೀನು
ಲಂಕೆಯನು ಹಾರಿ ಮುಟ್ಟಿದಂಥ ಶೂರನು ನೀನು
ರಾವಣಗೆ ಹೆದರದೆ ಸೀತೆಗೆ ಧೈರ್ಯ ತುಂಬಿದವಗೆ/ಜಯ/

ಭೀಮಗೆ ಬಾಲದ ಶಕ್ತಿ ತಿಳಿಸಿದವನು ನೀನು
ತಾನೇ ಬಲಾಡ್ಯನೆಂದು ಮೆರೆದವಗೆ ಬುದ್ಧಿ ಕಲಿಸಿದವ ನೀನು
ರಾಮ ಸೀತೆಯರ ಉಂಗುರ ಬದಲಿಸಿದ ಮಹಾ ಭಕ್ತಗೆ/ಜಯ/

ರಾಮ ಸೀತೆ ಲಕ್ಷ್ಮಣರ ಬೆಂಬಿಡದ ವಾನರೋತ್ತಮ
ಕಾಮ ಕ್ರೋಧ ಮೋಹಕೆ ವಿರೋಧನಾದ ಪರಮಾತ್ಮ
ರಾಮ ಲಕ್ಷ್ಮಣರ ಹೃದಯದಿ ಕೂರಿಸಿಹ ಭಕ್ತ ಶ್ರೇಷ್ಠಗೆ/ಜಯ/
@ಪ್ರೇಮ್@
16.05.2020

1420. ಮನಸ್ಸು

ಮನಸ್ಸು

ಮನವು ಚಿತ್ತಾರದ ರಂಗೋಲಿ
ಬಣ್ಣ ಬಣ್ಣದ ಚಿತ್ರಾವಳಿ
ಹೊರಹಗೊಂದು ಬಣ್ಣ, ಒಳಗೊಂದು
ಯಾರರಿಯರು ಹರಿಯ ಹೊರತು?
ಪರರ ಬಗೆಗಿನ ಭಾವಗಳ ಒರತೆ!

ಈಗೊಂದು, ಮತ್ತೊಂದು
ನಾಳೆ ಮಗದೊಂದು ಬಣ್ಣ!
ಗೋಸುಂಬೆಯಂತೆ ಆಗಾಗ ಬದಲು
ನೋಡು ನೋಡುತಿರೆ ಬೇರೆಯೇ
ಸತ್ಯವ ಸುಳ್ಳಾಗಿಸಿ, ಸುಳ್ಳನು ಸತ್ಯವಾಗಿಸಿ!!!
@ಪ್ರೇಮ್@
17.05.2020

1419. ಒಲವು

ಒಲವು

ಮೇಘದೊಡನೆ ಹೇಳಿ ಬಂದೆ
ಹಿಮದೊಳಡಗಿಸೆನ್ನ
ಹೋಗ ಬೇಡ ಅವಳ ಬಿಟ್ಟು
ಮಳೆ ಸುರಿವುದಣ್ಣ..

ಚೈತ್ರ ಮಾಸ ಬರಲು ಬೇಗ
ಚಿಗುರ ತುಂಬ ಬಣ್ಣ..
ಒಲವ ಹಣತೆ ಮೂಡಿ ಬರಲು  
ಮನದ ತುಂಬಾ ಕನಸಣ್ಣ..

ಬದುಕು ಸಂತಸದ ಹಾದಿಯಲ್ಲ
ಉಸಿರು ನಿಲ್ಲಲು ಕೊನೆಯು ಎಲ್ಲ
ಬೇಕು ಛಲ ನಮಗೆ ಬೆಳೆಯೆ ಹಸಿರೆಲ್ಲ
ಧೀರನಾಗಿ ತಲೆಯೆತ್ತಿದೊಡೆ ಬಾಳು ಬೆಲ್ಲ..

ನೀರು ಬೆಳಕನು ದೇವ ಕೊಡುವನು
ಸ್ವಂತ ಕಾರ್ಯವ ಮಾಡೆ ಕಾಯ್ವನು
ತಾನು ತನ್ನದು ಎಂಬುದೇನಿದೆ
ಉಸಿರ ಹಿಡಿದು ತಾ ಬದುಕ ಬೇಕಿದೆ..

ಬೆರಗುಗೊಳ್ಳುವ ಬಾಳ್ವೆ ನಮ್ಮದು
ಪ್ರತಿ ಕ್ಷಣದಲು ಕವಲು ತಪ್ಪದು
ಒಬ್ಬರಂತೆ ಮತ್ತೊಬ್ಬರ ಸಮಯವಿರದು
ಪರರೊಂದಿಗೆ ನಮ್ಮ ಬಾಳ ಹೋಲಿಸಲಾಗದು..

ನಾನೆ ಮೇಲು ನಾನೆ ಕೀಳು
ಎಂಬ ಮಾತು ಬರಿಯ ಸುಳ್ಳು
ಪ್ರತಿ ಜೀವ ತಾನು ಬೇರೆಯೇ
ಕೈಯ ಹಿಡಿಯುವ ಒಂದೇ ಶಕ್ತಿಯೇ..
@ಪ್ರೇಮ್@
20.05.2020

1418. ಗಝಲ್

ಗಝಲ್

ಕ್ಯಾ ಕರೇ ಎರಡು ಹೃದಯವೊಂದಾಗಿದೆ ಜಾನು
ಕೈಸೇ ಕರೆ ದೂರ ಹೋಗಲಾಗದೆಂದಿದೆ ಜಾನು..

ಮೊಹಬ್ಬತ್ ನಲಿ ಮುಳುಗಿ- ಹೋಗಿರುವೆ ಸದಾಕಾಲ ತೇರೇ ಸಾಥ್
ಮೋಹವೆಂದರೇನು ಎಂದು ಅರಿತಿರುವುದು ನಿಜವಾಗಿದೆ ಜಾನು..

ಪ್ಯಾರ್ ಎಂಬುದು ದಿಗಂತದಂತೆ ಬೇರೆಯಾಗದು ಎನುವರು
ಮೇರೇ-ದಿಲ್ ನಿನ್ನೇ  ಜೀವನ ಪೂರ್ತಿ  ಬೇಕೆಂದಿದೆ ಜಾನು..

ಮೈ ಖೋಗಯಾ ಇಷ್ಕಿನಲಿ ಹಗಲಿರುಳು ನಿನ್ನೊಳಗೆ.
ಪ್ರತಿ ಕ್ಷಣವೂ ಗಡಿಯಾರದಂತೆ ನಿನ್ನೊಳಗೆ ಮನ ಸುತ್ತುತಿದೆ ಜಾನು..

ತೂಹೀ ಮೇರಾ ಎಂದಿದೆ ಪ್ರತಿ ಎದೆ ಬಡಿತ..
ತಾಳ ನಾನಾದರೆ ರಾಗ ನೀನಾಗಬಾರದೆ ಜಾನು..

ಮಾಂಗ್ ರಹಾ ಹೇ ನಿನ್ನದೇ ಜೊತೆಯನು ಹೃದಯ
ಮಾನ್ಯ ಮಾಡು ಮುದ್ದು ಎನುತ ಹಾಡುತಿದೆ ಜಾನು..

ದಿಲ್ ಜೋಡ್ ಗಯಾ ಎರಡು ಸೇತುವೆಯಿಲ್ಲದೇ ಜೊತೆಯಲಿ.
ಪ್ರೇಮ್ ಕೇ ಪಾಸ್ ಬೇರಾರು ನೀನಲ್ಲದೆ ಜಾನು?
@ಪ್ರೇಮ್@
22.05.2020

1417. ವಚನ

ವಚನ-1
ಕಾಸು ಕಾಸೆಂದು ಕಾಸಿಗಾಗಿ ಬಾಯಿ ಬಿಡುವಿರಿ ಮಾನವರೆ
ಹಾಸಿ ಹೊದೆಯುವಷ್ಟೆ ಇರಲಿ ಬಾಳಲಿ
ಹಾಸಿಗೆಯಿಂದಲೂ ಕೆಳಗಿಳಿದರೆ ಬದುಕು ವಾಸನೆಯಾಗುವುದಲ್ಲವೇ ಈಶಾ..

@ಪ್ರೇಮ್@
27.05.2020

1416. 2 ಟಂಕಾಗಳು

ಟಂಕಾ-1

ಮನದೊಳಗೆ
ಏನ ಬಚ್ಚಿಟ್ಟಿರುವೆ
ಮೌನ ಪುತ್ರನೇ
ಹೊರಗೆಡಹು ಎಲ್ಲ
ಆಗಲಿ ಬೇವಿಬೆಲ್ಲ

ಟಂಕಾ-2

ನೃತ್ಯಶಾಲೆಯು
ಜಗದಿ ನಲಿಯೋಣ
ಮುದದಿ ಬಾಳು
ಹೋಗಲಿದೆ ಒಮ್ಮೆ
ಬಂದ ದಾರಿ ಹುಡುಕಿ..
@ಪ್ರೇಮ್@
24.05.2020

1415. ಸುಲಭವಿಲ್ಲ

ಸುಲಭವಿಲ್ಲ ..

ತಪವ ಮಾಡ ಹೊರಟು ತನು
ತಡೆಯಲಾರ ಇಹದ ದಾಹ
ತಡೆಯದಾದ ಸುಖದ ಭಾವ
ತಡವರಿಸಿದ ಮಂತ್ರೋಚ್ಛಾರ
ತಪ್ಪು ತಪ್ಪು ವಕ್ರ ವಕ್ರ  ಗಮನ

ತೋರ್ಪಡಿಸದೆ ಸುಮ್ನೆ ಕುಳಿತ
ತಳಮಳವು ಮೈ ಮನದೊಳು
ತಡೆಯದಾದ ತಾಕಲಾಟಗಳನು
ತೋಳ ಗಟ್ಟಿ ಹಿಡಿದು ತಮ್ಮ
ತಳ್ಳ ತೊಡಗಿದ ಕ್ಷಣಗಳನು

ತಪಸ್ಸು ನೇರ ಹೋಗದೆ ಓರೆಯಾಯಿತು
ತಮಸ್ಸು ಬರದೆ ಕುಳಿತದ್ದು ಸುಮ್ಮನಾಯಿತು
ತಿನ್ನುವಂಥ ಜೀವವದು ಉಪವಾಸ ಇರುವುದೇ?
ತಪವು ಕುಳಿತುಕೊಂಡ ಹಾಗೆ ಸುಲಭವಿರುವುದೇ?

ತಪವ ಬಿಟ್ಟು ಓಡಿಹೋಗಿ ಮನೆಯ ಸೇರಿದ
ತಪವು ಎನಗೆ ಬೇಡವೆನುತ ತಾನೇ ಹೇಳಿದ
ತಮಾಷೆ ಮಾಡಿ ನಕ್ಕ ಹಾಗೆ ಅಲ್ಲ ಜೀವನ.
ಪ್ರತಿ ಕಾರ್ಯಕೂ ಕಠಿಣ ನಿರ್ಧಾರ ಬೇಕಿದೆ
ತತ್ವವರಿತು ಪಾಲಿಸುತ ಬಾಳಬೇಕಿದೆ.
@ಪ್ರೇಮ್@
26.05.2020

1414. ಊರು

ಊರು

ಆ ಊರೇ ವಿಚಿತ್ರ. ನಾಲ್ಕು ಸುತ್ತಲೂ ಕಾಡು, ಎತ್ತರದ ಪರ್ವತ. ಯಾರೂ ಊಹಿಸಲಾರದ ಊರದು. ಬಹಳ ಹಿಂದಿನ ಕಾಲದಲ್ಲಿ ಕಾಡಿನ ಮಧ್ಯೆ ಸಮತಟ್ಟಾದ ಆ ಜಾಗದಲ್ಲಿ ಆನೆಗಳು, ಹುಲ್ಲು ತಿನ್ನುವ ಪ್ರಾಣಿಗಳೇ ವಾಸಿಸುತ್ತಿದ್ದವಂತೆ. ಅಲ್ಲಿಗೆ ಜನರು  ಯಾರೂ ಹೋಗದ ಕಾರಣ, ಊರಿಗೆ ಅಲ್ಲಿನ ಆನೆಗಳು ಕೆಲವೊಮ್ಮೆ ನುಗ್ಗುವ ಕಾರಣ ಜನ ಆ ಊರಿಗೆ "ಆನೆಕಾಡು" ಎಂದೇ ಹೆಸರಿಟ್ಟರು.

  ಆದರೆ ಕಾಲಾನಂತರ ಜನರು ವಾಸಿಸದ ಜಾಗವಾವುದು ಹೇಳಿ? ಒಂದು ಕುಟುಂಬ ಅಲ್ಲಿ ಹೋಗಿ ಬೇರು ಬಿಟ್ಟಿತು. ಅಣ್ಣ ತಮ್ಮಂದಿರಲ್ಲಿ ಜಗಳವಾಗಿ ಮೂರು-ನಾಲ್ಕು ಮನೆಗಳಾದವು. ಅವರ ಮುಂದಿನ ತಲೆಮಾರಿನಲ್ಲಿ ಹತ್ತು-ಹನ್ನೆರಡಾಗಿ ತದನಂತರ ನಲವತ್ತು ಮನೆಗಳಾದವು. ಆದರೆ ಇಂದಿಗೂ ಅಲ್ಲಿಗೆ ಸರಿಯಾದ ರಸ್ತೆಗಳಿಲ್ಲ, ಮೊಬೈಲ್ ನೆಟ್ವರ್ಕ್, ಟವರ್ ಗಳಿಲ್ಲ. ಕುಡಿಯಲು ಕಾಡ ನೀರು. ತಿನ್ನಲು ಮನೆ ಸುತ್ತ ಬೆಳೆದ ಹಣ್ಣು, ತರಕಾರಿ, ಗೆಡ್ಡೆ ಗೆಣಸುಗಳೇ. 

  ಜನರಾದರೂ ತುಂಬಾ ಸ್ವಾಭಿಮಾನಿಗಳು, ಕಷ್ಟ ಸಹಿಷ್ಣುಗಳು, ತೋಟ ಗದ್ದೆಯೆಂದು ತಮ್ಮಷ್ಟಕ್ಕೆ ತಾವು ತುಂಬಾ ಸಂತಸ ಸಹಕಾರದಿ ಬದುಕುವವರು. ತಮ್ಮ ಮಕ್ಕಳನ್ನು ದೂರದ ಒಳ್ಳೆಯ ಶಾಲಾ ಕಾಲೇಜುಗಳಲ್ಲಿ ಓದಿಸಿ ನಗರಗಳಿಗೆ ಕೆಲಸಕ್ಕೆ ಕಳುಹಿಸಿದವರು. ಪ್ರತಿ ಕೂಳಿಗೂ ಕಷ್ಟಪಟ್ಟವರು.
  ದೇವರು ನೊಂದುಕೊಂಡರೋ, ಹೊಟ್ಟೆಕಿಚ್ಚು ಪಟ್ಟರೋ ಗೊತ್ತಿಲ್ಲ, ವರುಣನ ಅಟ್ಟಹಾಸ ಮಲೆನಾಡಿಗೆ ತಟ್ಟಿ, ಅದರೊಡನೆ ಆನೆಕಾಡಿನ ಜನರಿಗೂ ತಟ್ಟಿತು. ಭೂಕಂಪದ ಅನುಭವವಾಗಿ, ಗುಡ್ಡ ಸೀಳಿ ಹಲವಾರು ಜನರ ಮನೆ,ಆಸ್ತಿ ಪಾಸ್ತಿಗೆ ತೊಂದರೆಯುಂಟಾಗಿ ಜನಗಳು ಗಂಜಿ ಕೇಂದ್ರಗಳ ಸೇರುವಂತಾಯ್ತು. ದನ ಕರುಗಳಿಗೂ ಕಷ್ಟವಾಯ್ತು. ಮಳೆ ಕಡಿಮೆಯಾಗಲು ಜನ ತಮ್ಮ ಮನೆಗಳಿಗೆ ತೆರಳಿ ಮತ್ತೆ ಜೀವನ ಪ್ರಾರಂಭಿಸಿರುವರು. ಕಾರಣ ಉತ್ತಮ ಮನ, ದುಡಿದು ಬದುಕುವೆವೆಂಬ ಛಲ..
@ಪ್ರೇಮ್@
27.05.2020

1413. ಮಾತೆ

ಭಾವಗೀತೆ

ಮಾತೆ

ಸನಿಹದಲು ದೂರದಲು ನೀನನ್ನ ಮನವೇ
ಬಾಚಿ ತಬ್ಬದಿದ್ದರೂ ಪ್ರಿಯ ನಿನ್ನ ಗುಣವೇ

ಅಕ್ಷರವ ಕಲಿತಿಲ್ಲ, ಪ್ರೇಮ ಪಾಠವ ತಿಳಿದಿಹೆ
ಬದುಕೆಂದರೇನೆಂಬ ಪಾಠ ನೀ ಕಲಿಸಿರುವೆ
ತೊದಲು ಮಾತನು ನನಗೆ ಸರಿಪಡಿಸಿ ಹೇಳಿರುವೆ.
ಬಿದ್ದು ಅತ್ತಾಗ ಎತ್ತಿ ಮುದ್ದಾಡಿರುವೆ

ಕಾಯಕವೇ ಕೈಲಾಸ ಎಂಬ ಮಾತನು ಉಳಿಸಿ
ಕೆಲಸ ಕಾರ್ಯದ ನಡುವೆ ಪೊರೆದೆನ್ನ ಸಾಕಿರುವೆ
ತನ್ನದೆನ್ನುವ ಸಕಲ ಆಸೆಗಳ ನೀ ಮರೆತು
ಮಗುವ ಜೀವನಕೆಂದು ಸರ್ವವನು ಮುಡುಪಿಡುವೆ..

ಬಾಳ ಬಾಂದಳದಲ್ಲಿ ಸೂರ್ಯ ಚಂದ್ರರ ಬೆಳೆಸಿ
ಹಲವು ತಾರೆಗಳಿಗೂ ನೀನಾಸರೆಯ ನೀಡಿರುವೆ
ಮೋಸ ವಂಚನೆಯೆಂಬ ಪದವ ಮರೆತಿರುವೆ
ಪ್ರೀತಿ ತುತ್ತನು ನೀಡಿ ಸಂಸಾರ ನಡೆಸಿರುವೆ..
@ಪ್ರೇಮ್@
28.05.2020

1412. ನಾಯಿಮರಿ



ಮುದ್ದು

ಮುದ್ದು ಮುದ್ದು ನಾಯಿಮರಿಯ ಸಾಕುತಿರುವೆನು
ಅದರ ಪ್ರೀತಿಯಿಂದ ನಾನು ಖುಷಿಯ ಪಡುವೆನು..

ಸ್ನಾನವದಕೆ ನಿತ್ಯ ಬೇಕು
ಹಸಿರು ತರಕಾರಿ ಬೇಡ
ತುಂಡು ಮೀನು ಮಾಂಸ ಮೊಟ್ಟೆ
ಹಾಲು ಬೇಕು, ಹಣ್ಣು ಬೇಡ. 

ಊಟದಲ್ಲು ಬಹಳ ಶಿಸ್ತು
ತಟ್ಟೆ ಜಾಗ ಸ್ವಚ್ಛ ಬೇಕು
ತನ್ನ ತಟ್ಟೆಯಲ್ಲಿ ಬೇರೆ ನಾಯಿಗಳಿಗೆ ಜಾಗವಿಲ್ಲ
ತನಗೆ ಮಾತ್ರ ಮೀಸಲಲ್ವ..

ಪ್ರೀತಿಯೆಲ್ಲ ತನಗೇ ಬೇಕು
ಮಕ್ಕಳನ್ನ ಮುದ್ದು ಮಾಡ್ಲೇ ಬಾರ್ದು
ವಾಸ್ತವದಿ ತಾನೇ ಮಗುವು
ಸರ್ವರದನು ಮುದ್ದಾಡಬೇಕು..

ಜಿಮ್ಮಿ ನಾಯಿ ಬಹಳ ಜೋರು
ಬಿಡದು ಯಾರ ಬರಲು ಒಳಗೆ
ಪೇಪರೊಂದು ಕಟ್ಟು ನೋಡೆ
ನೆನಪಾಗುವುದು ಕಬಾಬ್ ಅದಕೆ..
@ಪ್ರೇಮ್@
28.05.2020