ಸೋಮವಾರ, ಏಪ್ರಿಲ್ 17, 2023

ಆಸೆ

ಆಸೆ

ಕೇಳಬೇಕೆಂದು ಆಸೆಯಾಗುತ್ತಿದೆ
ನಿನ್ನ ಕಂಠದಿಂದ ಹೊರಬರುವ
ಪ್ರೀತಿಯ ಮಧುರ ನುಡಿಗಳು
ಕಡಲಾಳದಿಂದ ಆರಿಸಿ ತೆಗೆದ ಮುತ್ತುಗಳು

ನೀ ಎಂದು ಬರೆಯದ ಆ ಸಾಲುಗಳು
ನನ್ನೆದೆ ಎಂಬ ಪುಸ್ತಕದಲ್ಲಿ ಹೆಚ್ಚಾಗಿವೆ
ನಿನ್ನ ಪ್ರೀತಿಯ ಪೆನ್ನಿನ ಶಾಯಿಯಲ್ಲಿ ಬರೆಯಬೇಕಾಗಿದೆ
ಅದೆಂದಿಗೂ ಅಳಿಯದ ಸಾಲುಗಳು

ಪ್ರೀತಿ ಸ್ನೇಹ ಮೋಹ ಸಹಕಾರ ಅಭಿಮಾನ
ನನಗೆ ನೀನು ನಿನಗೆ ನಾನೆಂಬ ಮಮಕಾರ
ಜಾತಿ ಧರ್ಮ ಮತಗಳ ಮೆಟ್ಟಿ ನಿಂತ ಕಾವಲು
ರಾಜಕೀಯ ಸುಳಿಯದ ನಮ್ಮದೇ ಕಣ್ಗಾವಲು
@ಹನಿಬಿಂದು@
15.04.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ