ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ಸ್ತ್ರೀಯರ ಸಬಲತೆ ಭಾರತದಲ್ಲಿ 21ನೇ ಶತಮಾನದಲ್ಲೂ ಸಾಲದು.ಇದಕ್ಕೆ ಮುಖ್ಯ ಉದಾಹರಣೆ ಆಗಾಗ ಪೇಪರ್ಗಳಲ್ಲಿ ಓದುವ ಸಾಮೂಹಿಕ ಅತ್ಯಾಚಾರ. ಇದರಲ್ಲಿ ಪುರುಷರಷ್ಟೇ ಮಹಿಳೆಯರ ಪಾಲೂ ಇದೆ. ಅದು ಹೇಗೆಂದರೆ ಯಾವುದೇ ಹುಡುಗನನ್ನು ಸಾಕುವವಳು ತಾಯಿ. ಸ್ವಂತ ತಾಯಿ ಇಲ್ಲವೇ ಸಾಕು ತಾಯಿ. ಆ ತಾಯಿ ಎಂದಿಗೂ ಹುಡುಗಿಯರ ಬಗ್ಗೆ ಕೆಟ್ಟದಾಗಿ ಅಥವಾ ಕೀಳಾಗಿ ನಡೆದುಕೊಳ್ಳಲು, ಅವರಿಗೆ ಗೌರವ ಕೊಡದಿರಲು ಹೇಳಿಕೊಡಲಾರಳು. ಆದರೆ ಅವಳ ಬೆಳೆಸುವ ರೀತಿ ಎಲ್ಲೋ ಎಡವಿರಬಹುದು. ಅಥವಾ ಮಗ ತಪ್ಪಾಗಿ ಅರ್ಥೈಸಿಕೊಂಡಿರಬಹುದು. ಯಾವುದೋ ಹೆಣ್ಣಿನ ವರ್ತನೆ ಅವನನ್ನು ಆ ಕೆಲಸಕ್ಕೆ ಮನಃಪರಿವರ್ತನೆ ಮಾಡಿರಬಹುದು. ಅಲ್ಲಿ ಆ ಹೆಣ್ಣಿನ ಪಾತ್ರ ಇದೆ ಎಂದಾಯಿತು.
ಅಜ್ಜಿ,ತಾಯಿ,ತಂಗಿ,ಅಕ್ಕಂದಿರ ಜೊತೆ ಪ್ರೀತಿಯಲ್ಲಿ ಬೆಳೆದ ಯಾವ ಸಭ್ಯ ಹುಡುಗನೂ ಸಹ ಒಂದು ಹೆಣ್ಣಿನ ಮಾನ ಕಾಪಾಡುವನೇ ಹೊರತು ಅವನೆಂದಿಗೂ ಮಾನ ಕಳೆಯಲಾರ!
ಮನುಷ್ಯ ಮನುಷ್ಯತ್ವ ಇಲ್ಲದೆ ಇದ್ದರೆ ಅವರು ಪ್ರಾಣಿಗಳಿಗೆ ಸಮಾನ. ಇದು ಹೆಣ್ಣು ಮಕ್ಕಳಿಗೂ ಅನ್ವಯಿಸುತ್ತದೆ. ಯಾವುದೇ ಹೆಣ್ಣು ಮುಂದುವರಿಯದೆ ಯಾವ ಗಂಡಿಗೂ ಮುಂದುವರೆಯಲು ಧೈರ್ಯ ಬರಲಿಕ್ಕಿಲ್ಲ! ಅಲ್ಲದೇ "ಲೇಡೀಸ್ ಕೇಸ್ ಗೆ ಬೇಲ್ ಇಲ್ಲ, ಅವರ ಸುದ್ದಿ ನಮಗ್ಯಾಕೆ?ಒಂದು ಕ್ಷಣಕ್ಕಾಗಿ ಜೀವನ ಹಾಳು ಮಾಡಿಕೊಳ್ಳೋದು ಏಕೆ?" ಎಂದುಕೊಂಡು ಹಲವರು ಸುಮ್ಮನಿದ್ದರೆ, ಇನ್ನು ಕೆಲವರು ತಮ್ಮದೇ ಆದ ಗುರಿಗಳನ್ನಿಟ್ಟುಕೊಂಡು ಅದಕ್ಕೆ ತಯಾರಿ ನಡೆಸುತ್ತಿರುತ್ತಾರೆ. ಕೆಲಸವಿಲ್ಲದ, ಮನೆಯಲ್ಲಿ ಬೇಕಾದಷ್ಟು ತಿಂದು ತೇಗುವಷ್ಟಿದ್ದು,ಮಾಡಲು ಕೆಲಸವಿಲ್ಲದ, ದುಷ್ಚಟಗಳಿಗೆ ದಾಸರಾದ, ಪೋಷಕರ ಪ್ರೀತಿ ಹಾಗೂ ಕಾಳಜಿ ಇಲ್ಲದ ಇಂತಹ ಹೀನ ಕೃತ್ಯಕ್ಕೆ ಕಾರಣರಾಗುತ್ತಾರೆ. ಇದನ್ನೆಲ್ಲ ಚಲನಚಿತ್ರಗಳಲ್ಲಿ,ಟಿವಿಗಳಲ್ಲಿ ನಾವಿದನ್ನು ನೋಡುತ್ತಲೇ ಇರುತ್ತೇವೆ!
ಮನಸ್ಸುಗಳನ್ನು ಎಂದೂ ಕೆಡಲು ಬಿಡಬಾರದು. ಹುಡುಗನಾಗಲಿ, ಹುಡುಗಿಯಾಗಲಿ ,ಎಲ್ಲೇ ಇರಲಿ,ತಮ್ಮ ಎಲ್ಲೆಯೊಳಗೆ ಬದುಕಲು ಕಲಿಯಬೇಕು. ಪೋಷಕರು ತಮ್ಮ ಮಗ,ಮಗಳು ಹೇಳಿದ್ದನ್ನೆಲ್ಲ ಕೋಲೆ ಬಸವನಂತೆ ನಂಬದೆ,ಪ್ರತ್ಯಕ್ಷವಾಗಿ, ಪ್ರಮಾಣಿಸಿ ನೋಡಬೇಕು. ತಮ್ಮ ಮಕ್ಕಳೆಡೆಗೆ ಸದಾ ಗಮನ ಕೊಡಬೇಕು. ಕೆಟ್ಟ ದಾರಿಗಳೆಡೆ ಹೋಗುವುದು ಸುಲಭವಾದರೂ, ಒಮ್ಮೆ ಕೆಟ್ಟ ಚಟಕ್ಕೆ ದಾಸನಾದರೆ ಸರಿಯಾಗುವುದು ಕಷ್ಟ. ಸಮಾಜಕ್ಕೆ ಒಳ್ಳೆಯ ಮಕ್ಕಳನ್ನು ಕೊಡುವ ಜವಾಬ್ದಾರಿ ಪ್ರತಿ ತಂದೆ ತಾಯಿಗೂ ಇದ್ದಲ್ಲಿ ಈ ತರಹದ ಯಾವುದೇ ಕುಕೃತ್ಯಗಳಾಗಲು ಸಾಧ್ಯವಿಲ್ಲ. ನೀವೇನಂತೀರಿ?
@ಪ್ರೇಮ್@
ಮಂಗಳವಾರ, ಡಿಸೆಂಬರ್ 12, 2017
30. ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ-3
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ