ಸೊಬಗು (ಕವನ1)
ಬಣ್ಣಿನೆಂತು ಆ ಪರಿ?
ಮೊಗದಲೊಂದು ತುಂಟ ನಗೆಯು,
ಕಾಲಗೆಜ್ಜೆ ಬಡಿವ ಚೆಲುವು...
ಕೈಯ್ಯಲೇನೊ ಹಿಡಿದ ಪರಿಯು,
ಕಂದ ನಿನ್ನ ಆಟ ಚೆಲುವು...
ಕಲಕಲನೆನೊ ನುಡಿಯು ಚಂದ,
ಹೆಜ್ಜೆ ಮೇಲೆ ಹೆಜ್ಜೆ ಅಂದ,
ಬಣ್ಣ ಬಣ್ಣದ ಆಟಿಕೆ ಸೊಬಗ
ಮೆಚ್ಚದಿರಲು ಏನು ಚಂದ?
ಪುಟ್ಟ ಪುಟ್ಟ ಪಾದ ಸ್ಪರ್ಶ,
ದಿಟ್ಟ ದಿಟ್ಟ ಆಟ ಹರ್ಷ,
ಮನೆಯೊ ಕಾಡೊ ಅರಿಯಲೊಲ್ಲೆ,
ಖುಷಿಯಲೆಂದೂ ಆಡಬಲ್ಲೆ..
@ಪ್ರೇಮ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ