ಮಂಗಳವಾರ, ಡಿಸೆಂಬರ್ 19, 2017

5. 5 ಹನಿಗವನಗಳು-ಬದುಕು

ರಾಗಿಯ ಕಾಳಂದದಿ ಜೀವನ..
ನೋಡಲು ಕಪ್ಪು..
ಯಾರಿಗೂ ಬೇಡ..
ಸರಿಯಾಗಿ ಪುಡಿಮಾಡಿ
ಹದವಾಗಿ ಕುದಿಸಿ ಮುದ್ದೆ ಮಾಡಿ
ಸಾಂಬಾರಿನೊಂದಿಗೆ ನುಂಗಿದರೆ
ಆಗ ತಿಳಿವುದದರ ಮಹತ್ವ..
ತಾಳ್ಮೆ ಕಡಿಮೆ ನಮ್ಮ ಹತ್ರ..
@ಪ್ರೇಮ್@

ಮನವೇ ಹೋಗು ನೀ
ಭಾರವಾಗಿದೆ ಜೀವನ
ನೇಸರನಂತೆ ಸುಡುತಿದೆ ಮನ
ಬೇಡವಾಗಿದೆ ತನುಮನ...
@ಪ್ರೇಮ್@

ಬದುಕೇ ಹಾಗೆ
ತಂತಿ ಮೇಲಿನ ನಡಿಗೆ
ತಪ್ಪಿದರೆ ಅಡಿಗೆ,
ಒಪ್ಪಿದರೆ ತಂತಿಗೆ..
@ಪ್ರೇಮ್@

: ಬದುಕ ಹೂ ಮಾಲೆಯಲಿ
ಸರಿಯಾದ ಪೋಷಣೆ ಅಗತ್ಯ..
ನೀರು ಹನಿಸಿ ಬಟ್ಟೇಲಿ ಕಟ್ಟಿ
ಕಾಪಾಡಬೇಕು ನಿತ್ಯ..
ಇಲ್ಲದಿರೆ ಬಾಡಿ ಹೋಗೋದು ಸತ್ಯ..
@ಪ್ರೇಮ್@

ಬದುಕ ತಾಂಬೂಲ
ಸವಿಯಲು ಸುಲಭವಿಲ್ಲ..
ಗಟ್ಟಿ ಗೋಟಡಕೆ..
ಒಣಗಿಹ ಎಲೆ..
ಕಲ್ಲು ಕಲ್ಲಾದ ಸುಣ್ಣ
ಬೇಕಾದಷ್ಟು ಹೊಗೆಸೊಪ್ಪು..
ತಾಳೆಯೇ ಇಲ್ಲ ಯಾವುದಕ್ಕೂ..
@ಪ್ರೇಮ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ