ಮಂಗಳವಾರ, ಡಿಸೆಂಬರ್ 26, 2017

73. 6. ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ-8

ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ-6
ದಾನಮ್ಮ ಎಂಬ ಪುಟ್ಟ ಹುಡುಗಿ ಇದೀಗ ಎಲ್ಲಾ ಜಿಲ್ಲೆಗಳ ಬಂದ್ಗೆ ಕಾರಣ. ಛೆ! ಪಾಪ!ಅವಳ ಜೀವದ ಬಗ್ಗೆ ನೆನೆಸಿಕೊಂಡರೆ ಬೇಸರವಾಗುತ್ತದೆ.. ಒಂದೆರಡು ತೊಟ್ಟು ಕಣ್ಣಿಂದ ಹಾಗೇ ಜಾರಿ ಬೀಳುತ್ತವೆ. ನಿರ್ಭಯಾ ವಿಚಾರದಲ್ಲೂ ಹಾಗೇ ಆಗಿತ್ತು.ಮತ್ತದು ಮರುಕಳಿಸಿದೆ. ಇದಕ್ಕೆ ಮುಖ್ಯ ಕಾರಣ ಅಕ್ಷರಸ್ಥ ಮುಠ್ಠಾಳ ಜನರು! ಅನಕ್ಷರಸ್ಥ ಅವಿದ್ಯಾವಂತ ಜನರಿಗೂ ಹೆಣ್ಣು ಮಕ್ಕಳಿಗೆ ಭದ್ರತೆ ಕೊಡಲು, ಗೌರವಿಸಲು ಗೊತ್ತು.
  ಆದರೆ ಇಂದಿನ ಯುವ ಅಕ್ಷರಸ್ಥರಾದರೂ ಅವಿದ್ಯಾವಂತರು. ಬದುಕಿನ ವಿದ್ಯೆ ಅವರಲ್ಲಿ ಇಲ್ಲ! ನಾಚಿಕೆಯಾಗಬೇಕು ಗಂಡು ಜನ್ಮಕ್ಕೆ! ಬೇಡದ,ಕೆಟ್ಟ ವಿಡಿಯೋಗಳನ್ನೇ ನೋಡಿ ಬೆಳೆಯುತ್ತಿರುವ ಇಂದಿನ ಗಂಡು ಮಕ್ಕಳು ಅನೇಕರಿಗೆ ತಾಯಿ,ತಂಗಿ,ಅಕ್ಕ ಹೆಂಡತಿ ಇವರ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ, ಇನ್ನು ಅವರು ಇತರ ಹೆಣ್ಣು ಮಕ್ಕಳನ್ನು ಯಾವ ರೀತಿ ನೋಡಿಯಾರು ಎಂಬುದಕ್ಕೆ ಜೀವಂತ ಉದಾಹರಣೆ ಇದು.
  ಆದರೆ ನಾನು ಕಂಡು ಕೊಂಡಂತೆ ತನ್ನ ಪಾಡಿಗೆ ತಾನಿದ್ದರೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಹೆಣ್ಣು ಮಕ್ಕಳಿಗೆ ಇಲ್ಲಿನ ಜನರಿಂದ ಯೂವುದೇ ಕಿರಿಕಿರಿ ಆಗಲಿಕ್ಕಿಲ್ಲ! ಕಾರಣ ಇಲ್ಲಿ ಹೆಚ್ಚಿನವರಿಗೆ ತಾವೇ ದುಡಿದು ತಮ್ಮ ಜೀವನ ರೂಪಿಸಬೇಕಾದ ಅಗತ್ಯತೆ ಇದೆ. ತಮ್ಮ ಗುರಿ ಸಾಧಿಸಬೇಕಾದ ಕೆಲಸದೊಂದಿಗೆ ಅಕ್ಕ,ತಂಗಿ,ತಮ್ಮನ ಜವಾಬ್ದಾರಿ ಹೊರಬೇಕಿದೆ! ಇತರೆಡೆ ಜವಾಬ್ದಾರಿ ತಂದೆ ಹೊರುತ್ತಾರೆ..
ಅಲ್ಲದೆ ಬದಲಾದ ಕಾಲ, ಬದುಕು, ಜೀವನ ಶೈಲಿ, ತಂತ್ರಜ್ಞಾನ, ಬೆರಳತುದಿಯಲ್ಲಿ ಜಗತ್ತು ಅದರೊಂದಿಗೆ ನಾವು ಗಂಡು ಮಕ್ಕಳನ್ನು ಬೆಳೆಸುತ್ತಿರುವ ರೀತಿ ನೋಡಿದರೆ ಹೆಣ್ಣು ಮಗುವೊಂದು ಹುಟ್ಟಿದಾಗಲೇ ಭಯವಾಗುತ್ತದೆ!
     ಬದಲಾಗುತ್ತಿರುವ ಸಮಾಜಕ್ಕೆ ಮಹಿಳೆಯರು ತಮ್ಮ ಹೆಣ್ಣು ಮಕ್ಕಳನ್ನು ಹುಡುಗರಂತೆ,ಧೈರ್ಯ ಕೊಟ್ಟು ಬೆಳೆಸಬೇಕು. ಪಾಪ,ನಾಜೂಕು ಪದಗಳನ್ನೆಲ್ಲ ಕಿತ್ತುಹಾಕಿ ಹುಡುಗರ ಸಮಾನಕ್ಕೆ,ಹುಡುಗರಂತೆ ಬಳೆಸಿದರೆ ಮಾತ್ರ ಮುಂದೆ ಬದುಕಲು ಸಾಧ್ಯ. ಹೆಣ್ಣು ಹೆತ್ತವರೇ ಏಳಿ, ಎದ್ದೇಳಿ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ