1. ಗಝಲ್
ಹಿಂದೆ ಕಳೆದ ದಿನಗಳದೇ ನೆನಪು,
ಆ ಕ್ಷಣವೇ ಚೆನ್ನಾಗಿತ್ತು..
ನಿನ್ನ ತೊಡೆಯ ಮೇಲೆ ನಾ ಮಲಗಿ ನಿದ್ರಿಸಿ,
ನೀ ತಟ್ಟುವ ಕ್ಷಣ ಚೆನ್ನಾಗಿತ್ತು....
ನಿನ್ನ ಕಣ್ಣಲಿ ನನ್ನ ಕಣ್ಣನಿಟ್ಟು ಕಣ್ ಗಳಲ್ಲೇ
ನಮ್ಮ ಮಾತಿನ ಸರಸದ ಕ್ಷಣ ಚೆನ್ನಾಗಿತ್ತು..
ನನ್ನೆದೆಯಲಿ ನೀ,ನಿನ್ನೆದೆಯಲಿ ನಾ,
ಆ ಮಧುರ ಕ್ಷಣವೇ ಚೆನ್ನಾಗಿತ್ತು..
ನಿನ್ನದರಕೆ ನನ್ನದರದ ಸ್ಪರ್ಶದಿ
ಸೂರ್ಯಾಸ್ತದ ಬಣ್ಣವೇ ಚೆನ್ನಾಗಿತ್ತು..
ಸಿಹಿ ಸಮಯದ ನೆನಪು ಉಕ್ಕಿ
ಬರದಿರೆ
ಹಳೆ ಮನಸ್ಸೇ ಚೆನ್ನಾಗಿತ್ತು!
ನಿನ್ನಂದಕೆ ಮನಸೋತು ಆ ಇರುಳಲಿ
ಕಂಡ ಸಿಹಿಗನಸೇ ಚೆನ್ನಾಗಿತ್ತು..
ನನ್ನಂದಕೆ ನಾ ಗಮನವ ಕೊಡದೆ
ಅರಿವಿಲ್ಲದ ಭಾವನೆ ಚೆನ್ನಾಗಿತ್ತು..
ನೀ ನನ್ನ ಬದುಕಲಿ ಬರದಿದ್ದರೆ
ಆ ಕ್ಷಣಗಳೆ ಚೆನ್ನಾಗಿತ್ತು,
ಬಂದ್ಹೋಗುವ ಗಳಿಗೆಯ ಆ ದೇವನು
ಕೊಡದಿದ್ದಿದ್ದರೆ ಚೆನ್ನಾಗಿತ್ತು...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ