ಭಾನುವಾರ, ಮೇ 21, 2023

ಒಂದಿಷ್ಟು...186

186. 

ಇಂದಿಗೂ ಡ್ರೈವಿಂಗ್ ಕಲಿಯಲು ಭಯ..

     ಬಹಳ ವರ್ಷಗಳ ಹಿಂದಿನ ನೆನಪಿದು.  ನಾವಾಗ ಕುದುರೆಮುಖದ ಬಳಿಯ ಜೆ.ಪಿ.  ಎಂಬಲ್ಲಿ ವಾಸವಾಗಿದ್ದೆವು. ಉತ್ತರ ಭಾರತದ ಜೆ ಪಿ ಕಂಪನಿ ಅಲ್ಲಿ ಇದ್ದ ಕಾರಣ ಆ ಹೆಸರು. ಅಲ್ಲಿಂದ ಕುದುರೆಮುಖ ಟೌನ್ ಗೆ ಕೇವಲ ಐದೇ ಕಿಲೋಮೀಟರ್ ಇರುವುದು. ಆದರೆ ಶನಿವಾರ ನಮಗೆ ಬೆಳಗ್ಗೆ ಮೊದಲ ಬಸ್ಸು 9.00ಗಂಟೆಗೆ. ಶಾಲೆ 8.00ಗಂಟೆಗೆ ಪ್ರಾರಂಭ. ಹಾಗಾಗಿ ಆರು ಗಂಟೆಗೆ ಮನೆ ಬಿಟ್ಟು ಆ ಐದು ಕಿಲೋ ಮೀಟರ್ ದೂರ ನಡೆದು ಶಾಲೆಗೆ ಹೋಗುವ ಅನಿವಾರ್ಯತೆ. ಮಧ್ಯೆ ಯಾವುದಾದರೂ  ಉತ್ತರ ಭಾರತದಿಂದಲೋ, ಮುಂಬೈಯಿಂದಲೋ ಕಬ್ಬಿಣದ ಅದಿರಿನ ಕಾರ್ಖಾನೆಗಾಗಿ ಬಿಡಿ ಭಾಗಗಳ ತರುವ ಉದ್ದ ಉದ್ದದ ಲಾರಿ, ಟ್ರಕ್ ಗಳು ಬಂದರೆ ಆ ತಿಂಗಳುಗಟ್ಟಲೆ ಪ್ರಯಾಣ ಮಾಡಿ ಬಂದ ಕಂಡಕ್ಟರ್ ಡ್ರೈವರ್ ಗಳು ಮಕ್ಕಳಾದ ನಮ್ಮನ್ನೆತ್ತಿ ಲಾರಿಗಳ ಒಳಗೆ ಕುಳ್ಳಿರಿಸಿ ಕರೆದುಕೊಂಡು ಹೋಗುತ್ತಿದ್ದರು. ಆಗ ಈಗಿನ ಹಾಗೆ ಮೊಬೈಲ್ ಇನ್ನೂ ಹಳ್ಳಿಗಳಿಗೆ ಬಂದಿರದ  ಕಾರಣ ಹೆಣ್ಣು ಮಕ್ಕಳಿಗೆ ಸೇಫ್ಟಿ ಇತ್ತು. ವಿದ್ಯಾರ್ಥಿಗಳನ್ನು, ಮಕ್ಕಳನ್ನು ಹೆಚ್ಚಿನ ಜನ ಈಗಿನ ಹಾಗೆ ಕಾಮದ ದೃಷ್ಟಿಯಲ್ಲಿ ನೋಡುವ ಕಾಲ ಅದಾಗಿರಲಿಲ್ಲ. 
    ಈಗ  ಪ್ರೌಢ ಶಾಲೆ ಅಲ್ಲ, ಪ್ರಾಥಮಿಕ ಶಾಲೆಯ ಹೆಣ್ಣು ಮಗುವಿಗೂ ಈ ದೇಶದ ಯಾವುದೇ ಮೂಲೆ ಸೇಫ್ ಅಲ್ಲ. ಅದು ಗಂಡು ಇರಲಿ ಹೆಣ್ಣು ಆಗಿರಲಿ ಅಥವಾ ಇತರರೆ ಆಗಿರಲಿ.  ಕಾರಣ ಅವಿದ್ಯಾವಂತರಿಗಿಂತ ಹೆಚ್ಚಾಗಿ ವಿದ್ಯಾವಂತರೇ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಬದಲಾಗಿದೆ. ತಂದೆ, ಚಿಕ್ಕಪ್ಪ, ಅಣ್ಣ, ಮಾವ, ಅಜ್ಜ, ಭಾವ, ದೊಡ್ಡಪ್ಪ, ಗುರು, ಶಿಷ್ಯ, ಪಿ ಎ ಹೀಗೆ ಯಾವ ಸಂಬಂಧಗಳೂ ಇಲ್ಲ ಅಲ್ಲಿ ಒಂದು ಹೆಣ್ಣಿದ್ದರೆ! ಆ ಸಮಯ, ಎಂಜಾಯ್ಮೆಂಟ್, ದೈಹಿಕ ತೃಪ್ತಿ, ಸಿಕ್ಕಿದ ಅವಕಾಶ ಅಷ್ಟೇ! ಈಗೆಲ್ಲಾ ಜನ ಕಾಮ ಪಿಪಾಸುಗಳ ಹಾಗೆಯೇ ಕಾಣುತ್ತಾರೆ. ಹೆಣ್ಣಿನ ಬಟ್ಟೆ ಹಾಕಿದ್ದರೆ  ಸಾಕು ತೃತೀಯ ಲಿಂಗಿಗಳನ್ನೂ ಬಟ್ಟೆ ಬಿಚ್ಚಿಸಿ ನೋಡುವ ಈ ಕಾಲದಲ್ಲಿ ಇನ್ನು ಹೆಣ್ಣು ಮಕ್ಕಳ ಮಾನ  ರಕ್ಷಣೆಯ ದಾರಿ ಆ ದೇವರಿಗೂ ತಿಳಿಯದೆಯೋ ಇಲ್ಲವೋ. ಗಂಡು ಮಕ್ಕಳಿಗೂ ಇಂದು ರಕ್ಷಣೆ ಇಲ್ಲವಂತೆ. ಅಂಕಿ ಅಂಶಗಳ ಪ್ರಕಾರ ಅವರಿಗೂ ತುಂಬಾ ಸೆಕ್ಯೂರಿಟಿ ಬೇಕು ಅಂತ ಕೇಸ್ ಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದೆ. ವಿಪರ್ಯಾಸ ಎಂದರೆ ಸಂಬಂಧಿಕರ ಮೇಲೆಯೇ ಕೇಸ್ ಗಳು ಹೆಚ್ಚು. 
    ಆದರೆ ನಾನು ಹೇಳಲು ಹೊರಟಿರುವುದು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆಗಲೂ ಈಗಿನಂತಹ ಜನ ಇರಲಿಲ್ಲ ಎಂದಲ್ಲ. ಕೋರ್ಟು ಕೇಸು ಪೊಲೀಸ್ ಎಂದರೆ ಭಯ ಇತ್ತು, ಸಮಾಜಕ್ಕೆ ಹೆದರುತ್ತಿದ್ದರು. ಆದರೆ ಕೈಯಲ್ಲಿ ಆಂಡ್ರಾಯ್ಡ್ ಎಂಬ ಉಜ್ಜುವ ಫೋನ್ ಬಂದು ಯಾವಾಗ ಎಲ್ಲವನ್ನೂ ಓಪನ್ ಆಗಿ ಬಿಚ್ಚಿ ಎಲ್ಲರಿಗೂ ಪ್ರಪಂಚ ಇಷ್ಟೇ,ಬದುಕು ಇಷ್ಟೇ ಎಂದು ಪ್ರಪಂಚದಾದ್ಯಂತ ಜನ ಹಗಲು -  ರಾತ್ರಿ ಮಾಡುವ ಕಾರ್ಯಗಳನ್ನು ಸಾರಾ ಸಗಟಾಗಿ ಯಾವ ಅಡೆ ತಡೆಗಳು ಇಲ್ಲದೆ ಯಾವ ವಯಸ್ಸಲ್ಲಿ ಏನು ಕಲಿಯಬೇಕು ಅದಕ್ಕಿಂತ ಹೆಚ್ಚು ತೋರಿಸಲು ಅಡಿ ಇಟ್ಟಿತೋ ಅಂದಿನಿಂದ ಸಮಾಜ ಕೊಳಕುಗಳ ಬೀಡಾಯಿತು. ಮುದುಕಿ, ವಿದ್ಯಾರ್ಥಿನಿ,ಹೆಣ್ಣು ಮಗು, ಮಹಿಳೆ, ಕನ್ಯೆ, ಬೆಡಗಿ,  ಅಜ್ಜಿ ಎಲ್ಲರೂ ತೃಷೆ ತೀರಿಸಿಕೊಳ್ಳುವ ಶೋಕಿ ವಸ್ತುಗಳಾದರು.  ಜೊತೆಗೆ ಜನರ ತಪ್ಪನ್ನು ತಿದ್ದಿ ಸರಿಪಡಿಸಬೇಕಾದ ಮಾಧ್ಯಮಗಳು ಖಾಸಗಿಯಾಗಿ ಹೆಚ್ಚಿ ತಮ್ಮ ಟಿ ಆರ್ ಪಿ ಗಾಗಿ ಸಾಯುತ್ತಿರುವ, ಸತ್ತ,  ರೇಪ್ ಕೇಸ್ ಕೂಡಾ ಲೈವ್ ಆಗಿ ತೋರಿಸುವ (ಮೊದಲು ಹೀಗೆ ಇರಲಿಲ್ಲ) ಕೆಳ ಮಟ್ಟಕ್ಕೆ ಇಳಿದಾಗ ಜನರಿಗೂ ಅದರಲ್ಲೂ ಮಕ್ಕಳಿಗೂ ಬದುಕು ಬೇಡ ಎಂದು ಆದಾಗ ಹೇಗೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಅಂಶಗಳನ್ನು ಕಲಿಯಲು ಸುಲಭ ಮಾರ್ಗ ಸಿಕ್ಕಿ, ಒಹೋ ಬದುಕು ಬೇಡ ಎಂದರೆ ಸಾಯುವುದು ಇಷ್ಟು ಸುಲಭ ಅನ್ನಿಸಿಬಿಟ್ಟಿತು. ಈಗಂತೂ ಎರಡನೇ ತರಗತಿಯ ಮಗು ಒಂದು ನನಗೆ ಬದುಕು ಬೇಡ ನಾನು ಸಾಯಬೇಕು ಅನ್ನುವ ಮಟ್ಟಕ್ಕೂ ಬದುಕು ನಿಂತು ಬಿಟ್ಟಿದೆ. 

ನಾ ತಿರುವಿನ ವಿಚಾರಕ್ಕೆ ಬರಬೇಕಲ್ಲ, ವಿಷಯಾಂತರ ಆಯ್ತೇನೋ. ಅದೇ ಘಾಟ್ ಸೆಕ್ಷನ್. ಮಾಳ ಘಾಟಿ ಕಳೆದು ದಕ್ಷಿಣ ಕನ್ನಡ ಬಿಟ್ಟು ಚಿಕ್ಕಮಗಳೂರು ಪ್ರವೇಶಿಸುವುದು ಕುದುರೆಮುಖದ ದಾರಿಯಲ್ಲೇ. ಅದೇ ಈ ಜಿಲ್ಲೆಯ ಒಂದು ಬದಿಯ ಹೆಬ್ಬಾಗಿಲು. ಅಂದದ ಹಸಿರಿನ ಪರಿಸರದ ಸವಿ ಸವಿಯಲು  ಬರುವ ಪ್ರವಾಸಿಗರು ಅದೆಂತೋ. ಆ ದಾರಿಯಲ್ಲಿ ಗಾಡಿ ಓಡಿಸುವುದು ಕೂಡಾ ಒಂದು ಥ್ರಿಲ್ಲಿಂಗ್. ದೂರದ ಉತ್ತರ ಭಾರತದಿಂದ ನಿಟ್ಟೆ ಕಾಲೇಜಿನಲ್ಲಿ ಬಂದು ಓದುತ್ತಿದ್ದ  ಅದೆಷ್ಟೋ ಹೆಣ್ಣು ಗಂಡು ಮಕ್ಕಳು ಬೈಕ್, ಕಾರು ಹತ್ತಿ ಜಾಲಿ ರೈಡ್, ಲಾಂಗ್ ಡ್ರೈವ್ ಅಂತೆಲ್ಲಾ ಹೆಣ್ಣುಗಳನ್ನು ಕರೆದುಕೊಂಡು ಕುದುರೆಮುಖದ ತಿರುವುಗಳಲ್ಲಿ ಫಾಸ್ಟ್ ಬಂದು ಅದೆಷ್ಟು ಅಪಘಾತ, ಅದೆಷ್ಟು ಪ್ರಾಣ ಹಾನಿ, ಜೊತೆಗೆ ಅಲ್ಲಿರುವ ಭದ್ರಾ ನದಿಗೆ ಖುಷಿಗಾಗಿ ಈಜಲು ಹೋಗಿ ನದಿಗೆ ಬಿದ್ದು ಅದೆಷ್ಟು ಜನರ ಪ್ರಾಣ ಹೋಗಿದೆಯೋ ದೇವರಿಗೇ ಗೊತ್ತು. 

ನಮ್ಮ ಮನೆಯ ಮೊದಲು ಹೆಚ್ಚು ಕಮ್ಮಿ  ಅರ್ಧ ಕಿಲೋ ಮೀಟರ್ ದೂರದಲ್ಲಿ ಒಂದು ಬಾರ್ ಇತ್ತು. ಸಿಂಗ್ಸಾರ್ ಎಂದು ಹೆಸರು ಅಲ್ಲಿಗೆ. ಕುದುರೆಮುಖ ಕೇಂದ್ರ ಸರಕಾರದ ಒಡೆತನದಲ್ಲಿ ಇದ್ದುದರಿಂದ ಅಲ್ಲಿನ ಕಾರ್ಖಾನೆ ಕೆಲಸಗಾರರಿಗೆ ಊರಿನ ಜನರ ಹೆಚ್ಚು ಪರಿಚಯ ಇಲ್ಲ. ಅವರು ತುಂಬಾ ಸಂಬಳ ಪಡೆಯುವವರು, ಊರಿನವರು ಕೂಲಿ ಮಾಡಿ ತಿನ್ನುವ ಬಡವರು. ಹಾಗಾಗಿ ಊರಿನ ಜನ ಅವರಿಗೆ ಜೇನುತುಪ್ಪ, ತುಪ್ಪ ಹಾಲು, ಮೊಸರು, ಮಜ್ಜಿಗೆ, ಮಾವಿನ ಕಾಯಿ ಇದನ್ನೆಲ್ಲ ಮಾರಿ ಒಂದಷ್ಟು ದುಡ್ಡು ಗಳಿಸಿಕೊಳ್ಳುತ್ತಿದ್ದರು. ಸ್ವಲ್ಪ ಕಂಪನಿಯ ಸಹಾಯವೂ ಸಿಗುತ್ತಿತ್ತು. ಕೆ ಐ ಓ ಸಿ ಎಲ್ ಆಗ ಕುದುರೆಮುಖದಲ್ಲೂ ಇದ್ದು, ಈಗ ಮಂಗಳೂರಿನಲ್ಲಿ ಮಾತ್ರ ಇದೆ.  ಕುದುರೆಮುಖ ಹಿಲ್ ಸ್ಟೇಷನ್ ಆಗಿದ್ದು, ಚಳಿ ಮಳೆ ಹೆಚ್ಚೆಂಬ ಅಂಶ ಬಿಟ್ಟರೆ ಉತ್ತಮ ಪ್ರಕೃತಿಯ ಸೌಂದರ್ಯದ ಬೀಡು. ಬದುಕಲು ಕೇಂದ್ರ ಸರಕಾರದ ಕೆಲಸ, ಇರಲು ಕ್ವಾಟ್ರಸ್ ಗಳು, ಮಕ್ಕಳ ಓದಿಗೆ ಉತ್ತಮ ಶಾಲೆಗಳು, ಅವರವರ ಲೆವೆಲ್ ಗೆ ತಕ್ಕಂತೆ ಓದಿಸಬಹುದಿತ್ತು.  ಅಲ್ಲಲ್ಲಿ ಬೇಕಾದ್ದು ತೆಗೆದುಕೊಳ್ಳಲು ಮಾರ್ಕೆಟ್ ಗಳು. ಹೆಚ್ಚಿನ ಶಾಪಿಂಗ್ ಗೆ ಮಂಗಳೂರು, ಉಡುಪಿ, ಕಳಸ, ಚಿಕ್ಕಮಗಳೂರು, ಮೂಡಿಗೆರೆ ಅಂತ ಜನ ಓಡಾಡುತ್ತಿದ್ದರು. ಶಿಸ್ತಿನ ಬದುಕು. ತಾಯಿ ಮಕ್ಕಳನ್ನು ಸಾಕುವ ರೀತಿ ಕಂಪನಿ ತನ್ನ ಕೆಲಸಗಾರರು ಹಾಗೂ ಅವರ ಕುಟುಂಬವನ್ನು ಕಾಯುತ್ತಿತ್ತು. ಕೆಲಸ ಇಲ್ಲದ ಅಕ್ಕ ಪಕ್ಕದ ಹಳ್ಳಿಯ ಜನರು ವಿದ್ಯೆಯೂ ಇಲ್ಲದೆ ಕಷ್ಟ ಪಡುತ್ತಲೇ ಇದ್ದರು. ಮನೆಗೆ ಒಬ್ಬರಿಗೆ ಊರಿನಲ್ಲಿ ಕೆಲಸ ಕೊಟ್ಟರೂ  ಕೆಲವೊಂದು ಮನೆಗಳ ಜನರು ಅಜ್ಞಾನದಿಂದಾಗಿ ಮಿಸ್ ಆಗಿದ್ದರು.  ಅವರ ಬದುಕು ಅಸಹನೀಯವಾದ ಸ್ಥಿತಿಯಲ್ಲಿ ಇತ್ತು. ಇದಕ್ಕೆ ನಾವೂ ಹೊರತಾಗಿ ಇರಲಿಲ್ಲ. ಒಂದೊಂದು ಪೈಸೆ ದುಡ್ಡಿಗೂ ಕಷ್ಟ ಪಡುವ, ಪರದಾಡುವ ಕಷ್ಟ ನಮ್ಮದಾಗಿತ್ತು. ಬೆಳಗ್ಗೆ ಶಾಲೆಗೆ ಹೋಗಲು ಒಬ್ಬರಿಗೆ ಎಪ್ಪತ್ತ ಐದು ಪೈಸೆ ಬಸ್ ಚಾರ್ಜ್. ಮೂರು ಜನಕ್ಕೆ ಎರಡು ರೂಪಾಯಿ ಇಪ್ಪತ್ತೈದು ಪೈಸೆ. ಮತ್ತೆ ಹಿರಿಯರಿಗೆ ಒಂದೂವರೆ ರೂಪಾಯಿ. ಅಲ್ಲಿಗೆ ಮೂರು ರೂಪಾಯಿ ಎಪ್ಪತ್ತೈದು ಪೈಸೆ. ಪ್ರತಿ ದಿನ ಇದಕ್ಕಾಗಿ ಪರದಾಡಿದ ಆ ಕಷ್ಟ ಅದೆಷ್ಟೋ. ಅದರ ಜೊತೆಗೆ ಸಂಜೆಯ ಮೂರು ರೂಪಾಯಿ ಎಪ್ಪತ್ತೈದು ಪೈಸೆ. ದಿನಕ್ಕೆ ಏಳೂವರೆ ರೂಪಾಯಿಯ ಹಾಗೆ ತಿಂಗಳಿಗೆ ಇನ್ನೂರ ಇಪ್ಪತ್ತ ಐದು ರೂಪಾಯಿ, ಆದಿತ್ಯವಾರ ಹೊರತುಪಡಿಸಿದರೆ ಇನ್ನೂರ ಇಪ್ಪತ್ತು ರೂಪಾಯಿ. ಅದನ್ನು ಹೊಂದಿಸಲು ನಾವು ರಸ್ತೆಯಲ್ಲಿ ನಿಂತು ಬಂದ ಹೋದ ಟೂರಿಸ್ಟ್ ವಾಹನಗಳಿಗೆ ಪೇರಳೆ ಹಣ್ಣು ಮಾರುವುದು, ರಜಾ ದಿನಗಳಲ್ಲಿ ಸಣ್ಣಪುಟ್ಟ ಕೆಲಸಕ್ಕೆ ಹೋಗುವುದು, ದಾರಿಯುದ್ದಕ್ಕೂ ಬಿದ್ದ ಸೆಗಣಿ ಹೆಕ್ಕಿ ಸಂಗ್ರಹಿಸಿ ತೋಟದ ಮಾಲೀಕರಿಗೆ ಬುಟ್ಟಿ, ಟ್ರಾಕ್ಟರ್, ಲೋಡ್ ಲೆಕ್ಕದಲ್ಲಿ ಮಾರಾಟ ಮಾಡುವುದು, ಗುಜಿರಿ (ಹಳೆಯ ಬಾಟಲಿ, ಕಬ್ಬಿಣ, ಪ್ಲಾಸ್ಟಿಕ್, ಪುಸ್ತಕ) ಇವನ್ನೆಲ್ಲ ಹೆಕ್ಕಿ ತಂದು ಸ್ಟಾಕ್ ಇಟ್ಟು ಅದನ್ನು ಮಾರುವುದು, ಇವೆಲ್ಲ ನಮ್ಮ ಸೈಡ್ ಇನ್ ಕಮ್ ದಾರಿಗಳು. ಆಗ ನಾಚಿಕೆ ಗಿಂತಲೂ ದೊಡ್ಡದಾದ ಅನಿವಾರ್ಯತೆ ಎಂಬ ಅಂಶದ ಜೊತೆಗೆ ಬಡತನ ಎಂಬ ಭೂತ ನಮ್ಮನ್ನು ಕಾಡುತ್ತಲೇ ಇತ್ತು. ಕುಟುಂಬದ ಆಧಾರಕ್ಕೆ ಒಂದಷ್ಟು ದನಗಳು. ಕಷ್ಟಪಟ್ಟು ಅವುಗಳ ಹಾಲು ತೆಗೆದು ಮಾರಿದರೆ ಅರ್ಧ ಹಣ ಅವುಗಳ ಆಹಾರಕ್ಕೆ, ಇನ್ನರ್ಧ ಹಣ ಅವುಗಳ ಡಾಕ್ಟರ್ ಗೆ, ಉಳಿದರೆ ಮಾತ್ರ ನಮ್ಮ ಹೊಟ್ಟೆ ತುಂಬುತ್ತಿತ್ತು. ಹಲವಾರು ಹೊತ್ತು ಪೇರಳೆ ಹಣ್ಣುಗಳೆ ನಮ್ಮ ಆಹಾರ. ಅದಲ್ಲದೆ ಆ ಗುಡ್ಡದಲ್ಲಿ ಸಿಗುವ ಈಚಲ ಹಣ್ಣುಗಳು, ಸಕ್ಕರೆ ಹಣ್ಣು, ಹಲಸಿನ ಹಣ್ಣು, ಮಾವಿನ ಹಣ್ಣು ನಮ್ಮ ಹಸಿವನ್ನು ಇಂಗಿಸುವ ವಿವಿಧ ಆಹಾರಗಳು. ಈಗಿನಂತೆ ಚೇಂಜ್ , ಟೈಮ್ ಪಾಸ್ ಗಾಗಿ ಹೋಟೆಲ್ ನಲ್ಲಿ ತಿನ್ನಲು ಹೋಟೆಲ್ ಗಳೂ ಇರಲಿಲ್ಲ, ದುಡ್ಡು ಕೂಡಾ ಇರಲಿಲ್ಲ. ನಾವು ಆ ಸಂಸ್ಕೃತಿಯಲ್ಲಿ ಬೆಳೆಯಲೂ ಇಲ್ಲ. ಕಷ್ಟಪಡು, ಓದು, ಏನಾದರೂ ಸಾಧಿಸು ಅಷ್ಟೇ. 

ಆ ದಾರಿ ತಿರುವು ಮುರುವು ಆದ್ದರಿಂದ ನಮ್ಮ ಮನೆಯ ಸ್ವಲ್ಪ ದೂರದ ಸಿಂಗ್ಸಾರ್ ನಲ್ಲಿ ಇದ್ದ ಬಾರ್ ನಲ್ಲಿ ಕುಡಿದು ಟೈಟ್ ಆಗಿ ನೆಟ್ಟಗೆ ಗಾಡಿ ಓಡಿಸಿಕೊಂಡು ಬಂದು ನಮ್ಮ ಮನೆಯ ಎಡ ಬದಿಯಲ್ಲಿ ಇದ್ದ ದೊಡ್ಡ ತಿರುವು (ಟರ್ನ್) ಬಳಿ ಒಮ್ಮೆಲೆ ಗಾಡಿಯನ್ನು ಎತ್ತರಕ್ಕೆ ಏರಿಸಲು ಆಗದೆ ಪಕ್ಕದ ದೊಡ್ಡ ಚರಂಡಿಗೆ ಗಾಡಿ ಸಮೇತ ಬೀಳುವವರ ಸಂಖ್ಯೆ ಏನೂ ಕಡಿಮೆ ಆಗಿರಲಿಲ್ಲ! ಬಾರ್ ಪಕ್ಕದಲ್ಲೇ ಜನರಿಗೆ ಬೇಕಾದ ಎಲ್ಲಾ ಐಷಾರಾಮಿ ವ್ಯವಸ್ಥೆಗಳೂ ಇರುತ್ತವೆ ಅಲ್ವಾ..ಹಾಗೆ ಅಲ್ಲಿ ಹೋಗಿ ಖುಷಿಯಲ್ಲಿ ಬಂದವರು ಅದೆಷ್ಟೋ ಜನ ಈ ತಿರುವಿನಲ್ಲಿ ಬಿದ್ದು ನೇರವಾಗಿ ಸ್ವರ್ಗಕ್ಕೆ ಹೋದ ದಾಖಲೆಗಳು ಅಲ್ಲಿವೆ. ಆದರೆ ಅವರಿಗೆಲ್ಲ ನೀರು ಕೊಡುವ ಕಾರ್ಯ ನಮ್ಮ ಕುಟುಂಬದ್ದು ಆಗಿರುತ್ತಿತ್ತು. ಕಾರಣ ಅಲ್ಲಿ ಬೇರೆ ಯಾವುದೇ ಮನೆಗಳು ಇರಲಿಲ್ಲ. ಕರೆದು ಕೇಳುವವರೂ ಇರಲಿಲ್ಲ. ಹೀಗೆ ಹಲವಾರು ಅಪಘಾತಗಳನ್ನು ಕಣ್ಣಾರೆ ಕಂಡ ನನಗೆ ಕಾರ್ ಗಳ ಕ್ರೇಜ್ ಇದ್ದರೂ ಆ ಭಯ ಇನ್ನೂ ಇದೆ. ನಾ ಕಾರ್ ಡ್ರೈವಿಂಗ್ ಕಲಿತರೂ ಒಮ್ಮೆಯೂ ಕಾರ್ ಓಡಿಸಲಿಲ್ಲ, ಬಿಡಿ ಟೂ ವೀಲರ್ ಕೂಡಾ ಭಯವೇ ನನಗೆ. ಅದೆಷ್ಟೋ ಗೆಳೆಯರು ನೀನು ವೇಸ್ಟ್ ಎಂದರೂ ಚಿಕ್ಕಂದಿನಿಂದ ನೋಡಿದ ಆ ಭಯ ಹೋಗದು. ಆ ತಿರುವಿನಲ್ಲಿ ಇದ್ದ ಒಂದು ಮರವನ್ನು ಕಡಿದ  ಬಳಿಕ ರಸ್ತೆ ಸರಿಯಾಗಿ ಕಂಡು ಅಲ್ಲಿ ಅಪಘಾತ ಕಡಿಮೆ ಆಯಿತು. ಮರ ಕಡಿದ ಅಪ್ಪನಿಗೆ ಒಂದು ವಾರ ಜ್ವರ ಬಂತು ಎಂಬ ಅಮ್ಮ ಹೇಳಿದ ಮಾತು ಈಗಲೂ ನೆನಪಿದೆ. ಅದೇ ಟರ್ನ್ ನಲ್ಲಿ ನನ್ನ ತಮ್ಮ ಮೂರೋ ನಾಲ್ಕೋ ವರ್ಷದವ ಇರುವಾಗ ಲೂನಾ ಬರುವಾಗ ಅಡ್ಡ ಓಡಿ ಅದರ ಅಡಿಗೆ ಬಿದ್ದು ಕಾಲು ಫ್ರಾಕ್ಚರ್ ಆಗಿದ್ದು ಕೂಡಾ ಇನ್ನೂ ನೆನಪಿದೆ. 
ಆ ತಿರುವಿನಲ್ಲಿ ಹೋದ ಜೀವಗಳು ಅದೆಷ್ಟೋ. ಕೈ ಕಾಲು ಕಳೆದುಕೊಂಡವರು ಎಷ್ಟೋ. ಸ್ವಲ್ಪ ಮುಂದೆ ಅಪ್ ನಲ್ಲಿ ಇದ್ದ ಜೇಪಿಯ ಶಿವ ದೇವಸ್ಥಾನಕ್ಕೆ ಆಗಾಗ ಹೋಗಿ ಪರಿಸರ, ಬೆಟ್ಟಗಳ ವೀಕ್ಷಣೆ ನನ್ನ ಇಷ್ಟದ ಹವ್ಯಾಸಗಳಲ್ಲಿ ಒಂದಾಗಿತ್ತು. ಅಲ್ಲಿ ಶಿವನ ಬಳಿ ಯಾರಿಗೂ ಮುಂದೆ ಅಪಘಾತ ಆಗಬಾರದು ಎಂದು ಕೇಳಿಕೊಂಡಿದ್ದು ಅದೆಷ್ಟು ಬಾರಿಯೋ. ಬೆಳಿಗ್ಗೆ ಅಲ್ಲಿಂದ ಬರುವ ಓಂ ಜೈ ಜಗದೀಶ ಹರೇ... ಹಾಡೆ ನಮ್ಮನ್ನು ಎಬ್ಬಿಸುವ ಅಲಾರಂ. 
ಆ ತಿರುವಿನ ಅಪಘಾತಗಳ ನೋಡಿ, ಅಲ್ಲಿನ ಭೂತಗಳ ಕಥೆಗಳ ಕೇಳಿ ಸತ್ಯವೋ ಸುಳ್ಳೋ ಅರ್ಥ ಆಗದೆ ಹೆದರಿ ರಸ್ತೆ ದಾಟಲು ಕೂಡಾ ಅಲ್ಲಿ ಹೆದರುತ್ತಿದ್ದುದು ನೆನೆಸಿದಾಗ ಈಗಲೂ ನಗು ಬರುತ್ತದೆ.  ವಿದ್ಯಾರ್ಥಿ ಜೀವನದ ನೆನಪುಗಳು ಅದೆಷ್ಟು ಗಾಢ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
19.05.2023

ಗುರುವಾರ, ಮೇ 4, 2023

ಏನು ಮಾಡಲಿ ನಾನು

ಏನು ಮಾಡಲಿ ನಾನು

ನಾ ಹೇಳಿದನೆಂದು ಮೊಗ್ಗಾದ ಹೂವೆಂದೂ ಅರಳದು
ಬಲಿತು ಕಾಯಿ ತಕ್ಷಣವೇ ಬಿರಿದು ಹಣ್ಣಾಗದು
ಒಣ ಮರ ಹಸಿರ ಚಿಗುರೊಡೆದು ನಿಲ್ಲದು
ಭಯದ ನೆರಳಿನಲಿ ಮನದ ಪ್ರೀತಿ ಮೊಳೆಯದು


ಸೂರ್ಯ ಉದಯಿಸಿದವನು ಮತ್ತೆ ಮಂಕಾಗಲಾರ
ಚಂದಿರ ಹುಣ್ಣಿಮೆಯಲ್ಲದೆ ಪೂರ್ಣ ಕಾಣಲಾರ
ಪಕ್ಷಿಗಳು ಮಧ್ಯ ರಾತ್ರಿ ಎದ್ದು ಚಿಲಿಪಿಲಿ ಎನ್ನಲಾರವು
ರಾಗಿ ಕಾಳಿನ ಗಿಡದಿ ಗೋಧಿ ಬೆಳೆಯಲಾಗದು

ಮೌನ ವ್ರತ ಹಿಡಿದ ಗಿಳಿಯು ಮಾತನಾಡದು
ರೌರವ ನರಕದಲಿ ಸಂತಸ ಉಕ್ಕಿ ಹರಿಯದು
ಕೌರವನ ಹಾಗೆ ದ್ವೇಷ ಹೊತ್ತಿ ಉರಿಯದು
ಜವ್ವನ ಜಾರಿ ಹೋಗಿ ಮತ್ತೆ ವಯಸ್ಸು ತಿರುಗದು

ಭರವಸೆಯ ನೀರ ಝರಿಯಂತೆ ಹಾರಿ ಬೀಳದು
ಮರದೊಳಗಿನ ಜೀವ ಇಣುಕಿ ಮಾತನಾಡದು
ಕರದೊಳಗಿನ ನರನಾಡಿಗಳು ರಕ್ತ ಸುರಿಸದಿರದು
ಹೃದಯ ಬಡಿಯುವ ಸದ್ದು ಏರು ಪೇರಾಗದಿರದು

ನಾಯಿ ನರಿಗಳು ಊಳಿಡದೆ ಬದುಕವು
ಕಾಯಿ ಹಣ್ಣಾಗದೆ ಬೀಜ ಮೊಳಕೆ ಒಡೆಯದು
ಗಾಯ ಕೆಂಪಾಗದೆ ಹೊಸ ಜೀವಕೋಶ ಬಾರದು
ತಾಯ ಪ್ರೀತಿ ಕೊರತೆ ಕಂಡು ಅಳಿಯದು

ಮತ್ತೇಕೆ ನಾನು ನನ್ನದು ನಾನೇ ಎನುತ ಮೆರೆವೆ
ನರ ಮಾನವ ನೀ ಸಾಸಿವೆಗಿಂತ ಕೀಳಲ್ಲವೆ?
ವರ ನೀಡುವ ಭಗವಂತನ  ನಂಬದಿಹರಿರುವರು
ಗರಿ ಉದುರಿತೆಂದು ಖಗ ಹಾರದೆ ಉಳಿವುದೇ?
@ಹನಿಬಿಂದು@
03.05.2023

How

How

How to  love you  without any reasons
How to love you without the eye attractions
Without tasting the honey on your lips
Without amazing at the smoothness and up and downs  of the  breast?

Without melting in  to the stiffness of your thieghs
Without diluting in to the shining of your feet
Without touching into your skytip!
How shall l deeply love you?

Hard to love without becoming wetting in your lovesea 
Without incerting myself in to my lines and words of poems
Without tasting the smell of your hair perfume
How to love you?
@HoneyBindu@
04.05.2023

Old Beauty

Old Beauty

Unblowing air
Unshaking leaf
The trees who forget to talk
Roads are like sagging thieghs after mating..

Colourless sky
Burnt ash of day stack
People without feeling sad for dull sun's death


Inside the village where you left
Long procession of standing dead bodies
Aroma of a new nameless flower
Snakes running helter skelter leaving their holes
Injuries on my back from centuries

For the burning of applied cream
Waiting for a friend like cooling mother
Dear, Turn once towards waiting heart..

Dear friend, come
Come quickly
Before cutting the rope of life
Come friend
Beauty of old age...

Translated by,
@HoneyBindu@

ಮಂಗಳವಾರ, ಮೇ 2, 2023

New dreams

New dreams

Like a jasmine she shines
Smile is like full moon days
Eyes as stars
Moon light smiles
When spread them
They are like sunny rays
To his dark life!
Thousand dreams awaken
In the flash her lips
Cheeks chin waist
Neck slopes flied slowly
Again a new dream in his life eyes..

Her smiling eyes
Translated words to poems
She accepted silence and no words
The person who stayed alone
Made him not alone
But departer ever
He is the waiter now
For her single word
He was waiting for who's
Like goddesses of two words
The life is shaking every day
Every moment

The time waits no dear elf
Talk once
Before the sun dies this Eve
I have no hope of 
Tomorrow's sunrise!

Kannada writer - Madhu

Translated by @HoneyBindu@

ಸೋಮವಾರ, ಮೇ 1, 2023

ದಶಕ -110

ದಶಕ -110

ರಾಜ ರಾಣಿ ಆಗಬೇಕು ಎಂಬ ಕನಸು ಮನದಲಿ
ರಾಜ ತಾನು ಅಲ್ಲವಾದ್ರೂ  ರಾಣಿ ಬೇಕು ಬಾಳಲಿ
ರಾಣಿ ಆಗೋ ಹಂಬಲವು ಸದಾ ಇರಲಿ, ಸಹಜ
ಬಾಳು ಸವೆಸ ಬೇಕಿರುವುದು ಇದ್ದುದರಲ್ಲೇ ನಿಜ!

ಅವರು ಇವರು ಹೇಗಿರಲಿ ನಮಗೆ ಏನು ಜಗದಲಿ?
 ಸುಖ ಸಂತೋಷವ ನಿತ್ಯ ನಾವು  ಕಾಯಬೇಕು ಬಾಳಲಿ
ಪರರ ಚಿಂತೆಗಿಂತ ಮುಖ್ಯ ಸ್ವಂತ ಬದುಕು ನಮ್ಮದು
ಶಾಂತಿಯಿಂದ ಕಳೆಯಬೇಕು,  ಎಂದೂ ಕ್ಷಣವು ನಿಲ್ಲದು.

ಆಚೆ ಮನೆಯ ಜನರ ಕಡೆಗೆ ದೃಷ್ಟಿ ಬೀಳದಿರಲಿ
ನಮ್ಮ ಬದುಕು ಎಂದೂ ಹೀಗೆ ಹಾಳಾಗದೆ ಇರಲಿ.
@ಹನಿಬಿಂದು@
21.04.2023

ದಶಕ -111

ದಶಕ -111
ಕವನ ಎಂದರೇನು, ಕವಿತೆ ಎಂದರೇನು
ಕಥೆ ಎಂದರೇನು ಬರೆದವ ಬಲ್ಲನೇನು
ಹಿರಿಯ ಕವಿಗಳು ನಲಿದಾಡಿದರು ಇಂದು
ಕಿರಿಯ ಓದುಗರ ಬಾಯಿಯಲ್ಲಿ ಮಿಂದು!

ಓದಿರಿ ಬರೆಯಿರಿ ಬೆಳೆಸಿರಿ ಎನುತ
ತಾನೂ ಓದುತ ಬರೆಯುತ ಸಾಗುತ
ಕಥಾಯಾನಕೆ ಬಂದು  ಹಲವು ಕಡೆಯಿಂದಲಿ 
ಕೇಳುತ ಕುಳಿತು ಕಲಿಯುವ  ತವಕದಲಿ

ಹೃದಯ ತುಂಬಿ ಹರಸುವೆವು ನಾವೆಲ್ಲಾ
ಹೀಗೇ ಬಂದು ಉಪಯೋಗವಾಗಲಿ ಇವೆಲ್ಲಾ!
@ಹನಿಬಿಂದು@
22.01.2023

ದಶಕ -112

ದಶಕ -112

ಉಂಗುರ ಇಲ್ಲದ ಬೆರಳದು ಸುಂದರ
ಚುಕ್ಕೆಯನಿಡುತಿವೆ ರಂಗೋಲಿ ಸಮರ
ಒಂದರ ಬಳಿಕ ಮತ್ತೊಂದು ಬಂದು ನಿಂತು
ಮನೆ ಮಡದಿಯ ಮನಕೆ ಸಂತಸ ತಂತು!

ಏತಕೋ ಏನೋ ಮರೆತೇ ಹೋಯಿತು
ಒಂದು ಚುಕ್ಕಿಯು ತಲೆ ಮರೆಸಿ ಕೊಂಡಿತು
ರಂಗೋಲಿ ಚಿತ್ರವು ಚೆನ್ನಾಗಿ ಬಾರದು
ಮನಕೆ ಮುದದ ಗೆಲುವನು ತಾರದು

ತಾಳ್ಮೆ ಶ್ರದ್ಧೆ ಮೌನ ಕೆಲಸದಿ ಗೌರವವು
 ಇಲ್ಲದಿರೆ ಕಷ್ಟ ಗೃಹಲಕ್ಷ್ಮಿಯ ಕೆಲಸವು
@ಹನಿಬಿಂದು@
23.04.2023

ದಶಕ -113

ದಶಕ -113

ರಾಕ್ಷಸ ಸಮೂಹ ತೋಟದ ಒಳಗೆ
ರಾಕ್ಷಸ ಯೋಚನೆ ಮನಸಿನ ಒಳಗೆ..
ಸಮಯವು ಓಡದು ವನದಲಿ ಎಂದೂ
ರಾಮನು ಬಾರನು ಕರೆಯಲು ಇಂದು

ರಾವಣ ಕಾಣಲು ಭಯವದು ಬರುವುದು
ಮನದಲಿ ಒನಕೆಯು ಕುಟ್ಟುವ ತೆರದಿ
ಪ್ರೀತಿಯು ಬಾರದು ಪರ ಗಂಡಿನ ಮೇಲೆ
ಸೂರ್ಯನು ಸಾಗನು ಬಾನಿನ ಮೇಲೆ..

ಕಾತರ ಕಳವಳ ಲೋಕದ ಯೋಚನೆ
ಬಾಡಿದೆ ಮುಖವದು ಬೇಸರ ಯಾತನೆ
@ಹನಿಬಿಂದು@
22.04.2023

ದಶಕ -114

ದಶಕ - 114
ನಿದ್ದೆಯು ಬರಲು ಕೆಲಸವು ಇರಲು
ದೂರದ ಊರಿಗೆ ಪಯಣವ ಬೆಳೆಸಲು
ಡ್ರೈವರ್ ನಿಂತಿಹ ಮರದಡಿ ಹೋಗಿ
ಕುದುರೆಗೆ ಲಗಾಮು ಹಾಕುತ ಕೂಗಿ

ಚಹಾ ಕಾಫಿಯ ಬೇಗನೆ  ಕುಡಿಯಬನ್ನಿ
ಮಹಾ ಜನಗಳೇ ನಿಮ್ಮಯ ಜಾಗವೆನ್ನಿ
ನಾಯಿಯ ಮರಿಗಳ ಪಾಡು ಕೇಳು
ಹೋದಲೆ ಊಟವು ತಿಂಡಿಯ ಪಾಠವು

ಎಲ್ಲಾ ಕೆಲಸವೂ ಕಷ್ಟವೇ ಉಂಟು
ಖುಷಿ ಪಟ್ಟು ನಡೆದರೆ ಕ್ಷೇಮದ ನಂಟು..
@ಹನಿಬಿಂದು@
22.04.2023


ದಶಕ -115

ದಶಕ -115

ಬೋರ್ಗರೆದು ಸುರಿವ ಮಳೆ ನೀರ ನಡುವೆಯೂ
ಸುಡು ಸುಡು ಎನುವ ಉರಿ ಬಿಸಿಲಲ್ಲಿಯೂ
ಬಿರುಕು ಬಿಟ್ಟ ಬಿಸಿ ಮರಳಿನ ಮರು ಭೂಮಿಯಲ್ಲೂ
ನೆರಳಾಗಿರುವೆ ಭಯ ಪಡದಿರು ಎಂದೂ

ಗುಡುಗು ತರುವ ಕರಿ ಮೇಘಗಳಿರಲಿ
ಬಿರುಕು ತರಿಸುವ ದುಷ್ಟ ಮನಗಳಿರಲಿ
ತಡೆ ಗೋಡೆಯಂತೆ ಬೆಂಗಾವಲಂತೆ
ನೆರಳಾಗಿರುವೆ ಭಯ ಪಡದಿರು ಎಂದೂ..

ಸದಾಕಾಲ ಎಲ್ಲಾ ಸಮಯ ಬಾಳಿನಲಿ
ನಿನಗಾಗಿ ನಾನು ನನಗಾಗಿ ನೀನು
@ಹನಿಬಿಂದು@
29.04.2023

ಬಿತ್ತ ಬೇಕಿದೆ ಕಾಳು

ಬಿತ್ತ ಬೇಕಿದೆ ಕಾಳು 

ಆ ಮುಗುಳು ನಗೆಯ ಹಿಂದೆ
ಅದೆಷ್ಟು ನೋವುಗಳು ಮಡುಗಟ್ಟಿ ನಿಂತಿವೆ!
ಭೂಮಿಯ ಆಲದ ಕಲ್ಲಿದ್ದಲು, ಚಿನ್ನ ಕಬ್ಬಿಣದಂತೆ
ಬಹು ಗಟ್ಟಿ ಕಪ್ಪು ಮಣ್ಣು ಮಿಶ್ರಿತ!

ಆ ಅಂದದ ನಗೆಯ ಹಿಂದೆ
ಅದೆಷ್ಟು ಕಹಿ ನೆನಪುಗಳ ನರ್ತನ!
ನೋಡಿದ ಕೇಳಿದ ಘಟಿಸಿದ ಮೆರೆದ
ಮರೆತರೂ ಮರೆಯಲಾರದ ಕಥೆ
ಮತ್ತೆ ಜೀವ ಹಿಂಡುವ ವ್ಯಥೆ!

ಆ ದಾಳಿಂಬೆ  ದಂತಪಂಕ್ತಿ ಒಳಗೆ
ಅದೆಷ್ಟು ಉತ್ತಮ ನಾಲಿಗೆ
ಅದೆಷ್ಟು ಸಿಹಿ ಮಧುರ ಮಾತುಗಳು
ಆದರೂ ಅದೇಕೆ ಹೂವಿನ ಹಿಂದೆ ಮುಳ್ಳುಗಳು?

ಆ ರಮ್ಯ ನೋಟದ ಮುದ್ದು ಮುಖದ ಹೂವಿಗೆ
ಅದೇಕೆ ಸಿಗದು ಮಕರಂದ
ರವಿ ಕಿರಣದ ಸ್ಪರ್ಶ ಬೇಕಲ್ಲವೇ ಇಳೆಗೆ
ಮತ್ತೆ ಹೂವು ಕಾಯಾಗಿ ಮಾಗಿ ಹಣ್ಣಾಗಲು

ಆ ಹಾರದೆ ಕುಳಿತ ಮೌನ ಚಿಟ್ಟೆಗೆ
ತನ್ನ ರೆಕ್ಕೆಯ ಕುರಿತು ನೆನಪಿಸಬೇಕಿದೆ
ನಿಧಾನಕ್ಕೆ ಏರಲು ಎತ್ತರೆತ್ತರಕ್ಕೆ
ನೆಮ್ಮದಿ ಸಾಂತ್ವನದ ಕಡೆಗೆ
ಒಲವಿನ ಒರತೆಯ ಬದಿಗೆ

ಆ ಮುಗ್ದ ಮುಖದಲಿ ಕಾಣಬೇಕಿದೆ
ಸಂತಸದ ಎಳೆ ಚಿಗುರ ಹಸಿರು
ಎಳೆ ಎಳೆಯಾಗಿ ಕೊಂಚ ತಿಳಿಯಾಗಿ
ಬಿತ್ತ ಬೇಕಿದೆ ಮೊಳಕೆ ಕಾಳು
ಸುಖವಾಗಿ ಹಿತವಾಗಿ ಸಾಗಲು ಬಾಳು. 
@ಹನಿಬಿಂದು@
30.04.2023

ಒಂದಿಷ್ಟು.....182

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 182

ದುಡಿಯುವ ಕೈಗಳಿಗೆ ಬಡತನ ಬಾರದಿರಲಿ

       ಮೇ ಒಂದು ಎಂದ ತಕ್ಷಣ ನಮಗೆ ನೆನಪಾಗುವುದು ಕಾರ್ಮಿಕರ ದಿನಾಚರಣೆ. ಕಾರ್ಮಿಕನಿಲ್ಲದೆ ಈ ದೇಶ ಸಾಗದು. ಯಾವುದೇ ದೊಡ್ಡ ದೊಡ್ಡ ಕಟ್ಟಡಗಳು ನಿಲ್ಲಬೇಕಾದರೆ ಕಾರ್ಮಿಕರೇ  ಅವುಗಳ ಜೀವನ.  ಯಾವುದೇ ಇಂಜಿನಿಯರ್ ಗಳಿದ್ದರೂ ಬಿಲ್ಡರ್ಸ್ ಗಳಿದ್ದರೂ ಅವರ ಮೂಲ ಬಂಡವಾಳ ಈ ಕಾರ್ಮಿಕರೇ.  ಕಾರ್ಮಿಕರನ್ನು ಬಿಟ್ಟು ಯಾವುದೇ ಕೆಲಸವಿಲ್ಲ.  ಯಾವುದೇ ಕಟ್ಟಡಗಳ ರಚನೆಗಳಿಲ್ಲ,  ಯಾವುದೇ ಅತ್ಯಂತ ಕ್ರಿಯಾತ್ಮಕ ಕೆಲಸಗಳು ತಳಮಟ್ಟದಿಂದ ಕಾಣಲು ಸಾಧ್ಯ ಇಲ್ಲ. ಈಗಂತೂ ಎಲ್ಲರೂ ಕಲಿತವರೇ.  ಹಾಗಾಗಿ ದಿನಗೂಲಿ ಕಾರ್ಮಿಕರ ಲಭ್ಯತೆ ತುಂಬಾ ಕಷ್ಟವಾಗುತ್ತದೆ. ಆದರೆ ಇದು ಇರುವ ಕಾರ್ಮಿಕರಿಗೆ ಒಳ್ಳೆಯದನ್ನೇ ಬಯಸುತ್ತದೆ ಏಕೆಂದರೆ ಕಾರ್ಮಿಕರ ಲಭ್ಯತೆ ಕಡಿಮೆಯಾದ ಹಾಗೆ ಇದ್ದವರ ಅವಶ್ಯಕತೆ ಹೆಚ್ಚು. ಹಾಗಾಗಿ ಅವರ ಅಗತ್ಯತೆ ಹೆಚ್ಚಿ, ಅವರ ಸಂಬಳ ಹೆಚ್ಚುತ್ತಾ ಹೋಗುತ್ತದೆ. 
      
     ಯಾವುದೇ ಕಾರ್ಮಿಕರ ಸಂಬಳ ಈಗೇನೂ ಕಡಿಮೆ ಇಲ್ಲ. ಒಂದು ಕಾಲದಲ್ಲಿ ಕೂಲಿ ಕೆಲಸ ಎಂದರೆ ಬದುಕು ಅತ್ಯಂತ ಕಷ್ಟವಾಗಿತ್ತು, ನಿಕೃಷ್ಟವಾಗಿಯೂ ಇತ್ತು.  ಆದರೆ ಇಂದು ಕೂಲಿ ಕೆಲಸದವನಿಗೆ ಸರಕಾರದಿಂದ ಹಲವಾರು ಸೌಲಭ್ಯಗಳು ಸಿಗುವುದರ ಜೊತೆಗೆ ಅವನು ಉತ್ತಮವಾದ  ಬದುಕನ್ನು ನಡೆಸಲು  ಸಾಧ್ಯವಾಗಿದೆ. 

      ದಿನಗೂಲಿ ನೌಕರನೊಬ್ಬ ಹಗಲಲ್ಲಿ ದುಡಿದು ತುಂಬಾ ಸುಸ್ತಾಗಿ ಸಂಜೆ ಬಂದು ಮಲಗಿದರೆ ಒಳ್ಳೆ ನಿದ್ದೆ ಬರುತ್ತದೆ. ಏನೇ ತಿಂದರೂ ಕರಗುತ್ತದೆ. ಹಸಿವಿನ ಅನುಭವ ಆಗುತ್ತದೆ. ಹೊಟ್ಟೆ ಭಾಗ ಬೆಳೆಯಲು ಸಾಧ್ಯವಿಲ್ಲ. ಹೊಟ್ಟೆ ಕರಗಿಸಲು ಅವನ ಕೆಲಸವೇ ಎಕ್ಸರ್ಸೈಜ್ ಆಗುತ್ತದೆಯೇ ಹೊರತು ಕಿಲೋಮೀಟರ್ ಗಟ್ಟಲೆ ವಾಕಿಂಗ್ ಹೋಗಬೇಕೆಂಬ ಚಿಂತೆ ಇಲ್ಲ. ಆಹಾರ, ನಿದ್ದೆ, ದಣಿವು ಚೆನ್ನಾಗಿ ಆದವ ಬದುಕಲ್ಲಿ ಆರೋಗ್ಯವಂತ ಮತ್ತು ಸದಾ ಸುಖಿ. ಆ ಜೀವನವೇ ಉತ್ತಮ. ಇದೇ ಕಾರ್ಮಿಕರ ಬದುಕು. 

           ಕಾರ್ಮಿಕರು ಕೇವಲ ಕಟ್ಟಡ ಕಾರ್ಮಿಕರೇ ಆಗಬೇಕೆಂದು ಇಲ್ಲ, ಪ್ರತಿನಿತ್ಯ ಬಿಸಿಲಿನಲ್ಲಿ, ನೆರಳಿನಲ್ಲಿ, ಕಷ್ಟದ ಪರಿಸ್ಥಿತಿಯಲ್ಲಿ ಕಡಿಮೆ ಸಂಬಳಕ್ಕೆ , ದಿನಾ ಕೆಲಸ ಮಾಡಿ ಬದುಕು ಸಾಗಿಸುವ ಮನುಷ್ಯ. ಅದರಲ್ಲಿ ತನ್ನ ಬದುಕಲ್ಲಿ ಸಂತಸ ಕಾಣುವ ಶ್ರಮಜೀವಿ. ಎತ್ತರದ ಟವರ್ ನಿರ್ಮಾಣ, ವಿವಿಧ ಕಾರ್ಖಾನೆಗಳಲ್ಲಿ ಕೆಲಸ, ಸಾವಿರ ಮಹಡಿ ಎತ್ತರದ ಕಟ್ಟಡಗಳು, ವಿವಿಧ ಉತ್ಪನ್ನಗಳ ತಯಾರಕ ಕಂಪನಿಗಳ ಕೆಲಸಗಾರರು, ರಸ್ತೆಯ ಡಾಂಬರೀಕರಣ ಕೆಲಸ ಮಾಡುವವರು, ಪೌರ ಕಾರ್ಮಿಕರು, ಆಟೋ ರಿಕ್ಷಾ ಟೆಂಪೋ, ಬಸ್ ಚಾಲಕರು, ಟ್ರೈಲರ್ ಗಳು, ಸಣ್ಣ ಸಣ್ಣ ಅಂಗಡಿಗಳಲ್ಲಿ ದುಡಿಯುವ ವರ್ಗದ ಜನರು, ಬೀಡಿ ಕಾರ್ಮಿಕರು, ಗೇರು ಸ್ವಚ್ಚಗೊಳಿಸುವ ಕಾರ್ಮಿಕರು, ಬಟ್ಟಮಿಲ್ ಗಳಲ್ಲಿ ದುಡಿಯುವ ನೌಕರರು, ಮನೆ ಕೆಲಸ ಮಾಡುವವರು,ಎಸ್ಟೇಟ್, ತೋಟಗಳಲ್ಲಿ ನಿತ್ಯ ಕೆಲಸ ಮಾಡುವವರು, ಸಮುದ್ರದ ಬದಿಯಲ್ಲಿ ರಕ್ಷಣಾ ಕೆಲಸ ಮಾಡುವ ಕಾರ್ಮಿಕರು...ಅಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟು ವಿವಿಧ ಕಾರ್ಮಿಕರ ಪಟ್ಟಿ ನಮಗೆ ಸಿಗುತ್ತದೆ! ನಿಜಕ್ಕೂ ತಳ ಮಟ್ಟದ ಕೆಲಸ ಮಾಡುವ ಕಾರ್ಮಿಕನ ಅಗತ್ಯ ಸಮಾಜಕ್ಕೆ ತುಂಬಾ ಇದೆ. ಕಾರ್ಮಿಕರು ಎಂದರೆ ರೈಲಿನ ಪಟ್ಟಿಗಳ ಹಾಗೆ. ತಮ್ಮನ್ನು ತಾವು ಎಲ್ಲಾ ಭಾರಗಳಿಗೆ ಮೈಯೊಡ್ಡಿಕೊಂಡು ಕೆಲಸ ಮಾಡುವವರು. 

ಕಾರ್ಮಿಕರು ಇದೀಗ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಂತ್ರವನ್ನು ಕಲಿತಿದ್ದಾರೆ. ತಮ್ಮದೇ ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ಅವರಿಗೂ ಅಟಲ್ ಪೆನ್ಶನ್ ಯೋಜನೆಯಲ್ಲಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗಳಲ್ಲಿ ಪ್ರತಿ ತಿಂಗಳೂ ಹಣ ತೊಡಗಿಸಿದರೆ ಮುಂದೆ ಪೆನ್ಶನ್ ಪಡೆಯುವ ಅವಕಾಶವನ್ನು ಸರಕಾರ ಮಾಡಿ ಕೊಟ್ಟಿದೆ. ಹಾಗೆಯೇ ಜಾತಿ ಆದಾಯ ಪ್ರಮಾಣ ಪತ್ರವನ್ನು ಪಡೆದು ಅದರ ಮೂಲಕ ಅವರ ಮಕ್ಕಳ ನೋಂದಾವಣಿ ಆನ್ಲೈನ್ ನಲ್ಲಿ ಮಾಡಿದರೆ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ. ಕಲಿಕೆಯಲ್ಲಿ ಉತ್ತಮ ಸಾಧನೆ ತೋರಿದರೆ ಸ್ಕಾಲರ್ಶಿಪ್ ದೊರೆಯುತ್ತದೆ. ಹಲವಾರು ಗಣ್ಯರು ಶಾಲೆಗಳಿಗೆ ಭೇಟಿ ನೀಡಿ ಕಾರ್ಮಿಕರ ಮಕ್ಕಳಿಗೆ ಪುಸ್ತಕ, ಪೆನ್ನು ದಾನ ನೀಡುತ್ತಾರೆ. ಸರಕಾರ ಮನೆ ಇಲ್ಲದ ಕಾರ್ಮಿಕರಿಗೆ ಪ್ರಧಾನಮಂತ್ರಿ ಆವಾಸ ಯೋಜನೆ, ಬಸವ ವಸತಿ ಯೋಜನೆ ಮುಂತಾದ ಇನ್ನೂ ಹಲವಾರು ಯೋಜನೆಗಳ ಮೂಲಕ ಮನೆ, ದನದ ಕೊಟ್ಟಿಗೆ, ಶೌಚಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ಸಿಗುತ್ತದೆ. ಸರಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣದ ಜೊತೆಗೆ ಉಚಿತ ಪಠ್ಯ ಪುಸ್ತಕ, ಉಚಿತ ಸಮವಸ್ತ್ರ, ಉಚಿತ ಮಧ್ಯಾನದ ಊಟ, ವಾರಕ್ಕೆರಡು ದಿನ ಮೊಟ್ಟೆ ಅಥವಾ ಚಿಕ್ಕಿ, ಉಚಿತವಾಗಿ ಬೆಳಗ್ಗೆ ಬಿಸಿ ಬಿಸಿ ಹಾಲು, ಇದರ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದ ಜೊತೆಗೆ ಆಗಾಗ ಉಚಿತ ಮಾಹಿತಿ, ತರಬೇತಿ, ಸ್ಪೋಕನ್ ಇಂಗ್ಲಿಷ್ ಕಾರ್ಯಕ್ರಮಗಳು, ಇವುಗಳ ಜೊತೆಗೆ ಸರಕಾರದ ಇತರ ಇಲಾಖೆಗಳ ಮಾಹಿತಿ, ಕೌನ್ಸೆಲಿಂಗ್, ಕೆಲವು ಶಾಲೆಗಳಲ್ಲಿ ಕ್ರಾಫ್ಟ್ ಮತ್ತು ಬಟ್ಟೆ ಹೊಲಿಯುವುದು, ತೋಟಗಾರಿಕೆ, ಡ್ರಾಯಿಂಗ್ ತರಬೇತಿ, ಆಟೋಟ, ನಾಟಕ ಹೀಗೆ ಹತ್ತು ಹಲವು ಆಯಾಮಗಳ ಕಲಿಕೆಗೂ ಅವಕಾಶ ಇದೆ. 
ಅಲ್ಲದೆ ಕಲಿಯುವ ವಿದ್ಯಾರ್ಥಿಗಳಿಗೆ ಎಲ್ಲಾ ಬ್ಯಾಂಕುಗಳು ಶೈಕ್ಷಣಿಕ ಸಾಲ ಕೊಡುತ್ತವೆ. ಸಣ್ಣ ಮನೆ ಕಟ್ಟುವವರಿಗೆ ಸಾಲ ಸೌಲಭ್ಯ ಕಡಿಮೆ ಬಡ್ಡಿ ದರದಲ್ಲಿ ಸಿಗುತ್ತದೆ. ಅರವತ್ತು ವರ್ಷ ದಾಟಿದ ಹಿರಿಯ ನಾಗರಿಕರಿಗೆ ವೃದ್ದಾಪ್ಯ ವೇತನ, ವಿಧವೆಯರಿಗೆ ವಿಧವಾ ವೇತನವೂ ಸರಕಾರದಿಂದ ಲಭ್ಯ ಇದೆ. ಕಾರ್ಮಿಕರು ವರ್ಷಕ್ಕೆ ಹದಿಮೂರು ರೂಪಾಯಿ ರಾಷ್ಟ್ರೀಕೃತ  ಬ್ಯಾಂಕ್ ಗಳಲ್ಲಿ ಕಟ್ಟುವ ಮೂಲಕ ತಮ್ಮ ಜೀವದ ಭದ್ರತೆಗಾಗಿ ಅಲ್ಲದೆ ಅಭಾ ಕಾರ್ಡ್ ಮಾಡುವ ಮೂಲಕ ಆಸ್ಪತ್ರೆ ಸೌಲಭ್ಯಗಳನ್ನು ಸರಕಾರ ಒದಗಿಸಿ ಕೊಡುತ್ತದೆ. ಸರಕಾರ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು ನೀಡುವ ಎಲ್ಲಾ ಸಹಕಾರ ಹಾಗೂ ಸೌಲಭ್ಯಗಳನ್ನು ತಿಳಿದುಕೊಂಡು ಕಾರ್ಮಿಕರು ಅವುಗಳನ್ನು ಪಡೆದುಕೊಂಡು ತಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಬೇಕು ಅಷ್ಟೇ. ಕಾರ್ಮಿಕ ಸಂಘಗಳು ಅವರಿಗೆ ಬೇಕಾದ ಸಮಾನತೆಗೆ ಮತ್ತು ಸೌಲಭ್ಯಗಳಿಗೆ ಹೋರಾಟವನ್ನೂ ಮಾಡುತ್ತವೆ. ಒಟ್ಟಾರೆ ಇಂದು ಕಾರ್ಮಿಕರ ಬದುಕು ಹಿಂದಿನಂತೆ ಇಲ್ಲ, ಆದರೂ ಹಲವರ ಕಷ್ಟದ ಹಾಗೂ ಡೇಂಜರ್ ಎನ್ನುವ ಕೆಲಸಗಳು ಇದ್ದೇ ಇವೆ. 

ದುಡಿಯುವ ಕೈಗಳಿಗೆ ಬಡತನವಿಲ್ಲ ಎಂಬ ಮಾತಿದೆ. ಅಂತೆಯೇ ದುಡಿತವನ್ನೆ ನಂಬಿ ಅವರವರ ಬದುಕು ಕಟ್ಟಿಕೊಳ್ಳುವವರು ಅವರವರೇ. ಕಾರ್ಮಿಕರ ಬದುಕು ಕೂಡಾ ಅವರೇ ಕಟ್ಟಿಕೊಂಡದ್ದು. ಈ ಕೆಲಸಕ್ಕಾಗಿ ಊರು, ಜಿಲ್ಲೆ, ರಾಜ್ಯ, ದೇಶ ಬಿಟ್ಟು ಬಂದವರೂ ಇರುತ್ತಾರೆ. ಎಲ್ಲಾ ಕಷ್ಟಪಟ್ಟು ಬದುಕುವ ಕಾರ್ಮಿಕರ ಬದುಕೂ ಕೂಡಾ ಸುಖವಾಗಿರಲಿ ಎಂದು ಆಶಿಸೋಣ. ನೀವೆಂತೀರಿ? 
@ಹನಿಬಿಂದು@
29.04.2023

ಒಂದಿಷ್ಟು ......181

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -181

         ಬದುಕಿನ ಪ್ರತಿ ಕ್ಷಣವೂ ಕೂಡ ನಾವು ಮೊದಲೇ  ನೆನೆಸಲು ಆಗದೆ ಇರುವಂತದ್ದು. ಈ ಕ್ಷಣದಲ್ಲಿ ಹೀಗಿದ್ದೇವೆ,  ಮುಂದಿನ ಕ್ಷಣದಲ್ಲಿ ಏನಾಗುವುದು ಏನು ಯಾರಿಗೂ ತಿಳಿಯುವುದಿಲ್ಲ. ಎಷ್ಟೇ ಭವಿಷ್ಯವಾಣಿ ಕೇಳಿದರೂ, ಅಂಗೈ - ಮುಂಗೈ -  ಕಾಲು -  ಮುಖ - ಕಣ್ಣಿನ  ರೇಖೆ ಓದಿಸಿದರೂ  ಕೂಡ ಮುಂದಿನ ಕ್ಷಣದಲ್ಲಿ ಏನಾಗುತ್ತದೆ ಎಂಬ ಅರಿವು ಸ್ವತಃ ಭವಿಷ್ಯವಾಣಿ ನುಡಿದವರಿಗೂ ತಿಳಿಯದು. ದೇವರ ಈ ಒಂದು ಕಾಲದ ನಿರ್ಣಯ ಕ್ರಿಯೆ ಬಹಳವೇ ನಾಜೂಕಾದುದು. ಯಾರು ಯಾವಾಗ ಎಲ್ಲಿ ಯಾರನ್ನು ಭೇಟಿಯಾಗುವರು,  ಯಾರ ಜೊತೆಗೆ ಬದುಕುವವರು ಯಾರು,  ಒಂಟಿಯಾಗುವವರು ಯಾರು , ಯಾರು ನಗುವರು,  ಯಾರು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವರು,  ಯಾರು ರೋಗಿಗಳಾಗುವವರು,  ಯಾರು ನೋವುಣ್ಣುವರು,  ಯಾರು ಸಂತಸದಲ್ಲಿ ಬೇಗುವರು,  ಯಾರು ಯಾರಿಗೆ ನೋವು ಕೊಡುವರು,  ಯಾರು ಯಾರ ಮನಸ್ಸಿಗೆ ಸಾಂತ್ವನ ನೀಡುವರು... ಇವೆಲ್ಲವೂ ಆ ದೇವರಲ್ಲಿ ಸರಿಯಾದ ರೀತಿಯಲ್ಲಿ ಮೊದಲೇ ಯೋಜಿಸಲ್ಪಟ್ಟಿದೆ. 
          ಹುಟ್ಟುವಾಗಲೇ  ಸಮಯವನ್ನು ನೋಡಿ ಸರಿಯಾಗಿ ತಿಳಿದವರು ಆ ಮಗುವಿನ ಬಗ್ಗೆ ಒಂದು ಜಾತಕವನ್ನು ರಚಿಸುವರು. ಆ ಜಾತಕದಲ್ಲಿ ಇಂತಹ ವಯಸ್ಸಿಗೆ ಇವನು ಇಂತಹವನಾಗುತ್ತಾನೆ ಎಂಬುದನ್ನು ತಿಳಿಸಿ ಬಿಡುವರು.  ಜಾತಕ ಬರೆದವನು ಎಷ್ಟು ತಿಳಿದವನೋ ಗೊತ್ತಿಲ್ಲ.  ಆದರೆ ದೇವರು ಮಾತ್ರ ಬಹಳವೇ ತಿಳಿದವನು.  ಬಹಳವೇ ನಿಯತ್ತಾಗಿ ಸರಿಯಾಗಿ ಎಲ್ಲರ ಕ್ಷಣಗಳನ್ನು ಕೂಡ ನಿಭಾಯಿಸುವವನು. ಯಾವುದೇ ತಪ್ಪಿಲ್ಲದೆ ಅಥವಾ ಯಾವುದೇ ಮೋಸವಿಲ್ಲದೆ ಪ್ರತಿಯೊಬ್ಬರ ಜೀವನದಲ್ಲೂ ಅಳು - ನಗು - ಸುಖ - ಕಷ್ಟಗಳನ್ನು ತುಂಬಿ, ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕ್ಕೆ ಅನುಗುಣವಾಗಿ ಅವರಿಗೆ ರೂಪ,  ವಿದ್ಯೆ,  ಧನ, ಸಂಪತ್ತು, ನೋವು, ನಲಿವು, ಗೆಳೆತನ,  ಗುಣ ಎಲ್ಲವನ್ನು ಕೊಟ್ಟು ಭೂಮಿಗೆ ಕಳುಹಿಸಿರುತ್ತಾನೆ. 
     ಭೂಮಿಗೆ ಬಂದ ನಾವು ನಮ್ಮ ಜೀವನವನ್ನು ವ್ಯರ್ಥವಾಗಿ ಕಳೆಯದೆ ಹಲವಾರು ಉತ್ತಮ ಕಾರ್ಯಗಳನ್ನು ಮಾಡುತ್ತಾ ಹಾಗೂ ನಮ್ಮತನವನ್ನು ಬಿಟ್ಟು ಕೊಡದೆ,  ಸಾಧ್ಯವಾದಷ್ಟು ತಾವು ಚೆನ್ನಾಗಿ ಬದುಕಿ ಉಳಿದವರಿಗೂ  ಬದುಕಲು ಬಿಡಬೇಕಾದದ್ದು ಮಾನವ ಧರ್ಮ. ರೋಷ,  ದ್ವೇಷ,  ಮತ್ಸರ, ಹೊಟ್ಟೆಕಿಚ್ಚು , ಅಹಂಕಾರ ಇವುಗಳನ್ನೆಲ್ಲ ಬೆಳೆಸಿಕೊಂಡು ಇತರರಿಂದ ನಿಂದನೆಗೂ ಒಳಪಟ್ಟು,  ಪರರ ಮನಸ್ಸನ್ನು ನೋಯಿಸಿ ಬದುಕುವುದು ಕೆಟ್ಟದು. ಅಂಥವರಿಗೆ ಖಂಡಿತಾ ಅವರ  ನಾಳೆ ದುಃಖವನ್ನು ಅನುಭವಿಸಿಯೆ ಅನುಭವಿಸುವರು. 
      ಪ್ರತಿಯೊಬ್ಬರ ಬದುಕು ಶಾಶ್ವತವಲ್ಲ,  ಕ್ಷಣಗಳು ಕೂಡ!  ಇಂದು ಬಡವನಾಗಿರುವವನು ನಾಳೆ ಸಿರಿವಂತನಾಗಬಲ್ಲ . ಇಂದು ಸಿರಿವಂತನಾಗಿ ಮೆರೆಯುತ್ತಿರುವವನು ನಾಳೆ ಏನೂ ಇಲ್ಲದೆ ಅನಾಥನಾಗಬಹುದು . ಇದು ಬದುಕಿನ ನಿಯಮ ಯಾರು , ಯಾವಾಗ,  ಎಲ್ಲಿ , ಹೇಗೆ,  ಏನು ಎಂಬ ಯಾವುದೇ ಪೂರ್ವ ನಿಯಮಿತ ಪದ್ಧತಿ ನಮಗೆ ತಿಳಿದಿಲ್ಲ. ಇಂದು ಈಗ ಇಲ್ಲಿ ಚೆನ್ನಾಗಿದ್ದೇವೆ ಅಷ್ಟೇ.  ನಾಳೆ ಅಥವಾ ಇನ್ನೊಂದು ಕ್ಷಣದಲ್ಲಿ ಯಾವುದೂ ತಿಳಿಯದು.  ಇದುವೇ ಬದುಕಿನ ಸೂತ್ರ.  ಇದುವೇ ಜೀವನ.  ಇದನ್ನು ಅರಿತು ನಡೆದಲ್ಲಿ ಮಾನವರೆಂದೂ ಖಂಡಿತವಾಗಿಯೂ ಸ್ವಾರ್ಥಿಗಳಾಗಲು ಸಾಧ್ಯವಿಲ್ಲ. ಪರಹಿತ , ಪರ ಚಿಂತನೆ,  ಪರೋಪಕಾರ, ಪರರಿಗೆ ಸಹಾಯ ಮಾಡುವಂತಹ ಮನೋಭಾವ ಸದಾ ಬೆಳೆಸಿಕೊಳ್ಳುವುದೇ ಜೀವನದ ಅಂಶವಾಗಿದೆ. 
    ಸರ್ವೇ ಜನ ಸುಖಿನೋ ಭವಂತು ಎಂಬ ಮಾತಿನಂತೆ ಯಾವಾಗಲೂ ಎಲ್ಲಿಯೂ ಸಹ ಸರ್ವರಿಗೆ ಹಿತವನ್ನು ಬಯಸುವವನಿಗೆ ಎಂದೂ ಕೂಡ ನೋವು ಕಾಡದು. ನೋವು ಬಂದರೂ  ಕೂಡ ದೇವರೇ ಮನುಷ್ಯ ರೂಪದಲ್ಲಿ ಸಹಾಯ ಮಾಡಲು ಅವನಿಗೆ ಸದಾ ಸಿದ್ಧನಾಗಿರುತ್ತಾನೆ. ಪರಹಿತ ಬಯಸುವವನ  ಬದುಕು ಸದಾ ಆ ದೇವರೇ ಬಂದು ನೆಮ್ಮದಿಯಾಗಿ ಇರುವಂತೆ ಮಾಡುತ್ತಾರೆ. ಇದು ಸತ್ಯ. 
      ಮಾಡಿದ್ದುಣ್ಣೋ ಮಹರಾಯ ಎಂಬಂತೆ ಬದುಕಲ್ಲಿ ಬೇವು ಬಿತ್ತಿದರೆ ಬೇವು ತಿನ್ನಬಹುದು, ಮಾವು ಬಿತ್ತಿ ಬೆಳೆದರೆ ಮಾವು ತಿನ್ನ ಬಹುದು. ಯಾವುದನ್ನು ನಾವು ತಿನ್ನಬೇಕು ಎಂದು ನಿರ್ಧಾರ ಮಾಡುವವರು ನಾವೇ. ಉತ್ತಮರಾಗಿ ಬದುಕೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@ 
21.04.2023

ಒಂದಿಷ್ಟು..,...180

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 180

         ಮಕ್ಕಳಿಗೆಲ್ಲ ಈಗ ಬೇಸಿಗೆ ರಜೆ. ಅಜ್ಜಿ ಮನೆಗೆ, ಮಾವನ ಮನೆಗೆ , ಇನ್ಯಾರೋ ಬಂಧುಗಳ ಮನೆಗೆ ಮಕ್ಕಳನ್ನು ಕಳಿಸಿ ಹಾಯಾಗಿ ರಜೆಯನ್ನು ಕಳೆಯುವ ಕಾಲ ಇದಲ್ಲ. ನಮಗಿರುವುದು ಒಂದೋ ಎರಡೋ ಮಕ್ಕಳು. ಅವರನ್ನು ನಾವು ಎಲ್ಲೋ ದೂರದ ಊರಿನಲ್ಲಿ ಬಂಧುಗಳ ಜೊತೆಗೆ ಬಿಟ್ಟು ಇರಲು ಕಷ್ಟ. ನಾವು  ಅವರನ್ನು  ನಮ್ಮ ಸಹಾಯ ಇರದೇ ಅವರಷ್ಟಕ್ಕೆ ಅವರೇ ಬದುಕಲು ಕಲಿಸಿಲ್ಲ . ಬೆಳಗ್ಗೆ ಎದ್ದು ಬ್ರಷ್ ಮಾಡಲು ಟೂತ್ ಬ್ರಷ್ ಗೆ ಪೇಸ್ಟ್ ನ್ನು  ಅಮ್ಮ ಹಾಕಿ ಕೊಡಬೇಕು. ತಿಂದ ತಟ್ಟೆಯನ್ನು ತೊಳೆಯಲು ಅಮ್ಮ ಬೇಕು. ಅವನು ಏನು ತಿನ್ನಬೇಕು? ಏನು ತಿನ್ನಬಾರದು? ಯಾವ ಬಟ್ಟೆಯನ್ನು ಹಾಕಿಕೊಳ್ಳಬೇಕು ಮೊದಲಾದವುಗಳನ್ನು ಡಿಸೈಡ್ ಮಾಡೋದು ಅಮ್ಮ. ಮನೆಗೆ ಏನು ಬೇಕು ಮಗನ ಹವ್ಯಾಸಗಳಿಗೆ ಏನು ಬೇಕು ಮಗಳು ಸಮಯ ಕಳೆಯಲು ಏನೆಲ್ಲ ಬೇಕು ಇವುಗಳನ್ನು ತಂದುಕೊಡಲು ಅಪ್ಪ. ಅಷ್ಟೇ ಅಲ್ಲ , ಡ್ಯಾನ್ಸ್ ಕ್ಲಾಸ್,  ಭರತನಾಟ್ಯ ಕ್ಲಾಸ್,  ಸಮ್ಮರ್ ಕ್ಯಾಂಪು, ಮ್ಯಾಥಮೆಟಿಕ್ಸ್ ಕ್ಲಾಸ್,  ಯಕ್ಷಗಾನ ಕ್ಲಾಸ್,  ಭಜನೆ,  ಸಂಗೀತ ಕ್ಲಾಸ್ , ಸಂಗೀತ ವಾದ್ಯಗಳ ಕಲಿಕೆ, ನೃತ್ಯ , ಆಕ್ಟಿಂಗ್,  ಕರಾಟೆ,  ಯೋಗ ಇನ್ನೂ ಮುಂತಾದ ಹಲವಾರು ತರಗತಿಗಳಿಗೆ ನಮ್ಮ ಮಕ್ಕಳನ್ನು ರಜೆಯಲ್ಲಿ ಸೇರಿಸಿ ಬಿಟ್ಟಿರುವ ಕಾರಣ ರಜೆಯಲ್ಲಿ ಮತ್ತು ಬೇರೆ ದಿನಗಳಲ್ಲಿ ಮಕ್ಕಳಿಗೆ ಮನುಷ್ಯತ್ವದ ಪಾಠ ಕಲಿಯಲು ಅವಕಾಶವೇ ಇಲ್ಲ. 

     "ನಾನು ಕಲಿಯಬೇಕು ಕಲಿತು ತುಂಬಾ ಹಣ ಮಾಡಬೇಕು ಅದಕ್ಕಾಗಿ ಒಳ್ಳೆಯ ಕೆಲಸ ಸಿಗಬೇಕು ಹಾಗೆ ಸಿಗಬೇಕಾದರೆ ಉತ್ತಮ ಅಂಕಗಳನ್ನು ಪಡೆಯಬೇಕು" ಇಷ್ಟನ್ನೇ ನಮ್ಮ ಮಕ್ಕಳ ಮನಸ್ಸಿನೊಳಗೆ ಆಳವಾಗಿ ಬೇರೂರಿಸಿ ಬಿಟ್ಟಿದ್ದೇವೆ. ಇಲ್ಲಿ ಬಡವರೊಂದಿಗೆ ಹೇಗೆ ವರ್ತಿಸಬೇಕು,  ನೋವಿರುವ ಮನಸ್ಸಿನವೊರೊಡನೆ ಹೇಗೆ ಮಾತನಾಡಬೇಕು,  ಹಿರಿಯರಿಗೆ ಹೇಗೆ ಗೌರವ ಕೊಡಬೇಕು,  ಪರರಿಗೆ ಸಹಾಯ ಹೇಗೆ ಮಾಡಬೇಕು,  ನಾಲ್ಕು ಜನರೊಂದಿಗೆ ಬೆರೆತು ಬಾಳುವುದು ಹೇಗೆ? ಇದೇ ಮೊದಲಾದ ಮಾನವತೆಯ ಗುಣಗಳನ್ನು ಹೇಳಿಕೊಡಲು ಯಾವ ಶಿಕ್ಷಕರೂ ಸಿಗುವುದಿಲ್ಲ. ಇದೆಲ್ಲ ಹಿರಿಯರಿಂದ ಕಲಿಯಬೇಕಾದಂತಹ ನೀತಿ ಪಾಠಗಳು. ಎಲ್ಲೋ ಕೆಲವು ಮಕ್ಕಳು ಇತರರನ್ನು ನೋಡಿ ಮತ್ತು ಇತರರಿಂದ ಕೇಳಿ ಕಲಿತಿರಬಹುದು ಉಳಿದ ಮಕ್ಕಳಿಗೆಲ್ಲ ನನ್ನ ತಂದೆ,  ತಾಯಿ,  ತಂಗಿ , ತಮ್ಮ,  ನಮ್ಮ ಕಾರು,  ನಮ್ಮ ಮನೆಯ ನಾಯಿ,  ನಮ್ಮ ಮನೆ,  ನಮ್ಮ ಶಾಲೆ,  ಮತ್ತೆ ಈ ಕ್ಲಾಸ್ಗಳು ಇಷ್ಟೇ ಪ್ರಪಂಚ. 

        ಮಕ್ಕಳನ್ನು ಈ ಗೂಡಿನಿಂದ ಹೊರಕ್ಕೆ ತಂದು ಹೊರಗೆ ಪ್ರಪಂಚ ವಿಶಾಲವಾಗಿದೆ.  ಅಲ್ಲಿ ಮುದ್ದಾದ ಪ್ರಾಣಿ ಪಕ್ಷಿಗಳಿವೆ. ಅದರೊಂದಿಗೆ ಹಲವಾರು ಜಾತಿಯ ಗಿಡ,  ಮರ, ಬಳ್ಳಿಗಳಿವೆ.  ಅವುಗಳಿಗೆಲ್ಲ ಜೀವವಿದೆ.  ಅವು ಕೂಡ ನಮ್ಮ ಕರೆಗೆ ಸ್ಪಂದಿಸುತ್ತವೆ.  ಅವುಗಳು ಕೂಡ ನಮ್ಮ ಒಡನಾಡಿಗಳಾಗಬಲ್ಲವು ಮೊದಲಾದ ಹಲವಾರು ವಿಷಯಗಳನ್ನು ಕಲಿತಷ್ಟು ಮುಗಿಯದ ಭಾವಗಳನ್ನು ನಮ್ಮ ಮಕ್ಕಳಲ್ಲಿ ನಾವು ಇಂದು ಬಿತ್ತಬೇಕಿದೆ. ತರಗತಿಯಲ್ಲಿ ಮೊದಲ ರ್ಯಾಂಕ್  ಪಡೆದ ಮಗುವಿಗೆ ಬದುಕಿನ ಪಾಠ ಕಲಿಸಿ ಕೊಡಬೇಕಾದ ಅನಿವಾರ್ಯತೆ ಇಂದು ಬಂದಿದೆ. ಇಲ್ಲದೆ ಹೋದರೆ ಯಾವುದೇ ಒಂದು ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್  ಪಡೆದ ತಕ್ಷಣ ಆ ಮಗು ಅಂಕಗಳು ಕಡಿಮೆಯಾದವು , ನಾನು ಹಿಂದೆ ಬಿದ್ದೆ ಎಂದು ನೊಂದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಬಹುದು. ತಮ್ಮ ತಮ್ಮ ಮಕ್ಕಳ ಕಲಿಕೆಗಾಗಿ ಪೋಷಕರೊಡನೆ  ಇರುವ ನೂಕು ನುಗ್ಗಲು,  ತಮ್ಮ ಕುಟುಂಬದ ಪ್ರತಿಷ್ಠೆಗಾಗಿ ಮಕ್ಕಳ ಕಲಿಕೆಯ ಮಟ್ಟವನ್ನು ಎದುರಿಗಿಡುವುದು,  ಇದೇ ಮೊದಲಾದ ಪೋಷಕರ ಸಣ್ಣತನದಿಂದ ಮಕ್ಕಳು ನೊಂದುಕೊಳ್ಳುತ್ತಾರೆ. 

        ಇಬ್ಬರೂ ಹೊರಗೆ ದುಡಿಯುವ ತಂದೆ ತಾಯಿಗಳಾಗಿದ್ದರೆ ಅವರಿಗೆ ತಮ್ಮ ಮಕ್ಕಳಿಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಮಕ್ಕಳೇನು ಮಾಡುತ್ತಾರೆ ಎಂದು ನೋಡಿಕೊಳ್ಳುವುದೂ ಕಷ್ಟ. ಅಂತಹ ಮನೆಗಳಲ್ಲಿ ಮಗುವೊಂದು ತಾನು ಕೂಡ  ಹಿರಿಯನೆನಿಸಿಕೊಳ್ಳುತ್ತದೆ. ಇಂತಹ ಮಕ್ಕಳು ಬೇಗನೆ ಈ ರೀತಿಯ ಕೆಲಸಗಳಿಗೆ ಮುಂದಾಗುತ್ತಾರೆ. ದೇಶ ಸುತ್ತು, ಕೋಶ ಓದು ಎಂಬ ಗಾದೆಯಂತೆ ಎಷ್ಟೇ ಪುಸ್ತಕಗಳನ್ನು ಓದಿದರೂ ಹಳ್ಳಿ ಹಳ್ಳಿಗಳನ್ನು ಸುತ್ತಿದ ಅನುಭವ ಬೇಕಾಗುತ್ತದೆ. ಇಲ್ಲದೆ ಹೋದರೆ ಥಿಯರಿ ಮಾತ್ರ ಗೊತ್ತಿದ್ದು ಪ್ರಾಕ್ಟಿಕಲ್ ಮರೆತೆ ಹೋಗಿರುತ್ತದೆ. ಮಗುವಿನ ಸಂಪೂರ್ಣ ಕಲಿಕೆಗೆ ಪುಸ್ತಕದ ಬದನೆಕಾಯಿ ಸಾಲದು. ನೋಡಿ ಕಲಿ, ಮಾಡಿ ತಿಳಿ ಎನ್ನುವಂತಹ ತಾನು ಮಾಡಿ ಕಲಿತಂತಹ ಪ್ರಾಯೋಗಿಕ ವಿದ್ಯೆ ಬೇಕು. ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯದಲ್ಲಿ ಕೂಡಿ ಹಾಕುವುದನ್ನು ಬಿಟ್ಟು ಹೊರಗಿನ ಪರಿಸರ, ನದಿ, ಬೆಟ್ಟ, ಹುಲ್ಲು, ಮರ,  ಹೂವು,  ಹಣ್ಣು,  ತರಕಾರಿ,  ಪಕ್ಷಿಗಳು,  ಪ್ರಾಣಿಗಳು ಇವುಗಳ ನಡುವೆ ಅವುಗಳನ್ನು ಅರಿತು ಬಾಳುವುದನ್ನು ಕಲಿಸಿ ಕೊಡಲು ನಾವು ಹಿಂದೆ ಮುಂದೆ ನೋಡಬಾರದು. ಪ್ರತಿಯೊಂದು ಮಗುವು ಕೂಡ ಅದರದೇ ಆದಂತಹ ವಿಶೇಷವಾದ ಟ್ಯಾಲೆಂಟ್ ಅನ್ನು ಹೊಂದಿರುತ್ತದೆ. ಇದುವರೆಗೂ ಯಾರು ಮಾಡದೇ ಇರುವಂತಹ ವಿಶೇಷವಾದ ಒಂದು ಕಾರ್ಯವನ್ನು ಮಾಡುವ ವಿಶೇಷವಾದ ಮೆದುಳಿನ ಶಕ್ತಿ ಪ್ರತಿಯೊಬ್ಬ ಮಾನವನಿಗೂ ಇದೆ. ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವುದರ ಜೊತೆಗೆ ಅದಕ್ಕೆ ನೀರೆರೆದು ಪೋಷಿಸಿ ಬೆಳೆಸಿ ಸಹಕಾರ  ನೀಡಬೇಕು. ಆಗ ಮಾತ್ರ ಹೆಮ್ಮರವಾದ ಸಾಧನೆಯು ಬೆಳೆದು ನಿಲ್ಲಲು ಸಾಧ್ಯವಾಗುತ್ತದೆ. ಗಿಡ ಮರಗಳ ಹಾಗೆ ಮಕ್ಕಳಿಗೂ ಕೂಡ ನೀರು ಗೊಬ್ಬರ ಹಾಕಿ ಪ್ರತಿನಿತ್ಯ ಕಾಪಾಡಿ ಪಶುಗಳಿಂದ ದೂರವಿರಿಸಿ ಅಂದವಾಗಿ ಸಾಕಿದರೆ ಮಾತ್ರ ಮುಂದೆ ಉತ್ತಮ ಫಸಲು ಅದರಿಂದ ನಮಗೆ ದೊರೆಯುತ್ತದೆ. ಮಕ್ಕಳ ಬಾಳು ಬಂಗಾರವಾಗುತ್ತದೆ. ಬೆಳೆಯ ಸಿರಿ ಮೊಳಕೆಯಲ್ಲಿ ನೋಡು ಎಂಬ ಗಾದೆ ಮಾತಿನಂತೆ ಯಾವುದೇ ಒಳ್ಳೆಯ ಬೆಳೆಯನ್ನು ಅದು ಚಿಕ್ಕ ಗಿಡ ಇರುವಾಗಲೇ ಬೆಳೆಸಿ  ಚೆನ್ನಾಗಿ ಸಾಕಿದರೆ ಮಾತ್ರ ಮುಂದೆ ಒಳ್ಳೆಯ ಗಿಡವಾಗಿ ನಮಗೆ ಉಪಕಾರಿ ಆಗುವುದು. ಇಲ್ಲದೇ ಹೋದರೆ ಕಳೆ ಗಿಡದ ಹಾಗೆ ಉದ್ದುದ್ದಕ್ಕೆ ಬೆಳೆದು ಸರಿಯಾದ ಆರೈಕೆಗಳೇ ಇಲ್ಲದೆ ಸತ್ತು ಹೋದಿತು ಅಥವಾ ಉಪಯೋಗಕ್ಕೆ ಬಾರದೆ ಇರಬಹುದು. 

ಪ್ರತಿ ಮಗುವೂ ಅಮೂಲ್ಯ ರತ್ನ. ಅದನ್ನು ಬೆಳೆಸುವ ಪೋಷಕರ ಪ್ರಯತ್ನದ ಮುಂದೆ ಅವರ ಉತ್ತಮ ಭವಿಷ್ಯ ಕಾದಿದೆ. ಉತ್ತಮ ಪೋಷಕರು ಸಿಕ್ಕಿದರೆ ಕೈಕಾಲುಗಳು  ಇಲ್ಲದ ಮಗು ಕೂಡ ಜೆಸ್ಸಿಕಾ ಕಾಕ್ಸ್ ಅವರ ಹಾಗೆ ಕಾರು,  ವಿಮಾನ ಓಡಿಸಬಲ್ಲದು. ನೃತ್ಯ ಮಾಡಬಲ್ಲದು, ಕಣ್ಣಿಲ್ಲದ ಮಗುವೂ ಕೂಡ ಟಿವಿಯಲ್ಲಿ ವಾರ್ತೆಗಳನ್ನು ಓದಬಹುದು. ವಿಕಲಚೇತನರೂ  ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ದಾಖಲೆಗಳನ್ನು ಮಾಡಿ ಹೆಸರುಗಳಿಸುತ್ತಿರುವ ಇಂತಹ ಕಾಲದಲ್ಲಿ ನಮ್ಮ ಮಕ್ಕಳನ್ನು ಪುಸ್ತಕದ ಹುಳುವಾಗಿಸದೆ ಅವರನ್ನು ಕೂಡ ಯಾವುದಾದರೂ ಒಂದು ದಾರಿಯಲ್ಲಿ ಮುನ್ನಡೆಯುವಂತೆ ಮಾಡಿ, ಅವರ ಹವ್ಯಾಸಗಳಿಗೆ ಪ್ರೋತ್ಸಾಹ ನೀಡಿ, ಅವರದ್ದೇ ಆದಂತಹ ಸ್ಪೆಷಲ್ ಆದ ಕ್ರಿಯಟಿವಿಟಿಗೆ ಪೋಷಕರೆಲ್ಲ ಸಹಕಾರ ನೀಡುತ್ತಾ ಅವರನ್ನು ಉತ್ತಮತೆಯ ಕಡೆಗೆ ದಾರಿ ತೋರಿ, ಅವರಲ್ಲಿ ಮನುಷ್ಯತ್ವದ ಗುಣಗಳನ್ನು ಸಹಕಾರ,  ಸಹಬಾಳ್ವೆ ಇವುಗಳನ್ನೆಲ್ಲ ಕಳಿಸಿ ಬೆಳೆಸೋಣ ನೀವೇನಂತೀರಿ?
@ಹನಿಬಿಂದು@
15.04.2023

ಒಂದಿಷ್ಟು......179

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -179

       ಒಮ್ಮೆ ಯೋಚಿಸಿ, ಇಂದು ಮಲಗಿದ ನಾವು ನಾಳೆ ಬೆಳಗ್ಗೆ ಹಾಸಿಗೆಯಿಂದ ಏಳುತ್ತೇವೆಯೋ ಇಲ್ಲವೋ ನಮಗೆ  ತಿಳಿಯದು, ಇದರ ನಡುವೆ ದೈಹಿಕ, ಆರ್ಥಿಕ, ಮಾನಸಿಕ, ಬೌದ್ಧಿಕ , ಪರಿಸ್ಥಿತಿ ಹೇಗೇ ಇದ್ದರೂ ಈಗ ಜನರ ನಡುವೆ ರಾಜಕೀಯ ಕಚ್ಚಾಟ ಪ್ರಾರಂಭವಾಗಿದೆ. ತಾವು ಇಷ್ಟಪಟ್ಟ ಪಕ್ಷಗಳೇ ಸರಿ ಎನ್ನುತ್ತಾ ತಮ್ಮ ತಮ್ಮಲ್ಲಿ ಗುಂಪುಗಾರಿಕೆಗಳನ್ನು ನಡೆಸಿಕೊಂಡು ಪಕ್ಷದ ಪ್ರಚಾರಕ್ಕಾಗಿ ಗಿಮಿಕ್ಕುಗಳು ನಡೆಯುತ್ತಿವೆ. ಆದರೆ ಪ್ರಜ್ಞಾವಂತ ಮತದಾರರು ಜಾಗೃತರಾಗಬೇಕು. ತಾವು ಯಾವ ಪಕ್ಷಕ್ಕೆ ಮತದಾನ ಮಾಡಬೇಕು ಮತ್ತು ನಾವು ಚುನಾಯಿಸುವ ಅಭ್ಯರ್ಥಿಯು ಯಾವ ರೀತಿಯಾಗಿ ಇರಬೇಕು, ನಮ್ಮ ದೇಶದ ಭವಿಷ್ಯ ಯಾರ ಕೈಯಲ್ಲಿ ಇರುತ್ತದೆ, ಪಕ್ಷ ಯಾವುದೇ ಇರಲಿ ಉತ್ತಮ ಅಭ್ಯರ್ಥಿಯನ್ನು ಆ ಸ್ಥಾನಕ್ಕೆ ಏರಿಸುವ ಎಲ್ಲಾ ಹಕ್ಕುಗಳನ್ನು ಮತದಾರರನ್ನು ಹೊಂದಿರುತ್ತಾನೆ. ಆದಕಾರಣ ಮತದಾನವನ್ನು ಮಾಡುವಾಗ ಯಾವುದೇ ಆಸೆ ಆಕಾಂಕ್ಷೆಗಳ ಅಂಶಕ್ಕೆ ಒಳಗಾಗದೆ ಮದ್ಯ, ಕುಕರ್ , ಸೀರೆ , ಚಿಲ್ಲರೆ ಹಣ ಇತ್ಯಾದಿಗಳನ್ನು ಪಡೆದುಕೊಂಡು ತಮ್ಮ ಅಮೂಲ್ಯ ಮತಗಳನ್ನು ಮಾರಾಟ ಮಾಡದೆ ಸರಿಯಾದ ನಾಯಕನನ್ನು ದೇಶಕ್ಕೆ ಆರಿಸುವ ಮಹತ್ತಮವಾದ ಜವಾಬ್ದಾರಿಯನ್ನು ಭಾರತೀಯ ಪ್ರಜ್ಞಾವಂತ ಮತದಾರ ಹೊಂದಿರಬೇಕಾಗುತ್ತದೆ.
 
       ಮತದಾನ ಒಂದು ಪವಿತ್ರ ಕಾರ್ಯ.  ಹಾಗೆಯೇ ಇದು ನಮ್ಮೆಲ್ಲರ ಹಕ್ಕು. 18 ವರ್ಷ ವಯಸ್ಸಾದ ಯಾವುದೇ ಭಾರತೀಯ ಪ್ರಜೆಯೂ ಭಾರತದಲ್ಲಿ ಮತದಾನ ಮಾಡಲು ಹಕ್ಕನ್ನು ಹೊಂದಿರುತ್ತಾನೆ ಮತ್ತು ಅವನು ಆಯ್ಕೆ ಮಾಡುವ ಅಭ್ಯರ್ಥಿಯು ಅವನಿಗೆ ಸರಿ ಕಾಣುವ ಯಾರು ಬೇಕಾದರೂ ಆಗಬಹುದು.  ಆದರೆ ಸರಿಯಾದ ಅಭ್ಯರ್ಥಿಯನ್ನು ಸೂಚಿಸುವಂತಹ ಉತ್ತಮ ಜವಾಬ್ದಾರಿಯನ್ನು ಮತದಾರರನ್ನು ತೆಗೆದುಕೊಳ್ಳಬೇಕು.  ಇಲ್ಲದೆ ಹೋದರೆ ದೇಶ ರಾಜ್ಯ ಹಾಗೂ ದೇಶದ ಪ್ರತಿ ಹಳ್ಳಿಗಳ ಮತ್ತು ನಗರಗಳ ಉದ್ಧಾರ ಸಾಧ್ಯವಿಲ್ಲ.  ಈ ನಿಟ್ಟಿನಲ್ಲಿ ಮತದಾರನ ಜವಾಬ್ದಾರಿಯು ಅತ್ಯಂತ ಮಹತ್ವದ್ದಾಗಿದೆ ಮತ್ತು ಮತದಾರರು ತನ್ನ ಈ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕಿದೆ. ಇಲ್ಲದೆ ಇದ್ದರೆ ನಮ್ಮ ದೇಶವು ಕೂಡ ಶ್ರೀಲಂಕಾ,  ಪಾಕಿಸ್ತಾನ ಇವೇ ಮೊದಲಾದ ದೇಶಗಳ ಹಾಗೆ ಕಷ್ಟವನ್ನು ಅನುಭವಿಸುವಂತಹ ಪರಿಸ್ಥಿತಿ ಬರಬಹುದು. ಹಲವಾರು ಜನರನ್ನು ಹೊತ್ತ ವಿಶ್ವದ ಅತಿ ದೊಡ್ಡ ಜನಸಂಖ್ಯೆಯಲ್ಲಿ ಎರಡನೆಯ ಸ್ಥಾನ ಹೊಂದಿರುವ ಭಾರತದಂತಹ ಬೃಹತ್ ದೇಶವನ್ನು ಅಧಿಕಾರದಲ್ಲಿ ಕುಳಿತು ನಿಭಾಯಿಸುವುದು ಸುಲಭದ ಮಾತಲ್ಲ. ಇಂತಹ ಕರ್ತವ್ಯಕ್ಕೆ ಉತ್ತಮವಾದ ಅಭ್ಯರ್ಥಿಯನ್ನು ಕೆಳಮಟ್ಟದಿಂದಲೂ ಮೇಲ್ಮಟ್ಟದವರೆಗೆ ಆರಿಸಿಕೊಂಡು ಬರುವಂತಹ ಮಹತ್ತರವಾದ ಜವಾಬ್ದಾರಿಯನ್ನು ಮತದಾರರನ್ನು ಮಾಡದೆ ಹೋದರೆ, ಅದನ್ನು ನಿರ್ವಹಿಸದಿದ್ದರೆ ಮುಂದೆ ಬಹಳ ಪಶ್ಚಾತಾಪ ಪಡಬೇಕಾಗುತ್ತದೆ.  ಆದ ಕಾರಣ ಮೊದಲನೆಯದಾಗಿ ತಮ್ಮ ಕರ್ತವ್ಯವಾಗಿರುವ ಮತದಾನವನ್ನು ಪ್ರತಿಯೊಬ್ಬರೂ ಮಾಡಲೇಬೇಕು.  ಪ್ರತಿಯೊಂದು ಮತವು ಕೂಡ ಅತ್ಯಮೂಲ್ಯವಾದದ್ದು ಎಂಬುದನ್ನು ಮನಗಾಣಬೇಕು. 

         ಈಗ ಮತದಾರರೇ ರಾಜರ ಹಾಗೆ ಯಾರಿಗೆ ಯಾವ ಅಭ್ಯರ್ಥಿಯನ್ನು,  ಯಾವ ಪಕ್ಷವನ್ನು ಕೂಡ ಗೆಲ್ಲಿಸುವ ಅವಕಾಶ ಪ್ರತಿಯೊಬ್ಬ ಮತದಾರರಿಗೂ ಇದೆ.  ಈಗ ಮತದಾರರು ತಮ್ಮ ಅಮೂಲ್ಯ ಮತಗಳನ್ನು ದಾಖಲಿಸದೆ ಅಥವಾ ತಮ್ಮ ಮತಗಳನ್ನು ಸರಿಯಾದ ವ್ಯಕ್ತಿಗೆ ನೀಡದೆ ಹೋದರೆ ಮುಂದೆ ನಾವೆಲ್ಲರೂ ಕೂಡ ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಬೇಕಾದ ಸಂದರ್ಭಗಳು ಬರಬಹುದು.  ಅಲ್ಲದೆ ಭಾರತದ ಘನತೆ, ಗೌರವ ಈಗ ಉಳಿಸಿಕೊಂಡು ಬಂದಂತಹ ಸ್ಥಾನಕ್ಕೆ ಹಾಗೆಯೇ ಪ್ರಪಂಚದಲ್ಲಿ ಭಾರತಕ್ಕೆ ಇರುವ ಒಂದು ಒಳ್ಳೆಯ ಅನುಬಂಧಕ್ಕೆ ಕುತ್ತು ಬರಬಾರದು.  ಪ್ರಪಂಚದ ಎಲ್ಲಾ ದೇಶಗಳು ಈಗಿನ ಹಾಗೆಯೇ ಭಾರತ ದೇಶವನ್ನು ಮೇಲ್ಮಟ್ಟದಲ್ಲಿ ಕಾಣುವುದರ ಜೊತೆಗೆ ಗೌರವಿಸುವಂತೆ ಆಗಬೇಕು.  ಹಾಗೆಯೇ ಕಷ್ಟ ಇರುವ ಮತ್ತು ಹಿಂದುಳಿದ ಕೆಲವು ರಾಷ್ಟ್ರಗಳಿಗೆ ಭಾರತವು ಈಗಿನಂತೆ ಸಹಾಯ ಸೌಲಭ್ಯಗಳನ್ನು ಒದಗಿಸಿಕೊಡಲು ಸಮರ್ಥವಾಗಿ ಇರಬೇಕು. 

       ಉಚಿತ ಶಿಕ್ಷಣ, ಉಚಿತ ಆರೋಗ್ಯ ಮತ್ತು ಬಡವರಿಗೆ ಊಟಕ್ಕೆ ಬೇಕಾದಂತಹ ವಸ್ತುಗಳು ಕಡಿಮೆ ದರದಲ್ಲಿ ಸಿಗುವಂತೆ ಆಗಬೇಕು. ದೇಶದ ಪ್ರತಿ ನಾಗರಿಕರು ಯಾವುದೇ ಭಯ ಇಲ್ಲದ ವಾತಾವರಣದಲ್ಲಿ ನಮ್ಮ ದೇಶದಲ್ಲಿ ಬದುಕುವ ಹಾಗೆ ಆಗಬೇಕು. ಹೆಣ್ಣು ಮಕ್ಕಳ ಅತ್ಯಾಚಾರ,  ಹೆಣ್ಣು ಹಸುಳೆಗಳಿಗೆ ಆಗುವಂತಹ ತೊಂದರೆ,  ಹೆಣ್ಣು ಭೂಣ ಹತ್ಯೆ - ಇದಕ್ಕೆಲ್ಲ ಕಡಿವಾಣ ಹಾಕಿ ಹೆಣ್ಣು ಮಗುವಿಗೂ ಸ್ವಾತಂತ್ರ್ಯವನ್ನು ಕೊಟ್ಟು, ಗಾಂಧೀಜಿಯವರ ಕನಸಿನ ಹಾಗೆ ಅರ್ಥರಾತ್ರಿಯಲ್ಲೂ ಕೂಡ ಒಬ್ಬಂಟಿ ಹೆಣ್ಣು ಯಾವುದೇ ಭಯವಿಲ್ಲದೆ ತನಗೆ ಕೆಲಸ ಕಾರ್ಯಗಳಿದ್ದಲ್ಲಿ ಹೊರಗೆ ಹೋಗಿ ಬರುವಂತೆ ಆಗಬೇಕು.  ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಬೇಕು ಹಾಗೆಯೇ ಮನುಷ್ಯರಲ್ಲಿ ಮನುಷ್ಯತ್ವ ಉಳಿಯಬೇಕು. ಯಾವುದೇ ಅಪಘಾತಗಳಾದಾಗ ಅಲ್ಲಿನ ಜನರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಉತ್ತಮ ಪಡಿಸುವಂತಹ ಕಾನೂನುಗಳು ದೇಶದಲ್ಲಿ ಬರಬೇಕು.  ಮತ್ತೊಮ್ಮೆ ಗಾಂಧೀಜಿ, ಡಾ. ಬಿಆರ್ ಅಂಬೇಡ್ಕರ್,  ಡಾ.  ಎಪಿಜೆ ಅಬ್ದುಲ್ ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ, ಸುಭಾಷ್ ಚಂದ್ರ ಬೋಸ್,  ಸರ್ದಾರ್ ವಲ್ಲಭಭಾಯಿ ಪಟೇಲ್  ಮುಂತಾದ ಉತ್ತಮ ನಾಯಕರ ಹಾಗಿನ ನಾಯಕರು ಇಂದು ನಮಗೆ ಬೇಕಾಗಿದೆ. ಭಾರತೀಯ ಯುವ ಜನಾಂಗವು ತಮ್ಮ ನಾಯಕತ್ವದ ಗುಣಗಳನ್ನು ಹೆಚ್ಚಿಸಿಕೊಂಡು ಉತ್ತಮ ನಾಯಕರಾಗಿ ಬೆಳೆಯಬೇಕಿದೆ ಮತ್ತು ಭಾರತ ದೇಶವನ್ನು ಇನ್ನೂ ಎತ್ತರಕ್ಕೆ ಸೇರಿಸುವೆ ಎಂಬ ಪಣತೊಡಬೇಕಾಗಿದೆ. ಭಾರತವನ್ನು ಯಾವುದೇ ದೆಸೆಯಲ್ಲಿ ಮುನ್ನಡೆಸುವ, ನಾಯಕರನ್ನು ಆರಿಸುವ ಸರ್ವ ಜವಾಬ್ದಾರಿಯು ಭಾರತೀಯ ಮತದಾರರಾದ ನಮ್ಮ ಮೇಲಿರುವ ಕಾರಣ ನಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸೋಣ. ದೇಶದ ಮಹೋನ್ನತಿಗೆ ನಾವೇ ಕಾರಣರಾಗೋಣ ಉತ್ತಮ. ವ್ಯಕ್ತಿಗಳನ್ನು ಜಾತಿ ಭೇದ ಮತಗಳ ಮರೆತು ಆರಿಸೋಣ. ಎಲ್ಲರೂ ತಮ್ಮ ಕರ್ತವ್ಯಗಳಲ್ಲಿ ಒಂದಾದ ಮತದಾನವನ್ನು ತಪ್ಪದೆ ಮಾಡೋಣ ಮತ್ತು ದೇಶದ ಏಳಿಗೆಗೆ ನಮ್ಮ ಸಹಕಾರವನ್ನು ನೀಡೋಣ ನೀವೇನಂತೀರಿ?
@ಹನಿಬಿಂದು@
07.04.2023

ಒಂದಿಷ್ಟು.....178

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-178


ನಿಮಗೆಲ್ಲಾ ತಿಳಿದ ಹಾಗೆ ಮಾರ್ಚ್ ತಿಂಗಳು ಬಂತೆಂದರೆ ಅದು ಮಹಿಳೆಯರಿಗೆ ಮೀಸಲು. ಮಾರ್ಚ್ 8 ಮಹಿಳಾ ದಿನಾಚರಣೆ. ತದನಂತರ ಅಲ್ಲಲ್ಲಿ ಮಹಿಳಾ ದಿನಾಚರಣೆ ಆಚರಿಸುವ ಸಂಭ್ರಮವೋ ಸಂಭ್ರಮ. ಮಹಿಳೆಯರಿಗೆ ಸಡಗರ! ಸಂಘಗಳಲ್ಲಿ ಇರುವ ಎಲ್ಲ ಮಹಿಳೆಯರ ಅಡಿಗೆ ಬೆಳಗ್ಗೆಯೇ ರೆಡಿಯಾಗುತ್ತದೆ. ಉದ್ದ ಸಾರು ರಾತ್ರಿಯವರೆಗೆ ''ನಾನೇ ನಿನ್ನ….'' ಅಂತ ಕೂಗಿ ಕರೆಯುತ್ತಿರುತ್ತದೆ. ಮನೆಯಲ್ಲಿ ಯಾರಾದರೂ ಇದ್ದರೆ ಮುಗೀತು! ಕೆಲಸ ಅವರ  ಮೇಲೆಯೇ!

          ಮಹಿಳೆ ಆಕಾಶದಲ್ಲಿ ವಿಮಾನ ಓಡಿಸುವುದನ್ನು ಮಾತ್ರವಲ್ಲ, ಚಳಿಯಲಿ ದೇಶ ರಕ್ಷಣೆ ಮಾಡುವ ಯೋಧರ ಕಾರ್ಯವನ್ನೂ ಮಾಡಬಲ್ಲ, ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಹುದು ಎಂದು ತೋರಿಸಿದ ಹಲವಾರು ಮಹಿಳೆಯರು ನಮ್ಮ ನಿಮ್ಮ ನಡುವೆ ಇರುವರು. ಜಗತ್ತಿನ ಗದ್ದುಗೆ ಹಿಡಿಯುವುದರಿಂದ ಹಿಡಿದು ವಿಜ್ಞಾನಿ, ವೈದ್ಯೆ, ನ್ಯಾಯಾಧೀಶೆ, ಗುರು, ಸುಷ್ರೂಶಕಿ, ಕಾವಲು ಗಾರ್ಡ್, ಬ್ಯುಸಿನೆಸ್ ಹೆಡ್…ಹೀಗೆ ಅದ್ಯಾವ ಕೆಲಸವಿದೆ ಮಹಿಳೆ ಮಾಡದ್ದು?

               ಸ್ಮಶಾನದಲ್ಲಿ ಹೆಣ ಕಾಯುವ ಕಾರ್ಯವನ್ನೂ ಮಾಡಿದ  ಮಹಿಳೆಯರು ನಮ್ಮೊಡನಿರುವರು! ಬೀಡಿ ಕಟ್ಟಿ, ಕೂಲಿ ಮಾಡಿ ನಮ್ಮನ್ನು ಮೂರು ಜನರನ್ನು ಸಾಕಿ, ಓದಿಸಿ, ಕೆಲಸ ಕೊಡಿಸಿ ನಿಟ್ಟುಸಿರು ಬಿಟ್ಟು ನಿರಾಳತೆ ಪಡೆದ ನಮ್ಮಮ್ಮನು ಕೂಡಾ ದಿಟ್ಟೆ ಎನಲು ಸಂತಸ ನನಗೆ! 9 ನೇ ತಿಂಗಳ ಗರ್ಭಿಣಿಯು ಕೂಡಾ ಕುದುರೆಮಖ ಎಂಬ ಗೊತ್ತಿಲ್ಲದ ಊರಿನಲ್ಲಿ ಹೋಗಿ ಅವಿದ್ಯಾವಂತ ಗಂಡನನ್ನು ಕಟ್ಟಿಕೊಂಡು, ಪರರಿಗಂಜದೆ ತನ್ನ ಜೀವನದ ಗುರಿಯ ಸಾಧಿಸಿದ ಅಮ್ಮನಂತಹ ಅದೆಷ್ಟೋ ತಾಯಂದಿರು ನಮ್ಮೊಡನಿರುವರಿಂದು. ಕಲ್ಲು ಕುಟ್ಟುವ ಕೆಲಸ, ರಸ್ತೆ ಬದಿ ಗುಂಡಿ ತೋಡುವ ಕೆಲಸಕ್ಕೂ ಸೈ! ಸಿಮೆಂಟ್ ಮೂಟೆ ಹೊರಲೂ ಸೈ! ಗಂಡೆಂಬ ದರ್ಪದ ಪ್ರಾಣಿಯ ಮಾನಸಿಕ ಹಿಂಸೆಗೆ ಕುಗ್ಗಿ ಹೈರಾಣಾಗಿ ಮಹಿಳೆ ದುರ್ಬಲಳಾಗುತ್ತಾಳೆಯೆ ಹೊರತು ಮಹಿಳೆಯರು ಎಂದೂ ದೈಹಿಕವಾಗಿ , ಮಾನಸಿಕವಾಗಿ ದುರ್ಬಲರಲ್ಲ. ಮಾನಸಿಕವಾಗಿ ತವರು, ಗಂಡನ ಮನೆ, ಸಮಾಜ, ಸ್ತ್ರೀ ಕುಲ, ಅಕ್ಕ - ಪಕ್ಕ ದವರು ಮಹಿಳೆಯನ್ನು ಮಾನಸಿಕವಾಗಿ ಕುಗ್ಗಿಸುವ  ದುಷ್ಟಶಕ್ತಿಗಳು! ಹೆಣ್ಣು ಮಾನಸಿಕವಾಗಿ ಪ್ರೀತಿಗೆ ತಲೆ ಬಾಗುವಳು! ಅದೇ ಅವಳ ವೀಕ್ನೆಸ್! ಅದನ್ನೇ ಈ ಸಮಾಜ ಬಳಸಿ ಅವಳಿಗೆ ಹಲವಾರು ಕಟ್ಟುಪಾಡುಗಳ ಹಾಕಿ ಬಿಟ್ಟಿದೆ. ಎಲ್ಲೇ ಹೋದರೂ ಶಬ್ದದ ಮೂಲಕ ತಿಳಿಯಲು ಕೈಗೆ ಬಳೆ, ಕಾಲಿಗೆ ಗೆಜ್ಜೆ! ಮೂಗಿಗೆ ಚುಚ್ಚಿ ನತ್ತು, ಕತ್ತಿಗೆ ತಾಳಿ ಹಾಕಿ ಹೆಣ್ಣಿನ ಬಾಳಿಗೆ ಬೇಲಿ ಹಾಕಿದ ಸಮಾಜ ಗಂಡಿಗೆ ಯಾವುದೇ ಕಟ್ಟು ಕಟ್ಟಳೆ ಇಡದೆ ಅವರನ್ನು ಆರಾಮವಾಗಿ ಊರಿನುದ್ದಕ್ಕೂ ರಾತ್ರಿ ಹಗಲು ಹೇಗೆ ಬೇಕೋ ಹಾಗೆ ಓಡಾಡುವ ಸ್ವಾತಂತ್ರ್ಯ ನೀಡುತ್ತಾ ಬಂದಿದೆ.
       ಹೆಣ್ಣಿಗೆ ಅದೆಷ್ಟು ಕಟ್ಟುಪಾಡಿನ ಸಂಪ್ರದಾಯಗಳು! ಅಬ್ಬಾ! ಗಂಡಿಗೇನಿದೆ? ಯಾವುದೂ ಅಡೆತಡೆಗಳಿಲ್ಲ! ಅವನು ಗಂಡು! ಹೆಣ್ಣು ಮನೆಯಿಂದ ಹೊರ ಹೊರಟಾಗ ಹದಿನಾರು ಸಿಂಗಾರವಾಗಬೇಕಿದೆ! ರಾಜನೆದುರು ನರ್ತಿಸುವ ನರ್ತಕಿಯ ರಿಗೂ ಕೂಡಾ! ನಮ್ಮಷ್ಟಕ್ಕೆ ನಾವೇ  ನಮಗಿಷ್ಟ ಬಂದಂತೆ ಇದ್ದರೆ. ಗಂಡುಬೀರಿ! ಸದಾ ಹಣೆ ತುಂಬಾ ಕುಂಕುಮ, ಕೈ ತುಂಬಾ ಬಳೆ, ಸೀರೆ, ಜಡೆ ಹಾಕಿ ಹೂ ಮುಡಿದು ಗಂಡು ಎಂಬ ಪ್ರಾಣಿಗೆ ಚೆನ್ನಾಗಿ ಕಂಡರೆ ಮಾತ್ರ ಹೆಣ್ಣಿನ ಜೀವನ ಸಾರ್ಥಕ್ಯ
 ವಂತೆ! ಇಲ್ಲದಿದ್ದರೆ ಅವಳು ದೆವ್ವ, ಭೂತ, ಮನೆಗೆ ಮಾರಿ! ಅದನ್ನೆಲ್ಲ ಸಹಿಸಿ ಪರರಿಗಾಗಿ ಬದುಕಿದವಳು ನಾರಿ! ರಾತ್ರಿ ಹೊರಗೆ ಸುತ್ತಿದರೆ ಬಜಾರಿ, ಹೋದಲ್ಲಿ ಅಲ್ಲಿರುವ ಜನರ ಜೊತೆ ಹೊಂದಾಣಿಕೆ ಆಗದೆ ತನ್ನ ಮನೆಗೆ ತಿರುಗಿ ಬಂದರೆ ಮನೆ ಮುರುಕಿ! ಮಕ್ಕಳಾಗದೇ ಇದ್ದರೆ ಬಂಜೆ! ಮಕ್ಕಳಾಗದೇ ಇರಲು ಗಂಡ ಕೂಡಾ ಕಾರಣ! ಆದರೆ ಅವನಿಗೆ ಯಾವುದೇ ಹೆಸರಿಟ್ಟಿಲ್ಲ ಸಮಾಜ! 
     ಇಂದು ಕಾಲ ಬದಲಾಗಿದೆ. ಅಂತರಿಕ್ಷದಲ್ಲಿ ಕೂಡಾ ಜಾರುವ ಹೆಣ್ಣು ಅಲ್ಲಿ  ಗರತಿ ಗೌರಮ್ಮನ ಹಾಗೆ ಸಿಂಗಾರ ಮಾಡಿಕೊಳ್ಳಲು  ಸಾಧ್ಯ ಆಗದ ಕಾರಣ  ತನಗೊಪ್ಪುವ, ಆರಾಮವೇನಿಸುವ ಹಿತಕರ ಬಟ್ಟೆಗಳನ್ನು ಧರಿಸುತ್ತಾಳೆ. ಕಲಿಸಲು ಶಾಲೆಗೆ ಹೋಗುವಾಗ ಸೀರೆಯನ್ನೇ ಉಡಬೇಕು ಎಂಬ ನಿಯಮ ಈಗಿಲ್ಲ, ಹಾಗೆಯೇ ಪೊಲೀಸ್ ಕೆಲಸಕ್ಕೆ ಹೋಗುವ ಹೆಣ್ಣನ್ನೂ, ಆಸ್ಪತ್ರೆಯಲ್ಲಿ ಕೆಲಸ ಮಾಡುವ, ಆಟೋಟಗಳಲ್ಲಿ ಭಾಗವಹಿಸುವ  ಹೆಣ್ಣು ಮಕ್ಕಳನ್ನು ನೀವು  ಸೀರೆಯನ್ನೇ ಉಡಬೇಕು ಎಂಬ ನಿಯಮ ಮಾಡಿ ಕಟ್ಟಿ ಹಾಕಲು ಸಾಧ್ಯ ಇಲ್ಲ ಅಲ್ಲವೇ? ಏನೂ ಇಲ್ಲ , ಸುಮ್ಮನೆ ಹೋಗಿ ಬರುವ ಕಾರ್ಯಕ್ರಮಕ್ಕೆ ಸೀರೆ ಉಟ್ಟು ಹೋಗಿ ಬರಬಹುದು. ನೂರಾರು ಮೈಲಿಗಳ ನಡಿಗೆ, ವಾಹನ ಚಲಾಯಿಸುವ ಕಾರ್ಯ,  ಟ್ರೆಕಿಂಗ್, ಬೆಂಕಿ ನಂದಿಸುವಲ್ಲಿ, ರಾತ್ರಿ ಪಾಳಿಯ ಕೆಲಸದಲ್ಲಿ ಇದೆಲ್ಲ ಕಷ್ಟ ಸಾಧ್ಯ. ಕಾಲಕ್ಕೆ ತಕ್ಕ ಹಾಗೆ, ಕೆಲಸಕ್ಕೆ ತಕ್ಕ ಹಾಗೆ ನಮ್ಮ ದೇಹಕ್ಕೆ ಹಿತವಾಗಿ ಕಾಣುವ, ಅಂದ ಕಾಣುವ, ಪರಿಸ್ಥಿತಿಗೆ ಅನುಗುಣವಾದ ಉತ್ತಮ ಉಡುಪು , ದೇಹಕ್ಕೆ ರಕ್ಷಣೆ ನೀಡುವ  ಉಡುಪು ಶ್ರೇಯಸ್ಕರ! 
      ಆದರೆ ಕೆಲವೊಮ್ಮೆ ತೀರಾ ಕನಿಷ್ಟ ಉಡುಪಿನಿಂದ ಮುಜುಗರಕ್ಕೆ ಒಳಪಡಿಸುತ್ತಾ ಇರುತ್ತಾಳೆ ಕೂಡಾ! ಕೆಲ ಹೆಣ್ಣು ಮಕ್ಕಳು ಹಣಕ್ಕಾಗಿ, ಐಷಾರಾಮಿ ಜೀವನಕ್ಕಾಗಿ, ಪರರು ತನ್ನನ್ನು ನೋಡಿ ಹೊಗಳಲಿ ಎಂಬ ಕಾರಣಕ್ಕೋ, ಕುಟುಂಬದಲ್ಲಿ  ಸಿಕ್ಕಿದ ವಿಪರೀತ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು, ಹೇಳುವವರು ಕೇಳುವವರು ಯಾರೂ ಇಲ್ಲದೆ ಹೀಗೆ ತಮ್ಮ ಅಂಗಾಂಗ ಪ್ರದರ್ಶನ ಮಾಡುವುದು, ಅಂತಹ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿ ಹೆಸರು, ಹಣ ಪಡೆಯುವುದು ಇಂದು ಸರ್ವೇ ಸಾಮಾನ್ಯ ಆಗಿ ಬಿಟ್ಟಿದೆ. ಇದರಿಂದ ಉಳಿದ ಸರಿ ಇರುವ ಹೆಣ್ಣು ಮಕ್ಕಳನ್ನೂ ಜನ ನಂಬದ ಅಥವಾ ಅನುಮಾನ ಪಡುವ ಕಾಲ ಬಂದಿದೆ. ಹೆಣ್ಣು ಹೆತ್ತವರಿಗೆ ಭಯ ತರುವ ವಿಷಯ ಇದಾಗಿದೆ. ಕೆಲವೊಂದು ಹಿಂದಿ, ಕನ್ನಡ ಇತರ ಭಾಷೆಗಳ ಚಲನಚಿತ್ರ, ಟಿವಿ ಶೋ ವೀಕ್ಷಿಸುವಾಗ ಮಕ್ಕಳೊಡನೆ ವೀಕ್ಷಿಸುವುದು ತೀರಾ ಮುಜುಗರ ಎನಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ನಿರೂಪಕರ, ಜಡ್ಜ್ ಗಳಾಗಿ ಕೂರಿಸಿರುವ ಮಹಿಳೆಯರ ಅರ್ಧಂಬರ್ಧ ಮೈ ಕಾಣುವ ಬಟ್ಟೆಗಳು! ಅವರು ಸ್ವಲ್ಪ ಬಗ್ಗಿದರೂ ಪೂರ್ತಿ ಮಾನ ಹೋಗುವುದು ಗ್ಯಾರಂಟಿ ಎನ್ನುವ ಹಾಗೆ ಇರುವ ಆ ತುಂಡು ಬಟ್ಟೆಗಳ ತಯಾರಕರ ಮೇಲೂ ಬೇಸರ ಹುಟ್ಟುತ್ತದೆ! ಏಳೆಂಟು ಸಾವಿರದ ಬಟ್ಟೆಗಳೂ ಇಂದು ಮಾನ ಮುಚ್ಚುವ ಸ್ಥಿತಿಯಲ್ಲಿ ಇಲ್ಲದವುಗಳು ಇದ್ದಾವೆ. ಅದೇನು ಹೆಣ್ಣು ಮಕ್ಕಳ ವೇಷವೋ ತಿಳಿಯದು, ಕಾಲು ಗಂಟಿಗಿಂತ ಮೇಲಿನ ಚಡ್ಡಿಗಳು, ತೋಳುಗಳಿಲ್ಲದ, ಎದೆ ಭಾಗದವರೆಗೆ ಮೈ ಕಾಣುವ, ಬೆನ್ನು ಪೂರ್ತಿ ಕಾಣುವ, ಸೊಂಟ ಕಾಣುವ ಬಟ್ಟೆಗಳು ಕೆಲವರಿಗೆ ಪ್ರಿಯ. ಇದನ್ನು ಬಿಟ್ಟು ಹೆಣ್ಣು ಮಕ್ಕಳು ತಮ್ಮ ಡಿಗ್ನಿಟಿ ಯನ್ನು ತಾವು ಕಾಪಾಡಿಕೊಳ್ಳ ಬೇಕು. ಅವರ ಪೋಷಕರು ಅವರನ್ನು ತಿದ್ದಿ ಸರಿಪಡಿಸಿ ಬೆಳೆಸಬೇಕು. ಹೆಣ್ಣು ಮಕ್ಕಳು ಕೆಟ್ಟು ಹೋಗಲು ಪೋಷಕರು ಕೊಟ್ಟ ಅತೀವ ಸ್ವಾತಂತ್ರ್ಯ ಹಾಗೂ ಅಪಾರ ನಂಬಿಕೆ ಕೂಡಾ ಕೆಲವೊಮ್ಮೆ ಕಾರಣವಾಗುತ್ತದೆ ಅಲ್ಲವೇ? 
@ಹನಿಬಿಂದು@



ಒಂದಿಷ್ಟು......177

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -177


ನಾನು ನನ್ನ ಶಿಕ್ಷಕ ವೃತ್ತಿ ಪ್ರಾರಂಭಿಸಿ ಇದು ಇಪ್ಪತ್ತನೇ ವರ್ಷ. ಇಷ್ಟು ವರ್ಷಗಳಲ್ಲಿ ನಾನು ಮುಖ್ಯವಾಗಿ ದುಡಿದ ಶಾಲೆಗಳು ಮೂರು. ನನ್ನ ವೃತ್ತಿ ಬದುಕಿನ ಹತ್ತು ವರ್ಷ (ದಶಕ)ಗಳನ್ನು ದೂರದ ಸುಳ್ಯದಲ್ಲಿ ಕಳೆದಿರುವ ನಾನು, ಪ್ರತಿ ವರ್ಷ ಶಿಕ್ಷಕರ ವರ್ಗಾವಣೆ ಆಗುವ ಸಂದರ್ಭದಲ್ಲಿ ಅರ್ಜಿ ಹಾಕಿ , ಸಿಗದೆ ನಿರಾಶಳಾಗುತ್ತಿದ್ದೆ. ನನಗೆ ಸುಳ್ಯದಲ್ಲಿ ನಾನಿದ್ದ ಸರಕಾರಿ ಪ್ರೌಢ ಶಾಲೆ ಐವರ್ನಾಡು ಚೆನ್ನಾಗಿಯೇ ಇತ್ತು. ಶಾಲೆಯ, ವೃತ್ತಿಯ ಯಾವುದೇ ಸಮಸ್ಯೆ ಇರಲಿಲ್ಲ ಆದರೆ ಕಾರ್ಕಳದ ನಮ್ಮ ಮನೆಯಲ್ಲಿ ಅಮ್ಮ ಒಬ್ಬರೇ ಇರುವ ಕಾರಣ ಅಮ್ಮನ ಮನೆ ಹತ್ತಿರ ಬರಬೇಕಿತ್ತು. ಮತ್ತೆ ಬಂಧುಗಳ ಪ್ರತಿ ಕಾರ್ಯಕ್ರಮಕ್ಕೂ ನಾನು ಮತ್ತು ನನ್ನ ಮಗಳು ಮಿಸ್ ಆಗುತ್ತಿದ್ದ ಕಾರಣ ಮಗಳಿಗೆ ಬಂಧುಗಳ ಬಾಂಧವ್ಯ ತಪ್ಪಿ ಹೋಗಿತ್ತು. ವರ್ಷಕ್ಕೆ ಒಮ್ಮೆ ಒಂದು ದಿನ ಮುಖ ನೋಡಿ ಪೂಜೆಗೆ ಬಂದು ಹೋಗುವುದಷ್ಟೇ ಆಗಿತ್ತು. ಕರೋನ ಸಮಯದಲ್ಲಿ ಸ್ವಲ್ಪ ಎಲ್ಲರ ಜೊತೆ ಬೆರೆಯುವ ಅವಕಾಶ ಸಿಕ್ಕಿತು. 

ನನಗೆ ಉಡುಪಿ ಜಿಲ್ಲೆಗೆ ವರ್ಗಾವಣೆ ಸಿಗುವುದು ಕಷ್ಟ ಎಂದು ಅರಿತು, ನಾನು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳಕ್ಕೆ ಹತ್ತಿರದ ಊರುಗಳ ಬಗ್ಗೆ ಹುಡುಕ ತೊಡಗಿದೆ. ಆಗ ಮೂಲ್ಕಿಯಲ್ಲಿ ಆಂಗ್ಲ ಭಾಷಾ ಶಿಕ್ಷಕರ ಹುದ್ದೆ ಖಾಲಿ ಇರುವುದು ತಿಳಿಯಿತು.ಏನೋ ದೇವರ ದಯೆಯಲ್ಲಿ  ಕಳೆದ ವರ್ಷ ಡಿಸೆಂಬರ್ ನಲ್ಲಿ ಅಮ್ಮನ ಮನೆ ಹತ್ತಿರದ ಶಾಲೆ ಅಲ್ಲದೆ ಹೋದರೂ ಕೇವಲ ಒಂದು ಗಂಟೆ ದೂರದ ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಮಾಡುವ ಅವಕಾಶ ಒದಗಿ ಬಂದಿತು. ಇಲ್ಲಿ ಬಂದ ಮರು ವರ್ಷ ಅಂದರೆ ಒಂದು ವರ್ಷದ ಒಳಗೆಯೇ ಇಲ್ಲಿನ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮ ನನಗೆ ಖುಷಿ ತಂದ ವಿಚಾರ. ಬಹಳ ವರ್ಷಗಳ ಹಿಂದಿನ ಶಾಲೆ. ಅಲ್ಲದೆ ಹಲವು ಮೇಧಾವಿಗಳು ಕಲಿತ ಶಾಲೆಯಲ್ಲಿ ನಾನು ಸೇವೆಯನ್ನು ಮಾಡುತ್ತಿರುವೆ ಎಂದು ಖುಷಿ ಒಂದೆಡೆ. ಆದರೆ ಒಂದು ಕಾಲದಲ್ಲಿ ಸಾವಿರಕ್ಕೂ ಮಿಕ್ಕಿ ಮಕ್ಕಳಿದ್ದ ದೊಡ್ಡ ಶಾಲೆ ಇಂದು ಅಕ್ಕ ಪಕ್ಕ ಒಂದೆರಡು ಕಿಲೋ ಮೀಟರ್ ಗಳಲ್ಲಿ ಮೂರು ನಾಲ್ಕು ಖಾಸಗಿ ಶಾಲೆಗಳಿಂದ ಸುತ್ತುವರಿದ ಮತ್ತು ಅಕ್ಕ ಪಕ್ಕ ಮಾತ್ರ ಅಲ್ಲದೆ ದೂರದ ಊರಿನಿಂದಲೂ ಸ್ಕೂಲ್ ಬಸ್ ಬಂದು ಇಲ್ಲಿನ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗುವುದರಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಆಂಗ್ಲ ಮಾಧ್ಯಮದ ಸಹಿತ ಪ್ರತಿ ತರಗತಿಯಲ್ಲಿ ಮೂರು ನಾಲ್ಕು ಸೆಕ್ಷನ್ ಗಳಲ್ಲಿ ಇದ್ದ ಮಕ್ಕಳ ಸಂಖ್ಯೆಯ ಒಂದು ತರಗತಿಯ ಭಾಗವೂ ಈಗ ಪ್ರೌಢ ಶಾಲಾ ವಿಭಾಗದಲ್ಲಿ ಇಲ್ಲ. ಕಾರಣ ಇಲ್ಲಿನ ಆಂಗ್ಲ ಮಾಧ್ಯಮ ಮುಚ್ಚಿ ಹೋಗಿರುವುದು ಮತ್ತು ಕನ್ನಡ ಮಾಧ್ಯಮ ಕಲಿಕೆಯ ಬಗ್ಗೆ ಜನರಲ್ಲಿ ಇರುವ ತಾತ್ಸಾರದ ಜೊತೆಗೆ ಸರಕಾರಿ ಶಾಲೆ ಎಂದರೆ ಅಲ್ಲಿಗೆ ಏನೂ ಗತಿ ಇಲ್ಲದವರ ಮಕ್ಕಳು, ಬಡವರ ಮಕ್ಕಳು, ಘಟ್ಟದವರ ಮಕ್ಕಳು ಮಾತ್ರ ಬರುತ್ತಾರೆ ಎಂಬ ತಾತ್ಸಾರ ಭಾವನೆ ಕೆಲವೊಂದು ಜನರಲ್ಲಿ ಆದರೆ ಇನ್ನೂ ಕೆಲವು ಜನರಿಗೆ ಇದು ಬೇಡ, ಸ್ಟೇಟಸ್ ಮುಖ್ಯ!
        ಆದರೆ ಸರಕಾರಿ ಶಾಲೆಯನ್ನೂ ಕೂಡಾ ಉತ್ತಮ ರೀತಿಯಲ್ಲಿ ನಡೆಸಿ ತೋರಿಸಬಹುದು ಅದಕ್ಕೆ ಊರಿನ ಹಿರಿಯ ಜನರ, ವಿದ್ಯಾರ್ಥಿ ಸರಕಾರಿ ಶಾಲೆಗಳಲ್ಲಿ , ಹಳೆ ವಿದ್ಯಾರ್ಥಿಗಳು, ಅಲ್ಲಿ ಮೊದಲು ಕೆಲಸ ಮಾಡಿದ ಶಿಕ್ಷಕರು ಎಲ್ಲಾ  ಸೇರಿ ದತ್ತು ಪಡೆದ ನಾಡಿನ ಶಾಲೆಗಳು ಖ್ಯಾತಿಯಲ್ಲಿವೆ.  ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಮಾತ್ರ ಸರಕಾರ ಕೊಡಬಲ್ಲುದು. ಉಳಿದಂತೆ ತಮ್ಮ ಊರಿನ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಆ ಊರಿನ ಮಹನೀಯರು ಕೊಟ್ಟು ಶಾಲೆಯನ್ನೂ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿರುವ ಶಾಲೆಗಳು ತುಂಬಾ ಇವೆ. ಅದೇ ರೀತಿ ನಮ್ಮ ದೊಡ್ಡ ಪ್ರೌಢ ಶಾಲೆ, ಆರು ಮತ್ತು ಏಳನೇ ತರಗತಿ ಇರುವ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪದವಿ ಪೂರ್ವ ಕಾಲೇಜು. 
ಹಿರಿಯ ವಿದ್ಯಾರ್ಥಿಗಳು ಮತ್ತು ಊರಿನ ದಾನಿಗಳನ್ನು ಸೇರಿಸಿ ಶಾಲೆಯನ್ನು ಪುನರುದ್ಧಾರ ಮಾಡುವ ಸೇವೆಗೆ ರಾತ್ರಿ ಹಗಲೆನ್ನದೆ ಕೈಂಕರ್ಯ ತೊಟ್ಟವರು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ವಾಸುದೇವ ಬೆಳ್ಳೆಯವರು, ಪ್ರೌಢ ಶಾಲಾ ವಿಭಾಗದ ಹಿರಿಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಟಿ ನಾಯಕ್ ಅವರು, ಕಾಲೇಜಿನ ಎಸ್ ಬಿ ಸಿ  ಯ ಅಧ್ಯಕ್ಷರಾದ ಶ್ರೀಯುತ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಪ್ರೌಢ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಹರ್ಷರಾಜ್ ಶೆಟ್ಟಿ ಅವರ ಸತತ ಕಾರ್ಯ  ಒಂದೆಡೆ ಆದರೆ ಹಿಂದೆ ಶಾಲೆಗೆ ಆಗಾಗ ಭೇಟಿ ನೀಡಿ ಶಾಲೆಯ ಬಗ್ಗೆ ವಿಚಾರಿಸುತ್ತಿದ್ದ ದಿವಂಗತ ಡಾಕ್ಟರ್ ಅಚ್ಯುತ ಕುಡ್ವ ಅವರ ಜೊತೆಗಿದ್ದ ಸಹಾಯ ಹಸ್ತ ನೀಡಿದ ಶ್ರೀಯುತ ಎಂ. ಬಿ. ಖಾನ್ ಮತ್ತು ಎಲ್ಲಾ ಕಾರ್ಯಕ್ರಮಗಳ ರೂವಾರಿ ಎನ್ನಬಹುದಾದ ಶ್ರೀಯುತ ಯದು ನಾರಾಯಣ ಶೆಟ್ಟಿ. ಇಲ್ಲಿ ಶಾಲಾ ಕಾಲೇಜಿನ ಉಪನ್ಯಾಸಕರು, ಶಿಕ್ಷಕ ಬೋಧಕೇತರ ವೃಂದದವರು ನೀಡುತ್ತಿರುವ ಸಹಕಾರವೂ ದೊಡ್ಡದು ಎಂದೇ ಹೇಳುವುದು ಅತಿಶಯೋಕ್ತಿಯೇನಲ್ಲ. ಹಾಗೆಯೇ ಬೆನ್ನು ಮೂಳೆಗಳಾಗಿ ನಿಂತ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇಲ್ಲಿದ್ದರೆ, ಹಿರಿಯ ವಿದ್ಯಾರ್ಥಿ ನಾಯಕರ ಸಹಾಯ ಎಂದೂ ಮರೆಯಲು ಆಗದು. ಶಾಲೆಯ ಉನ್ನತಿ ಒಬ್ಬರಿಂದ ಆಗದ ಕಾರ್ಯ. ಇಲ್ಲಿ ಹನಿಗೂಡಿದರೆ ಮಾತ್ರ ಹಳ್ಳ. 
ಈ ಶಾಲೆಯ ಉದ್ದಾರವನ್ನು ತನ್ನ ಧ್ಯೇಯವಾಗಿ ಇರಿಸಿಕೊಂಡು ದೂರದ ಮುಂಬೈಯಿಂದ ಆಗಾಗ ಬಂದು ಮೇಲುಸ್ತುವಾರಿ ಮಾಡುತ್ತಾ ಶಾಲೆಯ ಎಲ್ಲಾ ಕೋಣೆಗಳಿಗೆ ಪೈಂಟಿಂಗ್ ಸಮೇತ ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಅಪಾರವಾದ ಕಾರ್ಯ, ತನುಮನ - ಧನ ಸಹಾಯ ನೀಡಿ ಅಷ್ಟಕ್ಕೇ ಅಲ್ಲದೆ ಈಗಲೂ ಮುತುವರ್ಜಿ ವಹಿಸುತ್ತಿರುವ ಕಾರ್ಯ ಶ್ಲಾಘನೀಯ! ಕೋಟಿ ರೂಪಾಯಿಗಳ ಯೋಜನೆ ಹಾಕಿ ಅದನ್ನು ಪ್ರಾಯೋಗಿಕವಾಗಿ ಮಾಡುವುದು ಸುಲಭದ ಮಾತೇನೂ ಅಲ್ಲ ಅಲ್ಲವೇ?

     ಪ್ರತಿ ಊರಿನಲ್ಲಿ ಊರಿನ ಹಿರಿಯರು, ಸ್ವಲ್ಪ ಧನಿಕರು ಅನ್ನಿಸಿಕೊಂಡವರು ಮುಂದೆ ಬಂದು ಆ ಊರಿನ ಶಾಲೆಯನ್ನು ಅಭಿವೃದ್ಧಿ ಪಥದತ್ತ ಸಾಗಿಸುವ ಪಣ ತೊಟ್ಟು ಆ ದಿಸೆಯತ್ತ ದೃಷ್ಟಿ ಹರಿಸಿ, ಊರಿನ ಜನರನ್ನು , ಹಳೆ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಮಾಡುವ ಇಂತಹ ಸಾರ್ವಜನಿಕ ಕಾರ್ಯಗಳು ಮಾನವನನ್ನು ಎಂದೂ ಹಿಂದಕ್ಕೆ ತಳ್ಳಲಾರವು. ಇಂತಹ ಹಲವಾರು ಜನರ ಮಹಾನ್ ಕಾರ್ಯವನ್ನು ನಾನು ಬಂಟ್ವಾಳ ತಾಲೂಕಿನಲ್ಲಿ ಇರುವಾಗ ನೋಡಿದ್ದೆ ಕೂಡಾ. ಊರಿನ ಶಾಲೆಯನ್ನು ದತ್ತು ಪಡೆದು ಪ್ರೋತ್ಸಾಹಿಸುವುದು. ಮುಚ್ಚಿದ ಶಾಲೆಗಳನ್ನು ಹಲವಾರು ಕಡೆ ತೆರೆಸಲಾಗಿದೆ. 

   ನನ್ನ ಕೋರಿಕೆ ಇಷ್ಟೇ. ನಮ್ಮ ಶಾಲೆ, ನಮ್ಮ ಊರು, ನಮ್ಮ ಕುಟುಂಬ, ನಮ್ಮ ಮನೆ, ನಮ್ಮ ರಾಜ್ಯ, ನಮ್ಮ ದೇಶ ಹೇಗೆ ನಮಗೆ ಪ್ರಿಯವೋ ಹಾಗೆಯೇ ನಮ್ಮ ಭಾಷೆ ಕೂಡಾ ನಮಗೆ ಪ್ರಿಯ ಅಲ್ಲವೇ? ಮಾತೃ ಭಾಷೆ ತುಳು ಆದರೂ ನಾವು ಉಪಯೋಗಿಸುವ ಭಾಷೆ, ಓದುವ, ಬರೆಯುವ, ಮನೆಯಿಂದ ಹೊರಗೆ ಹೆಚ್ಚಾಗಿ ಬಳಸುವ ರಾಜ್ಯ ಭಾಷೆ ಕನ್ನಡ. ಕನ್ನಡ ಉಳಿಸಬೇಕು ಎಂದರೆ ಕನ್ನಡವನ್ನು ಶಾಲೆಗಳಲ್ಲಿ ಕಲಿಯಬೇಕು.  ಕನ್ನಡವನ್ನೇ ತನ್ನ ಉಸಿರಾಗಿಸ ಬೇಕು ಕನ್ನಡದಲ್ಲೇ ಆಲೋಚಿಸಬೇಕು ಎಂದಾದರೆ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು. ನಮ್ಮ ಮಕ್ಕಳಿಗೆ ಈಗ ಅತ್ತ ಸರಿಯಾದ ಕನ್ನಡವೂ ಬಾರದು, ಇತ್ತ ಆಂಗ್ಲ ಭಾಷೆಯು ಬಾರದು. ಎರಡು ದೋಣಿಗಳಲ್ಲಿ ಕಾಲಿಟ್ಟು ಯಾವುದನ್ನೂ ಬಿಡಲಾರದ ಪರಿಸ್ಥಿತಿಗೆ ನಾವು ಅವರನ್ನು ತಂದಿಟ್ಟಿದ್ದೇವೆ. ಮಗ್ಗಿಗಳು, ಕನ್ನಡ ಪ್ರಾಸದ ಹಾಡುಗಳು ನಮ್ಮ ಕಾಲಕ್ಕೆ ಮುಗಿಯ ಬಾರದು ಎಂದಿದ್ದರೆ ಕನ್ನಡ ಕಲಿಸಬೇಕು, ಕನ್ನಡದಲ್ಲಿ ಬೆರೆಸಬೇಕು. ಕನ್ನಡ ಉಳಿಯಲಿ. ಪ್ರತಿ ಊರಿನ ಕನ್ನಡ ಸರಕಾರಿ ಶಾಲೆಗೂ ಊರಿನ ಜನರ ಸಹಕಾರ, ಬೆಂಬಲ ಇರಲಿ. ನಮ್ಮೂರ ಸರಕಾರಿ ಶಾಲೆ ಬಡವಾಗದೆ ಇರಲಿ. ನಮ್ಮ ಮಾತೃಭಾಷೆ ನಮ್ಮ ಮುಂದಿನ ಪೀಳಿಗೆಯ ಬಾಯಲ್ಲಿ ಮೃತವಾಗದೆ, ಅವರ ಮಕ್ಕಳಿಗೂ ಹರಿಯುವಂತೆ ಆಗಲಿ. ಮಾತೃಭಾಷೆ ಉಳಿಸಬೇಕು. ಅಮ್ಮನನ್ನೇ ವೃದ್ಧಾಶ್ರಮಕ್ಕೆ ತಳ್ಳುವ ನಾವು ಇನ್ನು ಮಾತೃ ಭಾಷೆಗೆ ಮಹತ್ವ ಕೊಡುತ್ತೇವೆಯೆ ಎನ್ನುವ ಹಾಗೆ ಆಗಬಾರದು. ಓದು ಬರಹಕ್ಕಿಂತಲೂ ಮಾನವತೆ, ಮಾನವೀಯ ಮೌಲ್ಯಗಳು ಮುಖ್ಯ ಎಂದು ನಮ್ಮ ಹಲವಾರು ಹಿರಿಯರು ತೋರಿಸಿ ಕೊಟ್ಟಿದ್ದಾರೆ. ಓದು ಬರಹದ ಜೊತೆ ಮಾನವೀಯ ಮೌಲ್ಯಗಳು ಇಲ್ಲದೆ ಹೋದರೆ ಓದು ಶೂನ್ಯ ಅಲ್ಲವೇ? ಸರಕಾರಿ ಶಾಲೆಗಳ ಬೆಳವಣಿಗೆಗೆ ಕೈ ಜೋಡಿಸೋಣ, ಮಾತೃ ಭಾಷೆ ಕಲಿಯೋಣ, ಕಲಿಸೋಣ, ಬೆಳೆಸೋಣ. ನಮ್ಮ ನೆಲ ನಮ್ಮ ಉಸಿರು, ಉಳಿಸೋಣ. ನೀವೇನಂತೀರಿ?
@ಹನಿಬಿಂದು@
25.03.2023

ಒಂದಿಷ್ಟು .....176

              ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 176

       ಕನ್ನಡ ಶಾಲೆಗಳು ಮುಚ್ಚುತ್ತಿವೆ. ಆಂಗ್ಲ ಮಾಧ್ಯಮಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಪಾಶ್ಚಾತ್ಯರ ಅನುಕರಣೆ ಮಾಡುತ್ತಾ ಇಂಗ್ಲಿಷ್ ಎಂದರೆ ಗ್ರೇಟ್, ಇಂಗ್ಲಿಷ್ ಮಾತನಾಡಲು ಬರುವ ಮಗು ಗ್ರೇಟ್, ಕನ್ನಡ ಕಲಿತರೆ ಏನೂ ಪ್ರಯೋಜನ ಇಲ್ಲ, ನಾಳೆ ಕೆಲಸ ಸಿಗಲು ಇಂಗ್ಲಿಷ್ ಬೇಕು, ಬಂಧುಗಳ ಮಕ್ಕಳೆಲ್ಲ ಆಂಗ್ಲ ಮಾಧ್ಯಮ , ಸಿ ಬಿ ಎಸ್ ಇ , ಐ ಸಿ ಎಸ್ ಇ ಶಾಲೆಗಳಲ್ಲಿ  ಕಲಿಯುತ್ತಿದ್ದು, ತನ್ನ ಮಗ ಒಬ್ಬನೇ ಹೇಗೆ ತಾನೇ ಸರಕಾರಿ ಶಾಲೆಯಲ್ಲಿ ಓದಿ ಕುಟುಂಬದಲ್ಲಿ ತಾನು ಕೀಳಾಗಿ ಕಾಣುವಂತೆ ಆದರೆ? ತನ್ನ ಸ್ಟೇಟಸ್? ಸಮಾಜದಲ್ಲಿ ತನ್ನ ಘನತೆ, ಗೌರವ ಎಲ್ಲಿಯವರೆಗೆ ಹೋದೀತು! ಇಂತಹ ಆಲೋಚನೆಗಳು ಸಾಮಾನ್ಯ ಜನರ ಮನದ ಅಂತರಾಳದಲ್ಲಿ ನೆಲೆಯೂರಿ ಬಿಟ್ಟಿವೆ. ಇದಕ್ಕೆ ಕೆಲವೊಂದು ಕಾರಣಗಳೂ ಇಲ್ಲದೆ ಇಲ್ಲ. 
ಕನ್ನಡ ಶಾಲೆಗಳಲ್ಲಿ ಕಲಿತ ಮಕ್ಕಳು ಜೀವನದಲ್ಲಿ ಸೋಲುವುದು ಕಡಿಮೆ. ಇದು ಎಲ್ಲರೂ ಹೇಳುವ ಮಾತು. ಅವರಿಗೆ ಫಿಲ್ಟರ್ ವಾಟರ್ ಕೊಡುವವರಿಲ್ಲ ಮನೆಯಿಂದ, ಸ್ನಾಕ್ಸ್ ಎಂದರೆ ಏನು ಎಂಬುದನ್ನು ಅರಿಯರು! ಅಲ್ಲದೆ ಬ್ರಾಂಡೆಡ್ ಐಟಂಸ್ ಬಳಸುವವರು ಅಲ್ಲವೇ ಅಲ್ಲ!
       ಇನ್ನು ಕನ್ನಡ ಸರಕಾರಿ ಶಾಲೆಗೆ ಬರುವ ಮಕ್ಕಳು ಬಿಜಾಪುರ, ಧಾರವಾಡ, ಗುಲ್ಬರ್ಗದಿಂದ ಇಲ್ಲಿಗೆ ವಲಸೆ ಕಾರ್ಮಿಕರಾಗಿ ಬಂದವರ ಮಕ್ಕಳು, ಕೆಲವು ಕೂಲಿ ಕಾರ್ಮಿಕರ ಮಕ್ಕಳು, ಸಮಾಜದಲ್ಲಿ ತೀರಾ ಕೆಳ ಮಟ್ಟದ, ಬಡತನ ರೇಖೆಗಿಂತ ಕೆಳಗಿನ, ಬಿಪಿಎಲ್ ಕಾರ್ಡ್, ಭಾಗ್ಯ ಲಕ್ಷ್ಮಿ ಬಾಂಡ್ ಪಡೆದ ಮಕ್ಕಳು. ಇನ್ನು ಕೆಲವು ಕುಟುಂಬದಲ್ಲಿ ಗಲಾಟೆ ಮಾಡಿ ಗಂಡ ಬಿಟ್ಟು ಹೋದ, ಗಂಡ ಸತ್ತು ಹೋದ, ಗಂಡ ಬೇರೆ ಮದುವೆ ಆದ ತಾಯಿ ಒಬ್ಬಳೇ ಕೂಲಿ ನಾಲಿ ಮಾಡಿ ದುಡಿದು ಸಾಕುವ ಬಡ ವಿದ್ಯಾರ್ಥಿಗಳು. ತಂದೆ ಏನಾದರೂ ಕೆಟ್ಟ  ಕೆಲಸ ಮಾಡಿ ಜೈಲಿಗೆ ಹೋಗಿ, ತಾಯಿ ಒಬ್ಬಳೇ ಇರುವ ಪೋಷಕರ ಮಕ್ಕಳು, ಇನ್ನೂ ಕೆಲವರು ತಂದೆಯ ಕುಡಿತದ ಅಬ್ಬರವನ್ನು ನಿತ್ಯ ರಾತ್ರಿ ನೋಡಿ ಬದುಕಿಗೆ ಹೇಸಿಗೆ ಪಟ್ಟುಕೊಂಡು ಅಮ್ಮನಿಗಾಗಿ ಬದುಕುತ್ತಿರುವ ಪುಟಾಣಿಗಳು. ಮತ್ತೆ ಕೆಲವರು ರೋಗಿಷ್ಟ ತಂದೆ ತಾಯಿಯ ಮಕ್ಕಳು. ತಂದೆ ತಾಯಿಯರನ್ನು , ತಮ್ಮ ತಂಗಿಯರ ಜವಾಬ್ದಾರಿ ಹೊತ್ತು, ಉಳಿದ ಸಮಯದಲ್ಲಿ ಶಾಲೆಗೆ ಬರುವವರು, ಇನ್ನೂ ಕೆಲವರು ತಂದೆ ತಾಯಿ ಇಬ್ಬರೂ ಕುಡುಕರಾಗಿದ್ದು, ಅವರನ್ನು ರಾತ್ರಿ ಸಂಬಾಳಿಸಿ, ಮಕ್ಕಳ ಮುಂದೆ ಮತ್ತಿನಲ್ಲಿ ಮಾಡಬಾರದ್ದನ್ನು ಮಾಡುವ, ನೋಡ ಬಾರದ್ದನು ನೋಡಿರುವ ಮಕ್ಕಳು, ನಿರಂತರ ಹನ್ನೆರಡು ವರ್ಷದಿಂದಲೇ ತನ್ನ ತಂದೆಯಿಂದಲೇ ದೈಹಿಕ ಹಿಂಸೆಗೆ ಒಳಪಟ್ಟು, ಅದನ್ನು ಯಾರ ಬಳಿಯೂ ಹೇಳಿಕೊಳ್ಳಲು ಆಗದೆ ಮಾನಸಿಕವಾಗಿ ವ್ಯಥೆ ಪಡುತ್ತಿರುವ, ಬದುಕಿನ ಮುಂದಿನ ಕನಸು ಸುಟ್ಟ ಮಕ್ಕಳು, ತಂದೆಯಿಂದ ಸದಾ ಕುಡಿದ ಮತ್ತಿನ ಶಿಕ್ಷೆಗೆ ಒಳಗಾಗಿ ಸಾವಿಗೂ ಹೆದರದ ಶಾಲೆಯೇ ಸ್ವಲ್ಪ ನೆಮ್ಮದಿ ಎನ್ನುವ ಮಕ್ಕಳು, ತಂದೆ ತಾಯಿಗೆ ಮದುವೆಗೆ ಮೊದಲು ಹುಟ್ಟಿ, ಅವರಿಗೆ ಬೇಡವಾಗಿ, ಅಜ್ಜಿಯೂ, ಕುಟುಂಬದವರೋ ಸಾಕಿದ ಅನಾಥ ಮಕ್ಕಳು, ಎಲ್ಲಿಯೋ ಆಸ್ಪತ್ರೆಯಲ್ಲಿ, ಅನಾಥಾಲಯದಲ್ಲಿ ಬೆಳೆಯುತ್ತಿರುವ ಮಕ್ಕಳು, ದಾರಿ ತಪ್ಪಿ ರಿಮ್ಯಾಂಡ್ ಹೋಂ ನಲ್ಲಿರುವ ಮಕ್ಕಳು, ಯಾರದೋ ತಪ್ಪಿಗೆ ಬಲಿಯಾದ ಹೆಚ್ ಐ ವಿ ಏಡ್ಸ್, ಕ್ಯಾನ್ಸರ್, ಅಲ್ಸರ್, ನ್ಯುಮೋನಿಯಾ, ಸಕ್ಕರೆ ಖಾಯಿಲೆ, ಮೆದುಳಿನ ನಿಧಾನಗತಿಯ ಕಾರ್ಯ, ಮಾತು ಬಾರದೆ ಇರುವುದು, ಅಂಗ ವೈಕಲ್ಯತೆ ಇರುವ ವಿಕಲ ಚೇತನ ಮಕ್ಕಳು, ಬುದ್ಧಿ ಮಾಂದ್ಯ ಮಕ್ಕಳು, ತಂದೆ ತಾಯಿಯ ಕೋಪಕ್ಕೆ ಬಲಿಯಾಗಿ ಸದಾ ಪ್ರೀತಿ ಇಲ್ಲದೆ ಪೆಟ್ಟಿನಲ್ಲೆ ಬೆಳೆಯುವ ಮನಸು ಕಲ್ಲಾದ ಮಕ್ಕಳು, ಮನೆ ಕೆಲಸಕ್ಕೆಂದು ಬೇರೆಡೆಯಿಂದ ಕರೆದುಕೊಂಡು ಬಂದು, ತಾವು ಆಫೀಸಿಗೆ ಹೋಗುವಾಗ ಶಾಲೆಗೆ ತಂದು ಬಿಟ್ಟು ಸಂಜೆ ಮತ್ತೆ ಕೆಲಸಕ್ಕೆ ಕರೆದುಕೊಂಡು ಹೋಗುವ , ತಂದೆ ತಾಯಿ ಇಲ್ಲದೆ ಯಾರದೋ ಮನೆಯಲ್ಲಿ ಯಾವುದೇ ಶಿಸ್ತು ಇಲ್ಲದೆ ಬೆಳೆಯುತ್ತಿರುವ ಮಕ್ಕಳು, ದುಡಿದು ಕೊಟ್ಟು, ಏನು ಮಾಡುತ್ತಾನೆ ಮಗ ಎಂದು ನೋಡದೆ, ಪ್ರಪಂಚದಲ್ಲಿ ನಮ್ಮ ಮಕ್ಕಳೇ ಶ್ರೇಷ್ಠ, ಅವರು ಮಾಡಿದ್ದೆ ಸರಿ ಎಂಬ ಭಾವನೆ ಇರುವ ಅವಿದ್ಯಾವಂತ  ಅಕ್ಷರಸ್ಥರ ಮಕ್ಕಳು, ಯಾವ ಶಾಲೆಗೆ ಸೇರಿಸಿದರೂ ನನ್ನ ಮಗ ಕಲಿಯುವುದಿಲ್ಲ ಎಂದು ಗೊತ್ತಾದ ಬಳಿಕ ತಂದು ಸರಕಾರಿ ಶಾಲೆಗೆ ಸೇರಿಸಿದ ,  ತಂದೆ ತಾಯಿಯರು ಯಾವುದೋ ಊರಿನಲ್ಲಿ ದುಡಿಯುತ್ತಿದ್ದು ವಿದ್ಯಾರ್ಥಿಗಳನ್ನು ಹಾಸ್ಟೆಲ್ ಗಳಲ್ಲಿ ಬೆಳೆಸುತ್ತಿರುವ ಮಕ್ಕಳು, ತಾಯಿ ಇಲ್ಲದ ತಬ್ಬಲಿಗಳು, ಎರಡನೇ ಹೆಂಡತಿಯ ಜೊತೆಗೆ ಇರುವ ಕಷ್ಟ ಪಡುತ್ತಾ, ನೋವು ತಿನ್ನುತ್ತಾ ತಂದೆಯ 2ನೇ ಮಡದಿಯ ಜೊತೆಗೆ ಪೆಟ್ಟು ತಿನ್ನುತ್ತಾ ಬದುಕುವ, ದಿನಕ್ಕೆ ಹತ್ತು ರೂಪಾಯಿ ಬಸ್ಸಿಗೆ ಪರದಾಡುವ ಬಟ್ಟೆ, ಪುಸ್ತಕ, ಎಲ್ಲಾ ಯಾರೋ ದಾನಿಗಳು ಕೊಡುತ್ತಿರುವ ಮಕ್ಕಳು, ತಮ್ಮ ತಂದೆ ತಾಯಿಯರು ಯಾರು ಎಂದು ;ಅರಿಯದ  ಮುಗ್ದ ಕಂದಮ್ಮಗಳು. ಎಲ್ಲಾ ಸರಕಾರಿ ಶಾಲೆಗಳಲ್ಲಿ ಈ ರೀತಿಯ ಮಕ್ಕಳ ಸಂಖ್ಯೆ ಇದ್ದೇ ಇದೆ. 

ಅಷ್ಟೇ ಅಲ್ಲ, ಡ್ರಗ್ ಅಡಿಕ್ಟ್ ಆದ ಮಕ್ಕಳು, ಟೀಚರ್ಗಾಗಿ ಬ್ಯಾಗಲ್ಲಿ ಚಾಕು, ಚೂರಿ ಇಟ್ಟುಕೊಂಡು ಬರುವ ಮಕ್ಕಳು, ಮೊಬೈಲ್  ತಂದು ಶಿಕ್ಷಕರು ಇಲ್ಲದ ಸಮಯದಲ್ಲಿ ರೀಲ್ಸ್ ಮಾಡುವ ಮಕ್ಕಳು, ಮಂಗನ ಹಾಗೆ ನೆಗೆಯುವ, ಬೇಕು ಅನ್ನಿಸಿದಾಗ ಮಾತ್ರ ಬರುವ,ಹತ್ತು ಗಂಟೆಯ ನಂತರ ಹೊರಟು ಬರುವ, ಸಂಜೆ ಶಾಲೆ ಬಿಟ್ಟರೂ ಮನೆಗೆ ಹೋಗದ, ಪಾನ್ ಪರಾಗ್ ಗುಟ್ಕಾ ತಿನ್ನುವ, ಯಾರ ಕಾರು ಸಿಕ್ಕರೂ ಅಡ್ಡ ಹಾಕಿ ಹತ್ತುವ ಮನಸ್ಥಿತಿ ಇರುವ ಮಕ್ಕಳು, ಇದ್ದ ಜಾತ್ರೆ, ನೇಮ, ಕೋಲ, ಹಬ್ಬ , ಮದುವೆ, ನಿಶ್ಚಿತಾರ್ಥ, ಸೀಮಂತ, ನಾಮಕರಣ ಹೀಗೆ ಊರಿನ ಎಲ್ಲಾ ಕಾರ್ಯಕ್ರಮ ಮುಗಿಸಿ ಸಮಯ ಇದ್ದರೆ ಶಾಲೆಗೆ ಬರುವ ಮಕ್ಕಳು.  ಇಂತಹ ಮಕ್ಕಳನ್ನು ನೋಡುವಾಗ, ಅವರ ಕಥೆ ಕೇಳುವಾಗ ಕೆಲವೊಮ್ಮೆ ಮರುಕ, ಮತ್ತೆ ಕೆಲವೊಮ್ಮೆ ಸಿಟ್ಟು, ಇನ್ನೂ ಕೆಲವರ ಬಗ್ಗೆ ಬೇಸರ, ಊಟಕ್ಕೆ ಇಲ್ಲದ ಮಕ್ಕಳ ಬಗ್ಗೆ ನಮಗೇ ಬೇಸರ ಅನ್ನಿಸುತ್ತದೆ. 

ಎಷ್ಟೋ ಶಿಕ್ಷಕರು ಪಾಪ ಅನ್ನಿಸಿ ತಾವೇ ಬಟ್ಟೆ, ಊಟ ತಂದು ಕೊಟ್ಟು ತರಗತಿಯಲ್ಲಿ ಕುಳ್ಳಿರಿಸಿ ಪಾಠ ಹೇಳಿ ಕೊಡುವ ಶಾಲೆಗಳಿವೆ. ಇನ್ನು ಕೆಲವು ಕಡೆ ಮಕ್ಕಳೇ ಶಿಕ್ಷಕರಿಗೆ ಪಾಠ ಕಲಿಸುತ್ತಾರೆ! ಬಡತನದ ಬದುಕು, ತಂದೆ ತಾಯಿಯರನ್ನು ತಾನೇ ದುಡಿದು ನೋಡಿಕೊಳ್ಳುವ ಮಗು, ವಿಕಲ ಚೇತನ ತಮ್ಮ ಅಥವಾ ತಂಗಿಗೆ ನೆರಳಾಗಿ ನಿಂತ ಮಗು ಹೀಗೆ. ನನಗೆ ಕೆಲವೊಮ್ಮೆ ಅನ್ನಿಸುವುದೂ ಇದೆ, ನಾವು ಸಾವಿರ ಸಲ ಹೇಳಿ ಕೊಟ್ಟರೂ ಕಲಿಯದ ಮಗು ತಾನೇ ತಾನಾಗಿ ಬಹಳ ವಿಷಯ ಕಲಿತುಕೊಳ್ಳುತ್ತದೆ ಎಂದು. ನಾವು ಎಂದಾದರೂ ವಿದ್ಯಾರ್ಥಿಗಳಿಗೆ " ಕೈಯಲ್ಲಿ, ಕಾಲಲ್ಲಿ, ತೊಡೆಯಲ್ಲಿ, ರಬ್ಬರ್ ಒಳಗೆ, ಶೂ ಒಳಗೆ, ಕಿವಿ ಒಳಗೆ, ಜ್ಯಾಮಿಟ್ರಿ ಪೆಟ್ಟಿಗೆಯ ಒಳಗೆ ಚೀಟಿ ಇಟ್ಟು ಪರೀಕ್ಷೆಗೆ ಬರುವಾಗ ತನ್ನಿ " ಎಂದು ಯಾವುದಾದರೂ ಶಿಕ್ಷಕರು ಅಪ್ಪಿ ತಪ್ಪಿಯೂ ಹೇಳಿ ಕೊಟ್ಟಿರಲಿಕ್ಕಿಲ್ಲ. ಆದರೂ ಈ ಕೆಲಸ ಕೆಲವು  ಮಕ್ಕಳು ಮಾಡುತ್ತಾರೆ. ಮೊಬೈಲ್ ಒತ್ತಲು, ಫೋಟೋ ತೆಗೆಯಲು, ಗೇಮ್ಸ್ ಆಡಲು, ಯುಟ್ಯೂಬ್ ನೋಡಲು ಯಾವ ಟೀಚರ್ ಕೂಡಾ ಕಲಿಸುವುದು ಬೇಡ! ಅದೇ ಪೈಥಾಗೊರಸ್ ಪ್ರಮೇಯ ಒಂದು ಸಾವಿರ ಸಲ ಹೇಳಿ ಕೊಟ್ಟರೂ ಬಾರದು! ಕಾರಣ? ಮಗುವಿಗೆ ಅದು ಬೇಡ! ಇದು ಸರಕಾರಿ ಶಾಲೆ ಮಾತ್ರ ಅಲ್ಲ, ಎಲ್ಲಾ ಮಕ್ಕಳ ಇಷ್ಟಾ ಇಷ್ಟಗಳ ವಿಚಾರ! 
     ಇನ್ನು ಶಾಲೆಗೆ ಬರುವ ಮಕ್ಕಳ ಬ್ಯಾಗಿನಲ್ಲಿ ಇರುವ ವಸ್ತುಗಳನ್ನು ಒಮ್ಮೆ ನೋಡಿದರೆ, ಚಾರ್ಲಿ ಸಿನೆಮಾದಲ್ಲಿ ನೋಡಿದ ಹಾಗೆ ನಾಯಿ, ಬೆಕ್ಕಿನ ಮರಿಗಳು ಕೂಡಾ ಮಕ್ಕಳ ಚೀಲದಲ್ಲಿ ಇರುತ್ತವೆ. ಪುಸ್ತಕ, ಪೆನ್ನು ಪೆನ್ಸಿಲ್, ಪೆನ್ಸಿಲ್ ಬಾಕ್ಸ್ ಮಾತ್ರ ಅಲ್ಲ, ಮಾವಿನ ಕಾಯಿ, ಅದಕ್ಕೆ ಉಪ್ಪು, ಮೆಣಸಿನ ಪುಡಿ, ಕತ್ತರಿಸಲು ಚಾಕು - ಚೂರಿ, ಬೇರೆ ಮಕ್ಕಳಿಗೆ ಕೊಡಲು ಅಥವಾ ಆಟ ಆಡಲು ತಮ್ಮ ಮನೆಯ ಆಟದ ಸಾಮಾನುಗಳು, ಶಾಲೆಯಿಂದ ಬೇರೆ ಕಡೆ ಹೋಗಲು ಕೆಲವೊಮ್ಮೆ ಬಟ್ಟೆ, ಮನೆಯ ಬೀಗದ ಕೀ, ಹರಿದ ಚಪ್ಪಲಿಗಳು, ಮಾವಿನ ಹಣ್ಣು , ಈ ತರಹ ಕೆಲವು ಹಣ್ಣುಗಳು, ಹಣ, ತಂದೆ ತಾಯಿಯ ಎಟಿಎಮ್ ಕಾರ್ಡು, ಬ್ಯಾಂಕ್ ಪಾಸ್ ಬುಕ್, ಹೀಗೇ ಏನೇನೋ. 

ನಿಜವಾಗಿ ಓದಲು ಆಸಕ್ತಿ ಇದ್ದು ಶಾಲೆಗೆ ಬರುವ ಮಕ್ಕಳು ಶೇಕಡಾ ಹತ್ತರಿಂದ ಇಪ್ಪತ್ತು ಅಷ್ಟೇ! ಉಳಿದ ಕೆಲವು ಮಕ್ಕಳು ಪೋಷಕರ ಗಲಾಟೆ, ಪೆಟ್ಟಿಗೆ ಹೆದರಿ, ಇನ್ನೂ ಕೆಲವು ಮಕ್ಕಳು ಟೈಮ್ ಪಾಸ್ ಗೆ, ಮತ್ತೆ ಕೆಲವು ಮಕ್ಕಳು ಊಟಕ್ಕೆ, ಮನೆಯಲ್ಲಿ ನೆಮ್ಮದಿ ಇಲ್ಲದ ಮಕ್ಕಳು ನೆಮ್ಮದಿಗೆ, ತಂದೆ ತಾಯಿ ಸರಿ ಇಲ್ಲದ ಅಥವಾ ಇಲ್ಲದ ಕೆಲವು ಮಕ್ಕಳು ಶಿಕ್ಷಕರ ಪ್ರೀತಿಗೆ, ಕೆಲಸ ಇಲ್ಲ ಎಂಬ ಕಾರಣಕ್ಕೆ ಶಾಲೆಗೆ ಬರುವ ಮಕ್ಕಳೂ ಇದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಒಮ್ಮೆಲೆ ದೊಡ್ಡ ತರಗತಿಗೆ ವಯಸ್ಸಿನ ಮೇಲೆ ಸೇರಿಸಿದ ಮಕ್ಕಳು ಸೀದಾ ಪಾಸ್ ಆಗುತ್ತಾ ಬಂದು ಹತ್ತನೇ ತರಗತಿಯವರೆಗೆ ಬಂದು ಅಕ್ಷರ ಬಾರದೆ, ನಾವು ಅವರನ್ನು ರಿಸಲ್ಟ್  ಗಾಗಿ ಎಡೆಬಿಡದೆ ಇಲಾಖೆಯ ಒತ್ತಡಕ್ಕಾಗಿ ನೂರಾರು ಸಲ ಬರೆಸಿ ಬರೆಸಿ ಕಲಿಸಲು ಪ್ರಯತ್ನಿಸುವಾಗ ಸಾಕಾಗಿ ಶಾಲೆ ಬಿಟ್ಟು ಓಡಿ ಹೋಗುವ ಮಕ್ಕಳೂ ಇದ್ದಾರೆ! ಬೇರೆ ತರಗತಿಯಲ್ಲಿ ಹಾಯಾಗಿ ಒಂಭತ್ತು ವರ್ಷ ಕಲಿತ ಮಕ್ಕಳು ಹತ್ತನೇ ತರಗತಿಗೆ ಬರುವಷ್ಟಲ್ಲಿ ಫೈಲ್ ಎಂದರೆ ಏನು ಎಂದು ಅರಿಯದೆ, ಹತ್ತನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ, ಪಾಸ್ ಆಗಲೇ ಬೇಕು ಎಂಬ ಒತ್ತಡ! ಉಳಿದ ತರಗತಿಗಳಲ್ಲಿ ಅವರು ಹೇಗೇ ಓದಿದ್ದರೂ, ಹೇಗೇ ಪರೀಕ್ಷೆ ಬರೆದಿದ್ದರೂ ಆ ವರ್ಷ ಪಾಸ್ ಎಂದು ಅವರಿಗೆ ತಿಳಿದಿದೆ! 

ಗಾಂಧೀಜಿ ಹೇಳಿದ ಪ್ರಕಾರ ಮೂಲ ಶಿಕ್ಷಣ, ವೃತ್ತಿ ಶಿಕ್ಷಣ ಬೇಕೇನೋ ಅನ್ನಿಸುತ್ತದೆ ಒಮ್ಮೊಮ್ಮೆ! ಮಕ್ಕಳು ಶಾಲೆಗೆ ಬಾರದೆ ಅವರನ್ನು ಕರೆದುಕೊಂಡು ಬರಲು ಶಿಕ್ಷಕರು ಮನೆಗೆ ಹೋದರೆ ಕೆರೆಗೆ ಹಾರುವುದು, ಮರ ಹತ್ತಿ ಮಂಗನ ಹಾಗೆ ನೇತಾಡುವುದು, ಕಲ್ಲು ಬಿಸಾಕುವುದು, ಓದುವುದು, ಬೇರೆಯವರ ಮನೆಗೆ ಓಡಿ ಕದ್ದು ಕೂರುವುದು, ಜೋರಾಗಿ ಕಿರುಚುವುದು, ಸಾಯಲು ಹೋಗುವುದು ಇದನ್ನೆಲ್ಲ ಮಾಡಿದ ವಿದ್ಯಾರ್ಥಿಗಳು ಇದ್ದಾರೆ ಅಲ್ಲವೇ? 
ಶಾಲೆಯ ಸ್ವಚ್ಛತಾ ಕಾರ್ಯ ತಾವೇ ಅಚ್ಚುಕಟ್ಟಾಗಿ ಮಾಡುವ,ತಮ್ಮ ಶಾಲಾ ಖರ್ಚಿಗೆ ತಾವೇ ದುಡಿಯುವ ಹಲವು ಮಕ್ಕಳಿದ್ದಾರೆ. ಅಷ್ಟೇ ಅಲ್ಲ, ಓದುವುದನ್ನು ಬಿಟ್ಟು ಬೇರೆ ಯಾವ ಕೆಲಸ ಬೇಕಾದರೂ ಮಾಡುವ ವಿದ್ಯಾರ್ಥಿಗಳೂ ಇದ್ದಾರೆ! ಯಾಕೆ ಹೀಗೆ ... ಯಾರ ತಪ್ಪು? ಪೋಷಕರದ್ದೇ? ಮಕ್ಕಳದ್ದೇ? ಶಿಕ್ಷಕರದ್ದೇ? ಸಮಾಜದ್ದೇ? ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಸರಕಾರದ್ದೇ? ಕೆಲವರು ನಂಬುವ ಹಾಗೆ ಹಿಂದಿನ ಜನ್ಮದ ಪಾಪವೇ? ಕೆಲವು ಕಷ್ಟಗಳಿಗೆ, ನೋವು, ಖಾಯಿಲೆಗಳು, ಆಪರೇಶನ್, ಲಕ್ಷಗಟ್ಟಲೆ ಖರ್ಚು, ಗುಣವಾಗದ ನೋವುಗಳು ಇವನ್ನೆಲ್ಲಾ ನೋಡಿದರೆ ನಮಗೆ ನೋವು ಬಿಟ್ಟರೆ ಮತ್ತೇನೂ ಕಾಣದು, ನಮ್ಮ ಕೈಲಾಗದ ಕೆಲಸ ಇದು. ಏನು, ಯಾಕೆ ಹೀಗೆ ಎನ್ನುವ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಇಲ್ಲವೇ ಇಲ್ಲ! ನೀವೇನಂತೀರಿ?
@ಹನಿಬಿಂದು@
18.03.2023
 

ಒಂದಿಷ್ಟು....175

ಒಂದಿಷ್ಟು ರಿಲ್ಯಾಕ್ಸ್  ತಗೊಳ್ಳಿ -175

      ಮಾರ್ಚ್ 8 ಅಂತರ ರಾಷ್ಟ್ರೀಯ ಮಹಿಳಾ ದಿನ. ಆದರೂ    ಸ್ತ್ರೀ ಯರ ಮೇಲಿನ ದೌರ್ಜನ್ಯ ನಿಲ್ಲಲಿ... ಎಂಬ ಶೀರ್ಷಿಕೆಯ ಒಂದು ಲೇಖನ ಎಲ್ಲೋ ದಿನ ಪತ್ರಿಕೆಯಲ್ಲಿ  ನೋಡಿದೆ. ಅದು ಇನ್ನೂ ಬರುತ್ತಲೇ ಇದೆ  ದೇಶ ಎಷ್ಟು ಮುಂದುವರಿದರೆ ಏನು ಫಲ? ಹೆಣ್ಣಿಗೆ ಮಾನಸಿಕ ಸೌಖ್ಯ, ದೃಢತೆ, ಇದ್ದರೆ ತಾನೇ? ತಾನು ನೆಮ್ಮದಿಯಿಂದ ಬದುಕಲು ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಅಲ್ಲವೇ? 
        ಸ್ತ್ರೀಯರ ಮೇಲೆ ದೌರ್ಜನ್ಯ ಆಗುತ್ತಿದೆಯೇ ಎಂದರೆ ಹೌದು, ಬಹಳಷ್ಟು. ಅದು ಖಂಡಿತ. ಹೆಣ್ಣು ತಂದೆ ತಾಯಿಗೆ ಮಾತ್ರ ಮುದ್ದಿನ ಮಗಳು ಅಲ್ಲ, ಸೇರಿದ ಮನೆಯಲ್ಲೂ ಮುದ್ದು ಸೊಸೆಯಾಗಿ ಇರಬೇಕು, ಅವಳನ್ನು ಆ ರೀತಿ ನೋಡುವ ಕಾರ್ಯ ಆಗಬೇಕು. ಹಾಗಂತ ಹೋದ ಮನೆಯಲ್ಲಿ ದಬ್ಬಾಳಿಕೆ ಮಾಡುವ ಗುಣ ಹೆಣ್ಣಿನದು ಆಗಿರಬಾರದು. ಹೆಣ್ಣು ಹೇಗೆ ಸಹಿಸಿಕೊಂಡು ಬಾಳುವಳೊ ಅದೇ ರೀತಿ ಹೆಣ್ಣನ್ನು ಸಹಿಸುವ ಶಕ್ತಿ ಪ್ರತಿ ಗಂಡಿನಲ್ಲೂ ಇರಬೇಕು. ಸಮಾಜ ಗಂಡಿನ ಆಸೆ ಆಕಾಂಕ್ಷೆಗಳನ್ನು ಗೌರವಿಸಿದ ಹಾಗೆ ಹೆಣ್ಣಿನ ಮನಸನ್ನು ಕೂಡಾ ಗೌರವಿಸಬೇಕು. ಬಡವಳಾಗಲಿ,ಸಿರಿವಂತಳಾಗಲಿ ಒಂದೇ ರೀತಿಯ ಮನ್ನಣೆ ಅವಳಿಗೆ ಸಿಗಬೇಕು. ಹೆಣ್ಣು ಗಂಡಿನ ತಾರತಮ್ಯ ಭಾರತದಲ್ಲಿ ತಲೆ ತಲಾಂತರದಿಂದ ಬಂದುದು. 
         ಸ್ವತಂತ್ರವಾಗಿ ಹರಿಯುವ ನೀರಾಗಿದ್ದಳು ಹೆಣ್ಣು. ಅವಳ ಬದುಕನ್ನು ತಣ್ಣನೆ ಮಾಡಿ ಉದ್ಧಾರ ಮಾಡುವೆನೆಂದು ಮದುವೆ ಎಂಬ  ಒಂದು ಪೆಟ್ಟಿಗೆಯಲ್ಲಿ ಹಾಕಿ ಮುಚ್ಚಿ ಇಡುವರು. ಅಲ್ಲಿಂದ ಅವಳ ಬದುಕು ಕಷ್ಟದ ತಂಗಳಿನ ತೊಟ್ಟಿಯಲ್ಲಿ ಮಂಜುಗಡ್ಡೆಯಾಗಿ ಬಿಡುವುದು. ಅಲ್ಲಿ ಅತ್ತೆ, ನಾದಿನಿಯರ ಕಾಟ. ಬಂಧನ. ಮತ್ತೆ ಹಿಂದಿನ ಸ್ವಾತಂತ್ರಕ್ಕಾಗಿ ಹುಡುಕಾಟ. ಅದು ಸಿಗಲಿ ಎಂದು ಪರಿತಪಿಸುವ ಕಾಲಕ್ಕೆ ಬದುಕೆಲ್ಲೋ ದೂರ ಸಾಗಿ ಹೋಗಿರುತ್ತದೆ. ಮಂಜುಗಡ್ಡೆ ನೀರಾಗಬಹುದು, ಬದುಕು ಕಲ್ಲಾಗಿರುತ್ತದೆ. ಹಾಗೆ ಕಲ್ಲಾದ ಬದುಕಿಗೆ ಗಂಡಸರು ಅಥವಾ ಗಂಡು ಸಂತಾನ ಮಾತ್ರ ಕಾರಣ ಅಲ್ಲ. ಹೆಣ್ಣಿನ ಶೋಷಣೆಯಲ್ಲಿ ಈ ಅತ್ತೆ, ನಾದಿನಿಯರ ಕೈವಾಡವೂ ಇದೆ. ಇದರ ಜೊತೆಗೆ ಹೆಣ್ಣಿಗ ಗಂಡನೆಂದು ಮೆರೆಯುವ ಕೆಲವೊಂದು ಮನುಷ್ಯ ರೂಪದ ಪ್ರಾಣಿಯ ದರ್ಪವೂ ಇದೆ. ತನ್ನದು, ತಾನು, ತನ್ನದೇ ಸರಿ ಎಂಬ ಗಂಡಸಿನ ದರ್ಪವೂ ಸ್ತ್ರೀಯರ ಮೇಲಿನ ದೌರ್ಜನ್ಯಗಳಲ್ಲಿ ಒಂದು. 

         ಅತ್ತೆ ಸೊಸೆಯನ್ನು ದಬ್ಬಾಳಿಕೆ ನಡೆಸುವ ಬಗ್ಗೆ ಶೇಕಡಾ 90ರಷ್ಟು ಹೆಣ್ಣುಗಳ ಜೀವನದಲ್ಲಿ ಜೀವಂತ ನೈಜ ಉದಾಹರಣೆಗಳಿವೆ. ವರದಕ್ಷಿಣೆ, ವರೋಪಚಾರದ ಈಗ ಹೆಸರು ಬದಲಿಸಿ, ಮದುವೆ ಖರ್ಚು,ಬಟ್ಟೆ ಖರ್ಚು, ಚಿನ್ನ, ವರೋಪಚಾರ, ಡಿನ್ನರ್, ತುಪ್ಪ, ನೆಂಟರೂಟ ಅಂತ  ಲಕ್ಷಗಟ್ಟಲೆ ಖರ್ಚು ಮಾಮೂಲಿ. ಈಗ ಎಲ್ಲವೂ ಶೋಕಿ. ಜನರ ಬಳಿ ದುಡ್ಡಿರುತ್ತದೆ, ಖರ್ಚು ಮಾಡುತ್ತಾ ಇರುತ್ತಾರೆ, ಅದು ಹೇಗೋ. ಆದರೆ ಬಡವರು ಸಾಯುತ್ತಿದ್ದಾರೆ. 

      ತುಳುವಿನಲ್ಲಿ ಒಂದು ಗಾದೆ ಇದೆ, "ಎಟ್ಟಿ ಲಾಗಿoಡ್ ಪಂಡ್ ದ್ ಡೆಂಜಿ ಲಾಗೆರೆ ಪೋದು ಡೆಂಜಿದ ಕೊಂಬ ಕಾರ್ ಪೊಲ್ಲಿದ್ ಪೋತುಂಡುಗೆ"  ಅದರ ಸಾರಾಂಶ ಇಷ್ಟು. ಸೀಗಡಿ ನೀರಿನಿಂದ ಮೇಲೆ ಹಾರಿ ಹಾರಿ ಬೀಳುತ್ತಿತ್ತು. ಅದು ಹಾರುವುದನ್ನು ನೋಡಿ ಆಸೆ ಆಗಿ ಏಡಿ ಕೂಡಾ ಹಾರಲು ಹೋಯಿತು. ಏಡಿ ಹಾರಿ, ತನ್ನ ಎರಡು ಮುಖ್ಯ ಕಾಳುಗಳನ್ನೇ ಕಳೆದುಕೊಂಡಿತು. ಬೇರೆಯವರು ಏನೋ ಮಾಡುತ್ತಾರೆ, ಹೇಗೋ ಸ್ಟೈಲ್ ಮಾಡ್ತಾರೆ ಅಂತ ನಮ್ಮ ಹೆಣ್ಣು ಮಕ್ಕಳೂ ಕೂಡಾ ಇಂದು ನಮ್ಮ ಸಂಸ್ಕೃತಿ ಮರೆತು ಬಿಟ್ಟಿದ್ದಾರೆ. ದುಡ್ಡಿಗಾಗಿ ಯೋಚನೆ ಮಾಡದೆ ಯಾವುದೋ ಸಿನಿಮಾದಲ್ಲಿ ಹೀರೋ ಇನ್ ತೊಟ್ಟ ರೀತಿಯ ಬಟ್ಟೆಯೇ ನಮಗೂ ಬೇಕು ಅಂತ ಹಟ ಹಿಡಿದು ಸಾವಿರಾರು ರೂಪಾಯಿಗಳನ್ನು ಕೊಟ್ಟು ಕೊಂಡ ಬಳಿಕ ಒಂದು ಕಾರ್ಯಕ್ರಮಕ್ಕೂ ಅದನ್ನು ಸರಿಯಾಗಿ ಹಾಕಲು ಆಗದೆ ಯಾರಿಗೋ ಕೊಟ್ಟು ಬಿಡುವ ಕಾರ್ಯ ಬಿಟ್ಟು ತನ್ನ ಅಂದಕ್ಕೆ ಒಪ್ಪುವ ಬಟ್ಟೆ, ಕೂದಲಿನ ಡಿಸೈನ್, ಹಣೆಗೆ ಬಿಂದಿ ಧರಿಸಿದರೆ ಅದು ಉತ್ತಮ. 

ಈಗಿನ ಕಾನ್ವೆಂಟ್ ಗಳಿಂದ  ಹೊರ ಬಂದ ಹಲವಾರು ಹುಡುಗಿಯರನ್ನು ನೋಡಿದರೆ, ಮೊದಲೇ ಹಣೆಗೆ ಬೊಟ್ಟು, ಕೈಗೆ ಬಳೆ, ಕಾಲು ಗೆಜ್ಜೆ ಸಂಸ್ಕೃತಿ ಎಲ್ಲೋ ಹಾರಿ ಹೋಗಿ, ಮದುವೆ ಆದ ಬಳಿಕ ತಾಳಿ ಹಾಕುವ ಕ್ರಮವೂ ಇಲ್ಲ, ಸೀರೆ ಉಟ್ಟಾಗ ಕುತ್ತಿಗೆಗೆ ಸರ, ಕೈಗೆ ಬಳೆ ಹಾಕುವ ಕಾಲ ಅದೆಲ್ಲೋ ಹೋಗಿದೆ. ಹಾಗೆ ಹಾಕಬೇಕು ಎಂದು ಒತ್ತಾಯ ಮಾಡುವ ಸ್ವಾತಂತ್ರ್ಯ ಕೂಡಾ ಇಂದು ಯಾರಿಗೂ ಇಲ್ಲ. ಅವರವರ ಇಷ್ಟ, ಇಚ್ಛೆ, ಆಸೆಗಳಿಗೆ ಅನುಗುಣವಾಗಿ ಅವರಿಗೆ ಬದುಕುವ ಹಕ್ಕು ಇದೆ. ಒಂದು ಕಾಲದಲ್ಲಿ ಪಕ್ಕದ ಮನೆ, ಸಮಾಜದ ಜನರಿಗೆ ಹೆದರಿ ಬದುಕುತ್ತಿದ್ದ ಜನ ಇಂದು ಪಕ್ಕದ ಮನೆಯಲ್ಲಿ ಸತ್ತು ಬಿದ್ದರೂ ಇಣುಕಿಯೂ ನೋಡದೆ ಆ ವಿಷಯವನ್ನು ಗೂಗಲ್ ನ್ಯೂಸ್ ನಲ್ಲಿ ಓದಿ ತಿಳಿದುಕೊಳ್ಳುವ ವರೆಗೆ ತಾಂತ್ರಿಕತೆ, ಅದರ ಜೊತೆಗೆ ಸ್ವಾರ್ಥ ಸಮಾಜ ರೂಪುಗೊಂಡಿದೆ ಇಂದು. ಇದು ಹೆಣ್ಣು ಮಕ್ಕಳ ಬದುಕಿನ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ ಹಿಂದಿನ ಕಾಲದಲ್ಲಿ ಪಕ್ಕದ ಮನೆಯ ಹುಡುಗ ಅದೆಷ್ಟು ಒಳ್ಳೆಯ ಸ್ನೇಹಿತ, ಆಪತ್ಕಾಲದಲ್ಲಿ ಸಹಾಯಕ. ಈಗಿನ ಪಕ್ಕದ ಮನೆಯ ಹುಡುಗನನ್ನು ಕೂಡಾ ಹೆಣ್ಣು ನಂಬುವ ಹಾಗಿಲ್ಲ. ತನ್ನ ಬದುಕಿನ ಶತ್ರುಗಳಲ್ಲಿ ಅವರೂ ಇರಬಹುದು. ಆದರೆ ಕೆಲವು ಕಡೆ, ಹಳ್ಳಿಗಳಲ್ಲಿ ಆ  ಉತ್ತಮ ಸಂಬಂಧವನ್ನು ಹಿಂದಿನಂತೆಯೇ ಇಂದೂ ಕೂಡಾ ಬೆಳೆಸಿಕೊಂಡು ಬಂದ ಕುಟುಂಬಗಳೂ ಇವೆ. ಅವರಿಗೆ ಜೈ ಅನ್ನಬೇಕು ಅಷ್ಟೇ. 
    ಹೆಣ್ಣು ಮಕ್ಕಳು ಇಂದು ಸಬಲರಾಗಿದ್ದಾರೆ. ವಿಮಾನ ಬಿಡುವಲ್ಲಿಂದ ಹಿಡಿದು ಬಾರ್ ಮುಂದೆ ಕ್ಯೂ ನಿಂತು ಕುಡಿದು ತುರಾಡಿ ರಸ್ತೆಯಲ್ಲಿ ಬೀಳುವ ವರೆಗೂ ಏರಿ ಬಿಟ್ಟಿದ್ದಾರೆ. ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ, ಹೆಣ್ ಮಕ್ಲೆ ಸ್ಟ್ರಾಂಗ್ ಗುರು ಅಂತ ತೋರಿಸಿದರೂ, ಇಂದೂ ಕೂಡಾ, ಪಾತ್ರೆ ತಿಕ್ಕುವುದು, ಅಡಿಗೆ ಮಾಡುವುದು, ಒಲೆ ಉರಿಸುವುದು ತಪ್ಪಿಲ್ಲ! ಅದೆಲ್ಲಾ ಸರಿ, ಅತ್ತೆ ನಾದಿನಿಯರ ದಬ್ಬಾಳಿಕೆ, ಕಾಟವೂ ತಪ್ಪಿಲ್ಲ. ಗಂಡಿನ ದರ್ಪ ತಗ್ಗಿದೆ ಅಂದುಕೊಂಡಿರಾ? ಹೆಣ್ಣನ್ನು ಮೂವತ್ತ ಮೂರು ಬಾರಿ ಚಾಕುವಿನಿಂದ ಚುಚ್ಚಿ, ಚುಚ್ಚಿ ಸಾಯಿಸಿದ್ದು ಹಿಂದಿನ ಕಾಲದ ರಾಜ ಭಟರಲ್ಲ, ಅವನ್ ನಲ್ಲಿ ಬೇಯಿಸಿ ಸಾಯಿಸಿದ್ದೂ ಹಿಂದಿನ ರಾಜ ಮನೆತನದವರಲ್ಲ, ಹೆಣ್ಣಿನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟದ್ದು ಮಾಡರ್ನ್ ಯುಗದ ಕಲಿಗಳೇ! ಹೆಣ್ಣಿನ ಜೊತೆ ಜಗಳ ಮಾಡಿ ಅವಳು ದೈಹಿಕ ಸಂಬಂಧಕ್ಕೆ ಒಪ್ಪದ ಸಮಯದಲ್ಲಿ ಮೂರು ನಾಲ್ಕು ಜನ ಅವಳನ್ನು ಬಲಾತ್ಕಾರ ಮಾಡಿ ಅವಳ ಮರ್ಮಾಂಗಕ್ಕೆ ಬಿಯರ್ ಬಾಟಲಿ ತುರುಕಿ ಅವಳನ್ನು ಸಾಯಿಸಿದ್ದು, ಹೆಣ್ಣನ್ನು ಸಾಯಿಸಿ ನಂತರ ಅವಳ ಸತ್ತ ದೇಹವನ್ನು ಅನುಭವಿಸಿದ್ದು, ಅವಳ ದೇಹ ಕತ್ತರಿಸಿ ಮೂಟೆ ಕಟ್ಟಿದ್ದು, ತಾಯಿ ಮಗ ಸೇರಿ ಸಾಯಿಸಿ ತಾವೇ ಮಣ್ಣು ಮಾಡಿದ್ದು, ಹಲವಾರು ಕಾಮುಕರು ಮೋಹಿಸಿ, ಉಪಯೋಗಿಸಿ , ಸಾಯಿಸಿ ಕಸದ ತೊಟ್ಟಿಗೆ ಬಿಸಾಕಿದ್ದು, ಆರು ವರ್ಷ, ಹತ್ತು ವರ್ಷ , ಮೂರು ವರ್ಷ ಅಷ್ಟೇ ಅಲ್ಲ ಹತ್ತು ತಿಂಗಳ ಹಸುಗೂಸನ್ನು ಕೂಡಾ ಬಿಡದೆ ಕಾಮುಕರು ಅಟ್ಟಹಾಸ ಮೆರೆದಿದ್ದು ಯಾವ ಪೋಕ್ಸೋ ಕಾಯಿದೆ ಬಂದರೂ ಭಾರತದಲ್ಲಿ ಏನೂ ಪ್ರಯೋಜನ ಇಲ್ಲ. ನಿರ್ಭಯಾರಂತಹ  ಹೆಣ್ಣು ಮಕ್ಕಳ ಜೀವ ತಿರುಗಿ ಬಂದೀತೆ? ಇದು ಒಂದು ಮುಖ. ಆಧುನಿಕ ಸಾಮಾಜಿಕ ಜಾಲ ತಾಣಗಳಲ್ಲಿ, ಮಾಧ್ಯಮಗಳಲ್ಲಿ ತೋರಿಸುವ ಬಿಸಿ ಬಿಸಿ ಚಿತ್ರಗಳಿಂದ, ಡ್ರಗ್ಸ್ ಸೇವನೆ, ಕುಡಿತ ಇವುಗಳ ಮತ್ತಿನಲ್ಲಿ, ದುಷ್ಟ ಚಟಗಳಿಂದ ಜನ ಈ ರೀತಿಯಲ್ಲಿ ಸಮಾಜದ ಸ್ವಾಸ್ತ್ಯ ಕೆಡಿಸುತ್ತಿದ್ದರೆ ಇನ್ನೊಂದೆಡೆ ಹೆಣ್ಣೇ ಹೆಣ್ಣಿಗೆ ಶತ್ರು. ಆಸ್ತಿ, ಹಣ, ಒಡವೆ, ಕಾಮಕ್ಕೆ ಕುಟುಂಬದ ಗಂಡು ಮಕ್ಕಳನ್ನೂ ತಮ್ಮ ಜೊತೆಗೆ ಸೇರಿಸಿಕೊಂಡು ಮನೆಗೆ ಬಂದ ಮಹಾಲಕ್ಷ್ಮಿಯನ್ನು ಹಿಂಸಿಸಿ ಕೊಂದು,ಮಗನಿಗೆ ಮತ್ತೊಂದು ಮದುವೆ ಮಾಡಿಸಲು ಸಫಲರಾಗಿ ಹೆಮ್ಮೆಯಿಂದ ಮೆರೆಯುವ ಜನ ಅದೆಷ್ಟು! 
ಹೆಣ್ಣಿಗೆ ಹೆಣ್ಣೇ ರಕ್ಷಣೆ! ಹೆಣ್ಣು ಮಕ್ಕಳು ತಾವು ಸಬಲರಾಗಿದ್ದೇವೆ ಎಂದು ಗಂಡು ಅಥವಾ ಇನ್ನೊಬ್ಬರ ಮೇಲೆ ಸವಾರಿ ಮಾಡುವುದಲ್ಲ. ಕೆಲವೊಂದು ಹುಡುಗರ ಸಾವಿಗೂ ಹೆಣ್ಣು ಮಕ್ಕಳೇ ಕಾರಣ. ಬದವನೆಂಬ ಕಾರಣಕ್ಕೆ ಪ್ರೀತಿಸಿದ ವ್ಯಕ್ತಿಯನ್ನು ಮರೆತು ಬಿಡು ಎಂದು ಸಾರಾ ಸಗಟಾಗಿ ತಿರಸ್ಕಾರ ಮಾಡಿ ಹಣವಂತನ ಹಿಂದೆ ಬೀಳುವ, ಪ್ರೀತಿಸಿದ ಯುವಕನ ಜೊತೆ ಸೇರಿ ಪತಿ ಮತ್ತು ಅವನ ಮಕ್ಕಳನ್ನು ಕೊಲ್ಲುವ ಮಹಿಳೆಯರೂ ಇದ್ದಾರೆ. ಮೊನ್ನೆ ಮೊನ್ನೆ ಓದಿದ ಸಮಾಚಾರ ಏನೆಂದರೆ ವಸತಿ ಯೋಜನೆಯಿಂದ ಮಹಿಳೆಯರ ಅಕೌಂಟಿಗೆ ಐವತ್ತು ಸಾವಿರ ಹಣ ಬಂದಿತ್ತು. ಅವರ ಮನೆ ಕಟ್ಟಿ ಕುಟುಂಬದ ಜೊತೆ ಚೆನ್ನಾಗಿ ಬದುಕಬೇಕಿದ್ದ ಮಹಿಳೆಯರು ತಮ್ಮ ಖಾತೆಗೆ ಆ ಹಣ ಬರುತ್ತಲೇ ಅದನ್ನು ತೆಗೆದುಕೊಂಡು ಮೂವರು ಮಹಿಳೆಯರು ಮಕ್ಕಳನ್ನೂ ಬಿಟ್ಟು ಆ ಹಣ ಮತ್ತು ತಮ್ಮ ಪ್ರಿಯತಮನ ಜೊತೆ ಪರಾರಿ ಆಗಿದ್ದಾರೆ. ಜವಾಬ್ದಾರಿ ಹೊತ್ತ ಹೆಣ್ಣು ಮಕ್ಕಳೇ ಹೀಗಾದರೆ ಹೇಗೆ? 

   ಹೆಣ್ಣು ತಾಳ್ಮೆಯ ಖನಿ. ಹಾಗೆಂದು ಅವಳನ್ನು ಪದೇ ಪದೇ ಹಿಂಸಿಸುತ್ತಾ ಇದ್ದ ಅವಳ ತಾಳ್ಮೆಗೂ ಮಿತಿ ಇದೆ. ಕುಡುಕ ಗಂಡ, ವಯಸ್ಸಾದ ಅತ್ತೆ ಮಾವನ ಸೇವೆ, ಕೈ ಕಾಲಲ್ಲಿ ಪುಟಾಣಿ ಮಕ್ಕಳು ಎಷ್ಟು ಅಂತ ದುಡಿದಾಳು ಆಕೆ? ಅತ್ತೆ ಮಾವನ ಸೇವೆ, ಮಕ್ಕಳ ಜವಾಬ್ದಾರಿ ಹೊರದ ಗಂಡ, ಮಡದಿಗೆ ಪ್ರೀತಿಯನ್ನೂ ಕೊಡದೆ, ಸರಿಯಾಗಿ ಊಟವನ್ನೂ ಕೊಡದೆ ಇದ್ದರೆ ಬದುಕು ಹೇಗೆ ತಾನೇ ಸಾಧ್ಯ? ಹಾಗೆಯೇ ಅನಾಥ ಮಕ್ಕಳು, ಸರಿಯಾಗಿ ಸಾಕುವವರು ಇಲ್ಲದ ಬಡ ಮಕ್ಕಳು ಹಲವರ ಕೈಗೆ ಸಿಕ್ಕಿ ಬದುಕಿನಲ್ಲಿ ಬೆಂದು ಹೋದವರು, ಈ ಬದುಕೇ ಬೇಡ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣುಮಕ್ಕಳು ದಿನ ಬೆಳಿಗ್ಗೆ ವೃತ್ತ ಪತ್ರಿಕೆ ಓದಿದರೆ ಇಂತಹ ವಾರ್ತೆಗಳು ಕರುಳು ಹಿಂಡುತ್ತವೆ. ಯಾವ ತಾಂತ್ರಿಕ ಯುಗ ಬರಲಿ, ಯಾವ ಮನುಷ್ಯ ಚಂದ್ರನಲ್ಲಿ ಆಸ್ತಿ ತೆಗೆಯಲಿ, ಹೆಣ್ಣು ಪರಿಸರದಲ್ಲಿ ನೆಮ್ಮದಿಯಿಂದ ಬದುಕುವುದು ಕೇವಲ ಹತ್ತು ಹದಿನೈದು ಶೇಕಡಾ ಮಾತ್ರ. ಪ್ರತಿ ಕೆಲಸದ ಒತ್ತಡದಲ್ಲೇ ಬದುಕುವ ಅನಿವಾರ್ಯತೆ, ಮನಸ್ಸುಗಳ ಒಡನಾಟ ಸರಿಯಾಗಿ ಇರದೆ , ಆಯ್ಕೆಗಳ ಸಮಸ್ಯೆಯಾಗಿ, ಆಲೋಚನೆಗಳ ಬದಲಾವಣೆ , ಮರಣ, ಕುಟುಂಬದ ಪರಿಸ್ಥಿತಿ, ಬಡತನ , ಸಾಮಾಜಿಕ ಕಟ್ಟುಪಾಡುಗಳು, ಹಿರಿಯರ ನುಡಿ, ಶಿಸ್ತು, ವಿಪರೀತ ದುರಭ್ಯಾಸ, ಅಪಘಾತ,ಹಲವು ಖಾಯಿಲೆ - ರೋಗಗಳು ಇವೆಲ್ಲ ಬದುಕಲ್ಲಿ ಮಹಿಳೆಯನ್ನೂ, ಮಾನಸಿಕ ಖಿನ್ನತೆ ಪುರುಷರನ್ನೂ ಒಂಟಿಯಾಗಿ ಬದುಕುವಂತೆ ಮಾಡುತ್ತವೆ. ಮಹಿಳೆಯರು ದೈಹಿಕ ಶಕ್ತಿಯಲ್ಲಿ ಪುರುಷರ ಸಮನಾಗಿಲ್ಲ, ಪುರುಷರು ಮಾನಸಿಕ ಶಕ್ತಿಯಲ್ಲಿ ಮಹಿಳೆಯರಿಗೆ ಸಮಾನಾಗಿಲ್ಲ. ಇದು ಪ್ರಕೃತಿಯ ಸೃಷ್ಟಿ. 
     ಮಹಿಳೆಯರು ಒಬ್ಬಂಟಿ ಹೊರಗೆ ಹೋಗಿ ಬರುವ ಸ್ವಾತಂತ್ರ್ಯ ಇದ್ದರೂ ಅದು ಸೇಫ್ ಅಲ್ಲ!ಜನ ಎಷ್ಟೇ ಅಕ್ಷರಸ್ಥರು, ವಿದ್ಯಾವಂತರು,ಬುದ್ಧಿವಂತರು ಆದರೂ ಮೃಗಗಳಂತೆ ವರ್ತಿಸುವುದನ್ನು ಹಲವರು ಬಿಡಲಾರರು. ಅದು ಯಾವ ಕಾಲ ಎಂಬುದಿಲ್ಲ. ಸರ್ವ ಕಾಲದಲ್ಲೂ ಹೀಗೆಯೇ ಆಗಿದೆ. ಮಹಿಳೆ ಪುರುಷ ನೈತಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ನ್ಯಾಯಯುತವಾಗಿ ಒಬ್ಬರನ್ನು ಒಬ್ಬರು ಅರಿತು ಬದುಕಿದಾಗ ಮಾತ್ರ ಉತ್ತಮ ಸಂಬಂಧ. ಅಲ್ಲಿ ನಂಬಿಕೆ ಮುಖ್ಯ. ಇಲ್ಲದೆ ಹೋದರೆ ಮನೆಯೂ ಹಾಳಾಗುತ್ತದೆ, ಸಂಸಾರವೆಂಬ ನೌಕೆಯೂ ಮುಳುಗುತ್ತದೆ, ಸಮಾಜವೂ ಕೆಡುತ್ತದೆ. ದಬ್ಬಾಳಿಕೆ ಇಲ್ಲದ ಉತ್ತಮ ಸಮಾಜ ಇದ್ದರೆ ಮಾತ್ರ ಮಹಿಳೆಯರ ದಿನಾಚರಣೆಗೂ, ಪುರುಷರ ದಿನಾಚರಣೆಗೂ ಸರಿಯಾದ ಬೆಲೆ ಅಲ್ಲವೇ? ಹೆಣ್ಣನ್ನು ಒಂದು ಭೋಗದ ವಸ್ತುವನ್ನಾಗಿ ನೋಡಿದಾಗ ಅಲ್ಲ. ನೀವೇನಂತೀರಿ? 
@ಹನಿಬಿಂದು@
11.03.2022

ಅಕ್ಷರ ವಿಸ್ತರಣೆ

ಓ .....

ಓದು
ಬರಹ
ಬಾರದಿರೆ
ಪಶುವಿನoತೆ
ಎನುವರು ಜನ
ಓದಿ ಬರೆದು ಬುದ್ಧಿ
ಇರದೇ ಇರಲು ಮನ
ಅದು ಕೂಡಾ ಪ್ರಾಣಿ ಅಲ್ಲವೇ? 
ಅಲ್ಲ, ಪಶುವಿಗಿಂತ ಕಡೆಯೇ!
ಏಕೆಂದರೆ ಪಕ್ಷಕ್ಕಾಗಿ ಜಗಳ
ಪ್ರೀತಿಗಾಗಿ ಹೊಡೆದಾಟ ಸಾವು ನೋವು
ಕಾಮ ಕ್ರೋಧ ಲೋಭ ಮೋಹ  ಮದ ಮಾತ್ಸರ್ಯ
ಪರರ ಮೇಲೆ ಬೇಡದಂತ ಮಹಾ ಕ್ರೌರ್ಯ
@ಹನಿಬಿಂದು@
01.05.2023