ಗುರುವಾರ, ಆಗಸ್ಟ್ 29, 2024

ಪ್ರೀತಿಯ ಉಡುಗೊರೆ

ಪ್ರೀತಿಯ ಉಡುಗೊರೆ

ಪ್ರೀತಿಯೇ ನಿನಗೆ ನೀಡುವೆ ಇಂದು
ಪ್ರೇಮದ ಕಾಣಿಕೆ ನನ್ನೊಲವು 
ಶಾಂತಿಯೇ ಬಾಳಿನ ಮೂಲಕೆ ಸಿಂಧು
ಕ್ರೋಧವ ಮಾಡಲು ತನ್ನಳಿವು

ಮಾತಾ ಪಿತರ ವರವದು ಇರಲು
ಬದುಕಿನ ದಾರಿಯು ಸುಗಮವದು
ಮನಗಳ ಭಾವವೆ ಸರ್ವಗೆ ಸಲಹಲು
ಕೆಡುಕಿನ ಹೃದಯದಿ ಕಷ್ಟವದು

ನಾನು ನೀನು ಒಂದೇ ಎನಲು
ಅವರಿವರೆಲ್ಲಿ ತಡೆಯಲು ಸಾಧ್ಯ
ಪ್ರೀತಿಗೆ ಗೆಲುವು ಜಗದಲಿ ಕೊನೆಗೂ
ಶಾಂತಿಯ ನೆಮ್ಮದಿ ಜನತೆಗೆ ಹೃದ್ಯ..

ಕಾಂತಿ ಬರಲದು ಸ್ಪೂರ್ತಿಯು ಬೇಕು
ಸ್ವಾತಂತ್ರ್ಯದಿ  ನಿತ್ಯ ಹಿತವಿಹುದು
ನ್ಯಾಯ ನೀತಿಯ ಪಾಲಿಪ ಉಸಿರಿಗೆ
ಮೋಹದ ಉಡುಗೊರೆ ನಿಜವಿಹುದು
@ಹನಿಬಿಂದು@
30.08.2024

ಮಂಗಳವಾರ, ಆಗಸ್ಟ್ 27, 2024

ವಲಸೆ

ವಲಸೆ

ನಾ ನಿನ್ನ ನೆನೆಸಿಕೊಂಡು ನಿನ್ನನ್ನೇ ನನ್ನ ಮನದಲ್ಲಿ ಅಪ್ಪಿ ಆಲಂಗಿಸಿಕೊಂಡು
ನನ್ನ ಕವನದ ಸಿಹಿಯಾದ ಸಾಲುಗಳನ್ನು ಮತ್ತೆ ಮತ್ತೆ ನೆನೆಸಿಕೊಂಡು
ಒಂದೆರಡು ಪದಗಳ ಮತ್ತೆ ಮತ್ತೆ ಹುಡುಕಿ ಕಿವಿದು ಕೆದಕಿ
ಗೀಚುವ ಹೊತ್ತಲ್ಲಿ ವಲಸೆ ಬಂದಿವೆ ಹಲವು ಪದಗಳು..

ಹೊಸತಾದ ಪದವೇನು ಹೊಸದಾದ ಜೀವವೇನು
ನಯವಾದ ನುಡಿಗಳೇನು ಹೊಸತನದ ಅಮಲೇನು
ನೀ ನನ್ನ ನಾ ನಿನ್ನ ನೋಡುತ್ತಾ ಕುಳಿತಿರಲು
ಮತ್ತದೆ ಪದಗಳು ಮತ್ತೆ ಮತ್ತೆ ಬಂದು ರಾಡಿ ಎಬ್ಬಿಸಿಬಿಟ್ಟಿವೆ..
ಹನಿ ಬಿಂದು
27.08.2024

ಬುಧವಾರ, ಆಗಸ್ಟ್ 21, 2024

ಮೆಲುಕು

ಮೆಲುಕು

ಹಲವಾರು ಬಾರಿ ಬದುಕಿನ ಮೆಟ್ಟಿಲುಗಳನ್ನು ಮೆಲುಕು ಹಾಕಿದಾಗ ನಮಗೆ ಸಿಗುವುದು ಸಿಹಿ ಕಹಿಗಳ ನೆನಪಿನ ಹೂರಣ 

ಬಂದು ಹೋಗುವ ಈ ಸಣ್ಣ ನಾಲ್ಕು ದಿನಗಳ ನಡುವೆ ಹಲವಾರು ಕಷ್ಟ ಸುಖಗಳ ಮುದ್ದಾದ ಒಟ್ಟಾದ ಸಮ್ಮಿಲನದ ಅನುರಣನ 

ಜನಮನಗಳ ಜೊತೆ ತಣಿ ತಣಿಯುತ ಕೋಪ ದ್ವೇಷ ಜಗಳ ಹೊಂದಾಣಿಕೆಗಳೆಂಬ ವಿವಿಧ ಭಾವಗಳ ಸಮ್ಮಿಳಿತ ಸಂಬಂಧಗಳ ಕಣ 

ದೇಶ ಭಾಷೆ ರಾಷ್ಟ್ರ ರಾಜ್ಯ ನಾನು ನನ್ನದು ನೀನು ನಿನ್ನದು ಅವನು ಅವನದು ಆಸ್ತಿ ಅಂತಸ್ತು ದೇಶ ಜಾಗ ಮನೆ ಅರಮನೆ ಋಣ

ಮೆಲುಕು ಹಾಕುವಾಗ ಕೊನೆಗೊಮ್ಮೆ ಅನ್ನಿಸುವುದು ಎಲ್ಲಕ್ಕಿಂತಲೂ ಮುಖ್ಯ ಉತ್ತಮ ಆರೋಗ್ಯ ಶಾಂತಿ ನೆಮ್ಮದಿಯ ಬದುಕು ಮಿಕ್ಕೆಲ್ಲವೂ ಸುಮ್ಮನೆ...
@ಹನಿಬಿಂದು@
22.08.2024

ಸೋಮವಾರ, ಆಗಸ್ಟ್ 19, 2024

ಕಟ್ಟಿರುವೆ

ಕಟ್ಟಿದ್ದೆ ರಕ್ಷೆಯನು ಬಿಡಬೇಡ ಎಂದು
ಬಂಧನವು ಅನುದಿನವು ಬಿಡಬಾರದೆಂದು
ಅದೇಕೆ ಹಾಗಾಯ್ತೋ ನೋವು ನೂರಾಯ್ತು
ಕಾಳಜಿ ಕಡಿಮೆಯಾಗಿ ಮನವು ಚೂರಾಯ್ತು

ಮನವು ಮರ್ಕಟವಿಲ್ಲಿ ಇಂದಿನಂತೆ ನಾಳಿಲ್ಲ
ತನುವ ಬಯಸಲು ಜನರಿಗೇನು ಕಮ್ಮಿಯಿಲ್ಲ
ಅಕ್ಕ ತಂಗಿಯ ತೆರದಿ ಕಾಣುವವರಿಲ್ಲ
ಬೇಕೇ ಬೇಕು ತಮಗೆ ಸಿಕ್ಕಿದ್ದ ಅನುಭವಿಸಲಿಕ್ಕೆಲ್ಲ

ಬಾಳು ಚೂರಾಗಿ ಮಾತು ನೀರಾಗಿ ಹೋಗಿತ್ತು
ಕಾಳು ನುಂಗಿದ ಹಕ್ಕಿ ಪರರ ಪಾಲಾಗಿತ್ತು
ಹಾಲು ಮನವದು ಹೋಳು ಹೋಳಾಗಿತ್ತು
ಬಾಳುವೆಯು ಆಸೆ ಮುಗಿಸಿ ಹೊರಡಲನುವಾಗಿತ್ತು

ತಾನು ತನ್ನದು ಎಂದು ಏನಿಹುದು ಜಗದೊಳಗೆ
ಬಂದಾಗ ಬೇರೆಯೇ ಮನೆಯಿಂದ ಹೊರಗೆ
ದೈವ ದೇವರಿಗೆ ಮೊರೆ ಇಡಬೇಕು ಅರೆ ಘಳಿಗೆ
ಇಲ್ಲವಾದರೆ ತುಂಬದು ನಮ್ಮೀ ಮನದ ಜೋಳಿಗೆ
@ಹನಿಬಿಂದು@
19.08.2024

ಚುಟುಕು



ರಕ್ಷಾ ಬಂದನ

ಸಂಬಂಧಗಳು ಚೆನ್ನಾಗಿರಲಿ ನಮ್ನಿಮ್ಮ ಅವರೊಳಗೆ
ಬಾಂಧವ್ಯ ಬೇಸುಗೆಯಾಗಿರಲಿ ಸ್ನೇಹಹೊಳೆ ಹರಿದ್ಹಾಂಗೆ
ರಕ್ಷೆ ಕ್ಕೈಯಲಿರಲಿ  ಭಾವಬೆಸುಗೆ ಬಿಡದಾಂಗೆ
ನೂರ್ಕಾಲ ಜೊತೆಗಿರಲಿ ನಾಣ್ಯದೆರಡು ಮುಖದಾಂಗೆ 
@ಹನಿಬಿಂದು@
19.08.2024

ಮಂಗಳವಾರ, ಆಗಸ್ಟ್ 13, 2024

ಕಂದ

ಕಂದನ ಕೈಲಿ ಕಂದನಿದೆ
ಕಂದಗೆ ಕಂದನ ಆಸರೆಯು
ಕಂದನು ಜವಾಬ್ದಾರಿ ಹೊರಲು ಇದೆ
ಕಂದನು ಬೆಳೆದ ಹಿಗ್ಗು ಇದೆ

ಅಜ್ಜಿಯ ಪಟ್ಟವ ಹೊರಲು ಇದೆ
ಅಜ್ಜನ ಹಾಗೆ ಆಡಲಿದೆ
ಮಗುವನು ಕುಣಿಸೋ ತವಕವಿದೆ
ಹಿರಿಯರು ಎನಿಸಿದ ನೋವು ಇದೆ

ಮಗುವಿನ ಮನದ ಮಗಳಾಸೆ
ವಯಸ್ಸು ಆದುದೇ ತಿಳಿಯದ ಕ್ಷಣದಲಿ
ಮದುವೆಯೂ ಮಗುವು ಖುಷಿ ಇರಲಿ
ಬಾಳಿನ ಹಾದಿಯು ಸೊಗವಿರಲಿ
@ಹನಿಬಿಂದು@
14.08.2024


ತುಳು ಕವನ

@prem Ramesh shetty
ಮೋಕೆ 

ಮೋಕೆ ಬೊರ್ಚ ಬಾಳ ತೇರ್ 
ನೂಕು ನೂಕು ಪೋಯೆರೆ 
ತೂಕ ನಾಲ್ ದಿನಲ ನಮ
ಮಿತ್ ಪೋಯರಾಪುಜಾ...

ನ್ಯಾಯ ನೀತಿ ತತ್ ಪೋಪಿ
ಗುಣಲ ನಮ್ಮ ಅತ್ ಯೇ
ಕಾಯ ಮಾಯ ಗೊತ್ತೇ ಇಜ್ಜಿ
ಪೊಯರುಂಡು ಪೂರಯೆ

ತಾಲ್ವೆ ಮೋಕೆ ಶಾಂತಿ ಕುಸಿ
ಬೋಡು ನಮಕ್ ಏಪಲ 
ತಾದಿ ತತ್ತಿನಾಂಡ ಬರೊಲಿ 
ಕೇಂದ್ ಪತ್ ಇಲ್ಲಗ್ಲ 

ಯಾನ್ ಈರ್ ಪನ್ ಪಿ ವಚನ
ಬೊರ್ಚಿ ನಮಕ್ ಏಪಲ 
ನಮ ಪನ್ ಪಿ ಧ್ಯೇಯ ವಾಕ್ಯ
ದೊರೆಯದೊಂತೆ ದಿನಕ್ಲ
@ಹನಿಬಿಂದು@

ಚುಟುಕು

ಚುಟುಕು

ಹೊಸದಾದ ಮಾದರಿಯು ಇತ್ತೀಚಿನ ಹೊಗಳಿಕೆ
ಅದರೊಳಿಹುದು ಬರಿಯ ಬೂಟಾಟದ ತೆಗಳಿಕೆ
ಜನರ ಕಣ್ಣಿಗೆ ಮಣ್ಣೆರೆಚೊ ಸಾಧನ
ಬಡವರಡು ಊಟ ಬಟ್ಟೆಯಿಲ್ಲದ ರೋಧನ
@ಹನಿಬಿಂದು@
13.08.2024

ಹೂವ ತಂದೆಯ

ಹೂವ ತಂದೆಯಾ?

ಹೂವ ತಂದೆಯಾ ಮಗಳೇ ಮೋಹಿನಿ
ಹೂವ ಮೂಡಿದೆಯಾ ತಲೆಗೆ ಕಾಮಿನಿ
ಹೂವ ಹಿಡಿದೆಯಾ ಕರದಿ ಮೇದಿನಿ 
ಹೂವ ನಗೆಯ ಬೀರುತಿರುವ ರಾಗಿಣಿ

ತಲೆಯಲೊಂದು ಹಾರೋ ಯೋಚನೆ
ಮನದ ಒಳಗೆ ಏನೋ ಕಾಮನೆ
ಜೀವ ಬಿಡುತ ಕಾಯೋ ಮನದನ್ನೆ
ಬಾರೆ ಸಖಿಯೇ ಮುದ್ದು ಕನ್ಯೆ..

ಹಾರೋ ಹಕ್ಕಿ ಮೋಡ ತಡೆದು
ತಲೆಯ ಮೇಲೆ ಕುಳಿತು ಮೆರೆದು
ಯಾರೋ ಏನೋ ಓಡಿ ಬಂದು
ನಾಲ್ಕು ದಿಕ್ಕಿನಲ್ಲು ಹೂವ ಹಿಡಿದು...

ಜಾರಿ ಬೀಳದಂತೆ ಸಣ್ಣ ಹೂವು
ನೋಟದಲ್ಲೇ ಏನೋ ಹೊಸ ಕಾವು
ಮನದ ಒಳಗೆ ಸಣ್ಣ ನೋವು
ಬರದೆ ಇರಲಿ ಎಲ್ಲೂ ಬಾವು..
@ಹನಿಬಿಂದು@
13.08.2024

ಶನಿವಾರ, ಆಗಸ್ಟ್ 10, 2024

ಆರ್ತನಾದ

ಹೌದು, ನೀವು, ದೇವರು ಮಾಡುವುದು ಎಲ್ಲವೂ ಒಳ್ಳೆಯದೇ. ಆದರೆ ಒಂದು ಹೆಣ್ಣಿಗೆ ನೋವು ಕೊಡುವುದು ಅದು ಯಾವ ನ್ಯಾಯ? "ತನಗೆ ಬೇಕಾದುದೆಲ್ಲವ ಪಡೆದುಕೊoಡು, "ನಿನಗೆ ಉತ್ತಮ ಬಾಳು ಕೊಡುವೆ, ಸದಾ ನಿನ್ನ ಬಾಳಲ್ಲಿ ನಿನ್ನ ಅರ್ಧಾಂಗಿಯಾಗಿ ಜೊತೆಯಾಗುವೆ" ಎಂಬ ಭರವಸೆಯನ್ನು ಆಯಾ ದೇವರ ಎದುರಿನಲ್ಲಿ ನೀಡಿ, ಅದಕ್ಕೆ ಸಾಕ್ಷಿಯಾಗಿ a ಹೆಣ್ಣಿನ ಕುತ್ತಿಗೆಗೆ ತಾಳಿ ಕಟ್ಟಿದ ಮೇಲೆ ಸದಾ ಕಷ್ಟ ಸುಖದಲ್ಲಿ ಆ ಹೆಣ್ಣಿಗೆ ನೆರಳಾಗಿ ಬದುಕಬೇಕು" ಎಂದು ನನಗೆ ಹೇಳಿಕೊಟ್ಟವರು ನೀವೇ. ಈಗ ನೀವೇ ಒಂದು ಹೆಣ್ಣಿನ ಕಣ್ಣಲ್ಲಿ ನೀರು ತರುವುದು, ಮೌನದಲ್ಲಿ ಮನಸು ಕೆಡಿಸಿ, ನೋವು ತರಿಸಿ ತನಗೆ ಬೇಕಾದಾಗ ಮಾತ್ರ ಬಯಸುವ, ಸ್ವಾರ್ಥ ಏಕಾಗಿ?
  ಗಂಡಸರೆಂದರೆ ಹಾಗೆ ಎನ್ನುವ ಹಾಗೆ ತನ್ನ ಸ್ವಾರ್ಥಕ್ಕೆ ಹೆಣ್ಣನ್ನು ಬಳಸಿ, ಕೊನೆಗೆ ಏನೂ ಸಿಗದಾಗ ಹೆಣ್ಣನ್ನು ಕಸದ ರೀತಿ ಎಸೆದು ಬಿಡುವ, ಗಂಡಸು ಕುಲಕ್ಕೆ ಧಿಕ್ಕಾರ. ಸ್ವಾರ್ಥಿ ಗಂಡಸು ತನ್ನ ಜೀವನದಲ್ಲಿ ತನ್ನ ತಾಯಿ, ಮಡದಿ, ಮಗಳು, ಅಕ್ಕ ತಂಗಿ ಯಾರನ್ನೂ ಸುಖವಾಗಿ ಸಾಕಲಾರ. ಎಲ್ಲರಿಗೂ ಮಾನಸಿಕ ಹಿಂದೆ ನೀಡುತ್ತಾ ತಾನು ಚೆನ್ನಾಗಿ ಬದುಕುವ. ಇಂತಹ ಗುಣ ಒಳ್ಳೆಯ ಗುಣವಲ್ಲ. ಹೆಣ್ಣಿನ ಕಣ್ಣೀರಿಗೆ ಬಹಳ ಶಕ್ತಿ ಇದೆ. ಮಂಡ್ಯ ಇದಕ್ಕೆ ಉದಾಹರಣೆ. ಮರಳು ಪೂರ್ತಿ ಆವರಿಸಿದ್ದು ಒಬ್ಬ  ಹೆಣ್ಣಿನ ಶಾಪದಿಂದ. 
    ಮಡದಿಯನ್ನು7 ಗೌರವಿಸಿದ ಗಂಡನನ್ನು ದೇವರೇ ಮೆಚ್ಚುತ್ತಾನೆ. ಅದರ ಹೊರತುಪಡಿಸಿ, ಬೇರೆ ಯಾರ ಮೇಲೆ ತನ್ನ ಆಸೆ ಆಕಾಂಕ್ಷೆಗಳನ್ನು ಹೊರಿಸಿ, ಕಾರ್ಯ ಸಾಧಕನಾದ ಯಾವ ಮನುಷ್ಯನೂ ಎಲ್ಲೂ ಶಾಶ್ವತ .....
  ಈ ಕರ್ಮಕ್ಕೆ ಅದು ಯಾವ sety.. 
@HoneyBindu@
10.08.2024

ಮಂಗಳವಾರ, ಆಗಸ್ಟ್ 6, 2024

ಒಂಟಿತನ

ತೀರಾ ಒಂಟಿತನ ಕಾಡುವ ಹಲವಾರು ಕ್ಷಣಗಳು ಬದುಕಿನಲ್ಲಿ ಎಲ್ಲರಿಗೂ ಬರಬಹುದು. ತುಂಬಾ ದೊಡ್ಡ ಕುಟುಂಬದಲ್ಲಿ ಹಲವಾರು ಜನರ ಜೊತೆ ಮಾತುಕತೆಯಲ್ಲಿ ಸದಾ ಇದ್ದರೂ, ನೂರಾರು ಜನ ಸುತ್ತಮುತ್ತ ಇರುವ ಹಾಸ್ಟೆಲ್ ನಲ್ಲಿ ಇದ್ದರೂ, ಪೂರ್ತಿ ತುಂಬಿದ ಬಸ್ಸಿನೊಳಗೆ ಇದ್ದರೂ ಒಂಟಿತನ ಕಾಡದೇ ಇರದು. ಅಂತೆಯೇ ಆರುನೂರು ಕೋಟಿ ಜನಸಂಖ್ಯೆ ಇರುವ ಈ ಭೂಮಿಯ ಮೇಲೂ ಒಂಟಿತನ ಕಾಡಿಯೇ ಕಾಡುವುದು ಸಹಜ. 
     ಒಂಟಿತನಕ್ಕೆ ಕಾರಣಗಳು ಇಲ್ಲದೇ ಇಲ್ಲ. ತನ್ನ ಹಾಗೆಯೇ ಯೋಚಿಸದ ವ್ಯಕ್ತಿ ತನ್ನೊಡನೆ ಇಲ್ಲದೆ ಇರುವುದು, ತನ್ನ ನೋವನ್ನು, ಅಳುವನ್ನು, ಸಂತಸವನ್ನು, ದುಃಖವನ್ನು, ಪ್ರೀತಿಯನ್ನು ಯಾರಲ್ಲೂ ಹಂಚಿಕೊಳ್ಳಲು ಸಾಧ್ಯವಾಗದೇ ಇರುವಾಗೆಲ್ಲ ""ಎಲ್ಲವನ್ನೂ ಹೇಳಿ ಕೊಳ್ಳಲು, ಭುಜದ ಮೇಲೊರಗಲು ತನಗಾಗಿ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ಇರಬೇಕಿತ್ತು"  ಅನ್ನಿಸಿದಾಗೆಲ್ಲ ಒಂಟಿತನ ಕಾಡುತ್ತದೆ. ನನ್ನ ಕಣ್ಣೀರ ಒರೆಸುವ ಕೈಗಳು ಬೇಕು, ಹಾಯಾಗಿ ಮಲಗಿ ನನ್ನ ನೋವನ್ನು ಹೊರ ಹಾಕಲು , ತೊಡೆಯ ಮೇಲೆ ಹಿತವಾಗಿ ಮಲಗಿ ನೋವು ಹಗುರಾಗಿಸಲು ನನ್ನದೇ ಅಂತ ಒಬ್ಬರು ಜೀವದ ಗೆಳೆಯ/ಗೆಳತಿ ಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇದೆ. ಬಾಳ ಸಂಗಾತಿ ಕೆಲವೊಮ್ಮೆ ನೂರರಲ್ಲಿ ಎಂಬತ್ತು ಭಾಗ ಈ ರೀತಿ ಅರ್ಥ ನಮ್ಮನ್ನು ಮಾಡಿಕೊಂಡವರೆ  ಅಲ್ಲ, ಅರ್ಥ ಮಾಡಿಕೊಂಡು ತಿಳಿದು ಬದುಕುವರಿದ್ದಿದ್ದರೆ ಇಷ್ಟೊಂದು ಕೋರ್ಟು ಕೇಸುಗಳು, ಡೈವೋರ್ಸ್ಗಳು, ಸೆಪರೇಶನ್ ಗಳು ಆಗಲು ಹೇಗೆ ತಾನೇ ಸಾಧ್ಯ ಅಲ್ಲವೇ? 
     ಮಹಿಳೆ ಪುರುಷನನ್ನು ಅವಲಂಬಿಸಿದ್ದರೆ, ಆ ಪುರುಷ ಇನ್ಯಾರೋ ಬೇರೆ ಮಹಿಳೆಯನ್ನು ಅವಲಂಬಿಸಿ ಇದ್ದಾಗ ಕುಟುಂಬದಲ್ಲಿ ಜಗಳ, ನೋವು, ಗಲಾಟೆ ಬರುತ್ತದೆ. ಅದು ಹುಡುಗನ ಅಮ್ಮ, ಅಕ್ಕ, ತಂಗಿ, ಗೆಳತಿ, ಗರ್ಲ್ ಫ್ರೆಂಡ್, ಹಳೆ ಲವರ್, ಪ್ರೇಯಸಿ, ಆಂಟಿ, ಅತ್ತೆ ಅಜ್ಜಿ, ಪಕ್ಕದ ಮನೆಯ ಮಹಿಳೆ , ಕ್ಲಾಸ್ಮೇಟ್,  ಯಾರಾದರೂ ಆಗಿರಬಹುದು.  ಮಹಿಳೆಯರೂ ಅಷ್ಟೇ, ಗಂಡನನ್ನು ಹೊರತುಪಡಿಸಿ ಇತರರ ಬಳಿ ಮಾತನಾಡಿಸಿದರೆ  ಸಮಾಜದಲ್ಲಿ ಅದು ತಪ್ಪೇ.... ಕಾರಣ? ಅವನು/ಅವಳು ಯಾರೆಂದು ಗೊತ್ತಿಲ್ಲ, ಅವರಿಬ್ಬರ ನಡುವೆ ಪರರು ಬಂದು ಕಡ್ಡಿ ಅಲ್ಲಾಡಿಸಲು ಕುಟುಂಬದ ಜನ ಬಿಡಬಾರದು. 
    ಒಂಟಿತನ ಮರ, ರಾಣಿ, ಪ್ರಾಣಿ,ಪಕ್ಷಿ, ಸಣ್ಣ ಸಾಕು ಪ್ರಾಣಿಗಳ ಕುರಿತಾದ ಹಲವು ಕಥೆಗಳಕೇಳಬೇಕು..
ಮುಂದುವರೆಯುವುದು....
@ಹನಿಬಿಂದು@

ಶನಿವಾರ, ಆಗಸ್ಟ್ 3, 2024

5 ಚುಟುಕುಗಳು

ಚುಟುಕು -1
ಆಂತರ್ಯ

ಅರವತ್ತಾದರೆ ಏನು ಮನಸು ಕುಗ್ಗಿಲ್ಲ
ಅನುಭವದ ಮೂಟೆ ಕಟ್ಟಿಕೊಂಡಿರುವೆ 
ನಗುವಿಗಂತೂ ಕೊರತೆ ಇದೆಯೆಂಬುದಿಲ್ಲ
ಮಕ್ಕಳು ಮರಿ ಜೊತೆ ಹೊಂದಿಕೊಂಡಿರುವೆ 

ಚುಟುಕು -2
ಫಲ
ಮಣ್ಣು ಅಗೆದೆ ಒಳ್ಳೆಯ ಮಣ್ಣು ಸಿಕ್ಕಿತು
ಮತ್ತೂ ಅಗೆದೆ ಶುದ್ಧೋದಕ ಸಿಕ್ಕಿತು
ಇನ್ನೂ ಅಗೆಯುತ್ತಲೇ ಇರಲು ತೊಡಗಿದೆ 
ಫಲವತ್ತಾದ ಆರೋಗ್ಯ ನನಗಾಗಿ ಸಿಕ್ಕಿತು..


ಚುಟುಕು -3
ಬಂತು
ಆಷಾಢ ಬಂತು ಹಿರಿಯರ ನೆನೆಯುತ್ತಾ
ಶ್ರಾವಣವು ಬಂತು ಹಬ್ಬಗಳ ತರುತ್ತಾ
ಮಳೆಯೂ ಬಂತು ಗುಡ್ಡಗಳ ಬೀಳಿಸುತ್ತಾ
ನಾವೂ (ಸತ್ತು) ಬದುಕಿಹೆವು ಮರಗಳ ಉರುಳಿಸುತ್ತಾ...

ಚುಟುಕು -4
ಪರಿಸ್ಥಿತಿ
ಮುತ್ತಜ್ಜಿ ಬಂದರು ಮತ್ತೆ ತಿರುಗಿ ಹೋದರು
ಅಜ್ಜಿ ಬಂದಿದ್ದರು ವಾಪಸ್ ಹೋದರು
ತಾಯಿ ಬಂದಿದ್ದಾರೆ ಮರಗಳ ನೆಟ್ಟಿಹರು 
ನಾ ಮನೆ ಕಟ್ಟಲು ಮರ ಹುಡುಕುತಿಹೆ...

ಚುಟುಕು -5
ಬರೆ 
ಅವರು ಮಹಾ ಬರಹಗಾರರು ನಿತ್ಯ
ಬರೆಯುವುದು ಮಾತ್ರ,  ಓದುವುದಿಲ್ಲ ಸತ್ಯ
ಕಾರಣ ಅವರಿಗೆ ತಿಳಿದುಹುದು ಎಂದಿಗೂ
ಅವರು ಬರೆದುದು ಅರ್ಥವಾಗಲಿಕ್ಕಿಲ್ಲ ಯಾರಿಗೂ

ಗುರುವಾರ, ಆಗಸ್ಟ್ 1, 2024

ಕವನ

ಒಂದಾಗಿ ಬಾಳೋಣ 

ಭಾರತ ಮಾತೆಯ ಹೆಮ್ಮೆಯ ಕುಡಿಗಳು
ಹೆದರದೆ  ಬೆದರದೆ ಬಾಳೋಣ
ಜಾತಿ ಧರ್ಮಗಳ ಮೇಲು ಕೀಳುಗಳ
ಮರೆಯುತ  ಹರುಷದಿ ನಲಿಯೋಣ//

ಹಸಿರ ಪರಿಸರ ಉಳಿಸುತ ನಿತ್ಯವು
ಕಾಡನು ಕಡಿಯದೆ ಬೆಳೆ ಬೆಳೆಸಿ
ಪ್ಲಾಸ್ಟಿಕ್ ಫೈಬರ್ ಎಸೆಯದೆ ಧರೆಗೆ
ಹಸಿ ಕಸ ಒಣ ಕಸ ಬೇರ್ಪಡಿಸಿ//

 ಸಹಕಾರ ಬೇಡಲು ನೋವಿಗೆ ಸ್ಪಂದಿಸಿ
ಸಹಾಯ ಹಸ್ತವ ಚಾಚೋಣ 
ಎದುರಿಗೆ ಬಂದರೆ ಕೋವಿಯ ಹಿಡಿದು
ಶಾಂತಿಯ ಮಂತ್ರವ ಕಲಿಸೋಣ//

ಹಿರಿಯರ ದಾರಿಯ ನೆನೆಯುತ ಸಾಗಿ
ಗೌರವ ನಮನದಿ ಬಾಗೋಣ 
ಹಿರಿ ಕಿರಿಯರಲಿ ಜ್ಞಾನವ ಹಂಚುತ
ಹೊಂದಾಣಿಕೆಯಲಿ  ಸಾಗೋಣ..

ಪ್ರೀತಿಯ ಸರ್ವೆಡೆ ಹಂಚುತ ನಾವು
ನಾಡಿನ ಸಂಸ್ಕೃತಿ ಉಳಿಸೋಣ
ಸಕಲ ಭಾಷೆಗಳ ಗೌರವಿಸುತಲಿ 
ಸರ್ವ ಸಮಾನತೆ ಸಾರೋಣ//
@ಹನಿಬಿಂದು@
24.07.2024