ಬೇಕಿದೆ
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ
ಎಂದ ಭಾರತದ ಸರ್ವತೋಮುಖ ಜನರ ಮತ
ನಾರೀಮಣಿಗಳ ಉತ್ತಮ ಕಾರ್ಯ, ತಾಳ್ಮೆಯ ಸತತ
ಅನುಕರಣೀಯ ಗುಣದ, ನೋವು ನುಂಗುವ ಹಿತ!
ಸೀತೆಯ ಹೊಂದಾಣಿಕೆ, ಪಾವಿತ್ರ್ಯತೆ, ಸತ್ಯ
ಊರ್ಮಿಳೆಯ ಕಾಯುವ ತಾಳ್ಮೆಯ ಸೆಳೆತ
ಕೈಕೇಯಿಯ ಮಾತೃ ಪ್ರೇಮದ ರಗಳೆ
ಮಂಥರೆಯ ಮನೆ ಮನೆತನದ ಪ್ರೀತಿಯ ಕಳೆ
ಅಕ್ಕನ ವಚನಗಳು ಸುರಿಸಿದ ಮಳೆ
ಸಾಯಿಸುತೆಯವರ ಕಾದಂಬರಿಗಳ ಕನಸು
ಕಿರಣ್ ಬೇಡಿಯವರ ಧೈರ್ಯ ಸಾಹಸ
ನಾಟ್ಯರಾಣಿ ಶಕುಂತಲೆಯ ಕಲಾ ವೈಭವ
ಬೆಲೆ ಕಟ್ಟಲಾಗದ ಅಮ್ಮನ ಪ್ರೀತಿಯ ಅಮೃತ
ಕೈ ಹಿಡಿದು ನಡೆಸುವ ಅಕ್ಕನ ಕಾಳಜಿ
ತುತ್ತು ಕೊಟ್ಟು ಸಾಕಿದ ಅಜ್ಜಿಯ ಹಿತನುಡಿ
ಮುತ್ತು ನೀಡಿ ಬೆಳೆಸಿದ ತಂಗಿಯ ಅಕ್ಕರೆ
ಹೆಣ್ಣಿಲ್ಲದೆ ಮಣ್ಣಿಲ್ಲ ಹೊನ್ನಿಲ್ಲ ಕತೆಯಿಲ್ಲ
ಹೆಣ್ಣಲ್ಲದೆ ಬಣ್ಣ ವೈಯ್ಯಾರದ ಒನಪಿಲ್ಲ
ಭಾರತಿಯೂ ಮಹಿಳೆ, ಭುವನೇಶ್ವರಿ ಸಹಿತ
ದೇವಿಯ ಶಕ್ತಿಯಲಿ ಭಸ್ಮಾಸುರನೂ ಭಸ್ಮ
ಬಾಳಿ ಬದುಕಬೇಕಿದೆ ಹೆಣ್ಣು ಕೂಸುಗಳು
ಇರಿತ ಅತ್ಯಾಚಾರ ಕೊಚ್ಚಿ ಕೊಚ್ಚಿ ಕೊಲೆ !
ಘೋರ ನರಕದ ಬದುಕು ತುಂಡಾಗಿ
ಕಲಿತಷ್ಟು ಸಣ್ಣ ಮಾನವ ಬುದ್ಧಿ ಇಂದು
ಬೇಕಿದೆ ಸ್ವಚ್ಛ ಸುಂದರ ಮಾನಸಿಕ ಪರಿಸರ
ಹೊಡೆದಟ್ಟ ಬೇಕಾಗಿದೆ ವಿಕೃತ ರೋಗಗಳ
ಮೊಬೈಲ್ ಮಾಯೆಯೋ, ತಾಂತ್ರಿಕ ಬದುಕೋ
ಮಹಿಳೆಗೆ ಬೇಕಿದೆ ಒಂದಿಷ್ಟು ಸಾಂತ್ವನ..
@ಹನಿಬಿಂದು@
10.09.2024