ನೀನಿರಬೇಕಿತ್ತು ಜೊತೆಗೆ
ಅನ್ನಿಸುತ್ತದೊಮ್ಮೊಮ್ಮೆ ಸಂಜೆಯ ಸಂಧ್ಯಾರತಿ ವೀಕ್ಷಿಸಲು ಹೊರಟಾಗ ಕೈಗೆ ಕೈ ಬೆಸೆದು, ಬೆರಳ ಸಂಧಿಯೊಳಗೆ ಬೆರಳುಗಳ ಜೋಡಿಸಿ ನಡೆಯಲು ನೀನಿರಬೇಕಿತ್ತು ಜೊತೆಗೆ...
ಅನ್ನಿಸುತ್ತದೊಮ್ಮೊಮ್ಮೆ ಮಲಗಿ ನಿದ್ರಿಸಲು ಬಂದಾಗ ತಲೆದಿಂಬಿನಂತೆ ತಲೆಯಿಟ್ಟು ಮಲಗಿಸುವ ಕೈಗಳನ್ನು ಚಾಚಿ ಅಪ್ಪಿ ಮುದ್ದಿಸಲು ನೀನೇರಬೇಕಿತ್ತು ಜೊತೆಗೆ..
ಅನ್ನಿಸುತ್ತದೊಮ್ಮೊಮ್ಮೆ ಅಲಂಕಾರ ಮಾಡಿಕೊಂಡು ಕನ್ನಡಿ ನೋಡುತ್ತಿರುವಾಗ ಎವೆಯಿಕ್ಕದೆ ನೋಡಿ ಹಿಂದಿನಿಂದ ಬಂದು ತಬ್ಬಿ ಮುದ್ದಾಡಲು ನೀನಿರಬೇಕಿತ್ತು ಜೊತೆಗೆ..
ಅನ್ನಿಸುತ್ತದೊಮ್ಮೊಮ್ಮೆ ಎದೆಯಲ್ಲಿ ಬಚ್ಚಿಟ್ಟ ಹಲವಾರು ಮಾತುಗಳ ಪೋಣಿಸಿ ಮಾಲೆ ಕಟ್ಟಿ ಕೊರಳಿಗೆ ತೊಡಿಸಲು ನೀನಿರಬೇಕಿತ್ತು ಜೊತೆಗೆ..
ಅನ್ನಿಸುತ್ತದೊಮ್ಮೊಮ್ಮೆ ಬಿಸಿಲು ಹೋಗಿ ಗುಡುಗು ಸಿಡಿಲುಗಳ ಜೊತೆ ಮಳೆ ಬರುವ ಸಮಯದಲಿ ಭಯವ ಓಡಿಸುವ ಬೆಳಕಾಗಿ ನೀನಿರಬೇಕಿತ್ತು ಜೊತೆಗೆ..
@ಹನಿಬಿಂದು@
02.05.2026
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ