ಕಥೆಯದು ಜೀವನ ಆಗಲು ಬಹುದೇ
ಜೀವನ ಕಥೆಯು ಕೇಳಣ್ಣ
ಕಥೆಯೊಳಗಿನ ತಿರುಳನು ಕೇಳಲು ಕಥೆಯು
ನೋವಿನ ಪಾಡಿದು ನೋಡಣ್ಣ
ಕಥೆಯದು ಮಾನವ ನೋಡಿದ್ದು ಕೇಳಿದ್ದು
ಬದುಕದು ದೇವನ ಕನಸಣ್ಣ
ಬದುಕಲಿ ಘಟನೆಯು ಹೀಗೆಯೇ ಇರುವುದು
ಎನುವುದ ಅರಿತವ ಯಾರಣ್ಣ
ಬದುಕನು ಕಂಡು ಕಥೆಯನು ಬರೆದನು
ಕವಿಯದು ಇಂದು ನಿನ್ನೆಯಲಿ
ಬಾಳಿನ ಕ್ಷಣವನು ಅರಿಯದೇ ಹೋಗುವ
ಮಾನವ ಮುಂದಿನ ನಿಮಿಷದಲಿ
ಬಾಳಿನ ಪಾಠವ ಕಲಿಸಲು ಕಥೆಗಾರ
ಹೇಳುವ ತರತರ ಕತೆಗಳನು
ಪಾಪ ಪುಣ್ಯಗಳ ಲೆಕ್ಕವ ಭರಿಸಿ
ಕೊಡುವನು ದೇವನು ಬದುಕನ್ನು
@ಹನಿಬಿಂದು@
21.05.2026
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ