ಸೋಮವಾರ, ಮೇ 4, 2026

ಗೆಳತಿಯಿರಬೇಕು

ಗೆಳತಿಯಿರಬೇಕು

ಕಷ್ಟ ಸುಖಗಳ ಹೇಳಿ ಮನಸನ್ನು ಹಗುರವಾಗಿಸಲು ಹತ್ತಿರದ ಒಬ್ಬಳು ಗೆಳತಿಯಿರಬೇಕು
ತಲೆ ಸಿಡಿದು ಒಡೆದು ಹೋಗುವುದೆಂಬ ತಲೆಬಿಸಿಯ ಸಮಯದಲಿ ಮನ ತಣ್ಣಗಾಗಿಸಲು ಒಂದು ಗೆಳತಿಯಿರಬೇಕು

ನಮ್ಮ ಬೇಗುದಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸಿ ಪರಿಹಾರ ಸೂಚಿಸಲು ಒಬ್ಬ ಗೆಳತಿಯಿರಬೇಕು
ನೋವಿನ ಎಲೆಗಳ ನಡುವೆ ಸಂತಸದ ಪಾಯಸವ ಉಣಿಸಲು ಮುಗ್ಧ ಮನದ ಒಬ್ಬ ಗೆಳತಿಯಿರಬೇಕು

ತಲೆಯೆಲ್ಲಾ ಹನ್ನೆರಡಾಣೆ ಆಗಿಹೋಗಿದೆ, ನೆಮ್ಮದಿ ಬೇಕೆನುವ ಕಾಲಕ್ಕೆ ಒಬ್ಬ ಗೆಳತಿಯಿರಬೇಕು
ನಮ್ಮ ಮುದ್ದು ಮಗುವಿನ ತುಂಟಾಟವನ್ನೆಲ್ಲ ತಪ್ಪದೆ ತೋರಿಸಿ ಮನ ಸಂತಸಪಡಿಸಿಕೊಳ್ಳಲು ಒಬ್ಬ ಗೆಳತಿಯಿರಬೇಕು

ನಿನ್ನಿಂದ ನಾನೇನು ಕಡಿಮೆಯಿಲ್ಲ, ನನಗೆ ನೀನೇ ಬೇಕು, ನೀನಿದ್ದರೆ ಸಾಕೆನಗೆ ಎನುವ ಗೆಳತಿಯಿರಬೇಕು
ಕಣ್ಣಿಂದ ಕಾಣದಿದ್ದರೂ ನಮ್ಮನ್ನು ಸಂಪೂರ್ಣ ನಂಬಿರುವ ಬಿಚ್ಚು ಮನಸ್ಸಿನ ಒಬ್ಬ ಗೆಳತಿಯಿರಬೇಕು

 ನರಿ ಕೋಳಿ ಕುರಿ ನಾಯಿ ಏನೇ ಬೊಗಳಲಿ ಕ್ಯಾರೇ ಅನ್ನದಿರುವ ಒಬ್ಬ ಗೆಳತಿಯಿರಬೇಕು
ನಾಲ್ಕು ಜನ ನಮ್ಮನ್ನು ದೂರುವಾಗ ಮನುಷ್ಯ ಅಂದರೆ "ನೀನು ಕಣೋ" ಎನ್ನುವ ಗೆಳತಿಯಿರಬೇಕು

ನಾವೇನು ನಮ್ಮ ಶಕ್ತಿಯೇನು ಎಂಬುದರ ಅರಿವಿಲ್ಲದ ನಮಗೆ ನಮ್ಮ ಶಕ್ತಿಯನ್ನು ತೋರಿಸಿಕೊಡಲೊಂದು ಗೆಳತಿಯಿರಬೇಕು
ಬಂಜರಾದ ಗಾಢ ಮರುಭೂಮಿಯಲ್ಲಿ ಓಯಸಿಸ್ ಇದ್ದಂತೆ ಬೆಂಗಾವಲಾಗಿ ನೆಲೆ ನಿಲ್ಲಿಸುವ ಬದುಕಿಗೆ ಒಬ್ಬ ಗೆಳತಿಯಿರಬೇಕು
@ಹನಿಬಿಂದು@
04.05.2026

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ