ಮಂಗಳವಾರ, ಮೇ 5, 2026

ಗಝಲ್

ಗಝಲ್

ನಿನ್ನೊಲವ ಮೂಟೆಯನು ಬರಿದಾಗಿಸದಿರು ಮನವೇ
ನನ್ನುಸಿರ ಉಸಿರಿಗೆ ಉಸಿರಾಗಿರು ಮನವೇ.. 

ಪ್ರೀತಿಯ ದಾಹದಲಿ ಹಂಬಲಿಸುವ ಹಸಿದ ಹೊಟ್ಟೆಗಳೆಷ್ಟೋ.. 
ಪ್ರೇಮದಲಿ ಅರಳಿದ ಹೂವು ಬಾಡದಿರು ಮನವೇ.. 

ನೋವ ಕಳೆದು ಹಿತ ನೀಡುವ ಔಷಧ ಅಕ್ಕರೆ
ಕಾವು ಕೊಟ್ಟು ಸದಾ ಕಾಪಾಡುತಿರು ಮನವೇ

ನದಿಯ ತಟದಲಿ ನಿಂತು ನೀರಿಗೆ ಕಲ್ಲೆಸೆಯುವ ಕಾರ್ಯ ಸಾಗದಿರಲಿ
ಕದಿಯ ಬಂದಿರುವೆ ಹೃದಯ, ಮುಚ್ಚಿಡದಿರು ಮನವೇ

ಹನಿ ಹನಿಯ ಆಸೆಯಲಿ ಬರಡಾದ ನೆಲದ ದನಿ ಇದು 
ಹನಿಬಿಂದುವಿನ ಬದುಕಿನಲಿ ನಲಿವ ಕನಸು ಮುದುಡದಿರು ಮನವೇ.. 
@ಹನಿಬಿಂದು@
06.05. 2026

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ