ಗುರುವಾರ, ಮೇ 7, 2026

ನಂಬಿಕೆ

ಕಳೆದು ಹೋದ ನಂಬಿಕೆ
ಬರಲದು ಕಷ್ಟವು
ಗಳಿಸಲು ಬೇಕು ಹೊಸ ಸ್ನೇಹ
ಮರುಕಳಿಸದು ಪುನಃ
ನಂಬಿಕೆ ಪುನರಪಿ
ಬದುಕಿನ ಬೇರಿದು ಕಾಣಾ

ನಂಬಿಕೆ ಬದುಕು ಪಾದದ ಸ್ಪರ್ಶ
ಪ್ರೀತಿಯ ಸಿಂಚನ ತಮ್ಮ
ಗಂಗೆಯ ಹಾಗೆ ಧುಮುಕುತ ಬಂದು
ನೀತಿಯ ಕಲಿಸುವುದು ಅಮ್ಮ

ಹೊಸ ಹೊಸ ಜನರ
ಪರಿಚಯ ಜಗದಿ
ಬಾಳದು ಒಂದೇ ಕಡೆಗಿರದು
ಹಳಬರ ಮರೆತು ಹೊಸದಿನ ಕಳೆವುದು
ಬಾಳಿನ ದಿಕ್ಕಿನ ಬದಲು
@ಹನಿಬಿಂದು@


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ