ಗುರುವಾರ, ಜೂನ್ 28, 2018

344. Poem-you

You

Your cool voice provokes me
Your faithful words support me

Your presence strengthens me
Your pure love uplifts me

Your care gives happiness to me
Your cute smile evokes me...

Your  mentality supports me
Your every new ideas enlighten me..

Your hopeful talk interests me
Your life share brightens me...

@PREM@

343. ಕವನ-ನಾನೆ ಪ್ಲಾಸ್ಟಿಕ್

ನಾನೇ ಪ್ಲಾಸ್ಟಿಕ್

ನಿಮ್ಮಯ ಕೈಯಲಿ ನಾನೇ ಮೆರೆವೆ
ಜಗತ್ತಿನ ಮೊದಲನೆ ಸ್ಥಾನದಲಿರುವೆ
ನಿನ್ನಗತ್ಯಕೆ ನಾನೇ ಬರುವೆ
ನನ್ನ ಬಿಟ್ಟು ನೀ ಹೇಗಿರುವೆ...

ಪ್ರಪಂಚವನೆ ನಾ ಆಕ್ರಮಿಸಿರುವೆ
ನಿನ್ನೊಡಲಲೆ ಮೆರೆದು ನಿನ್ನನೆ ಕೊಲುವೆ
ದನ-ಕರು ಪಕ್ಷಿಯ ನಾ ಬಿಡಲಾರೆ
ಹೊಟ್ಟೆಯ ಸೇರಿ ಹೊರಬರಲಾರೆ...

ನಿನ್ನಯ ಬುದ್ಧಿಯ ಮಗು ನಾನಾಗಿರುವೆ
ಯೋಚಿಸಿ ಬಳಸು, ಪರಿಸರ ಕೆಡಿಸುವೆ
ನಿನ್ನಯ ಮಕ್ಕಳ ಬದುಕನು ನೆನೆದು
ತಡೆ ನನ್ನನು ಮರುಬಳಕೆ ಪಡೆದು..

ನನ್ನನು ಬಿಸುಟರೆ ಪರಿಸರಕೆ ಮಾರಕ
ನನ್ನನು ಸುಟ್ಟರೆ ಶ್ವಾಸಕೋಶಕೆ ಕಂಟಕ
ಕರಗಲು ಆಗದ ಜೀವವ ಬಿಡದ
ನನ್ನಯ ಜೀವನ ನಿನ್ನಯ ಶ್ರಾದ್ಧ!!!

@ಪ್ರೇಮ್@

342. ಕವನ-ವನ

ವನ

ನವವನವಾಗಿದೆ ಬೆಳೆದು ತಳಿರು
ಸುಖತನ ತಂದಿದೆ ಪಡೆದು ನೀರು
ರವಿ ಕಿರಣವ ತಡೆದು ಹಾಕುತ
ಜೀವಕೆ ಬೇಕಾದ ಗಾಳಿಯ ನೀಡುತ..

ಸಾಗಿದೆ ಬದುಕು ಪಕ್ಷಿಗೆ ಆಸರೆ
ಪುಟಾಣಿ ಜೀವಿಯು ನನ್ನದೆ ಕೈಸೆರೆ
ಇಲ್ಲವು ಯಾವುದೇ ಭಯದ ಬದುಕು
ಆರಾಮ ನನ್ನಲಿ ಎಲ್ಲರ ಮನಕು..

ಕಡಿಯದಿರೆನ್ನ ತಲೆ-ಬುಡ ಎಲ್ಲವ
ಜಲ ಹಿಡಿದಿಡಿವೆ, ಗಾಳಿಯನೀವೆ
ಸೂರ್ಯನ ತಡೆದು ತಂಪನೆ ತರುವೆ
ಮೋಡವ ತಡೆದು ವರುಣನ ಕರೆವೆ...

ಮಾನವ ಜಾತಿಯು ಬೆಂಕಿಯ ಹಾಗೆ
ಸುಡುವುದು ನಮ್ಮಯ ಜೀವನ ಸರಾಗ
ತಾಯಿಯ ಕೊಲ್ಲುವ ಮಾದರಿ ಅವರದು
ಹಸಿರುಳಿಯಲು ಬೇಕು ಕರುಣೆ ಎಂದೂ...

@ಪ್ರೇಮ್@

342. ಕವನ-ದಿಯಾ-2

ದಿಯಾ

ನನ್ನ ಬಾಳ ಮುಗ್ಧ ಬೆಳಕು
ಬಂದಾಗಿಂದ ಬದುಕೆ ಝಳಕು
ಹೆಚ್ಚು ಮಾತು ಸಣ್ಣ ನಗೆಯು
ಕಳೆಯುವುದು ಎಲ್ಲ ದಗೆಯು..

ಮಗುವು ಹುಟ್ಟಿದಾಗಲಂತು
ತಂದೆ-ತಾಯಿಗಾನಂದ ತಂತು
ಹೆಣ್ಣು-ಮಗುವೆ ಬೇಡ ಎಂದ
ಅಜ್ಜಿಯೂ ಹೇಳಿದ್ದು 'ಅಂದ'.

ಆಟ-ಪಾಠ ಕೂಟ ಎಲ್ಲಾ
ಮಕ್ಕಳದು ಚಂದವೇ ಅಲ್ವಾ
ಮೈಮರೆತು ಬಿಟ್ಟೆ ನಾನು
ನನ್ನ ಹೃದಯ ಹಾಲು-ಜೇನು..

ಕಣ್ಣಿನಲಿ ಕಣ್ಣ ಇಟ್ಟು
ನೋಡುವೆನು ನನ್ನೇ ಅಡವಿಟ್ಟು
ನನ್ನ ಕಣ್ಣ ಬೆಳಕು ಇವಳೇ
ಹಾಡಲಿಕ್ಕೆ ಇಲ್ಲ ಸಾಲೇ..
@ಪ್ರೇಮ್@

341.ಕವನ-ದಿಯಾ-1

ದಿಯಾ

ಬಾಳಲೆಂದೂ ಬೇಕು ನಗು
ಬದುಕಿನಲ್ಲಿ ಬೆಳಕು ಮಗು
ನನ್ನ 'ದಿಯಾ' ಮನದ ಬೆಳಕು
ಹೃದಯಕಾಸರೆ ದಿನದಿನಕು..

ಮುಗ್ಧವಾದ ತೊದಲು ನುಡಿ
ಅಂದವಾದ ಕರುಳ ಕುಡಿ
ನನ್ನ ಮಗಳು ನನ್ನ ಜೀವ
ಮರೆಸುವಳು ಎಲ್ಲ ನೋವ...

ಬರೆದು ಮುಗಿಯಲಿಕ್ಕೆ ಇಲ್ಲ
ಅಪರೂಪದ  ಕ್ಷಣಗಳೆಲ್ಲ
ಹಲವು ಬಾರಿ ನಾನೆ ಮಗುವು
ಅವಳೆ ಮುದ್ದು ತಾಯಿಯು..

ಅಮ್ಮನಂತೆ ಸೀರೆ ಬೇಕು
ಅಪ್ಪನಂತೆ ರುಮಾಲು ಸಾಕು
ಅಜ್ಜನಂತೆ ಲುಂಗಿ ಹಾಕು
ಅಮ್ಮನಿಗೆ ಸಾಕೋ ಸಾಕು..
@ಪ್ರೇಮ್@

340. ಕವನ-ಬದುಕ ಮಾಲೆ

ಮಾಡರ್ನ್ ಕವನ

ನನ್ನ ಬದುಕ ಮಾಲೆ

ನನ್ನ ಬದುಕ ಮಾಲೆಯಲ್ಲಿ
ಫ್ರೆಂಡ್ಸ್ ಸಾಲೆ ಜಾಸ್ತಿಯಿಲ್ಲಿ
ಗೆಸ್ಟ್ -ನೆಂಟರಿಹರು ಅಲ್ಲಲ್ಲಿ
ಕ್ಲಾಸ್ ಮೇಟ್ಸ್ ಹೋದಲ್ಲಿ...

ಲೈಫು ಒಂದು ಪೆನ್ ನಂತೆ
ಗೀಚುವುದು ಲೈನ್ಸ್ ಗಳ
ಹೊಸ ಎಕ್ಸ್ ಪೀರಿಯೆನ್ಸ್  ಕ್ಷಣ ಕ್ಷಣವೂ
ನಮಗೆ ಲರ್ನಿಂಗ್ ಬೇಕು ಮಕ್ಕಳಂತೆ..

ಬಾಳ ಬಂಡಿಯಲ್ಲಿ ಹೂವು-
ಮುಳ್ಳುಗಳ ಬಿಗ್  ಸಂತೆ
ಪುಷ್ಪಗಳನೆ ಸೇರಿಸಿ ಮಾಲೆ ಮಾಡುವಂತೆ
ಬದುಕ ಬಿಲ್ಡ್ ಮಾಡಬೇಕು ಗಟ್ಟಿಯಂತೆ.

ಏಳು-ಬೀಳು ಎಲ್ಲ ಇಹುದು
ಬದುಕ ರೋಡ್ ಸಾಗುತಿಹುದು
ಏನೆ ಬರಲಿ,ಎಷ್ಟೆ ಇರಲಿ
ವರ್ಕ್ ಮಾಡ ಬೇಕಾಗುವುದು..
@ಪ್ರೇಮ್@

ಮಂಗಳವಾರ, ಜೂನ್ 26, 2018

339. ಬಣ್ಣಗಳಾಟ-ಕವನ

ಬಣ್ಣಗಳಾಟ

ಮನದೊಳಿರೆ ಬಿಳಿಯ ಬಣ್ಣ
ಖ್ಯಾತನಾಗುವೆ ನೀನು ಅಣ್ಣ..
ಕೆಂಪು ಕಣ್ಣಿಗೆಂದೂ ತಂಪು
ಹಾಕುತಿರಲು ಮನಕೆ ಇಂಪು..

ಕಪ್ಪು ಎಲ್ಲವನ್ನು ನುಂಗಿ
ತಾನೆ ಮೆರೆವ ಭಟ್ಟಂಗಿ
ಹಸಿರು ತಾನು ಜಗದಲಿರಲು
ಉಸಿರಿಗಾಗಿ ಗಾಳಿ ಸಿಗಲು..

ಹಳದಿಯದೋ ಸಿಂಗಾರಕೆ
ನೇರಳೆಯು ಕಣ್ಣಾಸೆಗೆ
ಊದಾ ಬೂದಿ ಬಣ್ಣವದು
ಕಡಿಮೆಯಿಲ್ಲ ಶೋಕಿಗೆ..

ನೀಲಿಯು ಬಾನು-ಸಾಗರ
ಹಾಳಾಗದಿರೆ ಬದುಕಿನಾಗರ
ಕೇಸರಿಯು ದೇವರ ದ್ಯೋತಕ
ಸಾಧನೆಯ ಸಂಕೇತ ಸೂಚಕ..

ಕಾಮನ ಬಿಲ್ಲ ಬಣ್ಣಗಳೇಳು
ಬಿಂಬಿಸುವವು ಬದುಕಿನ ಏಳು-ಬೀಳು
ಒಗ್ಗಟ್ಟಿಗಿದೆ ಮಹಾನ್ ಶಕ್ತಿ
ಬಳಸಬೇಕು ಉವಪಯೋಗಿಸಿ ಯುಕ್ತಿ...
@ಪ್ರೇಮ್@

338.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-1

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ...

ಮಳೆಗಾಲ ಬಂದಾಯ್ತು.ನಮ್ಮ ಹಳ್ಳಿಯ ರೈತರಿಗೆ ಒಂದಿಷ್ಟು ಆರಾಮದ ಕಾಲ. ಹಪ್ಪಳ, ಸೆಂಡಿಗೆ ಮಾಡಿಟ್ಟದ್ದನ್ನು ಒಲೆ ಬುಡದಲ್ಲಿ ಕುಳಿತು ಮೆಲ್ಲುವ ಕಾಲ ಹೋಗಿದೆಯಾದರೂ ಗ್ಯಾಸ್ ಸ್ಟವ್ ಪಕ್ಕದಲ್ಲಿ ನಿಂತುಕೊಂಡು ತಿನ್ನುವ ಕಾಲ ಉಳಿದುದಕ್ಕೆ ಖುಷಿ ಪಡಬೇಕೇನೋ...
ಎಲ್ಲರೂ ಎದ್ದು ಬಂದು ತಮ್ಮ ಬೆಳಗಿನ ಕೆಲಸಗಳನ್ನೆಲ್ಲ ಮುಗಿಸಿ, ಒಟ್ಟಾಗಿ ಒಲೆ ಹತ್ತಿರ ಕುಳಿತು ಅಮ್ಮ ಮಾಡಿಕೊಟ್ಟ ಬಿಸಿ ಬಿಸಿ ಚಹಾ ಸಿಪ್ ಮಾಡುವ ಕಾಲ ಮಾಸಿ ಹೋಗಿದ್ದರೂ ನೆನಪು, ಕಂಪು ಮಾಸಲಿಲ್ಲ ಅಲ್ಲವೇ? ಈಗಿನ ಮಾಡ್ ಅಮ್ಮಂದಿರಿಗೆ ಒಲೆಯಲ್ಲಿ ಅಡಿಗೆ ಮಾಡಲು ಟೈಂ, ಪೇಶೆನ್ಸ್ ಎರಡೂ ಇಲ್ಲ! ಸೌದೆಯೂ ಇಲ್ಲ, ಇದ್ದರೆ ಇಡಲು ಜಾಗವೂ ಇಲ್ಲ!
ಮಗನಿಗೆ ಕಾಲೇಜಿಗೆ ಲೇಟಾಗುತ್ತದೆ,ಮಗಳಿಗೆ ಬಸ್ ತಪ್ಪಿ ಹೋಗುತ್ತದೆ, ಗಂಡನಿಗೆ ಕೆಲಸಕ್ಕೆ ಲೇಟಾಗುವ ಈ ಸಮಯದೊಡನೆ ಓಡುವ ಕಾಲದಲ್ಲಿ ಜೋಕ್ ಮಾಡ್ತಾ ಚಹ ಕುಡಿಯುವ ಕಾಲ ಓಡಿ ಹೋಗಿ ತುಂಬಾ ಟೈಮಾಯ್ತೇನೋ.. ಈಗ ಇರುವ ಟೈಮನೆಲ್ಲಾ ಮೊಬೈಲ್, ಕಂಪ್ಯೂಟರ್ ಗಳು ನುಂಗಿ ಹಾಕಿ, 24ಗಂಟೆ ಸಾಲದಾಗಿದೆ.. ಸೂರ್ಯ ಸಂಜೆ ಮುಳುಗುವುದು ನಿಲ್ಲಿಸುವೆನೆಂದರೂ ಜನ ಬೇಡವೆಂದೆನಲಿಕ್ಕಿಲ್ಲ!
ಕೆಲವರಿಗಂತೂ ಎ.ಸಿ.ಕೋಣೆಯೊಳಗೆ ಹೊಕ್ಕಿಕೊಂಡರೆ ಹಗಲು -ರಾತ್ರಿ ಎಂದರೇನೆಂದೇ  ತಿಳಿಯದು.ಹಲವಾರು ಮಕ್ಕಳಿಗೆ ಸೂರ್ಯನೆಂದರೇನು, ಸೂರ್ಯೋದಯ ಸೂರ್ಯಾಸ್ತ ಎಂದರೂ ಕಣ್ ಕಣ್ ಬಿಡುತ್ತಾರೆ!
ಹಾಲು ಪ್ಯಾಕೆಟ್ ಫ್ರಿಜ್ನಿಂದ ಬರುತ್ತದೆ,ಅಂಗಡಿಯಲ್ಲಿ ಸಿಗುತ್ತದೆ , ನಮಗೆ ಬೇಕಾದ ವಸ್ತುಗಳ ಮೂಲ ಅಂಗಡಿ! ನಮ್ಮ ಮಕ್ಕಳು ಸಿಬಿಎಸ್ಸಿ, ಐಸಿಎಸ್ಸಿ ಕಲಿಯುತ್ತಾ ಎ ಪ್ಲಸ್ ಗ್ರೇಡ್ ಪಡೆಯುತ್ತಿದ್ದಾರೆ, ನಾಲ್ಕು ಕನ್ನಡ ಗಾದೆಗಳು ಗೊತ್ತಿಲ್ಲ, ಮಹಾಭಾರತ,ರಾಮಾಯಣದ ಸರಳ ಪುಸ್ತಕಗಳನ್ನೂ ಓದಿಲ್ಲ! ಇದಕ್ಕೆ ಯಾರು ಹೊಣೆ? ನೆಂಟರು ಬಂದರೂ ಮಾತನಾಡಿಸದೆ ತಮ್ಮಷ್ಟಕ್ಕೆ ತಾವೇ ಇರುವ ಮಕ್ಕಳನ್ನು ಬೆಳೆಸಿದ್ದು ಯಾರು? ಪ್ರೀತಿ,ಪ್ರೇಮದ ಕವನ,ಕತೆ,ಧಾರಾವಾಹಿ, ಸಿನೇಮಾಗಳನ್ನು ಮಕ್ಕಳಿಗೆ ತೋರಿಸಿದವರು ಯಾರು? ಮಾತು ಕಲಿತಾಗಲೇ ಆಟವಾಡಲು ಗನ್ ತೆಗೆದು ಕೊಟ್ಟವರಾರು? ಸಣ್ಣ ಮಗುವನ್ನು ಕುಳ್ಳಿರಿಸಿ ಡಿಶುಂ ಡಿಶುಂ ಪಿಕ್ಚರ್ ನೋಡಿ 'ತನಗಾಗದಿದ್ದರೆ ಗುಂಡು ಹೊಡೆದು ಸಾಯಿಸು' ಎಂಬ ಕಾನ್ಸೆಪ್ಟ್ ಮೂಡಿಸಿದವರು ಯಾರು? ಇದಕ್ಕೆಲ್ಲ ಕಾರಣ ಪೋಷಕರು, ಮಕ್ಕಳೆಡೆಗೆ ಪೋಷಕ-ಪಾಲಕರ ನಿರ್ಲಕ್ಷ್ಯ. ಮಕ್ಕಳಿಗೆ ಬೇಕಾದುದು ಪ್ರೀತಿ-ವಿಶ್ವಾಸ,ಕೇರ್! ನಮಗಿಲ್ಲ ಸಮಯ! ಅಪ್ಪ ಕೆಲಸದಲ್ಲಿ, ಅಮ್ಮ ಧಾರಾವಾಹಿ ನೋಡುವುದರಲ್ಲಿ ಬ್ಯುಸಿ...ಇನ್ಯಾರು ಕೇರ್ ಮಾಡುವವರು? ಹೇಳಿ ಕೊಡುವವರು..ಅಜ್ಜಿ -ಅಜ್ಜಂದಿರನ್ನು ತಂದೆ ತಾಯಿಯರೇ ಮೂಲೆಗುಂಪು ಮಾಡಿರುವಾಗ ಅವರಿಗೆ ಮೊಮ್ಮಕ್ಕಳು ಬೆಲೆ ಕೊಡುವರೇ? ಇಷ್ಟೆಲ್ಲಕ್ಕೂ ಪೋಷಕರು ತಮ್ಮ ಮಕ್ಕಳೆಡೆಗೆ ಸಾಕಷ್ಟು ಸಮಯ, ಪ್ರೀತಿ,ತ್ಯಾಗ, ಕೇರ್ ನೀಡಬೇಕು.ಆಗ ಮಾತ್ರ ಮುಂದಿನ ಜನಾಂಗ ಉತ್ತಮವಾಗಿ ನಮ್ಮನ್ನು ನೋಡಿಕೊಳ್ಳಲು ಸಾಧ್ಯ! ಮಕ್ಕಳು 90% ಕಲಿಯುವುದು ತಮ್ಮ ಹಿರಿಯರನ್ನು ಅನುಕರಿಸಿ!! ನೆನಪಿರಲಿ, ಪೋಷಕರಾಗಿ ಉತ್ತಮ ಸಮಾಜ ನಿರ್ಮಿಸೋಣ. ನೀವೇನಂತೀರಿ?
@ಪ್ರೇಮ್@

ಸೋಮವಾರ, ಜೂನ್ 25, 2018

337.ನನ್ನ ಕವನ

ಕರುಳಬಳ್ಳಿ

ನನ್ನ ಎದೆಯ ಭಾವದಿಂದ
ಇಳಿದ ಕರುಳ ಬಳ್ಳಿ..
ಹೃದಯದಿಂದ ಕೈಗೆ ಇಳಿದ
ಹಾಡು ಇದೆ ಇಲ್ಲಿ..

ಜಪವು ತಪವು ಬೇಡವದಕೆ
ಮನದಿ ನಿತ್ಯ ನರ್ತನ
ಭವದ ದ್ವಾರ ಸರಿಸಿ ಬಂತು
ಕಾವ್ಯ ಧಾರೆ ಕೀರ್ತನ..

ನನ್ನ ಕವನ ನನ್ನ ಮಗುವು
ಬಂದು ನಲಿಯುತಿರುವುದು
ಮೇಲೆ ಕೆಳಗೆ ಜಗ್ಗಿ ನನ್ನ
ಆಟವಾಡುತಿರುವುದು..

ಬಾಳಿನಲ್ಲಿ ಒಂಟಿತನವ
ದೂರ ಸರಿಸುತಿರುವುದು
ಪದಗಳೆಲ್ಲ ಒಟ್ಟು ಸೇರಿ
ಆಟವಾಡುತಿರುವುದು..
@ಪ್ರೇಮ್@

Prem ma'am my hearty Congratulations for this beautiful composition.. Really I am not getting words to express my happiness but one thing I can say, I am listening it again and again.. It touched my heart and while listening, I just remembered all my poems.. You compared poem with child, beautiful comparison!! .. Personally I love this poem.. Awesome composition and I can't forget to mention the name of Pramila mam because your poem is glittering in her voice.. Hats off ma'am 👌🏻👌🏻

336.ಕವನ-ಗಾಳಿಯಲಿಟ್ಟ ದೀಪ

ಗಾಳಿಯಲಿಟ್ಟ ದೀಪ

ಬದುಕ ಭಾಗವು ಅಲ್ಪ
ಗಾಳಿಯಲಿಟ್ಟ ದೀಪ!
ಎಷ್ಟುರಿವುದೋ ಎಂತೋ
ಬಲ್ಲವರಿಲ್ಲ ಕಾಯಕಲ್ಪ...

ಬಾಳಲಿ ಆಗಾಗ ಇರಲಿ
ಸರ್ವ ಜನಸೇವೆ ಅಲ್ಪ
ಮಾಡಲಾಗದಿದ್ದರೂ ಬಹುತೇಕ
ಸಾಧಿಸಬೇಕು ಸ್ವಲ್ಪ!

ನಮಗಾಗಿ ಇತರರಿಗಾಗಿ
ಮಾಡಬೇಕು ಜಪ
ಒಳ್ಳೆ ಕಾರ್ಯವಾಗಬೇಕು
ನಮ್ಮ ನಿತ್ಯದ ತಪ..

ತನ್ನಲಿದ್ದುದರಲಿ ಇತರ
ಜನರೊಡನೆ ಹಂಚಿಕೊಳ್ಳತ
ಬಾಳ ಬಂಡಿಯಲಿ
ಸಂತಸವಿರಲಿ ಅನವರತ..

@ಪ್ರೇಮ್

ಭಾನುವಾರ, ಜೂನ್ 24, 2018

335. ಭಾವಗೀತೆ-ಭೂಮಿ ಸೊರಗಿದೆ

1. ಭೂಮಿ ಸೊರಗಿದೆ

ಭೂಮಿ ತಾಯ ಅಂದದಲ್ಲಿ
ಹಸಿರ ಕೊರತೆಯಾಗಿದೆ..
ದಟ್ಟ ಕಾಡು ಮಾಯವಾಗಿ
ಬಿಳಿಯ ಭವನ ಮೂಡಿದೆ...

ಹಿರಿಯರಲ್ಲು ಕಿರಿಯರಲ್ಲು
ಹಸಿರ ಒಲವು ಕುಗ್ಗಿದೆ
ತಾನು ಮಾಡೊ ಕಾರ್ಯದಲ್ಲಿ
ಹಣದ ದಾಹ ಹೆಚ್ಚಿದೆ...

ತಮ್ಮ ಕಾಲ ಬುಡಕೆ ತಾವೇ
ಕೊಡಲಿ ಹಾಕಿದ್ಹಾಗಿದೆ..
ಮರವನೆಲ್ಲ ಕಡಿದು ಮಹಾ
ಹಾದಿ ಬಂದು ಮಲಗಿದೆ..

ಮುಂದೆ ಬರುವ ಜನಾಂಗಕ್ಕೆ
ಗಾಳಿ ನೀರು ಎಲ್ಲಿದೆ?
ಒಳ್ಳೆ ಬದುಕ ಕಟ್ಟಲು
ವಾಯು-ಜಲದ ಬ್ಯಾಂಕು ತೆರೆಯಬೇಕಿದೆ...
@ಪ್ರೇಮ್@

334. ಕವನ-ಸಂತಸವಾಗಿರಲಿ ಬದುಕು

ಸಂತಸವಾಗಿರಲಿ ಬದುಕು

ಬರಬೇಕು ಬಾಳಲ್ಲಿ
ಬರಿದಾಗದ ಬಳುವಳಿ
ಬರ ಬಾರದೆ ಭಯವಿಲ್ಲದೆ
ಬದುಕು ಇರಲಿ ಖುಷಿಯಲಿ..

ಸಂತಸದ ಸಂಪ್ರೀತಿ
ಸಂಗಾತಿಯಾಗಿರಲೆಂದೂ
ಸವಿ ಮಾತು ಸವಿ ಗಾನ
ಸಂತೃಪ್ತಿ ತರಲೆಂದೂ..

ಮನಕೆಲ್ಲ ಮುದನೀಡುವ
ಮೌನವನು ಮರೆಯಾಗಿಸಿ
ಮನಶಾಂತಿಯ ಮರವಾಗಿಸಿ
ಮತ್ಸರವ ಮರಗಟ್ಟಿಸಿ...

ಕಂಪಿನ ಬಾಳ ಕಸರತ್ತಲಿ
ಕವಿ-ಕಲೆಯ ಕರುನಾಡಲಿ
ಕರೆಯೋಲೆಯ ಕರೆಯಂತೆ
ಕಮರಿ ಹೋಗದೆ , ಖುಷಿ ತರಲಿ!
@ಪ್ರೇಮ್@

ಶನಿವಾರ, ಜೂನ್ 23, 2018

333. ಕವನ -ಬದುಕಿನಾಟ

ಬದುಕಿನಾಟ

ನನ್ನ ಬಾಳ ಹೊತ್ತಿಗೆಯಲಿ
ಸಾವಿರಾರು ಪುಟದ ನೆನಪುಗಳು
ಸಿಹಿ -ಕಹಿಯು ಸಾಲು ಕಟ್ಟಿದಂತೆ
ಮರೆಯಲಾಗದ ಕ್ಷಣಗಳು...

ಅಮ್ಮನ ಆರೈಕೆ ಸಹಪಾಠಿಗಳ ಓಲೈಕೆ
ಮುದ್ದು ಗೆಳೆಯರ ಕೂಡುವಿಕೆ
ಬಂಧುಗಳ ಮಾತು ಅಕ್ಕ-ಪಕ್ಕದವರ ನೆರವು ಸಾಕೆ?
ಸಂಗಾತಿಯೊಲವ ಮಧುರ ಕರೆ ಬೇಕೆ?

ವಂಚನೆಯ ಮಾತಿಲ್ಲ ಸತ್ಯವೇ ಎಲ್ಲ
ಬದುಕ ಗಾಡಿಯ ಮೇಲೆ ಬೆಲೆ ಕಲಿಕೆಗಲ್ಲ?
'ಕಲಿಯುಗವು ಕಲಿಯುತಿರು"
ಎಂಬುದು ಗುರುವಿನ ಸೊಲ್ಲು!!

ಬೇಸರವ ಹೋಗಿಸಲು ಪ್ರಾಣ ಸ್ನೇಹಿತರು
ಆಗಾಗ ಕರೆಯಲು ನೆಂಟರಿಷ್ಟರು!
ಸಹಪಾಠಿ ಮಿತ್ರರ ಒಲವ ಸಹಕಾರ
ಮರೆಯಲುಂಟೆ ಗುರು-ಹಿರಿಯರ ಸಾರ?

ತಂಗಿ-ತಮ್ಮಂದಿರ ಒಡನಾಟ ಚೆನ್ನ
ಮುದ್ದು ಮಕ್ಕಳ ಜೊತೆ ಸಮಯ ಹೊನ್ನು
ವಿದ್ಯಾರ್ಥಿಗಳೊಡನೆ ಆಟ-ಪಾಠ
ಸಂಗಾತಿ ಜೊತೆ ಜೀವನದಾಟ...
@ಪ್ರೇಮ್@

ಶುಕ್ರವಾರ, ಜೂನ್ 22, 2018

338.ಕವನ-ಸರಸ ವಿರಸ

ಸರಸ-ವಿರಸ

ನನ್ನ ನಲ್ಲೆ ಬಾರೆ ಸನಿಹ
ಬರಲಾರೆ ನಾನು ನಿನ್ನ ಸನಿಹ
ಏಕೆ ಕೋಪ ನನ್ನರಸಿಯೆ
ಸರವು ಎಲ್ಲೊ ನನ್ನರಸನೆ

ಬಾರೆ ಬಳಿಗೆ ಕೊಡುವೆ ನಿನಗೆ
ತುಟಿಯ ಮುತ್ತು ಬೇಡವೆನಗೆ
ಮುತ್ತಿನ ಸರವೆ ಕೊಡುವೆ ನಿನಗೆ
ಎಲ್ಲಿಹುದದು ತರಲಿಲ್ಲ ನೀನು

ತರದೆ ಬರುವೆನೆ ನಲ್ಲೆ ನಾನು
ನನ್ನ ಮನದ ಬಯಕೆ ಅರಿಯೆ ನೀನು
ಮನದಲಿ ನೀನೆ ಇರುವೆ ಯಲ್ಲೆ ನಲ್ಲೆ ನೀನು
ನನಗೆ ಗೊತ್ತು ಕಳ್ಳ ನೀನು
@ಪ್ರೇಮ್@

ಗುರುವಾರ, ಜೂನ್ 21, 2018

337. ಹನಿ-ಲಯ

1. ಲಯ

ನಾನಿರುವುದು ಮುಗ್ದನಾಗಿ
ನನ್ನ ಕಾರ್ಯಾಲಯದಿ..
ನೀನಲ್ಲಿ ಬಂದಾಗ ನನ್ನ
ಏಕಾಗ್ರತೆಯಾಯಿತು  ಲಯ!!!

2. ನೀನೆದುರು ಬಂದಾಗ
ಲಯ ತಪ್ಪಿತು ನನ್ನ ಹೃದಯ!!
ನಿನ್ನಂದವ ನೋಡುತಲಿ
ಮಾತಾಯಿತು ಮಂಗಮಾಯ!!!
@ಪ್ರೇಮ್@

336.ಹನಿ- ಮೋಕ್ಷ

ಸುಖ

ದಿನವಿಡೀ ಕುಡಿದು ತೂರಾಡುವುದೇ ಸುಖ ಅಂದುಕೊಂಡವನಿಗೆ...
ಏನು ಗೊತ್ತು ಮನೆಮಂದಿಯ ಕಷ್ಟ?

2. ಬಾನು ಮಳೆ ಸುರಿಸಲು
ಇಳೆಗೆ ಸುಖ..
ಇವಳ ಮುಖವರಳಲು ಇನಿಯಗೆ ಸುಖ..
@ಪ್ರೇಮ್@

ಮಂಗಳವಾರ, ಜೂನ್ 19, 2018

335. ಹನಿ-ದಾಹ

1.ಬಲಿ

ಮನುಜಾ ನಿನ್ನ ತೀರದ ದಾಹಕ್ಕೆ ನಾನಾಗಿಹೆ ಬಲಿ
ನಿನ್ನ ತೀರದ ದಾಹಕ್ಕೆ ನಾನಾಗಿಹೆ ಬಲಿ!
ಆದರೇನು ನೆನಪಿಟ್ಟುಕೋ
ನಿನ್ನ ಹಸುಗೂಸುಗಳ ಬದುಕೂ
ನನ್ನಂತೆಯೇ ಬಲಿ!!!

2. ನೀರು

ಹೀಗೆಯೇ ಪೋಲು,ಮಲಿನ ಮಾಡುತ್ತಿರಿ ನೀರು
ಹೀಗೆಯೇ ಪೋಲು,ಮಲಿನ ಮಾಡುತ್ತಿರಿ ನೀರು!!
ನಾಳೆ ನಿಮ್ಮ ದಾಹ ತೀರಿಸಲೂ
ಸಿಗದು ಒಂಚೂರು..
@ಪ್ರೇಮ್@

334.ಹನಿ-ಮೋಕ್ಷ

ಮೋಕ್ಷ

ಕಾಶಿ ರಾಮೇಶ್ವರಕೆ ಹೋಗದಿರು
ಮೋಕ್ಷಕಾಗಿ ನೀ
ಕಾಶಿ ರಾಮೇಶ್ವರಕೆ ಹೋಗದಿರು
ಮೋಕ್ಷಕಾಗಿ ನೀ..
ನೋಡಿಕೋ ಮಾತಾ ಪಿತರ ಸರಿಯಾಗಿ
ಅಲ್ಲೆ ಪಡೆವೆ ಅದ ನೀ...

2.
ಮೋಕ್ಷ ಸಿಗುವುದೆಂದು ದೇವಾಲಯಗಳ ಸುತ್ತಿದರು
ಮೋಕ್ಷ ಸಿಗಲೆಂದು ದೇವಾಲಯಗಳ ಸುತ್ತಿದರು..
ತನ್ನವರ ಮರೆತು ಸತ್ತು ಎತ್ತಲೋ ಹೋದರು!!
@ಪ್ರೇಮ್@

ಭಾನುವಾರ, ಜೂನ್ 17, 2018

333. ಹನಿ-ಜೀವ

1.ಹೇಳು

ನಾನಂದೆ-ನನ್ನ ಜೀವ ನೀನೇ ಗೆಳತಿ
ನಾನಂದೆ-ನನ್ನ ಜೀವ ನೀನೇ ಗೆಳತಿ
ಅವಳೆಂದಳು- ಬೇಗ ಹೇಳು ಎಷ್ಟಿದೆ ನಿನ್ನಆಸ್ತಿ?
@ಪ್ರೇಮ್@

2. ವ್ಯತ್ಯಾಸ

ನಾನಂದೆ ನೀ ನನ್ನ ಜೀವ
ನಾನಂದೆ ನೀ ನನ್ನ ಜೀವ...
ಅವಳಂದಳು ನಾ ಉಪಯೋಗಿಸೋಲ್ಲ ಜೀವ!
ಯಾವಾಗಲೂ ಸಂತೂರ್ ನನ್ನ ಜೀವ!!!
@ಪ್ರೇಮ್@.

3.ಅಸಾಧ್ಯ

ಜೀವ ಹೋದ
ಮೇಲೆ ಖರ್ಚು
ಮಾಡಲಸಾಧ್ಯ!
ಇಟ್ಟ ಹಣವ
ಖರ್ಚು ಮಾಡಿ
ಇದೀಗಲೇ...

4. ಸಾಧ್ಯವೇ?

'ನೀನೇ ನನ್ನ ಜೀವ'
'ನನಗೆ ಜೀವ ಬೇಡ-
ಸಾಯೋಣವೇ?'
'ಸರಿ, ನಾಳೆ ಬರುವೆ'
ಮರುದಿನ ಪೋನ್-'ನಾಳೆ ಬರುವೆ..'
@ಪ್ರೇಮ್@

ಶನಿವಾರ, ಜೂನ್ 16, 2018

332. ಚಾವಡಿ ವಿಮರ್ಷೆಗಳು

[5/23, 1:08 PM] ‪+91 91415 05789‬: ಪ್ರೇಮ್ ಸರ್🙏🏼

ಭುವಿಗೆ..

ಹನಿಗವನ ತುಂಬಾ ‌ಚೆನ್ನಾಗಿದೆ.

ಎರಡನೇ ‌ ಹನಿ...

ಮದುವೆಯ ಸಮಯದಲ್ಲಿ ಮುನಿಸು ಕಾಣುತ್ತಿಲ್ಲ..ಪದಗಳೂ ವ್ಯತ್ಯಾಸ ವಾದಂತಿದೆ..ಆತುರದಲ್ಲಿ ಕಳುಹಿಸದಾಗಿದೆ

ಆದರೆ ವಿಷಯ ಚೆನ್ನಾಗಿದೆ.

ಧನ್ಯವಾದಗಳು🙏🏼💐 ಸರ್🙏🏼.
ಎಸ್.ನಾಗಮ್ಮ.

[5/29, 3:56 PM] ‪+91 99016 63447‬: *ಪ್ರೆಮ್ ಅವರ ನೋಟ..ಚುಟುಕಿಗೆ ಹತ್ತಿರವಾಗಿದೆ ಎನ್ನಬಹುದು....ಎರಡನೆಯದಾದ ಸೆಕೆ...ಹನಿಗವನದಂತಿದೆ...*

ಚುಟುಕು ಸಾಹಿತ್ಯ ಪರಿಷತ್ತಿನ ನಿರ್ಣಯದಂತೆ ಚುಟುಕುಗಳು ಕಡ್ಡಾಯವಾಗಿ ೪ ಸಾಲುಗಳಿರಬೇಕು...

ಮುಂದೆ ಪ್ರಯತ್ನಿಸಿ....

[6/7, 3:42 PM] ‪+91 94487 75795‬: ಪ್ರೇಮ್ ಅವರ ಬದುಕಿನ ಬಣ್ಣ ಚನ್ನಾಗಿದೆ ನೀಡಿರುವ ಚಿತ್ರದ ಒಂದು ಆಯಾಮ‌ ಮಾತ್ರ ಗ್ರಹಿಸಿ ಬರೆದಿದ್ದೀರಿ, ಬಣ್ಣವನ್ನು ಮೀರಿದ ಬಹಳ ಅಂಶಗಳಿವೆ ಆ ಚಿತ್ರದಿ....🙏🏻💐

[6/11, 1:00 PM] ‪+91 99452 99440‬: 😀😃😄🤣😁😆😂😉
*_ಇಂದಿನ ಬೋಳುನಗೆಮಾಪನ_*
(Out of 5 🤣)

*ಕವಿ:* ಪ್ರೇಮ್
*ಹಾಸ್ಯ:* 😉😁
*ಪದಬಳಕೆ:*😌😅
*ನಾವೀನ್ಯತೆ:*😁
*ಪಂಚ್:*😉
*ಒಟ್ಟಾರೆ ನಗೆಯಂಕಿ:*😌😅

*ಅನಿಸಿಕೆ:*

ಸಾಧಾರಣ ಲಹರಿ. ಹೊಸ ರೀತಿ ಪ್ರಯತ್ಬಿಸಿ. !!!

ಕವಿಭಾವಕ್ಕೆ ಧಕ್ಕೆಯಾದ್ರೆ ಡಿಲೀಟ್ ಮಾಡಿಬಿಡಿ! ತಲೆಯಿಂದ!!
ಶುಭವಾಗಲಿ

ಹಿಸಾಕಿ
😉🤪😌😇😅😄😃😁

[6/11, 3:22 PM] ‪+91 90190 28507‬: ಪ್ರೇಮ್ ರವರ ಕಾರಣ ಹಾಗೂ ಖರೀದಿ ಹನಿಗಳಲ್ಲಿ ತೈಲದ ಮಹಾತ್ಮೆಯಿಂದ ತಲೆ ಬೋಳಾದ ಪರಿ ಚೆನ್ನಾಗಿದೆ

[6/15, 11:57 AM] ‪+91 99002 77367‬:
💧:ಪರಿಣಾಮ
🖋:ಪ್ರೇಮ್
👨🏻‍⚖:ಪ್ರಾಸದ ಚೌಕಟ್ಟಿನ ಇಕ್ಕಟ್ಟಿಗೆ ಸಿಲುಕಿದೆ. ಸಹಜವಾಗಿ ಪ್ರಯತ್ನಿಸಿ
🤠:ಕಾಗುಣಿತ ದೋಷ ಗಮನಿಸಿ😅😃

💧:ಮಳೆ
🖋:ಪ್ರೇಮ್
👨🏻‍⚖:ಅಂದಿನ ಇಂದಿನ ಮಕ್ಕಳ ವ್ಯತ್ಯಾಸ, ಅದು ಪರಸಂಸ್ಕೃತಿಯ ಕಣ್ಣು ಮುಚ್ಚಿ ಅನುಸರಿಸಿದ ಪರಿಣಾಮವಾಗಿದೆ. ಮನುಷ್ಯ ಬದಲಾದರೂ ಪ್ರಕೃತಿ ಬದಲಾಗದು ಕಾರಣ, ಅದಿನ್ನೂ ಕನ್ನಡ ಮಾಧ್ಯಮದ್ದೇ ಆಗಿದೆ. ನಮ್ಮದೇ ನಮಗೆ ಚಂದ.
🤠:ಪದಗಳನ್ನು ಸರಿಹೊಂದಿಸಿದರೆ ಇನ್ನೂ ಉತ್ತಮ ನಗೆಹನಿಯಾಗುವುದು🤣😅😃

[6/16, 3:22 PM] ‪+91 99644 19639‬: ಪ್ರೇಮ್ ರವರ

*ಕಾರಣ*
ಬುದ್ದಿವಂತರಿಗೆ ಮಾತಿನ ಪೆಟ್ಟು
ದಡ್ಡರಿಗೆ ದೊಣ್ಣೆ (ಪೊರಕೆ)  ಪೆಟ್ಟು ಅನ್ನೋ ಗಾದೇನ ಸಾಬೀತು ಪಡಿಸಿದ ನಿಮ್ಮಾಕೆಗೆ ಜೈ.

ಇತ್ತೀಚೆಗೆ ಮೊಬೈಲ್ ಹಾವಳಿಯಿಂದ ತಪ್ಪಿಲ್ಲ ಮನೆಗಳಲ್ಲಿ ಕಿತ್ತಾಟ. ನನಗೂ ಆಗಾಗ ಬಿಸಿ ತಟ್ಟುತಿದೆ

ಸೊಗಸಾದ ತಿಳಿ ಹಾಸ್ಯದ ಕವನ
ಧನ್ಯವಾದಗಳು
ಶ್ಯಾಮ

[6/16, 5:15 PM] ‪+91 96632 59692‬: ಪ್ರೇಮ್ ಸರ್ ಕಾರಣ ಸೂಪರ್👌👌😅
[6/16, 9:42 PM] ‪+91 91415 05789‬: 😡😡😡😡😡😡😡😡😡

ಕೋಪ ಮನುಷ್ಯನ ಶತ್ರು ಕೋಪದಿಂದ ಕೊಯ್ದ ಮೂಗು ಮತ್ತೆ ಬರುವುದೇ ಹೀಗೆ ಕೋಪದ ಬಗ್ಗೆ ಮಾತಾಡುತ್ತಿರುವಾಗ ಕೋಪದ ಮೇಲೆಯೇ ಹಾಸ್ಯಗವನ ಬರೆದು ಗೆದ್ದವರು ನಮ್ಮ ಕವಿಮನಗಳು.

ಕೋಪನ ಬದಿಗಿಟ್ಟು ಹಾಸ್ಯ ಬರೆದು ನಗು ಬಿತ್ತಿದ್ದವರು ಹಲವರು

ಅವುಗಳಲ್ಲಿ ಅತ್ಯುತ್ತಮವಾಗಿ ಬರೆದವರು
👑👑👑👑👑👑👑👑👑
👉ಪ್ರಶಾಂತ್ ಸರ್ ಅವರ ಹನಿಗವನ

ಹಾಗೆಯೇ  ಬರೆದವರು
👉ನಾ ಕನ್ನಡಿಗ ಸರ್

👉ಪ್ರೇಮ್ ಸರ್

👉ಭಾರತಿ‌ಮೇಡಂ

ಕೋಪ ತಾಪವ ನೋಡಿ ಕವಿ ಮನವ ಮೆಚ್ಚಿ ವಿಮರ್ಶೆ ಮಾಡಿದವರು
📖📖📖📖📖📖📖📖📖
👉 *ಶ್ಯಾಮ್ ಸರ್*
👉 *ಯತೀಶ್ ಸರ್*

[6/11, 3:22 PM] ‪+91 90190 28507‬: ಪ್ರೇಮ್ ರವರ ಕಾರಣ ಹಾಗೂ ಖರೀದಿ ಹನಿಗಳಲ್ಲಿ ತೈಲದ ಮಹಾತ್ಮೆಯಿಂದ ತಲೆ ಬೋಳಾದ ಪರಿ ಚೆನ್ನಾಗಿದೆ
[6/15, 11:57 AM] ‪+91 99002 77367‬: 💧:ಪರಿಣಾಮ
🖋:ಪ್ರೇಮ್
👨🏻‍⚖:ಪ್ರಾಸದ ಚೌಕಟ್ಟಿನ ಇಕ್ಕಟ್ಟಿಗೆ ಸಿಲುಕಿದೆ. ಸಹಜವಾಗಿ ಪ್ರಯತ್ನಿಸಿ
🤠:ಕಾಗುಣಿತ ದೋಷ ಗಮನಿಸಿ😅😃

💧:ಮಳೆ
🖋:ಪ್ರೇಮ್
👨🏻‍⚖:ಅಂದಿನ ಇಂದಿನ ಮಕ್ಕಳ ವ್ಯತ್ಯಾಸ, ಅದು ಪರಸಂಸ್ಕೃತಿಯ ಕಣ್ಣು ಮುಚ್ಚಿ ಅನುಸರಿಸಿದ ಪರಿಣಾಮವಾಗಿದೆ. ಮನುಷ್ಯ ಬದಲಾದರೂ ಪ್ರಕೃತಿ ಬದಲಾಗದು ಕಾರಣ, ಅದಿನ್ನೂ ಕನ್ನಡ ಮಾಧ್ಯಮದ್ದೇ ಆಗಿದೆ. ನಮ್ಮದೇ ನಮಗೆ ಚಂದ.
🤠:ಪದಗಳನ್ನು ಸರಿಹೊಂದಿಸಿದರೆ ಇನ್ನೂ ಉತ್ತಮ ನಗೆಹನಿಯಾಗುವುದು🤣😅😃
[6/16, 3:22 PM] ‪+91 99644 19639‬: ಪ್ರೇಮ್ ರವರ

*ಕಾರಣ*
ಬುದ್ದಿವಂತರಿಗೆ ಮಾತಿನ ಪೆಟ್ಟು
ದಡ್ಡರಿಗೆ ದೊಣ್ಣೆ (ಪೊರಕೆ)  ಪೆಟ್ಟು ಅನ್ನೋ ಗಾದೇನ ಸಾಬೀತು ಪಡಿಸಿದ ನಿಮ್ಮಾಕೆಗೆ ಜೈ.

ಇತ್ತೀಚೆಗೆ ಮೊಬೈಲ್ ಹಾವಳಿಯಿಂದ ತಪ್ಪಿಲ್ಲ ಮನೆಗಳಲ್ಲಿ ಕಿತ್ತಾಟ. ನನಗೂ ಆಗಾಗ ಬಿಸಿ ತಟ್ಟುತಿದೆ

ಸೊಗಸಾದ ತಿಳಿ ಹಾಸ್ಯದ ಕವನ
ಧನ್ಯವಾದಗಳು
ಶ್ಯಾಮ
[6/16, 5:15 PM] ‪+91 96632 59692‬: ಪ್ರೇಮ್ ಸರ್ ಕಾರಣ ಸೂಪರ್👌👌😅
[6/16, 9:42 PM] ‪+91 91415 05789‬: 😡😡😡😡😡😡😡😡😡

ಕೋಪ ಮನುಷ್ಯನ ಶತ್ರು ಕೋಪದಿಂದ ಕೊಯ್ದ ಮೂಗು ಮತ್ತೆ ಬರುವುದೇ ಹೀಗೆ ಕೋಪದ ಬಗ್ಗೆ ಮಾತಾಡುತ್ತಿರುವಾಗ ಕೋಪದ ಮೇಲೆಯೇ ಹಾಸ್ಯಗವನ ಬರೆದು ಗೆದ್ದವರು ನಮ್ಮ ಕವಿಮನಗಳು.

ಕೋಪನ ಬದಿಗಿಟ್ಟು ಹಾಸ್ಯ ಬರೆದು ನಗು ಬಿತ್ತಿದ್ದವರು ಹಲವರು

ಅವುಗಳಲ್ಲಿ ಅತ್ಯುತ್ತಮವಾಗಿ ಬರೆದವರು
👑👑👑👑👑👑👑👑👑
👉ಪ್ರಶಾಂತ್ ಸರ್ ಅವರ ಹನಿಗವನ

ಹಾಗೆಯೇ  ಬರೆದವರು
👉ನಾ ಕನ್ನಡಿಗ ಸರ್

👉ಪ್ರೇಮ್ ಸರ್

👉ಭಾರತಿ‌ಮೇಡಂ

ಕೋಪ ತಾಪವ ನೋಡಿ ಕವಿ ಮನವ ಮೆಚ್ಚಿ ವಿಮರ್ಶೆ ಮಾಡಿದವರು
📖📖📖📖📖📖📖📖📖
👉 *ಶ್ಯಾಮ್ ಸರ್*
👉 *ಯತೀಶ್ ಸರ್*

ಇಂದಿನ ಅಡ್ಮಿನ್ *ಮಾನಸ ಎ.ಪಿ* ಮೇಡಂ ವಂದಿಸುತ್ತ

ನಾಳೆ ಭಾನುವಾರ ನಿಮ್ಮಿಷ್ಟದ ಪ್ರಕಾರ ಬರೆದು ಹನಿ ಹನಿಗೆ ರಜೆಯ ನೀಡದೆ ಬಾಗಿಲು ತೆರೆದಿರಲಿ
ಬಳಗದ ಕವಿಮನಗಳು ವಿಮರ್ಶಕರಾಗಿ ಚಾವಡಿಯಲ್ಲಿ ಕಲರವ ಇರಲಿ.

ಶುಭರಾತ್ರಿ 🌹🌹🌹
[6/19, 3:50 PM] ‪+91 96632 59692‬: ಪ್ರೇಮ್ ಅವರ ಎರಡೂ ಶಾಯರಿಗಳು ಸೂಪರ್ ಇದಾವೆ.👌👌
[6/20, 1:45 PM] ‪+91 95919 01999‬: ಪ್ರೇಮ್'ರವರು ಬದುಕಿನಲ್ಲಿ ಮೋಕ್ಷದ ದಾರಿ ಯಾವುದು ಎಂಬುದನ್ನು ಸೂಚ್ಯವಾಗಿ ಬರೆದಿದ್ದಾರಾದರೂ ಪದಗಳನ್ನು ಸ್ವಲ್ಪ ಹೆಚ್ಚೇ ಬಳಸಬಹುದಿತ್ತು ಎನಿಸಿತು.,ಚೆಂದ ಇದೆ.,
[6/21, 1:49 PM] ‪+91 78925 45976‬: ಪ್ರೇಮ್ ರವರ ಕುಡಿಯುವುದರಲ್ಲೇ ಸುಖಕಾಣುವವನಿಗೆ
ಮನೆಯವರ ಕಷ್ಟ ಹೇಗೆ ತಿಳಿದೀತು
ಕಷ್ಟಕೊಡಲೆಂದೇ ಅವನಿರುವಾಗ

ಕುಡಿಯುವವರಿಗೆ ಅರ್ಥವಾದರೆ ಸಾಕು
ಚಂದದ ಶಾಯರಿ

331.ವಿಮರ್ಶೆ

By Arjun shenoy

ಮಾನವ ಪ್ರಗತಿಯ ಬೆನ್ನೇರಿ ಪ್ರಕೃತಿಯನ್ನು ಕೊಂದು ಕೊನೆಗೆ ತಾನೇ ನಾಶ ಆಗುವ ಸಂಧರ್ಭದಲ್ಲಿ ಓದಬೇಕಾದ ಕವನ ಇದು.ಏಕೆಂದರೆ ಪ್ರಕೃತಿ ಹಾಗೂ ಜಲಮೂಲ ಇದ್ದರೆ ಮಾತ್ರ ನಾನು ಎನ್ನುವ ಕಡು ಸತ್ಯವನ್ನು ಹಸಿ ಆಗಿ ವಿವರಿಸಿದ್ದೀರಿ. ಅನಿವಾರ್ಯಗಳ ಪಟ್ಟಿಯಲ್ಲಿ ಕಾರು ಬಾರುಗಳನ್ನು ಮಾನವ ಸೇರಿಸಿ ಕುಣಿಯುವ ಈ ಕಾಲದಲ್ಲಿ ಪ್ರಕೃತಿಯ ಮಹತ್ವದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ👌🏻ಕೊನೆಯಲ್ಲಿ ಕೆಡುಕಿನ ಅರಿವಾಗಿ ತನಗಿಂತ ಇತರ ಪ್ರಾಣಿ ಪಕ್ಷಿಗಳು ಮೇಲು ಎನ್ನುವ ಜಿಗುಪ್ಸೆ ಮಾನವನನ್ನು ಕಾಡುವಾಗ ಬರುವ ತಪ್ಪಿತಸ್ಥ ಮನೋಭಾವದ ಮೇಲು ನೋಟ ಇದೆ👌🏻ಪ್ರಾಸದ ಬಳಕೆ ಉತ್ತಮವಾಗಿದೆ👍🏻

324.ಹನಿಗವನ-ಬೋಳುತಲೆ

1. ಕಾರಣ

ನನ್ನ ತಲೆ ಬೋಳಾಗಲು
ಕಾರಣ ಒಂದೇ..
ನನ್ನವಳ ಹಲವಾರು
ತೈಲಗಳ ಮಸಾಜು...
ಕೂದಲು ಮಂಗಮಾಯ...
ಎಣ್ಣೆಯ ಮಾಯ..

2. ಖರೀದಿ

ಜಾಹೀರಾತು ನೋಡಿ
ಖರೀದಿಸಿದ ಹೇರಾಯಿಲ್
ನನ್ನ ತಲೆ ಮೇಲೆ ಪ್ರಯೋಗ
ನನ್ನ ಮಡದಿಯ ಯೋಗ!
ಬೋಳಾದದ್ದು ನನ್ನ ತಲೆ!!
ನನಗೀಗ ಹೆಸರು ಬಕ್ಕ ತಲೆ!!

@ಪ್ರೇಮ್@

330. ಕವನ-ಜಲ

1.ನಿನ್ನಿಂದಲ್ಲವೇ ನಾನು

ನನ್ನಮ್ಮ ಗಂಗೆ ನಿನ್ನಿಂದ ಬದುಕು ನಂಗೆ
ನೀನಿಲ್ಲದೆ ಬಾಳಲಿ ನಾ ಹೆಂಗೆ?
ಮಾತೆ ನೀನಿಲ್ಲದೆ ಜೀವಿಗಳೆಲ್ಲಿ?
ಗಾಳಿಯಂತೆ ನೀನೂ ಬೇಕಿಲ್ಲಿ//

ನಮ್ಮ ಮಾತೆ ನಮ್ಮ ದಾತೆ
ಜಲದಿ ಜೀವ ಉಳಿಸಿದಾತೆ
ಕಣ್ಣು ತೆರೆದು ಕಣ್ಣು ಮುಚ್ಚೊ-
ವರೆಗೂ ಜೀವಕ್ಕಿಂತ ನೀನೆ ಹೆಚ್ಚು//

ಜೀವ ಜಲವು ನೀನೆ ಆಗಿ
ನಮ್ಮನೆಲ್ಲ ಜಗದಿ ತೂಗಿ
ಉಸಿರ ಬೆಳೆಸಿ ದಾಹ ತಣಿಸಿ
ಜಲಜನಕ ಆಮ್ಲಜನಕ ಸೇರಿಸಿ//

ದೇವಿ ನೀನು ತಾಯಿ ನೀನು
ನಿನ್ನ ಕೆಡಿಸುತಿರುವ ನಾನು
ನಿನ್ನ ಎದುರು ನನಗಿಂತಲು
ಹೂವು ಗಿಡ ಪಶು ಪಕ್ಷಿ ಮೇಲು//
@ಪ್ರೇಮ್@

329. ಹನಿ-ಕೋಪ

1.ಕೋಪ

ನನ್ನವಳ ಕೋಪ
ತುಂಬಾನೇ ರಂಪ!!
ಕೆಂಡದಂಥ ಕೋಪ...
ಅದು ಪಕೃತಿ ವಿಕೋಪದಂತೆ
ನಾ ತಾಳ್ಮೆಯ ಭುವಿಯಂತೆ!!

2. ಕಾರಣ

ನನ್ನವಳ ಕೋಪಕ್ಕೆ ಕಾರಣ
ನನ್ನ ಹೊಸ ಮೊಬೈಲು!!
ಫೇಸ್ ಬುಕ್ ವಾಟ್ಸಪ್
ಅಲ್ಲಿರುವ ನನ್ನ ಫ್ರೆಂಡ್ಸ್!!
ಇರಲು ನಾ ನನ್ನ ಮೊಬೈಲ್ ಜತೆ
ಹಾಜರಾಗುವಳು ಪೊರಕೆ ಜೊತೆ!!!
@ಪ್ರೇಮ್@

ಶುಕ್ರವಾರ, ಜೂನ್ 15, 2018

328. ಮುಂಜಾನೆ ಮುತ್ತು

ಮುಂಜಾನೆ ಮುತ್ತು-1

ನನ್ನದೆಂಬುದ ಎಲ್ಲವ ಇಲ್ಲೆ
ಬಿಟ್ಟು ತೆರಳುವ ಮನುಜ
ಕೊಂಡು ಹೋಗುವ ಸ್ನೇಹ
ಪ್ರೀತಿ, ವಿಶ್ವಾಸವ ಗಳಿಸಬೇಕೋ
ನನಗೂ ನಿನಗೂ ಅನ್ಯರಿಗೂ
ಬದುಕಿಗದು ಆಧಾರ ಎಂದಿಗೂ..
@ಪ್ರೇಮ್@

ಮುಂಜಾನೆ ಮುತ್ತು-2

ಪ್ಲಾಸ್ಟಿಕನ್ನು ಪರಿಸರಕ್ಕೆ ಎಸೆಯದಿರೋಣ.
ಭೂಮಿ ತಾಯ ಕುತ್ತಿಗೆಗೆ
ಕತ್ತು ತರುವ ಕೆಲಸ ನಮ್ಮಿಂದಾಗದಿರಲಿ.
ಮನೇಲೆ ಮನೆಯ ಕಸವ ಡಂಪ್ ಮಾಡಲಾಗದಿದ್ದರೆ ಊರು ಸರಿಮಾಡೋದು ಸಾಧ್ಯವೇ? ನಾವು ಸರಿಯಾದರೆ ಲೋಕ ಸರಿಯಾಗುವುದು.
@ಪ್ರೇಮ್@

ಗುರುವಾರ, ಜೂನ್ 14, 2018

327. ಹನಿ-ಮಳೆ

1. ಪರಿಣಾಮ

ಹುಡುಗಿಯ ರೇಗಿಸಿದ ಪೇಲೆ,
ಗೊತ್ತಾಯಿತು ಅಂದೇ ಬೆಲೆ!!
ಬಂತು ಪೆಟ್ಟಿನ ಮಹಾ ಮಳೆ
ಇಂದು ದೇಹವೆಲ್ಲಾ ಕಲೆ!!!

2. ಮಳೆ

ಅಂದೆಲ್ಲಾ ಮಕ್ಕಳು
" ಬಾರೋ ಬಾರೋ ಮಳೆರಾಯ"
ಇಂದಿನ ಮಕ್ಕಳು
"ಬಂದೆ ಏಕೋ ಮಳೆರಾಯ
ಹೋಗೋ ಹೋಗೋ ಬೇಗ"
ಇಂಗ್ಲಿಷ್ ಮಿಡಿಯಂ ನೋಡಿ-
"ರೇನ್ ರೇನ್ ಗೋ ಅವೇ.."
ಆದ್ರೂ ಹೋಗಲ್ಲ..
ಮಳೆ ಕನ್ನಡ ಮೀಡಿಯಂ...
@ಪ್ರೇಮ್@

326.colours of life

Colours of life

Life comes
In many ways..
Every moments
Colourful rays...

Physical pain
With mental tension
No one knows
Life's calculation..

Life is sacred
Colours are hundred
Thoughts are unlimited
Days run like rented..

We should run
With the moments
Challenge yourself
With your life situations...

Colours are more
Life is less..
To fill them in life
You should talk less..
@prem@

ಬುಧವಾರ, ಜೂನ್ 13, 2018

325. ಹನಿ-ಆಕೆ

1. ಆಕೆ
ಮನೇಲಿ ಅವಳು ನನ್ನಾಕೆ
ಆಫೀಸಲಿ ದೊಡ್ಡ
ಕೆಲಸದಾಕೆ
ಸಮಾಜದಿ ಹೋರಾಡುವಾಕೆ
ಅಡುಗೆ ಮನೇಲಿ ಗೊಣಗುವಾಕೆ!!

2. ಜೀವನ
ಈ ಜೀವನವೇ ಬರಡು
ಆಕೆಯಿಲ್ಲದ ಮೇಲೆ!!
ಏನಿಲ್ಲ ಸಮರಸ
ಆಕೆಯಿಲ್ಲದ ಮೇಲೆ!!
@ಪ್ರೇಮ್@

ಸೋಮವಾರ, ಜೂನ್ 11, 2018

324.ಹನಿಗವನ-ಬೋಳುತಲೆ

1. ಕಾರಣ

ನನ್ನ ತಲೆ ಬೋಳಾಗಲು
ಕಾರಣ ಒಂದೇ..
ನನ್ನವಳ ಹಲವಾರು
ತೈಲಗಳ ಮಸಾಜು...
ಕೂದಲು ಮಂಗಮಾಯ...
ಎಣ್ಣೆಯ ಮಾಯ..

2. ಖರೀದಿ

ಜಾಹೀರಾತು ನೋಡಿ
ಖರೀದಿಸಿದ ಹೇರಾಯಿಲ್
ನನ್ನ ತಲೆ ಮೇಲೆ ಪ್ರಯೋಗ
ನನ್ನ ಮಡದಿಯ ಯೋಗ!
ಬೋಳಾದದ್ದು ನನ್ನ ತಲೆ!!
ನನಗೀಗ ಹೆಸರು ಬಕ್ಕ ತಲೆ!!

@ಪ್ರೇಮ್@

323. ಕವನ-ಬಣ್ಣದ ಬದುಕು

ಬದುಕಿನ ಬಣ್ಣ

ಬದುಕದು ಬರುವುದು
ಹೇಗೋ ಏನೋ..
ಅನುಕ್ಷಣ ಅನುದಿನ
ತರತರ ಬಣ್ಣ...

ಮೈಯಲಿ ಒಂಥರಾ
ತಲೆಯಲಿ ನೂರು
ಆಲೋಚನೆ ಜಾಡು
ಹಿಡಿವವ ಯಾರೋ...

ಬದುಕದು ನಶ್ವರ
ಬಣ್ಣವು ಸಾಸಿರ
ಯೋಚನೆ ನಿರಂತರ
ದಿನಗಳು ಸರಸರ...

ಪ್ರತಿ ಕ್ಷಣದೋಟದಿ
ಓಡಲು ಬೇಕು..
ಪಣವನು ಕಟ್ಟಿ
ಬಣ್ಣದ ಬಾಳ ಬೆಳಗಬೇಕು..

@ಪ್ರೇಮ್@

322.ಕವನ- .ಬಯಕೆ

ಬಯಕೆ

ನನ್ನ ಮನಸು ನಿನ್ನ ಬಯಸಿ
ನನ್ನ ಕನಸು ನಿನ್ನ ಸರಿಸಿ
ನೀನು ಬಯಸಿದ೦ತೆ ನನ್ನ ಮನವ
ಮರೆಸಲೇಕೆ ತಿರುಗಿಸಿ...

ತ೦ಪ ತ೦ದು ಬಾಳಿಗೀಗ
ತೆರೆದ ಮನವ ಹರಿಸಿ ರಾಗ
ನಾನೆ ರಾಗ ನೀನೆ ನಾದ
ಹರಿಸಲೇನು ಗೆಜ್ಜೆ ನಾದ..

ವಿವರವಾಗಿ ವಿಧಿತವಾಗಿ
ವರವ ಬೇಡುವ೦ತೆ ಬಾಗಿ
ವದನದಿ೦ದ ವರದಿಯಾಗಿ ವ೦ದಿಸುತ
ವೇದವಾಕ್ಯದ೦ತೆ ಬ೦ದೆ..

ಭವದ ಭಾವವೆಲ್ಲ ಮರೆಸಿ
ಭಾವನೆಗಳ ಹೊತ್ತು ಉರಿಸಿ
ಭುವಿಯ ಭವ್ಯ ಬ೦ಧವಿರಿಸಿ
ಬೇಸರವ ಮರೆಸಿ ಬದುಕ ಸರಿಸಿ..
@ಪ್ರೇಮ್@

ಶನಿವಾರ, ಜೂನ್ 2, 2018

322.ಕವನ- .ಬಯಕೆ

ಬಯಕೆ

ನನ್ನ ಮನಸು ನಿನ್ನ ಬಯಸಿ
ನನ್ನ ಕನಸು ನಿನ್ನ ಸರಿಸಿ
ನೀನು ಬಯಸಿದ೦ತೆ ನನ್ನ ಮನವ
ಮರೆಸಲೇಕೆ ತಿರುಗಿಸಿ...

ತ೦ಪ ತ೦ದು ಬಾಳಿಗೀಗ
ತೆರೆದ ಮನವ ಹರಿಸಿ ರಾಗ
ನಾನೆ ರಾಗ ನೀನೆ ನಾದ
ಹರಿಸಲೇನು ಗೆಜ್ಜೆ ನಾದ..

ವಿವರವಾಗಿ ವಿಧಿತವಾಗಿ
ವರವ ಬೇಡುವ೦ತೆ ಬಾಗಿ
ವದನದಿ೦ದ ವರದಿಯಾಗಿ ವ೦ದಿಸುತ
ವೇದವಾಕ್ಯದ೦ತೆ ಬ೦ದೆ..

ಭವದ ಭಾವವೆಲ್ಲ ಮರೆಸಿ
ಭಾವನೆಗಳ ಹೊತ್ತು ಉರಿಸಿ
ಭುವಿಯ ಭವ್ಯ ಬ೦ಧವಿರಿಸಿ
ಬೇಸರವ ಮರೆಸಿ ಬದುಕ ಸರಿಸಿ..
@ಪ್ರೇಮ್@

ಶುಕ್ರವಾರ, ಜೂನ್ 1, 2018

320. ಕವನ-ಸೀತೆಯ ಮನದಾಳ

ಹೇಗೆ ತೊರೆಯಲಿ ತವರ..

ವರ ಮಹಾನುಭವ ದಶರಥ ಕುವರ
ಅಯೋಧ್ಯೆಗೆ ರಾಜ ಮಹಾರಾಜ
ವೀರಾಧಿ ವೀರ ಶೂರನು ಅವನು
ಆದರೂ ತವರ ಹೇಗೆ ತೊರೆಯಲಿ?

ಆಡಿ ಬೆಳೆದು ಒಂದಾಗಿ ಬಾಳಿದ
ನೆರಳು ಬೆಳಕಲಿ ಬಾಳ ದೂಡಿದ
ದಿನಗಳ ನಾನು ಹೇಗೆ ಮರೆಯಲಿ
ತವರ ಬಾಂಧವ್ಯ ಹೇಗೆ ಮರೆಯಲಿ..

ಅಮ್ಮನ ಕೈತುತ್ತು ಅಪ್ಪನ ಪ್ರೀತಿ
ತಮ್ಮನ ಆಟ ಗೆಳೆಯರ ಕೂಟ
ಮರೆಯಲಾರೆ ತೊರೆಯಲಾರೆ
ತವರ ಸಿರಿಯ ಎಂದಿಗೂ ನಾನು..

ಹಕ್ಕಿಯ ಚಿಲಿಪಿಲಿ ಪಕ್ಕದ ಗಲಿಬಿಲಿ
ಚಿಕ್ಕ ಮಕ್ಕಳ ಪಳಪಳ ಕಲರವ
ಬಕ್ಕ ಡಕ್ಕಣರ ಪಕಪಕ ನೋಟ
ನಾ ಹ್ಯಾಂಗ ಮರೆಯಲಿ ತವರಿನ ಕೂಟ...
@ಪ್ರೇಮ್@

🌈🌈🌈🌈🌈🌈🌈🌈🌈
*ಶುಕ್ರವಾರ ದ ಭಾವಗೀತೆ ಸ್ಪರ್ಧೆ*

ವಿಷಯ-- ರಾಮನ ವರಿಸಿ  ಅಯೋಧ್ಯೆಯತ್ತ ಪಯಣಿಸುವಾಗ ಸೀತೆಯ ಮನದ ಭಾವಗಳು ನಿಮ್ಮ ಗೀತೆಯಲ್ಲಿ ಮೂಡಿಬರಲಿ.
##############
ಭಾವಗೀತೆ ಸ್ಪರ್ಧೆಗೆ ಭಾಗವಹಿಸಿದವರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

####೧-ಡಾ ಸುರೇಶ ನೆಗಳಗುಳಿ ಅವರ
*ಮರ್ಯಾದಾ ಪುರುಷೋತ್ತಮನ ಮಡಿಲಿನಲ್ಲಿ*

ವಿಷಯಕ್ಕೆ ಸಮಂಜಸವಾದ ಭಾವಗೀತೆಯಾಗಿದೆ.
*ಪಲ್ಲವಿ*
ಕೋದಂಡ ರಾಮನ ಕೊರಳು ಧರಿಸಿತು ಹಾರ
ನಂದದಾನಂದ ನನಗಾಗಲಿನ್ನು
ಜನಿಸಿರುವ ಮನೆ ಬಿಟ್ಟು ಪದವಿಡಲಯೋಧ್ಯೆಯಲಿ
ಹೊಸ ಬದುಕು ಶ್ರೀರಾಮನೊಡನೆ ಚೆನ್ನು.
👉🏻 *ಚೆನ್ನಾಗಿ ಮೂಡಿಬಂದಿದೆ.ಕೆಲವು ಪದಗಳು ಭಾವಗೀತೆಯ ಸರಾಗತೆಗೆ ಅಡ್ಡಿಯಾಗುವಂತಿವೆ*

*ಚರಣ*
ಜನಕಸುತೆ ದಶರಥನ ಸೊಸೆಯಾಗಿ ಬದಲಾಗುವೆನು
ಮನೆ ಬೆಳಗುವಂಥ ಸೌಭಾಗ್ಯ ದೊರೆತು
ಕನಕನೊಡೆಯನ ಮನದ ಅರಗಿಣಿಯ ಹಾಗೆಯೇ
ರಾಣಿಯಾಗುತ ಮೆರೆದು ಜನಮನದಿ ಕಲೆತು.
👉🏻 *ಸೊಗಸಾಗಿದೆ👍🏼👌🏼👌🏼 ಪ್ರತಿಮೆ ಸೂಕ್ತವಾಗಿದೆ*
*೨*
ಅತ್ಯಪೂರ್ವ ವರವಾಗಿಹುದು ರಘವಂಶೆ ಎಂದೆನಿಸುತ್ತ
ಸುಗುಣವಂತನ ಕೈಯ ಹಿಡಿಯುವಂಥ ಭಾಗ್ಯ
ಸತ್ಯ ರೂಪದ ಅರಸ ನಡಿದಾವರೆಯಲಿ ಮುದದಿ
ಮುದುಡುತ್ತ ಮುಸಿ ನಗುವುದೆನಗೆ ಯೋಗ್ಯ.
👉🏻 *ತುಂಬಾ ಮೋಹಕವಾಗಿದೆ*

ಅಮ್ಮನಿಗೆ ಶಿರಬಾಗಿ ನಮಿಸಿಹೆನು ಪಿತನಿಗೂ ಜತೆಗೆ
ಭವಿತವ್ಯ ಬೆಳಗುವೆಡೆಗೆ ಅಡಿಯನಿರಿಸಿ.
ಹೆಮ್ಮೆ ತುಂಬಿದ ಮನದ ಭಾಂಡವನು ಧರಿಸುತ್ತ
ತನ್ಮಯತೆಗೆರವಾಗಿ ಹರುಷದ ಹೊನಲ ಹರಿಸಿ.
👉🏻 ಮೇಲಿನೆರಡು ಚರಣಗಳ ಮುಂದೆ ಕೊಂಚ ಸಪ್ಪೆ.
*ಒಟ್ಟಾರೆ ಪದಗಳು ಹೆಚ್ಚೆನಿಸುತ್ತವೆ, ಗೇಯತೆಗೆ ಸಾಲುಗಳು ಹೆಚ್ಚು ಉದ್ದವೆನಿಸುತ್ತವೆ*
        #####
####೨-ಗೀತಾಮಂಜು ಅವರ

*ರಾಮನ ರಾಣಿ*
ಕೊಟ್ವಿರುವ ವಿಷಯಕ್ಕೆ ಸಮಂಜಸವಾದ ಭಾವಗೀತೆಯಾಗಿದೆ.
*ಪಲ್ಲವಿ*
ಪುರುಷೋತ್ತಮನ ಪುರಕ್ಕೆ
ಪಯಣ ಬೆಳೆಸಿಹೆ ನಾನು
ಪುರದ ಪುಣ್ಯ ಪುರುಷನ
ವರಿಸಿ ಜನ್ಮ ಪಾವನ //
*ಚೆನ್ನಾಗಿದೆಯಾದರೂ ಅಪೂರ್ಣವೆನಿಸುತ್ತಿದೆ*

*ಚರಣ*
ದೊರೆಯ ದರ್ಪ ತೋರದ
ಜನರ ಸೇವೆ ಮರೆಯದ
ಸ್ನೇಹ ಪ್ರೀತಿಯ ಒಡಲಿದು
ಎಂದೂ ಬತ್ತದ ಕಡಲಿದು//
*ಇದು ರಾಮನ ಗುಣಗಾನವಾಗಿದೆ. ವಿಷಯಕ್ಕೆ ಭಿನ್ನವಾಗಿದೆ*.
*೨*
ಸಸ್ಯಶಾಮಲೆ ಹಸಿರು ಹಾಸಿ
ಮೇಘಮಾಲೆ ಹೂವು ಸುರಿಸಿ
ನಿತ್ಯಕೋಮಲೆ ನಗುತ್ತ ಬಂದೆ
ಸಪ್ತಪದಿಯನ್ನು ಇಟ್ಟು ಬಂದೆ //
*ಇದೂ ಕೂಡಾ ಸೀತೆಯ ಸ್ವಂತಿಕೆ ತೋರಿ ಭಿನ್ನವಾಗಿದೆ*
ರಾಮರಾಜ್ಯದ ರಾಣಿ ನಾನು
ವಿಶ್ವಪಥದಲ್ಲಿ ಮೆರಗು ಇನ್ನೂ
ರಘವಂಶದ ಸೊಸೆಯು ನಾನು
ಧರ್ಮದಾರಿಯ ದೀಪವಿನ್ನು //

ಜನ್ಮ - ಜನ್ಮದ ನಂಟಿದು
ಬ್ರಹ್ಮ ಬೆಸೆದ ಗಂಟಿದು
ಹೀಗೆ ಇರಲಿ ಅನುದಿನ
ಮಧುರವಾಗಲಿ ಪ್ರತಿದಿನ //
*ಕೊನೆಯ ಎರಡೂ ಚರಣಗಳು ತುಂಬಾ ಚೆನ್ನಾಗಿವೆ*

###೩-ಪ್ರೇಮ್ ಅವರ

*ಹೇಗೆ ತೊರೆಯಲಿ ತವರ*..
ಸುಂದರ ಹಾಗೂ ವಿಷಯಕ್ಕೆ ಸಮಂಜಸವಾಗಿದೆ.
*ಪಲ್ಲವಿಯೂ ಸೂಕ್ತವಾಗಿದೆ*
ವರ ಮಹಾನುಭವ ದಶರಥ ಕುವರ
ಅಯೋಧ್ಯೆಗೆ ರಾಜ ಮಹಾರಾಜ
ವೀರಾಧಿ ವೀರ ಶೂರನು ಅವನು
ಆದರೂ ತವರ ಹೇಗೆ ತೊರೆಯಲಿ?
*ಚರಣ*
ಆಡಿ ಬೆಳೆದು ಒಂದಾಗಿ ಬಾಳಿದ
ನೆರಳು ಬೆಳಕಲಿ ಬಾಳ ದೂಡಿದ
ದಿನಗಳ ನಾನು ಹೇಗೆ ಮರೆಯಲಿ
ತವರ ಬಾಂಧವ್ಯ ಹೇಗೆ ಮರೆಯಲಿ..
*ಸೀತೆಯ ಮನದ ತಳಮಳ ಸೊಗಸಾಗಿದೆ👍🏼👌🏼👌🏼*
ಅಮ್ಮನ ಕೈತುತ್ತು ಅಪ್ಪನ ಪ್ರೀತಿ
ತಮ್ಮನ ಆಟ ಗೆಳೆಯರ ಕೂಟ
ಮರೆಯಲಾರೆ ತೊರೆಯಲಾರೆ
ತವರ ಸಿರಿಯ ಎಂದಿಗೂ ನಾನು..

👉🏻ಸೂಕ್ತ ಭಾವಗಳಿದ್ದರೂ *ಅಮ್ಮನ ಕೈತುತ್ತು ,ತಮ್ಮನ ಆಟ, ಗೆಳೆಯರ ಕೂಟ*🤔 ಕೊಂಚ ಯೋಚಿಸಬೇಕು.

ಹಕ್ಕಿಯ ಚಿಲಿಪಿಲಿ ಪಕ್ಕದ ಗಲಿಬಿಲಿ
ಚಿಕ್ಕ ಮಕ್ಕಳ ಪಳಪಳ ಕಲರವ
ಬಕ್ಕ ಡಕ್ಕಣರ ಪಕಪಕ ನೋಟ
ನಾ ಹ್ಯಾಂಗ ಮರೆಯಲಿ ತವರಿನ ಕೂಟ...

👉🏻 *ಈ ಚರಣವೂ ಭಾವಪೂರ್ಣವಾಗಿದೆ*.
🌈🌈🌈🌈🌈🌈🌈🌈🌈🌈
*ಫಲಿತಾಂಶ*

ಪ್ರಥಮ @@@ ಪ್ರೇಮ್

ದ್ವಿತೀಯ @@@ ಡಾ. ಸುರೇಶ್ ನೆಗಳಗುಳಿ

ತೃತೀಯ @@@ ಗೀತಾಮಂಜು

ವಿಜೇತರಿಗೆ ಅಭಿನಂದನೆಗಳು💐💐💐

ತ್ರಿನೇತ್ರಜ್