ಗುರುವಾರ, ಜೂನ್ 28, 2018

342. ಕವನ-ವನ

ವನ

ನವವನವಾಗಿದೆ ಬೆಳೆದು ತಳಿರು
ಸುಖತನ ತಂದಿದೆ ಪಡೆದು ನೀರು
ರವಿ ಕಿರಣವ ತಡೆದು ಹಾಕುತ
ಜೀವಕೆ ಬೇಕಾದ ಗಾಳಿಯ ನೀಡುತ..

ಸಾಗಿದೆ ಬದುಕು ಪಕ್ಷಿಗೆ ಆಸರೆ
ಪುಟಾಣಿ ಜೀವಿಯು ನನ್ನದೆ ಕೈಸೆರೆ
ಇಲ್ಲವು ಯಾವುದೇ ಭಯದ ಬದುಕು
ಆರಾಮ ನನ್ನಲಿ ಎಲ್ಲರ ಮನಕು..

ಕಡಿಯದಿರೆನ್ನ ತಲೆ-ಬುಡ ಎಲ್ಲವ
ಜಲ ಹಿಡಿದಿಡಿವೆ, ಗಾಳಿಯನೀವೆ
ಸೂರ್ಯನ ತಡೆದು ತಂಪನೆ ತರುವೆ
ಮೋಡವ ತಡೆದು ವರುಣನ ಕರೆವೆ...

ಮಾನವ ಜಾತಿಯು ಬೆಂಕಿಯ ಹಾಗೆ
ಸುಡುವುದು ನಮ್ಮಯ ಜೀವನ ಸರಾಗ
ತಾಯಿಯ ಕೊಲ್ಲುವ ಮಾದರಿ ಅವರದು
ಹಸಿರುಳಿಯಲು ಬೇಕು ಕರುಣೆ ಎಂದೂ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ