ಹೇಗೆ ತೊರೆಯಲಿ ತವರ..
ವರ ಮಹಾನುಭವ ದಶರಥ ಕುವರ
ಅಯೋಧ್ಯೆಗೆ ರಾಜ ಮಹಾರಾಜ
ವೀರಾಧಿ ವೀರ ಶೂರನು ಅವನು
ಆದರೂ ತವರ ಹೇಗೆ ತೊರೆಯಲಿ?
ಆಡಿ ಬೆಳೆದು ಒಂದಾಗಿ ಬಾಳಿದ
ನೆರಳು ಬೆಳಕಲಿ ಬಾಳ ದೂಡಿದ
ದಿನಗಳ ನಾನು ಹೇಗೆ ಮರೆಯಲಿ
ತವರ ಬಾಂಧವ್ಯ ಹೇಗೆ ಮರೆಯಲಿ..
ಅಮ್ಮನ ಕೈತುತ್ತು ಅಪ್ಪನ ಪ್ರೀತಿ
ತಮ್ಮನ ಆಟ ಗೆಳೆಯರ ಕೂಟ
ಮರೆಯಲಾರೆ ತೊರೆಯಲಾರೆ
ತವರ ಸಿರಿಯ ಎಂದಿಗೂ ನಾನು..
ಹಕ್ಕಿಯ ಚಿಲಿಪಿಲಿ ಪಕ್ಕದ ಗಲಿಬಿಲಿ
ಚಿಕ್ಕ ಮಕ್ಕಳ ಪಳಪಳ ಕಲರವ
ಬಕ್ಕ ಡಕ್ಕಣರ ಪಕಪಕ ನೋಟ
ನಾ ಹ್ಯಾಂಗ ಮರೆಯಲಿ ತವರಿನ ಕೂಟ...
@ಪ್ರೇಮ್@
🌈🌈🌈🌈🌈🌈🌈🌈🌈
*ಶುಕ್ರವಾರ ದ ಭಾವಗೀತೆ ಸ್ಪರ್ಧೆ*
ವಿಷಯ-- ರಾಮನ ವರಿಸಿ ಅಯೋಧ್ಯೆಯತ್ತ ಪಯಣಿಸುವಾಗ ಸೀತೆಯ ಮನದ ಭಾವಗಳು ನಿಮ್ಮ ಗೀತೆಯಲ್ಲಿ ಮೂಡಿಬರಲಿ.
##############
ಭಾವಗೀತೆ ಸ್ಪರ್ಧೆಗೆ ಭಾಗವಹಿಸಿದವರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
####೧-ಡಾ ಸುರೇಶ ನೆಗಳಗುಳಿ ಅವರ
*ಮರ್ಯಾದಾ ಪುರುಷೋತ್ತಮನ ಮಡಿಲಿನಲ್ಲಿ*
ವಿಷಯಕ್ಕೆ ಸಮಂಜಸವಾದ ಭಾವಗೀತೆಯಾಗಿದೆ.
*ಪಲ್ಲವಿ*
ಕೋದಂಡ ರಾಮನ ಕೊರಳು ಧರಿಸಿತು ಹಾರ
ನಂದದಾನಂದ ನನಗಾಗಲಿನ್ನು
ಜನಿಸಿರುವ ಮನೆ ಬಿಟ್ಟು ಪದವಿಡಲಯೋಧ್ಯೆಯಲಿ
ಹೊಸ ಬದುಕು ಶ್ರೀರಾಮನೊಡನೆ ಚೆನ್ನು.
👉🏻 *ಚೆನ್ನಾಗಿ ಮೂಡಿಬಂದಿದೆ.ಕೆಲವು ಪದಗಳು ಭಾವಗೀತೆಯ ಸರಾಗತೆಗೆ ಅಡ್ಡಿಯಾಗುವಂತಿವೆ*
*ಚರಣ*
ಜನಕಸುತೆ ದಶರಥನ ಸೊಸೆಯಾಗಿ ಬದಲಾಗುವೆನು
ಮನೆ ಬೆಳಗುವಂಥ ಸೌಭಾಗ್ಯ ದೊರೆತು
ಕನಕನೊಡೆಯನ ಮನದ ಅರಗಿಣಿಯ ಹಾಗೆಯೇ
ರಾಣಿಯಾಗುತ ಮೆರೆದು ಜನಮನದಿ ಕಲೆತು.
👉🏻 *ಸೊಗಸಾಗಿದೆ👍🏼👌🏼👌🏼 ಪ್ರತಿಮೆ ಸೂಕ್ತವಾಗಿದೆ*
*೨*
ಅತ್ಯಪೂರ್ವ ವರವಾಗಿಹುದು ರಘವಂಶೆ ಎಂದೆನಿಸುತ್ತ
ಸುಗುಣವಂತನ ಕೈಯ ಹಿಡಿಯುವಂಥ ಭಾಗ್ಯ
ಸತ್ಯ ರೂಪದ ಅರಸ ನಡಿದಾವರೆಯಲಿ ಮುದದಿ
ಮುದುಡುತ್ತ ಮುಸಿ ನಗುವುದೆನಗೆ ಯೋಗ್ಯ.
👉🏻 *ತುಂಬಾ ಮೋಹಕವಾಗಿದೆ*
ಅಮ್ಮನಿಗೆ ಶಿರಬಾಗಿ ನಮಿಸಿಹೆನು ಪಿತನಿಗೂ ಜತೆಗೆ
ಭವಿತವ್ಯ ಬೆಳಗುವೆಡೆಗೆ ಅಡಿಯನಿರಿಸಿ.
ಹೆಮ್ಮೆ ತುಂಬಿದ ಮನದ ಭಾಂಡವನು ಧರಿಸುತ್ತ
ತನ್ಮಯತೆಗೆರವಾಗಿ ಹರುಷದ ಹೊನಲ ಹರಿಸಿ.
👉🏻 ಮೇಲಿನೆರಡು ಚರಣಗಳ ಮುಂದೆ ಕೊಂಚ ಸಪ್ಪೆ.
*ಒಟ್ಟಾರೆ ಪದಗಳು ಹೆಚ್ಚೆನಿಸುತ್ತವೆ, ಗೇಯತೆಗೆ ಸಾಲುಗಳು ಹೆಚ್ಚು ಉದ್ದವೆನಿಸುತ್ತವೆ*
#####
####೨-ಗೀತಾಮಂಜು ಅವರ
*ರಾಮನ ರಾಣಿ*
ಕೊಟ್ವಿರುವ ವಿಷಯಕ್ಕೆ ಸಮಂಜಸವಾದ ಭಾವಗೀತೆಯಾಗಿದೆ.
*ಪಲ್ಲವಿ*
ಪುರುಷೋತ್ತಮನ ಪುರಕ್ಕೆ
ಪಯಣ ಬೆಳೆಸಿಹೆ ನಾನು
ಪುರದ ಪುಣ್ಯ ಪುರುಷನ
ವರಿಸಿ ಜನ್ಮ ಪಾವನ //
*ಚೆನ್ನಾಗಿದೆಯಾದರೂ ಅಪೂರ್ಣವೆನಿಸುತ್ತಿದೆ*
*ಚರಣ*
ದೊರೆಯ ದರ್ಪ ತೋರದ
ಜನರ ಸೇವೆ ಮರೆಯದ
ಸ್ನೇಹ ಪ್ರೀತಿಯ ಒಡಲಿದು
ಎಂದೂ ಬತ್ತದ ಕಡಲಿದು//
*ಇದು ರಾಮನ ಗುಣಗಾನವಾಗಿದೆ. ವಿಷಯಕ್ಕೆ ಭಿನ್ನವಾಗಿದೆ*.
*೨*
ಸಸ್ಯಶಾಮಲೆ ಹಸಿರು ಹಾಸಿ
ಮೇಘಮಾಲೆ ಹೂವು ಸುರಿಸಿ
ನಿತ್ಯಕೋಮಲೆ ನಗುತ್ತ ಬಂದೆ
ಸಪ್ತಪದಿಯನ್ನು ಇಟ್ಟು ಬಂದೆ //
*ಇದೂ ಕೂಡಾ ಸೀತೆಯ ಸ್ವಂತಿಕೆ ತೋರಿ ಭಿನ್ನವಾಗಿದೆ*
ರಾಮರಾಜ್ಯದ ರಾಣಿ ನಾನು
ವಿಶ್ವಪಥದಲ್ಲಿ ಮೆರಗು ಇನ್ನೂ
ರಘವಂಶದ ಸೊಸೆಯು ನಾನು
ಧರ್ಮದಾರಿಯ ದೀಪವಿನ್ನು //
ಜನ್ಮ - ಜನ್ಮದ ನಂಟಿದು
ಬ್ರಹ್ಮ ಬೆಸೆದ ಗಂಟಿದು
ಹೀಗೆ ಇರಲಿ ಅನುದಿನ
ಮಧುರವಾಗಲಿ ಪ್ರತಿದಿನ //
*ಕೊನೆಯ ಎರಡೂ ಚರಣಗಳು ತುಂಬಾ ಚೆನ್ನಾಗಿವೆ*
###೩-ಪ್ರೇಮ್ ಅವರ
*ಹೇಗೆ ತೊರೆಯಲಿ ತವರ*..
ಸುಂದರ ಹಾಗೂ ವಿಷಯಕ್ಕೆ ಸಮಂಜಸವಾಗಿದೆ.
*ಪಲ್ಲವಿಯೂ ಸೂಕ್ತವಾಗಿದೆ*
ವರ ಮಹಾನುಭವ ದಶರಥ ಕುವರ
ಅಯೋಧ್ಯೆಗೆ ರಾಜ ಮಹಾರಾಜ
ವೀರಾಧಿ ವೀರ ಶೂರನು ಅವನು
ಆದರೂ ತವರ ಹೇಗೆ ತೊರೆಯಲಿ?
*ಚರಣ*
ಆಡಿ ಬೆಳೆದು ಒಂದಾಗಿ ಬಾಳಿದ
ನೆರಳು ಬೆಳಕಲಿ ಬಾಳ ದೂಡಿದ
ದಿನಗಳ ನಾನು ಹೇಗೆ ಮರೆಯಲಿ
ತವರ ಬಾಂಧವ್ಯ ಹೇಗೆ ಮರೆಯಲಿ..
*ಸೀತೆಯ ಮನದ ತಳಮಳ ಸೊಗಸಾಗಿದೆ👍🏼👌🏼👌🏼*
ಅಮ್ಮನ ಕೈತುತ್ತು ಅಪ್ಪನ ಪ್ರೀತಿ
ತಮ್ಮನ ಆಟ ಗೆಳೆಯರ ಕೂಟ
ಮರೆಯಲಾರೆ ತೊರೆಯಲಾರೆ
ತವರ ಸಿರಿಯ ಎಂದಿಗೂ ನಾನು..
👉🏻ಸೂಕ್ತ ಭಾವಗಳಿದ್ದರೂ *ಅಮ್ಮನ ಕೈತುತ್ತು ,ತಮ್ಮನ ಆಟ, ಗೆಳೆಯರ ಕೂಟ*🤔 ಕೊಂಚ ಯೋಚಿಸಬೇಕು.
ಹಕ್ಕಿಯ ಚಿಲಿಪಿಲಿ ಪಕ್ಕದ ಗಲಿಬಿಲಿ
ಚಿಕ್ಕ ಮಕ್ಕಳ ಪಳಪಳ ಕಲರವ
ಬಕ್ಕ ಡಕ್ಕಣರ ಪಕಪಕ ನೋಟ
ನಾ ಹ್ಯಾಂಗ ಮರೆಯಲಿ ತವರಿನ ಕೂಟ...
👉🏻 *ಈ ಚರಣವೂ ಭಾವಪೂರ್ಣವಾಗಿದೆ*.
🌈🌈🌈🌈🌈🌈🌈🌈🌈🌈
*ಫಲಿತಾಂಶ*
ಪ್ರಥಮ @@@ ಪ್ರೇಮ್
ದ್ವಿತೀಯ @@@ ಡಾ. ಸುರೇಶ್ ನೆಗಳಗುಳಿ
ತೃತೀಯ @@@ ಗೀತಾಮಂಜು
ವಿಜೇತರಿಗೆ ಅಭಿನಂದನೆಗಳು💐💐💐
ತ್ರಿನೇತ್ರಜ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ