ನಾನೇ ಪ್ಲಾಸ್ಟಿಕ್
ನಿಮ್ಮಯ ಕೈಯಲಿ ನಾನೇ ಮೆರೆವೆ
ಜಗತ್ತಿನ ಮೊದಲನೆ ಸ್ಥಾನದಲಿರುವೆ
ನಿನ್ನಗತ್ಯಕೆ ನಾನೇ ಬರುವೆ
ನನ್ನ ಬಿಟ್ಟು ನೀ ಹೇಗಿರುವೆ...
ಪ್ರಪಂಚವನೆ ನಾ ಆಕ್ರಮಿಸಿರುವೆ
ನಿನ್ನೊಡಲಲೆ ಮೆರೆದು ನಿನ್ನನೆ ಕೊಲುವೆ
ದನ-ಕರು ಪಕ್ಷಿಯ ನಾ ಬಿಡಲಾರೆ
ಹೊಟ್ಟೆಯ ಸೇರಿ ಹೊರಬರಲಾರೆ...
ನಿನ್ನಯ ಬುದ್ಧಿಯ ಮಗು ನಾನಾಗಿರುವೆ
ಯೋಚಿಸಿ ಬಳಸು, ಪರಿಸರ ಕೆಡಿಸುವೆ
ನಿನ್ನಯ ಮಕ್ಕಳ ಬದುಕನು ನೆನೆದು
ತಡೆ ನನ್ನನು ಮರುಬಳಕೆ ಪಡೆದು..
ನನ್ನನು ಬಿಸುಟರೆ ಪರಿಸರಕೆ ಮಾರಕ
ನನ್ನನು ಸುಟ್ಟರೆ ಶ್ವಾಸಕೋಶಕೆ ಕಂಟಕ
ಕರಗಲು ಆಗದ ಜೀವವ ಬಿಡದ
ನನ್ನಯ ಜೀವನ ನಿನ್ನಯ ಶ್ರಾದ್ಧ!!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ