ಗಝಲ್
ಕಾರ್ಗತ್ತಲ ಬಾಳಲಿ ಕಿಡಿಯಾಗಿ ಬಂದೆ ಭಗವಾನ್..
ಕಾರಿರುಳ ರಾತ್ರಿಯಲಿ ಬೆಳಕಾಗಿ ನಿಂದಿರುವೆ ಭಗವಾನ್..
ಕರುವಿಗೆ ಹಸುವಿನಂತೆ ಹಾಲುಣಿಸಿ ಸಲಹುತಿರುವೆ.
ಮನದಿ ಶಾಂತಿ ಸಂತೋಷವ ತುಂಬಿರುವೆ ಭಗವಾನ್.
ನಾಯಿ ನರಿಗಳು ಬದಿಯಲಿ ಬರಿದೆ ಊಳಿಡುತಿವೆ.
ನಾಶ ಮಾಡದೆ ಸಿಹಿ ಕನಸುಗಳ ತ೦ದಿರುವೆ ಭಗವಾನ್.
ಜಗದಿ ರತ್ನಖಚಿತ ದೇಹವೆನಗೆ ಬೇಕಾಗಿಯೇ ಇಲ್ಲ.
ತಾಳ್ಮೆಯಿಂದ ಜನ್ಮವ ಸಾರ್ಥಕಗೊಳಿಸಿಸಿರುವೆ ಭಗವಾನ್.
ಬಾಳಲಿ ನೋವು ನಲಿವುಗಳ ಸಮದಿ ಹಂಚಿರುವೆ!
ಬಾಡದ ನೆನಪುಗಳ ಬೀಜ ಬಿತ್ತಿರುವೆ ಭಗವಾನ್.
ನಲಿವನು ತುಂಬಿ ಹೃದಯದಿ ಕಲಿಕೆಯಿತ್ತಿರುವೆ.
ನಾದವ ತುಂಬುತ ನಾಟ್ಯವಾಡುತಿರುವೆ ಭಗವಾನ್.
ಪ್ರೇಮವ ಮನಕೆ ಮೊಗೆಮೊಗೆದು ನೀಡುತಲಿರುವೆ.
ಭಕ್ತಿ ಬೆಳಕಿನ ಕಿರಣಗಳ ಪಸರಿಸಿರುವೆ ಭಗವಾನ್.
@ಪ್ರೇಮ್@
09.11.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ