ಗಝಲ್
ಸಮಾಜದೊಳಗೆ ನೋವ ಕೊಡಲನೇಕರು ಹುಟ್ಟಿರುವರು ದೋಸ್ತ್.
ಸರಿಸಮಾನನಲ್ಲವೆಂದು ಬಗೆದು ಪರಿಪರಿಯಲಿ ತೆಗಳುವರು ದೋಸ್ತ್.
ತಾಯ ಪ್ರೀತಿ, ತಂದೆಯ ಜವಾಬ್ದಾರಿಯಿರಬೇಕು ಜೀವನದಿ.
ಪ್ರೀತಿಯ ಅವಿರತ ಮಳೆಗೈಯದೆ ದ್ವೇಷ ಕಾರುವರು ದೋಸ್ತ್!
ಹೃದಯವೆಂಬ ಮಂದಿರದಿ ಸಮಯಕಿರಲಿ ಬಹಳವೇ ಮಹತ್ವ.
ಎದೆದೊಳಿರಬೇಕು ಕರುಣೆ, ಹೊಂದಾಣಿಕೆಯೆಂಬುದ ಮರೆವರು ದೋಸ್ತ್!
ತಮ್ಮ ಕಾಲಬುಡವನೆ ಮಲಿನಗೊಳಿಸುವ ಜನರಿಹರು!
ಪರರ ಕಾರ್ಯಕೆ ಸದಾ ಕೊಡಲಿ ಹಾಕುತಲಿಹರು ದೋಸ್ತ್!
ಸರಿಯಿದ್ದರೂ ಸರಿಯಿಲ್ಲ ಸಹಿಸದೆ ಸಹನೆಯಿಂದ ಜಗದೊಳಗೆ.
ಸುಳ್ಳಿದ್ದರೂ ಸತ್ಯವೆನುವಂತೆ ನಟನೆ ಮಾಡೆನುವರು ದೋಸ್ತ್!
ಮರಕಡಿದು ಮನೆಮಾಡಿ ಮಸೆಮಸೆದ ಮನದಿ ಬದುಕುತಿಹರು.
ಮುಖವಾಡವ ಧರಿಸಿ ನಗುತ ಒಳಗೊಳಗೆ ಕೆಂಡದಂತೆ ಕುದಿಯುವರು ದೋಸ್ತ್!
ಪರಸ್ಪರ ಸಹಕಾರ, ಸರಿದಾರಿಯಲಿ ಇದ್ದು ಒಂದಾಗಬೇಕು.
ಪ್ರೇಮದಿ ಪ್ರೀತಿ ಹಂಚುತಲಿ ಸರ್ವರೂ ಬಾಳಲಾರರು ದೋಸ್ತ್!
@ಪ್ರೇಮ್@
04.11.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ