ಮಾರುಗೆದ್ದರಾಗದು ಮನಗೆಲ್ಲಬೇಕಲ್ಲವೇ ಗಾಲಿಬ್..
ಮನನೊಂದರೂ ಮನೆ ಕಟ್ಟಲಿಲ್ಲವೇ ಗಾಲಿಬ್..
ಮದದಿಂದ ಮೆರೆದೆ ಮುದದಲಿ ನೀನು
ಮದವೇರಿದುದು ಕರಗಿತಲ್ಲವೇ ಗಾಲಿಬ್..?
ಮುದುಕರನೂ ಬಿಡದೆ ಕಾಡಿರುವೆಯಾ
ಮೋಜಿನ ಬದುಕು ನನ್ನದಾಗಿಲ್ಲವೇ ಗಾಲಿಬ್..
ಮದಿರೆಯ ಮಂಥನದಿ ಮನನೋಯಿಸಿದೆ
ಮೋಹಕ ನೋಟದಿ ನಾ ಬದುಕಲಿಲ್ಲವೇ ಗಾಲಿಬ್..?
ಮೋಸದಾಟದಿ ಸೋಲಿಸಿ ಮೆರೆದೆ.
ಮೋದಕ ಪ್ರಿಯ ನನಗೊಲಿಯಲಿಲ್ಲವೇ ಗಾಲಿಬ್?
ಮುಂಗುಸಿಯಂತಿದ್ದ ನನ್ನ ಮೇಲೆ ಹಾವಿನಂತೆರಗಿದೆ.
ಜನ ನಿನಗೆ ಮಸಿಮುಸಿ ನಗಲಿಲ್ಲವೇ ಗಾಲಿಬ್?
ಮುಖವಾಡವ ಹೊತ್ತು ಮೈಮರೆತೆ
ಮೋಸದಲಿ ಪ್ರೇಮ ಸೋತರೂ ಗೆಲ್ಲಲಿಲ್ಲವೇ ಗಾಲಿಬ್?
@ಪ್ರೇಮ್@
08.11.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ