ಮಂಗಳವಾರ, ನವೆಂಬರ್ 12, 2019

1275. ಗಝಲ್-10

ಗಝಲ್

ಜೀವಕೆ ಜೀವವಾದೆ ನೀ ನಮ್ಮ ಕುಕೂರ್
ಮನೆಗೆ ಮಗುವಾದೆ ನೀ ನಮ್ಮ ಕುಕೂರ್..

ಇಡೀ ಕುಟುಂಬ ವರ್ಗವ ಸಂತಸದಿ ತೇಲಿಸಿದೆ
ಮಕ್ಕಳೊಡನೆ ಆಟವಾಡಿದೆ ನೀ ನಮ್ಮ ಕುಕೂರ್!

ಜನರೊಡನೆ ಸಂಯಮದಿ ಬೆರೆತು ಹೋದೆ
ಪ್ರೀತಿಗೆ ನೀತಿಯಾದೆ ನೀ ನಮ್ಮ ಕುಕೂರ್..

ಮುದ್ದು ನಾಯಿಮರಿಯಾಗಿ ಬೆಳೆದುದೇ ತಿಳಿಯದು
ನಗೆಗಡಲಲ್ಲಿ ತೇಲಿಸಿದೆ ನೀ ನಮ್ಮ ಕುಕೂರ್..

ಮನೆ ಮನವ ಹಗುರಾಗಿಸುತ ಬದುಕಿದೆ.
ಧೃತಿಗೆಡದೆ ಬಾಳಿದೆ ನೀ ನಮ್ಮ ಕುಕೂರ್..

ನೋವುಂಡರೂ ತೊಂದರೆ ಕೊಡಲಿಲ್ಲ ನೀನು
ಮದ್ದಿನಂತೆ ಬಾಳ ಸವೆಸಿದೆ ನೀ ನಮ್ಮ ಕುಕೂರ್..

ಪ್ರೀತಿಯಲಿ ಬಾಳುತ್ತ ಪ್ರೀತಿ ನಗುವ ಹಂಚಿದೆ 
 ಸ್ವಾಮಿನಿಷ್ಠೆಯ ಪಾಠ ಕಲಿಸಿದೆ ನೀ ನಮ್ಮ ಕುಕೂರ್.
@ಪ್ರೇಮ್@
12.11.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ