ಗುರುವಾರ, ಜನವರಿ 2, 2020

1307.ನುಲಿನುಡಿ

ನುಲಿನುಡಿ..

ನದಿಯಲಿ ನದಿಯದು ಸಂಗಮವಾಗೆ
ಸಾಗರ ತುಂಬಬಹುದು.
ಕೆರೆ ಕೊಳ ಹಳ್ಳವು ತುಂಬುತ ಹರಿಯೆ
ನದಿಗದು ನೀರು ಸಾಗುವುದು..

ಮುದ್ದಿನ ಪುಟಾಣಿ ಮಕ್ಕಳು ಕಲಿಯೆ
ನಾಳಿನ ದೇಶವು ಮೆರೆಯುವುದು
ಸದ್ದಿಲ್ಲದೆಯೇ ಕಾರ್ಯವ ಮಾಡಲು
ಬದುಕಿನ ಚಿಗುರದು ಮೊಳೆಯುವುದು..

ನಾಡಿನ ಭಾಷೆಯ ಬಳಸಲು ಎಲ್ಲರೂ
ಕನ್ನಡ ತಾನಾಗೇ ಬೆಳೆಯುವುದು
ಓದುತ ಬರೆಯುತ ಅಕ್ಷರ ಬಳಸಲು
ಭಾಷೆಯ ವೃದ್ಧಿಯು ಬೆಳಗುವುದು.

ಮನೆಮನದಲಿ ಮಾತೃಭಾಷೆಯ  ಮರೆತರೆ
ಮುಂದಿನ ಪೀಳಿಗೆಗದು ಸಾಯುವುದು
ನಮ್ಮಯ ಸಂಸ್ಕೃತಿ ನಾವೇ ಉಳಿಸಲು
ಸರ್ವರು ಪಣ ತೊಟ್ಟು ಕಾಯುವುದು..

ಭಾಷೆಯ ಕಲಿತು ತಿಳಿದೆಡೆ ಬಳಸಿ
ಸಂದರ್ಭಕೆ ಸರಿ ಬಳಸೋಣ
ಕನ್ನಡ ತಾಯಿಯ ಅನ್ನದ ಋಣವನು
ಸಾಹಿತ್ಯ ಸೇವೆಯಲಿ ನೀಡೋಣ..

ನಾನು ನನ್ನದು ಎನ್ನಲು ಕನ್ನಡ
ಮರೆತರೂ ಮರೆಯದೆ ಹೋಗುವುದು
ನನ್ನದು ಎಂಬ ಪ್ರೀತಿಯು ನಮ್ಮನು
ಸರ್ವೆಡೆಯಲ್ಲೂ ಕಾಯುವುದು..
@ಪ್ರೇಮ್@
23.11.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ