ನಾ ಬರಲೇ..
ಕನಸು ಕರಗಿ ಕಣ್ಣೀರಾದ ಬಾಳಿಗೆ
ನಿರ್ಮಲ ನಗುವಾಗಿ ನಾ ಬರಲೇ?
ಕೊಳೆಯ ತುಂಬಿ ನಾರುವೆಡೆಯು
ಪರಿಮಳದ ತಂಗಾಳಿಯಾಗಿ ಬೀಸಿ ಬರಲೇ?
ಸೋತು ಹೋಗಿ ಬೇಸರದಿ ಕಂಗಾಲಾಗೆ
ವಿಜಯ ಪತಾಕೆಯಾಗಿ ಹಾರಿ ಬರಲೇ?
ಕೊಳಕು ಮನದಿ ನಲುಗಿ ಬೀಳುತಲಿರಲು
ಮಂಜುಳ ನಾದನಾಗಿ ಬರುತ ಎಬ್ಬಿಸಲೇ?
ಇಳೆಯ ಒಳಗೆ ಮಮತೆಯ ಜಯವ ಮರೆಯೆ
ಅಂಬುಜವಾಗಿ ಅರಳಿ ಸಂತಸವ ತರಲೇ?
ರತ್ನದಂಥ ಮಾತುಗಳ ಮರೆತು ಬಾಳುವಾಗ
ದಿವ್ಯಗೀತವಾಗಿ ನಿನ್ನ ನಯನ ತೆರೆಸಲೇ?
ಸಾಹಿತ್ಯ ಸುಧೆಯ ಮರೆತು ಬಿಡಲು
ಪಂಕಜದಂತೆ ಮಾನಸಪುತ್ರಿಯಾಗಲೇ?
ಸಿದ್ಧಗೊಂಡ ನೈಜ ಬಾಳು ಹಾಳು ಮಾಡೆ
ಮದ್ದಿನಂತೆ ಬಂದು ನಾನು ಹಿತವ ನೀಡಲೇ?
ರಜನಿಯಲ್ಲಿ ಜನರು ನಿಜದ ಸಹನೆ ಮರೆತು
ದೂರಕ್ಕಟ್ಟುವಾಗ ಬಂದು ಬರಸೆಳೆದುಕೊಳ್ಳಲೇ?
ದ್ವೇಷದಿಂದ ಮನವು ನಿನ್ನ ದೂರಮಾಡಿ ಅಳುತಿರಲು
ಪ್ರೇಮದಿಂದ ಬಂದ ಜ್ಯೋತಿಯಾಗಿ ಬೆಳಗಲೇ?
@ಪ್ರೇಮ್@
13.11.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ