ಭಾವಗೀತೆ
ಇಂದು-ನಾಳೆಗಳೊಡನೆ
ನಾಳೆಗಳ ನಾಲೆಯಲಿ
ಇಂದೇಕೆ ಬದುಕುವಿರಿ
ಇಂದಿನೈಸಿರಿ ಸೊಬಗ
ಇಂದೆ ಅನುಭವಿಸಿ...
ಮನವ ಮರ್ಕಟದಂತೆ
ಹರಿಯ ಬಿಡದೆಯೆ ಬಾಳಿ
ಮಂಜಾಗರೂಕತೆಯ ದೃಷ್ಟಿ ತಾಳಿ..
ಮಾನವತೆಗೆ ಬೆಳಕ ನೀಡಿ..
ಪ್ರತಿ ನಾಳೆಗಳಿಗಾಗಿ
ಇಂದಿನ ಕೊಲೆಯೇಕೆ?
ಇಂದಿನ ದಿನವನ್ನು
ಇಂದೆ ಬಳಸಬಾರದೇಕೆ?
ಮೋಸದೊಲುಮೆಯು ಬರದೆ
ಪ್ರೀತಿಗೆ ಗೆಲುವಾಗಿ
ಇಂದು ನಾಳೆಗಳಾಟದಲಿ
ಇಂದು ಮನ ಹಗುರಾಗಿ..
ನಾಳೆ ಹೇಗೋ ಏನೋ
ಇಂದು ನಮ್ಮದೆ ಸಮಯ
ಸಂಯಮದಿ ಬಾಳಿರಲು
ತಾಳ್ಮೆ ಸರ್ವಗೆ ನ್ಯಾಯ..
@ಪ್ರೇಮ್@
02.01.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ