ಮಡದಿಯಿಲ್ಲದ ದಿನ...
ಮನೆಯ ಗೃಹಿಣಿ ತವರಿಗ್ಹೋಗೆ
ನಾನು ಮೆಚ್ಚಿದೆ.
ಸ್ವಾತಂತ್ರ್ಯವು ಸಿಕ್ಕಿತೆಂದು
ಮನದಿ ಹಿಗ್ಗಿದೆ.
ಹೋಟೆಲೂಟ ತುಂದು ಬಂದು
ನಾನು ಮಲಗಿದೆ
ಅರ್ಧ ರಾತ್ರಿಯಲ್ಲೆ ಭೇದಿಯಿಂದ
ನಾನು ಸೊರಗಿದೆ..
ನಾನೇ ಅಡಿಗೆ ಮಾಡಲೆಂದು
ಒಲೆಯ ಹಚ್ಚಿದೆ.
ಚಿತ್ರಾನ್ನವೆ ಇರಲಿ ಎನುತ
ಟೋಮೆಟೋ ಹೆಚ್ಚಿದೆ.
ಅರಶಿಣವ ಹಾಕಲಿಕ್ಕೆ
ನಾನು ಮರೆತ್ಹೋದೆ!
ಇರಲಿ ನಾನೇ ತಿನುವೆ
ಎನುತ ತಟ್ಟೆಗ್ಹಾಕಿದೆ.
ದೂರದಿಂದ ಮಾವನವರ
ನೆಂಟ್ರು ಬಂದರು.
ಅನ್ನ ನೋಡಿ ತಟ್ಟೆಯಲ್ಲಿ
ಅವರು ನಕ್ಕರು.
ಚಿತ್ರಾನ್ನವು ಎನ್ನಲದುವ
ಬೆಚ್ಚಿ ಬಿದ್ದರು.
ಫೋನಿನಲ್ಲಿ ಮಡದಿ ಕೇಳೆ
ತವರವರು ನಕ್ಕರು..
@ಪ್ರೇಮ್@
11.11.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ