ಸುಮ್ಮನೆ
ಮೊಬೈಲ್ ಬಳಸುವೆವು
ಮಾತನಾಡಲು ಸಮಯವಿಲ್ಲ
ಕರೆಮಾಡಲು ಪುರುಸೊತ್ತಿಲ್ಲ
ಯಾರ ಬಗ್ಗೆಯೂ ತಿಳಿದಿಲ್ಲ
ಮನಸ್ಸಿಗೆ ಶಾಂತಿಯಿಲ್ಲ
ದುಡಿಯುತ್ತಲೇ ಇರುವೆವು
ಖರ್ಚಿಗೆ ಹಣವಿಲ್ಲ
ಸಾಲ ಕೊಡಲು ದುಡ್ಡಿಲ್ಲ
ದಾನ ಮಾಡಲು ಧನವಿಲ್ಲ
ಕೈ ಜೋಡಿಸಲು ಕೈ ಉದ್ದವಿಲ್ಲ!
ಬದುಕುತ್ತಲೇ ಇರುವೆವು
ಮುಖದಿ ನಗೆ ತರಲಾಗದು
ನೋಡಿ ನಗು ಬರದು
ಮಾತನಾಡಲಾಗದು
ಕಷ್ಟ ಸುಖ ವಿಚಾರಿಸಲಾಗದು..
ಸಮಯವಿಲ್ಲ ನಮಗೆ
ಸರಿಯಾಗಿ ತಿನ್ನಲು
ಮನೆಮಂದಿಯ ಗಮನಿಸಲು
ಮಕ್ಕಳನ್ನು ಮಾತನಾಡಿಸಲು
ಹಿಂದಿನಂತೆ ಜತೆಗೂಡಲು..
ನಾವು ಬದುಕುತ್ತಿದ್ದೇವೆ
ನಾವು ದುಡಿಯುತ್ತಿದ್ದೇವೆ
ನಾವು ಹೆಸರು ಮಾಡುತ್ತಿದ್ದೇವೆ
ನಾವು ಪ್ರಶಸ್ತಿ ಪಡೆಯುತ್ತಿದ್ದೇವೆ
ನಾವು ಸಂತಸದಿಂದಿರುವೆವಾ..
ನಾವು ಟೆನ್ಶನ್ ಬಿಟ್ಟಿದ್ದೇವಾ
ನಾವು ನಗುವುದ ಕಲಿತಿರುವೆವಾ
ನಾವು ನೋವು ನಲಿವು ಹಂಚುವೆವಾ..
@ಪ್ರೇಮ್@
08.12.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ