ಸ್ವತಂತ್ರ ಬೇಕು
ಬಂಧನವಿರದ ಬದುಕದು ಬದುಕು
ಬಂಧನವಿರೆ ಸಾಧ್ಯವೆ ಸಹಬಾಳ್ವೆ?
ಪ್ರಾಣಿಗೂ ಪಕ್ಷಿಗೂ ಸ್ವಾತಂತ್ರ್ಯ ಬೇಕು
ಪಂಜರದೊಳಗಡೆ ಖುಷಿ ಹೇಗೆ?
ಬಂಗಾರದ್ದಾದರೂ ಪಂಜರ ಬೇಡವು
ನಂಜಿನ ಐಸಿರ ಏಕಾಗಿ?
ಗಂಜಿಯ ತಿಂದರೂ ಸಂತಸ ಬಾಳದು
ಹಂಚುತ ತಿನ್ನುವ ಕ್ಷಣವಾಗಿ..
ಮುಂಜಾನೆ ಮಂಜಲೂ ಹನಿಯ ಸ್ವತಂತ್ರ
ಬದುಕದು ಹೊಳೆವುದು ಮುತ್ತಾಗಿ..
ನೇಸರ ತರುವ ಹೊನ್ನಿನ ಕಿರಣ
ಬಂಧನವಿರೆ ಬರದು ಧರೆಗಾಗಿ!
ನಾಳೆಯು ಏನೋ ಯಾರಿಗೆ ಗೊತ್ತು
ಬದುಕಲಿ ಬೇಡವು ಬಂಧನವು
ಸಂತಸ ಬೇಕದು ಇಂದಿನ ಬಾಳಿಗೆ
ನೆಮ್ಮದಿ ತಾನೇ ನೆರಳಾಗಿ?
@ಪ್ರೇಮ್@
03.01.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ