ಗಝಲ್
ನನ್ನಮ್ಮನ ಬದುಕಿಗೆ ಸಂತಸ ತಂದ ನಾನೇ ಅಂಬಾರಿ
ತಲೆ ಮೇಲೆ, ಎದೆಯಲಿ ಬಿರಿದ ನಾನೇ ಅಂಬಾರಿ!
ಬಣ್ಣ ಬಣ್ಣದ ರೂಪ ಧರಿಸಿ ನಗುತಲಿ ಜನಿಸಿರುವೆ
ಕಣ್ಣ ಮಾತ್ರವಲ್ಲ ಮನವನೂ ಕುಕ್ಕಿದ ನಾನೇ ಅಂಬಾರಿ!
ದೇವರ ಪಾದ ಸೇರಲೆಂದು ಅಣಿಯಾಗಿ ಕುಳಿತು ಕಾಯುತಿರುವೆ,
ನೂಲಿನ ಸಹಾಯದಿ ದೇವಾಲಯಕೆ ಬಂದಿಳಿದ ನಾನೇ ಅಂಬಾರಿ!
ಒಂದೇ ದಿನದ ಪುಟ್ಟದಾದ ನಗೆಯು ನನ್ನ ಬಾಳುವೆ!
ಮದುವೆ ಮನೆಗೂ ಹೋಗಿ ಮೆರೆದ ನಾನೇ ಅಂಬಾರಿ!
ಜನ ವಿಷವ ಚುಚ್ಚಿ ಮದ್ದು ನೀಡಿ ಸಲಹುವರು.
ಪೂಜೆ-ತಿಥಿ,ಭಜನೆ, ಶೃಂಗಾರಕೆ ಬಂದ ನಾನೇ ಅಂಬಾರಿ!
ಶೋಕಿ ಜನರ ಕೈಗೆ ಸಿಕ್ಕಿ ಬೆಂದು ಹೋದೆ ಬದುಕಲಿ
ಶೋಭಾಯಾತ್ರೆ, ಮೆರವಣಿಗೆ,ನೃತ್ಯ ವೈಭವಕ್ಕಾಗಮಿಸಿದ ನಾನೇ ಅಂಬಾರಿ!
ಮುದ್ದಿನಿಂದ ಹಿಡಿದು ಕಟ್ಟಿರೆನ್ನ ಬೇಗ ನಾನು ನಲುಗುವೆ!
ಪ್ರೀತಿಯ ಸಂಕೇತದಿಂದ ಗೆಳತಿಗಾಗಿ ತಂದ ನಾನೇ ಅಂಬಾರಿ!
@ಪ್ರೇಮ್@
19.12.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ