ಗುರುವಾರ, ಜನವರಿ 2, 2020

1312. ಮಗುವಂತೆ

ಮಗುವಂತೆ...

ಮಗುವಿನಂತೆ ಸಿಹಿನಗುವ ಬೀರಿ
ಮಗುವಿನಂತೆ ಸಂತಸವ ಸಾರಿ
ಮಗುವಿನಂತೆ ಮನದಣಿಯೆ ಹಾರಿ
ಮಗುವಿನಂತೆ ಮರದಡಿಯಲಿ ಜಾರಿ...

ಮಗುವಿನ ನಗುವ ಮುಖದಿ ತೋರಿ
ಮಗುವಿನ ಸುಖವನು ಗಾಳಿಗೆ ತೂರಿ
ಮರೆತಿಹಳು ಹಾಲೂಡಲು ಹೊಸ ನಾರಿ!
ಮುಂದಾಗಿಹಳು ಸಾಗಿಸೆ ತನ್ನ ಗುರಿ!

ತನ್ನ ಮಗುವ ತಾನೇ ಮಾರಿ
ಜೀವನ ಕಟ್ಟೊ ಬಡತನದ ಪರಿ
ಮಗುವೆ ತಾನೇ ಮನೆಯ ಸಿರಿ?
ಬದುಕಬೇಕು  ಸುಖ- ಕಷ್ಟ ಮೀರಿ!

ಬಾಳ ಬೇಕು ಸಣ್ಣ ಕಡ್ಡಿ ಗೀರಿ
ಮಾಡಬೇಡಿ ಮಕ್ಕಳ ಸೋಮಾರಿ
ತಿನ್ನಲಿ ಉತ್ತಮ ಸೊಪ್ಪು-ತರಕಾರಿ
ಗೆಲುವು ಬೇಕು ಬದುಕಲಿ ಭಾರಿ...

ಸಾಗಬೇಕು ತನ್ನಯ ಮರಿ
ನೆನಪಿರಬೇಕು ನಿತ್ಯ ಹರಿ!
ಆಗಬೇಡ ಎಂದೂ ಕುರಿ,
ಇರಲಿ ನಿನಗೆ ದೊಡ್ಡ ಗುರಿ!
@ಪ್ರೇಮ್@
14.11.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ