ಬುಧವಾರ, ಡಿಸೆಂಬರ್ 30, 2020

ದಿನಕ್ಕೊಂದು ನುಡಿ-1

ಮಾಮನವರು ಮಾನವರಾಗಲು ಮಾನವತೆಯೆಂಬ ಗುಣವಿರಬೇಕು. ನಮ್ಮೊಳಿದೆಯಾ ಎಂಬುದನ್ನು ನಾವೇ ಪರೀಕ್ಷಿಸಿಕೊಳ್ಳೋಣ. ಮಾನವರಾಗಿ ಹುಟ್ಟಿ ಮಾನವರಾಗಿ ಬದುಕಿ, ಮಾನವರಾಗಿ ಸಾಯೋಣ.ನೀವೇನಂತೀರಿ?
@ಪ್ರೇಮ್@
31.12.2020

2020 ಅವಲೋಕನ

2020-ಅವಲೋಕನ

ಈ ಹೊಸ ವರ್ಷವಾದರೂ ಚೆನ್ನಾಗಿರಲೆಂದು ಪ್ರತಿ ಆಂಗ್ಲ ಕ್ಯಾಲೆಂಡರಿನ ಹೊಸ ವರ್ಷ ಬಂದಾಗ ಆಶಿಸುವುದು ತಪ್ಪಲ್ಲ. ಅಂತೆಯೆ 2020ನ್ನು ಬರಮಾಡಿಕೊಂಡಾಯ್ತು. ಜನವರಿಯಿಂದ ನಾವೆಲ್ಲ ಎಸ್.ಎಸ್.ಎಲ್.ಸಿ ತರಗತಿಗಳಿಗೆ ಹೆಚ್ಚು ಫೋಕಸ್ ಮಾಡ್ತೇವೆ. ಸ್ಕೋರಿಂಗ್, ಪರೀಕ್ಷಾ ತಯಾರಿ, ರಾತ್ರಿ ತರಗತಿಗಳು, ಚೆನ್ನಾಗಿ ಕಲಿಯುವವರಿಗೆ ಸ್ಕೋರಿಂಗ್ ಐಡಿಯಾಸ್, ಕಲಿಕೆಯಲ್ಲಿ ಹಿಂದುಳಿದವರಿಗೆ ಉತ್ತೀರ್ಣತೆಯ ಟಿಪ್ಸ್, ಪ್ರತಿ ವಿಷಯಗಳಲ್ಲೂ ಉತ್ತಮ ಅಂಕಗಳೊಂದಿಗೆ ಎಲ್ಲಾ ಮಕ್ಕಳನ್ನು ಪಾಸ್ ಮಾಡಿಸುವ, ಶಾಲೆಗೆ ಉತ್ತಮ ಹೆಸರು ತರುವ, ಉತ್ತಮ ಬ್ಯಾಚನ್ನು ಶಾಲೆಯಿಂದ ಹೊರಗೆ ಕಳಿಸುವ ಗುರುತರ ಜವಾಬ್ದಾರಿಯ ನೆರಳಿನಲ್ಲೆ ಪ್ರತಿ ಹೊಸ ವರುಷದಂತೆ ಇದನ್ನೂ ಎದಿರುಗೊಂಡೆವು. ಆ ಕಷ್ಟ ಪಟ್ಟ ಕೆಲಸ ಇನ್ನೇನು ಕೊನೆಗೊಳ್ಳಬೇಕು, ಪರೀಕ್ಷೆಗಳು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಮೊದಲೇ ಚೈನಾದಲ್ಲಿ ಹುಟ್ಟಿದ್ದ ಕೊರೋನಾ ವೈರಸ್ ಭಾರತ, ಕರ್ನಾಟಕಕ್ಕೂ ವಕ್ಕರಿಸಿಕೊಂಡು ಬಿಟ್ಟಿತು. ನೈಟ್ ಕರ್ಫ್ಯೂ, ಸೆಲ್ಫ್ ಕ್ವಾರೆಂಟೈನ್, ಮಧ್ಯಾಹ್ನದ ನಂತರ ಮನೆಯೊಳಗೆ ಹೀಗೆ 21 ದಿನ ಸಂಪೂರ್ಣವಾಗಿ ಒಬ್ಬಳೇ ಮನೆಯೊಳಗೆ ಕಳೆಯುವಂತಾಯ್ತು! ಆ ಇಪ್ಪತ್ತೊಂದು ದಿನಗಳು ಬದುಕಿನಲ್ಲಿ ಬಹಳ ಕಲಿತೆ. ನನ್ನ ಹವ್ಯಾಸಗಳು ನನ್ನ ಜತೆಯಾದವು. ಹಳೆ ಬಟ್ಟೆಯಿಂದ ಡೋರ್ ಮ್ಯಾಟ್ ತಯಾರಿಸುವುದು, ಬ್ಯಾಗ್ ಗಳ ತಯಾರಿಕೆ, ಟೈಲರಿಂಗ್ ಹಾಗೂ ಎಂಬ್ರಾಯ್ಡರಿಯಲ್ಲಿ ಹೊಸ ಹೊಸ ಪ್ರಯೋಗಗಳು, ಡ್ರಾಯಿಂಗ್ ಡಿಸೈನ್ ಗಳ ರಚನೆ, ಅಂಕಣ ಬರಹ, ಕವಿಗಳ ಗುಂಪಿನಲ್ಲಿ ಬರಹ, ಹರಟೆ, ಕಾಂಪಿಟೇಶನ್ ಇವು ಸಮಯವನ್ನು ಬಹಳಷ್ಟು ವೇಗದಲ್ಲಿ ಕಳೆಯುವಂತೆ ಮಾಡಿದವು. 
     ಏಪ್ರಿಲ್ 22ಕ್ಕೆ ಅಚಾನಕ್ಕಾಗಿ ನನ್ನ ಅತ್ತೆಯವರು ತೀರಿಕೊಂಡ ಸುದ್ದಿ ಬಂತು. ನಮ್ಮ ಮನೆಗೇ ನನಗೆ ಹೋಗಲು ಅನುಮತಿಯಿರಲಿಲ್ಲ. ಮೂರ್ನಾಲ್ಕು ಎಎಸ್ಐಗಳ ಸಹಾಯದಿಂದ ಹೇಗೇಗೋ ಕುಟುಂಬದ ಸ್ನೇಹಿತರ ಸಹಾಯ ಪಡೆದು ಮನೆ ಸೇರಿಕೊಂಡು ಅಂತಿಮ ವಿಧಿ ವಿಧಾನಗಳ ನೆರವೇರಿಸಿದ್ದಾಯ್ತು. ತದನಂತರ ನಮಗೆ ರಜೆಯೇನೂ ಇರಲಿಲ್ಲವಲ್ಲ, ಅಮ್ಮನ ಮನೆ ಉಡುಪಿ ಜಿಲ್ಲೆ, ಕೆಲಸ ದಕ್ಷಿಣ ಕನ್ನಡ ಜಿಲ್ಲೆ, ಗಂಡನ ಮನೆ ಚಿಕ್ಕಮಗಳೂರು ಜಿಲ್ಲೆ! ಮಗಳು ಅಜ್ಜಿ ಮನೇಲಿ, ಗಂಡ ಮನೇಲಿ, ನಾನು ಸುಳ್ಯದಲ್ಲಿ ಬಾಡಿಗೆ ಮನೇಲಿ ಬಾಕಿಯಾದ ಕಾರಣ ಆಚೀಚೆ ಹೋದಾಗೆಲ್ಲ ಕೈಗೆ ಸೀಲ್ ಹಾಕಿಸಿಕೊಂಡು ಎರಡೆರಡು ಬಾರಿ ಹದಿನಾಲ್ಕು ದಿನಗಳ ಕ್ವಾರೆಂಟೇನ್ ಮಾಡಿಕೊಂಡದ್ದಾಯ್ತು! 
      ಕೊರೋನ, ಸ್ಯಾನಿಟೈಝರ್, ಫೇಸ್ ಮಾಸ್ಕ್,ಕ್ವಾರೆಂಟೇನ್ ಎಂಬ ಹೊಸ ಹೊಸ ಪದಗಳ ಕಲಿತು ಪ್ರಾಯೋಗಿಕವಾಗಿ ಬಳಸಿದ್ದೂ ಆಯ್ತು! ಸರಕಾರದ ಆದೇಶದಂತೆ ಜೀವವನ್ನೇ ಪಣಕ್ಕಿಟ್ಟು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿದ್ದೂ ಆಯ್ತು. ಪ್ರತಿನಿತ್ಯ ಇನ್ನೂರು-ಇನ್ನೂರೈವತ್ತು ಕಿಲೋಮೀಟರ್ ಜರ್ನಿ ಮಾಡಿ ಮಂಗಳೂರಿಗೆ ಹೋಗಿ ಪೇಪರ್ ಗಳ ಇವ್ಯಾಲ್ಯೂವೇಶನ್ ಮಾಡಿ ರಿಸಲ್ಟ್ ಕೊಟ್ಟದ್ದೂ ಆಯ್ತು. ಶಾಲೆಗಳಿಗೆ ಅಡ್ಮಿಶನ್ ಕೂಡಾ ಆಯ್ತು, ಮನೆಮನೆಗೆ ಹೋಗಿ ವಿದ್ಯಾಗಮ ಮಾಡಿದ್ದೂ ಆಯ್ತು. ಕೋವಿಡ್ ಡ್ಯೂಟಿ ನಿರ್ವಹಿಸಿದ್ದೂ ಆಯ್ತು. ವಿದ್ಯಾರ್ಥಿಗಳು ಇಲ್ಲದ ಕಾರಣ ಶಾಲೆಯಲ್ಲಿ ನಾವೇ ಅಡಿಗೆ, ಕ್ಲೀನಿಂಗ್, ತೊಳೆಯುವ, ಗುಡಿಸುವ ಒರೆಸುವ, ಬಲೆ ತೆಗೆಯುವ, ಗಾರ್ಡೆನಿಂಗ್ ಸರ್ವ ಕಾರ್ಯಗಳನ್ನು ಮಾಡಿದ್ದೂ ಆಯ್ತು. ಆನ್ ಲೈನ್ ಪಾಠಗಳನ್ನು ಕೊಟ್ಟದ್ದೂ ಆಯ್ತು!
ಇದೆಲ್ಲವೂ 2020ರ ಹೊಸ ಅನುಭವಗಳೇ. ಕೊರೋನದ ನಡುವೆ ವರ್ಷದ ಕೊನೆಯಲ್ಲಿ ಕೊರೋನದ ಮರಿ ಬಂದು ಹಾಹಾಕಾರ ಎಬ್ಬಿಸುತ್ತಿದ್ದರೂ ಗ್ರಾಮ ಪಂಚಾಯತ್ ಚುಣಾವಣೆ ಮಾಡಿ ಮತಗಳ ಎಣಿಸಿ ಲೆಕ್ಕಾಚಾರ ಕೊಟ್ಟದ್ದೂ ಆಯ್ತು. 
   ಕೊರೋನ ಬಂದು ಹಲವಾರು ನೀತಿ ಪಾಠ ಕಲಿಸಿತು. 
1  ಒಂದೇ ತಾಲೂಕಿನ ಸರಕಾರಿ ನೌಕರರು ಯಾವುದೇ ತೊಂದರೆ, ಗಲಾಟೆಗಳಿಲ್ಲದೆ ತಮ್ಮ ತಾಲೂಕಿನೊಳಗೆ ತಾವೇ ಚುನಾವಣೆ ನಡೆಸಿ, ಫಲಿತಾಂಶ ಕೊಡಲು ಅರ್ಹರಾಗಿರುವರು. ಶಾಂತಿಯುತ ಮತದಾನಕ್ಕಾಗಿ ಬೇರೆ ಬೇರೆ ತಾಲೂಕುಗಳಿಗೆ ಕಳುಹಿಸಿ ಸರಕಾರಿ ನೌಕರರನ್ನು ಗೋಳುಹೊಯಿಸಬೇಕಾಗಿಲ್ಲ.
2. ತಮ್ಮ ಮನೆ, ಕುಟುಂಬ ಮಕ್ಕಳ ಜೊತೆ ಹಾಯಾಗಿ ಸಮಯ ಕಳೆದು ಅವರ ಪ್ರೀತಿಯನ್ನು ಅನುಭವಿಸಿ ಜೀವನದ ಮತ್ತೊಂದು ಮುಖದ ಅನಾವರಣವಾಯ್ತು.
3. ತಿಂಗಳುಗಟ್ಟಲೆ ಡೇಶಿಫ್ಟ್, ನೈಟ್ ಶಿಫ್ಟ್ ಗುಡಿಯದಿದ್ದರೂ, ಧಾವಂತದ ಓಡಾಟವಿಲ್ಲದಿದ್ದರೂ ಯಾರ ಜೀವನವೂ ಕೊನೆಯಾಗಲಿಲ್ಲ. ಯಾವ ಬಡವನೂ ಊಟಕ್ಕಿಲ್ಲದೆ ಸಾಯಲಿಲ್ಲ.
4. ತಮ್ಮ ತಲೆ ಓಡಿಸಿ, ತಮ್ಮ ತಮ್ಮ ಮನೆಯ ಕಾರ್ಯಗಳನ್ನು ತಾವೇ ಮಾಡಿಕೊಳ್ಳುವಂತಾಯ್ತು. 
5. ಕುಟುಂಬ, ಸಂಸಾರದ ಎಲ್ಲರೂ ಒಟ್ಟಾಗಲು ಸಹಾಯಕವಾಯಿತು. ಎಷ್ಟೋ ವರ್ಷಗಳಿಂದ ನೋಡದ ಬಂಧುಗಳ ಮುಖ ನೋಡುವಂತಾಯ್ತು.
6. ಮಕ್ಕಳಿಗೆ ಹಳ್ಳಿಯ ಅಜ್ಜಿಮನೆಯ ದರ್ಶನವಾಯಿತು.
7. ಮದುವೆ, ಕೋಲ, ದೈವದರ್ಶನ, ಪೂಜೆ, ಗೃಹಪ್ರವೇಶ, ನಿಶ್ಚಿತಾರ್ಥ,ಸೀಮಂತ ಮೊದಲಾದ ಸರ್ವ ಸಮಾರಂಭಗಳನ್ನೂ ಸಿಂಪಲ್ಲಾಗಿ ನಡೆಸಬಹುದೆಂಬ ಅರಿವಾಯ್ತು.
8. ಕಷ್ಟ ಕಾಲದಲ್ಲಿ ನಮ್ಮ ಕುಟುಂಬ ವರ್ಗದವರೂ ಕೂಡ ನಮ್ಮ ಸಹಾಯಕ್ಕೆ ಬರಲಾರರು, ನಮಗೆ ನಾವೇ, ನಾವು ಯಾರನ್ನೂ ಅವಲಂಬಿಸಿರಬಾರದೆಂಬ ಪಾಠ ಕಲಿತಂತಾಯ್ತು.
9. ತಾವು ಸಾಯುತ್ತೇವೆಯೆಂಬ ಭಯ ಬಂದರೆ ಮಾನವ ಯಾರ ಬಗ್ಗೆಯೂ ಚಿಂತೆ ಮಾಡಲಾರ, ತನ್ನ ಬಗ್ಗೆ ಮಾತ್ರ ಯೋಚಿಸುತ್ತಾನೆ. ತಾನು, ತನ್ನದು, ತನಗೆ ಎಂಬುದೇ ಬದುಕಿನ ಮಂತ್ರವಾಯ್ತು. ಯಾರು ಬಿದ್ದರೂ, ಕಷ್ಟದಲ್ಲಿ ನರಳಾಡಿದರೂ ಸಹಾಯ ಹಸ್ತ ಚಾಚುವವರಾರೂ ಇಲ್ಲ ಮುಂದಕ್ಕೆ ನೆನಪಿರಲಿ!
10. ಪಕ್ಕದ ಮನೆ, ಆಚೀಚೆ ಮನೆ, ಬಂಧುಗಳು ಯಾರೂ ಯಾರಿಗೂ ಸಹಾಯ ಮಾಡದ ಪರಿಸ್ಥಿತಿ ಬಂದೊದಗಿತು.
11. ರೈತ, ಕೃಷಿಯ ಬದುಕೇ ಶಾಶ್ವತವೆಂಬ ವಿಷಯ ಸರ್ವರಿಗೂ ಅರಿವಾಯ್ತು.
    2020ನೇ ಇಸವಿ ಜನಜೀವನ ಅಸ್ತವ್ಯಸ್ತವಾದರೂ ಆಯುರ್ವೇದ ಪದ್ಧತಿಯನ್ನೊಪ್ಪದ ಜನರೂ ಕಷಾಯ ಕುಡಿಯಲು ಪ್ರಾರಂಭಿಸಿದರು! ಆರೋಗ್ಯ, ಕ್ಲೀನಿಂಗ್ ಕಡೆ, ತಮ್ಮ ದೇಹದ ಕಡೆ ಗಮನ ಕೊಟ್ಟರು. ಮಾಸ್ಕ್ ಬಳಕೆಯಿಂದ ಧೂಳಿನ ಅಲರ್ಜಿ ಕಡಿಮೆಯಾಯಿತು. ವಾಹನಗಳ ನಿಲುಗಡೆಯಿಂದ ಪರಿಸರ ನಾಶ, ವಾಯುಮಾಲಿನ್ಯ ಕಡಿಮೆಯಾಗಿ, ಪೆಟ್ರೋಲ್, ಡೀಸಲ್ ಉಳಿಕೆಯಾಯ್ತು. ತನ್ನನ್ನು ತಾನು ಸರಿಪಡಿಸಿಕೊಳ್ಳಲು ಭೂಮಿಗೊಂದಿಷ್ಟು ಸಮಯ ಸಿಕ್ಕಿತು! 
  ಪರಿಸರದ ಮಾಲಿನ್ಯ ಕಡಿಮೆಯಾದಂತಾಯಿತು. ಗಾಳಿ, ನೀರು, ಮಣ್ಣು ಒಂದಷ್ಟು ದಿನ ನೆಮ್ಮದಿಯಿಂದ ಉಸಿರಾಡಿದವು. 
  ಒಟ್ಟಿನಲ್ಲಿ 2020 ಹೊಸ ಅನುಭವ ನೀಡಿದ ಮರೆಯಲಾಗದ, ಹೊಸ ಪಾಠ ಕಲಿಸಿದ, ಅತಿಯಾದರೆ ಅಮೃತವೂ ವಿಷವೆಂದು ತಿಳಿಸಿದ ವರುಷವೆಂದರೆ ತಪ್ಪಾಗಲಾರದು. ನೀವೇನಂತೀರಿ?
@ಪ್ರೇಮ್@
31.12.2020

ಮಂಗಳವಾರ, ಡಿಸೆಂಬರ್ 22, 2020

ಜ್ವರಕ್ಕೆ

ಬಂದಿಹೆಯಾ

ನನ್ನನೆ ಹುಡುಕಿ ಬಂದಿಹೆಯಾ ನೀನು
ಶೀತದ ಜೊತೆಗವತರಿಸಿಹೆಯಾ ತಾನು
ಮೈ ಕೈ ನೋವನೂ ತಂದಿಹೆಯಾ ಏನು?
ಗಂಟಲ ನೋವದು ಮಹಾಮಾರಿಯೇನು?

ವೈದ್ಯರು ಕೊಡುವರು ಪ್ಯಾರಸಿಟಮಲ್ ಗುಳಿಗೆ
ಜೊತೆಗೊಂದು ರೇಂಟೇಕ್ ಗ್ಯಾಸಿನ ಕಡೆಗೆ
ಸಿಪಿಎಂ ಸಹಿತ ಶೀತದ ಕಡೆಗೆ
ನೋವು ಹೆದರೋಡುವುದು ಕೆಂಪು ಬಣ್ಣದ ಮಾತ್ರೆಗೆ!!

ಮಲಗಲು ಬೇಕು ಸುಸ್ತು ಹೋಗಲು
ದೇಹವದು ಗಳಿಸಲು ಬೇಕು ಶಕ್ತಿ ಕಾವಲು
ಬಂದಿಹ ಏಕಾಣು ಯುದ್ಧವ ಮಾಡಲು
ಗೆಲ್ಲಲೇ ಬೇಕದು ಬಿಳಿರಕ್ತ ಕಣ ಹೋರಾಡಲು..

ಜ್ವರದಲಿ ಏರಿತು ಮೈಯ ಕಾವದು
ಹೆದರದು ದೇಹವು ಇರಲು ಶಕ್ತಿಯದು
ಆಹಾರ ಮದ್ದು ತನುವಿಗೆ ಬೇಕದು
ಶೀತ ಜ್ವರವೆಲ್ಲ ಆಗಾಗ ಬಂದು ಹೋಗುವುದು

ಡಬ್ಲ್ಯೂ ಹೆಚ್ ಓ ಹೇಳಿದೆ ಕೊರೋನ ಕೂಡಾ ಸಾಮಾನ್ಯ ರೋಗವದು
ಬೇಕಿಲ್ಲ ಮಾಸ್ಕ್ ,ತಲೆದಂಡಗಳ ಜಂಜಾಟವದು
ಮನೆಯಲೆ ಕುಳಿತು ಔಷಧಿ ಸೇವಿಸಿ
ಪರರಿಗೆ ಸೋಂಕು ಹರಡುವುದ ನೀವೆಲ್ಲ ತಪ್ಪಿಸಿ.
@ಪ್ರೇಮ್@
23.12.2020

ಭಾನುವಾರ, ನವೆಂಬರ್ 8, 2020

1508. ಗಝಲ್

ಗಝಲ್

ಬರಡಾದ ಕೆರೆಗೆ ಮಳೆಹನಿಯು ಬಿದ್ದಂತೆ ಬಂದೆ ಜಾನು
ಗರ ಬಡಿದ ಮನಸಿಗೆ ಸದಾನಂದವನು ತಂದೆ ಜಾನು!

ಕರವಿಡಿದು ನಿಂತು ಹೂ ಮುತ್ತನಿತ್ತು ಧೈರ್ಯ ತುಂಬಿದೆ.
ಮರದಂತೆ ಬಂದು ಬಳ್ಳಿಗಾಸರೆ ನೀಡಿ ನಿಂದೆ ಜಾನು!

ಕುದುರೆಯಂತೆ ಓಡುವ ಮನಕೆ ಕಡಿವಾಣ ಹಾಕಿ ಸಂಭಾಳಿಸಿದೆ.
ಚಹರೆ ನೋಡಿಯೆ ನನ್ನ ಅರ್ಥಮಾಡಿಕೊಂಡು ಜತೆಯಾದೆ ಜಾನು!

ಮೋಡದೊಳಗಿಂದ ನೀರು ಮಳೆ ಹನಿಯಾಗಿ ಉದುರಿದಂತೆ ತಂಪೆರೆದೆ
ಹಿತ ಬಯಸಿ ಮಿತದರಿವ ಮನದಿ ಮೂಡಿಸಿದೆ ಜಾನು!

ಪ್ರೇಮ ಶಾಂತಿಯ ಬೀಜವ ಬದುಕ ತೋಟದಲಿ ಬಿತ್ತಿದೆ
ಪದವಿರದ ಪುಷ್ಪಗಳ ಕಣ್ಣಲಿ ಅರಿವಿರದೆ ಅರಳಿಸಿದೆ ಜಾನು..
@ಪ್ರೇಮ್@
27.06.2020

ಗಝಲ್-208

ಗಝಲ್

ನೆಲದಾಳದ ಬೇರಿನ ಕಷ್ಟ ಮೇಲಿನ ಎಳೆಯ ಚಿಗುರು ಅರಿಯಲಿಲ್ಲ ಮನವೇ
ಕೆಳವರ್ಗದಿ ಬದುಕುವ ಬಡವರ ನೋವ ಕುರ್ಚಿಯಲಿ ಕುಂತವ ನೆನೆಯಲಿಲ್ಲ ಮನವೇ!

ಬರಗಾಲದಲೂ ಬಂದು ಭೇಟಿಯಾಗಿ ತುಸು ಸಾಂತ್ವನ ಕೊಡಲು ಆಗಲೇ ಇಲ್ಲ
ಪ್ರವಾಹದ ಸಮಯದಿ ಮನೆ ಮಠ ಕಳೆದುಕೊಂಡಾಗ ಕೊಂಚ ನೋಡಲಾಗಲಿಲ್ಲ  ಮನವೇ!

ನೇಸರನು ನೆತ್ತಿಯ ಸುಡುತಿರಲು ಕೊರೋನ ಸಮಯದಿ ಹೊರಟರು ತಮ್ಮೂರಿಗೆ ಕೂಲಿಯಾಳುಗಳು
ಅನ್ನ-ನೀರು ಸಿಗದೆ ನಡು- ಬೀದಿಯಲಿ ಸತ್ತು ಹೋದುದು ಗೊತ್ತಾಗಲಿಲ್ಲ ಮನವೇ!

ಹೋಟೆಲ್ ಕ್ಯಾಂಟೀನ್ ಚಹಾ ಕಾಫಿ ಮುಂದಿರಗಳು ಬಂದಾಗಿ ಮಾಲಕರು ಬಡವರಾದರು
ಹಣದ ಗದ್ದುಗೆ ಮೇಲೆ ಕುಳಿತ ಮಂತ್ರಿಗಳಿಗೆ ಅವರ ನೋವು ತಿಳಿಯಲಿಲ್ಲ ಮನವೇ!

ಬೇಡವಾದ, ಉಪಯೋಗಿಸಿದ ಸ್ಯಾನಿಟೈಸರ್, ಮಾಸ್ಕ್, ಕೈಗವಚಗಳ ಕಸದ ಬುಟ್ಟಿಗೆ ತುಂಬಿದರು!
ದನ, ಕುರಿ, ಆಡುಗಳ ಹೊಟ್ಟೆಯೊಳಗೆ ಹೋದ ವಸ್ತುಗಳ ಯಾರೂ ಗಮನಿಸಲಿಲ್ಲ ಮನವೇ!

ಗಿಡ ಮರ ಕಡಿದು ಕಾಂಕ್ರೀಟ್ ಕಾಡು ಕಟ್ಟುವಾಗ ಜನರಿಗೆ ಅರಿವಾಗಲಿಲ್ಲ
ಹಲವು ರಸ್ತೆಗಳು ಮಳೆ ಸುರಿವಾಗ ಮಣ್ಣು ಸಡಿಲವಾಗಿ ಬಿರಿಯಲಿಲ್ಲ ಮನವೇ!

ಪ್ರೇಮ ಪ್ರೀತಿ ಶಾಂತಿ ನೀತಿ ಕೀರ್ತಿ ಸ್ಪೂರ್ತಿ ಭಕ್ತಿಯನು ಬಯಸೋಣ
ಪರಹಿತಕಾಗಿ ಬೇಡುತ ಸರ್ವೆಡೆ ಸರ್ವರ ಹಿತವನು ಬಯಸುವ ಹೃದಯವಿಲ್ಲ ಮನವೇ!
@ಪ್ರೇಮ್@
07.08.2020

ಹಿಂದಿಡಬೇಡ ಹೆಜ್ಜೆಯನು

ಮುಂದಿಟ್ಟ ಹೆಜ್ಜೆ ಹಿಂದೆ ಇಡಬೇಡ

ಕಾಲ ಕಲಿಯುಗ ನಡೆಮುಂದೆ
ನುಗ್ಗಿ ಸಾಗು ನೋಡದೆಯೇ ಹಿಂದೆ..
ಬಂದಿಹುದು ಸಾಧಿಸಲು ಹೆಸರುಳಿಸೆ ಸಾಗು
ನಿಲ್ಲದದು ಕಾಲವು ಗಡಿಯಾರದಂತೋಡು..

ತನುಮನದ ಎದೆಬಡಿತ ಸಾಗುತಿದೆ ನಿಲ್ಲದೆಯೇ
ಹನುಮಂತನ ಬಾಲದಂತೆ ಬೆಳೆಯುತಿದೆ ಆಕಾಂಕ್ಷೆಯು..
ಚಿಲ್ಲರೆಯ ಶಬ್ದವದು ಕಿವಿಗೊಡದಿರೆಂದೂ
ನೋಟಿರುವುದು ಮೌನದಲೆ ನಡೆಯುತಲಿ ಮುಂದು..

ಕಲಿಯುತಿರು ಕ್ಷಣಕ್ಷಣವು ಭಾವನೆಯ ಸುತ್ತ
ಪಡೆ ನೀನು ಬಾಳಿನಲಿ ದುಡಿತದ ಭತ್ತ!
ಮುಂದೋಡು ಸಮಯವದು ಕಾಯದೆಂದು ನಿನಗೆ
ಹೊಸ ಕಾಲ ಬರುತಲಿದೆ ಬೇಡವದು ಸಲುಗೆ!

ಸಾಧನೆಯ ಪಥದಲ್ಲಿ ಕಲ್ಲು ಮುಳ್ಳದು ಸಹಜ
ಓಡುವವನ ಗೋಡೆಯದು ತಡೆಯುವುದು ಮನುಜ
ಸಾಧನೆಗೆ ಸಾವಿಲ್ಲ ಶ್ರಮ ಬೇಕು ನಿತ್ಯ
ದುಡಿದವನು ಉಣ್ಣುವನು ಇದು ನಿತ್ಯ ಸತ್ಯ!
@ಪ್ರೇಮ್@
09.11.2020

ಶನಿವಾರ, ನವೆಂಬರ್ 7, 2020

ಕವನ-ಹೆಣ್ಣು

ಹೊಸಿಲು ಮೆಟ್ಟಿದ ಹೆಣ್ಣು

ಹೊಸಿಲು ಮೆಟ್ಟಿದ ಹೆಣ್ಣಿಗಿಲ್ಲವು
ಬಿಸಿಲ ಕಾವಿನ ಬಿಸಿಯ ನೋವು
ಸಹಿಸಬೇಕದು ಎರಡು ಮನೆಯ
ವಹಿಸಿಕೊಂಡ ಕಾರ್ಯ ಕ್ಷಮತೆಯ..

ಗಹಿಸಿ ನಗುವರು  ಕಂಡವರೆಲ್ಲರು ತಾವು
ವಹಿಸಿ ಮಾತನಾಡುವರಿಲ್ಲರು ಕೊಡಲು ಕಾವು
ದಹಿಸಿ ಮರೆತು ಬಿಡುವಳು ತನ್ನ ಕನಸೆಲ್ಲವು
ಊಹಿಸಿ ಅವಳ ಹೃದಯದ ನೋವು!

ಪಹರೆಯವಳಿಗೆ ಹೋದ ಗುಡಿಯಲಿ!
ಬಹಳ ಯಾತನೆ ಬದುಕ ಕ್ಷಣದಲಿ!
ಸಹಿಸಬೇಕಿದೆ ಸಕಲವ ಬಾಳ ಹಾದಿಲಿ!
ಗ್ರಹಿಸಬೇಕಿದೆ ಸುಖ-ದು:ಖವ ಸಮಾನದಲಿ..

ಮಹೀಪತಿಯ ನೆನೆಯುತ ಅನವರತ ವಂದಿಸುತ
ಊಹಿಸದ ಜೀವನವ ತಾನೇ ಪಡೆಯುತ
ಕಹಿಯನೆಲ್ಲವ ಕುಟುಂಬದ ಉದ್ಧಾರಕ್ಕಾಗಿ ನುಂಗುತ
ಐಹಿತ್ಯದ ಬಾಳ್ವೆಯಲಿ ನೆಮ್ಮದಿಯ ಕಾಣುತ..
@ಪ್ರೇಮ್@
06.11.2020

ವಿಮರ್ಶೆ

💐--- *ನಾನು ಪ್ರೇಮ್ ಯಾನೆ ಪ್ರೇಮಾ ಉದಯ್ ಕುಮಾರ್. ಜಬೀವುಲ್ಲಾ ಎಂ.ಅಸದ್ ಅವರ ಈ ಗಝಲ್ ನ್ನು ಅಶೋಕ್ ಬಾಬು ಟೇಕಲ್ ರವರು ವಿಮರ್ಶೆಗಾಗಿ ಗಝಲ್ ಸಂಭ್ರಮದ ಸುಮಧುರ ಘಳಿಗೆಯಲ್ಲಿ ನನ್ನ ಕೈಗಿತ್ತಿರುವರು. ನಾನೇನು ವಿಮರ್ಷಕಿಯಲ್ಲ, ನನ್ನ ಓದು ಹಾಗೂ ಅನುಭವದ  ಆಧಾರದಲ್ಲಿ ನನ್ನದೇ ನೆಲೆಯಲ್ಲಿ ನನ್ನ ಅನಿಸಿಕೆಯನ್ನಿಲ್ಲಿ ವ್ಯಕ್ತಪಡಿಸಲು ಹರ್ಷಿಸುತ್ತಿದ್ದೇನೆ. ಕವಿಭಾವಕ್ಕೆ ಧಕ್ಕೆ ಬರದೆಂದು ಆಶಿಸುತ್ತೇನೆ* 💐

ಇಟ್ಟ ಒಂದು ಹೆಜ್ಜೆ ನೂರು ಸಾವಿರವಾಗಿ ಗುರಿಯತ್ತ ಸಾಗಬೇಕಿದೆ ನೋಡು
ಸಾಧನೆಯ ಶಿಖರಕ್ಕೆ ಅನ್ಯಮಾರ್ಗಗಳಿಲ್ಲ ಖುದ್ದು ಛಲದಿ ಏರಬೇಕಿದೆ ನೋಡು 

💐 *ಒಂಭತ್ತು ದ್ವಿಪದಿಗಳ ಹೊತ್ತ ಈ ಗಝಲ್ ನ ಮೊದಲ ಸಾಲುಗಳನ್ನೋದುವಾಗಲೇ ಸ್ವಾಮಿ ವಿವೇಕಾನಂದರ ಮಾತು ನೆನಪಾಯಿತು.'ಸಾವಿರ ಮೈಲಿಗಳ ಪ್ರಯಾಣವೂ ಮೊದಲ ಹೆಜ್ಜೆಯಿಂದಲೇ ಪ್ರಾರಂಭವಾಗುತ್ತದೆ.'  ನಮ್ಮ ಜೀವನವೆಂಬ ಸಾಗರಕ್ಕೆ ಧುಮುಕಿದ ಮೇಲೆ ಅದನ್ನು ಈಜಿ ದಡ ಸೇರಲೇ ಬೇಕಾಗಿದೆ. ಸಾಧನೆಯ ಶಿಖರ ತಲುಪದಿರೆ   ಬದುಕಿಗೆ ಬೆಲೆಯಿಲ್ಲ, ನಮ್ಮ ಬದುಕಿನ ಮಾರ್ಗವನ್ನು ಏರಿ ಇತರರು ಸಾಧಿಸಲು ಸಾಧ್ಯವಿಲ್ಲ, ನಾವೇ ಸ್ವತ: ಎತ್ತರಕ್ಕೇರುವ ಪ್ರಯತ್ನ ಮಾಡಬೇಕಾಗಿದೆ. ಹಾಗಾಗಿ ನಮ್ಮ ಪ್ರಯತ್ನ ನಾವೇ ಮಾಡಿದರೆ ಮಾತ್ರ  ನಮ್ಮ ಗುರಿ ತಲುಪಲು ಸಾಧ್ಯವೆನ್ನುವ ಮಾತು ಅತ್ಯದ್ಭುತ. ಹಿರಿಯ ಕವಿಯೋರ್ವರ 'ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ" ಎನ್ನುವ ಸಾಲು  ನೆನಪಾಯಿತು.* 💐

ಅಡ್ಡಗಟ್ಟುವ ಕಲ್ಲಿನ ಜೊತೆಗೂಡಿ ಚುಚ್ಚಿವೆ ಬೇನಾಮ್ ಮಾತಿನ ಮುಳ್ಳುಗಳು
ಪ್ರತಿ ಅಡೆತಡೆಯ ಕೋಟೆ ಕಂದಕ ದಾಟಿ ನಡೆಯಬೇಕಿದೆ ನೋಡು
 
*💐ನಾವು ನಿಂತಾಗ ಎಡವಲಾರೆವು, ನಡೆಯುವಾಗ ಎಡವುದು ಸಹಜ. ನಡೆವ ವ್ಯಕ್ತಿ ಎಡವದೆ ನಿಂತ ವ್ಯಕ್ತಿ ಎಡವುವನೇ? ಇದೊಂದು ಸಾಮಾನ್ಯ ಗಾದೆ. ಇದನ್ನೆ ಗಝಲ್ ಕಾರರು ರೂಪಕ ಬಳಸಿ ಬಹು ರಸವತ್ತಾಗಿ ವಿವರಿಸಿರುವರು. ಬದುಕಿನಲ್ಲಿ ಸಾಧನೆ ಮಾಡಲು ಹೊರಟ ಪ್ರತಿ ವ್ಯಕ್ತಿಗೆ ಎಡರು ತೊಡರುಗಳು ಎದುರಾಗುವುದು ಸಹಜ. ಅವು ಮಾತಿನ ಮುಳ್ಳುಗಳೆನ್ನುವುದು ಕವಿ ಕಲ್ಪನೆ. ಅದ್ಭುತ ರೂಪಕ. ಕೋಟೆಯೊಳಗೆ ನುಗ್ಗಬೇಕಾದರೆ ಕಂದಕಗಳ ದಾಟ ಬೇಕಾದುದು ಸಹಜ ತಾನೇ? ಅತ್ಯದ್ಭುತ ಪದ ಚಿತ್ರದ ವರ್ಣನೆ ಕವಿಗಳದು. ಕಂದಕಗಳ ದಾಟಿ ಕೋಟೆಯೊಳಗೆ ಹೊಕ್ಕಿ ತನ್ನ ಗುರಿ ಸಾಧಿಸುವಾಗ ಅಡೆತಡೆಗಳು ಸಹಜ. ಅವನ್ನು ಲೆಕ್ಕಿಸದೆ ಮುಂದಡಿಯಿಡಬೇಕೆಂಬ ನೀತಿ ಜೀವನಕ್ಕೆ ಮಾದರಿಯಾಗಿ ಕವಿಯಾಶಯ ಉತ್ತಮವಾಗಿ ಬಿತ್ತರಗೊಂಡಿದೆ.* 💐

ಬೆಂಬಿಡದ ಸೋಲು ಎಂದೂ ಮುಗಿಯದ ಗೋಳು ಕೊನೆ ಎಲ್ಲಿದೆ ಹೇಳು
ಬದುಕೆಂಬ ಯುದ್ಧವನು ಸ್ನೇಹ ಪ್ರೇಮದಿಂದ ಗೆಲ್ಲಬೇಕಿದೆ ನೋಡು

*💐ಬದುಕೆಂಬ ಯುದ್ಧ" ಆಹಾ! ಅದ್ಭುತ ರೂಪಕದ ಬಳಕೆಯಿದು. ಈ ಯುದ್ಧವನ್ನು ಗೆಲ್ಲುವ ಆಯುಧಗಳೆಂದರೆ ಸ್ನೇಹ ಮತ್ತು ಪ್ರೇಮ. ಸರಳ ನುಡಿಗಳ ಸರಳ ಸಾಲುಗಳನ್ನು ಅದೆಷ್ಟು ರಮ್ಯವಾಗಿ ಕಟ್ಟಿ ಕೊಟ್ಟಿರುವರು! ಸುಂದರ ಸಾಲುಗಳು ಮುಕುಟಪ್ರಾಯವಾಗಿಹವು!*💐

ಕಾಂಚಾಣದ ಝಣಝಣ ಕುರುಡಾಗಿಸಿದೆ ಮನಸ್ಸುಗಳನ್ನು
ಸಂಬಂಧಗಳ ಬಂಧದಲಿ ಹೃದಯಗಳನ್ನು ಬೆಸೆಯಬೇಕಿದೆ ನೋಡು

*💐ಪ್ರತಿ ಮನಸ್ಸೆಂಬ ಕನ್ನಡಿಯನ್ನು ಒಡೆಯುವುದು ಮಾತು ಮತ್ತು ಹಣ. ಇಲ್ಲೂ ಕವಿ ಅದನ್ನೇ ಹೇಳಿರುವರು. ಹಣದ ದರ್ಪದೆದುರು ಪ್ರೀತಿ ಸ್ನೇಹಕ್ಕೆ ಬೆಲೆಯೆಲ್ಲಿ ಬರಬೇಕು? ಅದಕ್ಕೊಂದು ಪರಿಹಾರವನ್ನೂ ಗಝಲ್ ಕಾರನಿಲ್ಲಿ ಕಟ್ಟಿ ಕೊಟ್ಟಿರುವನು. ಹೃದಯವೆಂಬ ನದಿಗಳಿಗೆ ಉತ್ತಮ ಸಂಬಂಧವೆಂಬ ಬಂಧದ ಸೇತುವೆ ಬಳಸಿ ಸರ್ವರನು ಒಗ್ಗೂಡಿಸಬಹುದು. ಆಗ ಹಣದ ದರ್ಪವನ್ನು ಕೊನೆಗೊಳಿಸಿ ಪ್ರೇಮದ ದೀಪವನ್ನು ಹಚ್ಚಿ ಬೆಳಗಿ, ನಮ್ಮ ಗುರಿಯೆಡೆಗೆ ಪಯಣಿಸಬಹುದೆನ್ನುವ ಸತ್ವಭರಿತ ಮಾತು.  ಮನಸ್ಸುಗಳನ್ನು ಕಾಂಚಾಣದ ಝಣಝಣ ಕುರುಡಾಗಿಸಿದೆ ಎನ್ನಬಹುದಿತ್ತೇನೋ.ದ್ವಿಪದಿಯಾದ ಕಾರಣ ಗಝಲ್ ನೇರನುಡಿಯಲ್ಲಿದ್ದರೆ ಚೆನ್ನವೆಂದು ಕೆಲವು ಹಿರಿಯ ಗಝಲ್ ಕಾರರು ಹೇಳಿದ ನೆನಪು ನನಗೆ. ಆದರಿಲ್ಲಿ ಕವಿತ್ವ ಮೂಡಿ ಅಂದವಾಗಿದೆ.* 💐

ಬಯಕೆಗಳ ಮುಳ್ಳಿನ ಬೇಲಿ ಕಾರ್ಕೋಟಕ ಸರ್ಪವಾಗಿ ಸುತ್ತಿಬಳಸಿರುವಾಗ
ಪಂಜರದ ಬಂಧನದ ಸರಳುಗಳ ಸೀಳಿ ಹಾಕಿ ಹಾರಬೇಕಿದೆ ನೋಡು

*💐ಈ ದ್ವಿಪದಿಯಲ್ಲಿ ಸಾಲುಗಳು ಎರಡು ವಾಕ್ಯಗಳಾಗಿ ವಿಂಗಡಣೆಯಾಗಿಲ್ಲ.* *ದ್ವಿಪದಿಗಳಲ್ಲಿ ಪ್ರತ್ಯೇಕ ಎರಡು ವಾಕ್ಯಗಳಿರಬೇಕು. ಇಲ್ಲಿ ಒಂದೇ ವಾಕ್ಯವನ್ನು ಎಳೆದಂತಿದೆ. ಆದರೆ ಬಳಕೆಯಾದ ರೂಪಕಗಳಂತೂ ಫೆಂಟಾಸ್ಟಿಕ್.ಬಯಕೆಗಳ ಮುಳ್ಳಿನ ಬೇಲಿ ಕಾರ್ಕೋಟಕದಂತೆ ಸುತ್ತಿಕೊಂಡ ಈ ಸಾಲು ಎಷ್ಟು ಅಂದವಾಗಿದೆಯೆಂದು ವರ್ಣಿಸಲಸದಳ! ರೂಪಕ ಸಾಲು! ಕವಿಯೆಂದರೆ, ಕವಿತ್ವವೆಂದರೆ ಇದೇ ಅಲ್ಲವೇ ಈ ಬಯಕೆಗಳೆಂಬ ಪಂಜರದಿಂದ ಸರಳುಗಳ ಬಿಗಿದು ಹಾರಿ ಹೊರಬಂದು ನಮ್ಮ ಗುರಿ ಸಾಧಿಸಬೇಕಿದೆ.ಸುಂದರ ಪದ ಸಂಪತ್ತು!*💐

ಅಸ್ತಮಿಸುವ ಸೂರ್ಯನೊಂದಿಗೆ ಕೂಡಿ ಮುಳುಗುತ್ತಿದೆ ಹಡಗು
ಬೆಳದಿಂಗಳ ಕಿರಣಗಳಿಗೆ ಚಿಗುರಿ ಕಡಲಾಗಿ ಉಕ್ಕಬೇಕಿದೆ ನೋಡು

*💐ದಿನ ಕಳೆದಂತೆ ನಮಗೆ ವಯಸ್ಸಾಗುತ್ತಿದೆ. ಸಂಜೆಯಾಗುತ್ತಲೇ ಸೂರ್ಯನೂ ಅಸ್ತಮಿಸುವನು. ಹಾಗಿರುವಾಗ ನಮ್ಮ ಬದುಕಿನಲ್ಲಿ ನಾವು ಸೇರಲಿರುವ ಗುರಿಯನ್ನು ತಲುಪಲು ನಾವು ಮತ್ತೆ ಚಿಗುರಬೇಕಿದೆ.ದಡ ಸೇರಲು ಕಡಲಂತೆ ಉಕ್ಕಬೇಕಿದೆ. ಇಲ್ಲಿ ಕವಿ ಉಪಮಾಲಂಕಾರ ಬಳಸಿರುವರು. ಸೂಪರ್ ಉತ್ತೇಜನ.* 💐


ಸುರ್ಮದ ಕಣ್ಣುತುಂಬಿ ಕಪ್ಪು ಕಂಬನಿಗಳು ಉರುಳುತ್ತಿವೆ ಯಾ ಖುದಾ
ಮಸಣದ ಹಾದಿಯಲ್ಲೂ ನಗುವಿನ ಗೀತೆ ಗುನುಗಬೇಕಿದೆ ನೋಡು

💐 *ಕಣ್ಣು ಕಪ್ಪು ಅಂದಕ್ಕಾಗಿ ಹಾಕುವುದಾದರೂ ಅದು ಹೆಚ್ಚಾದರೆ ಕಣ್ಣಲ್ಲಿ ನೀರು ತರುವುದು ಖಚಿತ, ನಮ್ಮ ಬದುಕೂ ಅಂತೆಯೇ. ಅದನ್ನು ಆ ದೇವರೇ ಸರಿಪಡಿಸಬೇಕು. ಏನೇ ಸಾಧಿಸಿದರೂ ನಮ್ಮ ಬಾಳಿನ ಹಾದಿಯ ಕೊನೆಯ ಗುರಿ ಮಸಣವೇ ಆಗಿದೆ. ಈ ಮಸಣದ ಹಾದಿಯಲ್ಲಿ ನಡೆಯುತ್ತಿರುವ ನಮ್ಮ ಬಾಳಿನಲಿ ಏನೇ ಕಷ್ಟಗಳು ಬಂದರೂ ನಗುತ್ತಲೇ ಸಾಗಬೇಕಿದೆ. ಬದುಕಿನ ಕಷ್ಟ-ಸುಖವನ್ನು ಸ್ವೀಕರಿಸಲೇಬೇಕಿದೆ.ಆಹಾ ..ಇಡೀ ಜೀವನದ ಲೌಕಿಕ ಅನುಭವಗಳು ಈ ಎರಡು ದ್ವಿಪದಿಗಳಲ್ಲೇ ಹುದುಗಿ ಕುಳಿತಿವೆಯೆನಿಸುವುದಿಲ್ಲವೇ? ಇದುವೇ ಕವಿಯ ಸಾಮರ್ಥ್ಯ. ಇದಕ್ಕೆ ಪುಟವಿಟ್ಟವರಾರು ಅಲ್ಲವೇ?* 💐

ಗರಿಕೆಹುಲ್ಲು ಸಹ ಅಲ್ಲಾಹನ ಮರ್ಜಿಯಿಲ್ಲದೆ ಗಾಳಿಗೆ ಅಲುಗಾಡದಲ್ಲ
ಬೆರಕೆಯ ಕಪಟ ಜಗದಲ್ಲಿ ಕೊಹಿನೂರಾಗಿ ಹೊಳೆಯಬೇಕಿದೆ ನೋಡು

💐 *ಮತ್ತೊಂದು ಸವಿನುಡಿಯ ದ್ವಿಪದಿಯಿಲ್ಲಿದೆ ನೋಡಿ. ಆ ದೇವನ ಅನುಮತಿಯಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು, ಭಗವದ್ಗೀತೆಯಲ್ಲಿ ಪುರಾಣದಲ್ಲಿ "ತೇನವಿನಾ ತೃಣಮಪಿ ನ ಚಲತಿ" ಎಂದು ಸಂಸ್ಕೃತದಲ್ಲಿ ಹೇಳಲಾಗಿದೆ. ಅದನ್ನು ಕುವೆಂಪುರವರೂ ತಮ್ಮ ಗೀತೆಯೊಂದರಲ್ಲಿ ಬಳಸಿರುವರು. ಜಗತ್ತು ವಿವಿಧ ಜಾತಿ, ಭಾಷೆ, ಜನಾಂಗ, ಸಂಸ್ಕೃತಿ, ಆಚಾರ-ವಿಚಾರಗಳ ಬೆರಕೆಯದಾಗಿದೆ. ಇಲ್ಲಿರುವ ಜನರಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ಕಪಟವೇ ತುಂಬಿ ತುಳುಕಿದೆ. ಪರೋಪಕಾರ, ಪರಹಿತ ಮರೆತು ಪರರ ಮೇಲೆ ದೌರ್ಜನ್ಯ, ವಂಚನೆ, ಮೋಸ, ಅವ್ಯವಹಾರ, ಕೊಲೆ, ಸುಲಿಗೆ, ದರೋಡೆ ಹೆಚ್ಚಿರುವ ಇಲ್ಲಿ ನಾವು ಅನ್ಯರ ಮುಂದೆ ಗಟ್ಟಿಯಾಗಿ ನಿಂತು ವಜ್ರದಂತೆ ಹೊಳೆದು ನಮ್ಮತನವನ್ನು ರೂಪಿಸಿಕೊಂಡು ಹೆಸರುಳಿಸಿಕೊಳ್ಳಬೇಕಿದೆಯೆನುವ ಕವಿಭಾವಕ್ಕೆಣೆಯಿದೆಯೇ? ವಂಡರ್ಫುಲ್ ಅಲ್ಲವೇ* 💐

ಕವಿದ ಕತ್ತಲಿಗೆ ಬಟ್ಟ ಬಯಲು ಬೆತ್ತಲಾಗಿ ಕುಣಿಯುತ್ತಿದೆ ಅಸದ್
ದಹಿಸಿ ತನುವ ಮೇಣ ಕರಗಿ ಹರಿದು ಬೆಳಕು ನುಡಿಯುತ್ತಿದೆ ನೋಡು

 💐 *ತಮ್ಮ ಕೊನೆಯ ದ್ವಿಪದಿಯಲ್ಲಿ ಗಝಲ್ ಕಾರರು ದೇವನೊಡನೆ ಮಾತನಾಡುತ್ತಿರುವಂತೆ ಭಾಸವಾಗುತ್ತಿದೆ, ಸತ್ಯವನ್ನು ಬೆತ್ತಲೆಯಾಗಿ ಅನಾವರಣಗೊಳಿಸಿದ ಚಿತ್ರಕಾವ್ಯದ ಪರಿ ಅನನ್ಯ. ಸರ್ವ ಕಾರ್ಯವ ಮಾಡಿ ಕೊನೆಗೆ ಸತ್ತು ಹೋದ ದೇಹವನ್ನು ಮೇಣ ಹಾಕಿ ಸುಡಲಾಗಿದೆ. ಆ ಸುಟ್ಟ ದೇಹ ಉರಿಯುವಾಗ ಮೇಣದಲ್ಲೂ ಬೆಳಕು ಬರುತ್ತಿದೆ. ಅಂದರೆ ಜನ ಮಾಡಿದ ಒಳ್ಳೆಯ ಕಾರ್ಯಗಳು ಅವರು ಸತ್ತು ದೇಹ ಬೂದಿಯಾದ ಬಳಿಕವೂ ಸರ್ವರಿಗೂ ಬೆಳಕು ನೀಡುತ್ತವೆ. ಬದುಕಿರುವಾಗ ಮನುಜ ಅಂಥ ಕಾರ್ಯಗಳನ್ನು ಮಾಡಬೇಕಿದೆ. ಆಗ ಮಾತ್ರ ದೇವ ಮೆಚ್ಚುವನು. ಅದನ್ನು ಮಾಡವು, ಜೀವನದ ಗುರಿ ತಲುಪಲು ವಿರಹ, ನೋವು, ಕಷ್ಟಗಳ ಅನುಭವಿಸಿ ದೇಹ ಸವೆಯಬೇಕಿದೆ. ಕೊನೆಗೆ ದೇಹ ಉರಿದು ಹೋದರೂ ಬೆಂಕಿ ಜಗವ ಬೆಳಗುವುದೆಂಬ ಭಾವದ ಬಿತ್ತರಣಿಕೆಯ ಶೈಲಿ ಅಮೋಘವಾದುದು.* 💐

💐 *ನನಗನಿಸಿದ್ದು-ಈಗಿನ ಕವನ , ಗಝಲ್ಗಳಲ್ಲಿ ಭಾಷಾ ಚಿಹ್ನೆಗಳ ಪ್ರಯೋಗಕ್ಕೆ ಕವಿಗಳು ಒತ್ತು ನೀಡುತ್ತಿಲ್ಲ, ಇಲ್ಲೂ ಕವಿ ಅದನ್ನು ಬಳಸಿಲ್ಲ, ಭಾಷಾ ಚಿಹ್ನೆಗಳಾದ ಪ್ರಶ್ನಾರ್ಥಕ ಚಿಹ್ನೆ, ಆಶ್ಚರ್ಯ ಸೂಚಕಗಳನ್ನು ಸರಿಯಾದ ಸ್ಥಳದಲ್ಲಿ ಬಳಸಿದ್ದಿದ್ದರೆ ಕವಿತ ತೂಕಮಯ ಹಾಗೂ ಇನ್ನೂ ಅಂದ ಹೆಚ್ಚಿಸಿಕೊಳ್ಳುತ್ತಿತ್ತೇನೋ. ಮುಂದೊಂದು ಜನಾಂಗ ಭಾಷಾ ಚಿಹ್ನೆಗಳ ಮರೆತೇ ಬಿಡುವ ಸಾಧ್ಯತೆಯೂ ಇದೆಯೆನಿಸುತ್ತದೆ. ಅರ್ಥಪೂರ್ಣ ಕವಿತೆಗೆ ಶುಭಾಶಯಗಳು.* 💐💐💐💐💐💐
@ಪ್ರೇಮ್@
07.11.2020
#ಗಝಲ್....

ಇಟ್ಟ ಒಂದು ಹೆಜ್ಜೆ ನೂರು ಸಾವಿರವಾಗಿ ಗುರಿಯತ್ತ ಸಾಗಬೇಕಿದೆ ನೋಡು
ಸಾಧನೆಯ ಶಿಖರಕ್ಕೆ ಅನ್ಯಮಾರ್ಗಗಳಿಲ್ಲ ಖುದ್ದು ಛಲದಿ ಏರಬೇಕಿದೆ ನೋಡು

ಅಡ್ಡಗಟ್ಟುವ ಕಲ್ಲಿನ ಜೊತೆಗೂಡಿ ಚುಚ್ಚಿವೆ ಬೇನಾಮ್ ಮಾತಿನ ಮುಳ್ಳುಗಳು
ಪ್ರತಿ ಅಡೆತಡೆಯ ಕೋಟೆ ಕಂದಕ ದಾಟಿ ನಡೆಯಬೇಕಿದೆ ನೋಡು

ಬೆಂಬಿಡದ ಸೋಲು ಎಂದೂ ಮುಗಿಯದ ಗೋಳು ಕೊನೆ ಎಲ್ಲಿದೆ ಹೇಳು
ಬದುಕೆಂಬ ಯುದ್ಧವನು ಸ್ನೇಹ ಪ್ರೇಮದಿಂದ ಗೆಲ್ಲಬೇಕಿದೆ ನೋಡು

ಕಾಂಚಾಣದ ಝಣಝಣ ಕುರುಡಾಗಿಸಿದೆ ಮನಸ್ಸುಗಳನ್ನು
ಸಂಬಂಧಗಳ ಬಂಧದಲಿ ಹೃದಯಗಳನ್ನು ಬೆಸೆಯಬೇಕಿದೆ ನೋಡು

ಬಯಕೆಗಳ ಮುಳ್ಳಿನ ಬೇಲಿ ಕಾರ್ಕೋಟಕ ಸರ್ಪವಾಗಿ ಸುತ್ತಿಬಳಸಿರುವಾಗ
ಪಂಜರದ ಬಂಧನದ ಸರಳುಗಳ ಸೀಳಿ ಹಾಕಿ ಹಾರಬೇಕಿದೆ ನೋಡು

ಅಸ್ತಮಿಸುವ ಸೂರ್ಯನೊಂದಿಗೆ ಕೂಡಿ ಮುಳುಗುತ್ತಿದೆ ಹಡಗು
ಬೆಳದಿಂಗಳ ಕಿರಣಗಳಿಗೆ ಚಿಗುರಿ ಕಡಲಾಗಿ ಉಕ್ಕಬೇಕಿದೆ ನೋಡು

ಸುರ್ಮದ ಕಣ್ಣುತುಂಬಿ ಕಪ್ಪು ಕಂಬನಿಗಳು ಉರುಳುತ್ತಿವೆ ಯಾ ಖುದಾ
ಮಸಣದ ಹಾದಿಯಲ್ಲೂ ನಗುವಿನ ಗೀತೆ ಗುನುಗಬೇಕಿದೆ ನೋಡು

ಗರಿಕೆಹುಲ್ಲು ಸಹ ಅಲ್ಲಾಹನ ಮರ್ಜಿಯಿಲ್ಲದೆ ಗಾಳಿಗೆ ಅಲುಗಾಡದಲ್ಲ
ಬೆರಕೆಯ ಕಪಟ ಜಗದಲ್ಲಿ ಕೊಹಿನೂರಾಗಿ ಹೊಳೆಯಬೇಕಿದೆ ನೋಡು

ಕವಿದ ಕತ್ತಲಿಗೆ ಬಟ್ಟ ಬಯಲು ಬೆತ್ತಲಾಗಿ ಕುಣಿಯುತ್ತಿದೆ ಅಸದ್
ದಹಿಸಿ ತನುವ ಮೇಣ ಕರಗಿ ಹರಿದು ಬೆಳಕು ನುಡಿಯುತ್ತಿದೆ ನೋಡು

---- ಜಬೀವುಲ್ಲಾ ಎಂ.ಅಸದ್

ಶನಿವಾರ, ಅಕ್ಟೋಬರ್ 31, 2020

ಬದಲಾವಣೆಯ ಬಿರುಗಾಳಿ

ಬದಲಾವಣೆಯ ಬಿರುಗಾಳಿ..

ನಾವು ಚೆನ್ನಾಗಿ ಬೆಳೆದವರು
ಅವರು ಹಾಳಾಗಿ ಬೆಳೆದವರು

ಅಂದು ನಮ್ಮೊಡನೆ ಹಣವಿತ್ತು
ಅಂದೂ ಇಂದೂ ಅವರೊಡನೆ ಗುಣವಿದೆ

ಅವರದು ಗುಡಿಸಲು ನಮ್ಮದು ಬಂಗಲೆ
ಅವರದು ನಗುಮುಖ ನಮ್ಮದು ರಗಳೆ!!

ಅವರಿಗೆಲ್ಲ ಅಳುವಿತ್ತು, ಛಲವಿತ್ತು
ನಮಗೆಲ್ಲ ನಗುವಿತ್ತು, ಸಂತಸವಿತ್ತು.

ಅವರ ಬಳಿ ಕನಸಿತ್ತು, ನನಸು ಮಾಡುವ ಛಲವಿತ್ತು
ನಮ್ಮ ಮನೇಲಿ ಝಳಝಳವಿತ್ತು, ಹೊಳಹಿತ್ತು..

ಅವರ ಮನೆಯಲ್ಲಿ ನಾಯಿ, ಬೆಕ್ಕು ಕೋಳಿಗಳು ಆಟವಾಡುತ್ತಿದ್ದವು
ನಮ್ಮ ಮನೆಯಲ್ಲೋ ಗೆಳೆಯರು ಬಂಧುಗಳು ಮೆರೆಯುತ್ತಿದ್ದರು!

ಕಾಲ ಬದಲಾಯ್ತು.. ಜನ ಬದಲಾದರು
ನಗ ನಕ್ಕಿತು, ನಗು ಸರಿಯಿತು, ನಾವು ನೀವಾಗಲಿಲ್ಲ, ನೀವು ನಾವಾಗಲು ಶ್ರಮಿಸಿದಿರಲ್ಲ!
ಹಣ ಕಳೆಯಿತು, ಗುಣವುಳಿಯಿತು!
ಅರಮನೆ ಸೆರೆಮನೆಯಂತಾಯಿತು, ಗುಡಿಸಲು ಬೆಳಗಿತು!
ಕಾಲ ಬದಲಾಯಿತು! ಗುಣ ಬದುಕ ಬದಲಾಯಿಸಿತು!!
@ಪ್ರೇಮ್@
31.10.2020

ಸೋಮವಾರ, ಅಕ್ಟೋಬರ್ 26, 2020

ಧೈರ್ಯಂ ಸರ್ವತ್ರ ಸಾಧನಂ

ಧೈರ್ಯಂ ಸರ್ವತ್ರ ಸಾಧನಂ

ಮೌಂಟ್ ಎವರೆಸ್ಟ್ ಹತ್ತುವಾಗಲೂ
ಕಣಿವೆ ಮಾರ್ಗ ಇಳಿಯುವಾಗಲೂ
ತಂತಿ ಮೇಲೆ ನಡೆಯುವಾಗಲೂ
ಸಂಸಾರ ಸಾಗರ ದಾಟುವಾಗಲೂ

ಪ್ರಪಂಚವನ್ನು ಸುತ್ತುವಾಗಲೂ
ಹೊಸ ದೇಶವ ಹುಡುಕುವಾಗಲೂ
ಸಾವಿರ ಅಡಿ ಆಳಕ್ಕೆ ಧುಮುಕುವಾಗಲೂ
ನೌಕೆಯಲಿ ಆಕಾಶದಾಚೆ ಹಾರುವಾಗಲೂ

ಮನೆ ಮಕ್ಕಳ ನಿಭಾಯಿಸುವಾಗಲೂ
ಅತ್ತೆ ಮಾವರ ಸಂಭಾಳಿಸುವಾಗಲೂ
ಗೆಳೆಯರೊಡನೆ ಹೊಂದಿಕೊಳ್ಳುವಾಗಲೂ
ಬಂಧು ಬಾಂಧವರ ಒಗ್ಗೂಡಿಸುವಾಗಲೂ

ಶಾಲೆಯಲ್ಲಿ ಕಲಿಯುವಾಗಲೂ
ಕೆಲಸಕೆಂದು ಅಲೆಯುವಾಗಲೂ
ಇಂಟರ್ವ್ಯೂಗೆ ಉತ್ತರಿಸುವಾಗಲೂ
ಸಂಗಾತಿಯನ್ನು ಆರಿಸುವಾಗಲೂ

ಮನದಲೂ ಎದೆಯಲೂ
ಮೆದುಳಲೂ ಆಲೋಚನೆಯಲೂ
ನಗುವಲೂ ಅಳುವಲೂ
ಧೈರ್ಯಂ ಸರ್ವತ್ರ ಸಾಧನಂ!
@ಪ್ರೇಮ್@
26.10.2020

ಶುಕ್ರವಾರ, ಅಕ್ಟೋಬರ್ 16, 2020

ಗಝಲ್

ಗಝಲ್


ತುಳಸಿ ಮನೆಯೆದುರು ನಗುತಿರಲಿ ಸಾಕಿ
ಕುಲ ಗೌರವವ ನೆನೆಯುತಿರಲಿ ಸಾಕಿ

ಮನದಲ್ಲೆಲ್ಲ ಸದಾ ಸುಖದ ನಗೆ ತುಂಬಿರಬೇಕು
ಸಂಸಾರ ಸಾಗರದಲಿ ಈಜುವಂತಿರಲಿ ಸಾಕಿ.

ದೇವರ ಸಹಸ್ರ ನಾಮಾರ್ಚನೆ ಮಾಡದಿದ್ದರೂ ಪರವಾಗಿಲ್ಲ
ಮನೆಯಲಿ ನೆಮ್ಮದಿಯ ಉಸಿರಿರಲಿ ಸಾಕಿ

ಘಂಟೆ, ಜಾಗಟೆ, ಆರತಿ, ತೀರ್ಥವೇ ಬೇಕಿಲ್ಲ
ಗಲಾಟೆಗೆ ಸ್ಥಾನ ಬರದಂತಿರಲಿ ಸಾಕಿ

ಮೂರ್ತಿ ಪೂಜೆ, ಮಂತ್ರೋಚ್ಛಾರ, ಆರತಿಯೇ ಮುಖ್ಯವಲ್ಲ
ಶಾಂತಿಯೇ ಬಾಳ ಮಂತ್ರವಾಗಿರಲಿ ಸಾಕಿ..

ಸಮಾಜ ಸೇವೆಗೆ ಲಕ್ಷ ಖರ್ಚು ಮಾಡಬೇಕೆಂದಿಲ್ಲ
ಪರರ ಒಳಿತನ್ನೂ ಬಯಸುವಂತಿರಲಿ ಸಾಕಿ!

ದ್ವೇಷದ ಕಿಡಿಯನು ಆರಿಸಿ ಬಿಡಬೇಕು
ಪ್ರೇಮದ ಬತ್ತಿಯನು ಹಚ್ಚುತಿರಲಿ ಸಾಕಿ!
@ಪ್ರೇಮ್@
17.10.2020

ಹಾಯ್ಕು

ಹಾಯ್ಕು-1

ನಗಲಾರದೆ
ನಗುವುದ ಕಲಿತೆ
ನನಸಾಗದೆ.

ಹಾಯ್ಕು-2

ನೀನೆನಗಿರೆ
ನಾನಿನಗಿರುವೆನು
ನನ್ನೊಲವಿಗೆ..

ಹಾಯ್ಕು-3

ನೂರು ಜನ್ಮಕೂ
ನೀನಿರುವೆಯೆಂದೆಂದು
ನಾನರಿಯೆನೇ..

ಹಾಯ್ಕು-4
ನಾನಾರೆಂದು
ನಾನರಿತೆನು ಇಂದು
ನಿನ್ನನೆ ನೋಡಿ.
@ಪ್ರೇಮ್@
14.10.2020

ಮಂಗಳವಾರ, ಅಕ್ಟೋಬರ್ 13, 2020

ಬಯಸದೆ ಬಂದ ಭಾಗ್ಯ

ಬಯಸದೆ ಬಂದ ಭಾಗ್ಯ

ಮನೆಯೊಳು ಮನದೊಳು
ನೀನಿರೆ ಶಿವನೆ
ಭಾಗ್ಯವೆ ಅಲ್ಲದೆ ಮತ್ತೇನು?
ವರವನು ಕೊಡುತಲಿ ನಗುತಲಿ ಇರುವೆಡೆ
ಪ್ರೀತಿಯ ಭಾವವು ಇನ್ನೇನು!

ದೇವನೆ ಜೊತೆಯಲಿ ಇರಲದು ಧನ್ಯತೆ
ಮುಂದೆಯೂ ನಾಳೆಯೂ ಇಂದೇನು?
ನಿನ್ನೊಳು ನಾನು ನನ್ನೊಳು ನೀನು
ಭಕ್ತಿ ಪರಾಕಾಷ್ಠೆಯಲಿ ಮಿಂದೇನು!

ಐಸಿರಿ, ಭಾಗ್ಯವು ಎಲ್ಲವೂ ನೀನೇ!
ನೀನಿರೆ ಸಕಲವು ಅಲ್ವೇನು?
ಬೇಕದು ಏನು ಇರುತಿರೆ ನೀನು
ಜತೆಗದು ಶಕ್ತಿ, ಜೈಸೇನು!

ಮಾತೆಯೂ ನೀನೇ, ಪಿತನೂ ನೀನೇ
ಶಕ್ತಿಯ ಮೂಲವು ನೀನೇನೇ!
ಮೂರ್ತಿಯೂ ನೀನೇ, ಕೀರ್ತಿಯೂ ನೀನೇ
ಲಿಂಗದ ಶಕ್ತಿಗೆ ಬರವೇನು!

ಬಯಸದೆ ಬಂದ ಭಾಗ್ಯವು ಬದುಕಲಿ
ಬೆರಗದು ಬಾಳಲಿ ಅಲ್ವೇನು?
ಬರಲದು ದೇವನು ಬಂಗಾರವು ಬಾಳುವೆ
ಬೆಳೆ ಬೆಳೆದಂತಲ್ಲದೆ ಮತ್ತೇನು?
@ಪ್ರೇಮ್@
13.10.2020

ಭಾನುವಾರ, ಅಕ್ಟೋಬರ್ 11, 2020

ಲಕ್ಷ್ಮಿ

ಲಕ್ಷ್ಮಿ

ಮನೆಯಲಿ  ಗೃಹಲಕ್ಷ್ಮಿ, ಕಛೇರಿಯಲಿ ವರಲಕ್ಷ್ಮಿ
ಮಕ್ಕಳೊಂದಿಗೆ ಸಂತಾನಲಕ್ಷ್ಮಿ!

ನೋಡಲು ಗಜಲಕ್ಷ್ಮಿ ನಡೆಯೂ ಅಂತೆಯೇ!
ಗದ್ದೆ ತೋಟವಿರದಿದ್ದರೂ ನನಗವಳು ಧಾನ್ಯಲಕ್ಷ್ಮಿ..
ದುಡಿವಾಗ ಧನಲಕ್ಷ್ಮಿಯೇ ಸರಿಯವಳು..

ಚಿನ್ನ ಬೇಕೆಂದು ಹಠ ಹಿಡಿವ ಕನಕಲಕ್ಷ್ಮಿ
ಮನೆಗೆ ಬಂದವರ ಸಾಗಹಾಕುವ ಧೈರ್ಯಲಕ್ಷ್ಮಿ!
ಅವಳಿರೆ ಮನೆಯೆತ್ತರಕ್ಕೇರಿ ಅನಿಸುವುದು ವೃದ್ಧಿಲಕ್ಷ್ಮಿ!

ನನ್ನ ಆದಿ ಅನಂತ ದೇವತೆಯವಳು ಆದಿಲಕ್ಷ್ಮಿ
ಮನೆಯವರಿಗೆಲ್ಲ ಊಟವುಣಿಸುವ ಧಾನ್ಯಲಕ್ಷ್ಮಿ!
ಅದಕೆಂದೆ ನಿನಗೆ  ನಾಮಧೇಯ ನನ್ನದು ಪುಟ್ಟಲಕ್ಷ್ಮಿ!
@ಪ್ರೇಮ್@
10.10.2020

ನಾರಿಗಾದೆಯೋ

ನೀನಾರಿಗಾದೆಯೋ ಎಲೆ ಮಾನವ

ಹಾಲು ನಾನು ಕುಡಿಯಲು, ಮೊಸರಾದೆ ಒಡೆಯಲು
ಬೆಣ್ಣೆಯಾದೆ ಕಡೆಯಲು, ತುಪ್ಪವಾದೆ ಕುದಿಯಲು
ಪನ್ನೀರಾದೆ ಗಟ್ಟಿಯಾಗಲು, ಕ್ರೀಮಾದೆ ತಣಿಸಲು
ನೀನಾರಿಗಾದೆಯೋ ಎಲೆ ಮಾನವ ಸಹಕರಿಸಲು?

ನೀರು ನಾನು ಸಾರ್ವಜನಿಕ ಶುದ್ಧಿಗೆ
ತಣಿಯೆ ಬರುವೆ ಹಿಮದ ರುಚಿಯ ಗೆಡ್ಡೆಗೆ
ಆವಿಯಾಗೆ ಮತ್ತುದುರುವೆ ಮಳೆಹನಿ ಧರೆಗೆ
ದಾಹ ತಣಿಸೆ ಇಳಿವೆ ನಿನ್ನ ಹೊಟ್ಟೆಗೆ!
ನೀನಾರಿಗಾದೆಯೋ ಎಲೆ ಮಾನವ ಮಜ್ಜಿಗೆ?

ನಾಯಿ ನಾನು ಕಾಯ್ವೆ ಮನೆಯ ನೆಟ್ಟಗೆ
ರಾತ್ರಿ ಹಗಲು ಆಜ್ಞಾಪಾಲಕ ಸಾಕಿದವಗೆ
ನಿಯತ್ತಿಗೆ ಹೆಸರಾದವ ಜಗದೊಳಗೆ
ನೀನಾರಿಗಾದೆಯೋ ಎಲೆ ಮಾನವ ನೆಟ್ಟಗೆ?

ಕಾಗೆ ನಾನು ಕಪ್ಪಾದರು ಊರ ಶುದ್ಧ ಮಾಡುವೆ
ಸತ್ತ ಪ್ರಾಣಿಗಳ ಕಸವ ತಿಂದು ಬದುಕುವೆ
ಕಾಳನೊಂದು ಕಂಡೊಡನೆ ಬಳಗವೆಲ್ಲ ಕರೆಯುವೆ
ನೀನಾರಿಗಾದೆಯೋ ಎಲೆ ಮಾನವ ಕುಲವೇ?
@ಪ್ರೇಮ್@
12.10.2020

ಶನಿವಾರ, ಅಕ್ಟೋಬರ್ 10, 2020

ಬಾಲ್ಯ ವಿವಾಹ

ಬಾಲ್ಯ ವಿವಾಹ

ಬೇಡವೇ ಬೇಡ ಬಾಲ್ಯದ ಮದುವೆ
ಬೇಡ ಬೇಕಾಗುವುದು ಮುಂದಿನ ಕಡೆಗೆ
ಬೇಕದು ಓದು ಬೇರೆಯೇ ಬದುಕು
ಬೇಡವು ಗೋಳಿನ ನರಕದ ಬಾಳು

ಬೇಸರ ಭಯದ ವಾತಾವರಣವು ನಿಜದಿ
ಬೇಡಿಯು ತೋಳಿಗೆ ತಾಳಿಯ ಅಂದದಿ
ಬೇನೆಯು ಮನಕೆ ಭಾವವು ಬರಿದು
ಬೇಗೆಯು ದಿನವೂ ಬಾಲ್ಯದ ಕಾಲದಿ..

ಭೋಗವು ಬರದು ಭವ್ಯತೆ ಬರಿದು
ಬಂಜರು ಬದುಕದು ಬಾರದು ನಿದ್ರೆ
ಬಾಡುವ ಬಾಳು ಬೇಡವು ಮಗುವೇ

ಬೇಸರ ಛಾಯೆ ಬೇರಿನ ಮಾಯೆ
ವೇದನೆ ಬರುವುದು ಮುಂದಿನ ಕಾರ್ಯ
ಬೇಗನೆ ಮದುವೆಯು ನಾಶವು ಕ್ಷಣವು
ಮೇದಿನಿಯೊಳು ಓದಿ ಸಾಧನೆ ಬೇಕು..

ಗಂಡನ, ಅತ್ತೆಯ, ನಾದಿನಿ ಕಾಟವು
ಮೈದುನ, ಭಾವ, ಅನ್ಯರ ನೋಟವು
ನೆಂಟರು, ಇಷ್ಟರು ಎಲ್ಲರ ಕೂಟವು
ಮಕ್ಕಳು ಮರಿಗಳು ಕಷ್ಟದ ಪಾಠವು.. 
@ಪ್ರೇಮ್@
11.10.2020

ಬುಧವಾರ, ಅಕ್ಟೋಬರ್ 7, 2020

2 ಚುಟುಕುಗಳು

ಚುಟುಕು-1

ನಶೆಯ ನಿಶೆಯಲಿ ನಶಿಸಿ ಹೋಗುವೆ
ಉಸಿರ ಬೇಗನೆ ಸ್ವತ: ಕೊಂದುಕೊಳ್ಳುವೆ
ಕಸಿಯ ಮಾಡುತ ಮನವ ಕೊಯ್ದುಕೊಳ್ಳುವೆ
ಮುಸಿಮುಸಿ ನಗುತ ಬಾಳನು ಸುಟ್ಟುಕೊಳ್ಳುವೆ...

ಚುಟುಕು-2

ಬಾರೆ ಪಂಚರಂಗಿ ನನ್ನೊಡಲ ಅರಮನೆಗೆ
ಕೊಡಿಸುವೆನು ಹೊಸ ಅಂಗಿ ನಿನ್ನ ಕರದೆಡೆಗೆ
ನೀಡೆನ್ನ ಮನಮಂದಿರಕೆ ಸುಖವ ಸತಿಯಾಗಿ
ನಾ ಕೊಡುವೆ ನಿನಗೆಲ್ಲ ಜವಾಬ್ದಾರಿ ಪತಿಯಾಗಿ!!!
@ಪ್ರೇಮ್@
08.10.2020

ಶನಿವಾರ, ಅಕ್ಟೋಬರ್ 3, 2020

ತೆರೆ-ಹೆಣ್ಣು

ತೆರೆ-ಹೆಣ್ಣು


ತೆರೆತೆರೆಯುತ ತೆರೆಗಳು ತೆರಳಲು
ತವರಿನ ದಡದೆಡೆ ತೇರಂತೆ
ತರತರ ಗಾತ್ರದ ನೀರಿನ ಬಂಡೆಯು
ತೊರೆ ನದಿ ಸೇರಿದ ಹಾಗಂತೆ!

ತರುಲತೆ ಬಳ್ಳಿಯು ನೋಡುತ ನಕ್ಕವು
ದೂರದ ಗುಡ್ಡದ ತುದಿಯಲ್ಲಿ
ತೋರುತ ಬಿಳಿನೊರೆ ಜಾರುತ ಬರಲು
ಭೋರ್ಗರೆತವು ಸಾಗರಿ ಹೃದಯದಲಿ..

ಮರಳಿನ ಕಣಗಳು ನೃತ್ಯವನಾಡುತ
ತೆರೆಗಳ ಒಳಗೆ ಸೇರಿರಲು
ಕಪ್ಪೆ ಚಿಪ್ಪು ನಕ್ಷತ್ರ ಮೀನು
ಶಂಖವು ದಡದೆಡೆ ಜಾರಿರಲು..

ತಿರೆಗದು ಸಂತಸ ಮರಳಿನ ರಾಕ್ಷಸ
ರಾಶಿಯ ತೆರದಿ ಬಿದ್ದಿರಲು
ಚಂದ್ರನು ಕಾಣಲು ತೆರೆಗಳು ಮೇಲೇರಲು
ಸೂರ್ಯನು  ದಿಗಂತದಿ ಮುಳುಗಿರಲು...

ತೊರೆಯವು ತೆರೆಗಳು ಕಡಲನು ಎಂದಿಗೂ
ಬಿಡವವು ಭೂಮಿಯ ಸ್ಪರ್ಶವನು
ಹೆಣ್ಣದು, ತವರು ದಡದಲಿ ಅದಕೆ
ತವಕಿಪುದು ತಾ ಮುಟ್ಟಲು ಇಳೆಯನ್ನು!!
@ಪ್ರೇಮ್@
21.09.2020

ಗಝಲ್-207

ಗಝಲ್

ಗಗನದೆತ್ತರಕೆ ಏರುವ ತುಡಿತ
ಮನಸ್ಸಿನಾಳಕೆ ಇಳಿಯುವ ಮಿಡಿತ

ಇರಲಾರೆ ನೋವಿನರಿವ ಬಿಟ್ಟು
ಚೇತನಕ್ಕೆ  ಕಲಿಯುವ ಕೆರೆತ!

ಭವಿಷ್ಯದ ಬಗೆಗೊಂದು ನೋಟ
ಆತ್ಮ ಜ್ಞಾನ ಹೆಚ್ಚಿಸಿಕೊಳ್ಳುವ ನೆಗೆತ!

ಇತರರ ಮಾತ ಕೇಳಿ ಬೇಸರ
ಬೇಡ ಪರರೆದುರು ಬಗ್ಗುವ ತುಳಿತ!

ಮಂದಿರದ ದೇವರಲೂ ಬೇಡಿಕೆ
ನಿತ್ಯ ಮಾಡೆನ್ನ ಜೀವನವ ಹರಿತ!

ಭಾವಗಳ ಮೇಳೈಕೆ, ಒದ್ದಾಟ ಒಳಗೊಳಗೆ 
ಕುದುರೆಯಂತೆ ಸಾಗಿದೆ ತನುವ ಕುಣಿತ!

ಶುದ್ಧ ಪ್ರೇಮವ ಅನುಭವಿಸಿದವನೇ ಜಾಣ
ಮಾಡುವೆ ಶಿವನಿಗೆ ಜೀವನವ ಅರ್ಪಿತ!
@ಪ್ರೇಮ್@
22.09.2020

ನ್ಯಾನೇಕತೆ-ವಿಧಿ

ನ್ಯಾನೋ ಕತೆ

ವಿಧಿ

ತನ್ನ ಸರ್ವಸ್ವ ಎಂದು ಸಲ್ಮಾ ಅಜೀಜ್ ನನ್ನೆ ನಂಬಿದ್ದಳು. ತಮ್ಮಿಬ್ಬರ ಪ್ರೀತಿಗೆ ಮನೆಯವರ ಯಾರ ಸಹಕಾರವೂ ಸಿಗದೆಂಬ ಕಲ್ಪನೆ ಅವರಿಗಿದ್ದರೂ ತಿಳಿಯದೇನೆ ಅವರಿಬ್ಬರೂ ಮಾನಸಿಕವಾಗಿ ಆಕರ್ಷಿತರಾಗಿ, ಪವಿತ್ರ ಪ್ರೇಮದಲ್ಲಿ ಸಿಲುಕಿ ಹಾಕಿಕೊಂಡಿದ್ದರು. ಇಬ್ಬರಿಗೂ ಒಬ್ಬರಿಗೊಬ್ಬರಿಗೆ ಮೋಸ ಮಾಡುವ ಮನಸ್ಸಿರಲಿಲ್ಲ, ಒಟ್ಟಾಗಿ ಬಾಳುವ ಕನಸಿತ್ತು. ತಮ್ಮ ಪೋಷಕರಿಗೂ ಮೋಸಮಾಡದೆ ಸಲ್ಮಾ ಓದಿ ಶಿಕ್ಷಕಿಯಾಗಿ,ಅಜೀಜ್ ವ್ಯಾಪಾರ ಹಾಗೂ ಸಮಾಜ ಸೇವೆ ಮಾಡಿಕೊಂಡು ಹಿರಿಯರ ಆಶೀರ್ವಾದ ಪಡೆದೇ ಮದುವೆಯಾದರು.
@ಪ್ರೇಮ್@
23.09.2020

4 ಹಾಯ್ಕುಗಳು

ಹಾಯ್ಕುಗಳು

೧.
ಮನದ ನೋವು
ಹೆಪ್ಪುಗಟ್ಟುತಲಿದೆ
ಹೊರಬಾರದೆ

೨. 
ಬದುಕೊಂದು
ರೈಲು ಬಂಡಿಯ ಹಾಗೆ
ಚಲಿಸುತಿದೆ..

೩.

ಇಂದು ನಾಳೆಯ
ಲೆಕ್ಕವಿಟ್ಟವನು ನೀ
ಪರಮಾತ್ಮ ತಾ!

೪.
ನೋವಿಂದ ಎದೆ
ಹಿಂಡಿದಂತಾಗಿಹುದು
ರಕ್ತದೊತ್ತಡ..
@ಪ್ರೇಮ್@
24.09.2020

ಬಡಿತವೇ...

ವಿಶ್ವ ಹೃದಯ ದಿನದ ಅಂಗವಾಗಿ...

ಬಡಿತವೇ....

ಬಡಿವೆ ನೀನು ನನ್ನ ಒಲವೆ
ಒಡಲಿನೊಳಗೆ ನಲಿಯುತ
ಜೀವವೀಣೆಯನ್ನು ಉಳಿಸಿ
ನುಡಿವೆ ಎನಗೆ ಸಂತತ...

ಉಸಿರು ನಿನ್ನ ಪ್ರಾಣವಂತೆ
ಗಾಳಿ ನಿನಗೆ ಊಟವಂತೆ
ರಕ್ತವನ್ನೆ ಕುಡಿವೆಯಂತೆ
ಶುದ್ಧತೆಯ ಪ್ರತೀಕವಂತೆ...

ಮಾಂಸದ ಮುದ್ದೆಯಂತೆ
ಭಾವನೆಗಳ ಸಾಗರವು..
ಪ್ರೀತಿ ಪ್ರೇಮಕೆಂದು ಮಿಡಿತ
ಕಂಪನದ ಅನುರಾಗವು...

ನಲಿವು ನೋವು ಏನೆ ಬರಲಿ
ಸ್ಪಂದನೆಯ ಏರಿಳಿತವದು
ಏಳುಬೀಳಿನಲ್ಲಿ ಮಿಡಿತ
ತಾಳ್ಮೆಯೆಂದು ಜಗಕೆ ಇಹುದು..

ನಾನು ನೀನು ಬೇರೆಯಲ್ಲ
ನೀನಿರದೆನಾನು ಇಲ್ಲ
ರಾಗ ನಾನು ಭಾವ ನೀನು
ತಾಳವಿರದೆ ಬಡಿತವಿಲ್ಲ...
@ಪ್ರೇಮ್@
29.09.2020

ಬದುಕ ಸೂತ್ರ

ಬದುಕ ಸೂತ್ರ

ಪರಿಪರಿಯಿಂದಲಿ ಪ್ರಯಾಣದಿ ಸೇರಿಹ
ಪ್ರಭಾವ ಪುರುಷರು ನೀವು
ಪರಬ್ರಹ್ಮನ ಸೃಷ್ಟಿಯ ಪದರಗಳಾಗಿಹ
ಪಾವನ ಜನರು ತಾವು...

ಪುರದಲಿ ಬದುಕುತ ಪರರನು ತೆಗಳುತ
ನೋವು ನಲಿವಿನ ಪಾಲು
ಪದಕದ ಹಾಗೆಯೆ ಇರಬೇಕು ಹೊಳೆಯುತ
ಪದ ಪದದಲು ಇಹುದು ಗೋಳು..

ಪಂಡಿತ ಪಾಮರ ಎಲ್ಲಗೂ ಸಾವಿದೆ
ಪರಿಸರ ಸ್ವಚ್ಛತೆ ಮಾಡಿ
ಪಾಯಸದಂತೆ ಸವಿಯಾಗಿರಿ ಕಾಯದೆ
ಮೋಸವ ಹೊರಗೆ ದೂಡಿ..

ಪರರಿಗೆ ಸಹಾಯ ಬಾಳಿನ ಮಂತ್ರವು
ಪರೋಪಕಾರದ ಬುದ್ಧಿಯಲಿ
ಪದಗಳ  ಹೇಳದೆ ಇರುವುದು  ಸಾಧ್ಯವೆ?
ಪಾರಾಯಣವಿರಲಿ ಮನದಲ್ಲಿ...
@ಪ್ರೇಮ್@
25.09.2020

ಮಂಗಳವಾರ, ಸೆಪ್ಟೆಂಬರ್ 22, 2020

ಕವಿಗಳಿಗೆ ಟಿಪ್ಸ್

ಸಾಹಿತ್ಯದ ಬಗ್ಗೆ

4ಸಾಲು ಚುಟುಕು.

2 ಸಾಲು ದ್ವಿಪದಿ

3 ಸಾಲು ತ್ರಿಪದಿ
ಅರ್ಥ ಗರ್ಭಿತವಾಗಿ ಕೆಲವು ವಚನಗಳನ್ನೂ ತ್ರಿಪದಿಗಳಲ್ಲೆ ಬರೆಯಬಹುದು. ಅಂಕಿತವಿರಬೇಕು.

5-8 ಸಾಲು ಹನಿಗವನ

9-15 ಸಾಲು ಇನಿಗವನ

16, 18, 20, 22, 24 ಸಾಲು ಕವನ

25< ನೀಳ್ಗವನ

ಕತೆಯಾಧಾರಿತ- ಕಥನ ಕವನ

5-7-5 ಪದ, 3 ಸಾಲು ಹಾಯ್ಕು

ದ್ವಿಪದಿಯ ಶೇರ್ ಗಳು, ಕಾಫಿಯಾ, ರಧೀಫ್ ನೊಂದಿಗೆ-ಗಝಲ್

ದಿನಕರ ದೇಸಾಯಿ ವರಸೆ ಚುಟುಕುಗಳು ನಾಲ್ಕೈದು ಪದಗಳ ನಾಲ್ಕು ಸಾಲು, ಕೊನೆಯ ಸಾಲು ಪಂಚಿಂಗ್ ಇರಲೇ ಬೇಕು.

ದುಂಡಿ ರಾಜ್ ಸ್ಟೈಲಿನ ಚುಟುಕುಗಳು 2-3 ಪದಗಳ 4ಸಾಲು, ಪಂಚಿಂಗ್.

ಭಕ್ತಿ ಪ್ರಧಾನ ಗೀತೆಗಳು ಭಕ್ತಿಗೀತೆ, ಹಾಡುತ್ತಾ ಕುಣಿಯಬಹುದಾದವುಗಳು ಭಜನೆ. ಭಕ್ತಿಯೇ ಮೈವೆತ್ತಂಥದ್ದು , ಅನುಭವಿಸಿ ಬರೆದಂಥದ್ದು ಭಕ್ತಿ ರಚನೆ, ಕೀರ್ತನೆಗಳು.

ದೇಶಾಭಿಮಾನದಲಿ ದೇಶ ರಾಜ್ಯಕ್ಕಾಗಿ ಬರೆದ ಗೀತೆಗಳು ದೇಶ ಭಕ್ತಿ ರಚನೆಗಳು.

ಒಂದು ಘಟನೆ, ವ್ಯಕ್ತಿಯ ಸುತ್ತ ಹಾಡುವಂತೆ ಹೆಣೆದ ಉದ್ದ ಪದ್ಯಗಳು ಲಾವಣಿಗಳು.

ಒಂದು ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಬರೆಯುವುದು ಬಂಡಾಯ ಕಾವ್ಯ.

ಭಾವನೆಗಳೇ ಮೂಲವಾದದ್ದು ನವೋದಯ , ನವ್ಯ ಕಾವ್ಯ.

ಮಾಡರ್ನ್ ಆಗಿ ಬರೆಯುವಂಥದ್ದು ಕಾಂಟೆಂಪರರಿ ಸ್ಟೈಲ್.

ಪುಟ್ಟದಾದ ಕತೆ ನ್ಯಾನೋ ಕತೆ. 5-6 ವಾಕ್ಯದೊಳಗಿನದ್ದು.

ಒಂದೆರಡು ಪುಟಗಳ ಕತೆ ಸಣ್ಣ ಕತೆ.

4-10 ಪುಟಗಳ ಕತೆ ನೀಳ್ಗತೆ.

50 ಪುಟ ದಾಟಿದ ಕತೆ ಕಾದಂಬರಿ.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಚಾರಿತ್ರಿಕ, ವೈಚಾರಿಕ, ನೈಜ ಘಟನೆ ಆಧಾರಿತ, ಹಾರರ್, ಟ್ರ್ಯಾಜಿಡಿ ಕೊನೆಯಲ್ಲಿ ಬೇಸರದ ಛಾಯೆ,  ಕಲ್ಪನಾತೀತ ಇತ್ಯಾದಿ.

ಮಕ್ಕಳ ಬಗ್ಗೆ, ಮಕ್ಕಳಿಗಾಗಿ ಬರೆದ ಮೇಲಿನ ಯಾವುದೇ ಸಾಹಿತ್ಯ ಪ್ರಕಾರ ಶಿಶು ಸಾಹಿತ್ಯ.

ಸರಿಯಾದ ಭಾಷಾ ಛಂದಸ್ಸು, ಮಾತ್ರಾ ಗಣ, ಅಕ್ಷರ ಗಣದ  ನಿಯಮಗಳನ್ನು ಅನುಸರಿಸಿ ರಗಳೆ, ವೃತ್ತ, ಕಂದಪದ್ಯ, ಷಟ್ಪದಿ ರಚಿಸಬಹುದು.

ಇತರರ ಕತೆ, ಕವನ ಓದಿ ಅದರ ಓರೆ ಕೋರೆಗಳ ಬಗೆಗೆ ತಮ್ಮ ಅಭಿಪ್ರಾಯ ದಾಖಲಿಸುವುದು ವಿಮರ್ಶೆ.

ತಮ್ಮದೇ ಜೀವನದ ಘಟನೆಗಳನ್ನು ತಾನೇ ಬರೆದು ಪ್ರಕಟಗೊಳಿಸುವುದು ಆತ್ಮಕತೆ.(ಆಟೋ ಬಯಾಗ್ರಫಿ)

ನಿಮ್ಮ ಜೀವನದ ಘಟನೆಗಳನ್ನಾಧರಿಸಿ ನಿಮ್ಮ ಬಗ್ಗೆ ಇತರರು ಬರೆಯುವುದು ಬಯಾಗ್ರಫಿ.

ಪ್ರತಿನಿತ್ಯ ನಿಮ್ಮ ಜೀವನದ ಆಗು ಹೋಗುಗಳನ್ನು ನೀವು ದಾಖಲಿಸಿ ಬರೆಯುವುದು ಡೈರಿ.

ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮೂಲಕ ಮಾತನಾಡಿಸುವುದು ನಾಟಕ.

ನಾಟಕದ ನಡುವೆ ಪದಗಳ ಸೇರಿಸುವುದು ಗೀತಾ ನಾಟಕ, ರೂಪಕ.

ಕತೆ ಮತ್ತು ಹಾಡು ಒಟ್ಟಿಗೆ ಒಂದಾದ ಮೇಲೊಂದು  ಹೆಣೆದು ಕತೆ ಕಟ್ಟುವುದು ಕಥಾ ರೂಪಕ.

ದೇವರ ಬಗೆಗೆ 40 ಸಾಲುಗಳಲ್ಲಿ ಬರೆದು ಸ್ತುತಿಸುವುದು ಚಾಲೀಸ್.

ಯಾವುದೇ ವಿಚಾರದ ಬಗ್ಗೆ ಅಭಿಪ್ರಾಯ ದಾಖಲಿಸುತ್ತಾ ಹೋಗುವುದು ಸರಳ ಭಾಷೆಯನ್ನು ಬಳಸುತ್ತಾ, ಇದು ಲೇಖನ.

ಮನದ ಭಾವನೆಗಳಿಗೆ ಹಾಡಿನ ರೂಪ ಕೊಟ್ಟು ಬರೆಯುವುದು 14-20 ಸಾಲು ಭಾವಗೀತೆ.

ಒಂದು ವಿಷಯದ ಮೇಲೆ ಲಘುವಾಗಿ ಬರೆದೂ, ಕಾಮಿಡಿಯಾಗಿ ಸತ್ಯವನ್ನು ಅದು ಇದ್ದ ಹಾಗೆಯೇ ಹೇಳಿ ಸಮಾಜ ತಿದ್ದುವಂಥ ಬರಹ ಲಘು ಬರಹ, ಲಘು ಪ್ರಬಂಧ.

ಪೀಠಿಕೆ, ಪ್ರಸ್ತಾವನೆ, ವಿಷಯ 
ವಿಸ್ತಾರ, ಮುಕ್ತಾಯ(ಕಂಕ್ಲೂಶನ್) ಕೊಟ್ಟು, ಉದಾಹರಣೆಗಳ ಸಹಿತ ಬರೆಯುವುದು ಪ್ರಬಂಧ, ಲಲಿತ ಪ್ರಬಂಧ.

ಸಂಗೀತ ಕಲಿತವರಿಗಾಗಿಯೇ ಹಾಡಲು ಬರೆಯುವುದು ವರಸೆಗಳು, ಸುಳಾದಿ, ಉಗಾಭೋಗ.

ಕವನವೂ ಅಲ್ಲದ ಲೇಖನವೂ ಅಲ್ಲದ ನೇರನುಡಿ ವಚನ.

ನಾಲ್ಕೇ ಸಾಲುಗಳಲ್ಲಿ ಹೇಳುತ್ತಾ ಹೋಗುವ ಕವನಗಳು ಚೌಪದಿಗಳು.

ಕವನ ಸಾಲಿನ ಕೊನೆಯಲ್ಲಿ ಒಂದೇ ಸೌಂಡ್, (ಪದೋಚ್ಛಾರ) ಕನ್ನಡದಲ್ಲಿ ಆದರೆ ಒಂದೇ ಅಕ್ಷರ  ಬಂದರೆ ಅಂತ್ಯ ಪ್ರಾಸ.

ಕವನದ ಮೊದಲಲ್ಲಿ ಒಂದೇ ಅಕ್ಷರ ಬಂದರೆ ಆದಿಪ್ರಾಸ.

ಕವನದ ನಡುವಿನಲ್ಲಿ ಒಂದೇ ಸ್ವರ ಸಹಿತ ವ್ಯಂಜನಾಕ್ಷರ ಮತ್ತೆ ಮತ್ತೆ ಬಂದರೆ ಮಧ್ಯ ಪ್ರಾಸ.
ಇದಕ್ಕೆ ಶಬ್ದಾಲಂಕಾರ ಎನ್ನುವರು.

ಒಂದೇ ಪದವನ್ನು ಬೇರೆ ಬೇರೆ ಅರ್ಥ ಬರುವಂತೆ ಬಳಸುವ ಕೌಶಲ್ಯ ಅರ್ಥಾಲಂಕಾರ.

ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿದೆ ಎನ್ನುವುದನ್ನು ಹಾಗೆ, ಅಂತೆ,ಅಂತೆಯೇ, ತೆರದಿ ಮೊದಲಾದ ಪದ ಬಳಸಿ ಬಿಂಬಿಸುವುದು ಉಪಮಾಲಂಕಾರ.

ಸಂಬಂಧವೇ ಇಲ್ಲದ ಎರಡು ವಸ್ತು, ಭಾವಗಳನ್ನು ಒಂದಕ್ಕೊಂದು ಹೋಲಿಸಿ, ಒಂದು ವಸ್ತುವೇ ಇನ್ನೊಂದು ಎನ್ನುವ ಭಾವ ಬಿಂಬಿಸಿದರದು ರೂಪಕ.

ಜೀವವಿಲ್ಲದ ವಸ್ತುಗಳಿಗೆ ಸಜೀವಿಗಳ ಗುಣವನ್ನು ಸಾಂಕೇತಿಸಿ ಹೇಳಿದರೆ ಅದು ಪರ್ಸಾನೀಫಿಕೇಶನ್.

ಇಡೀ ಒಂದು ಸಂವತ್ಸರವೋ, ಒಂದು ಜನರೇಶನ್ ಬಗ್ಗೆ ಕುರಿತು ಪೂರ್ತಿ ಬೆಳಕು ಚೆಲ್ಲಿ ಬರೆದರದು ಮಹಾಕಾವ್ಯ, ಖಂಡಕಾವ್ಯ.

ಒಂದು ಸ್ಥಳವನ್ನು ಭೇಟಿ ಮಾಡಿ ಅಲ್ಲಿನ ವಿಶೇಷತೆಗಳ ಬಗ್ಗೆ ಬರೆದರೆ ಪ್ರವಾಸ ಕಥನ.

ಒಂದೇ ಹೆಸರಿನಡಿ, ಒಂದೇ ವಿಷಯದ ಮೇಲೆ,  ನಿಗಧಿತ ಪದಗಳಲ್ಲಿ ಬರೆಯುತ್ತಾ ಹೋದರೆ ಅದು ಅಂಕಣ ಬರಹ.

ಪತ್ರಿಕೆಗಳಿಗಾಗಿ, ಸಾಮಾಜಿಕ ಮಾಧ್ಯಮಗಳಿಗಾಗಿ ನಡೆದ ಘಟನೆ, ಕಾರ್ಯಕ್ರಮಗಳ ಬಗ್ಗೆ ಪ್ರತ್ಯಕ್ಷ ಕಂಡು, ಅದನ್ನು  ಚಿಕ್ಕದಾಗಿ ಬರೆದರೆ ಅದು ವರದಿ.

ಈ ರೀತಿ ಕಾವ್ಯದ ವಿವಿಧ ಸ್ತರಗಳ ಬಳಸಿ ಬರೆಯಿರಿ. ಉತ್ತಮ ಕವಿಗಳಾಗಿ, ಕಾದಂಬರಿಕಾರರಾಗಿ, ಲೇಖಕರಾಗಿ, ಕಾದಂಬರಿಗಾರರಾಗಿ, ವಚನಕಾರರಾಗಿ,ಪತ್ರಕರ್ತರಾಗಿ, ವರದಿಗಾರರಾಗಿ,ಬರಹಗಾರ, ಲೇಖಕರಾಗಿ, ಅಂಕಣಕಾರರಾಗಿ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸೇವೆಯನ್ನು ಕರ್ನಾಟಕಕ್ಕೆ ನೀಡೋಣ.
@ಪ್ರೇಮ್ @

ಗಝಲ್-ಗೈರ್ ಮುರದ್ದಫ್ ನ ಇನ್ನೊಂದು ಆಯಾಮ ಹಾಗೂ ಜುಲ್ ಕಾಫಿಯಾ ಗಝಲ್

ಗಝಲ್-ಗಝಲ್-ಗೈರ್ ಮುರದ್ದಫ್ ನ ಇನ್ನೊಂದು ಆಯಾಮ ಹಾಗೂ ಜುಲ್ ಕಾಫಿಯಾ ಗಝಲ್

ಗಗನದೆತ್ತರಕೆ ಏರುವ ತುಡಿತ
ಮನಸ್ಸಿನಾಳಕೆ ಇಳಿಯುವ ಮಿಡಿತ

ಇರಲಾರೆ ನೋವಿನರಿವ ಬಿಟ್ಟು
ಚೇತನಕ್ಕೆ  ಕಲಿಯುವ ಕೆರೆತ!

ಭವಿಷ್ಯದ ಬಗೆಗೊಂದು ನೋಟ
ಆತ್ಮ ಜ್ಞಾನ ಹೆಚ್ಚಿಸಿಕೊಳ್ಳುವ ನೆಗೆತ!

ಇತರರ ಮಾತ ಕೇಳಿ ಬೇಸರ
ಬೇಡ ಪರರೆದುರು ಬಗ್ಗುವ ತುಳಿತ!

ಮಂದಿರದ ದೇವರಲೂ ಬೇಡಿಕೆ
ನಿತ್ಯ ಮಾಡೆನ್ನ ಜೀವನವ ಹರಿತ!

ಭಾವಗಳ ಮೇಳೈಕೆ, ಒದ್ದಾಟ ಒಳಗೊಳಗೆ 
ಕುದುರೆಯಂತೆ ಸಾಗಿದೆ ತನುವ ಕುಣಿತ!

ಶುದ್ಧ ಪ್ರೇಮವ ಅನುಭವಿಸಿದವನೇ ಜಾಣ
ಮಾಡುವೆ ಶಿವನಿಗೆ ಜೀವವ ಅರ್ಪಿತ!
@ಪ್ರೇಮ್@
22.09.2020

ಸೋಮವಾರ, ಸೆಪ್ಟೆಂಬರ್ 21, 2020

ಕವನ ತೆರೆ-ಹೆಣ್ಣು

ತೆರೆ-ಹೆಣ್ಣು


ತೆರೆತೆರೆಯುತ ತೆರೆಗಳು ತೆರಳಲು
ತವರಿನ ದಡದೆಡೆ ತೇರಂತೆ
ತರತರ ಗಾತ್ರದ ನೀರಿನ ಬಂಡೆಯು
ತೊರೆ ನದಿ ಸೇರಿದ ಹಾಗಂತೆ!

ತರುಲತೆ ಬಳ್ಳಿಯು ನೋಡುತ ನಕ್ಕವು
ದೂರದ ಗುಡ್ಡದ ತುದಿಯಲ್ಲಿ
ತೋರುತ ಬಿಳಿನೊರೆ ಜಾರುತ ಬರಲು
ಭೋರ್ಗರೆತವು ಸಾಗರಿ ಹೃದಯದಲಿ..

ಮರಳಿನ ಕಣಗಳು ನೃತ್ಯವನಾಡುತ
ತೆರೆಗಳ ಒಳಗೆ ಸೇರಿರಲು
ಕಪ್ಪೆ ಚಿಪ್ಪು ನಕ್ಷತ್ರ ಮೀನು
ಶಂಖವು ದಡದೆಡೆ ಜಾರಿರಲು..

ತಿರೆಗದು ಸಂತಸ ಮರಳಿನ ರಾಕ್ಷಸ
ರಾಶಿಯ ತೆರದಿ ಬಿದ್ದಿರಲು
ಚಂದ್ರನು ಕಾಣಲು ತೆರೆಗಳು ಮೇಲೇರಲು
ಸೂರ್ಯನು  ದಿಗಂತದಿ ಮುಳುಗಿರಲು...

ತೊರೆಯವು ತೆರೆಗಳು ಕಡಲನು ಎಂದಿಗೂ
ಬಿಡವವು ಭೂಮಿಯ ಸ್ಪರ್ಶವನು
ಹೆಣ್ಣದು, ತವರು ದಡದಲಿ ಅದಕೆ
ತವಕಿಪುದು ತಾ ಮುಟ್ಟಲು ಇಳೆಯನ್ನು!!
@ಪ್ರೇಮ್@
21.09.2020

ಮಂಗಳವಾರ, ಸೆಪ್ಟೆಂಬರ್ 15, 2020

ಬದುಕು

ಬದುಕು

ಭ್ರಮೆಯಲಿ ಬದುಕುವ ಬದುಕದು ಬಾಡುವ ಸುಮದಂತಲ್ಲವೇ ಬುವಿಯಲ್ಲಿ?
ಬಂಧನ ಬೇಡವು ಬೇಸರ ಬರದಿರೆ ಭಯವದು ಬರಬಾರದು ಬದುಕಿನಲಿ..

ಬಾಡದೆ ಇರಲಿ ಹೂವಿನ ಹಾಗೆ ಭವಿತವ್ಯದ ಭಂಡಾರ ಕನಸುಗಳು
ಭೋರ್ಗರೆಯುವ ಜಲಧಿಯ ತೆರದಿ ಬೊಬ್ಬಿರಿಯುತಲಿವೆ ಭಾವಗಳು!

ಬೇರಿನ ತುದಿಯದು ನೀರಾಹಾರವ ಹೀರುವ ಹಾಗಿದೆ ಜೀವನ ಕ್ಷಣವು
ಬೇಗೆಯು ನಿತ್ಯವೂ ಬೆಂಬಿಡದೆ ಕಾಡಿದೆ ಬಾಳಿಲಿ ಬೇಕದು ಸಂಯಮವು..

ಬೀಜವ ಹಾಕಿ ಗಿಡವನು ನೆಟ್ಟೊಡೆ ಹಣ್ಣನು ಸೇವಿಪರುಂಟೇನು ಜಗದಲಿ?
ಬೇರಿನ ಮೇಲೆ, ಕೆಳಗಡೆ ಕೂಡ, ಗೊಬ್ಬರ ನೀರನು ಹಾಕುವುದಲ್ಲದೆ ಪಾಲನೆ ಪೋಷಣೆ ಕಲಿ ರೈತನಲಿ!

ಬವಣೆಯು ಇರದೆ ಬದಲಾವಣೆ ಇರದು ಭವದ ಭಾಗ್ಯದ ಬಲೆಯಲ್ಲಿ
ಬೂರುಗ ಹೂವಿನ ಹಾಗೆಯೇ ಪರಿಮಳ ಸಮಾಜ ಸೇವೆಯ ಕೈಯಲ್ಲಿ..

ಬೊಗಳೆಯ ಬಿಡುತಲಿ ಬೇಡುವ ಜನರದು ಬಳಗವೇ ಇಹುದು ನಾಡಿನಲಿ
ಬೇಸರಗೊಳ್ಳದೆ ಪ್ರೀತಿಯ ಮನದಲಿ ಬಾಳಲು ಕಲಿ ನೀ ಬದುಕಿನಲಿ..
@ಪ್ರೇಮ್@
14.09.2020

ಶಿಶುಗೀತೆ-ವರ್ಣ ಮಾಲೆ

ಶಿಶುಗೀತೆ

ವರ್ಣ ಮಾಲೆ

ಅರಸನ  ಹಾಗೆ
ಆಟಕೆ ಹೋಗೋ
ಇಲಿಯನು ಕಂಡು
ಈಟಿಯ ತಾರೋ

ಉದ್ದದ ಈಟಿಯ
ಊರುತ ಬಾರೋ
ಋಷಿಯಂತೆ ಕುಳಿತು
ಎಲೆಗಳ ಮರೆಯಲಿ

ಏರು ತಗ್ಗಿನಲಿ
ಐದಾರು ದಿಕ್ಕಿನಲಿ
ಒಲವಲಿ ಬದುಕುತ
ಓಡಲು ಬಿಡದೆ

ಔಷಧ ಹಾಕಿ
ಅಂಗಳದಿ ಹುಡುಕಿ
ಅಃ ಇಲಿಯ ಹಿಡಿದೇ ಬಿಟ್ಟೆ!
@ಪ್ರೇಮ್@
10.09.2020

ಶನಿವಾರ, ಸೆಪ್ಟೆಂಬರ್ 12, 2020

ಜಡೆಕವನ- ನೋಟ

ನೋಟ

ನಗರವ ನೋಡಲು ಹೊರಟನು ಹಳ್ಳಿಯ ಗಮಾರ
ಗಮಾರಗೆ ತಿಳಿಯದು ನಗರದ ನೋಟ

ನೋಟವ ನೋಡುತ ದಿಕ್ಕೆಟ್ಟು ನಿಂತ
ನಿಂತನು ಸುತ್ತಲು ಓಡುವ ಗಾಡಿಯು

ಗಾಡಿಯ ಶಬ್ದದಿ ಕಿವಿ ಮುಚ್ಚಿಕೊಂಡನು
ಮುಚ್ಚಿಕೊಂಡನು ತನ್ನ ಮೂಗನೂ ಧೂಳಿಗೆ

ಧೂಳ ಹತ್ತಿ ಕುಳಿತಿದ್ದವು ಗಿಡಮರ ಎಲ್ಲವೂ
ಎಲ್ಲವೂ ಹೊಸದು ನೋಟವು ಸಾಲದು

ಸಾಲದು ಜೇಬಲಿ ಕುಳಿತಿಹ ದುಡ್ಡದು!
ದುಡ್ಡೆ ದೊಡ್ಡಪ್ಪ ನಗರದ ಜೀವನ

ಜೀವನ ಹಳ್ಳಿಯಲಿ ಬಲು ಸುಂದರ
ಸುಂದರ ಪರಿಸರ ಪರಿಶುದ್ಧ ಜಲವು

ಜಲಮಾಲಿನ್ಯವು ನಗರದ ಕೊಳೆ  ಹೊಳೆಯು
ಹೊಳೆಯುತಲಿಹುದು ಕಟ್ಟಡದ ಬಣ್ಣದ ಬೆಳಕು

ಬೆಳಕು ಬೇಕೇ ಬದುಕಲಿ ನಗರಕೆ ನುಗ್ಗು
ನುಗ್ಗುತ ಕತ್ತೆಯ ತರದಲಿ ದುಡಿಯುತ

ದುಡಿಯುತ ದುಡ್ಡನು ತಾ ಕೂಡಿಡುತ
ಕೂಡಿಟ್ಟ ದುಡ್ಡಲಿ ತನ್ನೂರಿಗೆ ಬಂದು
ಬಂಧು ಬಳಗವ ಸೇರಿ ಸಂತಸದಿ ಜೀವಿಸು..
@ಪ್ರೇಮ್@
12.09.2020

ಶುಕ್ರವಾರ, ಸೆಪ್ಟೆಂಬರ್ 11, 2020

ನ್ಯಾನೋ ಕತೆ-ಕಾರಣ

ನ್ಯಾನೋ ಕತೆ

ಕಾರಣ

       ನವನೀತ  ಸಾಯಲು ಕಾರಣ? ಕೇವಲ ಒಂದು ಲಕ್ಷ ರೂಪಾಯಿಗಳು. ಅದೇಕೆ? ಆತ ಕುಡಿತ ಕಲಿತಿದ್ದ. ಕುಡಿಯುವವರೆಲ್ಲ ಸಾಯುವರೇ? ಅವನು ಪರೋಪಕಾರಿ, ಸ್ನೇಹಿತರಿಗೂ ಕುಡಿಸುತ್ತಿದ್ದ. ಅದಕ್ಕೆ ಕಾರಣ? ಅವನ ಚಿಂತೆ. ಚಿಂತೆಗೆ ಕಾರಣ? ಹೆಂಡತಿ ತನ್ನ ಒಂಟಿಯಾಗಿಸಿ ತವರಿಗೆ ಹೋದುದು. ಹೋಗಲು ಕಾರಣ? ಅವಳ ಹಳೆಯ ಹುಡುಗ. ಯಾರ ಸಾವಿಗೆ ಯಾರೋ ಕಾರಣರು!!!
@ಪ್ರೇಮ್@
11.09.2020

ಗುರುವಾರ, ಸೆಪ್ಟೆಂಬರ್ 10, 2020

ನ್ಯಾನೋ

ನ್ಯಾನೋ ಕತೆ

 ವಿಧಿಲಿಖಿತ

     ಇದ್ದ ತಮ್ಮಿಬ್ಬರು ಮಕ್ಕಳಾದ ಲಿಲ್ಲಿ ಮತ್ತು ರೋಸಾಳನ್ನು ಅಮ್ಮ ಮಾರ್ಗರೇಟ್ ತಾನು ಹೊಟ್ಟೆ ಬಟ್ಟೆ ಕಟ್ಟಿ ಎರಡು ಕಣ್ಣುಗಳಂತೆ ಸಾಕುತ್ತಿದ್ದರು. ವಿದ್ಯಾಭ್ಯಾಸಕ್ಕೆಂದು ಮನೆಯಿಂದ ಹೊರ ಹೋದ ರೋಸಾಳ ಬಗೆಗೆ ಹಲವಾರು ಕನಸು ಕಂಡಿದ್ದರು. ಅವಳು ತನ್ನ ಅಂಕಲ್ ಮನೆಗೆ ಹೋಗಿ ಅಚಾನಕ್ ಆಗಿ ಅಪಘಾತವೊಂದಕ್ಕೆ ಸಿಲುಕಿ, ಅಂಕಲ್, ರೋಸಾ ಇಬ್ಬರೂ ಅಪಘಾತಕ್ಕೀಡಾಗಿ ತಮ್ಮ ಬದುಕನ್ನೇ ಕಳೆದುಕೊಂಡಾಗ ಮಾರ್ಗರೆಟ್ ರ ಕನಸುಗಳು ಭಗ್ನವಾಗುವುದರ ಜೊತೆಗೆ ತನ್ನ ಒಂದು ಕಣ್ಣನ್ನು ಕಳೆದುಕೊಂಡ ಅನುಭವವಾಯ್ತು.
@ಪ್ರೇಮ್@
10.09.2020

ಮಂಗಳವಾರ, ಸೆಪ್ಟೆಂಬರ್ 8, 2020

ಗಝಲ್

ಗಝಲ್

*ಹಿಂದೊಂದು ಮುಂದೊಂದು ಮಾತಿಗೆ ಬಣ್ಣ ಹಚ್ಚುವವರೇ ಈಗ*
ಕವಲೊಂದು ಇದೆ ಬದುಕಿನಲಿ ಎಂದು ಮರೆತವರೇ ಈಗ!!

ತನುವೆರಡು ಮನವೊಂದೆ ಎಂದು ಬದುಕುವರು ನಾಲ್ಕುದಿನ
ಭಾವನೆಗಳ ಕಸದಂತೆ ಗುಡಿಸಿ ಒಗೆದು ಬಿಡುವವರೇ ಈಗ..

ಮಾತಿಗೆ ಮಾತು ಬೆಳೆಸುತ ತನ್ನತನವನು ಊರುವವರು
ತಾನು ಆಡಿದ ಮಾತನೆ ಸರ್ವರೂ ಕೇಳಬೇಕೆನುವವರೇ ಈಗ..

ನಡೆವ ಹಾದಿಯಲಿ ಕಲ್ಲು ಮುಳ್ಳುಗಳುಂಟು ಜಗದಲಿ
ಏರು ತಗ್ಗುಗಳನರಿಯದೇ ಅಹಂಕಾರ ದರ್ಪ ತೋರುವವರೇ ಈಗ..

ಮೋಸದಾಟದಲಿ ಬಲಿ ಬೀಳಿಸುವ ಸ್ನೇಹಿತ ಬಂಧುಗಳು ಬಳಿಯಲಿ
ನೀಲಿ ಸಾಗರದಂದದಿ ಪ್ರೇಮ ಬಲೆಯನು ಬೀಸುವವರೇ ಈಗ..
@ಪ್ರೇಮ್@
08.09.2020

ಶನಿವಾರ, ಸೆಪ್ಟೆಂಬರ್ 5, 2020

ಚುಟುಕು

ಚುಟುಕು

ಮಾತಿನಲೆ ಮನೆಕಟ್ಟಿ ಮೌನದಲೆ ಧನ ತುಂಬಿ
ಬಂದ ಹೋದವನಿಗೆ ಏನನೂ ಕೊಡ ತಂಬಿ
ಸಿರಿವಂತನಾಗಬೇಕೆಂಬ ಬಯಕೆಯನು ತಾ ತುಂಬಿ
ಕದ್ದೆಣಿಸ ಹೊರಟವ ಜೈಲಿನ ಕಂಬಿ!!!
@ಪ್ರೇಮ್@
05.09.2020

ಗಝಲ್-ಶಿಕ್ಷಕರಿಗಾಗಿ

ಗುರುವಿಗರ್ಪಿತವಾದ ಗಝಲ್

ವಿದ್ಯಾ ಬುದ್ಧಿಯ ಕಲಿಸುವ ಕಾಯಕ ನಡೆಸುವ ಗುರುವಿಗೆ ನಮನಗಳು..
ತನ್ನ ಕಲಿಕೆಯ ಪರರಿಗೆ ಹಂಚುತ ಸುಖವನು ಕಾಣುವ ಅರಿವಿಗೆ ನಮನಗಳು..

ಪರಿಸರದೆಲ್ಲೆಡೆ ಸರ್ವರಲ್ಲಿ ಬುದ್ಧಿವಂತನು ಎನಿಸಿಕೊಂಡಿಹ ಜೀವಿಯಿದು
ಸರಿ ತಪ್ಪುಗಳನು ತಿದ್ದಿ ತೀಡುವ ಕಾರ್ಯನಿರತರಿಗೆ ನಮನಗಳು..

ಸರ್ವರ ಕಂದರ ತನ್ನ ಕಂದರೆಂದೇ ಸಲಹುವ ಹೃದಯದ ವೈಶಾಲ್ಯ
ಮಗುವಿನ ಕಲಿಕೆಗೆ ತನ್ನ ಜೀವನವ ಒರೆ ಹಚ್ಚಿದ ತ್ಯಾಗಿಗೆ ನಮನಗಳು..

ಬಿಸಿಲು, ಮಳೆ, ಗಾಳಿಯ ಲೆಕ್ಕಿಸದೆ ಜ್ಞಾನವ ಹಂಚುವ ಕಾರ್ಯವದು
ಕಲ್ಲನು ಕೆತ್ತಿ  ಕೊರೆದು ಶಿಲೆಯಾಗಿಸೊ ಕೆಲಸದ ತ್ಯಾಗಿಗೆ ನಮನಗಳು.

ಜೀವನ ಬಹುಮಹಡಿ ಕಟ್ಟಡಕೆ ತಲಪಾಯ ಹಾಕುವ ಕೈಗಳು ನಮ್ಮದಲ್ಲವೇ?
ಜೇಬಲಿ ಹಣವಿಲ್ಲದೆಯೇ ತಿಳಿದುದ ಹೇಳುತ ಸರಿದಾರಿಯಲಿ ಶಿಷ್ಯರ ನಡೆಸುವಗೆ ನಮನಗಳು..

ಸಾಮಾನ್ಯ ಬಾಳುವೆ ನಡೆಸುತ ಪರರಿಗೆ ಮಾದರಿಯಾಗಿಹ ಜೀವಗಳು
ಉಪಕಾರಕೆ ಹೆಸರಾದ, ಹಲ ಮನಗಳಿಗೆ ಒಳಿತನು ಬಯಸುವ ಕರುಣಾ ಮೂರ್ತಿಗಳಿಗೆ ನಮನಗಳು.

ಬಡವ ಬಲ್ಲಿದರೆಂಬ ಬೇಧವಿಲ್ಲದೆಯೇ ಬೋಧಿಸೊ ಕಾಯಕೆ ಕರ ಮುಗಿವೆ
ಮೇಲು ಕೀಳೆನುವ ಭಾವವ ಬಿಸುಟು ಒಂದಾಗಿ ಕಾಣುವ ಕಣ್ಣಿಗೆ ನಮನಗಳು..

ನಲಿವಿನ ಕ್ಷಣಕೆ ಪ್ರಾರ್ಥನೆ ಹಾಡುತ ಹಲವು ಮನಕೆ ಖುಷಿ ಕೊಡುವಾಟವಿದು
ತಾಯಿಯ ಬಳಿಕ ಮಗುವನು ಬೆಳೆಸುವ ಧೀಮಂತ ಹೃದಯದ ನೆನಪಿಗೆ ನಮನಗಳು..

ಜಾತಿ ಮತದ ಬಿರುಕನು ತಡೆಯುವ ವೀಣಾಪಾಣಿಯ ಮಕ್ಕಳಿವರು.
ಕಲಾಂ, ಅಂಬೇಡ್ಕರ್, ಜಿನ, ಬುದ್ಧ ವಿವೇಕರ ನುಡಿಗಳ ನುಡಿಯುವ ನಾಲಗೆಗೆ ನಮನಗಳು.

ಕಿರಿಯರಿಗೆ ತಿಳಿ ಹೇಳುತ ಹಿರಿಯರ ಮಾರ್ಗದರ್ಶನ ಪಡೆಯುವ ಮಹಾನ್ ಚೇತನಗಳು
 ದೇಶೋದ್ಧಾರಕೆ ಭದ್ರ ಬುನಾದಿಯ ಪ್ರೇಮದಿ ಹಾಕುವ ಮನಗಳಿಗೆ ನಮನಗಳು!!
@ಪ್ರೇಮ್@
05.09.2020

ಮಂಗಳವಾರ, ಸೆಪ್ಟೆಂಬರ್ 1, 2020

ಗಣಮಾಮ ಬಂದ

ಗಣ ಮಾಮ ಬಂದ

ಗಣ ಮಾಮ ಬಂದ
ಕಾಯಿ ಕಡುಬು ತಂದ
ಕಬ್ಬು ಬೆಲ್ಲ ಸವಿದ
ಪಂಚ ಕಜ್ಜಾಯ ತಿಂದ

ಪೂಜೆ ಮಾಡಿಸಿ ಮೆರೆದ
ಬಣ್ಣದ ಕಾಗದದಿ ಸಿಂಗರಿಸಿಕೊಂಡ
ಬಾಳೆಯ ಬದಿಯಲ್ಲಿರಿಸಿದ
ಮಾವಿನ ಎಲೆಯ ತೋರಣ ನೋಡಿದ

ಲಡ್ಡು ಪಾಯಸ ಪರಿಮಳ ಸವಿದ
ಉಳಿದುದ ನಮಗೆ ಪ್ರಸಾದ ನೀಡಿದ
ಹೂವು ಹಣ್ಣನು ಎದುರಿಗಿಸಿಕೊಂಡ
ಕಣ್ಣನು ತೆರೆದು ಮುದವನು ನೀಡಿದ

ತಾಯಿಯ ಜೊತೆಯಲಿ ತಾ ಕುಳಿತ
ಗಂಗೆಯ ನೋಡುವ ಆಸೆಯಲಿದ್ದ
ಪೂಜೆಯ ಪಡೆದು ಹರಸುತ ನಡೆದು
ನೀರಿನ ಹೊಂಡದಿ ಮುಳುಗೇ ಬಿಟ್ಟ..
@ಪ್ರೇಮ್@
24.08.2020

ಮತ್ತು-ಮುತ್ತು

ಹನಿಗವನ

ಮತ್ತು-ಮುತ್ತು

ನಾನು ಮತ್ತು ನನ್ನ ಮತ್ತು
ಕಾಣದೆ ಸೇರಿ ಪಡೆದು ಮುತ್ತು
ಮತ್ತು ಮೆತ್ತಗಾಗದೆ ಅನಾಮತ್ತಾಗಿ
ಮುತ್ತು ತುತ್ತಾಗದೆ ಹಸಿವಾಗಿ
ತಲೆಸುತ್ತು  ಬಂದು ಮೆತ್ತೆಯಲಿ
ಹತ್ತಾರು ಜನರ ಮಧ್ಯದಲಿ
ಮತ್ತಾರು ನೋಡಲು ಕತ್ತಲಲಿ
ಮತ್ತಲಿ ಮುತ್ತಿನ ಮೊತ್ತವೇ?
ಹೊತ್ತು ತರಬೇಕು ತುತ್ತು!
@ಪ್ರೇಮ್@
26.08.2020

ಮತ್ತೆ ಬರಲಿ

ಮತ್ತೆ ಬರಲಿ

ಅಮ್ಮನ ಕೈಯಲಿ ಎಣ್ಣೆಯ ತಿಕ್ಕಿಸಿ
ತೊಡೆಯಲಿ ಕುಳಿತು ಸ್ನಾನವ ಮಾಡುವ
ಮುಗ್ದ ಮನದ ಸ್ನಿಗ್ಧ ನಗುವಿನ
ಬಾಲ್ಯವು ಮತ್ತೆ ನಮಗೆ ಬರಲಿ..

ನಾಯಿಗೂ ಬೆಕ್ಕಿಗೆ ಬೇಧವನರಿಯದೆ
ನಿಶ್ಕಲ್ಮಶ ಪ್ರೀತಿಯ ತೋರುತ ಬದುಕುವ
ಆಟವನಾಡುತ ಪ್ರೀತಿಯ ಪಡೆಯುವ
ಸುಂದರ ಬಾಲ್ಯವು ಮತ್ತೊಮ್ಮೆ ಬರಲಿ..

ಕಿಲಕಿಲ ನಗುವಲೆ ನೋವನು ಮರೆಸುವ
ಬಲಾಬಲ ತೋರದೆ ನೆಮ್ಮದಿ ಉಳಿಸುವ
ಆಗಿನ ಬೇನೆಯ ತಕ್ಷಣ ಮರೆಯುವ
ಹೂವಿನಂಥ ಬಾಲ್ಯವು ಮತ್ತೆ ಬರಲಿ..

ನಗುವಿಗೂ ಅಳುವಿಗೂ ಅಂತರ ತಿಳಿಯದ
ಗೆಳೆಯ ಶತೃವಿನ ಗೊಂದಲ ತಾರದ
ಮಾತಾ ಪಿತೃಗಳೆ ದೇವರು ಎನುವ
ಮಂದಾರ ಬದುಕು ಮತ್ತೊಮ್ಮೆ ಬರಲಿ..
@ಪ್ರೇಮ್@
26.08.2020

ಮನೆ-ಕಿರುಗತೆ

ಮನೆ


ತನ್ನ ಮನೆ ಅರಮನೆಯಂತಿರಬೇಕೆಂಬುದೇ ಅವಿನಾಶನ ಕನಸಾಗಿತ್ತು. ಅದಕ್ಕವನು ತನ್ನೆಲ್ಲಾ ಗಳಿಕೆಯನ್ನು ಖರ್ಚು ಮಾಡದೆ ಸಂಗ್ರಹಿಸತೊಡಗಿದ. ಕದ್ದು, ಕಟಿಟಿಟ್ಟು ಮಡದಿ ಮಕ್ಕಳಿಗೆ ಸರಿಯಾಗಿ ಊಟವನ್ನೂ ಕೊಡದೆ ಗಳಿಸಿ ಬ್ಯಾಂಕಿನಲ್ಲಿಟ್ಟ ಹಣದ ಹೆಚ್ಚಿನ ಪಾಲು ಇನ್ಕಂ ಟ್ಯಾಕ್ಸ್ ರೂಪದಲ್ಲಿ ಸರಕಾರ ಸೇರಿತು. 

ನೀತಿ-ಕೊಟ್ಟದ್ದು ತನಗೆ, ಕಟ್ಟಿಟ್ಟದ್ದು ಪರರಿಗೆ!
@ಪ್ರೇಮ್@
28.07.2020

41

ಜೀವನದ ತೊಳಲಾಟಕೆ ಕೊನೆಯೆಂದು?

     ಒಂದು ಕ್ಷಣ ಖುಷಿಯಾದರೆ ಮರುಕ್ಷಣವೇ ನೋವು, ಕಷ್ಟ ಸಂಕಷ್ಟದಲ್ಲಿ ಬೆಂದು ಹೈರಾಣಾಗುವ ಜೀವನವಿದು. ಹೋರಾಟದ ಬವಣೆ. ಮೈಯೆಲ್ಲಾ ರಕ್ತಸಿಕ್ತವಾಗಿ, ಕೈಕಾಲುಗಳಲ್ಲಿ ಶಕ್ತಿ ಕಳೆದುಕೊಂಡು ಕೆಸರು ಮಣ್ಣಿನಲ್ಲಿ ಬಿದ್ದು ಹೋದರೂ ಸಹ ಎದುರಾಳಿಯೊಡನೆ ಗೆಲ್ಲ ಬೇಕಾದರೆ ಮತ್ತೆ ಹೇಗಾದರೂ ಇದ್ದ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಹೋರಾಡಬೇಕು. ಇಲ್ಲವೇ ಹತನಾಗಬೇಕು. ಸೋಲೊಪ್ಪಿಕೊಂಡು ಬದುಕುವ ಬದುಕಿಗಿಲ್ಲಿ ಸ್ಥಾನವೇ ಇಲ್ಲ, ನೆಲೆಯೂ ಇಲ್ಲ. 

     ಇಲ್ಲಿ ನಾನು ನಾನಲ್ಲ, ನೀನು ನೀನಲ್ಲ, ನಾನು ನನಗಾಗಿ ಬದುಕುತ್ತಿಲ್ಲ, ಯಾರೂ ತನಗಾಗಿಯೂ ಇಲ್ಲ,  ಯಾರಿಗಾಗಿಯೂ ಬದುಕುತ್ತಿಲ್ಲ, ಆದರೂ ಸಾವು ಯಾರಿಗೂ ಬೇಡ. ಸ್ವಾರ್ಥವೇ ಇಲ್ಲ ಎನುವವನಿಗೂ ಸಾವು ಬೇಡ. ಇಲ್ಲಿ ಎಲ್ಲವೂ ಇದೆ, ಜನಕ್ಕೆ ಎಲ್ಲವೂ ಬೇಕು. ಧನ, ಧಾನ್ಯ, ಐಶ್ವರ್ಯ, ಕನಕ, ವಜ್ರ, ವೈಡೂರ್ಯ, ಆಸ್ತಿ, ಹಣ, ಬೇಕು ಬೇಡದ ವಸ್ತುಗಳು, ತಿನಿಸುಗಳು, ಪೇಯಗಳು, ಹೆಣ್ಣು, ಹೊನ್ನು, ಮಣ್ಣು ಎಲ್ಲವೂ ಎಷ್ಟಿದ್ದರೂ ಬೇಕು! ಆದರೆ ಜೀವ ಭಯದ ಮುಂದೆ ಯಾರಿಗೂ ಏನೂ ಬೇಡ! ಜೀವವೊಂದುಳಿದರೆ ಸಾಕು ಅಷ್ಟೆ! 
      "ನಾನು ಸುರಕ್ಷಿತ" ಎಂಬ ಅನಿಸಿಕೆ ಇಲ್ಲಿ ಯಾರಲ್ಲೂ ಇಲ್ಲ . ಕಾರಣ ಯಾರಿಗೆ ಯಾರ ಮೇಲೂ ನಂಬಿಕೆಯಿಲ್ಲ! ದೇವರ ಮೇಲೂ ಇಲ್ಲ. ಯಾರೂ ತಮ್ಮತನ ಬಿಟ್ಟು ಕೊಡಲಾರರು. ಇಂದು ಈ ಕ್ಷಣ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿ ಮರುಕ್ಷಣವೇ ಬೇರೆ ಯಾರೋ ಆಗಬಲ್ಲ, ತಿರುಗಿ ನಿಲ್ಲಬಲ್ಲ, ತನ್ನವರೆನಿಸಿಕೊಂಡವರೇ ತನ್ನ ಮರ್ಯಾದೆ ತೆಗೆಯಬಲ್ಲರು! ಮನೆಯೊಳಗೂ ಜಗಳ, ಮನದೊಳಗೊಂದು ಕದನ, ಹಾಹಾಕಾರ! ನಿತ್ಯವೂ ಸಮರದೊಂದಿಗಿನ ಸಮರಸದ ಬದುಕು. ಅದರೆಡೆ ರಸವೇ ಜನನ, ವಿರಸವೇ ಮರಣ ಸಮರಸವೇ ಜೀವನವೆನುತ ಗಾದೆಕಟ್ಟಿ ಬದುಕುವ ಮನಗಳು! ವಿರಸವಿಲ್ಲದ ಜೀವನವಿದೆಯೇ. ಪರರ ಮಾತನು ಒಪ್ಪಿ, ಅವರು ಹೇಳಿದಂತೆ ನಡೆದರೆ ವಿರಸ ಬರದು, ನೀವಾಗಿ ನೀವು ನಿಮ್ಮ ಯೋಚನೆ, ಆಲೋಚನೆಗಳನ್ನು ಅನುಷ್ಠಾನಗೊಳಿಸಲು ಸ್ವತಂತ್ರವಾಗಿ ಮುನ್ನುಗ್ಗಿದಿರೋ ಅಲ್ಲೇ ವಿರಸದ ಪ್ರಾರಂಭ! 
    ಬದುಕಿಗೊಂದು ಅರ್ಥ ಹುಡುಕದೆ ಸುಮ್ಮನೆ ಬದುಕಿದವನ ಬದುಕು ವ್ಯರ್ಥವೆಂದು ತಿಳಿದು ಅರ್ಥ ಹುಡುಕ ಹೋದವ ತಲೆಕೆಡಿಸಿಕೊಂಡು ತನ್ನ ಬದುಕಿನ ಸರ್ವ ನಲಿವುಗಳ ಕಳೆದುಕೊಂಡು ಯಾವ ಅರ್ಥವನ್ನೂ ಕಂಡುಕೊಳ್ಳಲಾಗದೆ ಮುಪ್ಪಡರಿ, ದೇಹ ರೋಗ ರುಜಿನಗಳಿಗೆ ತುತ್ತಾಗಿ ಕಡೆಗೊಂದು ದಿನ ಸರ್ವ ಜೀವಿಗಳಂತೆ ಅವನದೂ ಅವಸಾನವೇ ಆಗುವುದು.
     ಈ ಜಗದಲಿ ಹುಟ್ಟು ಸಾವು ಸಾಧಾರಣ ಸಂಗತಿಗಳು. ಅದು ಜೀವಿಗಳಿಗೂ, ಮಾನವನಿಗೂ. ಜೀವಿಗಳು ಜೈವಿಕ ಕ್ರಿಯೆಗಳಾದ ಪಚನ, ಬೆಳವಣಿಗೆ, ಹಸಿವು, ನಿದ್ರೆ, ವಿಶ್ರಾಂತಿ, ವಂಶಾಭಿವೃದ್ಧಿ, ಚಲನೆ ಇವಿಷ್ಟಕ್ಕೆ ತಮ್ಮ ಬದುಕನ್ನು ಮುಡಿಪಾಗಿಸಿಕೊಂಡಿವೆ. ಆದರೆ ಮಾನವನೆಂಬ ಮೆದುಳು ಬೆಳೆದ ಜೀವಿ ತಾನು ತನಗೆ ದೊರೆತ ಶಕ್ತಿಯಿಂದ ಅದೇನನ್ನೋ ಮಾಡ ಹೋಗಿ, ಏನೇನೋ ಮಾಡಿ, ಕೊನೆಗೆ ಸಾಧನೆ ವಿಫಲವಾಯಿತೆನುತ ಮಾಡಿದ ಸಾಧನೆಯನ್ನೆಲ್ಲ ಮರೆತು ತಾನೇ ತನ್ನ ಜೀವನವನ್ನು ಕೊನೆಗೊಳಿಸುವನು, ಅಥವಾ ಬೇರೆ ಯಾರೋ ಅದಕ್ಕೆ ಕಾರಣರಾಗುವರು. ಕೆಲವು ಸಲ ವಿಧಿಯೇ ಕಾರಣವಾಗಲೂಬಹುದು. 
      ಪ್ರತಿ ಕ್ಷಣವೂ ಸತ್ಯ, ಸುಳ್ಳು, ನಂಬಿಕೆ, ಮೋಸ, ವಂಚನೆ, ನೋವು, ಅಹಂಕಾರ, ದುರಾಸೆ, ದಯೆ, ಕರುಣೆ, ಆನಂದ, ಕೋಪ, ರೌದ್ರ, ಭಯ, ಪ್ರೀತಿ, ಮೊದಲಾದ ಹಲವಾರು ಗುಣಗಳನ್ನು ಭಾವನೆಗಳ ಮೂಲಕ ವ್ಯಕ್ತಪಡಿಸುತ್ತಾ, ಅವುಗಳನ್ನೆ ಸದ್ಗುಣ, ದುರ್ಗುಣಗಳೆಂಬ ಎರಡು ಗುಂಪುಗಳೊಳಗೆ ತುರುಕುತ್ತಾ, ಧರ್ಮ-ಅಧರ್ಮಗಳೆಂಬ ಕಾರ್ಯ ಮಾಡುತ್ತಾ, ಮಾಡಬಾರದೆಂಬುದನ್ನು ಸರ್ವರಿಗೆ ಹೇಳುತ್ತಾ ತಾನದನ್ನೇ ಮಾಡುತ್ತಾ ಬದುಕುವ ಜೀವಿಗಳೇ ಮಾನವರು. ಇಲ್ಲಿ ದುರಾತ್ಮನೂ, ಧರ್ಮಾತ್ಮನೂ, ಹಠಮಾರಿಯೂ, ದುರಹಂಕಾರಿಯೂ, ಸದಾ ಹಸನ್ಮುಖಿಯೂ ಎಲ್ಲರೂ ಬಾಳಿಯೇ ಸಾಯುವರು!
    ಉತ್ತಮನೆನಿಸಿಕೊಂಡವನಿಗೆ ಪರೀಕ್ಷೆ, ನೋವು, ಸಂಕಟ, ಹೋರಾಟಗಳೇ ಹೆಚ್ಚು. ಅಧರ್ಮಿಗೆ ಕ್ಷಮೆಗಳು ಸಿಗುವುದೇ ಹೆಚ್ಚು. ಅಹಂಕಾರಿಗೆ ಬೇಕಾದುದೆಲ್ಲ ಸಿಗುತ್ತದೆ! ವಿಲನ್ ಹೀರೋ ಆಗಬಲ್ಲ! ಹೀರೋ ವಿಲನ್ ಕೂಡಾ ಆಗಬಲ್ಲ!ಬದುಕೊಂದು ಕ್ಷಣಗಳ ಸಂತೆ. ಆ ಸಂತೆಯಲ್ಲಿ ನಮ್ಮ ವ್ಯಾಪಾರ ಎಂದು ಮುಗಿವುದೋ ತಿಳಿಯದು. ಎಲ್ಲರೂ ಅವರವರ ವ್ಯಾಪಾರದಲ್ಲಿ ತಲ್ಲೀನರು. ನಿನಗಾಗಿ ನೀ ಬದುಕು. ಪರರ ಗಮನ ನಿನಗೆ ಬೇಡ. ಹೋರಾಡಿ ಮಡಿಯುವವರೆಗೆ ಹೋರಾಡುತ್ತಾ ಬಾಳು. ಕೊನೆಗೊಂದು ದಿನ ಹೋಗಲೇ ಬೇಕಿದೆ. ಯಾರೂ ನಿನ್ನ ಜೊತೆಗೆ ಬರರು. ಮುಂದಿನ ಜನ್ಮದಲಿ ಏನಾಗುವುದೋ, ಹೇಗಿರುವುದೋ ಯಾರಿಗೆ ಗೊತ್ತು? ಈ ಜನುಮ ಸಿಕ್ಕಿದೆ ನಮಗೆ, ನಮ್ಮ ಮನಸ್ಸು ಹೇಳಿದಂತೆ ಮೂರು ಕ್ಷಣವಾದರೂ ಸಂತಸ, ನೆಮ್ಮದಿಯಿಂದ ಪರರ ಬದುಕಲು ಬಿಟ್ಟು, ಪ್ರೀತಿ ಹಂಚಿ ನಾವೂ ನೆಮ್ಮದಿಯಿಂದ  ಸುಖವಾಗಿ ಬದುಕೋಣ. ಅಷ್ಟೆ ಸಾಕು. ನೀವೇನಂತೀರಿ?
@ಪ್ರೇಮ್@
01.09.2020

ನೆನಪು ..

ನೆನಪು...

ಒಂಟಿ ನಾನು ಗುಂಪು ನೀನು
ಆದರೂನು ಬೇರೆಯೇನು?
ನೀನೆ ನಾನು ನಾನೆ ನೀನು
ಜಗದಿ ಕವಿಯ ಸಖ್ಯವೇನು?

ಮರೆತು ಮರೆಯೆ ಒಡನಾಟ ನೂರು
ಅನುದಿನವು ಓದುವ ಸಾಹಿತ್ಯ ನೂರು
ಚಂದಿರನಂಗಳದಿ ತುಣುಕು ಪ್ರೇಮ
ಜಾರಿ ಹಾರಿ ಸವಿಯೊ ಗಾನ..

ಮೌನ ಕದದ ಬೇರು ವಿರಳ
ಕವಿಯ ಪದದ ಆಳ ಬಹಳ
ನಗು ಮೊಗದ ಹಿರಿಯ ಕಿರಿಯ
ತಿದ್ದಿ ತೀಡೊ ಮನವು ಸನಿಹ..

ಸಂಗಮವೆ ಸಾಕ್ಷಿ ನೋವ ಮರೆವು
ಹಂಗಾಮಿ ನಾನು ಪದದ ಕರೆಯು
ಸಾಹಿತ್ಯ ಸೇವೆಗಾಗಿ ಮುಡಿಪು
ಕನ್ನಡವು ತಾನೆ ಸದಾ ನೆನಪು..
@ಪ್ರೇಮ್@
01.09.2020

ಶುಕ್ರವಾರ, ಆಗಸ್ಟ್ 21, 2020

ಹನಿಗವನ-ಧರೆ-ರವಿ

ಧರೆ-ರವಿ

ರಹಸ್ಯವಿಹುದೇ 
ಧರೆ-ರವಿಯರ
ಪ್ರೇಮದ ನಡುವೆ?
ನಮಗೇಕೆ ಬೇಕು
ಎನ್ನುವಿರಾ 
ಅದರ ಗೊಡವೆ?
ಹಸಿರಿದ್ದರಲ್ಲವೇ
ಭೂ ದೇವಿಗೆ
ನಿಜದ ಒಡವೆ?
@ಪ್ರೇಮ್@
21.08.2020

ಮಂಗಳವಾರ, ಆಗಸ್ಟ್ 18, 2020

ಗಝಲ್-208

ಗಝಲ್-209

ಮೋಹದ ಮೋಡಿಯು ಮಾಯವು ನೋಡಾ..
ಮೋದದ ಬದುಕದು ಮೋಸವು ನೋಡಾ..

ನ್ಯಾಯದ ಮನವದು ಉತ್ತಮ ಕಾಣಾ
ಅನ್ಯಾಯ ಶಿರದಲಿ ಪಾಪವು ನೋಡಾ..

ಭಾರವು ಕೆಡುಕದು ತಲೆಯಲಿ ಎಂದಿಗೂ
ಪರರನು ನೋಡಿ ಬೇಸರಿಪೆವು ನೋಡಾ..

ಜಾತಿ ಮತ ಪಂಥ ಕುಲಗಳನೇಕ
ಒಂದೇ ಹರಿಯುವ ರಕುತವು ನೋಡಾ.. 

ಪ್ರೇಮದಿ ಬದುಕಲು ಮಾರ್ಗವು ಹಲವಿದೆ
ಪ್ರೀತಿಯ ನುಡಿಗೆ ತಲೆ ಬಾಗುವುದು ನೋಡಾ..
@ಪ್ರೇಮ್@13.08.2020

ನೆನೆದಾಗ

ನೆನೆದಾಗ

ಗೆಳತೀ ಮಳಿ ನೀರು ಸುರಿಯುವಾಗ
ಧೋ ಎಂದು ಹರಿಯುವಾಗ
ನಿನ ನೆನಪ ಕಾಡಕತ್ತೈತೀ..
ನಿನ ಮ್ಯಾಲ ಪ್ರೀತಿ ಉಕ್ತೈತಿ..

ಆ ದಿನದ ನೆನಪು ಬಹಳ
ಜಾರಿ ಸೋಕಿದ್ದೆ ನೆಲ
ನಾ ಎತ್ತಿ ಕೆಸರ ಒರೆಸಲು
ನಾಚ್ಕೇಲಿ ನಿನ್ನ ಕೆನ್ನೆ ಕೆಂಪಾಗಲು..

ಹಸಿರಿನ ಗದ್ದೀ ಬದಿಗೆ
ನಾವಿಬ್ರೇ ಹೋಗಿ ನಿಂತು
ನಾ ನಿನ್ನ ಎತ್ತೀ ಹಿಡಿದಾಗ
ಕಣ್ಣೆರಡು ಒಂದಾಗಿ ಲೋಕ ಮರೆತಾಗ...

ಹೊಳಿಯ ಬಂಡೆಯ ಮ್ಯಾಲೆ
ನನ್ ಮ್ಯಲೆ ನೀ ಕೂತು
ಮುಂದಿನ ದಿನವ ನೆನೆಯುತ್ತಾ
ಕೈಕೈಯ ಹಿಡಿದು ನಾವು ಹೊಳೆಯ ದಾಟುತ್ತಾ..
@ಪ್ರೇಮ್@
18.07.2020

ಚುಟುಕು-ಬದುಕು

ಚುಟುಕು

ಬದುಕು

ಅಂತರಂಗ ಬಹಿರಂಗದೊಳಗಿನ ಭಾವ ರಂಗು
ತರಂಗಾಂತರಂಗದಂತಹ ಅಲೆಯ ಸೊಬಗು
ಮನದೊಳಗೆಲ್ಲ ಹತ್ತು ಹಲವು ಕನಸುಗಳ ಮೆರಗು
ಜೀವನವಿಡೀ ಪ್ರತಿ ಕ್ಷಣವೂ ಕತ್ತಿಯ ಅಲಗು!
@ಪ್ರೇಮ್@
17.08.2020

ಚುಟುಕು-ದಾಟಿ

ಚುಟುಕು

ದಾಟಿ

ದೂರ ದಾರಿ ದಾಟಿ ದಣಿದು
ದೂರಿ ಪರರ ದಾರ ಹೆಣೆದು
ದೂಡಿ ಹಿಂದೆ ಓಡಿ ಮುಂದೆ
ದೂರ ಸಾಗೆ ತಿರುಗಿ ಹಿಂದೆ!
@ಪ್ರೇಮ್@
18.08.2020

ಸೋಮವಾರ, ಆಗಸ್ಟ್ 17, 2020

ಬದುಕು

ಚುಟುಕು

ಬದುಕು

ಅಂತರಂಗ ಬಹಿರಂಗದೊಳಗಿನ ಭಾವ ರಂಗು
ತರಂಗಾಂತರಂಗದಂತಹ ಅಲೆಯ ಸೊಬಗು
ಮನದೊಳಗೆಲ್ಲ ಹತ್ತು ಹಲವು ಕನಸುಗಳ ಮೆರಗು
ಜೀವನವಿಡೀ ಪ್ರತಿ ಕ್ಷಣವೂ ಕತ್ತಿಯ ಅಲಗು!
@ಪ್ರೇಮ್@
17.08.2020

ಶನಿವಾರ, ಆಗಸ್ಟ್ 15, 2020

ಹನಿ

ಹನಿ

ಪರಲೋಕಕ್ಕೆ ಹೋಗಿದ್ದೆ
ನಿನ್ನೆ ಕನಸಿನಲ್ಲಿ!
ರಂಬೆ ಊರ್ವಶಿ ಮೇನಕೆಯರಿದ್ದರು
ಮೇಕಪ್ ರೂಮಿನಲ್ಲಿ!!!
@ಪ್ರೇಮ್@
16.08.2020

ಹನಿ

ಹನಿ

*ಪಕ್ಕದ್ಮನೆಯವಳೇ ಸಿಕ್ಕಿದ್ದೇ*
*ಹೇಳಲು ಶುಭಾಶಯ?*
*ಅವಳ ಗಂಡನೊಡನೇಕೆ *ಮಾಡಿಕೊಳ್ಳಲಿಲ್ಲ*
*ಶುಭಾಶಯಗಳ ವಿನಿಮಯ?*
@ಪ್ರೇಮ್@

ಶಿಕ್ಷಕರ ಗೋಳು

ಶಿಕ್ಷಕರ ಗೋಳು

 ಕೇಳು ಮಗುವೇ ಶಿಕ್ಷಕರ ಈ ಗೋಳು
ಕೆಸರಲ್ಲಿ ಜಾರಿ ಬಿದ್ದು ಸೊಂಟ ಹಾಳು
ಒಂದೊಂದು ಮನೆಗೆ ಮೈಲಿಗಟ್ಟಲೆ ನಡೆದು ಸಾಗಿ
ನಾಯಿ ಓಡಿಸಿಕೊಂಡು ಬಂದು ಬೀಳ ಹೋಗಿ

ಬಾಯಿ ಮೂಗಿಗೆ ಮಾಸ್ಕು,
ಬಿಸಿ ನೀರಿಗೆ ಬ್ಯಾಗಲಿ ಫ್ಲಾಸ್ಕು ಕಾಲಲಿ ಜಾರುವ ಚಪ್ಪಲಿ
ಮಳೆಗೆ ಕೊಡೆ ಹೇಗೆ ಹಿಡಿಯಲಿ?

ಕೈಲೊಂದು ಫೈಲು ಜೊತೆಯಲಿ
ಗ್ಲೌಸಿನೊಳಗೆ ಮೊಬೈಲ ಹೇಗೆ ಒತ್ತಲಿ
ಪಾಠ ಮಾಡಬೇಕಂತೆ ಮನೆ ಮನೆಯಲಿ
ಬಸ್ಸಿಲ್ಲ, ದಿನಕೆ ಐದಾರು ಮೈಲಿ ಹೇಗೆ ಸಾಗಲಿ?

ಕರಿಹಲಗೆಯಿಲ್ಲ, ಸೀಮೆ ಸುಣ್ಣವೂ ಇಲ್ಲ
ಸರಿ ಹೊತ್ತಿಗೆ ಊಟ ಮಾಡಲಾಗುತ್ತಿಲ್ಲ
ಗಾಳಿ ಮಳೆಗೂ ರಕ್ಷಣೆಯಿಲ್ಲ
ರೆಡ್ ಅಲರ್ಟ್ ನಮಗಿಲ್ಲ
ಹೋಮ್ ಕ್ವಾರೆಂಟೈನ್, ರೆಸ್ಟ್ ಇಲ್ವೇ ಇಲ್ಲ

ಶನಿವಾರವೂ ರಜಾ ಇಲ್ಲ
ದಾಖಲಾತಿ ಆಂದೋಲನ ಆಗಬೇಕಲ್ಲ!
ಮನೆಯೊಳಗೂ ಆನ್ ಲೈನ್ ಕ್ಲಾಸಲ್ಲ!
ಶಿಕ್ಷಕರ ಪಾಡು ದೇವರೇ ಬಲ್ಲ!
@ಪ್ರೇಮ್@
12.08.2020

ಹನಿ

ಹನಿ
ನಳಪಾಕಕ್ಕಿಂದು ಪ್ರಾರಂಭ
ತಿಂದವನಿಗೆ ಭಯದಾರಂಭ!
ಅಡಿಗೆ ಮನೆಯೊಳು ಸೌಂಡು
ಗಂಡಸರಿಗಿಲ್ಲ ಪ್ರತಿದಿನದ ಬಾಂಡು!!
@ಪ್ರೇಮ್@

ಹನಿ

ಇಂದಿನ ಮಕ್ಕಳಿಗೆ
ಬೇಕಿಲ್ಲ ಊಟ ತಿಂಡಿ
ಕೊಡಿ ಕೈಗೆ ಮೊಬೈಲಲಿ
ಓಡುವ ಆಟದ ಉಗಿಬಂಡಿ!!
@ಪ್ರೇಮ್@
12.08.2020

ಹನಿ

ಹನಿ
ಕರೆವರು ಎದುರಲ್ಲಿ
ಬನ್ನಿ ನಮ್ಮ ಮನೆಗೆ
ಹೋದ ಮೇಲೆ ತಿಳಿವುದು
ಯಾಕಾದರೂ ಹೋದೆವೋ ಅಲ್ಲಿಗೆ!!
ಬಾಯಿಗೆ ಬೀಗ ಹಾಕಿ
ಹೋಗಿ ಬರಬೇಕು ಮೆಲ್ಲಗೆ!!!
@ಪ್ರೇಮ್@
13.08.2020

ಕಿಡಿಹನಿ

ಕಿಡಿ ಹನಿ

ಇಂದು ಸ್ವಾತಂತ್ರ್ಯ 
ದಿನಾಚರಣೆಯಂತೆ!
ಒಂಟಿಯಾಗಿರುವವರಿಗೆ ಮಾತ್ರ
ಜಂಟಿಯಾದವರಿಗಲ್ಲ!
ಒಬ್ಬರಿಂದಿನ್ನೊಬ್ಬರಿಗೆ
ವಿಮುಕ್ತಿ ಸಿಗಬೇಕಲ್ಲ
ಸಂಸಾರ ಬಂಧನದಿಂದ!!
@ಪ್ರೇಮ್@
15.08.2020

ಏಕೀತರ

ಏಕೀತರ

ನಿನ್ನೆಯಿದ್ದ ದೇಶಭಕ್ತಿ ಇಂದಿಲ್ಲವೇಕೆ?
ಒಂದೇ ದಿನಕ್ಕದನು ಮಿತಿಗೊಳಿಸಿದುದೇಕೆ?
ನಿನ್ನೆ ಕೈಲಿದ್ದ ಬಾವುಟ ಕಸದ ಬುಟ್ಟಿ ಸೇರಿದ್ದೇಕೆ?
ನಿನ್ನೆ ಮಾತ್ರ ತ್ರಿವರ್ಣದ ಧಿರಿಸೇತಕೆ?

ಭಾರತಾಂಬೆಯ ಅದ್ಭುತ ಕಿಡಿಗಳಲ್ಲವೇ ನಾವು?
ದೇಶಭಕ್ತಿಯ ಕಿಚ್ಚು ಪ್ರತಿಕ್ಷಣ ಉಕ್ಕಬೇಕಲ್ಲವೇ?
ಮಾತೆಯಾಗಿ ಜೀವ ಬಲಿದಾನಕೆ  ಸಿದ್ಧರಿರಬೇಕು.
ದೇಶ ಕಾಯುವ ಯೋಧರಿಗೆ ಜೊತೆಯಾಗಬೇಕು.

ಮನದಲಿ ದೇಶಪ್ರೇಮ ನಿತ್ಯವಿರಬೇಕು
ತಂದೆ ತಾಯಿಯನೂ ಅಂತೆಯೇ ಗೌರವಿಸಬೇಕು.
ಅವರ ವೃದ್ಧಾಶ್ರಮಕೆ ದೂಕುವ ನಾವು
ಭಾರತ ಮಾತೆಯ ಅದಾವ ಪರಿಯಲಿ ನೋಡಿಕೊಳ್ಳಬಲ್ಲೆವು?

ನಮ್ಮ ಮೇಲೇ ನಮಗಿಲ್ಲ ಕಾಳಜಿ
ಮೊಬೈಲಿಗೆ ಕೊಡುವಷ್ಟು ಸಮಯ ಮಕ್ಕಳಿಗೆ ಕೊಡಲಾರೆವು
ಮನೆಮಂದಿಯ ಜೊತೆ ಕುಳಿತು ಹರಟಲಾರೆವು
ಸರ್ವಂ ಸಾಮಾಜಿಕ ಜಾಲತಾಣಮಯ
ದೇಶಭಕ್ತಿಯೂ ಕೂಡಾ!
ಮುಂದೊಂದು ದಿನ ಆನ್ ಲೈನಿನಲೇ ಧ್ವಜ ಹಾರಿಸುವೆವೇನೋ!

ಭಾರತಮಾತೆ ಅದೆಂದು ಹೇಳಬಲ್ಲಳು ನಾ ಧನ್ಯೆಯೆಂದು?
ಪ್ರತಿ ಭಾರತೀಯನ ಮನ ಉದ್ಧಾರವಾಗುವುದೆಂದು?
ತನ್ನ ಕಾರ್ಯಗಳ ತಾನೇ ಮಾಡುತ ಮುಂದುವರೆವುದೆಂದು?
ಸಮಯ ನುಂಗುವ ಮೊಮೈಲಿನಾಟದ ಹುಚ್ಚನು ಕಡೆಗೊಳಿಸುವುದೆಂದು?
@ಪ್ರೇಮ್@
16.08.2020

ಶುಕ್ರವಾರ, ಆಗಸ್ಟ್ 7, 2020

ಮನದ ಮಾತು

ಹಾಯ್ ಎಲ್ಲಾರ್ಗೂ... ಮನದ ಮಾತಿಗೆ ಸ್ವಾಗತ.. ಸುಮ್ನೆ ಓದ್ನೋಡಿ..

  ಮಳೆ ಜೋರಾಗ್ ಸುರೀತಿದೆ. ಅಮ್ಮ, ಅಪ್ಪನ್ ಸುತ್ತ ಮೂರ್ನಾಲ್ಕು ಮಕ್ಳು ಒಲೆ ಬುಡದಲ್ ಕೂತು ಮನೇಲೇ ಮಾಡಿದ ಹಲಸಿನ್ ಹಪ್ಳ ಸುಟ್ ಕೊಂಡ್ ತಿಂತಾ ಅಜ್ಜಿ ಕತೆ ಕೇಳೋ ಕಾಲವಂತೂ ಈಗಿಲ್ಲ. ಈಗೇನಿದ್ರೂ ಏಕಾಂತವಾಗಿ ಒಂದ್ ಲ್ಯಾಪ್ ಟಾಪೋ, ಕಂಪ್ಯೂಟರೋ ಇಟ್ಕೊಂಡು, ಅದ್ನೇ ನೋಡ್ತಾ, ಪಕ್ಕದಲ್ಲಿರೋ ಮೊಬೈಲ್ ತೆಗ್ದು ಒಮ್ಮೆ ಎಫ್ ಬಿ, ಮತ್ತೊಮ್ಮೆ ವಾಟ್ಸಪ್, ಮಗದೊಮ್ಮೆ ಟ್ವಿಟರ್, ಇನ್ನೊಮ್ಮೆ ಇನ್ ಸ್ಟ್ರಾಗ್ರಾಂ, ಮೆಸೆಂಜರ್, ಶೇರ್ ಚಾಟ್ ಹೀಗೆ ಜೀವನದಲ್ಲಿ ಕೂತಲ್ಲೇ ತಲೆ ಎತ್ತದೆ, ಯಾರ್ನೂ ನೋಡ್ದೆ ತಾನೇ ತಾನಾಗಿ ಮಜಾ ತಗೊಳ್ಳೋ ಕಾಲ ಬಂದ್ಬಿಟ್ಟಿದೆ.
     ಈಗಂತೂ ಯಾರು ಯಾರ ಸುದ್ದಿಗೂ ಇಲ್ಲ, ಪಕ್ಕದ್ ಮನೆಯವ್ರ ಜೊತೆ ಜಗಳವಾಡೋ ಕಾಲಾನೂ ಎಂದೋ ಹೋಯ್ತು. ಈಗಂತೂ ಪಕ್ಕದ್ ಗೋಡೆಯಿಂದಾಚೆ ಯಾರಿದ್ದಾರೆ, ಯಾರ್ ಬರ್ತಾರೆ, ಯಾರ್ ಹೋಗ್ತಾರೆ, ಯಾರ್ ಸಾಯ್ತಾರೆ ಅಂತಾನೂ ಗೊತ್ತಾಗಲ್ಲ! ಮಾತು, ಕತೆ, ಹರಟೆ ಅನ್ನೋದು ಮರ್ತೇ ಹೋಗಿದೆ ಜನರಿಗೆ. ಅದೇನಿದ್ರೂ ಈಗ ರಿಟನ್ ಚಾಟ್, ವಾಯ್ಸ್ ಚಾಟ್, ವಿಡಿಯೋ ಕಾಲಲ್ಲೇ. ಜನ ಮೊಬೈಲೆಂಬ ಸಣ್ಣ ಸಾಧನಕ್ಕೆ ಎಷ್ಟು ಅಂಟಿ ಬಿಟ್ಟಿದ್ದಾರಂದ್ರೆ ಅಪ್ಪ, ಅಮ್ಮ, ಮಕ್ಳು ಸಂಸಾರ ಯಾರನ್ ಬೇಕಾದ್ರೂ ಬಿಟ್ಟು ಒಬ್ರೇ ಮೊಬೈಲ್ ಜೊತೆ ಬದ್ ಕ್ತಾರೆ. ಮೊಬೈಲ್ ನೋಡ್ವಾಗ ತಮ್ ಮಕ್ಳೇ ಡಿಸ್ಟರ್ಬ್ ಅನ್ನಿಸ್ತಾರೆ. ಗಂಡ ಹೆಂಡತಿ ಎಷ್ಟೇ ಕ್ಲೋಸ್ ಇದ್ರೂ ಒಬ್ರ ಮೊಬೈಲ್ ಮತ್ತೊಬ್ರು ನೋಡೋದ್ ಅಪರಾಧ! ಓಹೋ..ಕಾಲ ಕೆಟ್ಹೋಗಿದ್ಯೋ? ಸಮಯ ಬದಲಾಗಿದ್ಯೋ, ಜನಾ ಕೆಟ್ಹೋಗಿದ್ದಾರೋ? ಜನರೇಶನ್ ಬದಲಾಗಿದ್ಯೋ ಒಂದೂ ತಿಳೀತಿಲ್ಲ. ಕಾಲಾನೇ ಕೊರೋನ ರೂಪ್ದಲ್ ಬಂದು ನಿಮ್ ನಿಮ್ ಮನೆಗಳಲ್ಲಿ, ನಿಮ್ದೇ ಸಂಸಾರದ್ ಜೊತೆ ಸುಖವಾಗಿರಿ ಅಂತ ಬುದ್ಧಿ ಕಲಿಸ್ಬೇಕೇನೋ?

 ಮುಂದಿನ ಜನರೇಶನ್ ಮಕ್ಳಿಗೆ ನಾಲ್ಗೆ ತಿರುಗೋದೇ ಕಷ್ಟವೇನೋ. ಕೂತಲ್ಲಿಗೇ ಎಲ್ಲ ಬಂದೂ ಕೈ ಕಾಲೂ ತಮ್ಮ ಶಕ್ತಿಯನ್ನು ಕಳ್ಕೊ ಬಹುದೇನೋ. ಮೊಬೈಲ್, ಕಂಪ್ಯೂಟರ್ ನೋಡಿ ನೋಡಿ ಕಣ್ಣಿನ ಪವರ್ ಹೋದ್ರೆ, ಒತ್ತಿ ಒತ್ತಿ ಬೆರಳುಗಳಿಗೂ ರೋಗ ಬರ್ತದಂತೆ. ಮತ್ತೆ ಮನೋರೋಗ! ಎಲ್ಲಾ ನ್ಯೂಸ್ ಗಳ ನೋಡಿ, ಓದಿ! ಮತ್ತೆ ಸರಿಯಾದ ಊಟ ತಿಂಡಿ ಇಲ್ದೇ ಆರೋದ್ಯದಲ್ಲಿ ಏರ್ ಪೇರು. ತಿಂದ್ರೆ ಕರಗೋಲ್ಲ, ಜಾಸ್ತಿ ತಿಂದ್ರೆ ಬೊಜ್ಜು ಬರತ್ತೆ! ಮದ್ದು ಹಿಡಿಸೋಲ್ಲ! ಹಿಂಗಾದ್ರೆ ಹೆಂಗೇ?  ಕಲಿಗಾಲ ಅಂದ್ರೆ ಇದೇಯೇನೋ, ಸೃಷ್ಟಿಯ ವಿನಾಶ ಕಾಲವೇನೋ. ನೀವೇನಂತೀರಿ?
@ಪ್ರೇಮ್@
08.08.2020

ಆಟಿ ಬಂತು

ಆಟಿ ಬಂತು

ಆಚರಣೆ ಹಬ್ಬಗಳ ಬದಿಗಿರಿಸಿ
ಪ್ರಕೃತಿ ವಸ್ತುಗಳ ಪ್ರೋತ್ಸಾಹಿಸಿ
ನೈಸರ್ಗಿಕ ತಿನಿಸುಗಳ ಪುಷ್ಠೀಕರಿಸಿ
ರೋಗರುಜಿನಗಳಿಂದ ದೂರವಿರಿಸೊ ಆಟಿ ಬಂತು!

ಪತ್ರೊಡೆ, ಹಲಸಿನ ಬೀಜಗಳ ಊಟ
ಚೆಕ್ಕೆ ಕಹಿ ಔಷಧಿಗಳ ಕಾಟ
ಹಿರಿಯರ ನೆನಪಿನ ರಸದೂಟ
ಹಳೆ ಸಂಪ್ರದಾಯಗಳ ನೆನಪಿಸುವ ಆಟಿ ಬಂತು.

ಆಟಿ ಕಳೆಂಜನ ನಲಿವಿನ ನೋಟ
ಮಳೆಯಲ್ಲು ಬೆಳೆವ ಅಣಬೆಯ ಹುಡುಕಾಟ
ಕಳಲೆ, ಕೆಸುಗಳ ಸಿಹಿ, ಕಾರದೂಟ
ಮಕ್ಕಳೊಡನೆ ತವರಲಿ ಕಳೆವ ಆಟಿ ಬಂತು..

ಹಬ್ಬ ಹರಿದಿನಗಳ ದೂಡಿ ಬಂತು
ಹಲವು ಕಾರ್ಯಕ್ರಮಗಳ ಮುಂದೋಡಿಸಿ ಬಿಡ್ತು
ದೈವ ದೇವ ಕಾರ್ಯಗಳ ಬೇಡವೆಂದಿತು
ಹಿರಿಯರ ಸೇವೆಗಷ್ಟೆ ಮೀಸಲಾದ ಆಟಿ ಬಂತು..
@ಪ್ರೇಮ್@
20-07-2020

ಗುರುವಾರ, ಆಗಸ್ಟ್ 6, 2020

ಟಂಕಾಗಳು

ಟಂಕಾಗಳು

ಟಂಕಾ-1

ಮಾತೆಯೆಂದರೆ 
ಮುತ್ತಲ್ಲವು ಅವಳು
ಮಾಣಿಕ್ಯವಲ್ಲ
ನಿಧಿ ಧನವೂ ಅಲ್ಲ
ಸರ್ವಕ್ಕಿಂತ ಮಿಗಿಲು!

2. ಟಂಕಾ

ಮನುಜನ ಗುಣವೇ
ಪರೋಪಕಾರ ಮಾಡಿ
ಜನಮನದಿ
ಸದಾ ನೆಲೆಯೂರುವ
ದಿನಪನ ಹಾಗೆಯೇ
ಬೆಳಕ ನೀಡಬೇಕು!
@ಪ್ರೇಮ್@
05.08.2020

ಹಾಯ್ಕುಗಳು

ಹಾಯ್ಕುಗಳು

1. ಕೆಂಪಾದವಲ್ಲ
      ಭೂತಾಯ ಕಣ್ಣುಗಳು
           ಮಳೆ ಸುರಿಸಿ!!!

2. ಪುಟ್ಟ ಕಂದನ
        ನಗುವ ಕೇಕೆಯಲಿ
             ಜಗ ಮರೆತೆ!!!

3. ಅಮ್ಮನ ಕರ
      ಪಾತ್ರೆಯನು ಉಜ್ಜಿದ
        ಗಡಸು ಧ್ವನಿ!

4. ಇಳೆ ತಂಪಾಗೆ
       ಮೇಘ ರಾಜನ ನೃತ್ಯ
         ಸ್ತಬ್ಧವಾಯಿತು!!!
@ಪ್ರೇಮ್@
06.08.2020

ಮಂಗಳವಾರ, ಆಗಸ್ಟ್ 4, 2020

ನನ್ನ ಭಾರತ

ನನ್ನ ಭಾರತ

ನನ್ನ ಭಾರತ ಹಸಿರ ಸೀರೆಯ ಹೊದ್ದು ಮಲಗಿದೆಯೇ?
ನನ್ನ ದೇಶವು ದೇಶ ಭಕ್ತರ ಉಡಿಯ ತುಂಬಿದೆಯೇ?

ಶಿರದಿ ಹಿಮಾಲಯ ಗಂಗೆಯುಕ್ಕುವ ಜಲ ಶುದ್ಧಿಯಾಗಿದೆಯೇ?
ಕಾಲ ತೊಳೆಯಲು ಮಹಾ ಸಾಗರ ಉಕ್ಕಿ ಹರಿದಿದೆಯೇ?

ಮಾತೆ ಗೌರವ ಉಳಿಸೆ ಹೆಮ್ಮಕ್ಕಳ ಮಾನ ಕಾಪಾಡಿದೆಯೇ?
ಜಾತಿ ಮತ ಪಂಥಗಳ ಸಂಕೋಲೆ ಕಿತ್ತು ಹಾಕಿದೆಯೇ?

ಹಲವು ಭಾಷೆ ನುಡಿ ಲಿಪಿಗಳೆಲ್ಲವು ಒಂದನ್ನೇ ಸಾರಿವೆಯೇ?
ಮೋಸ ವಂಚನೆ ಹೊಟ್ಟೆಕಿಚ್ಚದು ಬಹು ದೂರ ಓಡಿವೆಯೇ?

ಗಾಂಧಿ ತಾತನ ರಾಮರಾಜ್ಯವು ಎಲ್ಲೆಲ್ಲು ಕಾಣುವುದೇ?
ದಾಸ್ಯವೆಂಬ ಸಂಕೋಲೆ ಮುರಿದು ಸರ್ವ ಸ್ವಾತಂತ್ರ್ಯ ಬಂದಿದೆಯೇ?

ಉರಿವ ಮನಗಳ ತಣಿಸಿದ ಉಸಿರೊಂದೆ ಆಗಿದೆಯೇ?
ಪ್ರೇಮ ಪ್ರೀತಿ ಶಾಂತಿ ಭಕ್ತಿಯ ಕೀರ್ತಿ ಸಾರುತಿವೆಯೇ?
@ಪ್ರೇಮ್@
04.08.2020

ಸೋಮವಾರ, ಆಗಸ್ಟ್ 3, 2020

ಮನಸಿನ ಮಾತು ಓದ್ನೋಡಿ

  ಮನದ ಮಾತು

ಸುಮ್ನೆ ಓದ್ನೋಡಿ...

ಈ ಪ್ರಪಂಚದ ಮನುಷ್ಯರಲ್ಲಿ ಯಾರೂ ಪರ್ಫೆಕ್ಟ್ ಅಲ್ಲ ನೆನಪಿರಲಿ. ಒಬ್ಬ ನೇರ ನುಡಿಯವನಾದರೆ ಮತ್ತೊಬ್ಬ ಅಂಜುಬುರುಕ. ಒಬ್ಹ ಹೃದಯ ಶ್ರೀಮಂತ ಬಡವನಾದರೆ ಮತ್ತೊಬ್ಬ ಗುಣದಲ್ಲಿ -ಬಡವ. ಒಬ್ಬ ಉತ್ತಮ ಸಂಪತ್ತು , ನಡತೆಯಿರುವವ ರೋಗಿ. ಉತ್ತಮ ಟ್ಯಾಲೆಂಟ್ ಪಡೆದವ ಅಹಂಕಾರಿ! ಗರ್ವಿ, ಯಾರನ್ನೂ ತಿದ್ದದ ಮನೋವಿಕಾರಿ, ಮತ್ತೊಬ್ಬ ಸರಳ ಸುಂದರ ದೈವೀ ಗುಣ ಸಂಪನ್ನ, ಒಬ್ಬ ಗಾಂಧಿಯಾದರೆ ಮತ್ತೊಬ್ಬ ಬೋಸ್! ಯಾರನ್ನೂ ಸರಿ ಎನ್ನುವಂತಿಲ್ಲ, ಒಂದಲ್ಲ ಮತ್ತೊಂದು ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನ! ಅದೇ ವ್ಯಕ್ತಿಗತ ಬದಲಾವಣೆ. ಇದನ್ನೇ ಗುಣ ಅಂತಾರೆ!
   ಆ ಗುಣದಿಂದ್ಲೇ ನಾವು ಮನುಷ್ಯರನ್ನ ಅಳೆಯೋದು! ಹೇ ಅವ್ಳು ನಂಗೆ ತುಂಬಾ ಇಷ್ಟ ಆಗ್ ಬಿಟ್ಳು ಕಣೋ ಅನ್ನೋಕೆ, ಅವಳ್ನ ಅಬ್ಸರ್ವ್ ಮಾಡಿದಾಗ ಕಂಡ ಅವಳ ಗುಣಾನೇ ಸಾಕ್ಷಿ. ಚೆನ್ನಾಗಿರೋ ಹುಡ್ಗೀರು ಎಲ್ಲಾ ಕಡೆ ಸಿಗ್ತಾರೆ. ಚೆನ್ನಾಗಿರೋ ಹಾರ್ಟ್ ಸಿಗೋದ್ ಕಷ್ಟ ಇದೆ. ನಾವ್ ಲೈಫ್ ಲಾಂಗ್ ಅಂಥ ಹಾರ್ಟ್ ಗಾಗಿ ಹುಡುಕಾಡ್ತಿರ್ತೇವೆ. 
   ನಾವ್ ಹುಡುಕಿ ಬಿಟ್ರಂತೂ ಪ್ರಪಂಚಾನೇ ಮರ್ತು ಲವ್ವಲ್ ಮುಳುಗಿ ಹೋಗ್ತೇವೆ. ಅಲ್ಲೇನಾದ್ರೂ ಎಡವಟ್ಟಾದ್ರೆ ಹೃದಯ ಒಡ್ಕೊಳತ್ತೆ. ಅಳ್ತೇವೆ. ಬಾರ್ ಕಡೆ ವಾಲ್ತೇವೆ. ಪ್ರಪಂಚದಲ್ಲಿ ನನ್ ಗಾಗಿ ಇದೊಂದೇ ಹಾರ್ಟಿತ್ತು, ಅದ್ನ ದೇವ್ರು ಕಿತ್ಕೊಂಬಿಟ್ಟಾಂತ ದೇವರ್ನೇ ಬೈತೇವೆ.
   ಆದ್ರೆ ದೇವ್ರು ನಮ್ ಲೈಫ್ ನ ನಾವೇ ಕಟ್ಕೊಳ್ಳೋಕ್ ಬಿಡಲ್ಲ, ಅವ್ನೇನಿದ್ರೂ ಗಾಡ್ ಫಾದರ್ ತಾನೇ? ತನ್ ಮಕ್ಳ ಲೈಫಿಗೆ ತಾನೇ ಏನೋ ಲೆಕ್ಕಾಚಾರ ಹಾಕಿರ್ತಾನೆ. ಅದರ ಪ್ರಕಾರಾನೇ ನಡೆಸ್ತಾನೆ ಕೂಡಾ. ಅವನ್ ಲೆಕ್ಕಾಚಾರ ಏನೋ ಚೆನ್ನಾಗೇ ಇರುತ್ತೆ..ಆದ್ರೆ ನಾವ್ ಅದ್ನ ಸ್ವೀಕರಿಸೋಕೆ ರೆಡಿ ಇರಲ್ಲ, ಒಪ್ಕೊಳೋಲ್ಲ ಅಷ್ಟೆ. ಹಠಮಾರಿಗಳು ನಾವು!
   ಆದ್ರೆ, ನಾವ್ ದೇವರ್ ಮಾತ್ ಕೇಳಿ ಹಠ ಮಾಡದೆ ದೇವರ್ ಹೇಳಿದ ಹಾಗೇ ಬದುಕಿದ್ರೆ ಬದ್ಕಲ್ಲಿ ಆರೋಗ್ಯವಾಗಿ ಬಿಂದಾಸ್ ಆಗಿರ್ತೀವಿ ಅನ್ನೋದಂತೂ ಸತ್ಯ! ನಲ್ವತ್ ವರ್ಷಕ್ಕೇ ಗಡ್ಡ ಮೀಸೆ ಹಣ್ಣಾಗಿ ಟೆನ್ಶನ್ ತಗೊಂಡು ಮುದ್ಕನ್ ತರ ಬಾಳೋ ಬದ್ಲು ದೇವರ್ ಮಾತ್ ಕೇಳಿ. ಅರ್ವತ್ತಾದ್ರೂ ಹುಡ್ಗನ್ ಥರಾ ಯಂಗ್ ಅಂಡ್ ಎನರ್ಜೆಟಿಕ್ ಆಗಿರ್ತೀರಾ. 

   ಭೂಮಿಗ್ ಬಂದ್ ಮೇಲೆ ಸಂಸಾರದ್ ಜವಾಬ್ದಾರಿ ನಿಭಾಯಿಸ್ಲೇ ಬೇಕು. ಎಲ್ಲಾರ್ಗೂ ಅವರ್ದೇ ಆದ ಟೆನ್ಶನ್, ಕೆಲಸಗಳಿರುತ್ತೆ. ಅದ್ನ ಮಾಡ್ಲೇ ಬೇಕು. ಯಾರು ಯಾರ್ ಕೈಲಿ ತಪ್ಪಿಸ್ಕೊಂಡ್ರೂ, ಕೋರ್ಟು, ಕೇಸಲ್ಲಿ ಪುಸ್ಕ ಆದ್ರೂ ದೇವರ ಅಟೆಂಡೆನ್ಸ್ ರಿಜಿಸ್ಟಾರ್ ನಲ್ಲಿ ದಾಖಲಾಗೇ ಇರ್ತೀರಾ. ಮಗಾ ಈ ದಿನಾ ನಿನ್ನ ಭೂಮಿಗ್ ಕಳ್ಸಿದ್ದೀನಿ ಇಂಥವರ್ ಮನೆಗೆ, ಇಷ್ಟ್ ದಿನ ಇದ್ದು, ಅಲ್ಹೋಗಿ, ಇಲ್ಹೋಗಿ ತಲೆ, ಹೊಟ್ಟೆ ಕೆಡಿಸ್ಕೊಂಡ್ ಇಂಥ ದಿನ ಭೂಮಿಯಿಂದ ಹೊರಟ್ಬಿಡು ಅಂತ ರೆಕಾರ್ಡ್ ಬರ್ದು  ,ಮೊದ್ಲೇ ಜಾತ್ಕ ಮಾಡಿ  ಕಳಿಸ್ಕೊಟ್ಟಿರ್ತಾರೆ. ಮಡದಿ, ಮಕ್ಳು ಬದ್ಕಿಸೋದಕ್ಕೆ ಹಣ ಖರ್ಚು ಮಾಡ್ತಾರೆ, ನೋಡ್ಕೋತಾರೆ. ಆದ್ರೇನು? ವ್ಯಾಲಿಡಿಟಿ ಮುಗ್ದಾಗ ಉಸಿರು ಬಂದಾಗ್ಲೇ ಬೇಕು, ಹಾರ್ಟ್ ರೆಸ್ಟ್ ತಗೊಳ್ಳೇ ಬೇಕು. ನೀವೇನಂತೀರಾ?
@ಪ್ರೇಮ್@
04.08.2020

ಭಾನುವಾರ, ಆಗಸ್ಟ್ 2, 2020

ವಚನಗಳು

ವಚನಗಳು

ಬೆನ್ನ ಹಿಂದೆ, ಮುಂದೆ ಹುಟ್ಟಿದ
ಸಹೋದರರ ರಕ್ಷಿಸಿ ದೇವಾ
ರಕ್ತ ಹಂಚಿ ಹುಟ್ಟದಿದ್ದರೂ ಸಹೋದರನಂತೆ ರಕ್ಷಿಸುವ ಮನವ ಸದಾ ಹೆಚ್ಚು ಕಾಲ ಬಾಳುವಂತೆ ಹರಸಿ ಈಶಾ..

ವಚನ-2

ಮಾತಿರದ ಮೌನದಲೂ ಪ್ರೀತಿಯಿರುವ ಸಂಬಂಧಗಳ ಮದ ಮತ್ಸರ ಲೋಭಗಳಿಂದ ದೂರವಿರಿಸಿ ಕಾಪಾಡಬೇಕು ನೀನೇ ಜಗದ ಈಶಾ...
@ಪ್ರೇಮ್@
03.08.2020

ಎಡ್ಡೆಪು

ಎಡ್ಡೆಪು

ಸಜ್ಜಿಗೆ ಬಜಿಲ್ ಲ ಬೊರ್ಚಿಗೆ ಅಜ್ಜೆರೆಗಗ್ಯರೆ ಕೂಲಿಜ್ಜಿಗೆ
ಬಜ್ಜಿದ ಒಟ್ಟಿಗೆ ಮಜ್ಜಿಗೆ ಪಾಡಿನ ಬಜಿಲವು  ರುಚಿ ಭಾರಿಗೆ!

ಕಜ್ಜಾಯ ದೀಂಡಲ ನಂಜಿದ ಮನಸ್ ಡ್
ತಿಂದ್ಂಡ ಉಡಲ್ ಗ್ ಸೇರಂದ್ ಗೆ
ಲಜ್ಜೆ ದಾಂತಿನ ಪಜ್ಜಿ ಉಸುರುಲೆನ್
ಮೆಚ್ಚಾಯರೆಗ್ ಏರೆಗ್ಲಾ ಆವಂದ್ ಗೆ!

ಮಂಜು ಬೂರುನ ಪನಿತಾತ್ ಮೋಕೆಗ್ ಲಾ
ಮೂಜಗ ಕಾಪುಂಡು ಕಾತರಡ್!
ಗಂಜಿದ ಬಟ್ಟಲ್ ಡಿತ್ತಿನ ನೀರ್ ಲ ಬಂಜರ ಮಲ್ಪುಂಡು  ಬಡವುನು ಒರಕ್
ಮೂಜಿ ಕಾಸ್ ಬೆಲೆ ದಾಂತಿನ ಬದ್ ಕ್ ಗ್
ಆಜಿ ಮೂಜೈತ ಲೆಕ್ಕಾಚಾರ!
ನಾಚಿಕೆ ಮರತ್ ದ್ ಕಲ್ಪುನ ತೂಲೆ
ಕಲಿಯುಗ ಉಂದು ಪೊಸತ್ ನ್ ಕಲ್ಪುಲೆ..

ಪೂಜಿದ್ ನಿಂಗುನ ಗುಣ ಅವ್ ಪೋವಡ್
ಪಟ್ಟೊಂದು ಬದುಕುನ ಮನಸ್ ಬರಡ್
ಪರತ್ ಲ ಪೊಸತ್ ಲ ಒಟ್ಟಿಗೆ ಸೇರ್ ದ್
ಪೊಸ ಪೊಸ ಆವಿಷ್ಕಾರೊಲು ಆವಡ್..

ಪುರ್ಪದ ಪುರಾಲ್ ದ ಲೆಕ್ಕೊನೆ ನಮ್ಮ
ಪುದರ್ ಲ ಪೋವಡ್ ಪರವೂರುದಂಚಿ
ಪರಬೆರೆ ಬಾಯಿಡ್ ಆಶೀರ್ವಾದದ ವರ ಬರಡ್
ನನೊರಿ ತೂಯೆಡ ಖುಷಿ ಕೊರಡ್
ನನೊರ ಬನ್ನಗ ಶಾಂತಿಲ ಬರಡ್
ಮೋಕೆದ ಉಡಲ್ ಡ್ ನೆಮ್ಮದಿ ಒರಿಯಡ್ .
@ಪ್ರೇಮ್@
02.08.2020

ಗಝಲ್-201

ಗೆಳೆಯರ ದಿನದ ಪ್ರಯುಕ್ತ

ಗಝಲ್

ಅಂಧಕಾರದ ಲೋಕದಲಿರುವ ಕುರುಡನಿಗೆ ಜಾರಿ ಕಾಣಿಸುವವ ಗೆಳೆಯ
ಮದ ಮೋಹ ಮತ್ಸರವ ತೊಡೆದು ಹಾಕಿಸುವವ ಗೆಳೆಯ

ಮಾನಿನಿಯ ಮರೆಯಲು ಸಹಕರಿಸಿ ಜೀವಕ್ಕೆ ದಾರಿ ತೋರುವವ
ಮೋಹ ಪಾಶದಿ ಸಿಲುಕಿದವನಿಗೆ ಮುಕ್ತಿ ಕರುಣಿಸುವವ ಗೆಳೆಯ

ಮಂಕು ಬುದ್ಧಿಗೆ ನೀರು, ಆಹಾರ ಹಾಕಿ ಸರಿಮಾಡುವವ
ಮಂದಾರದ ಮನದಲಿ ಸಹಕಾರ ನೀಡಿ ರಕ್ಷಿಸುವವ ಗೆಳೆಯ

ನಾವಿಕನಿಲ್ಲದ ಹಡಗಿನಲಿ ಒಬ್ಬಂಟಿಗನಾಗಿ ಚಲಿಸುವವನಿಗೆ ಜೊತೆಯಾದವ
ನಗರ ಹಳ್ಳಿಯಲೂ ನಂಬಿಗನಾಗಿದ್ದು,  ನಗೆಗಡಲಲಿ ತೇಲಿಸುವವ ಗೆಳೆಯ!

ನೋವುಂಡ ಮನಕೆ ನಲಿವಿನ ಸಾಂತ್ವನದ ಕಷಾಯ ನೀಡುವವ
ನರಕದಂಥ ಬದುಕಲಿ ಸದಾ ನಾಕದಂದದಿ ಬದುಕಿಸುವವ ಗೆಳೆಯ

ನೀರಿನಂಥ ಪರಿಶುದ್ಧ ಸಂಬಂಧ, ಸಕ್ಕರೆಯಂಥ ಸಿಹಿಗುಣದವ
ನಿರ್ವಿಕಾರ ಭಗವಂತನ ಮತ್ತೊಂದು ರೂಪವಾಗಿ ಬಂದವ ಗೆಳೆಯ.

ನಾದ ಹೊಮ್ಮಿಸಿ, ನೆರಳು ನೀಡಿ ನಿಜದಿ ಸಲಹುವವ 
ನಂಜಿನುರಿಯಲು ನಾಚಿ ನೀರಾಗಿಸಿ ನೂಲು ತೆಗೆವವ ಗೆಳೆಯ!

ನೇಪಥ್ಯಕೆ ಸರಿದಿಹ ಹಲ ಸಂಬಂಧಗಳ ಒಂದುಗೂಡಿಸುವವ
ತನ್ನ ನೇರ ನುಡಿಯಿಂದ  ಪ್ರೀತಿ ಪಡೆಯುವವ ಗೆಳೆಯ..
@ಪ್ರೇಮ್@
02.08.2020

ಶನಿವಾರ, ಆಗಸ್ಟ್ 1, 2020

ದಶಕ-1

ದಶಕ-1

ಮಗಳದು ಬಂದಳು ಮನೆಯನು ತುಂಬಲು
ಗೆಜ್ಜೆಯ ನಾದದಿ ಎಲ್ಲರಿಗೂ ತಂಪನು ತಂದಳು
ತಾ ನಗುತ ನಗಿಸುತಲಿ ಮನವನು ಕದ್ದಳು

ರಂಪವ ಮಾಡುತ ಜಡೆಯನು ಎಳೆದಳು
ಕೆಂಪನೆ ಕಣ್ಣಲಿ ಮುತ್ತನು ಸುರಿದಳು
ತಂದೆಯ ತಾಯಿಯ ಹೆಸರನು ಮೆರೆದಳು
ಶಾಲೆಗೂ ಮನೆಗೂ ತಾನೇ ಕೀರ್ತಿಯನು ತಂದಳು

ಮಗನಂತೆಯೇ ಮಗಳೂ ಚೆನ್ನಾಗಿ ಸಾಕಿ ಬೆಳೆಸಿರಿ
ಮಗಳೂ ಬಾಳನು ಬೆಳಗಿಸಬಲ್ಲಳೆಂಬುದ ಅರಿಯಿರಿ..
@ಪ್ರೇಮ್@
01.08.2020

2 ಟಂಕಾಗಳು

ಎರಡು ಟಂಕಾಗಳು

1. 

ಹಟ ತೊಟ್ಟಿಹೆ
ಮಾಡಿಯೇ ತೀರುವೆನು
ಗುರಿಯೆಡೆಗೆ
ನನ್ನ ಪಯಣ ಶುರು
ನಾನೊಬ್ಬನೇ ಹೋಗುವೆ.

2.

ಮನದಲಿದೆ
ನಾನು ಏನಾಗಬೇಕು
ಹೃದಯದಲಿ
ಇಲ್ಲವಲ್ಲ ಕಲ್ಮಶ
ಸಾಧಿಸಿಯೇನು ಏನೂ!
@ಪ್ರೇಮ್@
22.06.2020

ಲೇಖನ

ನನಗಿಷ್ಟವಾದ ಪುರಾಣದ ಸ್ತ್ರೀ ಪಾತ್ರ

       ಪುರಾಣಗಳು ನಮ್ಮಜೀವನವನ್ನು ತಿದ್ದಿಕೊಳ್ಳಲಿಕ್ಕಿರುವ ಪುರಾವೆಗಳು. ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮ-ಅಧರ್ಮಗಳ ವ್ಯತ್ಯಾಸ ತಿಳಿಸಿ ಬದುಕನ್ನು ಹೇಗೆ ಸ್ವೀಕರಿಸಬೇಕೆನುವ ತಂತ್ರಗಳನ್ನು ಅಲ್ಲಿನ ಪ್ರತಿಯೊಂದು ಪಾತ್ರಗಳೂ ನಮಗೆ ಕಲಿಸಿ ಕೊಡುತ್ತವೆ. ಅಂತಹ ಮಹಾನ್ ಪಾತ್ರಗಳಲ್ಲಿ ರಾಮಾಯಣದ ಊರ್ಮಿಳೆಯ ಪಾತ್ರ ನನಗೆ ತುಂಬಾ ಹಿಡಿಸಿದ ಪಾತ್ರ.
    ರಾಣಿಯಾಗಿದ್ದರೂ ರಾಣಿ ಪಟ್ಟ ಸಿಗದ, ಐಶ್ವರ್ಯವಿದ್ದರೂ ಅನುಭವಿಸಲಾಗದ, ಗಂಡನಿದ್ದರೂ ಒಂಟಿಯಾಗಿ ಬದುಕಿದ, ಅರಮನೆಯಲ್ಲೂ ನೆಮ್ಮದಿ ಕಾಣದ ತಬ್ಬಲಿ ಬದುಕು ಊರ್ಮಿಳೆಯದ್ದು. 
     ರಾಮ, ಲಕ್ಷ್ಮಣ, ಸೀತೆಯರನ್ನು ಹೊಗಳಿ ಪೂಜಿಸುವವರೇ ಎಲ್ಲರೂ. ತನ್ನ ಜೀವಮಾನವಿಡೀ ತ್ಯಾಗಮಯಿಯಾಗಿ ಬದುಕಿದ ಊರ್ಮಿಳೆ ಯಾರ ಕಣ್ಣಿಗೂ ಬೀಳಲೇ ಇಲ್ಲ. 

   ವನವಾಸದಲ್ಲೂ ಸೀತೆಯೊಡನೆ ರಾಮನಿದ್ದ. ಆದರೆ ಲಕ್ಷ್ಮಣ ತನ್ನ ಜೀವನವಿಡೀ ರಾಮ-ಸೀತೆಯರ ರಕ್ಷಣೆಯಲ್ಲಿ ತೊಡಗಿದ್ದನೇ ಹೊರತು ತನ್ನ ಸತಿಗೇನು ಬೇಕು, ಅವಳ ಆಸೆಗಳೇನು, ತನ್ನ ನಿರೀಕ್ಷೆಗಳೇನು, ಆಸೆಗಳೇನು ಎಂಬ ಯಾವುದನ್ನೂ ಯಾವತ್ತೂ ಆಲಿಸುವತ್ತ ಗಮನವೇ ಕೊಡಲಿಲ್ಲ. ತನ್ನ ಆಸೆ, ಆಕಾಂಕ್ಷೆಗಳನ್ನೆಲ್ಲಾ ಬದಿಗೊತ್ತಿ ತನ್ನ ಜೀವನವನ್ನೇ ತ್ಯಾಗಕ್ಕೆ  ಮುಡಿಪಾಗಿಟ್ಟ ಊರ್ಮಿಳೆಗೆ ಹ್ಯಾಟ್ಸಪ್.
   @ಪ್ರೇಮ್@
13.07.2020

ಶಿಶುಗೀತೆ-ತಮ್ಮ

ತಮ್ಮ

ನನ್ನ ತಮ್ಮ
ತರಲೆ ತಿಮ್ಮ
ಓಡೊ ಗುಮ್ಮ
ಹೆದರೊ ಪಮ್ಮ

ನಾಯಿ ನೋಡಲು
ಅಳುತ ಇರಲು
ತಿಂಡಿ ತರಲು
ಬಳಿಗೆ ಬರಲು..

ಮನೆಯ ಚೋರ
ಆಟದ ಪೋರ
ತುಂಟ ಕುವರ
ಅಮ್ಮನ ಚಕೋರ

ಜಾಣ ಮರಿ
ಪಾಠ ಬರಿ
ಎನಲು ಉರಿ
ಕೋಣ ಮರಿ..

ಊಟ ಬೇಡ
ಓದು ಬೇಡ
ಪೆಟ್ಟು ಬೇಡ
ಹಾಲು ಬೇಡ

ಮೊಬೈಲು ಬೇಕು
ಟಿವಿ ಬೇಕು
ತಿಂಡಿ ಬೇಕು
ಚೂರು ಸಾಕು!
@ಪ್ರೇಮ್@
07.07.2020

ಆಹ್ಲಾದ-ಶರ ಷಟ್ಪದಿ

ಆಹ್ಲಾದ(ಶರ)

ವರುಣನ ಕೃಪೆಯದು
ಕರುಣೆಯ ಬೀರಿದೆ
ತರುಲತೆ ನಗುತಲಿ ನಾಟ್ಯವಿದೆ..
ಚರಾಚರ ತನ್ನ 
ಮರದಲು ವರವನು
ಹರನನೆ ನೆನೆಯುತ ಸಾಗುತಿದೆ .

ಭರದಲಿ ಬಾಗಿದೆ 
ಗಿರಗಿರ ತಿರುಗಿದೆ
ಕರದಲಿ ಪುಷ್ಪವ ಹಿಡಿದಂತೆ..
ತರತರ ಬಣ್ಣದ 
ಭರವಸೆ ತಂದಿದೆ
ಮನಸನು ಬಳಿಯಲಿ ಹಿಡಿದಂತೆ..

ಪರಿಸರ ಶುದ್ದಿಯು
ಉರಿಸದು ಮನವನು
ಹರಸುತ ಸರ್ವರ ಬೇಸರವ...
ಪರಿಪರಿಯಲಿ ಕಸ 
ಸುರಿಯುತ ಜನಗಳು
ಪೊರೆವವಗೆ ಗದರುತ ಸಾಗುವರು..
@ಪ್ರೇಮ್@
04.07.2020

ಭಾವಗೀತೆ-ಸಮಾಗಮ

ಭಾವಗೀತೆ

ಸಮಾಗಮ

ಸಮಾಗಮ ಪದದ ನಿಜ ಅರ್ಥ ಅರಿತೆನು
ಜೊತೆಯಲಿ ಕಲೆತು ಬೆರೆತು ಹೋಗುತ
ಒಲುಮೆಯೆನುವ ಭಾವವ ತಿಳಿದೆನು
ನಿನ್ನಲೊಂದಾಗಿ ವೀಣೆ ನುಡಿಸುತ..

ಮಧುರ ಮಮತೆಯೇ ಒಡಲ ಹಣತೆಯೇ
ಸ್ನೇಹದ ಸಿರಿ ಚಿಗುರು ನೀ
ಅಧರ ಸವಿಯನು ನೀಡೊ ಜಲಧಿಯೇ
ಪ್ರೇಮದ ಮಿರಿ ಮಿಂಚು ನೀ..

ಅಮೃತ ಸಿಂಚನ ನಗೆಯ ಹೂರಣ
ಮಿಳಿತವಾಗಿದೆ ಹೊಳೆಯೊ ಕಣ್ಣಲಿ
ಆವೃತ ಕವಚವು ಬಾಳ ಹಣ್ಣಿಗೆ
ಸುಲಲಿತವಾಗಿದೆ ದಾರಿ ಎದೆಯಲಿ..

ನವ್ಯ ಕಾವ್ಯವು ಉಕ್ಕಿ ಬಂದಿದೆ
ಭವ್ಯ ಶಕ್ತಿಯ ನೋಟದಿ
ಸವ್ಯಸಾಚಿಯೆ ಸ್ಪರ್ಶ ಮಾತ್ರಕೆ
ಹಿತವು ಎನಿಸಿದೆ ಭವದಿ..
@ಪ್ರೇಮ್@
24.06.2020

ಹನಿಗವನ

ಹನಿ ಗವನ
ಹನಿಹನಿಯಾಗಿ ಸುರಿಯತಲಿ ಬಂದೆ
ಹನಿಸುತ ಜಲಧಾರೆಯನು ನಿಂದೆ
ಹಣಕೆ ಬೆಲೆಯಿಲ್ಲ ನನ್ನಲಿ ಸದಾ
ಕಣಕಣದಿ ಜಲ ಆಮ್ಲ ಬೆಸೆದಿಹುದು ಕಂದಾ..

ನೀರೆನುವೆ ಉದಕವೆನುವೆ
ಜಲ ನಾನು ಸುರಿಯುವೆ
ಗಟ್ಟಿಯಾಗಲು ಮಂಜಿನ ಗೆಡ್ಡೆ 
ಕಾಣದಾಗಲು ನೀರಾವಿ ಗುಡ್ಡೆ...
@ಪ್ರೇಮ್@
14.07.2020

ನಮನ

ನಮನ

ನಮನ ನಮನ ಗುರುದೇವಗೆ
ನಮನ ನಮನ ಮಹಾದೇವಗೆ..

ನಮನ ನಮನ ಗಣಾಧೀಶಗೆ
ನಮನ ನಮನ ಸಿರಿದೇವಿಗೆ
ನಮನ ನಮನ ಹರಿಹರನಿಗೆ
ನಮನ ನಮನ ಸುಬ್ರಹ್ಮಣ್ಯಗೆ

ನಮನ ನಮನ ಶ್ರೀಲಕ್ಷ್ಮಿಗೆ
ನಮನ ನಮನ ಶ್ರೀ ಶಾರದೆಗೆ
ನಮನ ನಮನ ಜೈ ಭವಾನಿಗೆ..
ನಮನ ನಮನ ಅನ್ನಪೂರ್ಣೆಗೆ

ನಮನ ನಮನ ಅಯ್ಯಪ್ಪಗೆ.
ನಮನ ನಮನ ಸಾಯಿಸಂತಗೆ
ನಮನ ನಮನ ಗುರುರಾಯಗೆ.
ನಮನ ನಮನ ಆಂಜನೇಯಗೆ
ನಮನ ನಮನ ಕವಿಹೃದಯಕೆ..

ನಮನ ನಮನ ಸಿರಿ ಪಾದಕೆ
ನಮನ ನಮನ ನಾಗಬ್ರಹ್ಮಗೆ
ನಮನ ನಮನ ಶನಿದೇವಗೆ.
ನಮನ ನಮನ ನಮ್ಮ ಕಾಯ್ವಗೆ..

ನಮನ ನಮನ ಮಾತಾಪಿತೃಗೆ
ನಮನ ನಮನ ಹಿರಿ ಮನಸಿಗೆ
ನಮನ ನಮನ ವೀರ ಯೋಧಗೆ
ನಮನ ನಮನ ಧೀರ ರೈತಗೆ..
@ಪ್ರೇಮ್@
11.07.2020

ಹನಿಗವನ

ಹನಿಗವನ

ತಲೆಯ ನೀರು ಕಾಲಿಗೆ

ಮದುವ ಹೀರಿದ್ದ
ಮಗ ನಂದನ
ಮಮತೆಯ ಮಾತೆಯ
ಬಳಿ ಸುಳ್ಳು ಹೇಳಿದ
ಪಿತನ ಬಳಿ ಹೇಳಲಾಗದು
ಕಾರಣ ಪಿತ ಮದಿರೆ
ಕುಡಿಯುವುದರಲಿ ಎತ್ತಿದ ಕೈ
ಸುಳ್ಳು ಹೇಳುವುದರಲೂ
ಪಳಗಿದ ಜೀವವದು!
@ಪ್ರೇಮ್@
29.06.2020

ಚುಟುಕು

ಚುಟುಕು

ಪ್ರಿಯೆಗೆ..

ಮಂದಾರ ಪುಷ್ಪ ನೀನೇ ಪ್ರಿಯೆ
ಮಂಗಳ ವಾದ್ಯ ಘೋಷವೂ ಸಿಹಿಯೆ
ಮುಂಬರುವ ಸುಖ ದು:ಖಗಳ ಕಡಿವಾಣ
ನನ್ನ ಬಾಳಿನ ಸ್ವಾತಂತ್ರ್ಯದ ಮಹಾದಾನ..
@ಪ್ರೇಮ್@
15.07.2020

ದಶಕ

 ದಶಕಗಳು

ದಶಕ ಎನ್ನುವ ಹೊಸ ಸಾಹಿತ್ಯ ಪ್ರಕಾರವ ಸೃಷ್ಟಿಸೋಣ. ಇದೇ ಗುಂಪಿನಲ್ಲಿ ಮೊದಲ ಬಾರಿಗೆ. 

ದಶಕಗಳು ಹೇಗಿರಬೇಕೆಂದರೆ

1. ಹತ್ತು ಸಾಲುಗಳಿರಬೇಕು.
2. ಆದಿ ಅಥವಾ ಅಂತ್ಯ ಪ್ರಾಸಗಳಿರಬೇಕು.
3. 4+4+2 ಸಾಲುಗಳ ವಿಂಗಡಣೆ.
4. ಒಂದು ಕತೆ/ಘಟನೆ/ವ್ಯಕ್ತಿ/ಸಂದರ್ಭದ ಕುರಿತು ಬರೆಯಬೇಕು.
5. ಕೊನೆಯ ಎರಡು ಸಾಲು ಪಂಚಿಂಗ್ ಆಗಿದ್ದು ಸಮಾಜ ತನ್ನನ್ನು ತಾನು ತಿದ್ದಿಕೊಳ್ಳುವಂತಿರಬೇಕು.
6. ಕೊನೆಯ ಎರಡು ಸಾಲಿನಲ್ಲಿ ಅಂತ್ಯ ಪ್ರಾಸ ಕಡ್ಡಾಯ.
7. ಪ್ರತಿ ಸಾಲಿನಲ್ಲಿ 15-20 ಅಕ್ಷರಗಳಿರಲೇ ಬೇಕು.
8. ಹೊಸತನದ ಬರವಣಿಗೆಯಿರಲಿ.
@ಪ್ರೇಮ್@
01.08.2020

ಮಂಗಳವಾರ, ಜುಲೈ 28, 2020

1507. That means...

That means..

That means cherished dreams are still alive
The wishes never die
The dreams never break

The thing which was in the corner has come near
The breath touched together
So that its conform that
No more work for this mind.

Still more...still near..no..
No work to these hands..
Because what thought wanted to come near
Its already been told
Its already been passed

The seed is already sowed
It may sprout soon
That will grown as a tree forever..

This heart is entirely foreigner
That should move far one or the other day..
So far..far and far..
Combining together
The true nuts...

No more work for these beats
Happily ready to go back
To  homewards
Keeping all happy together
Now..its the time to complete the work..
That means reach the destination back
Thinking that own is own..

Others is forever others..
We are here only for the time being..
To give pleasure to others
By our works...
At last the life itself again
Proved that we are born to help
Born to dedicate
Grown to sacrifice
Has come here on the earth to sprout some good feel..
@Prem@
28.07.2020

ಸೋಮವಾರ, ಜುಲೈ 27, 2020

1506. ಇದೆ ಇಲ್ಲಗಳ ನಡುವೆ

ಇದೆ ಇಲ್ಲಗಳ ನಡುವೆ

ರಸ್ತೆಯಲಿ ಜಾಗವಿದೆ
ಚಲಿಸಲು ಧೈರ್ಯವಿಲ್ಲ!
ಬಂಧುಗಳ ನೆನಪಾಗುತ್ತಿದೆ
ಹೋಗಿ ಬರಲಾಗುತ್ತಿಲ್ಲ!

ಅಡಿಗೆ ಮಾಡುವ ಮನಸ್ಸಿದೆ
ತಿನ್ನಲು ಬರುವವರಿಲ್ಲ!
ಸಭೆ ಮಾಡಿ ಮಾತನಾಡಬೇಕಿದೆ
ಮುಖ ನೋಡಲು ಆಗುತ್ತಿಲ್ಲ!

ನೋವಿಗೆ ಸ್ಪಂಧಿಸುವ ಮನವಿದೆ
ಹತ್ತಿರ ಹೋಗುವಂತಿಲ್ಲ!
ಪಕ್ಕದ ಮನೆಯವರೊಡನೆ ಹರಟೆ ಹೊಡೆಯಬೇಕಿದೆ
ಯಾರೂ ಬಾಗಿಲು ತೆಗೆಯುತ್ತಿಲ್ಲ!

ಜೀವ ಭಯ ಮನುಜನ ಕಾಡಿದೆ
ಹತ್ತಿರ ಬರುವ ಧೈರ್ಯವಿಲ್ಲ!
ಕೊರೋನಾ ಎಲ್ಲೆಲ್ಲು ಹರಡಿದೆ
ಯಾರ ಕಣ್ಣಿಗೂ ಕಾಣುತ್ತಿಲ್ಲ!

ಜ್ಯೋತಿಷಿಗಳ ಬಳಿ ಮಂತ್ರವಿದೆ
ಕೊರೋನ ಓಡಿಸುವ ತಂತ್ರವಿಲ್ಲ
ಆಯುರ್ವೇದ ಶಕ್ತಿ ಭಾರತದಲ್ಲಿದೆ
ಅಧಿಕೃತಗೊಳಿಸುವ ಸರಕಾರವಿಲ್ಲ

ಸರಕಾರದ ಹಣ ಪೋಲಾಗುತ್ತಿದೆ
ಬಡವರಿಗೆ ತಿನ್ನಲು ಊಟವಿಲ್ಲ
ಸಿರಿವಂತರು ಆರಾಮಾಗಿ ತಿರುಗಾಡುತಿಹರು
ಬಡವರಿಗೆ ಸಾಮಾನು ತರುವ ವ್ಯವಸ್ಥೆಯಿಲ್ಲ..

ಹೂವು ಹಣ್ಣು ತರಕಾರಿಗಳಿವೆ
ಕೊಳ್ಳುವ ಜನರಲಿ ಹಣವಿಲ್ಲ
ಮಹಡಿ ಮೇಲೆ ಬದುಕುತಿಹೆವು
ಕನಸುಗಳ ನನಸಿನ ಬೆಂಬಲವಿಲ್ಲ

ಮಾಸ್ಕ್ ,ಸ್ಯಾನಿಟೈಸರ್ ಬಳಸುತಿಹೆವು.
ಅದರಲೂ ಕೊಳಕು, ರಾಸಾಯನಿಕವಿದೆಯೆಂದು ಅರಿತಿಲ್ಲ!
ಸೊಗಸಾದ ಹಸಿರು ಕಣ್ಣ ಮುಂದಿದೆ
ಸುತ್ತಾಡಲು, ತಿರುಗಾಡಲು ಅನುಮತಿಯಿಲ್ಲ!

ಕೂಡಿ ಬಾಳುವ ಆಸೆಯಿಹುದು
ಹೆಚ್ಚು ಜನ ಕೂಡುವಂತಿಲ್ಲ
ಸಾಮಾಜಿಕ ಅಂತರ ಬೇಕಿಹುದು
ಅಂಗಡಿಗಳಲಿ ಪಾಲಿಸಲಾಗುತ್ತಿಲ್ಲ!

ಕೈ ಕುಲುಕುವ ಅಭ್ಯಾಸವಿಹುದು
ಎರಡು ಗಜಕ್ಕಿಂತ ಹತ್ತಿರ ಬರುವಂತಿಲ್ಲ.
ಪಾಸಿಟಿವ್ ಚಿಂತನೆಯಿರಬೇಕು
ಪಾಸಿಟಿವ್ ರಿಸಲ್ಟ್ ಬರುವಂತಿಲ್ಲ!

ಪ್ರೀತಿ ಹಂಚಿ ಬದುಕಬೇಕು
ಮನೆಯಿಂದ ಹೊರಗೆ ತೆರಳುವಂತಿಲ್ಲ
ಈಗ ಕೆಲಸ ಬೇಕಾಗಿದೆ
ಯಾರೂ ಬರಲು ಕರೆಯುತ್ತಿಲ್ಲ..

ಮಕ್ಕಳಿಗೆ ಶಾಲೆ, ಗೆಳೆಯರು ಬೇಕಾಗಿದೆ
ಹೊರಹೋಗಲು ಪೋಷಕರು ಬಿಡುತ್ತಿಲ್ಲ
ಮಾತು ಮೌನ ಒಂದಾಗಿದೆ
ಕೊರೋನಕ್ಕೆ ಇನ್ನೂ ಸುಸ್ತಾಗಿಲ್ಲ

ಜೆಸಿಬಿ ಕಾರ್ಯ ಸ್ಥಗಿತವಾಗಿದೆ
ಮಣ್ಣಿನ ಸವೆತ ನಿಲ್ಲುತ್ತಿಲ್ಲ
ಹಸಿರು ಗಿಡ ನೆಟ್ಟಾಗಿದೆ
ಗೊಬ್ಬರ ತರಲು ಹೋಗುವಂತಿಲ್ಲ!
ಕೊರೋನ ರೋಗ ಗುಣವಾಗುತ್ತದೆ
ಖಾಯಿಗೆ ಕಡಿಮೆಯಾಗಲು ಯಾವುದೇ ಮದ್ದಿಲ್ಲ

ದೇವರು ತನ್ನಾಟ ತೋರಿಸಿಯಾಗಿದೆ
ಮಾನವ ದ್ವೇಷ ಮರೆಯುತ್ತಿಲ್ಲ
ಪ್ರಕೃತಿ ತನ್ನನು ಸರಿದೂಗಿಸಿ ಕೊಳ್ಳುತ್ತಿದೆ
ನೀಚ ಮಾನವನಿಗೆ ಅರ್ಥವಾಗುತ್ತಿಲ್ಲ!
@ಪ್ರೇಮ್@
28.07.2020

ಕೃತಿಗಳ್ಳ ಸ್ನೇಹಿತರಿಲ್ಲವೆಂಬ ಆಶಯವಿದೆ
ಮತ್ತೆಲ್ಲೋ ಪ್ರಕಟಿಸಿದರೆ ಗೊತ್ತಾಗೋದಿಲ್ಲ😃😃

ಶನಿವಾರ, ಜುಲೈ 25, 2020

1504. ಶಾಲಾ ವರದಿ

ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪೋಷಕರ ಸಹಕಾರ ಪಡೆದು ಆನ್ ಲೈನ್ ನಲ್ಲಿ ಬೋಧನೆ ಮಾಡಲಾಗುತ್ತಿದೆ. ವಾಟ್ಸಪ್ ನಲ್ಲಿ ಮೂರೂ ತರಗತಿಗಳ ಮಕ್ಕಳೆಲ್ಲರನ್ನು ತರಗತಿವಾರು ಗುಂಪುಗಳಾಗಿ ಮಾಡಿ, ಪ್ರತಿ ಶಿಕ್ಷಕರೂ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳಿಗೆ ಶಾಲಾ ಕಾರ್ಯಗಳನ್ನು ಇದುವರೆಗೆ ನೀಡಲಾಗುತ್ತಿತ್ತು . ಆದರೆ ಈಗ ಸರಕಾರದ ಆದೇಶದ ಮೇರೆಗೆ ಎಲ್ಲಾ ವಿದ್ಯಾರ್ಥಿಗಳಿಗೂ ಚಂದನ ಟಿವಿಯ ಕಾರ್ಯಕ್ರಮಗಳ ವೇಳಾಪಟ್ಟಿ ನೀಡಿ, ಅಲ್ಲಿ ನೀಡುವ ವಿಚಾರಗಳನ್ನು ಬರೆದುಕೊಂಡು ಪ್ರತಿನಿತ್ಯ ವಾಟ್ಸಪ್ ಗುಂಪುಗಳಲ್ಲಿ ಬರವಣಿಗೆಯ ಫೋಟೋ ನೋಡಿ ಪ್ರತಿ ವಿಷಯದ ಅಧ್ಯಾಪಕರೂ ತಿದ್ದುವ ಕಾರ್ಯವನ್ನು ಮಾಡುತ್ತಾರೆ.
    ಇದನ್ನು ತಿಳಿದ ಪೋಷಕರು ಬಹಳ ಬೇಗನೇ ತಮ್ಮ ಮಕ್ಕಳನ್ನು ಎಂಟನೇ ತರಗತಿಗೆ ಸೇರಿಸಿದ್ದಾರೆ. ಈಗಾಗಲೇ ಇಪ್ಪತ್ತೊಂಬತ್ತು ವಿದ್ಯಾರ್ಥಿಗಳು ಎಂಟನೇ ತರಗತಿಗೂ, ಉತ್ತೀರ್ಣರಾದವರನ್ನೂ ಸೇರಿಸಿ ಮೂವತ್ತು ವಿದ್ಯಾರ್ಥಿಗಳು ಒಂಭತ್ತನೇ ತರಗತಿಯಲ್ಲೂ ಕಲಿಯುತ್ತಿರುವರು. ಶಿಕ್ಷಕರ ಈ ಕಾರ್ಯಕ್ಕೆ ಎಲ್ಲ ಪೋಷಕರೂ ಬೆಂಬಲ ಕೊಡುತ್ತಿರುವರು. ಹಿರಿಯರ ಮಾರ್ಗದರ್ಶನದೊಂದಿಗೇ ವಿದ್ಯಾರ್ಥಿಗಳು ಮೊಬೈಲ್ ಬಳಸುವಂತೆ ತಿಳಿ ಹೇಳಲಾಗಿದೆ.

  ಹಿರಿಯ ಶಿಕ್ಷಕರಾದ ಶ್ರೀ ಸೂಫಿ ಪೆರಾಜೆ ಅವರು ಪ್ರತಿ ಪ್ರಾಂತ್ಯಗಳ ವಿದ್ಯಾರ್ಥಿಗಳನ್ನು ಪ್ರಾಂತ್ಯವಾರು ಶಾಲೆಯಲ್ಲಿರುವ ಸರ್ವ ಶಿಕ್ಷಕರಿಗೂ ಸಮನಾಗಿ ಗುಂಪುಗಳನ್ನು ಮಾಡಿ ಹಂಚಿದ್ದಾರೆ. ಆಯಾ ಪ್ರಾಂತ್ಯದ ಎಲ್ಲಾ ವಿದ್ಯಾರ್ಥಿಗಳ ಕಲಿಕಾ ಜವಾಬ್ದಾರಿ ಸಂಬಂಧ ಪಟ್ಟ ಶಿಕ್ಷಕರದ್ದಾಗಿರುತ್ತದೆ. ಪ್ರತಿ ಶಿಕ್ಷಕರೂ ಫೋನ್ ಮುಖಾಂತರ ಸರ್ವ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ವಿಚಾರಿಸಿಕೊಳ್ಳುತ್ತಿರುವುದು, ಆ ಮೂಲಕ ಕಲಿಕಾ ಕಾರ್ಯ ನಿರಂತರವಾಗಿ ಸಾಗುತ್ತಿರುವುದು ಎಲ್ಲಾ ಪೋಷಕರಿಗೂ ಸಂತಸ ತಂದಿದೆ.
@ಪ್ರೇಮ್@
25.07.2020

1505. ಗಝಲ್-207

ಗಝಲ್-207

ಕಳ್ಳ ಕೃಷ್ಣ ಸದಾ ನೀನಿರುವೆ ಮನದಲ್ಲಿ
ಬೆಣ್ಣೆ ಚೋರ ಬಳಿ ಸುಳಿಯುವೆ ಮನದಲ್ಲಿ..

ಗೋವಿಂದ ಗೋಪಾಲ ನಿಂತಿರುವೆ ನನ್ನಲ್ಲಿ
ಮುರಳೀ ಲೋಲ ಆಟವಾಡುತಿಹೆ ಮನದಲ್ಲಿ

ಶ್ರೀಧರ ರಾಮಚಂದಿರ ಬರಸೆಳೆವೆ ಮನಮಂದಿರವ
ಮೋಹನ ಮೋಡಿಗಾರ ತಿರುಗುವೆ ಮನದಲ್ಲಿ..

ರಾಧಾ ಚಿತ್ತ ಚೋರ ನಲಿದಾಡುತಿಹೆ ಬಳಿಯಲ್ಲಿ
ನಂದ ಕಿಶೋರ ಜಾಗ ಪಡೆದಿರುವೆ ಮನದಲ್ಲಿ..

ಹರಿ ನೀ ನರಸಿಂಹ ಈ ಜೀವ ನಿನಗಾಗಿ
ಲಕ್ಷ್ಮೀಕಾಂತ ವಾಸುದೇವ ನೆಲೆಸಿರುವೆ ಮನದಲ್ಲಿ

ಭಕ್ತವತ್ಸಲ ಕಮಲನಯನ ಕೊಳಲಗಾನ ಕೇಳುತಿರುವೆ
ಶ್ರೀವತ್ಸ ಶ್ರೀನಿವಾಸ ಶಾಶ್ವತವಾಗಿರುವೆ ಮನದಲ್ಲಿ..

ಆದಿತ್ಯ ಅಚ್ಯುತನೇ ಆದಿನಾರಾಯಣ ವರನೀಡು
ಪ್ರೇಮಾತ್ಮ ಪದ್ಮನಾಭ ಅನಂತವಾಗಿರುವೆ ಮನದಲ್ಲಿ..
@ಪ್ರೇಮ್@
25.07.2020

ಭಾನುವಾರ, ಜುಲೈ 19, 2020

1504. ಆಟಿ ಬಂತು

ಆಟಿ ಬಂತು

ಆಚರಣೆ ಹಬ್ಬಗಳ ಬದಿಗಿರಿಸಿ
ಪ್ರಕೃತಿ ವಸ್ತುಗಳ ಪ್ರೋತ್ಸಾಹಿಸಿ
ನೈಸರ್ಗಿಕ ತಿನಿಸುಗಳ ಪುಷ್ಠೀಕರಿಸಿ
ರೋಗರುಜಿನಗಳಿಂದ ದೂರವಿರಿಸೊ ಆಟಿ ಬಂತು!

ಪತ್ರೊಡೆ, ಹಲಸಿನ ಬೀಜಗಳ ಊಟ
ಚೆಕ್ಕೆ ಕಹಿ ಔಷಧಿಗಳ ಕಾಟ
ಹಿರಿಯರ ನೆನಪಿನ ರಸದೂಟ
ಹಳೆ ಸಂಪ್ರದಾಯಗಳ ನೆನಪಿಸುವ ಆಟಿ ಬಂತು.

ಆಟಿ ಕಳೆಂಜನ ನಲಿವಿನ ನೋಟ
ಮಳೆಯಲ್ಲು ಬೆಳೆವ ಅಣಬೆಯ ಹುಡುಕಾಟ
ಕಳಲೆ, ಕೆಸುಗಳ ಸಿಹಿ, ಕಾರದೂಟ
ಮಕ್ಕಳೊಡನೆ ತವರಲಿ ಕಳೆವ ಆಟಿ ಬಂತು..

ಹಬ್ಬ ಹರಿದಿನಗಳ ದೂಡಿ ಬಂತು
ಹಲವು ಕಾರ್ಯಕ್ರಮಗಳ ಮುಂದೋಡಿಸಿ ಬಿಡ್ತು
ದೈವ ದೇವ ಕಾರ್ಯಗಳ ಬೇಡವೆಂದಿತು
ಹಿರಿಯರ ಸೇವೆಗಷ್ಟೆ ಮೀಸಲಾದ ಆಟಿ ಬಂತು..
@ಪ್ರೇಮ್@
20-07-2020

1502. ನಿರೀಕ್ಷೆ

ನಿರೀಕ್ಷೆ

ಕಾದೆ ನಾನು ಮುಗುಳು ನಗೆಗಾಗಿ
ಕಾಣೆ ಮನದ  ಬಳಿ ಬರವಿಕೆಗಾಗಿ
ಕಾಯುವಿಕೆಯು ಮನದಿಂಗಿತಕಾಗಿ
ತಾರೆಯಂತೆ ಶಶಿಯ ಬರುವಿಕೆಗಾಗಿ..

ಭಯದ ಮಾತುಗಳ ಮರೆಯುವಂತೆ
ಪ್ರೀತಿಯುದಕ ತಾನೇ ಚಿಮ್ಮುವಂತೆ
ತಂತಿಯೊಳಗಿನ ಸ್ವರದ ಕಂತೆಯಂತೆ
ಮುದ್ದು ಮನಸಿನ ಭಾವದಂತೆ...

ಹೃದಯದೊಳಗಿನ ಮೃದು  ಬಡಿತ ನೀನು
ಪೃಥ್ವಿಯಂದದ ಕಿರು  ತಾಳ್ಮೆ ತಾನು
ಮೃತ್ಯು ಬಳಿಕವು ಜೀವ ಇರುವುದು
ರೆಪ್ಪೆ ಮುಚ್ಚಿದರೂ ಮುಖ ಕಾಣುತಿರುವುದು...

ಪ್ರೇಮವಿದು ಅನಂತ,  ಹಿತ ಸಾವಿಲ್ಲವಿದಕೆ
ಮೌನದಲು ಮಾತಿಹುದು ಕೊನೆಯಿಲ್ಲವಿದಕೆ
ಕಣ್ಣೋಟದಲು ನಲಿವಿಹುದು ಅನುಕ್ಷಣವು
ಪ್ರತಿ ಸ್ಪರ್ಶದಲು ಸವಿಯಿಹುದು ಪ್ರತಿದಿನವು..
@ಪ್ರೇಮ್@
19.07.2020

1497. ಆಟಿ ಅಮವಾಸ್ಯೆ-ಕಿರು ಮಾಹಿತಿ

ಆಟಿ ಅಮವಾಸ್ಯೆ

ಜುಲೈ 16, 17ನೇ ತಾರೀಖು ಸಂಕ್ರಾಂತಿಯ ಬಳಿಕ ತುಳುವರಿಗೆ ಆಟಿ ಅಂದರೆ ಆಷಾಡ ತಿಂಗಳು ಪ್ರಾರಂಭವಾಗುವುದು. ಮುಂದಿನ ಸಂಕ್ರಾಂತಿಯವರೆಗೆ. ಮುಂದೆ ಬರುವುದು ಸೋಣ ಅಂದರೆ ಶ್ರಾವಣ ಸಂಕ್ರಾಂತಿ.

ಆಷಾಡದಲ್ಲಿ ಬರುವ ಅಮವಾಸ್ಯೆಯೇ ಆಟಿ ಅಮವಾಸ್ಯೆ. 
ಈ ದಿನ ಮರವೊಂದರ ಚೆಕ್ಕೆಯನ್ನು ತಂದು, ಅದಕ್ಕೆ ಕಾಳುಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿ ಗುದ್ದಿ ಕಹಿಯಾದ ಅದರ ರಸವನ್ನು ಕುಡಿಯುವ ಸಂಪ್ರದಾಯವಿದೆ. ಆ ಔಷಧಕ್ಕೆ ಹಲವಾರು ರೋಗಗಳ ಗುಣಪಡಿಸುವ ಪ್ರತೀತಿಯಿದೆ.
   ಸಾಯಂಕಾಲ ಗತಿಸಿದ ಹಿರಿಯರಿಗೆ ಹಾಗೂ ರಾಹುವಿಗೆ ಕೋಳಿಯನ್ನು ಕೊಯ್ಯುವ ಸಂಪ್ರದಾಯ ಹಲವೆಡೆ ಇದೆ. ಕರ್ನಾಟಕದ ಇತರೆಡೆಗಳಲ್ಲಿ ಇರುವಂತೆ ಗಂಡನ ಪೂಜಿಸುವ ಭೀಮನಮವಾಸ್ಯೆಯಿದು. ತುಳುನಾಡಿನ ಸಂಪ್ರದಾಯ ಅಳಿಯಕಟ್ಟು ಆದ ಕಾರಣ ಗಂಡನ ಪೂಜೆಯ ಯಾವುದೇ ಹಬ್ಬವಿಲ್ಲ ಇಲ್ಲಿ. ಪ್ರಥಮ ಆದ್ಯತೆ ಹೆಣ್ಣಿಗೆ. ಯಾವ ಹಬ್ಬದಲ್ಲೂ ದೇವರ, ದೈವಗಳ ಪೂಜೆ, ಹರಕೆಯೇ ಹೊರತು ಮನುಜರಿಗಿಲ್ಲ.
@ಪ್ರೇಮ್@
20.07.2020

1501. ರುಬಾಯಿ

ರುಬಾಯಿ

ಕೊರೋನ ಕೇಕೆ ಹಾಕಿ ನಗುತಿತ್ತು 
ಮನುಜನೊಡನೆ ತಾನೆ ಗೆದ್ದೆನೆಂದು ಬೀಗುತ್ತಿತ್ತು!
ಶವಗಳುರುಳಿ ಬಿದ್ದ ಅಂದವ ನೋಡುತ.
ಮನುಜನ ಮೊಗದಲಿ ಹೊಸ ಔಷಧದ ನಗುವಿತ್ತು..
@ಪ್ರೇಮ್@
05.07.2020

1500. ಶಿಶುಗೀತೆ-ತಮ್ಮ

ತಮ್ಮ

ನನ್ನ ತಮ್ಮ
ತರಲೆ ತಿಮ್ಮ
ಓಡೊ ಗುಮ್ಮ
ಹೆದರೊ ಪಮ್ಮ

ನಾಯಿ ನೋಡಲು
ಅಳುತ ಇರಲು
ತಿಂಡಿ ತರಲು
ಬಳಿಗೆ ಬರಲು..

ಮನೆಯ ಚೋರ
ಆಟದ ಪೋರ
ತುಂಟ ಕುವರ
ಅಮ್ಮನ ಚಕೋರ

ಜಾಣ ಮರಿ
ಪಾಠ ಬರಿ
ಎನಲು ಉರಿ
ಕೋಣ ಮರಿ..

ಊಟ ಬೇಡ
ಓದು ಬೇಡ
ಪೆಟ್ಟು ಬೇಡ
ಹಾಲು ಬೇಡ

ಮೊಬೈಲು ಬೇಕು
ಟಿವಿ ಬೇಕು
ತಿಂಡಿ ಬೇಕು
ಚೂರು ಸಾಕು!
@ಪ್ರೇಮ್@
07.07.2020

1499. ಹನಿಗವನ-ಬದ್ಕು

ಬದ್ಕು

ಮುಳ್ಳುಹಾದಿಯಲ್ಲಿ ನಡೆವ
ಕಲ್ಲು ಜೀವ ನಮ್ಮದು
ಸುಳ್ಳು ಮಾತನಾಡದೇನೆ
ಪೊಳ್ಳು ಕೆಲಸ ಮಾಡದೇನೆ
ಬಲ್ಲ ಜಾಣರ್ಯಾರೋ ತಿಳಿಯರು!

ಹಲ್ಲು ಗಿಂಜೋದ್ ಬಿಟ್ಟು
ಎಲ್ಲಾ ಮರೆತುಕೊಂಡು
ಬಳ್ಳಿಯಂತೆ ಬದುಕುತ್ತಾ
ದಿಲ್ಲು ಗಟ್ಟಿ ಮಾಡಿಕೊಂಡು
ಕಳ್ಳರಾಗದೆ ಉಸಿರಾಡಿದರಾಯ್ತು!
@ಪ್ರೇಮ್@
08.07.2020

1498. ಪ್ರೀತಿಹಕ್ಕಿ

ಪ್ರೀತಿಹಕ್ಕಿ

ಎನ್ನ ಮನದ ಹಕ್ಕಿ ಹಾರಿ
ಎದೆಯ ಒಳಗೆ ಕುಳಿತಿದೆ...
ನಿನ್ನ ಎದೆಯೆ ಸ್ವರ್ಗವೆಂದು
ಕಂಡು ತಣಿದು ಕುಣಿದಿದೆ...

ಬಯಕೆ ಮರವ ಹೊತ್ತು ತಂದು
ಬೇರು ಬಿಡಲು ಕಾದಿದೆ
ಬಯಲ ನೀರ ಚಿಲುಮೆಯಲ್ಲಿ
ಗರಿಯಗೆದರಿ ನಲಿದಿದೆ...

ನೋಡು ನೋಡುತಿರುವ ಹಾಗೆ
ಹಾರಿ ಹೋಗಿ ಬರುತಿದೆ
ಹೋಗಿ ಬರುವ ಹೊತ್ತಿನಲ್ಲಿ
ನೆನಪ ಕಾಳು ತರುತಿದೆ..

ಹೊತ್ತು ಗೊತ್ತು ಇಲ್ಲವದಕೆ
ಪ್ರೇಮ ಕವನ ಹೆಣೆದಿದೆ
ಗುಡಿಯ ಒಳಗೆ ಕುಳಿತು ತಾನು
ಜಗವನೆಲ್ಲ ಮರೆತಿದೆ...
@ಪ್ರೇಮ್@
08.07.2020

1496. ಭಕ್ತಿಗೀತೆ-ನಮನ

ನಮನ

ನಮನ ನಮನ ಗುರುದೇವಗೆ
ನಮನ ನಮನ ಮಹಾದೇವಗೆ..

ನಮನ ನಮನ ಗಣಾಧೀಶಗೆ
ನಮನ ನಮನ ಸಿರಿದೇವಿಗೆ
ನಮನ ನಮನ ಹರಿಹರನಿಗೆ
ನಮನ ನಮನ ಸುಬ್ರಹ್ಮಣ್ಯಗೆ

ನಮನ ನಮನ ಶ್ರೀಲಕ್ಷ್ಮಿಗೆ
ನಮನ ನಮನ ಶ್ರೀ ಶಾರದೆಗೆ
ನಮನ ನಮನ ಜೈ ಭವಾನಿಗೆ..
ನಮನ ನಮನ ಅನ್ನಪೂರ್ಣೆಗೆ

ನಮನ ನಮನ ಅಯ್ಯಪ್ಪಗೆ.
ನಮನ ನಮನ ಸಾಯಿಸಂತಗೆ
ನಮನ ನಮನ ಗುರುರಾಯಗೆ.
ನಮನ ನಮನ ಆಂಜನೇಯಗೆ
ನಮನ ನಮನ ಕವಿಹೃದಯಕೆ..

ನಮನ ನಮನ ಸಿರಿ ಪಾದಕೆ
ನಮನ ನಮನ ನಾಗಬ್ರಹ್ಮಗೆ
ನಮನ ನಮನ ಶನಿದೇವಗೆ.
ನಮನ ನಮನ ನಮ್ಮ ಕಾಯ್ವಗೆ..

ನಮನ ನಮನ ಮಾತಾಪಿತೃಗೆ
ನಮನ ನಮನ ಹಿರಿ ಮನಸಿಗೆ
ನಮನ ನಮನ ವೀರ ಯೋಧಗೆ
ನಮನ ನಮನ ಧೀರ ರೈತಗೆ..
@ಪ್ರೇಮ್@
11.07.2020

1495. ಪುರಾಣ ಪಾತ್ರ-ಊರ್ಮಿಳೆ

ನನಗಿಷ್ಟವಾದ ಪುರಾಣದ ಸ್ತ್ರೀ ಪಾತ್ರ

       ಪುರಾಣಗಳು ನಮ್ಮಜೀವನವನ್ನು ತಿದ್ದಿಕೊಳ್ಳಲಿಕ್ಕಿರುವ ಪುರಾವೆಗಳು. ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮ-ಅಧರ್ಮಗಳ ವ್ಯತ್ಯಾಸ ತಿಳಿಸಿ ಬದುಕನ್ನು ಹೇಗೆ ಸ್ವೀಕರಿಸಬೇಕೆನುವ ತಂತ್ರಗಳನ್ನು ಅಲ್ಲಿನ ಪ್ರತಿಯೊಂದು ಪಾತ್ರಗಳೂ ನಮಗೆ ಕಲಿಸಿ ಕೊಡುತ್ತವೆ. ಅಂತಹ ಮಹಾನ್ ಪಾತ್ರಗಳಲ್ಲಿ ರಾಮಾಯಣದ ಊರ್ಮಿಳೆಯ ಪಾತ್ರ ನನಗೆ ತುಂಬಾ ಹಿಡಿಸಿದ ಪಾತ್ರ.
    ರಾಣಿಯಾಗಿದ್ದರೂ ರಾಣಿ ಪಟ್ಟ ಸಿಗದ, ಐಶ್ವರ್ಯವಿದ್ದರೂ ಅನುಭವಿಸಲಾಗದ, ಗಂಡನಿದ್ದರೂ ಒಂಟಿಯಾಗಿ ಬದುಕಿದ, ಅರಮನೆಯಲ್ಲೂ ನೆಮ್ಮದಿ ಕಾಣದ ತಬ್ಬಲಿ ಬದುಕು ಊರ್ಮಿಳೆಯದ್ದು. 
     ರಾಮ, ಲಕ್ಷ್ಮಣ, ಸೀತೆಯರನ್ನು ಹೊಗಳಿ ಪೂಜಿಸುವವರೇ ಎಲ್ಲರೂ. ತನ್ನ ಜೀವಮಾನವಿಡೀ ತ್ಯಾಗಮಯಿಯಾಗಿ ಬದುಕಿದ ಊರ್ಮಿಳೆ ಯಾರ ಕಣ್ಣಿಗೂ ಬೀಳಲೇ ಇಲ್ಲ. 

   ವನವಾಸದಲ್ಲೂ ಸೀತೆಯೊಡನೆ ರಾಮನಿದ್ದ. ಆದರೆ ಲಕ್ಷ್ಮಣ ತನ್ನ ಜೀವನವಿಡೀ ರಾಮ-ಸೀತೆಯರ ರಕ್ಷಣೆಯಲ್ಲಿ ತೊಡಗಿದ್ದನೇ ಹೊರತು ತನ್ನ ಸತಿಗೇನು ಬೇಕು, ಅವಳ ಆಸೆಗಳೇನು, ತನ್ನ ನಿರೀಕ್ಷೆಗಳೇನು, ಆಸೆಗಳೇನು ಎಂಬ ಯಾವುದನ್ನೂ ಯಾವತ್ತೂ ಆಲಿಸುವತ್ತ ಗಮನವೇ ಕೊಡಲಿಲ್ಲ. ತನ್ನ ಆಸೆ, ಆಕಾಂಕ್ಷೆಗಳನ್ನೆಲ್ಲಾ ಬದಿಗೊತ್ತಿ ತನ್ನ ಜೀವನವನ್ನೇ ತ್ಯಾಗಕ್ಕೆ  ಮುಡಿಪಾಗಿಟ್ಟ ಊರ್ಮಿಳೆಗೆ ಹ್ಯಾಟ್ಸಪ್.
   @ಪ್ರೇಮ್@
13.07.2020

1494. ಹನಿಗವನ

ಹನಿ ಗವನ
ಹನಿಹನಿಯಾಗಿ ಸುರಿಯತಲಿ ಬಂದೆ
ಹನಿಸುತ ಜಲಧಾರೆಯನು ನಿಂದೆ
ಹಣಕೆ ಬೆಲೆಯಿಲ್ಲ ನನ್ನಲಿ ಸದಾ
ಕಣಕಣದಿ ಜಲ ಆಮ್ಲ ಬೆಸೆದಿಹುದು ಕಂದಾ..

ನೀರೆನುವೆ ಉದಕವೆನುವೆ
ಜಲ ನಾನು ಸುರಿಯುವೆ
ಗಟ್ಟಿಯಾಗಲು ಮಂಜಿನ ಗೆಡ್ಡೆ 
ಕಾಣದಾಗಲು ನೀರಾವಿ ಗುಡ್ಡೆ...
@ಪ್ರೇಮ್@
14.07.2020

1493. ಕಟ್ಟದಿರಿ ಗೋಡೆ

ಕಟ್ಟದಿರಿ ಗೋಡೆ

ಕಟ್ಟಿಕೊಳ್ಳಿ ಗೋಡೆಯನು
ಎರಡು ಮನೆಗಳ ನಡುವೆ
ಕಟ್ಟದಿರಿ ಗೋಡೆಗಳನು
ಎರಡು ಮನಗಳ ನಡುವೆ..

ಬೆಳೆಸಿಕೊಳ್ಳಿ ಅಂತರವ
ಎರಡು ದೇಹಗಳ ನಡುವೆ
ಬೆಳೆಸದಿರಿ ಅಂತರವ
ಎರಡು ಹೃದಯಗಳ ನಡುವೆ..

ಮುಚ್ಚಿಕೊಳ್ಳಿರಿ ನಿಮ್ಮ
ಕೈ ಮೂಗು ಬಾಯಿಗಳ
ಮುಚ್ಚದಿರಿ ನಿಮ್ಮ
ಎದೆಯೊಳಗಿನ ಭಾವನೆಗಳ

ಮರೆತುಬಿಡಿ ಜನರ
ಕೋಪ ದ್ವೇಷಗಳನು
ಮರೆಯದಿರಿ ಗೆಳೆಯರ
ಪ್ರೀತಿ ಸ್ನೇಹಗಳನು..

ಬಿತ್ತಿ ಬೆಳೆಸಿರಿ ನಾಡಲಿ
ಸೌಹಾರ್ದತೆಯ ಹಸಿರನು
ಕೆತ್ತಿ ಬಿಸಾಕಿರಿ ಬೇಗ
ಮತಾಂಧತೆಯ ರೋಗವನು..

ಮುಚ್ಚಿ ಬಿಡಿ ಬಾಯಿಯನು
ಜಗಳ ಕದನಗಳೆಡೆಯಲಿ
ಬಿಚ್ಚಿ ಬಿಡಿ ಕರಗಳನು
ದೇಶ ಸೇವಾ ಕಾರ್ಯಗಳಲಿ

ಮೆಚ್ಚಿಕೊಳ್ಳೋಣ ಜನರಲ್ಲಿ
ವಿಶಾಲವಾದ ಆಲೋಚನೆಗಳ
ಬಚ್ಚಿಟ್ಟುಕೊಳ್ಳೋಣ ಒಳಗಿಲ್ಲಿ
ಹತ್ತು ಹಲವು ನೋವುಗಳ..

ಚುಚ್ಚದಿರೋಣ ಪದಗಳಲಿ
ಜತೆಗಾರರಿಗೆ ಎಂದೂ
ಎಚ್ಚರಿಸೋಣ ಸರ್ವರಲಿ
ದಯೆಯನು ಮುಂದೂ..
@ಪ್ರೇಮ್@
15.07.2020

1492. ಚುಟುಕು-ಪ್ರಿಯೆಗೆ

ಚುಟುಕು

ಪ್ರಿಯೆಗೆ..

ಮಂದಾರ ಪುಷ್ಪ ನೀನೇ ಪ್ರಿಯೆ
ಮಂಗಳ ವಾದ್ಯ ಘೋಷವೂ ಸಿಹಿಯೆ
ಮುಂಬರುವ ಸುಖ ದು:ಖಗಳ ಕಡಿವಾಣ
ನನ್ನ ಬಾಳಿನ ಸ್ವಾತಂತ್ರ್ಯದ ಮಹಾದಾನ..
@ಪ್ರೇಮ್@
15.07.2020

1491. 2 ಟಂಕಾಗಳು

ಟಂಕಾ-1
ಮೀಸಲಾಗಿಸಿ
ನನ್ನ ಹೃದಯವನು
ಕಾದಿರಿಸಿದ್ದು
ನಿನಗಾಗಿಯೇ ತಾನೆ?
ಸದಾ ಕಾಲಕ್ಕೂ ನೀನೇ!

ಟಂಕಾ-2

ಮೀಸಲು ದೇವ
ಮನವದು ನನ್ನದು
ನಿನಗಾಗಿಯೇ
ಇಂದೂ ಎಂದೂ ಮುಂದೂನೂ
ಭಕ್ತಿಯಲಿ ಸುಗಿಪೆ..
@ಪ್ರೇಮ್@
16.07.2020

1490. ಜೋಗುಳದ ಹಾಡು

ಜೋಗುಳ ಹಾಡು

ಲಾಲಿ ಲಾಲಿ ಜೋಜೋ ಕಂದ
ನನ್ನ ಮುದ್ದು ಬಂಗಾರ ಅಂದ...
ಕಣ್ಣು ಮುಚ್ಚಿ ನಗುವುದಾನಂದ
ಕರವ ಹಿಡಿದ ಆಟಾನೇ ಚಂದ..
ಲಾಲಿ..ಲಾಲಿ.ಜೋ.ಜೋ.ಕಂದ

ಕೆಂಪು ತುಟಿಯ ಮೇಲೆ ಖುಷಿಯು
ಅಮ್ಮ ಬರಲು ಕಾಣೋ ತವಕವು
ಮುಗ್ಧ ನಗುವ ಮಿಂಚಿನ ಸೆಳೆತವು
ಸ್ನಿಗ್ಧ ಮನದ ರೋಚಕ ಒಲವು
ಲಾಲಿ.ಲಾಲಿ..ಜೋ.ಜೋ.ಕಂದ

ಅಳುವ ನಾಟಕದ ಮುದ ಚೆಲುವು
ಊಟ ಮಾಡದೆ ಓಡೋ ಹಠವು
ಎದ್ದು ಬಿದ್ದು ನಡೆಯೋದು ತಾಳ್ಮೆಯು
ಗುದ್ದು ಮುದ್ದು ಎಲ್ಲಾ ಪ್ರೀತಿಯು
ಲಾಲಿ ಲಾಲಿ..ಜೋ.ಜೋ ಕಂದ

ಅಮ್ಮನಂತೆ ಪ್ರೀತಿಯ ಗುಣವು
ಅಪ್ಪನಂತೆ ಕೋಪದ ದೃಷ್ಠಿಯು
ಚಂದ್ರನಂಥ ಹೊಳೆವ ಆ ಮೊಗವು
ಸೂರ್ಯನಂತೆ ಬೆಳಕೀವ ಆ ನಗುವು
ಲಾಲಿ ಲಾಲಿ ಜೋ ಜೋ ಕಂದ
@ಪ್ರೇಮ್@
20.07.2020

ಶನಿವಾರ, ಜುಲೈ 11, 2020

1489. dance-2

ಸಿನಿಮಾ ಸ್ಪರ್ಧೆಗೆ

1. ನನ್ನ ಚೆಲುವೆ..

ನನ್ನ ರಾಧೆಯ ಕಡೆಗೆ ನಾನ್ಯಾವಾಗ ಸಾಗುವೆ
ಕಣ್ಣ ಭಾಷೆಯ ಓದಲು ಅವಳ ತಡೆವೆ..

ಮೌನದರಮನೆಯ ಬಿಚ್ಚಿ ಮುದ್ದಾಡಲು
ಎಂದು ತೋರುವೆ ಪ್ರೀತಿಯ ಒಡಲು
ಬಾರೇ ನನಗಾಗಿ..ಬಾಬಾಬಾಬಾ.. ಬಾರೇ ನನಗಾಗಿ
ಮುದ್ದಿನ ಚೆಂಗುಲಾಬಿಯೇ..ಪ್ರೀತಿಯ ತೋರೇ ನನಗಾಗಿ..
ನನ್ನ ಜೀವವೆ ನಿನಗಾಗಿ ...
ನಿನ್ನ ಒಲವಿನ ಕರೆಗಾಗಿ..
ಜೀವದ ಖನಿಗಾಗಿ..//ನನ್ನ//

ತಲ್ಲಣವೀಗ ಮನದಲಿ ಏನೋ
ಪುಳಕವು ನಿನ್ನಯ ದರ್ಶನವೂ
ಪಲ್ಲಕ್ಕಿಯಲಿ ಕೂರಿಸಿ ಒಯ್ಯುವೆ
ನೃತ್ಯವನಾಡುತ  ನಗಿಸುತ ಕಾಯುವೆ
ಮನಮೋಹಿನಿಯೇ.. ಶೃಂಗಾರ ರತಿಯೇ..
ಬಾಬಾಬಾಬಾ ಗಾನದ ಸುಧೆಯೇ
ಅಂಬರ ಚುಂಬಿತ ಪ್ರೇಮವೇ
ಸಂಪಿಗೆ ಮೊಗದ ಸುಮವೇ..
ಹುಲ್ಲಿನ ಪಚ್ಚೆಯ ಹಿತವೇ..
ನನ್ನೊಲವೇ..ನನ್ನ ಜೀವವೇ.
.//ನನ್ನ//

ಮುತ್ತಿನ ರಥದಲಿ ಹೊತ್ತೊಯ್ಯುವೆ ನಿನ್ನ
ಕತ್ತಿನ ಸರದಲಿ ನಾನಿರುವೆನು ಚಿನ್ನ
ಹತ್ತಿಯ ತೂಕದ ಮಲ್ಲಿಗೆ ಎನ್ನ
ತಂಬೆಲರೇ..ಬಾಬಾಬಾಬಾ..
ತರುಲತೆಯೇ..ಬಾಬಾಬಾಬಾ
ಹುಣ್ಣಿಮೆಯೇ...ಬಾಬಾಬಾಬಾ
ಕಣ್ಮಣಿಯೇ..ಬಾಬಾಬಾಬಾ..
ನನ್ನಾಸೆಯ ಹೂವೇ...
//ನನ್ನ/
@ಪ್ರೇಮ್@
08.07.2020

1488. duet

2. Duet Song

ಹಿ- ಕ್ಯಾರೇ ದೇಖ್ ತಾಹೇ..ಆ..ಆ..
ಶಿ-ಕ್ಯೋರೇ.. ಪೂಛ್ ತಾಹೇ..ಆ..ಆ..
ಹಿ-ಪ್ರೇಮ ಲೋಕ ತೆರೆದಿದೆ ನಿನ್ನಿಂದ ಇಂದು..
ಶಿ-ಪ್ರೀತಿ ಕಣ್ಣ ತೆರೆಸಿದೆ ನಿನ್ನಿಂದ ಇಂದೂ...

ಹಿ-ರಾಣಿ ನಿನ್ನ ಮನದ ಮಾತು ಬಿಚ್ಚಿ ಹೇಳ ಬೇಕು..
ಶಿ-ಪುನೀತ್, ಪ್ರಭುದೇವನೊಡನೆ ನೃತ್ಯ ಮಾಡಬೇಕು..
ಹಿ-ಅಷ್ಟೆ ತಾನೆ ಧರೆಗೆ ಸ್ವರ್ಗ ಇಳಿಸಬಲ್ಲೆ ನಾನು..
ಶಿ-ಪ್ರೀತಿ ನನ್ನ ಇಷ್ಟ ನೀನು ಕುಣಿಯಲಾರೆಯೇನು?

ಹಿ-ಹಾಡೋಣಾ...ಕುಣಿಯೋಣಾ..ಮನಬಿಚ್ಚಿ.....ನಲಿಯೋಣಾ.. ಆ..ಆ..
ಶಿ- ವರುಣಾನಾ..ಕೇಳೋಣಾ.. ಮಳೆಹನಿಯಾ..ಕರೆಯೋಣ..ಆ..ಆ..
ಹಿ-ಗರಿಬಿಚ್ಚಿ ಹಾರೋಣ, ಕಡಲಾಚೆ ರಮಿಸೋಣ
ಶಿ- ಮನದಿಚ್ಛೆ ತಣಿಸೋಣ, ನಲಿಯುತ್ತಾ ಸಾಗೋಣ..

ಹಿ- ನಮ್ಮಾಸೆಗಾರು ಅಡ್ಡಿಯೋ....ಓ..ಓ..
ಶಿ-ಸೂರ್ಯ ಚಂದ್ರರ ಪಾತ್ರವೋ...ಓ..ಓ..
ಹಿ- ಅಭಯವ ನೀಡುವೇ.. ಕೇಳೆಲೆ ಕೋಮಲೆ..
ಶಿ- ನನ್ನ ಮನದ ಬಯಲೊಳು ನೀನೇ ನನ್ನ ಮಹಲೇ..

ಹಿ-ಮಹಾರಾಣಿಯು ನೀನು..ಮಹಾರಾಜನು ನಾನೂ..
ಶಿ- ಪ್ರೀತಿ ಸಾಗರದಲ್ಲಿ....ತೇಲೋ ನೌಕೆಯು ನಾನೂ..
ಹಿ-ಒಂದಾಗಿ ಕಲೆತು ಹಾಲಂತೆ ಬೆರೆತು ನಾನೇ ನೀನು ನೀನೇ ನಾನು ಆಗೋಣ ಬಾರೇ...
ಶಿ-ನಾವು ಸಾಗೋಣ ಬಾರೋ..
ಆ..ಆ..ಆ..ಆ..
@ಪ್ರೇಮ್@
08.07.2020

1487. ಡ್ಯಾನ್ಸ್-patho

3.Patho

ಸಾವಿರ ವರುಷಕೂ ಸಾವಿರದ ಪ್ರೀತಿಯು ಇದೆಯೇನೋ ದೇವಾ...
ಸಾಯುತ ಬದುಕುವ ಬಾಳಿನ ಆಟಕೆ ಇಂದು ಅಣಿಯೇನೋ ದೇವಾ..

ಮನದಲಿ ನೋವಿನ ಬೀಜವ ಬಿತ್ತಿ ನೀ ಎಲ್ಲಿರುವೇ..
ಕಾಣದೆ ನನ್ನಯ ತನುವಿನ ದು:ಸ್ಥಿತಿ ಮಾಯವೆ ಆಗಿರುವೇ..
ಅವಳನ್ಯಾಕೆ ಕೊಟ್ಟೆ ಬದುಕ ಮೂಟೆಯಲಿ ಇಟ್ಟೇ..
ರಥಕೆ ಚಕ್ರವ ಕೊಟ್ಟು ಹೀಗೆ ಕಿತ್ಕೊಂಡ್ ಬಿಟ್ಟೆ..
ಇದು ನ್ಯಾಯವೇ..ಹೇಳು ಭಾವವೇ..
ಮನದೆಲ್ಲೆಡೆ ನೋವ ತಾಳಿರುವೇ...ಏ..ಏ..ಏ..(ಅಳುವಿನ ಬಿಕ್ಕಳಿಕೆ)

ಕಾವನೆ ಉದಯಿಸು ಭೂಮಿಯಲಿಳಿದು
ನೋವನು ಅನುಭವಿಸು ಪ್ರೀತಿಯ ಕಳೆದು..
ತುಂಡರಿಸುತ ಮನವ ಬಾಳುವೆ ಕಲಿಸು
ನೀನಿರೆ ಹೇಳುತ ಬೇಸರ ನೀಗಿಸು..
ದೇವನೇ..ಕಾವನೇ..ನೋಡೊನೀ..ಯಾತನೇ...ದಾತನೇ..ಸಂಜಾತನೇ..
(ನೋವಿನ ಬಿಕ್ಕಳಿಕೆ..)

ನಡೆದುದ ಮರೆಯಲಿ ಹೇಗೆ ನಾನು
ನಡು ನೀರಲಿ ಕೈಬಿಟ್ಟು ಹೋದೆಯ ನೀನು
ಭಯವೂ.. ಅಧೈರ್ಯವೂ..ಬೇಸರವೂ.. ಅಸಹಾಯಕವೂ.. ನೋವೂ.. ಗಾಯವೂ
ದೇವನೆ ಕೇಳು ನನ್ನಯ ವಚನವ
ಮನದಲಿ ಬಿಚ್ಚಿದ ನೋವಿನ ರಕುತವ
ನಾನೇನನು ಮಾಡಲಿ ಕುರ್ಚಿಯ ಹಿಡಿತವು
ನೋಡದೆ ಹೋದಳು ನೀಡದೆ ವಿನಯವ
ನೀನೇ ನನಗೇ..ಕಾವಲುಗಾರ
ಬರಬೇಕೆಂದೂ..ಜೊತೆಯಲಿ ದೂರ..ದೂರ..ದೂರ..ದೂರಾ..
@ಪ್ರೇಮ್@
08.07.2020

1486. ಡ್ಯಾನ್ಸ್

4.ಟೈಟಲ್ ಟ್ರ್ಯಾಕ್..

ಡ್ಯಾನ್ಸ್ ಡ್ಯಾನ್ಸ್ ತರರರರ ಡ್ಯಾನ್ಸ್...ತಳಳಳ ಡ್ಯಾನ್ಸ್...

ತಳುತಳುಕುತ ಬಳುಬಳುಕುತ
ಕುಣಿಕುಣಿಯುತ ಮಾತೆ ಮರೆಯುತ
ಬಾರೋ...ಜಾಣಾ..ಗರಿಗೆದರಿ ಕೆದರಿ ತರತರದಿ ಧರಧರನೆ ಕುಣಿಯುವಾ...
ಮುರಿಮುರಿದು ತನುವ ಮನದಿ ಕುಣಿದು ನಲಿದು ಮೆರೆದು ದಣಿದು ತಣಿಯುವಾ .

ಮನತನುವಲಿ ಕಣಕಣದಲಿ ತಲೆತುದಿಯಲಿ ಕಾಲ್ ಬೆರಳಲಿ
ಕಣ್ಣಿನಾಳದ ತುಂಟ ಪ್ರೀತಿಯ ತುದಿತುದಿಯಲಿ
ನಲಿನಲಿಯುತ ಚಳಿ ಬಿಡಿಸುತ ಕಳಕಳಿಯಲಿ ತಳುಬಳುಕುತ..
ಬಳಿಯಲೇ..ಸಾಗುತಾ.. ಮಾತಲೇ.. ಹಾಡುತಾ..

ಗಿರಗಿರನೆ..ಸರಸರನೇ.. ತರತರನೇ.. ಹರಿಹರನೆನುತಾ..
ಬಿರಬಿರನೇ..ಧರಧರನೇ..
ಮರಮರದಲಿ..ಕರಕರದಲಿ..
ಸರೀಸೃಪದಂತೆ... ಮದಕರಿಯಂತೆ..
ನಲಿ ನಲಿ ನಲಿ ನಲಿ ನಲಿ ನಲಿದಾಡುತಲೀ...

ಗೆಜ್ಜೆ ಕಟ್ಟದೆಯೆ ಕಾಲ ಕುಣಿಸುತಾ
ಹೆಜ್ಜೆ ಎತ್ತದೆಯೇ ಮೇಳ ಸಾಗುತಾ..
ಪ್ರಜ್ಞೆ ಇಲ್ಲದೆಯೇ ನಾಟ್ಯವಾಡುತಾ..
ಸಂಜೆಯಾದುದೇ ತಿಳಿಯದೆ ಸಾಗುತಾ..
ತರತರನೇ..ಗಿರಗಿರನೇ.. ಕುಣಿಯುವಾ..
@ಪ್ರೇಮ್@
08.07.2020

1485.. ಹಣೆ ಬರಹ

ಹಣೆಬರಹ

ರಾಮನ ನೋಡಿ ಕೃಷ್ಣನ ನೋಡಿ
ಮೋಡಿಯ ಜೀವನ ಸಿಗುವುದೆ ಹಾಡಿ?

ಮನದಲಿ ನೋವು ಹೃದಯದಿ ಕಾವು
ರಾಜನೆ ಆದರು ಕಾಡಿನ ವಾಸವು
ರಾಕ್ಷಸ ಕುಲಕೆ ಅವನೇ ಗುರಿಯು
ಪ್ರತಿ ಹೆಜ್ಜೆಯಲೂ ಸಾವಿನ ಭಯವು..

ಪ್ರೀತಿಯ ರಾಧೆಯು ಸಿಗಲೇ ಇಲ್ಲ
ಪಾಪದ ಮಡದಿಯ ಕಾಡಿಗೆ ಅಟ್ಟಿ
ಲೋಕದ ಕಣ್ಣಿಗೆ ರಾಜನೇ ಆದರೂ
ವನವಾಸದೆ ಜೀವನ ಬೀಳುತ ಕಣ್ಣೀರು!

ಸಂತಸ ದು:ಖವ ನೋಡಲೇ ಬೇಕು
ಮನಪಜನ ಜೀವನ ವ್ಯಯಿಸಲು ಸಾಕು
ಪ್ರೀತಿಗೆ ಮೋಸ, ನಂಬಿಕೆ ದ್ರೋಹವು
ಮನದಲಿ ಸುಡುಸುಡು ಮೊಗದಲಿ ನಗುವು...

ಸಿರಿತನ ಬಡತನ ಸಂತಸಕ್ಕಿರದು
ಪ್ರೀತಿ ಪ್ರೇಮವು ಮನಸಿಗೆ ಸಿಗಲು
ಧನಿಕನು ಅವನೇ ನೆಮ್ಮದಿ ಇರುವವ
ಪರರ ಸೇವೆಯಲಿ ಸರ್ವಸ್ವವ ಪಡೆದವ..

ಭೂಮಿಗೆ ಬರಲು ದೇವನ ಪ್ರೀತಿಯು
ಧರೆಯಲಿ ಎಂದೂ ಅಮ್ಮನ ಪ್ರೀತಿಯು
ಸಿಗುವುದು ಗೆಳೆತನ ಹಲವರ ನೀತಿಯು
ಸಂತಸ ಪಡೆಯಲು ಬೇಕದು ಮನವು..
ಜೊತೆಯಲಿ ಶ್ರೀಹರಿ ನೀಡುವ ವರವೂ..
@ಪ್ರೇಮ್@
10.07.2020

1484. ಶರ ಷಟ್ಪದಿ

ಆಹ್ಲಾದ(ಶರ)

ವರುಣನ ಕೃಪೆಯದು
ಕರುಣೆಯ ಬೀರಿದೆ
ತರುಲತೆ ನಗುವಲಿ ನಾಟ್ಯವಿದೆ।
ಝರಿಯದು ಹರಿಯುತ
ವರವಾಗುತ ದಿನ
ಹರನನೆ ನೆನೆಯುತ ಸಾಗುತಿದೆ॥

ಭರದಲಿ ಬಾಗಿದೆ 
ಗಿರಗಿರ ತಿರುಗಿದೆ
ಕರದಲಿ ಪುಷ್ಪವ ಹಿಡಿದಂತೆ।
ತರತರ ಬಣ್ಣದ 
ಭರವಸೆ ತಂದಿದೆ
ಸಿರಿಯನು ಬಳಿಯಲಿ ಹಿಡಿದಂತೆ॥

ಪರಿಸರ ಶುದ್ದಿಯು
ಉರಿಸದು ಮನವನು
ಹರಸುತ ಸರ್ವರ ಬೇಸರವ।
ಪರಿಪರಿಯಲಿ ಕಸ 
ಸುರಿಯುತ ಜನಗಳು
ಪೊರೆವಗೆ ಗದರುತ ಸಾಗುವರು॥
@ಪ್ರೇಮ್@
04.07.2020

ಶುಕ್ರವಾರ, ಜುಲೈ 3, 2020

1483. Why So

Why so

She has dedicated
Hundred percent of
Her life to him
With all adorness
With no any expectations
With no dependance
With no future hurtings
With no other intensions
With no family bondings

With only pure heart 
With only caring
With some needs of time
With all feelings
With self responsibility
With all  confidence
With lots of cherished moments
With plenty of memories
With every minutes pleasure

With only shining eyes
With only smiling face
With only showing care
With only loving heart
With only positive mind
Wirh only golden thoghts.

Yet yet yet ....
Why that single line 
Of doubtfulness
Passed once in the mind
So disgracefully..
Unbelievable..
But true..
Why why why
Without reason..
It was serious, truth
But how and why..

What is the problem
With such a lovely heart?
With such a pure mind?
With that milky white smile?
With softy silky mood..??
@PREM@
04.07.2020

ಗುರುವಾರ, ಜೂನ್ 25, 2020

1482. ಪರಿವರ್ಧಿನಿ ಷಟ್ಪದಿ

ಪರಿವರ್ಧಿನಿಯ ಪ್ರಯತ್ನ

ಚಿ-ನ್ನಾರಿ

ಬಂದಳು ಸುಂದರಿ ಅಂಗಳದೆದುರಿಗೆ
ತಂದಳು ಕರದಲಿ ಹೂವಿನ ಬುಟ್ಟಿಯ
ಬೆಂದಳು ಒಡನೆಯೆ ಕಾಲಿಗೆ ಚುಚ್ಚಿದ ಮುಳ್ಳಿನ ನೋವಿನಲಿ

ನಿಂದಳು ಮರುಗುತ ನೋವಲಿ ಮುಲುಕುತ
ಬಂಧಿತ ಮುಳ್ಳದು ಬಾರದು ತೆಗೆಯಲು
ಗೊಂದಲ ಮನದೊಳ ಗೇನದು ಮಾಡಲಿ ಯಿಲ್ಲಿಹೆಯೊಬ್ಬಳೆ ನಾ...

ಕಾಲನು ಎತ್ತುತ ಕೈಯಲ್ಲಿ ಹಿಡಿಯುತ
ಹಾಲಿನ ಬಣ್ಣದ ಅಂಗಾಲ ಒತ್ತುತ
ಎಳೆಯುತ ಮುಳ್ಳಿನ ತುದಿಯನು ತಾನೂ ನೋವಲಿ ಅರಚಿದಳು...
@ಪ್ರೇಮ್@
26.06.2020

ಬುಧವಾರ, ಜೂನ್ 24, 2020

1480. ಮೀಸಲಾತಿ ಬೇಕೇ

ಮೀಸಲಾತಿ ಇನ್ನೂ ಬೇಕೇ?

   ಭಾರತವಿನ್ನೂ ಮುಂದುವರೆದಿಲ್ಲ, ಮುಂದುವರೆಯುತ್ತಿದೆ ಅಷ್ಟೆ. ಹಾಗಾಗಿ ಇಲ್ಲಿ ಬಹು ದೊಡ್ಡ ಕಂದಕ ಬಡವ ಸಿರಿವಂತರದ್ದು. ಅದರೊಡನೆ ಹಳ್ಳಿಗರು ಮತ್ತು ನಗರವಾಸಿಗಳದ್ದು. ನಗರವಾಸಿಗಳಿಗೆ ವಿದ್ಯೆಯ ಮಹತ್ವ ತಿಳಿದಿದೆ, ಹಲವಾರು ಕಲಿಕೆಗೆ ಅವಕಾಶವಿದೆ, ಇತರರಿಂದ ಸಹಾಯವೂ ಸಿಗುತ್ತದೆ. 
    ಆದರೆ  ಹಳ್ಳಿಯ ಬಡ ಕೂಲಿ ಕಾರ್ಮಿಕರ ಹಲವಾರು ಮಕ್ಕಳಿಗೆ ಉನ್ನತ ಶಿಕ್ಷಣದ ಬಗ್ಗೆ, ಅದರ ಉಪಯೋಗದ ಬಗ್ಗೆ ತಿಳುವಳಿಕೆ ಇಲ್ಲ. ಕೆಎಎಸ್,  ಐಎಎಸ್ ಪರೀಕ್ಷೆಗಳ ರ್ಯಾಂಕ್ ವಿಜೇತರ ಪಟ್ಟಿಯಲ್ಲಿ ಕಾಣ ಸಿಗುವುದು ಹಳ್ಳಿಯ ಒಂದೆರಡು ತುಂಬಾ ಕಷ್ಟ ಪಟ್ಟ ಪ್ರತಿಭೆಗಳು ಮಾತ್ರ. ಹಾಗೆಯೇ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ನಾಯಿಕೊಡೆಯಂತೆ ತಲೆಯೆತ್ತಿ ನಿಂತಿದ್ದರೂ ಪ್ರತಿ ಹಳ್ಳಿಗಳಲ್ಲೂ ವೈದ್ಯರಿರುವರೇ? ಆ ಕಾಲೇಜುಗಳಲ್ಲೂ ಬೆರಳೆಣಿಕೆಯ ಹಳ್ಳಿಗರು ಮ ಾತ್ರ ಇರುತ್ತಾರೆ. 
  ಇವನ್ನೆಲ್ಲ ಗಮನಿಸಿದಾಗ ರೂರಲ್ ಕೋಟಾ ಅಥವಾ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾತಿ ಬೇಡವೇ? ತಂದೆ-ತಾಯಿ ಇಬ್ಬರೂ ಅನಕ್ಷರಸ್ಥರಾಗಿದ್ದು ಹಗಲಿಡೀ ದುಡಿದು ಸಂಜೆ ಕುಡಿದು ಜಗಳವಾಡುವ ಸಮಯದಲ್ಲೂ ಬಡತನವ ಮೆಟ್ಟಿ ತಾನೇ ಪರೀಕ್ಷೆಗೆ ಓದಿ ಬರೆದ ಮಗುವಿಗೂ, ಲಕ್ಷಗಟ್ಟಲೆ ಟ್ಯುಟೋರಿಯಲ್ ಕಾಲೇಜಿಗೂ,  ಖಾಸಗಿ ಶಾಲೆಗೂ ಸುರಿದು ಕಲಿತ ಮಗುವಿಗೂ ವ್ಯತ್ಯಾಸವಿಲ್ಲವೇ? ಆ ಕಷ್ಟಪಟ್ಟ ಕಂದನಿಗೂ ಅವಕಾಶ ಸಿಗಬಾರದೇ?

 ಹೇಳಿ ಕೇಳಿ ಭಾರತ ಜಾತ್ಯಾತೀತ ರಾಷ್ಟ್ರ. ಜನರು ಜಾತಿ ಮರೆತು ಅಂತರ್ಜಾತಿ ವಿವಾಹಗಳಾಗುತ್ತಿದ್ದರೂ ಆಡಳಿತದ ಚುಕ್ಕಾಣಿ ಹೊತ್ತವರೇ ಓಟಿಗಾಗಿ, ಕಛೇರಿ ಕಡತಗಳಿಗಾಗಿ, ಮಗುವೊಂದು ಶಾಲೆಗೆ ಸೇರುವಾಗಲೂ ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಲೇ ಬೇಕು. ಹಾಗಿರುವಾಗ  ತೆಲವೊಂದು ಜಾತಿಗೆ ಇಂತಿಷ್ಟು  ವಿನಾಯಿತಿ ಕೊಡದೆ ಹೋದರೆ ತಪ್ಪಾದೀತು. ಆ ದಿಸೆಯಲ್ಲಾದರೂ  ಹಳ್ಳಿಯ ಬಡ ಮಗುವಿಗೆ ಅವಕಾಶ ಸಿಕ್ಕೀತಲ್ಲವೇ?

ಲಂಚವೇ ಮುಖ್ಯವಾದ ಕಸುಬಾದ ಭಾರತದಲ್ಲಿ ವಿನಾಯಿತಿಗಳಿರದಿದ್ದರೆ ಸಿರಿವಂತ ಜನ ದುಡ್ಡಿನಿಂದ ಅಂಕಗಳನ್ನು ಪಡೆದು ತಾವೇ ಮೆರೆಯುವುದಿಲ್ಲವೇ? ಆಗ ಬಡವರಿಗೆ ಅವಕಾಶ ಸಿಗುವುದೇ?
 
ಮಹಿಳೆಯರಿಗೆ ಮೀಸಲಾತಿ ಬೇಕೇ ಬೇಕು, ಕಾರಣ ಇಂದಿಗೂ ಇರುವುದು ಪುರುಷ ಪ್ರಧಾನ ಸಮಾಜ. ವರದಕ್ಷಿಣೆ, ವರೋಪಚಾರ, ವರದಕ್ಷಿಣೆಗಾಗಿ ಕೊಲೆ, ಮಾನಸಿಕ ಹಿಂಸೆ, ಪೀಡನೆಗಳಿಂದ ಮಹಿಳೆಯಿನ್ನೂ ಹೊರತಾಗಿಲ್ಲ. ಲಾಯರ್, ಜಡ್ಜ್, ಪೊಲೀಸ್, ಪ್ರೊಫೆಸರ್ ಎಂದು ಹೊರಗೆ ದುಡಿದರೂ ಮನೆಯಲ್ಲಿ ಗಂಡ, ಅತ್ತೆ, ನಾದಿನಿ, ಭಾವನವರ ಕಾಟ ತಡೆದು, ತುಟಿಕಚ್ಚಿ ಸಹಿಸಿ ಬದುಕುವ ಮಹಿಳೆಯರೆಷ್ಟಿಲ್ಲ? ಇನ್ನು ಭಾರತದ ಕಾನೂನಿನ ಬಗ್ಗೆ, ಅಲ್ಲಿನ ದುರ್ಗಂಧದ ಬಗ್ಗೆ ಗೊತ್ತಿರುವಾಗ ಒಂಟಿ ಹೆಣ್ಣೊಬ್ಬಲು ಕಾನೂನಿನ ಮೊರೆ ಹೊಕ್ಕಿ ಹೋದರೆ ಅಲ್ಲಿರುವ ಬೇಲಿಯೇ ಎದ್ದು ಹೊಲ ಮೇಯುತ್ತದೆ! ಮೀಡಿಯಾ ಇರುವ ವಿಚಾರವನ್ನು ತಿರುಚಿ ಪ್ರಸಾರ ಮಾಡುತ್ತದೆ! ಹೀಗಿರುವಾಗ ಹೆಣ್ಣಿಗೆ ಸದೃಢತೆಯಿಂದ ತನ್ನ ಜೀವನ ನಡೆಸಲು ಮಹಿಳಾ ಮೀಸಲಾತಿ ಅಡಿಯಲ್ಲಾದರೂ ಕೆಲಸ ದೊರೆತು, ತನ್ನ ಕಾಲ ಮೇಲೆ ತಾನು ನಿಂತು, ದಿಟ್ಟಳಾಗಿ, ಸ್ವತಂತ್ರ ಬದುಕು ಅನಿವಾರ್ಯವಲ್ಲವೇ?

ಇನ್ನು ಜಾತಿಗಳ ಬಗ್ಗೆ. ಆಯಾ ಜಾತಿಗಳಿಗೆ ಅದರದ್ದೇ ಆದ ಸಂಸ್ಕೃತಿಯಿದ್ದು ಸರಕಾರದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪಟ್ಟಿಯಿದೆ. ಬುಡಕಟ್ಟು ಜನಾಂಗಗಳು ಹಲವು ಇನ್ನೂ ಕಾಡಲ್ಲೇ ಇವೆ. ಹಾಡುಗಾರ ಹನುಮಂತನ ಜೀವನದ ಬಗ್ಗೆ ನಾವು ನೋಡಿ, ಕೇಳಿ ತಿಳಿದವರಾಗಿದ್ದೇವೆ. ಅಂತೆಯೇ ಅಂತಹ ಜನರಿಗೆ ಮೀಸಲಾತಿ ಸಿಕ್ಕಿದಾಗ ಆ ಜನರೂ ಪ್ರಪಂಚದ ಮುಖ್ಯ ವಾಹಿನಿಗೆ ಬರಲು ಅವಕಾಶ ಸಿಗುವುದಲ್ಲವೇ? ಹಾಗಾಗಿ ಮೀಸಲಾತಿ ತಪ್ಪೆನಿಸುವುದಿಲ್ಲ. ಇದನ್ನು ಇನ್ನೂ ಒಂದಷ್ಟು ವರುಷಗಳವರೆಗೆ ಮಾಡಬಹುದು ಎಂಬುದು ನನ್ನ ಅನಿಸಿಕೆ.

ನಿಜವಾಗಿ ಬುದ್ಧಿವಂತನಾದವನಿಗೆ, ಉತ್ತಮ ಅಂಕಗಳನ್ನು ಪಡೆದವನಿಗೆ ಕೆಲಸ ಸಿಗಲೇ ಬೇಕು. ಮೀಸಲಾತಿಗಳು ಇದನ್ನು ತಡೆಯುತ್ತವೆ ಎಂಬ ಮಾತೂ ನಿಜ. ಆದರೆ ಲಂಚ ತಾಂಡವವಾಡುತ್ತಿರುವ ಇಲ್ಲಿ ಅಂಕಗಳೂ, ತಿದ್ದುವಿಕೆಯೂ ದುಡ್ಡಿನ ಮೇಲೇ ನಡೆದರೇ? ಆಗ ಸಿರಿವಂತರಿಗೇ ಎಲ್ಲಾ ದೊರೆತು ಬಡವ ಮತ್ತೂ ಬಡವನಾಗುವುದಿಲ್ಲವೇ? ಅದರ ಬದಲು ಅರ್ಹರಿರುವ ಎಲ್ಲಾ ವರ್ಗದ ಈ ಮೀಸಲಾತಿಯಿಂದಲಾದರೂ ಜನರಿಗೂ ಸಿಗಲಿ ಕೆಲಸಗಳು! ಮತ್ತೆ ಓದಿ ಬರೆದು ಉನ್ನತ ಅಂಕಗಳ ಪಡೆದವ ಮಾತ್ರ ಒಂದು ಕೆಲಸವನ್ನು ಚೆನ್ನಾಗಿ ನಿಭಾಯಿಸಬಲ್ಲ ಎನ್ನುವುದು ತಪ್ಪು. ಕೆಲವೊಮ್ಮೆ ಕಾಮನ್ ಸೆನ್ಸ್, (ಸಾಮಾನ್ಯ ಜ್ಞಾನ).ಅನುಭವಗಳೂ ಬೇಕಾಗುತ್ತವೆ. 
  
ಹುಟ್ಟಿನಿಂದಲೇ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಡಾಕ್ಟರ್  ಒಬ್ಬರಿಗೆ ಹಳ್ಳಿಯಲ್ಲಿ ಬಂದು ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದರೆ ಅವರ ಹಣದ ಲೆಕ್ಕಾಚಾರ ಹಳ್ಳಿಗರಂತೆ ಹತ್ತಿಪ್ಪತ್ತು ರೂಪಾಯಿಗಳಲ್ಲಿ ಇರುವುದಿಲ್ಲ, ಬದಲಾಗಿ ಸಾವಿರಗಳಲ್ಲಿರುತ್ತದೆ. ಕಡುಬಡವರಾದವರಿಗೆ ತಮ್ಮ ಆರೋಗ್ಯ ಸುಧಾರಿಸಲು ಸಾಧ್ಯವೇ? ಅದೇ ಹಳ್ಳಿಯಲ್ಲೇ ಬೆಳೆದು ವೈದ್ಯನಾದವನಿಗೆ ಆ ಪರಿಸರದ ಜನರ ಕಷ್ಟಗಳ ಸಂಪೂರ್ಣ ಅರಿವಿರುತ್ತದೆ. ಶಾಲೆಯ ಶಿಕ್ಷಕ ಉತ್ತಮ ಅಂಕ ಪಡೆದು ತನ್ನ ವಿಷಯದಲ್ಲಿ  ನುರಿತವನಾದರೆ ಸಾಲದು. ಆಟೋಟ ಸ್ಪರ್ಧೆಗಳು, ಸಭಾ ಸಮಾರಂಭಗಳು, ಬಂದವರ ಸ್ವಾಗತ, ಕಟ್ಟಡ ರಿಪೇರಿ, ಟಾಯ್ಲೆಟ್ ನಿಂದ ತರಗತಿ ಕೋಣೆ, ಶಾಲಾ ವಾತಾವರಣ ಸ್ವಚ್ಛತೆ, ಪರಿಸರ ಜಾಗೃತಿ, ಸ್ಥಳೀಯ ಪರಿಸರದ ಮಹತ್ವ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ವಿದ್ಯಾರ್ಥಿಗಳನ್ನು ವಿವಿಧ ಕಲಾ ಸ್ಪರ್ಧೆಗಳಿಗೆ ತಯಾರುಗೊಳಿಸುವ ಕಲೆಯನ್ನೂ ಅರಿತಿರಬೇಕು. ಇದಕ್ಕೆ ಅವನು ಚಿಕ್ಕಂದಿನಿಂದ ಸರ್ವ ಜಾತಿಯ ಜನರೊಂದಿಗೂ ಕಲೆತು, ಬೆಳೆದು ಕಲಿತಿರಬೇಕು. ಕೇವಲ ನಗರದ ಶಾಲೆಗಳಲ್ಲಿ ಓದಿ ಅಂಕಗಳ ಪಡೆದ ಮಾತ್ರಕ್ಕೆ ಬರುವುದಿಲ್ಲ. ಅದಕ್ಕೆ ಭಾರತದಲ್ಲಿ ಪ್ರತಿ ಕೆಲಸಕ್ಕೂ ಬೇರೆ ಬೇರೆ ಜಾತಿ, ಧರ್ಮ, ಹಳ್ಳಿ, ಪಟ್ಟಣ, ಮಹಿಳೆ ಹೀಗೆ ಒಂದಾಗಿದ್ದಾಗ ಮಾತ್ರ ವಿವಿಧತೆಯಲ್ಲಿ ಏಕತೆ ಕಾಣಲು ಸಾಧ್ಯ. ನೀವೇನಂತೀರಿ?
@ಪ್ರೇಮ್@
19.06.2020

1481. ಹೇಳಿ ಹೋಗು ಕಾರಣ

ಹೇಳಿ ಹೋಗು ಕಾರಣ

ಮಾರು ದೂರ ಹೋದೆಯ
ಮರಳಿ ನೀನು ಬಾರೆಯ
ಹೇಳಿ ಹೋಗು ಕಾರಣ
ಒಂಟಿತನವ ಸಹಿಸೆ ನಾ..

ಮನದಿ ಆಸೆ ಮೂಟೆ ಹೊತ್ತು
ಹೃದಯ ಕಾಯುತಿಹುದು
ಭಾವಗಳೇ ಉಕ್ಕಿ ಹರಿದು
ನುಗ್ಗಿ ಬರುವುದೇನು ಗೊತ್ತು?

ಕನಸ ಮೂಟೆ ಇಹುದು ಇಲ್ಲಿ
ನೀನು ಇರದ ವ್ಯರ್ಥವದು
ತಿರುಗಿ ನೋಡಿ ನಗೆಯ ಚೆಲ್ಲಿ
ಜೊತೆಗೆ ಬರಲು ಸಂತಸವದು..

ಕೋಪ ಒಂದು ನಿಮಿಷ ಮಾತ್ರ
ಪ್ರೀತಿ ಬದುಕು ಇರುವವರೆಗೆ
ತಾಳ್ಮೆ ಇಂದು ಜಗದ ಸೂತ್ರ
ಕೂಡಿ ಬಾಳೊ ಜಗತ್ತಿಗೆ..
@ಪ್ರೇಮ್@
25.06.2020

ಶುಕ್ರವಾರ, ಜೂನ್ 19, 2020

1434. ನೀತಿಕಲಿ

ನೀತಿ ಕಲಿ

ಕಲಿತು ಜಾಣನಾದೊಡೆ ಪ್ರಾರಂಭ ಬದುಕ ಮುಂಜಾವು
ಬುದ್ಧಿ ತಿಳಿದೊಡೆ ಆರಂಭ ನಿಜದ ಸಜವು..

ಮೇಲೇರಿ ಕೆಳಗಿಳಿವ ಜೋಕಾಲಿ
ಜೀಕಿದಷ್ಟು ಸಾಗುವ ಖಯಾಲಿ
ದೂಷಿಸಿ ಮುನ್ನಡೆವ ವೈಯ್ಯಾರ
ಹಿಂದೆ ಹಾಕಿ ಮುಂದೋಡುವ ಹುನ್ನಾರ..

ತದ್ರೂಪಿ ಸೃಷ್ಟಿಸುವ ಕಾತರ
ಸಾವಿಲ್ಲದ ಜೀವನದ ಆತುರ
ಕೊನೆಯ ಕ್ಷಣದವರೆಗೂ ಅಹಂಕಾರ
ಬರದು ಮನುಜಗೆ ಮಮಕಾರ!

ಸತ್ಯಕ್ಕೆ ಟೋಪಿ ಹಾಕಿದವ ಜಾಣ!
ಸುಳ್ಳು ಪದವಾಡದವ ಕೋಣ!
ದುಡ್ಡಿದ್ದವ ದೇವರಿಗಿಂತಲೂ ಮೇಲು
ದೇವಲದ ಆಫೀಸು, ಹುಂಡಿಗವನೇ ಕಾವಲು..

ಸರಳ ಬದುಕಿನವಗೆ ಕ್ರಾಂತಿ,
ಐಶಾರಾಮ ನಡೆಸಿದವನಿಗೆ ಕೀರ್ತಿ!
ನಾದ, ಸಂಗೀತ ಸರ್ವಗೆ ಸ್ಪೂರ್ತಿ
ಕಲಿ ನೀ ಶುದ್ಧವಾದ ನೀತಿ, ಪ್ರೀತಿ!
@ಪ್ರೇಮ್@
28.01.2020

1471.ಶಿಶುಪ್ರಾಸಗಳು

ಶಿಶುಪ್ರಾಸ

ನಾಯಿ ಬಂದಿತು
ಊಟ ತಿಂದಿತು
ಆಚೆ ಈಚೆ ನೋಡಿತು
ಓಡಿ ಹೋಯಿತು

ಬೆಕ್ಕು ಬಂದಿತು
ತಟ್ಟೆ ನೋಡಿತು
ಹಾಲು ನೆಕ್ಕಿತು
ಮ್ಯಾವ್ ಎಂದಿತು

ಕೋಳಿ ಬಂದಿತು
ಕೊಕ್ಕೋ ಎಂದಿತು
ಕೆಸರ ಕೆದಕಿತು
ಹುಳವ ತಿಂದಿತು..

ಹಾವು ಬಂದಿತು
ಬುಸ್ ಎಂದಿತು
ಮೊಟ್ಟೆಯೆಲ್ಲಾ ನುಂಗಿತು
ಮೆಲ್ಲ ಜಾರಿ ಹೋಯಿತು..
@ಪ್ರೇಮ್@
19.06.2020

ಗುರುವಾರ, ಜೂನ್ 18, 2020

1479. 2 ಟಂಕಾಗಳು

ಟಂಕಾ-1

ಮನದೊಳಗೆ
ಏನ ಬಚ್ಚಿಟ್ಟಿರುವೆ
ಮೌನ ಪುತ್ರನೇ
ಹೊರಗೆಡಹು ಎಲ್ಲ
ಆಗಲಿ ಬೇವಿಬೆಲ್ಲ

ಟಂಕಾ-2

ನೃತ್ಯಶಾಲೆಯು
ಜಗದಿ ನಲಿಯೋಣ
ಮುದದಿ ಬಾಳು
ಹೋಗಲಿದೆ ಒಮ್ಮೆ
ಬಂದ ದಾರಿ ಹುಡುಕಿ..
@ಪ್ರೇಮ್@
24.05.2020

1477. ತಪ

ಸುಲಭವಿಲ್ಲ ..

ತಪವ ಮಾಡ ಹೊರಟು ತನು
ತಡೆಯಲಾರ ಇಹದ ದಾಹ
ತಡೆಯದಾದ ಸುಖದ ಭಾವ
ತಡವರಿಸಿದ ಮಂತ್ರೋಚ್ಛಾರ
ತಪ್ಪು ತಪ್ಪು ವಕ್ರ ವಕ್ರ  ಗಮನ

ತೋರ್ಪಡಿಸದೆ ಸುಮ್ನೆ ಕುಳಿತ
ತಳಮಳವು ಮೈ ಮನದೊಳು
ತಡೆಯದಾದ ತಾಕಲಾಟಗಳನು
ತೋಳ ಗಟ್ಟಿ ಹಿಡಿದು ತಮ್ಮ
ತಳ್ಳ ತೊಡಗಿದ ಕ್ಷಣಗಳನು

ತಪಸ್ಸು ನೇರ ಹೋಗದೆ ಓರೆಯಾಯಿತು
ತಮಸ್ಸು ಬರದೆ ಕುಳಿತದ್ದು ಸುಮ್ಮನಾಯಿತು
ತಿನ್ನುವಂಥ ಜೀವವದು ಉಪವಾಸ ಇರುವುದೇ?
ತಪವು ಕುಳಿತುಕೊಂಡ ಹಾಗೆ ಸುಲಭವಿರುವುದೇ?

ತಪವ ಬಿಟ್ಟು ಓಡಿಹೋಗಿ ಮನೆಯ ಸೇರಿದ
ತಪವು ಎನಗೆ ಬೇಡವೆನುತ ತಾನೇ ಹೇಳಿದ
ತಮಾಷೆ ಮಾಡಿ ನಕ್ಕ ಹಾಗೆ ಅಲ್ಲ ಜೀವನ.
ಪ್ರತಿ ಕಾರ್ಯಕೂ ಕಠಿಣ ನಿರ್ಧಾರ ಬೇಕಿದೆ
ತತ್ವವರಿತು ಪಾಲಿಸುತ ಬಾಳಬೇಕಿದೆ.
@ಪ್ರೇಮ್@
26.05.2020

1476. ಊರು

ಊರು

ಆ ಊರೇ ವಿಚಿತ್ರ. ನಾಲ್ಕು ಸುತ್ತಲೂ ಕಾಡು, ಎತ್ತರದ ಪರ್ವತ. ಯಾರೂ ಊಹಿಸಲಾರದ ಊರದು. ಬಹಳ ಹಿಂದಿನ ಕಾಲದಲ್ಲಿ ಕಾಡಿನ ಮಧ್ಯೆ ಸಮತಟ್ಟಾದ ಆ ಜಾಗದಲ್ಲಿ ಆನೆಗಳು, ಹುಲ್ಲು ತಿನ್ನುವ ಪ್ರಾಣಿಗಳೇ ವಾಸಿಸುತ್ತಿದ್ದವಂತೆ. ಅಲ್ಲಿಗೆ ಜನರು  ಯಾರೂ ಹೋಗದ ಕಾರಣ, ಊರಿಗೆ ಅಲ್ಲಿನ ಆನೆಗಳು ಕೆಲವೊಮ್ಮೆ ನುಗ್ಗುವ ಕಾರಣ ಜನ ಆ ಊರಿಗೆ "ಆನೆಕಾಡು" ಎಂದೇ ಹೆಸರಿಟ್ಟರು.

  ಆದರೆ ಕಾಲಾನಂತರ ಜನರು ವಾಸಿಸದ ಜಾಗವಾವುದು ಹೇಳಿ? ಒಂದು ಕುಟುಂಬ ಅಲ್ಲಿ ಹೋಗಿ ಬೇರು ಬಿಟ್ಟಿತು. ಅಣ್ಣ ತಮ್ಮಂದಿರಲ್ಲಿ ಜಗಳವಾಗಿ ಮೂರು-ನಾಲ್ಕು ಮನೆಗಳಾದವು. ಅವರ ಮುಂದಿನ ತಲೆಮಾರಿನಲ್ಲಿ ಹತ್ತು-ಹನ್ನೆರಡಾಗಿ ತದನಂತರ ನಲವತ್ತು ಮನೆಗಳಾದವು. ಆದರೆ ಇಂದಿಗೂ ಅಲ್ಲಿಗೆ ಸರಿಯಾದ ರಸ್ತೆಗಳಿಲ್ಲ, ಮೊಬೈಲ್ ನೆಟ್ವರ್ಕ್, ಟವರ್ ಗಳಿಲ್ಲ. ಕುಡಿಯಲು ಕಾಡ ನೀರು. ತಿನ್ನಲು ಮನೆ ಸುತ್ತ ಬೆಳೆದ ಹಣ್ಣು, ತರಕಾರಿ, ಗೆಡ್ಡೆ ಗೆಣಸುಗಳೇ. 

  ಜನರಾದರೂ ತುಂಬಾ ಸ್ವಾಭಿಮಾನಿಗಳು, ಕಷ್ಟ ಸಹಿಷ್ಣುಗಳು, ತೋಟ ಗದ್ದೆಯೆಂದು ತಮ್ಮಷ್ಟಕ್ಕೆ ತಾವು ತುಂಬಾ ಸಂತಸ ಸಹಕಾರದಿ ಬದುಕುವವರು. ತಮ್ಮ ಮಕ್ಕಳನ್ನು ದೂರದ ಒಳ್ಳೆಯ ಶಾಲಾ ಕಾಲೇಜುಗಳಲ್ಲಿ ಓದಿಸಿ ನಗರಗಳಿಗೆ ಕೆಲಸಕ್ಕೆ ಕಳುಹಿಸಿದವರು. ಪ್ರತಿ ಕೂಳಿಗೂ ಕಷ್ಟಪಟ್ಟವರು.
  ದೇವರು ನೊಂದುಕೊಂಡರೋ, ಹೊಟ್ಟೆಕಿಚ್ಚು ಪಟ್ಟರೋ ಗೊತ್ತಿಲ್ಲ, ವರುಣನ ಅಟ್ಟಹಾಸ ಮಲೆನಾಡಿಗೆ ತಟ್ಟಿ, ಅದರೊಡನೆ ಆನೆಕಾಡಿನ ಜನರಿಗೂ ತಟ್ಟಿತು. ಭೂಕಂಪದ ಅನುಭವವಾಗಿ, ಗುಡ್ಡ ಸೀಳಿ ಹಲವಾರು ಜನರ ಮನೆ,ಆಸ್ತಿ ಪಾಸ್ತಿಗೆ ತೊಂದರೆಯುಂಟಾಗಿ ಜನಗಳು ಗಂಜಿ ಕೇಂದ್ರಗಳ ಸೇರುವಂತಾಯ್ತು. ದನ ಕರುಗಳಿಗೂ ಕಷ್ಟವಾಯ್ತು. ಮಳೆ ಕಡಿಮೆಯಾಗಲು ಜನ ತಮ್ಮ ಮನೆಗಳಿಗೆ ತೆರಳಿ ಮತ್ತೆ ಜೀವನ ಪ್ರಾರಂಭಿಸಿರುವರು. ಕಾರಣ ಉತ್ತಮ ಮನ, ದುಡಿದು ಬದುಕುವೆವೆಂಬ ಛಲ..
@ಪ್ರೇಮ್@
27.05.2020

1475. ಮಾತೆ

ಭಾವಗೀತೆ

ಮಾತೆ

ಸನಿಹದಲು ದೂರದಲು ನೀನನ್ನ ಮನವೇ
ಬಾಚಿ ತಬ್ಬದಿದ್ದರೂ ಪ್ರಿಯ ನಿನ್ನ ಗುಣವೇ

ಅಕ್ಷರವ ಕಲಿತಿಲ್ಲ, ಪ್ರೇಮ ಪಾಠವ ತಿಳಿದಿಹೆ
ಬದುಕೆಂದರೇನೆಂಬ ಪಾಠ ನೀ ಕಲಿಸಿರುವೆ
ತೊದಲು ಮಾತನು ನನಗೆ ಸರಿಪಡಿಸಿ ಹೇಳಿರುವೆ.
ಬಿದ್ದು ಅತ್ತಾಗ ಎತ್ತಿ ಮುದ್ದಾಡಿರುವೆ

ಕಾಯಕವೇ ಕೈಲಾಸ ಎಂಬ ಮಾತನು ಉಳಿಸಿ
ಕೆಲಸ ಕಾರ್ಯದ ನಡುವೆ ಪೊರೆದೆನ್ನ ಸಾಕಿರುವೆ
ತನ್ನದೆನ್ನುವ ಸಕಲ ಆಸೆಗಳ ನೀ ಮರೆತು
ಮಗುವ ಜೀವನಕೆಂದು ಸರ್ವವನು ಮುಡುಪಿಡುವೆ..

ಬಾಳ ಬಾಂದಳದಲ್ಲಿ ಸೂರ್ಯ ಚಂದ್ರರ ಬೆಳೆಸಿ
ಹಲವು ತಾರೆಗಳಿಗೂ ನೀನಾಸರೆಯ ನೀಡಿರುವೆ
ಮೋಸ ವಂಚನೆಯೆಂಬ ಪದವ ಮರೆತಿರುವೆ
ಪ್ರೀತಿ ತುತ್ತನು ನೀಡಿ ಸಂಸಾರ ನಡೆಸಿರುವೆ..
@ಪ್ರೇಮ್@
28.05.2020

1474. ರುಬಾಯಿ

ರುಬಾಯಿ

ಮಾತೆಂದರೆ ಬೆಲೆ ಬಾಳುವ ಮುತ್ತು
ಹಲವರ ಮಾತು ಅವರಿಗೆ ತುತ್ತು!
ಮಾತು ಮೌನವಾದರೆ ಕಣ್ಣೀರ ನೋವು
ಮಾತು ಕತ್ತರಿಸದಿರಲಿ ಹಲವರ ಕತ್ತು!!
@ಪ್ರೇಮ್@
28.05.2020

1473. ಅಪ್ಪನೆಂಬ ಪಾತ್ರ

ಅಪ್ಪನೆಂಬ ಪಾತ್ರ

ಅಮ್ಮ ದುಡಿದು ಅಪ್ಪನಂತೆ
ನಮ್ಮ ಸಾಕಿದಾಗ ಸಪ್ಪಗಿದ್ದು
ತನ್ನ ಕೆಲಸ ತಾನು ಮಾಡುತ

ದನವ ಕಟ್ಟಿ ಹಾಲ ಕರೆದು
ಹುಲ್ಲು ಹಾಕಿ ನೋಡಿಕೊಳುತ
ಹಾಲು ಮಾರಿ ಬಂದ ಹಣದಿ
ಹಸುವ ಸಾಕಿ ಮೆರೆಸುತ

ಪಾಪದ ಮನುಜಗೇನು ತಿಳಿಯದು
ತನ್ನ ಸಂಸಾರ ಮಕ್ಕಳಿಗೆಲ್ಲ
ನಾನೇನಾದರೂ ಮಾಡಬೇಕೆಂಬುದ
ಕಷ್ಟಪಟ್ಟು ಜನರಿಗೆಲ್ಲ ಹಾಲಕುಡಿಸಿ
ಕಷ್ಟವೆಂದೊಡೆ ಹಣವ ಬಿಟ್ಟು
ಜಗವ ಸಾಕಿದಂಥ ಅಪ್ಪ!

ಏನೆನಲಿ? ಮಗಳ ಮದುವೆಯಾದ ಬಳಿಕ
ಮಗುವಿನಂತೆ ಅತ್ತು ಕರೆದು
ನಾನು ಏನೂ ಮಾಡಲಿಲ್ಲ
ಎನುವ ಕೊರಗು ಕೊನೆಗೆ ಹರಿದು
ಪ್ರಾಣ ಬಿಡುವ ಸಮಯದಲ್ಲಿ
ಮಗಳಿಗಾಗಿ ಕೊರಗಿ ಕೊರಗಿ
ನೋಡಲಾರದೇನೆ ಮರುಗಿ 
ಕೊನೆಯುಸಿರ ಎಳೆದರು..

ನೋಡಲಾರದಂಥ ಸ್ಥಿತಿಯು
ಹೆರಿಗೆಗಿನ್ನು ಹಲವು ದಿನವು
ಜೀವವಿರುವ ಅಪ್ಪನ ಮುಖ
ನೋಡುವ ಯೋಗ ಕಳೆದುಕೊಂಡೆನು
ಡೈರಿಯಲ್ಲಿ ಎಲ್ಲ ಬರೆದು
ಮನದ ನೋವ ಬಿಚ್ಚಿಟ್ಟೆನು
ಬಂದ ಗಂಡ ಏನೋ ಕೋಪದಿ
ಡೈರಿ ಸುಟ್ಟು ಬಿಟ್ಟರು
ಅಪ್ಪನ ನೆನಪ ಪದಗಳೂ 
ಅಪ್ಪನ ಹಿಂದೆ ಸುಟ್ಟು ಹೋದವು..
@ಪ್ರೇಮ್@
29.05.2020