ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-12
ಹೊಸ ವರುಷದ ಹೊಸ ಹಬ್ಬ ಸಂಕ್ರಾಂತಿ ಮುಗಿದಾಯ್ತು. ಇನ್ನು ಸಂಕ್ರಾಂತಿಯ ಬಗ್ಗೆ ಮಾತೇಕೆ ಅಂತಾನಾ? ಅಲ್ಲೆ ಇರೋದು! ಎಲ್ಲಾ ತಿಂಡಿಗಳು, ಹಬ್ಬಗಳು ಅಲ್ಲದೇ ಮನುಷ್ಯರೂ ಕೂಡಾ ಕಾಲಕ್ಕೆ ತಕ್ಕ ಹಾಗೇ ಬದಲಾಗಬೇಕು, ಹೊಸತನದೊಂದಿಗೆ ತನ್ನತನ ಬೇಕೆಂಬುದ ಸಾರುವುದಿಲ್ಲವೇ ಈ ಹಬ್ಬಗಳು?
ಉದಾಹರಣೆಗೆ ಸಂಕ್ರಾತಿಯನ್ನೇ ತಗೊಳ್ಳಿ, "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಇದು ಹಕ್ಕು ಸಂಕ್ರಾಂತಿ ಹಬ್ಬಕ್ಕೆ. ದ್ಯೇಯ ವಾಕ್ಯವಿದ್ದಂತೆ. ಹಾಗೊಂದು ನಿಮ್ಮದೇ ಆದ ದ್ಯೇಯ ವಾಕ್ಯ ನಿಮ್ಮ ಬದುಕಿನಲ್ಲಿದೆಯೇ? ಇರದಿದ್ದರೆ ಇಂದೇ ಬೆಳೆಸಿಕೊಳ್ಳಿ.
ನನಗಾಗಿ ಒಂದು ವಾಕ್ಯ ನಾನೇ ರೂಪಿಸಿಕೊಂಡಿರುವೆ. ಅದೆಂದರೆ, "ಪರರಿಗೆ ಸಾಧ್ಯವಾದರೆ ಸಹಾಯ ಮಾಡು, ಇಲ್ಲವಾದರೆ ಸುಮ್ಮನಿರು ಪ್ರೇಮ್, ಉಪದ್ರವಂತೂ ಮಾಡಲು ಹೋಗದಿರು. ನಮ್ಮಿಂದ ಪರರಿಗೆ ನೋವಾಗಬಾರದು. ಆದರೆ ಅವರಾಗಿ ಅವರೇ ಕೆಣಕಲು ಬಂದಾಗ ಬುದ್ಧಿ ಕಲಿಸದೆ ಇರಲಾಗದು. ತಪ್ಪು ಮಾಡದಿದ್ದರೆ ಈ ಪ್ರಪಂಚದಲ್ಲಿ ಯಾರಿಗೂ ಹೆದರಬೇಕಿಲ್ಲ. ನಿನ್ನ ಜೀವನದ ಸೂತ್ರದಾರಿ ನೀನೇ.." ಹೀಗೆ. ಮತ್ತೂ ಜೀವನಾನುಧವ ಪಡೆದ ಹಾಗೇ ವಾಕ್ಯಗಳು ಸೇರುತ್ತಾ ಹೋಗುತ್ತವೆ.
ಪ್ರತಿಯೊಬ್ಬರ ಜೀವನ ತುಂಬಾ ಅಮೂಲ್ಯ, ಹಾಗೂ ಅವರ್ಣನೀಯ. ಯಾರೇ ತಮ್ಮ ಆತ್ಮ ಚರಿತ್ರೆ ಬರೆದರೂ ಕನಿಷ್ಠ ಪಕ್ಷ ಒಂದು ಅಧ್ಯಾಯವನ್ನಾದರೂ ಅದರಿಂದ ತೆಗೆದಿರುತ್ತಾರೆ. ಕಾರಣ ಅವರು ಇತರರೊಡನೆ ಹೇಳಿಕೊಳ್ಳಲಾಗದಂತಹ, ಹೇಳಲೇ ಬಾರದಂತಹ ಕೆಲವು ತನ್ನಲ್ಲೇ ಸಂಗ್ರಹಿಸಿ ಇಟ್ಟುಕೊಳ್ಳಬಲ್ಲ ಕೆಲಸ ಮಾಡಿರುತ್ತಾರೆ, ಇದು ಖಂಡಿತಾ. ಆದಕಾರಣ ಆತ್ಮಕಥನ ಯಾವತ್ತೂ, ಯಾರದ್ಗೂ ಕಂಪ್ಲೀಟ್ ಅಲ್ಲವೇ ಅಲ್ಲ ಅಲ್ವಾ?
ಪ್ರತಿಯೊಬ್ಬರ ಜೀವನದಲ್ಲಿ ಯುಗಾದಿಯ ಬೇವು-ಬೆಲ್ಲ, ಸಂಕ್ರಾಂತಿಯ ಎಳ್ಳು-ಬೆಲ್ಲ ಗಣೇಶ ಹಬ್ಬದ ಲಡ್ಡು, ಕಡುಬು ಇದ್ದೇ ಇದೆ. ನಗು ಮತ್ತು ಕಣ್ಣೀರು ದುಡ್ಡು -ಕಾಸು, ಆಸ್ತಿ-ಅಂತಸ್ತನ್ನು ನೋಡಿ ಬರುವುದಿಲ್ಲ, ಅವುಗಳಿಗೆ ಜಾತಿ-ಮತ-ಧರ್ಮದ ಹಂಗೂ ಇಲ್ಲ. ಮಾನವನ ದುರಾಸೆ ಕಡಿಮೆ ಇರಬೇಕು ಅಷ್ಟೆ!
ನಮ್ಮ ಜೀವನದಲ್ಲೂ ಹಬ್ಬಗಳ ವಿಶೇಷತೆಯಂತೆ ಒಂದು ವಿಶೇಷತೆಯಿರಲಿ, ದ್ಯೇಯ ವಾಕ್ಯವಿರಲಿ, ಪರರಿಗಾಗಿ ಮಿಡಿತವಿರಲಿ, ಶಿಸ್ತು-ಸಂಯಮ-ಕನಸು-ಗುರಿಗಳಿರಲಿ. ನಮ್ಮಿಂದ ಪರರಿಗೆ ನೋವಾಗದಿರಲಿ. ನೋವು ಕೊಡುವವರ ಕಡೆ ನಾವು ಸಾಗದಿರಲಿ. ಆಗ ಮಾನವ ಜನ್ಮ ಸಾರ್ಥಕವಾದೀತು. ನೀವೇನಂತೀರಿ?
@ಪ್ರೇಮ್@
19.01.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ