ದೇಶಕ್ಕೆ ನನ್ನ ಕೊಡುಗೆ
ದೇಶಕ್ಕಾಗಿ ನನ್ನ ಕೊಡುಗೆ ಬಹಳ ಚಿಕ್ಕ ಬಲ್ಲಿರೇನು?
ತನ್ನ ಪೊರೆದ ಭಾರತಿಗೆ ನಾನು ಋಣಿಯು ಅಲ್ಲವೇನು?
ಪರರಿಗೇನು ಕೊಡದೆ ಹೋದ್ರೂ ಅವರಿಗೆಂದು ದ್ರೋಹ ಬಗೆಯೆ
ಸೇನೆಯಲ್ಲಿ ದುಡಿಯದಿದ್ರೂ ಸೈನಿಕರನು ಗೌರವಿಸುವೆ.
ಊರ ಕಸವ ಗುಡಿಸದಿದ್ರೂ ಮಾರ್ಗಕೆಂದೂ ಕಸವನೆಸೆಯೆ
ಮನೆಯ ಕಸವ ದಿನವೂ ಸುಟ್ಟು ಪ್ರಕೃತಿ ನಾಶ ಮಾಡದಿರುವೆ..
ಹಲವು ಮನವ ನೋಯಿಸದೆ ತನ್ನಷ್ಟಕ್ಕೇ ಬದುಕುತಿರುವೆ
ಜಗಳವಾಡದೇನೆ ಗೆಳೆಯರಿಗೆ ಸಹಾಯ ಮಾಡುತಿರುವೆ..
ಕಲಹಕ್ಕೆಂದು ಹೋಗದೇನೇ ನೆಮ್ಮದಿಯನು ಕಾಣುತಿರುವೆ
ಹಲವು ಜನರ ಬಾಳಿನ ಕಣ್ಣೀರನು ತಡೆದಿರುವೆ..
ಮುಂದಿನ ಪ್ರಜೆಗಳ ಮನವ ಸರಿಯಾಗಿ ತಿದ್ದುತಿರುವೆ
ಹಿಂದಿನ ನನ್ನ ತಪ್ಪುಗಳ ನನ್ನೆ ನಾನು ಸರಿಪಡಿಸಿಕೊಳುವೆ
ತಪ್ಪು ತಿದ್ದಿ ಒಪ್ಪು ಮಾಡಿ ಹೇಳಿ ಸಹಕರಿಸುತಿರುವೆ
ಮಾತೃಭಾಷೆಗಾಗಿ ಅಲ್ಪ ಕೆಲಸವನ್ನು ಮಾಡುತಿರುವೆ..
@ಪ್ರೇಮ್@
30.11.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ