ದುಡುಕುತನ
ದುಡುಕುತನದಿ ಕೆಡಲು ಬೇಡ
ಕಟುಕನಾಗಿ ಬದುಕ ಬೇಡ
ಜಡವ ಮರೆತು ಬಾಳ ಬೇಕು
ಎಡವದೇನೆ ಬೆಡಗು ಬಾಳು..
ಮೊಡವೆಯಂಥ ನೋವು ಬಹಳ
ಕಡವೆಯಂತೆ ಓಡ ಬೇಕು
ತಡವು ಏಕೆ ಬೆಳೆವ ಮನಕೆ?
ಬೆಡಗಿಯಂತೆ ಬಾಳು ಕ್ಷಣಕೆ..
ಪಡೆದ ಪುಣ್ಯ ಏನೊ ಎನಿತೊ
ಸುಡುವ ಸೂರ್ಯ ತಲೆಯ ಮೇಲೆ
ದಡಕೆ ಸೇರಲುಂಟು ದಿನವು
ಅಡಿಗೆ ಮಾಡಿ ಬದುಕೊ ಜನವು..
ಬಡಿಗೆ ಹಿಡಿದ ಬಾಳು ಶೂನ್ಯ
ಹೆಡಿಗೆ ತುಂಬ ಖುಷಿಯು ಮಾನ್ಯ
ಬಡಗಿಯಂತೆ ಕಾರ್ಯ ಬಹಳ
ಮಡಿಯೆ ರಥದ ಬೀಳು ಕೊನೆಗೆ!
@ಪ್ರೇಮ್@
24.11.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ