ಜಾರಿ ಬಿದ್ದ ಜಾಣೆ
ಜಾರಿ ಬಿದ್ದ ಜಾಣೆ ಮನದಿ ಕುದಿಯುತಿಹಳು ವೇಗದಿ
ಕಾಲು ಮುರಿದುಕೊಂಡು ತಾನು ಕುಂತಿಹಳು ಬೇಸರದಿ
ಪಾಲು ಕೇಳಲೆಂದು ಹೋಗಿ ಸಿಗದೆ ನೊಂದುಕೊಂಡಳು
ನೂಲುವುದನು ಕಲಿತು ತಾನು ಹೊಸತು ಹೊಲಿದುಕೊಂಡಳು
ಕೋಲು ಹಿಡಿದು ಆಟವಾಡಿ ಎಲ್ಲ ಗೆದ್ದುಕೊಂಡಳು
ಬೋಳು ಮಂಡೆಯನ್ನು ಕೇಳ ಹೋಗಿ ತಾನೇ ಜಾರಿ ಬಿದ್ದಳು..
ಮಾನ ಮರ್ಯಾದೆಗಂಜಿ ಮನೆಯ ಒಳಗೆ ಕುಳಿತಳು
ಬಾಣ ಮಾತ ಭಯಕೆ ಹೆದರಿ ಅಡಿಗೆ ಮನೆಯ ಹೊಕ್ಕಳು
ಕೋಣನಂಥ ಗಂಡನಿಗೆ ಮಾಡಿ ತಿನಿಸುತಿದ್ದಳು
ನಾನಾ ನೀನಾ ಎನುತಲಿದ್ದ ಅವನ ಬುದ್ಧಿಗಂಜಿದಳು!
ನಿಂತು ಕುಂತು ಕಷ್ಟವನ್ನು ತಾನು ಸಹಿಸದಾದಳು
ದುಡಿದು ದುಡಿದು ಜೀವ ತೇದಿ ಬಸವಳಿದು ಬಿಟ್ಟಳು
ಮನದ ಮಾತು ಕೇಳಿ ನೊಂದು ದೃಢ ನಿರ್ಧಾರಕೆ ಹೊರಟಳು
ಹೊರಗೆ ದುಡಿದು ಬದುಕುತಲಿ ತನ್ನ ಛಲವ ಮೆರೆದಳು.
@ಪ್ರೇಮ್@
30.11.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ