ಗಿಡನೆಡು
ಪರಿಸರ ಉಳಿಸುವ ಪಣತೊಡು ಮನುಜನೆ
ಬೆಳೆದಿಹ ಹಸಿರನು ಬಿಟ್ಟುಬಿಡು ಅನುಜನೆ
ಗಿಡಮರ ನಿನಗದು ಮೋಸವ ಮಾಡದು
ನೆಡುತಲಿ ಬೀಜವ ಸ್ವರ್ಗವು ಬರುವುದು..
ಕತ್ತರಿಸಿ ಬಿಸಾಕೋ ಮಾನವ ಮರಗಳ
ಅಗಲದ ರಸ್ತೆಯ ನಿರ್ಮಿಸ ಬೇಡವೇ
ನಾಡಿನ ಉದ್ಧಾರ ಆಗಲು ಬೇಡವೇ!
ತರುಲತೆ ಒಣಎಲೆ ಕಸಗಳೆ ಅಲ್ಲವೇ!
ಬದುಕಲು ಬೇಕೆಂಬ ಆಸೆಯೆನಗಿರದು
ಆದರೂ ನಾ ಮರ ಹಸಿರಾಗಿಹೆನು
ಶುದ್ಧದ ಗಾಳಿ ಅಂದದ ಮಳೆಯನು
ನಾ ತರ ಬದುಕುವೆ ಮನುಜನೆ ನೀನು!!
ಪುಟ್ಟ ಜಾಗದಲು ಮಣ್ಣು ನೀರು
ಸಿಕ್ಕರೆ ಚಿಗುರುವೆ ಬಿಟ್ಟು ಬೇರು
ಮಾನವ ಮೂರ್ಖನು ಕತ್ತರಿಸುವನಲ್ಲ
ಕಸವೆಂದು ಬಿಸುಟ ಹುಲ್ಲು ಗಿಡಗಳೆಲ್ಲ..
@ಪ್ರೇಮ್@
16.06.2020
ಸುಳ್ಯ
ದ.ಕ.
@prem@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ