ಮುಂಜಾನೆ ಮಂಜು
ಬೆಳಗಿನ ಕಳವಳ ಬೇಡವು ಎನುತಲಿ
ಭಾನಿನ ಮೌನದ ಆಗಮನ..
ತಿರೆಯಲ್ಲಿನ ಜನರ ಬದುಕಿಗೆ ಬೆಳಕನು
ನೀಡಲು ನೆಲದೆಡೆ ತಾ ಪಯಣ..
ಜೀವನವೆಂದರೆ ಉರಿಯುವ ಕಾರ್ಯವು
ಎನ್ನುವ ಸಂದೇಶ ನೀಡಿಹನು
ಉರಿಯಲು ಬೆಳಗಿರಿ ಸರ್ವರ ಬಾಳನು
ತನ್ನಯ ಕಷ್ಟವ ಮರೆಯುತಲಿ
ಮುಂಜಾನೆ ಮಂಜಿನ ಹನಿಯಿದು ತಿಳಿಯಿರಿ
ತಂಪಲಿ ಕ್ಷಣಗಳ ಕಳೆಯಲು ಆಗದು
ಉರಿಯದು ಆರಿಸಿ ಬಿಡುವುದು ಹನಿಯನು
ಪ್ರತಿ ದಿನ ಕಷ್ಟದ ದಾರಿಯಿದು..
ಮುತ್ತಿನ ಸಾಲಲಿ ಮತ್ತಿದೆ ರವಿಗೆ
ಕತ್ತಿನವರೆಗೂ ಬಿಸಿಲನೆ ಬೀರುತ
ಸೊತ್ತದು ತನಗೇ ಇರದೂ ಎಂದೂ
ಕತ್ತಲೆ ಕಳೆಯಿರಿ ಪರರ ಬಾಳಲ್ಲಿ..
ಉರಿವವ ಆರಲೆ ಬೇಕದು ಸಂಜೆಗೆ
ಉಷೆ ಕಾದಿಹಳು ನಿಶೆಗಾಗಿ
ನಾಳೆಯ ಭರವಸೆ ಪಡೆಯುತ ಬಾಳಲು
ಇಂದಿನ ದಿನವದು ಮುಕ್ತಾಯ..
@ಪ್ರೇಮ್@
25.11.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ