[6/3/2019, 5:27 PM] +91 89719 21907: *ಪ್ರೇಮ್ ಪಂಚಪದಿ* ಗಳ ಕುರಿತು...ಪ್ರೇಮ್ ಜಿ ನೀವು ಪಂಚಪದಿಯನ್ನು ತಪ್ಪಾಗಿ ಅರ್ಥೈಸಿಕೊಂಡಂತಿದೆ.ನಿಮ್ಮ ಪ್ರಕಾರ ಪಂಚಪದಿ ಅಂದರೆ ಐದು ಪದಗಳ ಒಂದು ಸಾಲು ಅಂದುಕೊಂಡಂತಿದೆ.ಆದರೆ ನಿಯಮದ ಪ್ರಕಾರ ಒಂದು ಸಾಲಿನಲ್ಲಿ ಆರು ಪದಗಳಿದ್ದು ಐದು ಸಾಲುಗಳ ಬರಹಗಳು ಇರಬೇಕು ಅಂತ ಅರ್ಥ.ಇರಲಿ ನಿಮ್ಮಯ ಐದು ಪಂಚಪದಿಗಳು ಅಮೋಘ ಹಾಗೂ ಅರ್ಥಪೂರ್ಣ. ಮೊದಲ ಎರಡು ಪಂಚಪದಿಗಳಲ್ಲಿ ಅವಳು ವನಸಿರಿಯಾಗಿ ಹಸಿರಿನ ಸಿರಿಯನ್ನು ಬಿಂಬಿಸುವಲ್ಲಿ ಅವಳು ಕಂಗೊಳಿಸಿದ್ದಾಳೆ.ನನಗೆ ಮೆಚ್ಚುಗೆಯಾದ ಸಾಲೆಂದರೆ *ಅವಳೆಂದರೆ ತಾಳ್ಮೆಯ ಮೂರ್ತಿ ಸಹನೆಯ ಕಾಂತಿ*..ನಿಜ ಸಹನೆಯಲ್ಲಿ ಅವಳಿಗೂ ಅವನಿಗೂ ಯಾವಾಗಲೂ ಪೈಪೋಟಿ ಅದರಲ್ಲಿ ಸದಾ ಗೆಲುವನ್ನು ಪಡೆದವಳೆಂದರೆ ಅವಳೆ ಅವಳು..ನಿಜ ಜಗದಲ್ಲಿ ಅವಳಿಗಿರುವಷ್ಟು ತಾಳ್ಮೆ ಯಾರಿಗೂ ಇಲ್ಲ..ಜೀವವಿರುವ ಅವಳೆಲ್ಲಿ.ನಿರ್ಜೀವವಾದ ಅವನಿಯಲ್ಲಿ...ಅವಳು ಪಡುವಷ್ಟು ಕಷ್ಟ,ನೋವು, ಸಂಕಟ,ಆತಂಕ, ದುಗುಡ ಜಗದ ಯಾವ ಜೀವಿಯೂ ಅನುಭವಿಸಿರಲಾರದು..ಅದಕ್ಕೆಂದೆ ಅವಳು ತಾಳ್ಮೆ ಯಲ್ಲಿ ಒಂದು ಅವನಿಗಿಂತಲೂ ಒಂದು ಕೈ ಮೇಲು.ಸಹನೆಯಲ್ಲಿ ಅವಳಿಗೆ ಅವಳೇ ಸಾಟಿ.ಇಲ್ಲದಿದ್ದರೆ. ಈ ಜಗ ಇಷ್ಟೊಂದು ಸುಂದರವಾಗಿರುತ್ತಿರಲಿಲ್ಲ.......ನಗು ನಗುತ ಇರಲಿಲ್ಲ.. ಮನ ಮಿಡಿದ ಸಾಲುಗಳು. ..ತಪ್ಪಾಗಿದ್ದರೆ ಕ್ಷಮಿಸಿ.. ಶುಭಸಂಜೆ
[6/3/2019, 6:14 PM] Wr Sham Prasad Bhat: *ಪ್ರೇಮ್*
*ವನಸಿರಿಯಾದ ಅವಳ ಹಸಿರುಸೀರೆ ಮನುಜನಿಂದ ಹರಿದುಹೋಗಿದೆ*
ಪರಿಸರದಲ್ಲಿ ಮಾನವ ಹಸ್ತಕ್ಷೇಪ ಮಿತಿಮೀರಿದೆ ಅನ್ನೋದನ್ನು ಚಿಕ್ಕ ಚೊಕ್ಕ ವಾಕ್ಯದಲ್ಲಿ ತಿಳಿಸಿಕೊಡುವ ಶೈಲಿ ಮೆಚ್ಚುಗೆ ಆಯ್ತು..
ಕ್ರಮಸಂಖ್ಯೆ ಕೊಟ್ಟ ವಾಕ್ಯಗಳನ್ನು ಬರೆಯಲು ಸೂಚಿಸಲಾಗಿತ್ತು..
ಉತ್ತಮ ಗುಣಮಟ್ಟದ ವಾಕ್ಯಗಳನ್ನು ಓದಿಸಿರುವಿರಿ.
ಧನ್ಯವಾದಗಳು
*ಶ್ಯಾಮ್ ಪ್ರಸಾದ್*
[6/4/2019, 7:00 AM] Wr Shivaprasad Aradhya: ಪ್ರೇಮ ಕವಯತ್ರಿ ಈಗಾಗಲೇ ಚೆನ್ನಾಗಿ ನುರಿತ ಕವಿ.ಬಹಲ ಚೆನ್ನಾಗಿ ಬರೆಯುತ್ತಾರೆ.ಕವಿಗೋಷ್ಟಿಗೆ ಮಂತ್ರಾಲಯ ದಾರವಾಡವಾದರೂ ಸರಿ ಬೆಂಗಳೂರಾದರೂ ಸರಿ.ಸಧ್ಯ ಇವರ ಪತಿ ರಾಯ ಕವಿಯತ್ರಿಯ ಉಪಟಳ ಸಹಿಸಿ ಈ ಮಟ್ಟದಲ್ಲಿ ತಂದಿದ್ದಾರೆ ಧನ್ಯವಾದಗಳು ಅಭಿನಂದನೆಗಳು ಸಾರ್.ಹಕವಾರು ಪ್ರಶಸ್ತಿ ವಿಜೇತೆ ಇವರು.
ಹೃದಯ
ಹೃದಯದ ಗುಡಿಯಲಿ ಲಿಂಗದಂತೆ ನಿನ್ನನಿರಿಸಿ ಭಕ್ತಿ-ಪ್ರೀತಿರಸದಿ ಅಭಿಷೇಕಕಣಿಗೊಳಿಸಿರುವೆ!
ಹೌದೇನರೀ ನಿಮ್ಮವರನಾ ಭಲೇ
ಪುಟ್ಟ ಹೃದಯದ ಅಟ್ಟದಲ್ಲಿರುವ ಭಾವನೆಗಳನರಸಿ ಕಟ್ಟಿ ಮಾಲೆಯಾಗಿಸಿರುವೆ!
ಆಹಹಾ ಭಾವನೆಗಳನ್ನು ಪೋಣಿಸುವ ನಿಪುಣೆ ಕವೀರೀ. ೨
ಹೃದಯವ ಅಗೆದು ಪ್ರೀತಿ ನೀರನು ಪಡೆಯೆ ಸುಸ್ತಾದೆ!
ಹೃದಯದಲ್ಲಿ ಬಾವಿ ತೋಡಬೇಡಿ ನಿವೇ ನದಿಯಾಗಿಬಿಡಿ ೩
ಅವಳ ಪ್ರೀತಿಯ ನುಡಿಕೇಳಿ ಗುಂಡಿಗೆ ಬಿದ್ದೆಯಾ ಹೃದಯಾ?೪
ಯಾವಳವಳು ಓಹೋ ಕರಡಿ
ಮುತ್ತು-ರತ್ನ-ಹವಳ-ಬಂಗಾರದಲಿ ಸಿಂಗರಿಸಲಿಲ್ಲ ಹೃದಯವನು!
ಮತ್ತೆ ಕಾವ್ಯ ಸಿರಿ ಬಳಸಿ ಸಿಂಗರಿಸಿ ಒಲವಲಿ ಸಿಂಗರಿಸಿ ೫
@ಪ್ರೇಮ್@
04.06.2019ಹೀಗೇ ಬರೆಯುತ್ತಿರಿ ಶುಭವಾಗಲಿ ಸೋದರಿ ಶುಭವಾಗಲಿ
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
[6/4/2019, 3:48 PM] Wr Sreemati Joshi: ಪ್ರೇಮ ಜಿ.. ನಿಮ್ಮ ವಾಕ್ಯ ಸೂಪರ್. ಎರಡನೇ ವಾಕ್ಯ ಚೆಂದವಾಗಿ ಒಳಾರ್ಥ ದಿಂಡ ಕೂಡಿದೆ... ನಿಜ ಪ್ರೀತಿಯ ಮಾಲೆ ಎಲ್ಲೆ ಇರಲಿ ಅರಸಿ ಕತ್ತಲೆ ಬೇಕು....👌
[6/5/2019, 1:51 PM] Tr Ramesh: ಪ್ರೇಮ್ ಅವರ ಕತ್ತಲೆ ಕುರಿತ ಪಂಚಪದಿಗಳು ಅರ್ಥಗರ್ಭಿತವಾಗಿ ಮೂಡಿ ಬಂದಿವೆ.
ಮನದ ಕತ್ತಲೆ ಕಳೆದರೆ ಮನೆದೀಪ ತಾನಾಗೇ ಉರಿವುದು! ಇಷ್ಟವಾಯಿತು.
ವಂದನೆಗಳು🙏
[6/7/2019, 10:24 AM] Wr Kumar Chalawadi: 🌿ಪ್ರೇಮ್ ರವರು ಜಿದ್ದಿಗೆ ಬಿದ್ದವರಂತೆ
ಒಳ್ಳೊಳ್ಳೆಯ ಪಂಚ್ ಗಳ ಪಂಚಪದಿ ನೀಡಿದ್ದಾರೆ.ಎಲ್ಲವೂ ಚೆನ್ನು! " ನಿನ್ನ ಮೇಲಿನ ಪ್ರೀತಿಯೆಷ್ಟೆಂದರೆ ಸತ್ತಮೇಲೂ ಚಿತೆಯೊಟ್ಟಿಗಿರಲಿ" ಭಾವುಕ ಬರಹ! ಕಾದಂಬರಿಗೆ ಬೇಕಾದ ವಿಷಯ ಅದು!
ದೂಸರಾ ಮಾತೇ ಇಲ್ಲ! ಎಲ್ಲವೂ ಮನನೀಯ ನುಡಿಗಳು!👌💐
[6/7/2019, 10:25 AM] Nybr Pramila: ನಿನ್ನ ಮೇಲಿನ ಪ್ರೀತಿ ಎಷ್ಟೆಂದರೆ ಸತ್ತಮೇಲೆ ಚಿತೆಯೊಟ್ಟಿಗಿರಲಿ!
ವಾವ್... ಪ್ರೀತಿಯ ಪರಾಕಾಷ್ಟೆಯ ಸಾಲುಗಳು. ಪ್ರೇಮ ಮೇಡಂ
ಇಷ್ಟವಾಯಿತು ಈ ಸಾಲು👌👌
[6/8/2019, 8:55 AM] Wr Sham Prasad Bhat: *ಪ್ರೇಮ್*
*ಮಕ್ಕಳು ಕೊಡದ ಶಾಂತಿ ಮರಗಳೇ ನೀಡಿ ಸಲಹಿದವು*
ಹರಹಗಾರರು ಸಾಲು ಮರದ ತಿಮ್ಮಕ್ಕನಿಗೆ ಪಂಚಪದಿಗಳ ಸಮರ್ಪಿಸಿದ್ದಾರೆ..ಇದುಕ್ಕೆ ಪಂಚಾಮೃತ ಸೇವೆ ಅನ್ನಬಹುದು..
ಸೂಕ್ಷ್ಮ ಅಂಶವನ್ನು ಮೇಲಿನ ಸಾಲಿನಲ್ಲಿ ಗಮನಿಸಿದೆ.
ನಿಜಕ್ಕಾದರೆ ತಿಮ್ಮಕ್ಕ ಗಿಡಗಳ ನೆಟ್ಟು ಅವುಗಳನ್ನು ಸಲಹಿದವಳು..ಅವೇ ಅವಳನ್ನು ಸಲಹಿದವು..ವಾವ್ಹ್... ಚೆನ್ನಾಗಿದೆ ಕಲ್ಪನೆ...ಅವಳಿಗೆ ನೆರಳಿತ್ತು,ಶುದ್ಧಗಾಳಿನೀಡಿ ಶಾಂತಿ ನೀಡಿದವು...ಎಲ್ಲರೂ ಸಾಲು ಮರದ ತಿಮ್ಮಕ್ಕ ಮರಗಳನ್ನು ಸಲಹಿದಳು ಅನ್ನುತ್ತಾರೆ..ಮರಗಳು ಅವಳನ್ನು ಸಲಹಿದ್ದು ಕೆಲವರಿಗಷ್ಟೇ ಗೊತ್ತಾಗಿದೆ.ಅದರಲ್ಲಿ ನೀವೊಬ್ಬರು..ಭಿನ್ನ ಚಿಂತನೆ ಇಷ್ಟ ಆಯ್ತು.
ಧನ್ಯವಾದಗಳು
*ಶ್ಯಾಮ್ ಪ್ರಸಾದ್*
[6/10/2019, 2:12 PM] Wr Sreemati Joshi: ಪ್ರೇಮಾ ಮೇಡಂ. ಹೆಣ್ಣಿನ ಮೇಲಿನ ಜಾನಪದ ಸೈಲಿಯ ಭಾವಾಗೀತೆ ಯ ಅರ್ಥ ಸೂಪರ್. ಹೆಣ್ಣಿನ ಕಣ್ಣೀರು ಕೂಡ ಮೌನದಲ್ಲೆಯೆ ಹುದುಗುವ ಭಾವ ಚೆಂದ ಇದೆ. 👌👌👍👍👏👏
[6/13/2019, 7:18 AM] Wr Vinuta Kicchikeri: ಪ್ರೇಮ್ ಜೀ ನಮಸ್ತೇ
ಆಸೆ ಬಿಡಲಾದೀತೇ?
ಶಿರೋನಾಮವೇ ಚೆನ್ನಾಗಿದೆ
ಆಸೆಯು ಮನದಲ್ಲಿ ಹುಟ್ಟಿತೆಂದರೆ ಮನುಷ್ಯನು ಚಪಲಕ್ಕಾಗಿ ಏನು ಮಾಡಲು
ಹಿಂದೆ ಮುಂದೆ ನೋಡನು
ಪಕ್ಷಿ ಪ್ರಾಣಿಗಳಿಗೆ ಏನು ಕೊಟ್ಟರು ತಿಂದುಂಡು ಸುಖವಾಗಿರುತ್ತವೆ
ಆದರೂ ಮಾನವನ ಆಸೆಗೆ ಮಿತಿ ಇಲ್ಲ
ಅವನು ತನ್ನ ಸಂತತಿಯವರೆಲ್ಲರಿಗೂ ಬೇಕೆಂದು ಕೂಡಿಡುವ ಸ್ವಾ
ರ್ಥಿ
ಗಾದೆಗಳನ್ನು ರೀತಿ ನಿಯಮಗಳನ್ನು ನಾವೇ ಮಾಡಿಕೊಂಡಿದ್ದರೂ ಯಾವದನ್ನೂ ಅನುಸರಿಸದೆ
ತಮಗೆ ಬೇಕಾದ ಹಾಗೆ ಕಾನೂನನ್ನೆ ತಿದ್ದಿಕೊಳ್ಳುವ
ಮೂಢರು
ಯಾರು ಏನೇ ಆಗಲಿ ಅಂದರೆ ಸಾಯಲಿ ,ಹೊಡೆದ ದಾಡಲಿ,ರಕ್ತ ದ ಓಕುಳಿಯಾದರೂ ಕೂಡ
ಓಟು ಮಾರಿಕೊಂಡು ಖುರ್ಚಿಯ ಆಸೆಗೆ ಕಾಲು ಹಿಡಿಯುವರು ದೇಶದ ಚಿಂತೆ ಬಿಟ್ಟು
ಈಗಿನ ವರ್ತಮಾನಕ್ಕೆ ತಕ್ಕಂತೆ
ಮೂಡಿಬಂದಿದೆ ಭಾವಗೀತೆ ಸುಂದರ🙏🙏💐
ವಿನುತಾ ಕಿಚ್ಚಿಕೇರಿ
[6/14/2019, 11:09 AM] Wr Thaggihalli Ravi: ನಿನ್ನ ಸೆರಗಿನಲಿ....
*ನಿನ್ನ ಸೆರಗಿನಲಿ ತಲೆತೂರಿಸಿ ಹುದುಗಿ ಅವಿತು*
*ಕೂತು ಮನಬಿಚ್ಚಿದ ಮಾತನಾಡುತ ಸೆರಗಿಡಿದು ಸುತ್ತುವಾಸೆ...*
*ನಂಬಿಕೆಯ ಅಂಗಣವದು ನಿನ್ನ ಮಡಿಲೊಲವು,*
*"ಮೊಸರ ಕಡೆಕಡೆದು ಬೆಣ್ಣೆ ಪಡೆವಂತೆ,*
*ನಿನ್ನೊಡಲ ಸೇರಿ ನಾ ಖುಷಿ ಪಡೆಯಬೇಕು!"*
*"ಬೆಚ್ಚನೆಯ ಅಮರ ಸ್ಪರ್ಶವದು ನನ್ನಲ್ಲಿ.."*
*"ನಿನ್ನ ತೆಕ್ಕೆಯ ಒಲವು ಜಗವ ಮರೆಸುವುದಂತೆ!"*
*"ನಿನ್ನಾಸರೆಯಲಿ ಜೀವ ಎಂದೂ ಬರಡಾಗದು"*
ಒಂದನ್ನೊಂದು ಮೀರಿಸುವ ಭಾವ ಜಾಲ *"ನಿನ್ನ ಸೆರಗಿನಲಿ."*
*"ಅಭಿನಂದನೆಗಳು ಪ್ರೇಮಾ ಮೇಡಂ"*
ತಗ್ಗೀಹಳ್ಳಿ ರವಿಕುಮಾರ
[6/14/2019, 6:00 PM] Wr Sham Prasad Bhat: *ಪ್ರೇಮ್ ಸಹೋದರಿ*
*ನಿನ್ನ ಸೆರಗಿನಲಿ*
ಪ್ರಕೃತಿ ಮಾತೆಯ ಸೀರೆಯ ಸೆರಗಡಿಯಲ್ಲಿ ಆಶ್ರಯ ಪಡೆದ ಭಾವನೆಗಳನ್ನು ಹೊತ್ತು ತಂದ ಭಾವಗೀತೆ ಚೆನ್ನಾಗಿದೆ.. ಕೆಲವು ಪದಗಳು ಆಕರ್ಷಕ ರೀತಿಯಲ್ಲಿ ಗೀತೆಗೆ ಮೆರಗಿತ್ತಿವೆ..ಗುಣಮಟ್ಟದ ಬರವಣಿಗೆ ಇಷ್ಟ ಆಯ್ತು
ಧನ್ಯವಾದಗಳು
ಶ್ಯಾಮ್ ಪ್ರಸಾದ್
[6/15/2019, 6:25 AM] Wr Shivaprasad Aradhya: ಪ್ರೇಮ ಕವಿಯತ್ರಿಯೇ ಬಹಳ ಚೆನ್ನಾಗಿ ಬರೆದಿದ್ದೀರಿ ಭಲೇ ವಾವ್ ಬಹಳ ಚಂದಸ ಜನಪದ ಶೈಲಿಯಲ್ಲಿ ಮನಸೂರೆಗೊಳ್ಳುತ್ತದೆ.
ಅಭಿನಂದನೆಗಳು ಪ್ರೇಮಾಜೀ
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
[6/15/2019, 7:29 AM] Wr Siddesh: ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ
ಕನಸಿನ/ಒಲವಿನ ಮಹತ್ತದ ಸಾಲುಗಳು ...
ಪ್ರೀತಿ ... ಕನಸುಗಳ ಲೋಕದಿ ತುಂಬಾನೆ ಸೊಗಸು ....ಅದು ವಾಸ್ತವವಾಗಿ ಕಷ್ಟ ...
*ಪ್ರೀತಿನಾ ಯಾಕ ಬಂದಿ ?* ಅಂತಾ ಕೇಳತಾರ ಅಂದರೆ ಅದು ನೀಡುವ ತೊಳಲಾಟ, ತಾಕಲಾಟ ..ಅದರ ವ್ಯಾಪ್ತಿ ಯ ಕುರಿತ ...ಅದರ ಅವಶ್ಯಕತೆ, ಅನಿವಾರ್ಯ ತೆ ಬಗ್ಗೆ ಪ್ರೇಮ್ ಮೆಡಮ್ ಗೀತೆಯಲ್ಲಿ ಚೆಂದ ಬಿಂಬಿಸಿದ್ದಾರೆ ...
ವಿಬಿನ್ನ ತೆಯಿಂದ ಇದೆ ....ಸೂಪರ್
ಸೂಪರ್ ..
ಮೆಡಮ್ ..
[6/17/2019, 11:57 AM] Wr Manjula B K: ಪ್ರೇಮ್ ಅವರ ಶಾಯರಿ
ನಿದ್ದೆಯಿಂದ ಮಡದಿ ಎಬ್ಬಿಸಿದ ಪರಿಯೇ ಸೊಗಸು.
ಗೊರಕೆಯಿಂದ ಹೆಂಡತಿ ಇನ್ನು ಎಷ್ಟು ಬೇಸತ್ತು ಸಾಕಾಗಿ ಮೆಣಸಿನ ಮುದ್ದೆ ಮೂಗಿಗೆ ಹಾಕಿದ್ದಾಳೆ ಎಂದರೆ ಅವಳ ಕಷ್ಟ ಅರ್ಥ ಮಾಡಿಕೊಳ್ಳಬೇಕು 👌👌
ಮಂಜುಳ
[6/19/2019, 3:17 PM] Wr Ganesh Pai: * ಪ್ರೇಮ ಮೇಡಂ,
ತಮ್ಮ ಸಾಲುಗಳಲ್ಲಿ ಸನ್ನಡತೆಯ ಬಗ್ಗೆ ಕಾಳಜಿ ತೋರಿಸಿದ್ದೀರಿ.ಏಟು ಬೀಗಿದಾದರೂ ಉತ್ತಮವಾಗಿ ಬಾಳಲು ಕಲಿಸಬೇಕಾಗಿದೆ.ಈಗ ಕಲಿಸುವಿಕೆಯ ಶೈಲಿ ಬದಲಾಗಿದೆ ಮಕ್ಕಳನ್ನು ಶಿಕ್ಷೆ ಕೊಡುವಂತಿಲ್ಲ ಇದು ಹಲವು ಮಕ್ಕಳು ದಾರಿ ತಪ್ಪುವಂತೆ ಆದುದು ಮಾತ್ರ ವಿಪರ್ಯಾಸ ಅಲ್ಲವೇ...
ಆಲಸ್ಯ ತೋರಿದೆ ತನ್ನ ಗುರಿಯೆಡೆಗೆ ಸಾಗಿದರೆ ಗೆಲುವು ನಿಂತರೆ ಸೋಲು ಎಂಬುದನ್ನು ತಾವು ಸೊಗಸಾಗಿ ಹೇಳಿದ್ದೀರಿ,👌🏻👌🏻 ಧನ್ಯವಾದಗಳು🙏🏼🙏🏼
ಗಣೇಶ.ಪೈ
[6/21/2019, 3:30 PM] Wr Dinesh Sir: 🙏🙏
*ಪ್ರೇಮ್ ರವರ*
ಶಾಯರಿಗಳು ಬಲು ಚೆಂದ ಇವೆ.
ಲಟ್ಟಣಿಗೆಯ ಕುರಿತು ಬಲು ಅದ್ಭುತವಾಗಿ ಬರೆದಿರುವಿರಿ. ಇಲಿಯ ರುಚಿಯನ್ನು ಬೆಕ್ಕು ತಿಳಿದಂತೆ ಎಂದಿರುವಿರಿ.ನಿಜ, ಲಟ್ಟಣಿಗೆ ಎಂಬುದು ಒಂದು ದಿವ್ಯಾಸ್ತ್ರ ಎನ್ನಬಹುದು.ಅದು ಕೈಲಿದ್ದರೆ ಸ್ವಲ್ಪ ಹತೋಟಿಯಲ್ಲಿರುತ್ತದೆ.ಅದರಲ್ಲೂ ಆಗಾಗ ಪೆಟ್ಟು ತಿಂದು ನೋವ ಅನುಭವಿಸಿದ್ದರಂತೂ ಸನಿಹವೂ ಸುಳಿಯಲಾರರು..ಅದು ಲಟ್ಟಣಿಗೆಗೆ ಗೊತ್ತು. ಆ ನೋವನ್ನು ಎಲ್ಲರ ಬಳಿ ಹೇಳಿಕೊಳ್ಳುವುದಾದರೂ ಹೇಗೆ
.ಸುಮ್ಮನೆ ಸಹಿಸಿಕೊಳ್ಳಬೇಕಷ್ಟೆ. ಆದ ನೋವು ಮಾತ್ರ ಅಣಕಿಸುತ್ತಲೆ ಇರುತ್ತದೆ.ಇನ್ನೊಮ್ಮೆ ಲಟ್ಟಣಿಗೆ ಹಿಡಿದು ನಿಂತವರಿಂದ ಆದಷ್ಟು ದೂರವಿರಿ ಎಂಬ ಸಂದೇಶವ ಹತ್ತಿರದ ಮೆದುಳಿಗೆ ರವಾನಿಸುತ್ತಲೆ ಇರುತ್ತವೆ..ಬಹಳ ಚೆಂದ ಬರೆದಿರುವಿರಿ..
👍👍👌👌👌
ಎರಡನೆ ಶಾಯರಿಯೂ ಸಹ ಚೆಂದವಿದೆ
👍👌👌👌👌
[6/21/2019, 3:42 PM] Wr Ganesh Pai: ಪ್ರೇಮ ಮೇಡಂ,
ಯಾರಿಗೂ ಗೊತ್ತಿಲ್ಲದ ಲಟ್ಟಣಿಗೆ ಯು ಗುಟ್ಟು ಬಹಿರಂಗ ಪಡಿಸಿದ್ದೀರಿ😀 ಉತ್ತಮ ಶಾಯರಿ👌🏻👌🏻
ಧನ್ಯವಾದಗಳು🙏🏼🙏🏼
ಗಣೇಶ.ಪೈ
[6/21/2019, 8:01 PM] Wr Shivaprasad Aradhya: ಬಹಳಷ್ಟು ಜನ ಕವಿಗಳು ನಿಯಮ ಪಾಲಿಸಿ ಬರೆದಿಲ್ಲ.ಶಾಯರಿ ಕಾಫಿಯಾ ಇಲ್ಲದೇ ಶಾಯರಿಯಾಗದು ಎಲ್ಲಾ ನಗೆ ಹನಿಗಳನ್ನೇ ಹಾಕಿದ್ದಿರಿ ಬಹಳಷ್ಟು ಮಂದಿ. ಉರ್ದು ಹಾಗೂ ಅರೇಬಿಕ್ ನಿಂದ ಬಂದ ಶಾಯರಿ ಕನಿಷ್ಠ ಮೂರು ವಾಕ್ಯಗಳು ಗರಿಷ್ಠ ನಾಲ್ಕು. ಇಲ್ಲಿ ಮೂರನೇ ಸಾಲಲ್ಲಿ ರದೀಫ್ ಅಂದರೆ ಪ್ರಾಸ ತಪ್ಪಿದರೂ ನಡೆಯುತ್ತದೆ ಅದಿರದೇ ಶಾಯರಿ ಯಾಗದು
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
[6/22/2019, 10:53 AM] Wr Amaresh: 🙏🌹 *ಪ್ರೇಮ್ ಸರ್*🙏🌹
ಹಣ ಎಂದರೆ ಹೀಗೆ ಜೀವವನ್ನು ಉಳಿಸುತ್ತದೆ, ಜೀವವನ್ನು ಅಳಿಸುತ್ತದೆ, ಅಳಿದ ಜೀವವನ್ನು ಮರಳಿಸುತ್ತದೆ. ನಮ್ಮವರು ಪರರಾಗುತ್ತಾರೆ, ಪರರು ನಮ್ಮವರಾಗುತ್ತಾರೆ..ಅದುವೇ ಪವರ್ ಆಪ್ ಹಣ🤪
✍ *ಅಮರೇಶ ಎಂ ಕಂಬಳಿಹಾಳ*
[6/22/2019, 11:06 AM] Wr Vara Lakshmi Amma: ಪ್ರೇಮ ಅವರ ಶಾಯರಿಗಳು
ತಾಯಿ ಮಕ್ಕಳನ್ನೇ ಅಗಲಿಸುವ ಈ ಹಣ, ಹಣವೂ ಬಾಯಿಬಿಡುವಂತೆ ಮಾಡುವ ಹಣ, ಹಣವಿಲ್ಲದವರನ್ನು ಕಾಲ ಕಸಕ್ಕಿಂತ ಕಾಣುವವರು
ಹಣವೇ ನಿನ್ನಯ ಗುಣ ಏನೆಂದು ಹೇಳಲಿ?
ಹಣದ ಗುಣ ಎತ್ತಿ ಹಿಡಿಯುವ ಶಾಯರಿಗಳು 🙏
[6/24/2019, 9:54 AM] Wr Sham Prasad Bhat: *ನಿಮಗಾಗಿ*
*ಪ್ರೇಮ್*
ಮಾನವ ಹಸ್ತಕ್ಷೇಪದಿಂದ ಪ್ರಕೃತಿಯ ಅಂದ ಹಾಳಾಗಿದೆ..ಸಹನಾಮಯಿ ಪ್ರಕೃತಿ ಮಾತೆ ಸಾಧ್ಯ ಆದಷ್ಟು ಸಹಿಸಿಕ್ಕೊಂಡಳು.ಅವಳ ಸಹನೆಗೂ ಮಿತಿಯಿದೆ.ತಾಳ್ಮೆ ಯ ಕಟ್ಟೆ ಒಡೆದಿದೆ.ಮಳೆ ಬೆಳೆಯ ಕೊರತೆಯ ರೂಪದಲ್ಲಿ ಇದೀಗ ನಮ್ಮ ಅನುಭವಕ್ಕೆ ಬರುತ್ತಿದೆ.ಇನ್ನೂ ಎಚ್ಚೆತ್ತುಕ್ಕೋಳ್ಳದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..
ಕನಿಷ್ಠ ಒಂದೆರಡು ಗಿಡಗಳನ್ನು ನೆಟ್ಟು ಸಲಹಿದರೆ ಅದು ಪ್ರತಿರೂಪದಲ್ಲಿ ನಿನಗೆ ಸಾಕಷ್ಟು ಸವಲತ್ತುಗಳನ್ನು ನೀಡಲಿದೆ.ಶುದ್ಧ ಗಾಳಿ,ನೆರಳು ಇತ್ಯಾದಿ.
ಮಳೆ ಕೊರತೆ ಅನುಭವಿಸುತ್ತಿರುವ ಈ ದಿನಗಳಲ್ಲಿ ಸಮಯೋಚಿತ ರೂಪದಲ್ಲಿ ನಿಮ್ಮ ಬರಹ ಬಂದಿದೆ.ಮೆಚ್ಚುಗೆ ಆಯ್ತು.
ಧನ್ಯವಾದಗಳು
*ಶ್ಯಾಮ್ ಪ್ರಸಾದ್*
[6/24/2019, 9:55 AM] Wr Anitha: *ಪ್ರೇಮ್ ಮೇಡಮ್ ಅವರ*
*ನಿಮಗಾಗಿ*
*ಸೃಷ್ಟಿಯಿಂದ ಎಲ್ಲವನ್ನೂ ಕಸಿದುಕೊಂಡಿರುವ ನಮಗೆ ಹಿಂತಿರುಗಿಸಿ ಕೊಡುವ ಬುದ್ದಿಯಿಲ್ಲ*.
*ನೀವು ಬದುಕಿ, ನನ್ನ ಜೀವ ಸಂಕುಲವನು ಉಳಿಸಿರೆನ್ನುತಾ ಪ್ರಕೃತಿಯ ತ್ಯಾಗ ಭಾವಕೆ ಬೆಲೆ ಕೊಡುತಾ ಮುಂದಿನ ಪೀಳಿಗೆಗೆ ಬೆಳಕಾಗಿರಿ ಎಂದು ಕವಿ ಆಶಯವಾಗಿದೆ*
*ಧನ್ಯವಾದಗಳು*
[6/25/2019, 6:17 AM] Wr Shivaprasad Aradhya: ಪ್ರೆಮ್ ಮಾತು ಮರೆಯಾಗುತ್ತಿರುವ ಆನ್‌ಲೈನ್ ಚಾಟಿಂಗ್ ಜಂಗಮವಾಣಿಯ ಮಾತುಕತೆ ಯ ಜಂಭಗಳ ಬಯಲು ಮಾಡುತಾ ತಾವೂ ಅದರಲ್ಲೊಬ್ಬರಾಗಿ ಜಂಭ ಬಿಟ್ಡು ಒಪ್ಪಿರುವ ಪ್ರೇಮರವರು ಕೊನೆಯಲಿ ಚೆನ್ನಾಗಿ ಛೀಮಾರಿ ಹಾಕಿದ್ದಾರೆ
ಭಲೆ ಇದಪ್ಪಾ ಕವನ ಜಂಭ ಪಡಲೇ ಬೇಕು ನೀವೆಂತಹಾ ಕವಿಯೆಂದು ಪ್ರೇಮ ಬಹಳ ಚೆನ್ನಾಗಿ ಬರೆದಿದ್ದೀರಿ ಭಲೇ
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
[6/25/2019, 6:20 AM] Wr Siraj Ahmed Soraba: ***ಪ್ರೇಂ ಸಹೋದರಿ***
"ಹೀಗಿದೆ ಈಗಿನ ಪ್ರಪಂಚ ಎಂಬ
ಕವನವು ವಾಸ್ತವಿಕತೆಗೆ ಕನ್ನಡಿ
ಹಿಡಿದಂತಿದೆ.ತಾವು ಈ ಮೋಬೈಲ್ ಜೀವನದ ಒಂದು
ಅವಿಮಾ ಅಂಗವಾಗಿದೆ.ಮೋಬೈಲ್ ನೋಡದೆ.ಊಟವೂ ಸೇರದ
ಪರಿಸ್ಥಿತಿಯಾಗಿದೆ. ಕೆಲವೊಮ್ಮೆ
ಮೋಬೈಲ್ ಇಲ್ಲದೆ ಜೀವನ
ನಡೆಸುವುದೇ ಕಷ್ಟವಾಗುತ್ತದೆ.
ಮೋಬೈಲ್ ನಿಂದ ಲಾಭವೂ ನಷ್ಟವೂ ಇದೆ ಸಾಧಕ ಬಾಧಕ
ಅಂಶಗಳೂ ಇವೆ ಎಂಬುದನ್ನು
ನಿಮ್ಮ ಕವನ ಹೇಳುತಿದೆ.
ಹೃತ್ಪೂರ್ವಕ ಅಭಿನಂದನೆಗಳು
"ಯು ಸಿರಾಜ್ ಅಹಮದ್ ಸೊರಬ"
[6/25/2019, 9:53 AM] Wr Vani Bhandari: *ನಮಸ್ತೇ*
🙏🏻🙏🏻🙏🏻
*ಪ್ರೇಮ ಅವರ ಹೀಗಿದೆ ಈಗಿನ ಪ್ರಪಂಚ*
ಬಹುಶಃ ಮೇಡಂ ಹೇಳುವಂತೆ ಹೀಗೆ ಇದೆ ಅನಿಸುತ್ತದೆ ನಮ್ಮ ಪ್ರಪಂಚ.
ಏಕೆ ಅಂದರೆ ನಮ್ಮ ನಿಜವಾದ ಪ್ರಪಂಚ ಯಾವುದು ಎಂಬ ಅರಿವು ನಮಿಗಿಲ್ಲ.
ಜಂಗಮವಾಣಿಯೊಂದಿಗೆ ಒಂದಿಷ್ಟು ಸಂಬಂಧಗಳು ಏರ್ಪಟ್ಟರೆ ಅದೇ ಮಹಾ ದೊಡ್ಡ ಸಾಮ್ರಾಜ್ಯ ಎಂದು ಬೀಗುವ ಅದೆಷ್ಟೋ ಮನಸ್ಸುಗಳು ನಮ್ಮ ನಿಮ್ಮ ನಡುವೆ ಇವೆ.
ಇದರಿಂದಾಗಿ ನಾವು ಬಾಳಿಬೆಳಗಬೇಕಾದ ಸಂಬಂಧಗಳು ಹಾಳಾಗಿ ಹೊಗುತ್ತಿವೆ ಎಂಬ ಸಣ್ಣ ಅಂಶದ ತಿಳಿವು ಸಹ ಇಲ್ಲದೆ ಅದರೊಳಗೆ ಮುಳುಗಿ ಹೋಗುವ ಜನತೆ ಅದೆಷ್ಟೋ.
ಉಳಿದಂತೆ,,,,,,
👉ಸುಂದರವಾಗಿ ಮೂಡಿದೆ.
👉ಸ್ವಗತವಾದ ಸವಿನುಡಿ ಯಂತಿದೆ.
👉ಉತ್ತಮ ಸಂದೇಶ ಹೊಂದಿದೆ.
👉ಇನ್ನೂ ಸ್ವಲ್ಪ ಮುಂದುವರಿಸುವ ಅವಕಾಶವಿತ್ತು ಅನಿಸ್ತು ನಂಗೆ.
👉 ಒಟ್ಟಾರೆ ಸುಂದರವಾದ ಭಾವಲಹರಿ,
ಸುಂದರವಾಗಿ ಬರೆಯುವ ನಿಮಗೆ ಯಶಸ್ಸು ಸಿಗಲಿ ಮೇಡಂ ಜಿ.
*ಧನ್ಯವಾದಗಳೊಂದಿಗೆ*
ಪ್ರಯಾಣದಲ್ಲಿದ್ದು ಬರೆದಿರುವೆ ಅಕ್ಷರಗಳು ತಪ್ಪಾಗಿದ್ರೆ ಬೈಕೊಬೇಡಿ.😜
✍ *ವಾಣಿ ಭಂಡಾರಿ*
[6/25/2019, 5:24 PM] Wr Dinesh Sir: 🙏🙏
*ಪ್ರೇಮ್ ರವರ*
ಹೀಗಿದೆ ಈಗಿನ ಪ್ರಪಂಚ.
ಬಹಳ ಸೊಗಸಾಗಿ ಬರೆದಿರುವಿರಿ.ವಾಸ್ತವಿಕ ಅಂಶಗಳನ್ನೊಳಗೊಂಡ ಕವಿತೆ ಓದುಗರ ಕಣ್ಣು ತೆರೆಸುವುದಂತೂ ನಿಜ.ಮೊಬೈಲ್ ಎಂಬ ಸಾಧನವನ್ನು ದುರುಪಯೋಗಪಡಿಸಿಕೊಂಡು ವಿವೇಚನೆ ಮರೆತು ಬಳಸುತ್ತಿರುವುದು ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಿದೆ. ಹತ್ತಿರದವರು ಯಾರಿರಲಿ ಬಿಡಲಿ ನನಗೆ ಮೊಬೈಲ್ ಒಂದಿದ್ದರೆ ಸಾಕು ಎಂಬ ಜಂಭ ಬಂದಿದೆ..ಒಟ್ಟಾರೆ ಎಲ್ಲ ಸಂಗತಿಗಳನ್ನು ಬಹಳ ಚೆನ್ನಾಗಿ ಪಡಿಮೂಡಿಸಿ ಅರ್ಥಪೂರ್ಣವಾದ ಕಾವ್ಯ ಲಹರಿಯನ್ನು ಹರಿಸಿದ್ದೀರಿ..
ಕೊಟ್ಟ ಪದಕ್ಕೆ
ಸುಂದರವಾದ
ಸಾರ ಭರಿತ
ಬರಹ
👌👌👌👍👍👍💐💐
[6/26/2019, 7:12 AM] Wr Shivaprasad Aradhya: ಪ್ರೇಮ ಅದೆಷ್ಟು ಆಳವಾಗಿ ಅಗಾಧವಾದ ಚಿಂತನೆಯಲ್ಲಿ ಜೀವನಾನುಭವ ಚಿಂತನೆಯನ್ನು ಅತ್ಯಮೋಘ ವಾಗಿ ಅತ್ಯದ್ಭುತವಾಗಿ ಒಡಮೂಡಿಸಿರುವಿರಿ ತಮ್ಮ ಆ ಅರಿವಿ ಅನುಭವ ಅನುಭಾವದ ಮಹಾ ತಾಯ್ತನಕೆ ಇಗೋ ಶಿರಬಾಗಿ ಶರಣೆಂಬೆ ಅತ್ಯುತ್ತಮ ಕವಮ ಪ್ರೇಮ ಬಹಳ ಚೆನ್ನಾಗಿ ಬರೆದಿರುವಿರಿ ಅಭಿನಂದನೆಗಳು.
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ
[6/26/2019, 7:30 AM] Wr 100 Ahmd: *ಪ್ರೇಮ್ ಗುರುಗಳಿಗೆ*🙏
ಮನಸ್ಸು .....ಕವಿತೆಯ ಸಾರವನ್ನು ತುಂಬಾ ಚನ್ನಾಗಿ ವಚನಗಳ ಭಾವೋಕ್ತಿಯನ್ನು ತುಂಬಿ ವಾಚಿಸುವ ಗುಣವನ್ನು ಮನಸ್ಸಿಗೆ ಮುದನೀಡುವ ಮುಗದ್ದತೆ ಎದ್ದು ಕಾಣುತ್ತದೆ.....
ಜೊತೆ ಜೊತೆಗೆ ಗಾದೆಗಳ ಮಾತಿನಿಂದ ಭಾವಗೀತೆಯಲ್ಲಿ ರಚಿಸಿದ ನಿಮ್ಮ ಹೃದಯ ದೊಡ್ಡದು ....
ತಿಳಿಯುವ ತಿಳಿಸುವ ಪರರನು ಪ್ರೀತಿಸುವ ...ಮಾತಿನ ಹಿಡಿತ ಹಿರಿತನ ಕಿರಿತನ ಮಾತೇ ಆಯುಧ........ಬಂದ ಜಗದಲಿ ಪ್ರೇಮ ಒಂದೇ ಶಾಶ್ವತ ಎನ್ನುತಾ ಕವಿತೆಯನ್ನು ಕೋನೆಗಾಣಿಸುವ ಪರಿ ಸೊಗಸಾಗಿದೆ....
ವಚನೋಕ್ತಿಯನ್ನು ಮೊದಲು ಓದಿಸಿದಕ್ಕೆ..ತುಂಬು ಹೃದಯದ ಅಭಿನಂದನೆಗಳು...
*ನೂರ್*
[6/29/2019, 5:45 AM] Wr Vinuta Kicchikeri: ಪ್ರೇಮ್ ಮೇಡಮ್ ನಮಸ್ತೇ
ಚಂದವಾಗಿ ಬರೆದಿದ್ದೀರಾ
ಬದುಕನ್ನು ನಾಟ್ಯಕ್ಕೆ ಹೋಲಿಸಿ.
[6/29/2019, 6:16 AM] Wr Shivaprasad Aradhya: ವಾವ್ ಬ್ರಾಹ್ಮಿ ಮಹೂರ್ತದಲ್ಲೇ ಎದ್ದು ಬರೆವ ಅಪಾರ ಸಾಹಿತ್ಯಾಸಕ್ತಿ ಜೊತೆಗೆ ಎಲ್ಲರಿಗಿಂತಲೂ ಮುಂಚೆಯೇ ಕೊಟ್ ವಿಷಯಕ್ಕೆ ಸಮರ್ಥವಾಗಿ ಬರೆಯಬಲ್ಲ ಚಾತಿ ಈ ಪ್ರೇಮ್ ದು.ಹೊಸಬರಿಗೆ ಯಾರಪ್ಪಾ ಇವರು ಗಂಡೋ ಹೆಣ್ಣೋ ಎಂದು ಹೆಸರಲ್ಲಿ ತಬ್ಬಿಬ್ಬಾಗಿಸಿ ತಮಾಷೆ ನೋಡುವರು.
ಹೌದು ನಟನೆ ಎಂಬ ಪದ ದಲ್ಲೇ ನಾಟ್ಯವಿದೆ.ನಾಟ್ಯವಾಡುತ್ತಲೇ ಅಭನಯಿಸುವವಯಕ್ಷಗಡನ ಕಲೆ ಎಷ್ಟು ಚಂದ.ಬಹುಶಃ ಇವರೂ ಅ ಕಡೆಯವರೇ ಅಗಿ ತಮ್ಮ ಕವನಗಳಲ್ಲಿ ಯಕ್ಷಗಾನ ವಾಡುತ್ತಾರೆ .ಈ ಕವನದಲ್ಲಿಯೂ ಇವರು ತಮ್ಮ ಪ್ರತಿಭೆ ತೋರಿ ಯಕ್ಷಗಾನವನ್ನೇ ಆಡಿದ್ದಾರೆ. ತಂಗಿ ಪ್ರೇಮ ನನತನ ಅಣ್ಣನನ್ನಾಗಿ ಮಾಡಿಕೊಂಡಿದ್ದಾರೆ .ಶಿವಣ್ಣ ಎಂದು ಪ್ರೀತಿಯಿಂದ ಕರೆಯುತ್ತಾರೆ.ಮಂತ್ರಾಲಯದವರೆಗೂ ಕವಿಗೋಷ್ಟಿಗೆ ಭಾಗವಹಿಸಿ ನಮ್ಮೋಡನೆ ಇದ್ದ ತಂಗಿ.ಅನುಬವ ಅನುಭಾವ ಎರಡೂ ಸಮ್ಮಿಳನ ಗೊಂಡ ನಿಮ್ಮ ಕವನಚಸೊಗಸಾಗಿ ಮಾರ್ಗದರ್ಶಿಯಾಗಿದೆ .ಚೆನ್ನಾಗಿ ನಾಟ್ಯವಾಡಿದ್ದೀರೀ ದೇವಿಯಾಗಿ.ಧನ್ಯವಾದಗಳು ಅಭಿನಂದನೆಗಳು ಪ್ರೇಮ
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ.
ಶಿ
[6/29/2019, 1:59 PM] Wr Veena Joshi Ankola: ಕವನ ೧.....
ಪ್ರೇಮ ಅವರೇ 🙏🏽
ನಿಮ್ಮ ಕವನ ಈ ದಿನದ ಮೊದಲ ಕವನ ಓದಿ ತುಂಬಾ ಖುಷಿಯಾಯ್ತು .
ದಿವ್ಯ ಚೇತನವಾದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ನೆನಪಿಸಿದ ನಿಮ್ಮ ಕವನ ಈ ಬದುಕೊಂದು ದೊಡ್ಡ ರಂಗಭೂಮಿ ವೇಷ ತೊಟ್ಟು
ಅಭಿನಯಿಸುತ್ತಿರುವ ನಾವೆಲ್ಲರೂ ಸಮಯ ಬಂದಾಗ ಎದ್ದು ಹೋಗಬೇಕು ಎಂಬುದನ್ನು ಬಹಳ ಅರ್ಥಪೂರ್ಣವಾಗಿ ಸೂಕ್ಷ್ಮ ವಾಗಿ ಹೇಳಿತು..
ನಿಜಕ್ಕೂ ಕಲಾವಿದರು ತಾವು ಕಷ್ಟಪಟ್ಟು ಬೇರೆಯವರು ಸಂತೋಷದಿಂದ ಇರುವಂತೆ ಮಾಡುತ್ತಾರೆ .ಅಂಥ ಕಲಾವಿದರಿಗೆ ನಿಮ್ಮ ಕವನ ಅರ್ಪಣೆ ಆಗಲಿ .
ನಮಸ್ಕಾರ
.
ವೀಣಾ ಜೋಶಿ .🏵🏵@prem@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ