ಶುಕ್ರವಾರ, ಜನವರಿ 1, 2021

ಲಂಚ

ಲಂಚ

ಹೊಂಚು ಹಾಕಿ ಸಂಚು ಮಾಡಿ
ಲಂಚ ತಿಂದ ಬಳಿಕ ಮಂಚವೇರಿ
ಕೊಂಚ ಕೊಂಚ ಮಿಂಚುತಿದ್ದು
ಹಂಚಿ ತಿನ್ನದೇನೆ ಬದುಕಿಗಂಜಿ
ಕಂಚು ಬೆಳ್ಳಿ, ಚಿನ್ನವೆಲ್ಲ  ತುಂಬಿಸಿದ್ದು
ಮಿಂಚುವವಗೆ ಬರುವುದೊಂದು ಕಾಲ ಕೇಳಿರೋ..

ಹೆಂಚಿನರಮನೆಯು ಮೇಲು ಟೆರೇಸಿಗಿಂತಲೂ
ಬೆಂಚಿನಲ್ಲಿ ಕುಳಿತುಕೊಳ್ಳೊ ಸೋಫಾಗಿಂತಲೂ
ಮುಂಚಿನದ್ದೆ ಬದುಕು ಅಂದ ಕಳೆಯುವಾಗಲೂ

ಸಂಚು ಬೇಡ ಸಂಜೆವರೆಗೂ, ರಾತ್ರಿಯಲ್ಲಿಯೂ
ಹಂಚಿ ತಿಂದು ಬಾಳು ನೀನು ಕ್ಷಣಗಳಲ್ಲಿಯೂ
ಇಂಚಿಂಚೂ ದು:ಖ ಬಾಳ ಹಾದಿಯಲ್ಲಿಯೂ

ಪಂಚಿಂಗ್ ಬೇಡ ಮಾತೆ ಸಾಕು ಮನದಿ ಬೇಯಲು
ರಾಂಚಿ ಕಂಚಿಗ್ಹೋಗದೇನೆ ದೇವರ ಕಾಣಲು
ಕೆಂಚನಾದ್ರೂ ದುಡಿಯಬೇಕು ಕೆಂಪಾಗಿ ಉಳಿಯಲು
ಅಂಚಿನಲ್ಲೂ ಕಣ್ತೆರೆಯಬೇಕು ಜೀವವೆಳೆಯಲು
 ಲಂಚ ತಿಂದು ಮಣ್ಣು ಮುಕ್ಕಿಹೋಗುವೆ ಏಳೇಳು ಜನುಮಕೂ..
@ಪ್ರೇಮ್@
09.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ