ಗುರುವಾರ, ಡಿಸೆಂಬರ್ 26, 2024

ಸಮರ್ಪಣೆ

ಸಮರ್ಪಣೆ

ಪದಗಳ ಗೂಡಲಿ ಸಮರ್ಪಣೆ ಪಕ್ಷಿಗೆ 
 ಗುಟುಕನು ನೀಡುತಿಹೆ 
ಮದವನು ಮರೆತು ಮಾನವ ಬದುಕ
ಹಾಡನು ಹಾಡುತಿಹೆ

ಶೋಷಣೆ ಮಾಡಿದ ಮನಗಳ ನಿತ್ಯ
ನೆನಪಿಸಿ ಬಾಳುತಲಿ 
ಪೋಷಣೆಗೈದು ಬೆಳೆಸಿದ ಮಾತೆಯ 
ವರವನು ಬೇಡುತಲಿ 

ಘೋಷಣೆ ಕೂಗುತ ಮತಗಳ ಬೇಡಿ
ಸಮಾಜವ ಮರೆಯುತ್ತ 
ಸಂರಕ್ಷಣೆ ಮಾಡುವ ಕಾರ್ಯವ 
ಮರೆತು
ಮೋಹದಿ ತೇಲುತ್ತ 

ಜನಗಳ ಶಾಪ ಬೇಡವೋ ಭೂಪ
ಸಹಾಯವ ನೆನೆಯೋಣ
ದೇಶದ ಒಳಿತಿಗೆ ಬಾಳನು ನೀಡಿ
ಕೃತಜ್ಞತೆ ನೀಡೋಣ//
@ಹನಿಬಿಂದು@
18.05.2024

ಅವನು



ಅವನು


ಬಳೆ ಮಾರಿ, ಗುಜಿರಿ ಹೆಕ್ಕಿ
ವಿಂಗಡಿಸಿ ರಾಶಿ ಹಾಕಿ
ಪಿನ್ನು, ಗೊಂಬೆ, ಪೇಪರ್
ಬಟ್ಟೆ -ಬರೆ , ಮೀನು-ಮಾಂಸ
ಪಾತ್ರೆ - ಪಗಡಿ ತಿಂಡಿ - ಗಿಂಡಿ
ಏನಾದರೂ ಸರಿ ಕೂಲಿ ಕಾರ್ಯ
ಆದರೂ ಆದೀತು ಬಾಳಿಗೆ!

ಮಾರಿ, ದುಡಿದು, ದಣಿದು
ಬೆವರಿಳಿಸಿ ಹಗಲು ಇರುಳು
ಕಾಯಕದಿ ದೇಹ ದಂಡಿಸಿ
ಎಲ್ಲರೂ ಮಾಡುವುದು
ಹೊಟ್ಟೆ ಬಟ್ಟೆ ಕುಟುಂಬಕ್ಕಾಗಿ

ದಂಧೆ ಕೊಲೆ ಕಳ್ಳತನ
ಪರ ನಾರಿಯ ಮಾನಭಂಗ
ನಾಯಿ ಬೆಕ್ಕಿನ ಪ್ರಾಣಭಂಗ 
ಎಲ್ಲವೂ ಯಾಕಾಗಿ ಜಗದಿ
ಕುಟುಂಬದ ಹಿತಕ್ಕಾಗಿ

ಪರರ ಹಿಂಸಿಸಿ ಭಂಜಿಸಿ
ಇತರರ ಕದ್ದು ಒದ್ದು ಬಿದ್ದು
ಪೆಟ್ಟು ತಿಂದು. ಕೊಟ್ಟು ಪಡೆದು
ಹಲವರಿಗೆ ಮನ ನೋಯಿಸಿ ಬೈದು
ತಾ ಮೂರು ಹೊತ್ತು ತಿಂದು 
ತಿನ್ನದೆಯೇ ಮನೆಗೆ ತಂದು
ಬಿಸಾಕಿ ಹೊಸಕಿ ಕೆದಕಿ
ತದುಕಿ ಹೇಗೋ ಬದುಕಿ

ಮತ್ತೇಕೆ  ಇದೆಲ್ಲಾ ಗೋಳು?
ಒಂಟಿ ಜೀವಕ್ಕೆ ಕಷ್ಟವೇ ಬಾಳು
ಎಲ್ಲವೂ ಹೊಟ್ಟೆಗಾಗಿ 
ಕುಟುಂಬದ ಜವಾಬ್ದಾರಿಗಾಗಿ
@ಹನಿಬಿಂದು@

ಪ್ರೇಮಾ ಆರ್ ಶೆಟ್ಟಿ 
ಆಂಗ್ಲ ಭಾಷಾ  ಶಿಕ್ಷಕರು 
ಸ ಪ ಪೂರ್ವ ಕಾಲೇಜು ಮೂಲ್ಕಿ 
ದಕ್ಷಿಣ ಕನ್ನಡ 574154
9901327499








ಉಪದ್ರ

ಹಾಗೆ ನೋಡಿದರೆ ದಸರಾ ಮೆರವಣಿಗೆಯಲ್ಲಿ ಪ್ರಾಣಿಗಳಿಗೂ ಉಪದ್ರವೇ.. ಆನೆ, ಕುದುರೆ...
ಪ್ರತಿದಿನ ಲೆಕ್ಕಾಚಾರ ಹಾಕಲು ಹೋದರೆ ಆಫೀಸ್ ವರೆಗೆ ಹೋಗುವುದು ಉಪದ್ರ, ಪುನಃ ಮನೆಯವರೆಗೆ ತಿರುಗಿ ಬರುವುದು ಉಪದ್ರ, ವರ್ಕ್ ಫ್ರಮ್ ಹೋಮ್ ಆದರೆ ಮನೆಯವರ ಉಪದ್ರ, ಸಂಬಳ ಬಾರದೆ ಇದ್ದರೆ ತಿಂಡಿ ತಿನಸಿಗೆ , ಮನೆ ದಿನಸಿ ತರಲು ಮನೆಯವರ ಉಪದ್ರ, ದಿನಕ್ಕೆ ಐದಾರು ಸಲ ಜೋರಾಗಿ ಕೇಳುವ ಬಾಂಗ್ ನ ಸದ್ದು ಕಿವಿಗೆ ಉಪದ್ರ, ನವರಾತ್ರಿಯಲ್ಲಿ ಬಡಿದುಕೊಂಡು ಬರುವ ವಿವಿಧ ವೇಷಗಳ ಶಬ್ಧ, ಕುಣಿತ ,ಹಣಕ್ಕಾಗಿ ಉಪದ್ರ, ದೇವಸ್ಥಾನ, ದೈವಸ್ಥಾನ ಕಟ್ಟಿ. ಪೂಜೆ. ಪುನರ್ ಪ್ರತಿಷ್ಠೆಗಾಗಿ ಹಣ ಸಂಗ್ರಹಣೆಗಾಗಿ ಬರುವವರ ಉಪದ್ರ, ಮನೆಗೆ ಬಂದರೆ ಹೆಂಡತಿ ಮಕ್ಕಳ ಉಪದ್ರ. ಆಫೀಸಿಗೆ ಹೋದರೆ ಮೇಲಧಿಕಾರಿಯ ಉಪದ್ರ, ಹೊರಗೆ ಹೋದರೆ ಟ್ರಾಫಿಕ್, ಸಾಲದವರ ಉಪದ್ರ.ಮನೆಯ ಒಳಗೆ ಸೊಳ್ಳೆಯ ಉಪದ್ರ ಬದುಕೇ ನಡೆವುದು ಈ ಉಪದ್ರದಿoದ..ಇತರರು ಹುಟ್ಟಿದ್ದೇ ಉಪದ್ರ ಕೊಡಲು..ಇದು ಸರ್ವರಿಗೂ ಅನ್ವಯ ಆಗುತ್ತದೆ ಅಲ್ಲವೇ?. ಏನು ಮಾಡೋದು? ಸಹನೆಯೇ ದೇವರು. ನೀವೇನಂತೀರಿ?
@ಹನಿಬಿಂದು@

ಅವನು



ಅವನು


ಬಳೆ ಮಾರಿ, ಗುಜಿರಿ ಹೆಕ್ಕಿ
ವಿಂಗಡಿಸಿ ರಾಶಿ ಹಾಕಿ
ಪಿನ್ನು, ಗೊಂಬೆ, ಪೇಪರ್
ಬಟ್ಟೆ -ಬರೆ , ಮೀನು-ಮಾಂಸ
ಪಾತ್ರೆ - ಪಗಡಿ ತಿಂಡಿ - ಗಿಂಡಿ
ಏನಾದರೂ ಸರಿ ಕೂಲಿ ಕಾರ್ಯ
ಆದರೂ ಆದೀತು ಬಾಳಿಗೆ!

ಮಾರಿ, ದುಡಿದು, ದಣಿದು
ಬೆವರಿಳಿಸಿ ಹಗಲು ಇರುಳು
ಕಾಯಕದಿ ದೇಹ ದಂಡಿಸಿ
ಎಲ್ಲರೂ ಮಾಡುವುದು
ಹೊಟ್ಟೆ ಬಟ್ಟೆ ಕುಟುಂಬಕ್ಕಾಗಿ

ದಂಧೆ ಕೊಲೆ ಕಳ್ಳತನ
ಪರ ನಾರಿಯ ಮಾನಭಂಗ
ನಾಯಿ ಬೆಕ್ಕಿನ ಪ್ರಾಣಭಂಗ 
ಎಲ್ಲವೂ ಯಾಕಾಗಿ ಜಗದಿ
ಕುಟುಂಬದ ಹಿತಕ್ಕಾಗಿ

ಪರರ ಹಿಂಸಿಸಿ ಭಂಜಿಸಿ
ಇತರರ ಕದ್ದು ಒದ್ದು ಬಿದ್ದು
ಪೆಟ್ಟು ತಿಂದು. ಕೊಟ್ಟು ಪಡೆದು
ಹಲವರಿಗೆ ಮನ ನೋಯಿಸಿ ಬೈದು
ತಾ ಮೂರು ಹೊತ್ತು ತಿಂದು 
ತಿನ್ನದೆಯೇ ಮನೆಗೆ ತಂದು
ಬಿಸಾಕಿ ಹೊಸಕಿ ಕೆದಕಿ
ತದುಕಿ ಹೇಗೋ ಬದುಕಿ

ಮತ್ತೇಕೆ  ಇದೆಲ್ಲಾ ಗೋಳು?
ಒಂಟಿ ಜೀವಕ್ಕೆ ಕಷ್ಟವೇ ಬಾಳು
ಎಲ್ಲವೂ ಹೊಟ್ಟೆಗಾಗಿ 
ಕುಟುಂಬದ ಜವಾಬ್ದಾರಿಗಾಗಿ
@ಹನಿಬಿಂದು@
14.10.2024

ಹನಿಗವನ

ಹನಿ 
ಅರ್ಹತೆಗೆ ತಕ್ಕಷ್ಟು
ಸ್ಥಾನಮಾನ ಸಿಕ್ಕಿದರೆ
ಅದು ಖುಷಿ!
ಅರ್ಹತೆ ಇದ್ದೂ
ಏನೂ ಸಿಗದೆ ಹೋದರೆ
ಮಂಡೆ ಬಿಸಿ!
ಅರ್ಹತೆ ಇಲ್ಲದವನಿಗೆ
ಆ ಸ್ಥಾನ ಇದ್ದರೆ
ಇತರರಿಗೆ ಮಸಿ!
@ಹನಿಬಿಂದು@
13.10.2024

ನಮಿಸೋಣ

ನಮಿಸೋಣ

ನಮಿಸೋಣ ದೇವರಂಥ ಮಾತಪಿತರ ಚರಣಗಳಿಗೆ
ಬಾಗೋಣ ತಾನುರಿದು ಬೆಳಕ ಕೊಡುವ ದೀಪಗಳಿಗೆ//

ಗೌರವವ ಕೊಟ್ಟು ಕಲಿಯಬೇಕು  ಹಿರಿಯರಿಂದ
ಸೌರಭವ ಬೀರುವ ಶಕ್ತಿ ಪಡೆದ ಗೆಲುವಿನಿಂದ
ಪೌರತ್ವ ಪಡೆದು ಬಾಳಿ ಬದುಕೋ ನಲಿವಿನಿಂದ 
ಹೌಹಾರಿ ಬೀಳದೆ, ತಾಳ್ಮೆ ಎಂಬ ಮಂತ್ರದಿಂದ//

ಕಪ್ಪು ಬಿಳುಪು ಎನ್ನದೆ, ಮೇಲು ಕೀಳು ತೊಡೆದು ಹಾಕಿ
ಸೊಪ್ಪು ಕಾಳು ತಿನ್ನುತ ಆರೋಗ್ಯದ ರಕ್ಷೆ ಮಾಡಿ
ಅಪ್ಪುಗೆಯೇ ಬದುಕಲ್ಲ, ಪ್ರೀತಿ ಸ್ನೇಹ ಮೊಳೆಯಲಿ 
ದಪ್ಪ ಸಣ್ಣ ಬಣ್ಣಕ್ಕಿಂತ ಜ್ಞಾನ ಹೆಚ್ಚು ಬೆಳೆಯಲಿ!//

ಸಂಸ್ಕೃತಿಯ ಉಳಿಸುತ ಗೆಳೆತನವ ಬೆಳೆಸುತ 
ಮಾತೃಭಾಷೆ ನಿತ್ಯವೂ  ಬಳಕೆಯನ್ನು ಮಾಡುತ
ನಾನು ನನ್ನ ನನ್ನದೇ ನನಗೆ ಎಂದು ಮೆರೆಯದೆ
ಸಹಾಯ ಮಾಡೊ ಮನುಜರ ಎಂದೂ ನಾವು ಮರೆಯದೆ//

ಬಾಗಿ ಬಳುಕಿ ಬಳ್ಳಿಯಂತೆ ಭಾವ ಬೀಜ ಬಿತ್ತುತ
ಬಾನವರೆಗೆ ಕೈಯ ಚಾಚೊ ಗುರಿಯ ಇರಿಸಿಕೊಳ್ಳುತ
ಭಾವ ಬೇಧ ಎಲ್ಲಾ ಮರೆತು, ಒಂದೇ ಎಂದು  ಸಾರುತ
ಬಾಕಿ ಉಳಿದ ದಿನಗಳನ್ನು ಭಯವ ಮರೆತು ಕಳೆಯುತ//

ದೈವೀ ಶಕ್ತಿ ಎಂಬ ಬಲದ ಪರಿಸರಕೆ ಬಾಗುತ
ಕೈಲಿ ಇರುವ ಸಮಯವನ್ನು  ಬುದ್ಧಿಯರಿತು ಬಳಸುತ 
ವೈದ್ಯ ಗುರು ಹಿರಿಯರಿಗೆ ನಮಸ್ಕಾರ ತಿಳಿಸುತ
ರೈಲಿನಂತ ಜೀವನದಿ ನೆಮ್ಮದಿಯ ಹುಡುಕುತ//
@ಹನಿಬಿಂದು@
07.10.2024












ಬುಧವಾರ, ಡಿಸೆಂಬರ್ 25, 2024

ರುಬಾಯಿ

ರುಬಾಯಿ 

ಯೋಚನೆ ಮಲ್ಪಡ ಯಾನುಲ್ಲೆ ನಿಕ್ಕ್
ಎಲ್ಲೆನೆ ಎಂಕ್‌ಲ ಈ ಒರ ತಿಕ್ಕ್
ರಡ್ಡ್ ಜನಲ ಒಟ್ಟುಗು ಸೇರ್‌ದ್
ಪಾತೆರ್ ತೂಕ ದುಂಬುದ ದಿನಕ್
@ಹನಿಬಿಂದು@
25.12.2024

ಭಾನುವಾರ, ಡಿಸೆಂಬರ್ 15, 2024

ಬರಹ

ಬರಹ

ಬರೆದೆನೆನುತ ಮೆರೆಯದಿರು 
ತಲೆಬರಹವ ನೀ ಮರೆಯದಿರು
ಹಣೆಬರಹವ ನಾ ಓದಲಾರೆ 
ಭಾವಗಳ ತೊಳಲಾಟ ನೀಗಲಾರೆ

ಬರಹ ಓದುವಂತಿರಲಿ
ನಗೆಯ ಉಕ್ಕಿಸೋ ಶಕ್ತಿ ಇರಲಿ
ಕಹಿಯ ಮರೆಸೋ ಮೌನವಿರಲಿ
ಸಿಹಿಯ ಕೊಡುವ ಪದಗಳಿರಲಿ

ಭಯದ ಗುಣವು ಓಡುತಿರಲಿ 
ಬಡವರನ್ನು ಎತ್ತುವಂತಿರಲಿ
ಬಡತನವನ್ನು ಅಳಿಸಿ ಬಿಡುವ
ಬಡಬಾಗ್ನಿಯು ತುಂಬಿರಲಿ

ಕಡು ಕೆಲಸದ ಕೆತ್ತನೆಯ
ನಡು ಬಿಸಿಲಿನ ಬೆವರ ಹನಿಯ
ಬಿಡುವಿಲ್ಲದ ಬಿದಾರದೊಳಗೆ
ಬೀಡು ಬಿಟ್ಟ ಹಸಿದ ಉದರ 
ಇದರ ಕೆಲಸ ಅನುರಣಿಸಲಿ
ಬರೆದ ಬರಹ ಮಾಸದಿರಲಿ

ತನುಮನವ ಬೆಸೆದಿರಲಿ
ಕನಸ ಗೂಡು ಮುಟ್ಟುತ್ತಿರಲಿ 
ಚಟ ಪಟ ಸಿಡಿಸೋ ಮಾತಿದು
ದುಡ್ಡಿನ ಗುಣ ತಿಳಿದಿರಲಿ

ಪರರ ಮೇಲೆ ಕರುಣೆ ಬರಲಿ
ಜಾತಿ ಮಾತವ ಕಿತ್ತೊಗೆಯಲಿ
ಮೇಲು ಕೀಳು ಹೊಡೆದೋಡಿಸಿ
ಮಾನವತೆಯ ಬೆಳೆಸಿಕೊಳಲಿ

ತರ ತರದ ಮದ್ದು ಇರಲಿ
ಪರ ಪರ ಕೆರೆಯೋನಿಗೂ ಸುಖವಿರಲಿ
ವರವನು ಕೊಡೋ  ದೇವನಿಗೆ ಕೇಳಿಸಲಿ
ಬರಹದುಸಿರು ಶಾಶ್ವತ ಇರಲಿ
@ಹನಿಬಿಂದು@
15.12. 2024

ಶುಕ್ರವಾರ, ಡಿಸೆಂಬರ್ 13, 2024

ಪಾನಿ ಕಬಿತೆ

ಪನಿ ಕಬಿತೆ 

ಬರೆಯರೆ ಪೋಯೆ
ಒಂಜಿ ಪನಿ ಕಬಿತೆ 
ಪೆನ್ನ್‌ಲಾ ಬೂಕುಲಾ
ಪತೊಂದು ಕುಲ್ಲಿಯೇ/

ಬರಿಟ್ ಇತ್ತಿನ 
ಪುಲ್ ಚಾ ಗುಚ್ಚಿಯೆ
ಅಮ್ಮನ ಬಾಯಿಡ್ದ್
ನೆರ್ಪಟ ಕೇನಿಯೆ// 
@ಹನಿಬಿಂದು@
13.12.2024

ಮಂಗಳವಾರ, ಡಿಸೆಂಬರ್ 10, 2024

ಅಂತರ್ಜಾಲ ಕ್ರಾಂತಿ

ಅಂತರ್ಜಾಲ ಕ್ರಾಂತಿ

2ಜಿ 3ಜಿ 4ಜಿ 5ಜಿ
ಇದು ಅಂತರ್ಜಾಲ ಜಗಯುಗವು
ಬೆರಳ ತುದಿಯಲಿ ವಿಶ್ವವ ಕಾಣುವ
 ವೈಜ್ಞಾನಿಕ ಕ್ರಾಂತಿಯ ಮುನ್ನುಡಿಯು

ಕ್ಷಣ ಕ್ಷಣ  ಕಲಿಕೆಯು ವೇಗದ ನಡಿಗೆಯು
ವಿಜ್ಞಾನದ ಆವಿಷ್ಕಾರ ಕೇಳಣ್ಣ
ಚಂದಿರ ಮಂಗಳ ಅಂಗಳದಲ್ಲಿ ಹುಡುಕಾಟವು ನಡೆದಿದೆ ಮಾನವನ
ಅಪ್ಡೇಟ್ ಆಗು ಇಲ್ಲದೆ ಹೋದರೆ ಔಟ್ಡೇಟ್ ಆಗುವೆ ನೋಡಣ್ಣ
@ಹನಿಬಿಂದು@
10.12.1980

ಸೋಮವಾರ, ಡಿಸೆಂಬರ್ 9, 2024

ಶಿಶು ಗೀತೆ

ಬಾರೋ ರಂಗ
ನೋಡು ಮಂಗ
ಬಂತು ಎಲ್ಲಿಂದ?

ತಾರೋ ಹಗ್ಗ
ಹಿಡಿದು ಜಗ್ಗಿ
ಆಡೋಣ ಜಗ್ಗಾಟ?

ನೋಡೋ ಇಣುಕಿ
ಬಾವಿಯ ಒಳಗೆ
ಆಳವು ಎಷ್ಟಂತ?

ಅಮ್ಮ ಬರಲು
ಕೋಲನು ತರಲು
ಓಡೋಣ ಇಬ್ರೂನೂ
ಹನಿ ಬಿಂದು
10.12.2024

ಐನೆಸಲ್

ಬದ್ಕ್

ಕಣ್ಣೀರ್ ಪಾಡಂದೆ ಬದ್ಕ್‌ದ ಕಡಲ್ ದಾಂಟೆರೆ ಬಂಙಂದ್
ಸನ್ನಿ ಮೀರ್ಯರೆ ಐಕ್ ಬೇನೆ ಏಪಲ ಪೋವಂದ್ 
ಏಪೊಗ್ಲಾ ಏರೆಡಲಾ ಸುಳ್ಳು ಪನಿಯರೆ ಆವಂದ್
ಏಸ ಕಟ್ಟೊಂದಾಂಡಲ ನಾಲ್ ಜನತ ಲೆಕ ಇಪ್ಪೊಡು
ಏರ್ಲಾ ನಂಬಯೆರ್ ಹರೀಶ್ಚಂದ್ರೆ ಮಾತ್ರ ಅಂಚಂದ್
@ಹನಿಬಿಂದು@
09.12.2024

ಭಾನುವಾರ, ಡಿಸೆಂಬರ್ 8, 2024

ಬದುಕು

ಬದುಕು

ಯಾಕೋ ಅರಿಯದು ಮನದ ತುಮುಲ
ಒಮ್ಮೆ ಗರಿಗೆದರಿ ಹಾರುವ ಹಂಬಲ
ಮತ್ತೊಮ್ಮೆ ರೆಕ್ಕೆ ಮುರಿದು ಬಿದ್ದ ಸಪ್ಪಳ
ಮಗದೊಮ್ಮೆ ಅತ್ತಿತ್ತಲಿಂದ ಸಹಾಯ, ಜನಬಲ

ಮೌನದಲ್ಲೇ ಜಗವ ಅರಿವ ಕಾತರ
ಮಾತಿನ ಚುಚ್ಚುವಿಕೆ ಹರಿತ ಆತುರ
ಇಂದಿಲ್ಲಿ ನಾಳೆ ಎಲ್ಲೋ ಅರಿತಿರುವಿರ
ಬದುಕಲಿಲ್ಲಿ ಹೋರಾಟ ನಿತ್ಯ ನಿರಂತರ

ಬಾನ ಬಯಲ ಸೀಮೆ ಮುಟ್ಟುವ ಬಯಕೆ
ದಾರಿ ಸವೆಸಲು ಕೂಡಾ ಸಾಗದ ದಿನಕೆ 
ಬೇಕು ಹಲವಾರು ಸಾವಿರ  ದಿನನಿತ್ಯ ಜನಕೆ 
ಸಹಿಸಲು , ಹೊಂದಾಣಿಕೆ ಕಷ್ಟ ಪರರ ಆಶಯಕೆ 

ನೀನೇನು ಸಣ್ಣ? ನಾನೆಲ್ಲಿ ಹಿರಿಯ?
ದುಡ್ಡಿದ್ದವ ದೊಡ್ಡಪ್ಪ  ಜೀವಿಸುವ  ನಿರ್ಭಯ!
ಬಡತನದ ಕೂಪದಿ ಬೆಂದ ಬದುಕು ಸಾಕು
ಮತ್ತಷ್ಟು ಮಗದೊಂದಿಷ್ಟು ಜನಕೆ ನಮ್ಮಿಂದಲೇ ಬೇಕು!!

ಕಿತ್ತುಕೊಂಡವನ ಬಗ್ಗೆ ದೇವರಿಗಿಲ್ಲ ಕೋಪ
ಕಳೆದುಕೊಂಡವನಿಗೂ ಇಲ್ಲ ನಿಜ ಕರುಣೆ ಅನುಕಂಪ
ಜೋರಾದರೆ ಬದುಕಿಯಾನು ಬುವಿಯಲ್ಲಿ , ಪಾಪದವನಲ್ಲ
ಹೊಡಿ ಬಡಿ ಕೊಲ್ಲು ಸಾಯಿಸು ಎಂದವಗೆ ಕಾಲವಿಲ್ಲಿ! 

 ಪುಣ್ಯ ಪಾಪಕ್ಕೆ ಹೆದರಿ ಓಡಿ ಹೋಗಿದೆ ಎಲ್ಲೋ
ನ್ಯಾಯ ಅನ್ಯಾಯದಿಂದ ತಲೆಮರೆಸಿ ಕೂತಿದೆ ಮೂಲೆಯಲಿ ಮತ್ತೆಲ್ಲೋ
ಹಣವಿದ್ಧವನ ಬೆನ್ನಲ್ಲಿ ಜೋತು ಬಿದ್ದಿದೆ ಉದ್ಧಾರ
ಬಡವನೆಂದೂ ಪರದಾಡುವ ನೇರ ದಾರಿ ಇಂದು  ಮಿಥ್ಯ

ಸಂಕಟ ನೋವು ಬೇಸರ ಬೇನೆಗಳ ಬಾಳು ವ್ಯರ್ಥ
ಸತ್ಯ ಹೇಳಿದರೆ ಸತ್ತು ಹೋಗುವ
ಅನ್ಯಾಯ ಮಾಡಿದವ ಅನ್ನ ತಿನ್ನುವ ಕಾಲವಿದು
ಕಾಲದ ಜೊತೆ ಓಡಲು ಕಲಿತರೆ ಬದುಕುವೆ
ಮೀನು ಹಾರಿತೆಂದು ಏಡಿ ಹಾರಲು ಹೋದರೆ 
ಮುರಿದೀತು ಕೈ ಕಾಲ ಬೆರಳು ತಕ್ಷಣವೇ

ಮತ್ತೆಲ್ಲಿಯ ನಾಳೆ ಮತ್ತೆಲ್ಲಿಯ ಕನಸು
ಮತ್ತೆಲ್ಲಿಯ ಅವನು ಮತ್ತೆಲ್ಲಿಯ ಸಹಾಯ
ಮತ್ಯಾರ ಅಭಯ. ಜಯ, ಕಾತರ, ನಂಬಿಕೆ?
ಮತ್ತಾರು ನಮ್ಮವರು, ಸಹಾಯಕರು, ಬೆಂಬಲಿಗರು

ನಾವೆಲ್ಲಾ ನಿತ್ಯ ಒಂಟಿಗಳಿಲ್ಲಿ ಧರೆಯಲಿ 
ಪರಮಾತ್ಮ ಆಡಿಸುವ ಆಟಗಾರ ಅಲ್ಲಿ
ಸಾವಿಗಾಗಿ ದಿನವೊಂದು ಬರಲಿದೆ ಇಲ್ಲಿ
ಅಲ್ಲಿವರೆಗೂ ಹಿಂದೆ ನೋಡದೆ ಓಡುತ್ತಾ ಗೆಲ್ಲಿ
@ಹನಿಬಿಂದು@
09.12.2024

ಶನಿವಾರ, ಡಿಸೆಂಬರ್ 7, 2024

ಕನ್ನಡ ಪದ

ಕನ್ನಡ ಪದ

ಬರಹಕೆ ಭಾಷೆಯು ಎಲ್ಲಿಹುದಣ್ಣ 
ಭಾವವೆ ಮುಖ್ಯ ಆಲ್ವೇನಣ್ಣ?
ಮನದ ಭಾವಗಳ ಹೆಕ್ಕಿ ತೆಗೆಯುತ 
ಸುಂದರ ಪದಗಳ ಮಾಲೆ ಪೋಣಿಸುತ

ಗರಗರ ತಿರುಗುವ ಬುಗರಿಯ ಅಂದದಿ 
ಶ್ರುತಿ ಲಯ ತಾಳಕೆ ಸರಿ ಹೊಂದಿಸುತ
ಕೃತಿ ರಚಿಸಿದ ಕವಿ ಗದ್ಗದಿತ
ತನ್ನೊಡಲ ಕವನದ ನಿಜ ಉದಿತ 

ಭಾವ ಬಳ್ಳಿಯ ಬೀಜ ಮೊಳೆಯಲು 
ಹಾಡಿನ ರೂಪದಿ ಹಣ್ಣಾಗಿ ಬೆಳೆಯಲು
ನಾಲ್ಕಾರು ಹೃದಯ ಓದಿ ತಣಿಯಲು
ಕವಿಯು ಸಾರ್ಥಕತೆ ಪಡೆದು ಬಾಳಲು

ಕನ್ನಡ ಭಾಷೆಯ ಸೊಗಡೆ ಮಧುರ
ಪದಗಳ ಆಟವು ಇಲ್ಲಿ ಹಗುರ
ಭಾವದ ಬಿಂಬವು ಬಹು ಸರಳ
ಸಾಹಿತ್ಯದ ಬಾಳ್ವಿಕೆ ಎಂದೂ ಅಮರ
@ಹನಿಬಿಂದು@
08.12.2024

ಶುಕ್ರವಾರ, ಡಿಸೆಂಬರ್ 6, 2024

ಪನಿ ಕಬಿತೆ

ಮರ್ಮಲ್

ಮೋಕೆದ ಮರ್ಮಲ್ 
ಕೈತಲ್ ಬತ್ತಲ್ 
ದಾದಂದ್ ಕೇನ್ನಗ
ದಾಲಿಜ್ಜಿ ಪಂಡಲ್
ಮಿಠಾಯಿ ಕಂದಿನ 
ರಡ್ಡ್  ಕೊರಿಯೆ
ಪಾರ್ ಪೋಯಲ್
ಯಾನ್ ಒರಿಯೆ 
@ಹನಿಬಿಂದು@
06.12.2024

ಸೋಮವಾರ, ಡಿಸೆಂಬರ್ 2, 2024

ಪ್ರಾರ್ಥನೆ

ಪರಶಿವ ನಿನ್ನನು ಪರಿ ಪರಿಯಲಿ ಬೇಡುವೆ
ಪರಿಶೀಲಿಸ ಬೇಡವೋ ನನ್ನ
ಪರದೆಯ ಹಿಂದೆ ಮುಂದೆಯೂ ಒಂದೇ
ಪರಪಂಚದಿ ನಾ ಒಂದೇ..

ಪರೀಕ್ಷೆಯ ಕಷ್ಟದಿ ಒಡ್ಡದಿರೂ ನೀ
ಪಾರ್ವತಿ ಪತಿಯೇ ಕೇಳು
ಪ್ರಸಾದ ನಿನ್ನದು ನಾ ಕಲಿಕಾರ್ಥಿ
ತಡೆ ನೀ ನನ್ನಯ ಬೀಳು

ಪ್ರಾರ್ಥನೆ ಮಾಡುವೆ ನಿತ್ಯವೂ ಹೀಗೆ 
ಪ್ರೀತಿಯಲಿ ನನ್ನ ಹರಸು
ಪ್ರೇರಕ ಶಕ್ತಿಯ ನೀಡಿ ಕಾಪಾಡುತ 
ಪ್ರೇರಣೆ ನೀಡುತ ಕಲಿಸು 

ಪುರದಲೂ ಸ್ವರದಲೂ ಪತ್ರಿಕೆಯಲ್ಲೂ
ಪ್ರಚಾರ ಪ್ರಿಯನು ನಾನಲ್ಲ
ಪರಿಸರ ಕಾಪಾಡೋ ಪರಿಚಯ ಮಾಡಿಸು 
ಪ್ರಕೃತಿಯೊಡನೆ ಬೆರೆಯ ಬೇಕಲ್ಲ..
@ಹನಿಬಿಂದು@
28.11.2024

ಚುಂಗುಡಿ

ಚುಂಗುಡಿ 

ನುಂಗು
ಗುಡ್ಡೆಗ್ ಪೋಯೆ ತುಚ್ಚಿಂಡ್ ಒಂಜಿ ನುಂಗು
ಅಮ್ಮ ಪಂಡೆರ್ ಗಾಯ ಬೇಗ ನುಂಗು
@ಹನಿಬಿಂದು@
03.12.2024

ಸೋಮವಾರ, ನವೆಂಬರ್ 25, 2024

ಭಾವಗೀತೆ

ಭಾವಗೀತೆ
ನಾನೂ ಕೆಲಸ ಮಾಡುವೆ

ಬಟ್ಟೆ ಒಗೆದು ಪಾತ್ರೆ ತೊಳೆದು
ನಾನೂ ಅಡುಗೆ ಮಾಡುವೆ
ಅಕ್ಕಿ ರುಬ್ಬಿ ಸಾಮಾನು ಅರೆದು
ಇಡ್ಲಿ ಸಾಂಬಾರ್ ಬಡಿಸುವೆ

ಅಮ್ಮ ನಿನ್ನ  ಜೊತೆಗೆ ಸೇರಿ
ಮುದ್ದು ಹಾಡು ಹಾಡುವೆ
ತಮ್ಮ ತಂಗಿ ಬರಲಿ ಬೇಗ
ಲಲ್ಲೆಗರೆದು ಕಾಡುವೆ

ಕಲ್ಲು ತಿರುವಿ ಖಾರ ಕಡೆದು
ಹಿಟ್ಟು ತಯಾರು ಮಾಡುವೆ
ಉದ್ದು ಅರೆದು ಕಲಸಿ ಇಟ್ಟು 
ವಡೆಯ ಬಿಸಿ ಮಾಡುವೆ 

ನಾನು ನಿನಗೆ ಸಹಾಯ ಮಾಡಿ
ಕೆಲಸ ಸುಲಭ ಮಾಡುವೆ
 ಕಾರ್ಯವಲ್ಲ  ನನಗೆ ನೀಡು 
ಅಮ್ಮ ಸಾಕಿ ಸಲಹುವೆ
@ಹನಿಬಿಂದು@
25.11.2024

ಕೈಕುಲು

ಕೈಕುಲು

ನಮ್ಮಕ್ಲೆನ ಕೈಕುಲು ಒರ ತಿಕ್ಕಿನ ಖುಷಿಕ್ ಕೈ ಕೊರ್ದು
 ಅಲ್ಗದ್ ತರ್ಕ್ ಪತ್ತುನ ಮಾತ್ರ ಅತ್ತ್ !
ನಮ್ಮಕ್ಲೆ ನ ಕೈಕುಲು ಗುಂಡಿಗ್ ಬೂರಿನ ನಮನ್ ದೆರ್ತ್ 
ಪತ್ತುನವು, ಪತ್ ದೆರ್ತ್ ಪಾಡೊಡಾಯಿನವು!

ನಮ್ಮಕ್ಲೆನ ಕೈಕುಲು ನಮ್ಮ ಕಣ್ಣೀರ್‌ನ್ ಒರೆಸೊಡಾಯಿನ ಕೈತಲ ಪುರ್ಪೊಲು 
ನಮ್ಮಕ್ಲೆನ ಕೈಕುಲು ನಮನ್ ಬೂರ್ಯರೆ ಬುಡಂದೆ ನಮ್ಮೊಟ್ಟಿಗೆ ಉಂತುನ ಉಡಲ ಸೊತ್ತುಲು!

ನಮ್ಮಕ್ಲೆನ ಕೈಕುಲು ನಮಕ್ ನುಪ್ಪು ಬಾಯಿಗ್ ದೀಪಿನ  ಸೊಲ್ಮೆದ  ಮುಡಿಪುಲು
ನಮ್ಮಕ್ಲೆನ ಕೈಕುಲು ನಮ ಜೆಪ್ಪುನಗ ತೂಂಕುದು ತಟ್ಟುನ ಬೊಳ್ಳಿದ ದೀಪೊಲು!

ನಮ್ಮಕ್ಲೆನ ಕೈಕುಲು ನಾಲಯಿ ತತ್ತ್ಂಡ ಕಿನ್ಕ್ ದ್ ಸರಿ ಮಲ್ಪುನ ಸೂಜಿಲು
ನಮ್ಮಕ್ಲೆನ ಕೈಕುಲು ಜಾರ್‌ನಗ ಸರ್ತ ಉಂತವುನ ಬೇಲಿದ ಗೂಟೊಲು!

ನಮ್ಮಕ್ಲೆನ ಕೈಕುಲು ಬೆರಿ ತಟ್ಟ್ ದ್ ಸಾಯ ಕೊರ್ದು ಯಾನುಲ್ಲೆ ಪನ್ಪಿನವು!
ನಮ್ಮಕ್ಲೆನ ಕೈಕುಲು  ಲಕ್ಕದ್ ಕುಲ್ಲದ್ ಬೇಲೆ ಕೊರ್ದು ನಮ್ಮ ಕಾರ್‌ಡ್  ನಮನ್ ಉಂತವುನವು !!
@ಹನಿಬಿಂದು@
25.11.2024







ಭಾನುವಾರ, ನವೆಂಬರ್ 24, 2024

ನವಿಲುಗರಿ

ನೀನಿತ್ತ ನವಿಲುಗರಿ
ನಿನ್ನೊಳಿಹುದು ತಲೆಯ ಮೇಲೆ ಅಂದದ ನವಿಲುಗರಿ
ತನ್ನೊಳಗೆ ತಾನು ಕಲಿತು ಮೆರೆಯಬೇಕು ಸಿರಿ

ದೀಪ ಬೆಳಕು ಶಾಂತಿ ಮಂತ್ರ ಭಕ್ತಿ ಬೇಕು ಸದಾ
ಕೃಷ್ಣ ನಿನ್ನ ಕೊಳಲ ದನಿಯ ಕೇಳಿ ನಾನು ಫಿದಾ
ಗರಿಯ ಬಿಚ್ಚಿ ಕುಣಿವ ನವಿಲ ಖುಷಿಯ ಹಾಗೆ ಇಂದು
ನಿನ್ನ ನೆನೆದು ಬಾಳಿನಲ್ಲಿ ನಿತ್ಯ ಹಸಿರು ಮುಂದು

ಚುಕ್ಕೆ ತಾರೆ ಹೊಳೆಯುವಂತೆ ಮನದ ತುಂಬ ನಗು
ಪಕ್ಕದಲ್ಲಿ ರಾಧೆ ಇರಲು ಬಾಳ ಜೊತೆ ಹಿಗ್ಗು
ನಾನು ನೀನು ಎನಲು ಏನು ಬೇರೆ ಎಂಬ ಭಾವ
ಪ್ರೀತಿಯಲ್ಲಿ ಎಲ್ಲರೊಂದೆ ನೋವ ನೀಗಿ ಜೀವ

ತಾನು ತನ್ನದೆನುವ ತನ್ನತನದ ನೋವು ಸಾಕು
ನೀನೇ ಎನಲು ಬದುಕ ನಾವೆ ಮುಂದೆ ಸಾಗ ಬೇಕು
ಮುದದಿ ನಂಬಿ ದಿನವ ಕಳೆಯೆ ಹಿತವು ಇಹುದಿಲ್ಲಿ
ಸಂಗೀತದ ಅಲೆಯು ಹೊಮ್ಮಿ ನಿತ್ಯ ಗಾನ ಚೆಲ್ಲಿ
ಹನಿ ಬಿಂದು 
24.11.2024

ಚುಂಗುಡಿ

ಚುಂಗುಡಿ

ಮಲ್ಲ 

ಆ ಜನ ಪಾತೆರುನಿ ಬಾಯಿಡ್ ಭಾರಿ ಮಲ್ಲ
ಸಾಲ ಉಂಡುಗೆ ನಾಲ್ ಬ್ಯಾಂಕ್‌ಲೆಡ್ ಮಲ್ಲ ಮಲ್ಲ!
@ಹನಿಬಿಂದು@
24.11.2024

ಶುಕ್ರವಾರ, ನವೆಂಬರ್ 22, 2024

ನಿಸರ್ಗ

ನವೆಂಬರ್ ಡಿಸೆಂಬರ್ ತಿಂಗಳಿಡೀ ಚಳಿ ಒಂದೆಡೆ ಆದರೆ, ನಮ್ಮ ಕರಾವಳಿಯಲ್ಲಿ ಚಳಿ ಎಂಬುದು ಕಡಿಮೆ ಬಿಡಿ, ಆದರೆ ಈ ಸಮಯ ಇಷ್ಟವಾಗುವುದು ಎಲ್ಲಾ ಹೂವುಗಳಿಂದ. ಈಗ ಜೂನ್ ಜುಲೈನಲ್ಲಿದ್ದ ಹಸಿರು ಬರಿದಾಗಿ ಸ್ವಲ್ಪ ಒಣಗಿದ ಚಾಯೆಯ ಗಿಡ ಮರಗಳು. ಕೆಲವು ಎಲೆ ಉದುರಿಸಿ ಬೋಳಾದರೆ ಇನ್ನೂ ಕೆಲವು ಹೂವಿನಿಂದ ಬಣ್ಣ ಬಣ್ಣ. ಕ್ರಿಸ್ಮಸ್, ಹೊಸ ವರ್ಷಗಳ, ಜಾತ್ರೆ, ತೇರು, ನುಡಿ ತೇರಿನ ಅಬ್ಬರದ ಬಣ್ಣದ ಅಲಂಕಾರ ಒಂದೆಡೆಯಾದರೆ ಪ್ರಕೃತಿಯೇ ಈ ಸಮಯದಲ್ಲಿ ಬಣ್ಣ ಬಣ್ಣಗಳಿಂದ ಸಿಂಗರಿಸಿಕೊಳ್ಳುವುದನ್ನು ನೋಡಲು ಅದೇನು ಆನಂದ! ಪ್ರಕೃತಿ ಪ್ರೇಮಿಗಳಿಗಂತೂ ನಿಸರ್ಗ, ನೇಸರ ಎಂದಿಗೂ ಬೇಸರ ತಾರದು ಬಿಡಿ 
   ಇಂತಹ ಸಮಯದಲ್ಲಿ ನನ್ನ ಸೆಳೆದದ್ದು ಹುಲ್ಲಿನ ಹೂವು. ಮೈ ಬಣ್ಣ, ಕೆಂಪು, ತಿಳಿ ಹಳದಿ, ಕುಂಕುಮ ಬಣ್ಣ (ಮರೂನ್) ಹೀಗೆಲ್ಲಾ ಕಂಬಳಿ ಹುಳದ ಮೈಯ ಹಾಗೆ ಕಾಣುವ ಈ ಹೂವಿನ ಗುಂಪು ನೋಡಲು ಅದೇನೋ ಆನಂದ. ನಾನಂತೂ ನನ್ನೊಳಗೆ ಕಳೆದು ಹೋಗಿ ಬಿಡುತ್ತೇನೆ. ಪ್ರಕೃತಿಯೊಂದಿಗೆ ಒಂದಾಗಿ ಅದು ಯಾವುದೋ ಲೋಕಕ್ಕೆ ಜಾರಿ ಬಿಡುತ್ತೇನೆ. ಸಾಯಂಕಾಲದ ಸೂರ್ಯಾಸ್ತ, ಬೆಳಗ್ಗಿನ ಸೂರ್ಯೋದಯ, ಮಧ್ಯಾಹ್ನದ ಮಟಮಟ ಬಿಸಿಲಿಗೂ ಅದರ ಅಂದ ದುಪ್ಪಟ್ಟು ಹೆಚ್ಚಾಗುವುದೇ ವಿನಃ ಕಡಿಮೆಯಂತೂ ಆಗದು. ಗಾಳಿ ಬಂದರೆ ಸಾಕು ಚಿಕ್ಕ ಮಕ್ಕಳನ್ನು ಆಡಲು ಮೈದಾನಕ್ಕೆ ಬಿಟ್ಟ ಹಾಗೆ ಕುಣಿಯುವ e ಹೂವುಗಳ ಅಂದ ವರ್ಣಿಸಲು ಬಾರದು. 
    ನೀವೂ ಗಮನಿಸಿದ್ದೀರಾ? ಇನ್ನು ಸ್ವಲ್ಪ ದಿನ ಮಾತ್ರ ಈ ಅಂದ. ಮತ್ತೆ ತನ್ನಷ್ಟಕ್ಕೆ ತಾನೇ ಬಿಸಿಲಿಗೆ ಮಾಗಿ, ಒಣಗಿ ಕಾಯಾಗಿ ಮತ್ತೆ ಗಿಡವಾಗಿ ಹುಟ್ಟಲು ಜೂನ್ ಬರಬೇಕು. ಮಾರ್ಚ್ ಏಪ್ರಿಲ್ ಒಣ ಹುಲ್ಲೇ ನೋಡಬೇಕು ಅಷ್ಟೇ. Vidya Nayak ಮೇಡಂ ಮೊದಲೇ ಅದರ ಒಳಗೆ ಉಣ್ಣಿ ಇರುತ್ತದೆ. ಹೋಗುವಾಗ ಜೋಪಾನ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಅದನ್ನೂ ಪಾಲಿಸ ಬೇಕಾಗಿದೆ. ಆದರೂ ಅದು ಒಣಗುವ  ಮೊದಲೊಮ್ಮೆ ಇದರ ಅಂದವ ಕಣ್ಣಾರೆ ಕಂಡು ಮನಸಾರೆ ಸವಿದು ಖುಷಿ ಪಡೋಣ ಅಲ್ಲವೇ? ನೀವೇನಂತೀರಿ? 
ಹನಿ ಬಿಂದು #naturelovers

ಗುರುವಾರ, ನವೆಂಬರ್ 14, 2024

ಶುಭಾಶಯ

ಶುಭವಾಗಲಿ

ಶುಭವಾಗಲಿ ನಿಮಗೆ ಶುಭವಾಗಲಿ
ಜನುಮ ದಿನದ ಸಂತಸವು ಸವಿಯಾಗಲಿ
ಬದುಕೆಂಬ ಕಾಲುವೆಯು ಶುಚಿಯಾಗಿ ಇರಲಿ
ಸುಖವೆಂಬ ದೋಣಿಯು ತೇಲುತಿರಲಿ

ಶಿಸ್ತನ್ನು ತಾ ಗೆದ್ದು ಸರ್ವರ ಮನಗೆದ್ದು
ಮಸ್ತಕದಿ ಜ್ಞಾನವನು ತುಂಬಿಕೊಂಡಿದ್ದು
ಕಷ್ಟ ಕಾರ್ಪಣ್ಯಗಳ ಮೆಟ್ಟಿ ನಿಂತಿದ್ದು
ಶಿಷ್ಟರ ಸಂಘದಲಿ ಕ್ಷಣವೂ ನಗುತ್ತಿದ್ದು

ರೋಗ ರುಜಿನಗಳ ಕಂತೆ ದೂರವೇ ಉಳಿದಿರಲಿ
ಸಕಲ ದುರಿತಗಳ ಚಿಂತೆ ನಾಶವಾಗಲಿ
ನೋವ ಅಂಶಗಳೆಲ್ಲ ನೀಗಿ ಹೋಗಿ ಬಿಡಲಿ
ಕ್ಷಣ ಕ್ಷಣದ ಖುಷಿಯೂ ನಿಮ್ಮದಾಗಲಿ

ಬಾಳೆಂಬ ಪಯಣದಲಿ ಜೊತೆಗಾರರು ನಾವು
ಶಾಲೆಯೆಂಬ ದೇಗುಲದಿ ಜೊತೆ ಸೇರಿದವರು
ಕೆಲಸದ ನೊಗ ಹೊತ್ತು ಸಾಗುತಿದೆ ಬದುಕಿನಲ್ಲಿ
ಜನುಮ ದಿನಾಕಿದೋ ಶುಭಾಶಯವು ಇಲ್ಲಿ
@ಹನಿಬಿಂದು@
14.11.2024

ಬುಧವಾರ, ನವೆಂಬರ್ 13, 2024

ರೂಬಾಯಿ

ರುಬಾಯಿ 

ರಾವೊಂದು ಬತ್ತಲ್ ರಾಯೆರೆ ಮಗಲ್ 
ಪಾರೊಂದು ಪಕ್ಕಿದ ಲೆಕ್ಕನೆ  ಮುಗಲ್ 
ಸಾರೊಂದು ನಿಕ್ಲೆ ಗ್ ಯಾನುಲ್ಲೆ ಪಂದ್ 
ಬೂರೊಂದು ಲಕ್ಕ್‌ದ್  ತಿರ್ಗ್ಯ‌ಲ್ ಆಲಲ್ಲ್
@ಹನಿಬಿಂದು@
13.11.2024

ಮಂಗಳವಾರ, ನವೆಂಬರ್ 12, 2024

ನೆನೇಕೆ

ಚಿಟ್ಕಾ 

ನೆನೆಕೆ 

ಬೊಲ್ಪು ಕೊರ್ಪಿ ಸೂರ್ಯೆ ಈಲ
ತೆಲ್ಪು ನಿಚ್ಚ ಪಗೆಲ್ ಉರಿಲ
ಗೆಲ್ಪು ಕಷ್ಟ ಬೂಮಿದ ಮಿತ್ತ್ ಲ
ನೆಂಪು ದೀಲ  ಉಲ್ಲೆ  ಚಂದ್ರೆಲ
@ಹನಿಬಿಂದು@
12.11.2024

ಶುಕ್ರವಾರ, ನವೆಂಬರ್ 8, 2024

ಪನಿಕವಿತೆ

ಪನಿ ಕವಿತೆ

ಬಯ್ಯ

ಸೂರ್ಯನ್ ತೂಯೆರೆ ಪಂಡ್‌ದ್
ಸೂರ್ಯೆ ಪೋಯೆ ಕಡಲ ಬರಿಕ್
ದೋಸ್ತಿನಕ್ಲೆನ್ಲ ಲೆತೊಂದು
ಸೂರ್ಯೆ ಕಂತ್ಯೆ, ಇಂಬೆ ದಂಗಯೆ
ಎಚ್ಚಾದ್ ತಾದಿಡೆ ಬೂರ್ಯೆ 
@ಹನಿಬಿಂದು@
08.11.2024

ಗುರುವಾರ, ನವೆಂಬರ್ 7, 2024

ಟಂಕಾ

ಟಂಕಾ

ಆಲ್ ಮಗಲ್ 
ಬೇಲೆ ಆವಂದ್ ಪಂದ್
ದೂರ ನೂಕಡೆ
ಪೊಣ್ಣ ತಾಕತ್ ತೂಲೆ 
ಛಾನ್ಸ್‌ನ್  ಕೊರ್ದು ಪಲ್ಲೆ
@ಹನಿಬಿಂದು@
07.11.2024

ಶನಿವಾರ, ನವೆಂಬರ್ 2, 2024

ಹಾಯ್ಕು

ಹಾಯ್ಕು 

ಮಲ್ಲ ಜನಕ್ಲೆ
ಎಲ್ಯ ಮನಸ್‌ಲು
ಬೇಗ ಗೊತ್ತಾಪ!
@ಹನಿಬಿಂದು@
02.11.2024

ಸೋಮವಾರ, ಅಕ್ಟೋಬರ್ 28, 2024

ತುಳು

ಐನೆಸಲ್ 

ಸಾವಿರ ಕೊರ್ಂಡಲ ಸಾಧನೆ ಮಲ್ಲ
ಸಾವು ಬರೊಡ್ಡ ದುಂಬು ದಾಲ 
ಮಲ್ತ್ ತೋಜವೊಡು ಬೇಲೆ ಒಂತೆ 
ಬದ್‌ಕ್ ಉಂದು ಮಲ್ಲ ಸಂತೆ
ಜಾರ್‌ದ್ ಬೂರಡ ಸಾಗ್‌ಲ ಮೆಲ್ಲ
@ಹನಿಬಿಂದು@
28.10.2024

ಭಾನುವಾರ, ಅಕ್ಟೋಬರ್ 27, 2024

ಚೆಂಗುಡಿ

ಚುಂಗುಡಿ

ರಾತ್ರೆಡ್ ಬೂರುಂಡು ರಕ್ಕಸನ ಕನ 
ನಿದ್ರೆಡೇ ಕೇಂಡೆ ಹಾಕ್ಯರೆ ಸೋಂಟೆ ಕನ!
@ಹನಿಬಿಂದು@
27.10.2024

ಶುಕ್ರವಾರ, ಅಕ್ಟೋಬರ್ 25, 2024

ಬದುಕುವ ಕಲೆ

ಬದುಕುವ ಕಲೆ

ಬದುಕಿನ ಬೆಳೆಯದು ಬದುಕುವ ಕಲೆಯು 
ಅರಿತವ ಬಾಳುವ ಮರೆತವ ಸಾಯುವ
ಬಾಲ್ಯದ ದಿನದಲಿ ಆಟವು ಪಾಠವು
ಕಲಿಕೆಗೆ ಬೇಸರ ಬರದಿರೆ ಸ್ವರ್ಗವು 

ಯೌವ್ವನ ಬರಲು ಆಕಾಶಕೆ ಏಣಿ
ಮೇಲೇರುವ ಗೀಳು, ಹೆಣ್ಣಿನ ಅಮಲು
ಧ್ಯೇಯವು ಇರಲು ಬಾಳದು ನೂಲು
ಗುರಿಯನು ಮರೆಯಲು ಮುಂದಿದೆ ಸೋಲು!

ಮದುವೆಯ ಬಳಿಕ ಬೇರೆಯೆ ವಿರಾಟವು
ಹೊಂದಾಣಿಕೆ ಎಂಬ ಕಷ್ಟದ ನೋಟವು
ಮೇಲು ಕೀಳಿನ ನೋವು ನಲಿವಿನ
ಗೆಲ್ಲುವ ಸೋಲುವ ಆಕಾಶದ ಏಣಿಯು 

ಮುಂದಿದೆ ರೋಗಗಳೆಂಬಾ ಭೀತಿಯು 
ದೇಹ ಮನಸಿನ ಸೌಖ್ಯದ ನೀತಿಯು
ತನ್ನ ತಪ್ಪಿಗೆ ತನಗೇ ನೋವದು
ಹಂಚಲು ಆಗದು ತನುಮನ ಗಾಯವು 

ಕೊನೆಗೆ ಮುಗಿಯುವ ಬಾಳಿನ ಕಾರ್ಯವು
ಒಂದಿನ ನಿಲ್ಲುವ ಆಟದ ಮನೆಯು
ನೀನು ನಾನು ಎಲ್ಲವ ಮರೆತು
ನೀನೇ ಎಲ್ಲಾ ಎನ್ನುವ ಗೀತೆಯು
@ಹನಿಬಿಂದು@
25.10.2024

ಭಾವಗಳು

ಭಾವಗಳು

ಭಾವಗಳ ತೂಕವದು ಭಾವನೆಗೆ ನಿಲುಕದ್ದು
ಅಲ್ಲವೇ ನನ್ನೊಲವೆ ಕೇಳು ನೀನು?
ನಾವೆಯಲಿ ಪಯಣಿಗರು ನಾವೆಲ್ಲ ಇಲ್ಲಿ
ಸಲ್ಲದು ರೋಷ ದ್ವೇಷ ಮೋಸದಾಟ

ಕಾವ ಕಬ್ಬಿಣದ ತುದಿಯ ನಡಿಗೆ ಬೇಕಿಲ್ಲಿ
ಸಾವು ಬರುವರೆಗೆ ನಿತ್ಯ ಪಯಣ
ನೋವ ನುಂಗುತ್ತಾ ನಗಬೇಕು ಸತ್ಯ
ಬೇವು ಬೆಲ್ಲದ ಜೀವನದ ಸಾಂಗತ್ಯ

ತಾನು ತನ್ನದು ತನಗೆ ಎನುವ ಆಸೆಯು ಬೇಡ
ನಾವು ನಮ್ಮದು ನಮಗೆ ಎನ್ನುವುದು ಇರಲಿ
ಕಾವು ಕೊಡುತಲಿ ಬಿಸಿಯ ಹೆಚ್ಚಿಸಿ ಜೀವ
ಮೊಳೆಯುವ ತವಕ ಹೊಸ ಬಾಳಿಗಾಗಿ

ಭಾವನೆಯ ಭರವಸೆಯು ನಾಳಿನ ನಂಬಿಕೆಯು 
ಭೋಗ ಭಾಗ್ಯದ ಆಸೆ ಒಳಗೊಳಗೆ 
ಜಾವದಲಿ ಎದ್ದು ಆಟ ಪಾಠದಲಿ ಬಿದ್ದು
ನೋಟದೊಳಗಿನ ಮನದ ಯೋಚನೆಯ ಬೇರು..
@ಹನಿಬಿಂದು@
25.10.2023

ಗುರುವಾರ, ಅಕ್ಟೋಬರ್ 24, 2024

ತುಳು ಪದ

ತುಡರ್ ಪರ್ಬ

ಬತ್ತ್ಂಡಕ್ಕ ಬತ್ತ್ಂಡಣ್ಣ ತುಡರ್ ಪರ್ಬಯೇ
ದೀಪ ಸಾಲ್ ತೋಜೊಂದುಂಡು ಮಾತ ಕಡೆಟ್‌ಯೇ//


ಸಾರ  ಮಾನಿ ಕುಸಿನ್ ಪಟ್‌ದ್ ನಡಪಿ ಸೋಕುಯೇ
ಕಾರ್ ಪತ್ತಿ ನಟ್ಟಿ ವರನ್ ಮಲ್ಲಕ್ಲೆಡಯೇ....
ಬಲಿಯೇಂದ್ರೆ ಜತ್ತ್ ಬತ್ತ್  ತೂಪಿ ಪೊರ್ಲುಯೇ
ಎಣ್ಣೆ ಪೂಜಿ ಮೀಪಿ ಸುಖಲ ಏರೆಗುಂಡುಯೇ//

ಗುರ್ಕೆ ದಿಂಜ ನೀರ್ ಪಾಡ್ದ್ ತೂಪಿನೇರ್‌ಯೇ
ಬಲಿಯೇಂದ್ರಗ್ ಕೂ ಪಾಡುನ ದಾದ ಮರ್ಲ್‌ಯೇ
ಮಾಮಿ ಮರ್ಮಲ್ ಕೂಡ್ಡು ಮಲ್ತಿ ಅಟಿಲ ಕಮ್ಮೆನ
 ಮಾಮು ಮರ್ಮಯೆ ಒಟ್ಟು ಕುಲ್ದು ಉನ್ಪಿ ಸಮ್ಮನ//

ಬಿನ್ನೆ ಇಷ್ಟೆ ದೋಸ್ತಿ ಪಂದ್ ಮಾತ ಬತ್ತೆರ್ 
ಪೊನ್ನೆ ಗೋಂಕು ಕುಕ್ಕುದ ಮರ ಮಾತ ತೂಯೆರ್
ಪೇಂಟೆಡಿತ್ತಿ ಜೋಕ್ಲು ಮಾತ ನಲ್ತ್ ತಿರ್ಗೆರ್
ಸೋಂಟೆ ಪತ್‌ದ್ ಕಂಡಡಕುಲು ಮಾತ ಬಲ್ತೆರ್ //

ದುರ್ಸು ಮಾಲೆ ಲಕ್ಷ್ಮಿ ಬಾಂಬು ಪುಡಾತ್ ಬುಡ್ಯೆರ್
ನೆಲ ಚಕ್ರ ಬೆದ್‌ರ ಪುಂಡೆಲ್ ತೂದು ನಲ್ತೆರ್
 ಬೋಂಟೆ ದೇರ್ಯರೆಂದ್ ಪಂದ್ ಕಾಡ್ ಪೊಗ್ಯೆರ್
ಓಂಟೆ ಬೆತ್ತ ಕಂತ್ ಮಲ್ಲ ಬಟ್ಟಿ ಮಲ್ತೆರ್ //
@ಹನಿಬಿಂದು@
24.10.2024

ಬುಧವಾರ, ಅಕ್ಟೋಬರ್ 23, 2024

ತುಳು ಅಪ್ಪೆ

ತುಳು ಅಪ್ಪೆ 

ಬರೆಪಿ ತರೆ ಕೊರ್ಪಿನ ಅಪ್ಪೆ 
ತೆರಿದಿ ಮೆರೆಪಿನ ದಿನ ಬರುವಪ್ಪೆ
ಬರಿತ ಇಲ್ಲದ ಅಕ್ಯೆ ಲೆಕ್ಕನೆ
ಮರತಿ ನೆಂಪುನು ಪಿರ ಪುಟ್ಟಾಯಿನಿ 

ಈರೆನ್ನ ಏಪಲಾ ಮೋಕೆದ ಬಂಗಾರಿ
ಅಪ್ಪೆ ಮಟ್ಟೆಲ್ ಡ್ ಯಾನ್ ಸಿಂಗಾರಿ
ತಪ್ಪಾವಂದ್ ಇರೆನೊಟ್ಟು ಕಲ್ತಿನ ಪಾತೆರ
ಒಪ್ಪಾದ್ ದೀತೆ ಪೂರ ಐಸಿರ

ಮೋಕೆ ಸೋಕು ಕೊರ್ತಿನಾರ್ ಈರೆ 
ಪಕ್ಕಿದ ಲೆಕ್ಕ ನಲಿತಿನ ಜಾಗೆಲ ಈ ನೀರೆ
ನೀರಾಸರೆ ಪಡೆಯಿನ ತಾನ ಮೂಲೆ 
ಕೋರಿ ಕಿರೆಂಗ್  ತಿನ್ಯ ಬೊಕ್ಕ ಬಾಲೆಲೆ 
@ಹನಿಬಿಂದು@
23.10.2024

ಶನಿವಾರ, ಅಕ್ಟೋಬರ್ 19, 2024

ಚುಟುಕು

ಚುಟುಕು

ನಿಮ್ಮನ್ನು ನಂಬಿರುವುದೇ ನನ್ನ ದೌರ್ಬಲ್ಯ
ನೀವು ಜೊತೆಗಿರುವ ಅಹಂಕಾರ ಮೌಲ್ಯ
ನಿಮ್ಮಿಂದ ಸಾಧ್ಯ ಎಂಬ ಸ್ವಂತಿಕೆಯ ಕಾರ್ಯ
ನೀವಿದ್ದರೆ ಸಾಧಿಸಬಲ್ಲೆ ಎಂಬ ಮನೋಸ್ಥೈರ್ಯ
ಹನಿ ಬಿಂದು
20.10.2024

ಶುಕ್ರವಾರ, ಅಕ್ಟೋಬರ್ 18, 2024

ಸುಗಿಪು

ಸುಗಿಪು ಪದ
ನಟ್ಟೊನ್ವ 

ನಟ್ಟೊನುವಮ್ಮ  ನಟ್ಟೊನುವ ಇರೆನನೆ ಕಾರ್ ಪತ್ತೊನುವ 
ದುರ್ಗಿಲ ಈರೇ ಶಾರದೆ ಈರೆ ನವಶಕ್ತಿಲೆನ ರೂಪಲ ಈರೆ//

ಒವ್ವಾoಡಲ ಬತ್ತಿ ಕಷ್ಟೊನು ಬೇಗ ದೂರ ಮಲ್ಪುನಾರ್ 
ದುಂಬು  ಮಲ್ತಿ ಪಾಪೊಲೆಗ್ ಪರಿಯಾರ ಕೊರ್ಪಿನಾರ್
ನವರಾತ್ರಿದ ಮಾತ ದಿನೊಟ್ಟುಲ ನಿತ್ಯ ಇರೆನನೇ ಸೇವೆ
ಭವ ಬಂಧನಡ್ ಇತ್ತಿ ನಡುಟ್ಟುಲಾ ಸತ್ಯ ಇರೆನವೇ ಲೀಲೆ//

ಭಕ್ತೆರೆ ಭಾಗ್ಯದ ಬಲಲ ಏಪಲ ಈರತ್ತೆ ಅಮ್ಮಾ
ಶಕ್ತಿಯೇ ಕಾಪುನ ಕರುಣೆ ಜೋಕ್ಲೆನ ಮಿತ್ತತ್ತೆ ಈರ್ನ
ರಾತ್ರಿಲಾ ಪಗೆಲ್‌ಲಾ ಈರೆ ಕಾಪುನತ್ತೆ ನಮನ್
ಖಾತ್ರಿಲಾ ಉಂಡುಗೆ ಬುಡ್ದು ಬುಡಯರ್ಗೆ ಕೈನ್//

ಮೋಕೆದ ಬಗ್‌ತಿಗ್ ಕಲೆ ಮಲ್ಲ ಉಂಡುಗೆ
ಶೋಕಿದ ಬದ್‌ಕ್‌ಗ್ ಬಿಲೆ ದಾಲ ಇಜ್ಜಿಗೆ 
ಮರತ್‌ದ್ ಪೋಯೆಡ ಎoಕ್ ದಾಲ ತಿಕ್ಕಂದ್‌ಗೆ
ಕಾತ್‌ದ್ ಲೆತ್ತ್ಂಡ ದೇವಿ ಪೂರ ಕೇನ್ವೆರ್‌ಗೆ//
@ಹನಿಬಿಂದು@
01.10.2024

ಪನಿ ಕವಿತೆ

ಪನಿ ಕವಿತೆ
ಪ್ರಶ್ನೆ

ಮರತ್ ಪೋoಡು 
ಯಾನ್ ಏರ್ 
ಯಾನ್ ಓಲ್ಲೆ 
ಎಂಚ ಉಲ್ಲೆ
ಏರ್ ಪೂರ ಉಲ್ಲೆರ್ 
ಏರ್ ಇಡೆ ಲೆತ್ತಿನಿ 
ಪನುವರಾ ಒರ??
@ಹನಿಬಿಂದು@
18.10.2024

ನಗು

ನಗು

ಅಳುವಿನ ಹಿಂದಿನ ನಗುವಿನ ನೋಟವ
ಅರಿತವ ಯಾರೇ ಹೇಳೆ ಸಖಿ
ಮನದಲಿ ಚೆಲ್ಲಿದ ಬೆಳದಿಂಗಳ ಹಾಲಿನ
ಖುಷಿಯನು ಹಂಚಲು ಬಾರೆ ಸಖಿ//

ಕತ್ತಲ ಬಳಿಕ ಬೆಳಕನು ಕಾಣಲು
ಚೆಲ್ಲುವೆ ನಗುವನು ತಾನೆ ಸಖಿ
ಬಿತ್ತಲು ಸಡಗರ ಪ್ರೀತಿಯ ಭಾವವ
ಗೆಲ್ಲುವೆ ಜಗವನೆ ಅಲ್ವೆ ಸಖಿ?

ಮೊತ್ತದಿ ಲೆಕ್ಕವ ಇಟ್ಟರು ಕೂಡ
ಸಂತಸ ಸಿಗದು ಜಾಣೆ ಸಖಿ
ಸುತ್ತಲು ಹಂಚಲು ನಗುವನು ಇಲ್ಲಿ
ನಿರಾಳ ಬದುಕು ನನ್ನ ಸಖಿ

ಮೋಸ ವಂಚನೆಯ ಜಾಡು ಹಿಡಿಯದಿರು
ನಗುವೇ ಮಾಯ ಮುದ್ದು ಸಖಿ
ಕೋಶ ಓದುತಲಿ ಜ್ಞಾನ ಪಡೆಯುತಿರು
ಬಿಗುವು ಯಾಕೆ ಪೆದ್ದು ಸಖಿ
@ಹನಿಬಿಂದು@
18.10.2024

ಗುರುವಾರ, ಅಕ್ಟೋಬರ್ 17, 2024

ಟoಕಾ

ಟoಕಾ 
ಮಲ್ಲ ಜನಕ್
ಎಲ್ಯ ಬೇಲೆ ತೋಜುವ?
ಮಿತ್ ತೂಪಿನ 
ಏಪಲಾ ತಿರ್ತ್ ಅತ್
ದೀರ್ಘಾಲೋಚನೆ ಅತೆ?
@ಹನಿಬಿಂದು@
17.10.2024

ಬುಧವಾರ, ಅಕ್ಟೋಬರ್ 16, 2024

ತುಳು

ರುಬಾಯಿ

ಬಾಯಿ ಬಾಯಿ ಬುಡ್ದು ತೂಯೆರ್ ಗೆ
ಉನಂದೆ ಪರಂದೇ ಕಾತ್ಕುಲ್ಯೆರ್ಗೆ
ದಾಯೆ ಪಂದ್ ಗೊತ್ತಾಂಡ ನಿಕ್ಲೆಗ್?
ಓಟುಗುಂತೆರೆ ಸೀಟ್ ಬೋಡುಗೆ!
@ಹನಿಬಿಂದು@
16.10.2024

ಸೋಮವಾರ, ಅಕ್ಟೋಬರ್ 14, 2024

ಏನೆಸಲ್

ಐನೆಸಲ್ 
ಕೂಲಿ

ಬೇಲೆ ಮಲ್ಪುನಗ ಬೇನೆ ಸುರುವಾಂಡ್
ಬಯ್ಯ ಮುಟ್ಟಲ ಕಮ್ಮಿ ಇಜ್ಜoಡ್ 
ಡಾಕ್ ಟ್ರೆನ್ ತೂವೊಡು ಪoದ್ ಎನ್ಯೆ
ತಾದಿಡ್ ನಡತೊಂದು ಪೋಯೆ
ದೋಸ್ತಿ ತಿಕ್ಕದ್ ಮಾತ್ರೆ ತಿಂದಾಂಡ್
@ ಹನಿಬಿಂದು@
14-10-2024

ಸಣ್ಣಕತೆ ಮದುವೆ

ಮದುವೆ

ಆ.  ಹುಡುಗಿಗೆ ಮದುವೆಯೇ ಆಗಲಿಲ್ಲ ಕಾರಣ ಬಡತನ. ಬಡತನವನ್ನೇ ಮೈ ಹೊದ್ದುಕೊಂಡು ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ಶಾಲೆಗೆ ಸೇರಿ ಓದಿದ ಹುಡುಗಿ ಬಡತನದಲ್ಲೇ ಜೀವನ ಕಳೆಯುವ ಸ್ಥಿತಿ ಇತ್ತು.
  ಆದರೆ ಆಕೆ ಓದಿನಲ್ಲಿ ಸಿರಿವಂತಲಾಗಿದ್ದಳು. ಹೆಸರು ಕಲಾವತಿ. ಹೆಸರಿನ ಹಾಗೆ ಹಲವು ಕಲೆಗಳ ಒಡತಿ. ಹಾಡು, ನಾಟಕ, ಭಾಷಣ, ಕಲಿಕೆ ಎಲ್ಲದರಲ್ಲೂ ಆಕೆ ಮುಂದು. ಪೋಷಕರಿಗೆ ಅವಳ ಮೇಲೆ ಬಹಳ ಧೈರ್ಯ. ನಮ್ಮನ್ನು ಸಾಕುವಳು ಎಂಬ ನಂಬಿಕೆ. ಅವಳಿಗೊಬ್ಬ ಅಣ್ಣನಿದ್ದ. ಕಲಾ ರಾಮ್. ಆದರೆ ಕಲಾರಾಮ್ ಓದುವುದರಲ್ಲಿ ಅಷ್ಟಕ್ಕಷ್ಟೇ. ಮನೆಯ ಕಷ್ಟಕ್ಕೆ ಹೊರ ಹೋಗಿ ದಿನ ಕಳೆಯ ತೊಡಗಿದ. ಬೇಡದ ಅವನ ಹಾಗೆಯೇ ಇರುವ ಕೊಳಕು ಸ್ನೇಹಿತರು ಸಿಕ್ಕಿದರು. ಅವರ ಜೊತೆ ಜೂಜು, ಕುಡಿತ, ಹೊಗೆಸೊಪ್ಪು ಸೇವನೆ, ಧೂಮಪಾನ ಎಲ್ಲವನ್ನೂ ಕಲಿತ. ಇದರಿಂದ ಮನೆ ತೊರೆದ. ಅದೆಲ್ಲೋ ಬಾರಿನಲ್ಲಿ ಕೆಲಸಕ್ಕೆ ಸೇರಿದ. ಅದೊಂದು ಕಾಲದಲ್ಲಿ ತಾನು ಮಾಡಿದ್ದೆಲ್ಲ ಕೆಟ್ಟದು ಎಂಬ ಬುದ್ಧಿ ಬಂದು ಸರಿ ಆಗಲು ಹೊರಟ. ಆಗ ಕಾಲ ಮಿಂಚಿ ಹೋಗಿತ್ತು. ಅದು ಯಾರೋ ಒಬ್ಬಳು ತಮಿಳು ಹುಡುಗಿಯನ್ನು ಮದುವೆ ಆದ. ಅವಳಿಗೆ ಮೊದಲೇ ಒಂದು ಮದುವೆ ಆಗಿತ್ತು. ಅವಳು ಇವನನ್ನು ಕ್ಯಾರೆ ಮಾಡದೆ ಕೆಲಸಕ್ಕೆ ಹೋಗಿ ಸಂಪಾದಿಸಿ ಚೆನ್ನಾಗಿ ಬದುಕುತ್ತಿದ್ದಳು. ಗಂಡ ಎಂಬ ಹೆಸರಿಗಾಗಿ ನೋಡಲು ಚೆನ್ನಾಗಿದ್ದ ಇವನನ್ನು ಕಟ್ಟಿಕೊಂಡಿದ್ದಳು ಅಷ್ಟೇ.
   ಇತ್ತ ಕಲಾವತಿ ಚೆನ್ನಾಗಿ ಓದಿ ಬಿ ಎಸ್ಸಿ ನರ್ಸಿಂಗ್ ಮಾಡಿ ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದಳು. ಒಳ್ಳೆಯ ಸಂಬಳ ಸಿಗುತ್ತಿತ್ತು. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡಳು. ಆದರೆ ಎದುರು ನಿಂತು ಅವಳ ಮದುವೆ ಮಾಡಿ ಕೊಡುವವರು ಯಾರೂ ಇರಲಿಲ್ಲ. ತಂದೆ ರೋಗಿಯಾಗಿದ್ದರು. ತಾಯಿ ಏನೂ ತಿಳಿಯದವರಾಗಿದ್ದರು. ಬಡತನ ಬಂಧುಗಳನ್ನು ದೂರಕ್ಕೆ ಅಟ್ಟಿ ಬಿಟ್ಟಿತ್ತು.
     ಮನೆಯ ಪರಿಸ್ಥಿತಿ, ಪೋಷಕರ ಬಗ್ಗೆ ತಿಳಿದಿದ್ದ ಕಲಾವತಿ ಮದುವೆಯ ಬಗ್ಗೆ ಯೋಚನೆ ಮಾಡಲಿಲ್ಲ. ಪೋಷಕರಿಗೂ ಅದೇ ಬೇಕಿತ್ತು. ಮದುವೆಯಾಗಲು ಭಯಂಕರ ವರದಕ್ಷಿಣೆ ಕೂಡಾ ಅಡ್ಡಿ ಬಂದಿತ್ತು. ಹುಡುಗನ ಕಡೆಯವರು ಹುಡುಗಿ ನೋಡುವ ಮೊದಲೇ ಲಕ್ಷಗಟ್ಟಲೆ ರೇಟ್ ಫಿಕ್ಸ್ ಮಾಡಿ ಕೇಳುತ್ತಿದ್ದರು. ಹಾಗಾಗಿ ಅವಳು ಆಹ್ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ. ಬಂಧುಗಳು ಎರಡನೇ ಸಂಬಂಧದ ವರ ಹುಡುಕಲು ಆರಂಭಿಸಿದಾಗ ಕೋಪ ಅವಳಿಗೆ ನೆತ್ತಿಗೇರಿತು. ಆದರೂ ಅವಳು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಳು.ಗೆಳೆಯರೆಲ್ಲ ಸೇರಿ  ಪಕ್ಕದ ಊರಿನ ನವೀನ ಎಂಬ ಹುಡುಗನನ್ನು ಹೇಳಿ ಅವನು ಅವಳನ್ನು ಚೆನ್ನಾಗಿ ನೋಡಿಕೊಳ್ಳುವೆ ಎಂದು ಹೇಳಿ ಕಡಿಮೆ ವರದಕ್ಷಿಣೆ ಕೇಳಿ ಇವಳ ಹಣದಲ್ಲೇ ಮದುವೆಯಾದ.
        ಮದುವೆಯ ಬಳಿಕ ನವೀನ  ದುಡಿಯದಾದ. ಕಾರಣ ಸೋಮಾರಿತನ. ಮಡದಿ ದುಡಿಯುವಳು ಎಂಬ ತಾತ್ಸಾರ. ಮನೆಯಲ್ಲೇ ಕುಳಿತು ಗೆಳೆಯರ ಕರೆದು ಅವರೊಂದಿಗೆ ಲಲ್ಲೆ ಹೊಡೆಯುವುದು ಅಭ್ಯಾಸವಾಯಿತು. ಊರಿನಲ್ಲೇ ಇದ್ದುದರಿಂದ ಹಲವಾರು ಬಾಲ್ಯ ಸ್ನೇಹಿತರಿದ್ದರು. ಕಲಾವತಿ ತನ್ನ ತಂದೆ ತಾಯಿಗಳನ್ನು ನೋಡಿಕೊಳ್ಳುವ ಒಪ್ಪಿಗೆ ಮೊದಲೇ ಪಡೆದಿದ್ದ ಕಾರಣ ಅವರ ಮನೆಯಲ್ಲೇ ಉಳಿದಳು. ನವೀನನಿಗೆ  ಪರರ ಜೊತೆ ಸೇರಿ ಸಮಾಜ ಸೇವೆ ಮಾಡುವುದು ಹವ್ಯಾಸ ಆಗಿ ಬಿಟ್ಟಿತು. ಹಾಗಾಗಿ ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಆದ. ಹೊರಗೆ ಹಾರ, ತುರಾಯಿ ಹಾಕಿ ಜನ ಸನ್ಮಾನಿಸುತ್ತಿದ್ದರು. ಅದರಿಂದ ಅವನ ಮದ ಇನ್ನಷ್ಟು ಹೆಚ್ಚಾಯಿತು. ತಾನು ಗಣ್ಯ ವ್ಯಕ್ತಿ ಅಂದುಕೊಂಡ.
ಕಲಾವತಿಯ ತಂದೆ ತಾಯಿ ಹಾಸಿಗೆ ಹಿಡಿದರು. ಅವರನ್ನು ನೋಡಿಕೊಳ್ಳಲು ನವೀನ ಹೋಗಲಿಲ್ಲ. ತಂದೆ ತಾಯಿ ಮಗಳ ಬದುಕು ನೋಡಿ ಮರುಗಿದರು. ಎಷ್ಟು ದುಡಿದರೂ ಪೋಷಕರ ಔಷಧಿಗೆ ಸರಿ ಹೋಗುತ್ತಿತ್ತು. ಬಡತನದಲ್ಲೇ ಹುಟ್ಟಿ ಬಡತನದಲ್ಲೇ ಬೆಳೆದು, ಮದುವೆ ಎಂಬುದೂ ಬಡತನದಲ್ಲೇ ಅಂತ್ಯಗೊಂಡು, ಬಡತನವೇ ಮೈವೆತ್ತು ತಂದೆ ತಾಯಿ ಸತ್ತ ಬಳಿಕ ತನಗೆ  ಯಾರೂ ಇಲ್ಲ ಎಂದು ತಾನೂ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳು.
@ಹನಿಬಿಂದು@
05.10.2024


ನಮಿಸೋಣ

ನಮಿಸೋಣ

ನಮಿಸೋಣ ದೇವರಂಥ ಮಾತಪಿತರ ಚರಣಗಳಿಗೆ
ಬಾಗೋಣ ತಾನುರಿದು ಬೆಳಕ ಕೊಡುವ ದೀಪಗಳಿಗೆ//

ಗೌರವವ ಕೊಟ್ಟು ಕಲಿಯಬೇಕು  ಹಿರಿಯರಿಂದ
ಸೌರಭವ ಬೀರುವ ಶಕ್ತಿ ಪಡೆದ ಗೆಲುವಿನಿಂದ
ಪೌರತ್ವ ಪಡೆದು ಬಾಳಿ ಬದುಕೋ ನಲಿವಿನಿಂದ 
ಹೌಹಾರಿ ಬೀಳದೆ, ತಾಳ್ಮೆ ಎಂಬ ಮಂತ್ರದಿಂದ//

ಕಪ್ಪು ಬಿಳುಪು ಎನ್ನದೆ, ಮೇಲು ಕೀಳು ತೊಡೆದು ಹಾಕಿ
ಸೊಪ್ಪು ಕಾಳು ತಿನ್ನುತ ಆರೋಗ್ಯದ ರಕ್ಷೆ ಮಾಡಿ
ಅಪ್ಪುಗೆಯೇ ಬದುಕಲ್ಲ, ಪ್ರೀತಿ ಸ್ನೇಹ ಮೊಳೆಯಲಿ 
ದಪ್ಪ ಸಣ್ಣ ಬಣ್ಣಕ್ಕಿಂತ ಜ್ಞಾನ ಹೆಚ್ಚು ಬೆಳೆಯಲಿ!//

ಸಂಸ್ಕೃತಿಯ ಉಳಿಸುತ ಗೆಳೆತನವ ಬೆಳೆಸುತ 
ಮಾತೃಭಾಷೆ ನಿತ್ಯವೂ  ಬಳಕೆಯನ್ನು ಮಾಡುತ
ನಾನು ನನ್ನ ನನ್ನದೇ ನನಗೆ ಎಂದು ಮೆರೆಯದೆ
ಸಹಾಯ ಮಾಡೊ ಮನುಜರ ಎಂದೂ ನಾವು ಮರೆಯದೆ//

ಬಾಗಿ ಬಳುಕಿ ಬಳ್ಳಿಯಂತೆ ಭಾವ ಬೀಜ ಬಿತ್ತುತ
ಬಾನವರೆಗೆ ಕೈಯ ಚಾಚೊ ಗುರಿಯ ಇರಿಸಿಕೊಳ್ಳುತ
ಭಾವ ಬೇಧ ಎಲ್ಲಾ ಮರೆತು, ಒಂದೇ ಎಂದು  ಸಾರುತ
ಬಾಕಿ ಉಳಿದ ದಿನಗಳನ್ನು ಭಯವ ಮರೆತು ಕಳೆಯುತ//

ದೈವೀ ಶಕ್ತಿ ಎಂಬ ಬಲದ ಪರಿಸರಕೆ ಬಾಗುತ
ಕೈಲಿ ಇರುವ ಸಮಯವನ್ನು  ಬುದ್ಧಿಯರಿತು ಬಳಸುತ 
ವೈದ್ಯ ಗುರು ಹಿರಿಯರಿಗೆ ನಮಸ್ಕಾರ ತಿಳಿಸುತ
ರೈಲಿನಂತ ಜೀವನದಿ ನೆಮ್ಮದಿಯ ಹುಡುಕುತ//
@ಹನಿಬಿಂದು@
07.10.2024












ಲೇಖನ

ಪರಿಸರ ಉಳಿಸುವಲ್ಲಿ ನಮ್ಮ ನಂಬಿಕೆಗಳ ಮಹತ್ವ

      ನಮ್ಮ ಪರಿಸರದ ಉಳಿವು ನಮ್ಮ ಕೈಲೇ ಇದೆ ಎಂಬುದನ್ನು ನಾವು ತಲೆ ತಲಾಂತರಗಳಿಂದ ಅರಿತು, ನಮ್ಮ ಹಿರಿಯರು ಆಚರಣೆಗೆ ತಂದ ಹಲವಾರು ಆಚರಣೆಗಳು, ಪೂಜೆಗಳು, ಹಬ್ಬ ಹರಿದಿನಗಳು ಎಲ್ಲವೂ ಕೂಡ ಪರಿಸರದ ಉಳಿಸುವಿಕೆಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವೇ ಆಗಿದೆ. ಪುರಾಣ ಕಾಲದಿಂದಲೂ ಪಂಚ ಭೂತಗಳೇ ನಮ್ಮ ಆರಾಧ್ಯ ದೇವರು. ನೆಲ, ಜಲ, ವಾಯು, ಅಗ್ನಿ. ಆಕಾಶ ಇವುಗಳನ್ನು ನಂಬಿದವರ ಬದುಕು ಹಾಳಾಗದು ಎಂಬ ನಂಬಿಕೆ ನಮ್ಮ ಪೂರ್ವಜರದ್ದು. ಅವುಗಳು ನಮ್ಮ ಆರೋಗ್ಯಕ್ಕೂ, ಬದುಕಿನ ಉದ್ಧಾರಕ್ಕೂ ಹೇಗೆ ಸಹಕಾರಿ ಎಂಬುದನ್ನು ನಮ್ಮ ತಿಳುವಳಿಕೆಗೆ ಅನುಗುಣವಾಗಿ ಸ್ವಲ್ಪ ನೋಡೋಣ. 
  ಬೆಳಗ್ಗೆದ್ದು ದೇವರಿಗೆ ಅರ್ಪಿಸಲು ಎಂದು ಹೂ ಕೊಯ್ಯುವ ಮತ್ತು ಅದನ್ನು ದೇವರಿಗೆ (ದೇವರ ಫೋಟೋ ಅಥವಾ ಮೂರ್ತಿಗೆ) ಒಪ್ಪ ಓರಣವಾಗಿ ಜೋಡಿಸಿ ಇಡುವ ಅಥವಾ ಮಾಲೆ ಕಟ್ಟಿ ಮೂಡಿಸುವ ಪದ್ಧತಿ ನಮ್ಮಲ್ಲಿ ಇದೆ. ಕರೋನ ಸಮಯದಲ್ಲಿ ನಿತ್ಯ ಹೂ, ಹಸಿರಿನ ಮಧ್ಯೆ ಕಳೆದ ಹಲವಾರು ಜನರ ಆರೋಗ್ಯ, ಕಣ್ಣಿನ ದೃಷ್ಟಿ ಉತ್ತಮವಾದ ಹಲವಾರು ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಹೂವನ್ನು ಕೊಯ್ದು ದೇವರ ಎದುರು ಮುಡಿಸಬೇಕಾದರೆ ಮನೆಯ ಎದುರು ಬಣ್ಣ ಬಣ್ಣದ ಹೂವಿನ ಗಿಡಗಳನ್ನು ನೆಟ್ಟು. ಅವುಗಳನ್ನು ತಾಳ್ಮೆಯಿಂದ ಬೆಳೆಸಿ, ನೀರು ಗೊಬ್ಬರ ಹಾಕಿ ಉತ್ತಮ ಆರೈಕೆ ಮಾಡಿ ನೋಡಿಕೊಂಡರೆ ಮಾತ್ರ ಸಾಧ್ಯ. ಇಲ್ಲಿ ನಮ್ಮ ತಾಳ್ಮೆ, ಆರೋಗ್ಯ, ನೆಮ್ಮದಿ. ಸಂತಸ ಹೆಚ್ಚುತ್ತದೆ. ಧನಾತ್ಮಕ ಚಿಂತನೆ ಅರಳುತ್ತದೆ. ರೋಗಗಳು ಕಡಿಮೆ ಆಗುತ್ತವೆ ಅಲ್ಲವೇ? ಹಾಗೆಯೇ ನಾವೇ ನೆಟ್ಟ ನಮ್ಮ ಮನೆ ಎದುರಿನ ಗಿಡದಲ್ಲಿ ಬಣ್ಣ ಬಣ್ಣದ ಹೂವುಗಳು ಅರಳುವಾಗ ನಮಗೆ ಆಗುವ ಖುಷಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಅಲ್ಲವೇ? ಇನ್ನು ನಿತ್ಯ ಹೂವನ್ನು ಕೊಯ್ಯಲು ಗಿಡದ ಬಳಿಗೆ ಹೋದಾಗ ಗಿಡಕ್ಕೆ ಏನಾದ್ರೂ ತೊಂದರೆ ಆದರೆ ತಿಳಿಯುತ್ತದೆ, ಹಸಿರು ನೋಡಿ ಕಣ್ಣು, ಹೃದಯ ಅರಳುತ್ತವೆ. ನಮ್ಮ ದೇಹ ಪ್ರಫುಲ್ಲವಾಗುತ್ತದೆ. ಆರೋಗ್ಯ ತಂತಾನೇ ವೃದ್ಧಿ ಆಗುತ್ತದೆ. ಅದನ್ನು ಕೊಯ್ದು ತಂದು ದೇವರಿಗೆ ಅಂದವಾಗಿ ಕಟ್ಟುವಾಗ 
  ಹಾಗೆಯೇ ಬೆಳಗ್ಗೆದ್ದು ಮನೆಯ ಮುಂದೆ ಇರುವ ತುಳಸಿ ಗಿಡಕ್ಕೆ ನೀರು ಹಾಕಿದರೆ ಸಂಜೆ ಅಲ್ಲಿ ದೀಪವಿಟ್ಟು ನಮಸ್ಕಾರ ಮಾಡುವ ಪರಿಪಾಠ ನಮ್ಮಲ್ಲಿದೆ. ತುಳಸಿ ಗಿಡ ಎಲ್ಲಾ ಗಿಡಗಳಿಗಿಂತ ಹೆಚ್ಚು ಆಮ್ಲಜನಕ ಹೊರಬಿಟ್ಟು ವಾತಾವರಣವನ್ನು ಶುದ್ಧಿಗೊಳಿಸುತ್ತದೆ ಅಲ್ಲದೆ ಅದರ ಎಲೆಯಲ್ಲಿ ರೋಗ ನಿವಾರಕ ಗುಣಗಳಿವೆ. ಅದರ ಸುತ್ತ ಸುತ್ತುವುದರಿಂದ ಒಳ್ಳೆಯ ಗಾಳಿ ನಮಗೆ ಸಿಕ್ಕಿ, ಆರೋಗ್ಯದ ಪರಿಸ್ಥಿತಿಯೂ ಉತ್ತಮವಾಗುತ್ತದೆ. ಸಂಜೆ ದೀಪ ಬೆಳಗುವುದು ಕತ್ತಲು ಕವಿಯುವ ಸಮಯದಲ್ಲಿ ದಾರಿ ಹೋಕರಿಗೆ ರಸ್ತೆ ಕಾಣಲಿ ಎಂಬುದು ಹಿಂದಿನವರ ಕಲ್ಪನೆ ಆಗಿತ್ತು. ಆಗಿನ ಕಾಲದಲ್ಲಿ ಬೀದಿ ದೀಪಗಳು ಇಲ್ಲದೆ ಇದ್ದಾಗ ತುಳಸಿ ದೀಪ ನೋಡಿ ಅಲ್ಲೊಂದು ಮನೆ ಇದೆ ಎಂದು ರಾತ್ರಿ ಬಂದ ಜನಕ್ಕೆ ತಿಳಿಯುತ್ತಿತ್ತು. ಇದು ಹಲವರಿಗೆ ಉಪಯೋಗ ಆಗುತ್ತಿತ್ತು. ಅಲ್ಲದೆ ಎಳ್ಳೆಣ್ಣೆ ದೀಪ ಉರಿಸಿದರೆ ಉಪಯುಕ್ತ ಎಂದು ಹಿರಿಯರು ಹೇಳುತ್ತಾರೆ. 
  ಇನ್ನು ನಾಗಬನಗಳೂ ಇಲ್ಲಿ ಸೇರಿವೆ. ಒಂದಷ್ಟು ಮರಗಳ ರಾಶಿ ಒಂದೆಡೆ ಸೇರಿ ನಾಗಬನ ನಿರ್ಮಾಣ ಆಗುತ್ತದೆ. ಅವುಗಳ ಬುಡದಲ್ಲಿ ನಾಗನ ಕಲ್ಲು. ಅಲ್ಲಿಗೆ ಯಾರೂ ಹೋಗುವ ಹಾಗಿಲ್ಲ. ಮಡಿ ಮೈಲಿಗೆ ಸಲ್ಲದು. ಅಲ್ಲಿ  ಹೆಂಗಸರು, ಮಕ್ಕಳು ಹೋಗಬಾರದು, ಉಗಿಯುವುದು, ಮಲ ಮೂತ್ರ ವಿಸರ್ನೆಗೆ ಅವಕಾಶ ಇಲ್ಲ. ಸುತ್ತ ನೆರಳು ಇರುವಷ್ಟು ದಟ್ಟ ಕಾಡು ಇರಬೇಕು. ಇದೆಲ್ಲವೂ ಪರಿಸರದ ಉಳಿವಿಗಾಗಿ. ಅಲ್ಲಿ ಬದುಕುವ ವಿಷ ಜಂತುಗಳ ಬದುಕಿನ ರಕ್ಷಣೆಗಾಗಿ. ಪರಿಸರದ ಸರಪಣಿಯಲ್ಲಿ ಅವುಗಳೂ ಕೂಡಾ ಉನ್ನತ ಪಾತ್ರ ವಹಿಸುವ ಕಾರಣ ಅದಕ್ಕಾಗಿ ಒಂದಷ್ಟು ಸ್ಥಳದ ಮೀಸಲು. ಜನ ದೇವರ ಹೆಸರು ಹೇಳಿದರೆ ಮಾತ್ರ ಹೆದರುತ್ತಾರೆ. ಅದಕ್ಕಾಗಿ ನಾಗನ ಹೆಸರು ಕೊಟ್ಟರು. ಕೆಲವೆಡೆ ಕಲೆ ಕಾರ್ಣಿಕ ಕಂಡದ್ದು ಕೂಡಾ ಇದೆ. ಹಾಗಾಗಿ ಜನ ಈಗಲೂ ನಂಬುತ್ತಾರೆ. ಪರಿಸರ ಉಳಿಸುವ ಹಿರಿಯರ ಈ ಕಾರ್ಯ ಶ್ಲಾಘನೀಯ ಅಲ್ಲವೇ?
  ಇನ್ನು ದ್ವಾರ ಪೂಜೆ. ಬಾಗಿಲಿನ ದ್ವಾರಕ್ಕೆ ಅರಶಿನ ಕುಂಕುಮ ಇಡುವುದು ಯಾವುದೇ ಕ್ರಿಮಿಗಳು ಹಾಗೂ ವಿಷ ಜಂತುಗಳು ಮನೆಯ ಒಳಗೆ ಬಾರದೆ ಇರಲಿ ಎಂಬ ಕಾರಣಕ್ಕೆ. ಅರಶಿನ ಕುಂಕುಮ ಅದನ್ನು ತಡೆಯುತ್ತದೆ. ಹೂವು ತಂಪು ಹಾಗೂ ಅಂದ. ನೀರು ಹಾಕಿ ಶುದ್ಧೀಕರಿಸಿ, ರಂಗೋಲಿ ಬಿಡಿಸುವುದು ಹೆಣ್ಣಿನ ಕಲಾ ಪ್ರತಿಭೆಗೆ ಹಿಡಿದ ಕೈಗನ್ನಡಿ. ಕಲೆಯ ಅನಾವರಣ. ಅದನ್ನು ಭಕ್ತಿಪೂರ್ವಕವಾಗಿ ಮಾಡುವುದು ಧನಾತ್ಮಕ ಶಕ್ತಿಯ, ಆಲೋಚನೆಗಳ ಸಂಚಲನ. 
ಇವೆಲ್ಲಾ ಉದಾತ್ತ ವೈಜ್ಞಾನಿಕ ಕಾರಣಗಳು ಇಲ್ಲಿ ಪ್ರತಿ ಆಚರಣೆಯಲ್ಲೂ ಕಂಡು ಬರುತ್ತವೆ. ಜನ ತಮ್ಮ ವಿವಿಧ ಪೂಜೆ, ಆಚರಣೆಗಳು, ಅದರ ಜೊತೆಗಿನ ಹಲವಾರು ದೈವಿಕ ನಂಬಿಕೆಗಳ ನೆಲೆಗಟ್ಟು ಪ್ರಕೃತಿಯ ಉಳಿವಿನ ಸಂಕೇತವೂ ಆಗಿತ್ತು. ಜನ ಆ ರೀತಿಯಾಗಿ ನೇಸರ ಉಳಿಸುತ್ತಾ ಪರರಿಗೂ, ಪರ ಜೀವ ಜಂತುಗಳಿಗೂ ಸರ್ವೇ ಜನಾಃ ಸುಖಿನೋ ಭವಂತು ಎಂಬ ಮಾತಿನಂತೆ ತಾವು ಬದುಕಿ ಇತರ ಜೀವಿಗಳಿಗೂ ಬದುಕಲು ಬಿಡುತ್ತಿದ್ದರು. ಹಸಿರನ್ನು ಉಳಿಸಿ ಆಹಾರ ಸರಪಣಿ, ಜಲಚಕ್ರ, ಪರಿಸರ ಸರಪಣಿಯನ್ನು ಕೂಡಾ ಉಳಿಸಿ ಬೆಳೆಸುತ್ತಿದ್ದರು. ಇಂದು ನಾವು ರಾಸಾಯನಿಕ ಅರಶಿನ, ಕುಂಕುಮ, ಬಣ್ಣದ ಪುಡಿಗಳನ್ನು ಬಳಸದೆ ಇವುಗಳನ್ನೆಲ್ಲ ಉಳಿಸುವ ಕೆಲಸ ಮಾಡಬೇಕಿದೆ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
11.10.2024

ಹನಿ

ಹನಿ 
ಅರ್ಹತೆಗೆ ತಕ್ಕಷ್ಟು
ಸ್ಥಾನಮಾನ ಸಿಕ್ಕಿದರೆ
ಅದು ಖುಷಿ!
ಅರ್ಹತೆ ಇದ್ದೂ
ಏನೂ ಸಿಗದೆ ಹೋದರೆ
ಮಂಡೆ ಬಿಸಿ!
ಅರ್ಹತೆ ಇಲ್ಲದವನಿಗೆ
ಆ ಸ್ಥಾನ ಇದ್ದರೆ
ಇತರರಿಗೆ ಮಸಿ!
@ಹನಿಬಿಂದು@
13.10.2024

ಚುoಗುಡಿ

ಚoಗುಡಿ 

ಅಜ್ಜಿ ಪಂಡೆರ್ ಅಲ್ಪ ದಾಲಾ ಬುಲೆವೆಂದ್ ಮಣ್ಣ್ ಬಾರಿ ಬರಡ್ 
ಜೋಕುಲು ಪಂಡೆರ್ ತೂಕ ಪಪ್ಪ ಪೇoಟೆಡ್ದ್ ಬೇಗ ಬರಡ್ 

ಅಜ್ಜೆರ್  ಮಾತ ಜೋಕ್ಲೆಡ ಪಂಡೆರ್ ನಮ್ಮ ಎಡ್ಡೆ  ತುಳು ನಾಡ್
ಅಜ್ಜಿ ಪಂಡೆರ್ ಆಯಡ ಎನ್ನ   ಕೆಬಿತ ಬೂರ್ದುಂಡು ನಾಡ್ 

ದೂರ ಕೇನ್ನಗ ಮಾಮ ಪಂಡೆರ್ ಪೋಯರುಂಡು ಜೆಪ್ಪು
ಅಜ್ಜಿ ನೆರ್ದ್ ಪಂಡೆರ್ ಓಡೆಲ ಬೊರ್ಚಿ ಇನಿ ಇಲ್ಲಡೆ ಜೆಪ್ಪು

ಮಾಮಿ ಪಂಡೆರ್  ಊರುಗು  ಬತ್ತ್  ಗಟ್ಟಿಡೆ  ರಡ್ಡ್  ಉಂಡೆ
ಮಾಮ ಕನತೆರ್ ತಿನಿಯರೆ ನಾಲ್ ಲಾಡ್ ರವೆತ  ಉಂಡೆ

ಮಗಲ್ ಪಂಡಲ್ ಪಪ್ಪಡ ವಾಸನೆ ಬರೊಂದುoಡು ಸೂ
ಪಪ್ಪ ಪಂಡೆರ್ ಪಾಡಡ ಬಾಲೆ ಎಂಕ್ಲೆನ  ಬಂಜಿಗ್ ಈ ಸೂ 
@ಹನಿಬಿಂದು@
13.10.2024

ವಿಮರ್ಶೆ

ಶ್ರೀಮತಿ ಪ್ರೇಮಾ ಆರ್ ಶೆಟ್ಟಿ ಇವರು ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು ಮೂಲ್ಕಿ ಇಲ್ಲಿನ ಪ್ರೌಢ ಶಾಲಾ ವಿಭಾಗದಲ್ಲಿ 3 ವರ್ಷಗಳಿಂದ ಆಂಗ್ಲ ಭಾಷಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿಸುತ್ತಿದ್ದಾರೆ.ವೃತ್ತಿಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾದ ಇವರು ಪ್ರವೃತ್ತಿಯಲ್ಲಿ ಬರಹಗಾರರು, ಕವಯತ್ರಿ, ಅಂಕಣಕಾರರು, ಕಾರ್ಯಕ್ರಮ ನಿರ್ವಾಹಕರು, ಫ್ಯಾಷನ್ ಡಿಸೈನರ್, ಕೌನ್ಸಿಲರ್, ಸಾಹಿತಿ, ಸ್ಪೋಕನ್ ಇಂಗ್ಲಿಷ್ ಟ್ರೈನರ್, ಮಾಸ್ಟರ್ ರಿಸೋರ್ಸ್ ಪರ್ಸನ್ ಹಾಗೂ ನಿತ್ಯ ಕಲಿಕಾರ್ಥಿ. 

     ಇವರು "ಹನಿ ಬಿಂದು" ಎಂಬ ಕಾವ್ಯ ನಾಮದಿಂದ ಕನ್ನಡ, ತುಳು ಹಾಗೂ ಆಂಗ್ಲ ಭಾಷೆಗಳ ಸಾಹಿತ್ಯದಲ್ಲಿ ಕೈಯಾಡಿಸುತ್ತಿರುವ ಅವರು ದಿ. ರಮೇಶ್ ಶೆಟ್ಟಿ  ಮತ್ತು ಗುಲಾಬಿ ಶೆಟ್ಟಿ ಇವರ ಮಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಡಿಸೆoಬರ್ 10, 1981 ರಂದು ಜನಿಸಿದರು. ಶ್ರೀ ಮೂಜಿಲ್ನಾಯ ಹಿರಿಯ ಪ್ರಾಥಮಿಕ ಶಾಲೆ ಈದು ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ಕುದುರೆಮುಖ ಇಲ್ಲಿ ಪ್ರೌಢ ಶಿಕ್ಷಣ ಪಡೆದು ಹತ್ತನೇ ತರಗತಿಗೆ ಶಾಲೆಯಲ್ಲೇ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದರು. ಶಾಲಾ ಮಟ್ಟದಲ್ಲಿ , ಅಂತರ್ ಶಾಲಾ ಮಟ್ಟದಲ್ಲಿ ನಡೆಯುವ ಎಲ್ಲಾ ಕವನ, ಲಘು ಪ್ರಬಂಧ, ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ  ಇವರಿಗೆ ಮೊದಲ ಸ್ಥಾನ ಸಿಗುತ್ತಿತ್ತು. ಬಳಿಕ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತಮ್ಮ ಪಿಯುಸಿಯನ್ನು ಪಿ ಸಿ ಎಮ್ ಬಿ ವಿಷಯದಲ್ಲಿ  ಪೂರೈಸಿದರು. ಅಲ್ಲಿನ ಆಗ ಕನ್ನಡ ಉಪನ್ಯಾಸಕ ಹಾಗೂ ಬರಹಗಾರರಾದ   ಶ್ರೀಯುತ ಚೇತನ ಸೋಮೇಶ್ವರ ಅವರಿಂದ ಪ್ರಭಾವಿತಾರಾದರು ಮತ್ತು ಬರವಣಿಗೆಯನ್ನು ಮುಂದುವರೆಸಿದರು. ನಂತರ ಕಂಪ್ಯೂಟರ್ ಕೂಡಾ ಕಲಿತರು.

      ಬಳಿಕ ಮೈಸೂರಿನ ಸುಪ್ರಸಿದ್ಧ ಮಹಾರಾಣಿ ಮಹಿಳಾ ಶಿಕ್ಷಕ ಶಿಕ್ಷಣ ಸಂಸ್ಥೆಯಲ್ಲಿ ಡಿ.ಎಡ್ ಶಿಕ್ಷಣದಲ್ಲಿ ರಾಜ್ಯಕ್ಕೇ ಮೊದಲ ರ್ಯಾಂಕ್ ಪಡೆದು ಉತ್ತೀರ್ಣರಾದರು. ಕಾಲೇಜಿನ ಮ್ಯಾಗಝಿನ್ "ಮಹಾರಾಣಿ" ಯಲ್ಲಿ ಹಲವಾರು ಕಥೆ, ಕವನ, ಲೇಖನಗಳು ಆಗಲೇ ಪ್ರಕಟಗೊಂಡಿದ್ದು , ಕಾಲೇಜಿನ ವರ್ಷದ ಆಕ್ಟಿವ್ ವಿದ್ಯಾರ್ಥಿನಿ ಆಗಿಯೂ ಆಯ್ಕೆ ಆಗಿದ್ದರು. ಆಗಲೇ  ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡರು. 

         ತದನಂತರ 2004ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ  ಶಾಲೆ ಉಳಿಬೈಲು, ಬಂಟ್ವಾಳ ತಾಲೂಕು ಇಲ್ಲಿ ವಿಜ್ಞಾನ ಶಿಕ್ಷಕರಾಗಿ ಸರಕಾರಿ ಸೇವೆಗೆ ಪಾದಾರ್ಪಣೆಗೈದರು. ಆ ಶಾಲೆಯಲ್ಲಿ  ಬೋಧನೆಯಲ್ಲಿ ತೊಡಗಿರುವಾಗಲೇ ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾನಿಲಯದಿಂದ ಆಂಗ್ಲ ಭಾಷೆಯಲ್ಲಿ ಪದವಿ ಮತ್ತು ಬಿ.ಎಡ್ ಪದವಿ ಪಡೆದರು. ಜೊತೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ವಿಶೇಷ ಶ್ರೇಣಿಯ ಅಂಕಗಳೊಂದಿಗೆ  ಸ್ನಾತಕೋತ್ತರ ಪದವಿ ಪಡೆದರು. ನಂತರ ತಮ್ಮ ಬಿ.ಎಡ್ ಶಿಕ್ಷಣವನ್ನೂ ಕೂಡ ಉನ್ನತ ಶ್ರೇಣಿಯ ಅಂಕಗಳೊಂದಿಗೆ ಪಡೆದರು.  ಇಂದಿರಾ ಗಾಂಧಿ ಮುಕ್ತ ವಿಶ್ವ ವಿದ್ಯಾನಿಲಯದ ಆಂಗ್ಲ ಭಾಷಾ ಬೋಧನೆಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಕೂಡಾ ಪೂರ್ಣಗೊಳಿಸಿದರು. ಬೋಧನಾ ಕಾರ್ಯ, ಕಲಿಕೆ, ಶಾಲೆ ಬಿಟ್ಟ ಹಳ್ಳಿಯ ಬಡ ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಗತಿ ನಡೆಸುತ್ತಾ ತರಬೇತಿ ನೀಡುತ್ತಾ ಆಗಲೂ ಬರವಣಿಗೆಯಲ್ಲಿ ಕೈಯ್ಯಾಡಿಸುವುದನ್ನು ಬಿಡಲಿಲ್ಲ. "ನಮ್ಮ ಬಂಟ್ವಾಳ" ವಾರ ಪತ್ರಿಕೆಯಲ್ಲಿ "ಪ್ರೇಮಾ ಉಳಿಬೈಲು" ಎಂಬ ಹೆಸರಿನಲ್ಲಿ ನಿರಂತರ ಮೂರು ವರ್ಷಗಳ ವರೆಗೆ ಇವರ ಅಂಕಣ ಬರಹ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" ಹಾಗೂ ತದ ನಂತರ ನಮ್ಮ ಬಂಟ್ವಾಳ ಈ ಪತ್ರಿಕೆಯಲ್ಲಿ "ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ " ಎಂಬ ಅಂಕಣ ಬರಹ  ಪ್ರಕಟವಾಗುತ್ತಿತ್ತು. ಅದು ಅವರಿಗೆ ಅಪಾರ ಜನ ಮನ್ನಣೆ ಗಳಿಸಿ ಕೊಟ್ಟಿತು. ಬಂಟ್ವಾಳ  ತಾಲೂಕಿನಲ್ಲಿ ಆಂಗ್ಲ ಭಾಷಾ ಶಿಕ್ಷಕರಿಗೆ ಸಂಪನ್ಮೂಲ  ವ್ಯಕ್ತಿಯಾಗಿ ಆಂಗ್ಲ ಭಾಷಾ ತರಬೇತಿ ಕೊಡುವ ಕಾರ್ಯವನ್ನು ತಾಲೂಕಿನಲ್ಲಿ ಮಾಡುತ್ತ ಎಲ್ಲರ ಪ್ರೀತಿಗೆ ಪಾತ್ರರಾದರು, ಮಕ್ಕಳಿಗೂ ನೆಚ್ಚಿನ ಶಿಕ್ಷಕಿಯಾದರು. ಶಿಕ್ಷಕರಿಗೆ ಪ್ರತಿವರ್ಷ ಏರ್ಪಡಿಸುವ ರಸಪ್ರಶ್ನೆ, ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲೂ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುದೇ ಅಲ್ಲದೆ, ವಿಜ್ಞಾನ ವಿಚಾರ ಗೋಷ್ಟಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮೈಸೂರಿನಲ್ಲಿ ಪ್ರತಿನಿಧಿಸಿ ಭೇಷ್ ಅನ್ನಿಸಿಕೊಂಡರು. 

         ಇವರು 2011ರಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು, ಸುಳ್ಯ ಇಲ್ಲಿನ ಪ್ರೌಢ ಶಾಲಾ ವಿಭಾಗಕ್ಕೆ ಆಂಗ್ಲ ಭಾಷಾ ಸಹಶಿಕ್ಷಕರಾಗಿ ಪದೋನ್ನತಿ ಹೊಂದಿದರು. ಹತ್ತು ವರ್ಷಗಳ ಕಾಲ ಅಲ್ಲಿಯೇ  ಬೋಧನೆಯಲ್ಲಿ ನಿರತರಾಗಿದ್ದರು. ಅಲ್ಲಿಯೂ ಸುಳ್ಯದ "ಸುಳ್ಯ ಸುದ್ಧಿ" ಹಾಗೂ "ಅಮರ ಸುದ್ದಿ" ಪತ್ರಿಕೆಗಳಲ್ಲಿ ಹಾಗೂ ಅವರ ದೀಪಾವಳಿ ವಿಶೇಷಾಂಕಗಳಲ್ಲಿ  ಇವರ ಹಲವಾರು  ಲೇಖನ, ಕವನಗಳು ಪ್ರಕಟಗೊಂಡಿದ್ದೇ ಅಲ್ಲದೆ ಸುದ್ದಿ ಲೈವ್ ಟಿ ವಿ ಚಾನೆಲ್ ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಎದುರಿಸಲು ಕಿವಿಮಾತು ಹಾಗೂ ಅವರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಲೈವ್ ಆಗಿ ಪೋಷಕ ಹಾಗೂ ವಿದ್ಯಾರ್ಥಿಗಳ ಫೋನ್ ಪ್ರಶ್ನೆಗಳಿಗೆ ಉತ್ತರವನ್ನೂ ಕೊಟ್ಟರು. 

       2021ರಲ್ಲಿ ಬಿಡುಗಡೆ ಆದ ಎಸ್. ಬಂಗೇರ ಮುಂಬೈ ಅವರ ನಿರ್ಮಾಪಕತ್ವದ, ಪಿ ವಿ ಪ್ರದೀಪ್ ಕುಮಾರ್ ಕಥಾ ಬಿಂದು ಪ್ರಕಾಶನ ಇವರ ನಿರ್ದೇಶನದ ಕಿರು  ಚಲನಚಿತ್ರ "ಬದಲಾಗದವರು ಜೀವನದಲ್ಲಿ ಬದಲಾಗುವರೇ?" ಎಂಬ ಕಿರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮಗಳ ಜೊತೆ ಅಭಿನಯಿಸಿರುವ ಹೆಮ್ಮೆ ಇವರದ್ದು. ರೇಡಿಯೋ ಮಣಿಪಾಲದಲ್ಲಿ ಇವರ ಕಥಾ ವಾಚನ, ಮಂಗಳೂರು ಆಕಾಶವಾಣಿಯಲ್ಲಿ "ಭಾರತದಲ್ಲಿ ಸಾಮರಸ್ಯ ಹೇಗೆ" ಎಂಬ ವಿಷಯದ ಬಗ್ಗೆ ಭಾಷಣ ವನಿತಾವಾಣಿ  ಕಾರ್ಯಕ್ರಮದಲ್ಲಿ   ಪ್ರಸಾರವಾಗಿದೆ. ಈಗಾಗಲೇ ರೆಕಾರ್ಡ್ ಆಗಿದ್ದು,  ಮುಂದೆ ಇವರ ಕವನ ವಾಚನವೂ ಪ್ರಸಾರ ಆಗಲಿದೆ. ಕರ್ನಾಟಕ ಲೇಖಕಿಯರ ಸಂಘ, ಕರಾವಳಿ ಲೇಖಕಿಯರ ಸಂಘ ಹಾಗೂ  ಕರ್ನಾಟಕ ಸಾಹಿತ್ಯ ಪರಿಷತ್ ನ  ಸದಸ್ಯರು. ರಾಜ್ಯ , ಜಿಲ್ಲಾ ಮಟ್ಟದ ಹಲವಾರು ಕವನ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಉತ್ತಮ ತೀರ್ಪು ನೀಡಿದ ಅನುಭವವೂ ಇವರಿಗಿದೆ.

           ಸುಳ್ಯದಲ್ಲಿ ಇರುವಾಗಲೇ ಅಲ್ಲಿನ ಶಿಕ್ಷಕರ ಗುಂಪಿನ ಜೊತೆ ಸಿ ಸಿ ಆರ್ ಟಿ ಗೆ ಸೇರಿ ಉತ್ತರಾಖಾಂಡ ರಾಜ್ಯದಲ್ಲಿ ಕರ್ನಾಟಕದ ಹಾಗೂ ತುಳು ನಾಡಿನ  ಸಂಸ್ಕೃತಿಯನ್ನು ಪ್ರತಿನಿಧಿಸಿದ್ದೆ ಅಲ್ಲದೆ, ಆಂಗ್ಲ ಭಾಷಾ ವಿಷಯದಲ್ಲಿ ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರಗಳನ್ನು ನಡೆಸಿ ಕೊಟ್ಟರು. ಕೇರಳದ ಅರಿಕ್ಕೋಡ್ ಶಾಲೆಯಲ್ಲೂ ಸ್ಪೋಕನ್ ಇಂಗ್ಲಿಷ್ ಹಾಗೂ ಇಂಗ್ಲಿಷ್ ಬರವಣಿಗೆ ವಿಷಯದ ಮೇಲೆ ಕಾರ್ಯಾಗಾರ ನಡೆಸಿ ಕೊಟ್ಟರು. ಸುಳ್ಯ ಸಮೀಪದ ಸಂಪಾಜೆ, ಹರಿಹರಗಳಲ್ಲೂ ಸ್ಪೋಕನ್ ಇಂಗ್ಲಿಷ್ ಹಾಗೂ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯನ್ನು ಕಲಿಯುವ, ಬರೆಯುವ ಸುಲಭ ವಿಧಾನಗಳ ಬಗ್ಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಕೊಟ್ಟಿರುವರು.ಚುಟುಕು ಸಾಹಿತ್ಯ ಪರಿಷತ್ ಮೂಲಕ ದೆಹಲಿ ಕನ್ನಡ ಭವನದಲ್ಲಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ನಿರೂಪಕರಾಗಿಯು, ಮುಂಬೈ ವಲಸಿಗರ ಸಮ್ಮಿಲನ ಉಡುಪಿಯಲ್ಲಿ ನಡೆದ ಕಾರ್ಯಕ್ರಮದ ಸಹ ನಿರೂಪಕರಾಗಿ 9 ಯುಟ್ಯೂಬ್ ಚಾನೆಲ್ ಗಳಲ್ಲಿ ಲೈವ್ ಪ್ರಸಾರವಾದ ಕಾರ್ಯಕ್ರಮದ ನಿರೂಪಣೆ ಮಾಡಿದ ಹೆಮ್ಮೆ ಇವರದು.

        ಇನ್ನೂರಕ್ಕೂ ಮಿಕ್ಕಿ ತಾಲೂಕು, ಜಿಲ್ಲಾ, ರಾಜ್ಯ, ಅಂತರ ರಾಜ್ಯ, ಹೊರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಕಥಾ ಗೋಷ್ಟಿಗಳಲ್ಲಿ  ಕವಿಯಾಗಿ, ಕವಿಗೋಷ್ಟಿಯ ಅಧ್ಯಕ್ಷರಾಗಿ, ಉದ್ಘಾಟಕರಾಗಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೀರ್ತಿ ಇವರದ್ದಾಗಿದೆ. ತಾವು ಮಾತ್ರ ಭಾಗಿಗಳಾಗದೆ ತನ್ನ ಶಾಲಾ ಆಸಕ್ತಿಯುತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಬರೆಯಲು ಪ್ರೇರೆಪಿಸಿ ಜಿಲ್ಲಾ, ರಾಜ್ಯ ಹಾಗೂ ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿಗಳಿಗೆ ಕರೆದುಕೊಂಡು ಹೋಗಿ ಅವರಿಂದ ಕವನ ವಾಚನ ಮಾಡಿಸಿರುವರು. 2020ರಲ್ಲಿ   ಆಗ 10ನೇ ತರಗತಿಯಲ್ಲಿ ಓದುತ್ತಿದ್ದ ಇವರ ವಿದ್ಯಾರ್ಥಿನಿ ಕುಮಾರಿ ಹಿಮಾಲಿ ಮಡ್ತಿಲ ಇವಳ "ಸೃಷ್ಟಿಯ ಸೊಬಗು" ಎಂಬ ಕವನ ಸಂಕಲನವನ್ನು ಮುನ್ನುಡಿ ಬರೆದು   24ನೇ ಸುಳ್ಯ ತಾಲೂಕು  ಸಾಹಿತ್ಯ ಸಮ್ಮೇಳನದಲ್ಲಿ ಅದನ್ನು ಬಿಡುಗಡೆಗೊಳಿಸಿರುವರು. ತಮ್ಮ ಮಗಳಿಗೂ ಬರವಣಿಗೆಗೆ ಪ್ರೋತ್ಸಾಹಿಸಿ ಅವಳು ಬರೆದ ಪುಟ್ಟ ಪುಟ್ಟ ಕವನಗಳ ಪುಸ್ತಕ " ಚಿಟಾಣಿ ಚಿಟ್ಟೆ" ಯನ್ನು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ - 2022ರಲ್ಲಿ ಬಿಡುಗಡೆ ಮಾಡಿಸಿರುವರು. ರೇಡಿಯೋ ಮಣಿಪಾಲದ ಚಿಣ್ಣರ ದನಿ ಕಾರ್ಯಕ್ರಮದಲ್ಲೂ ಭಾಗವಹಿಸಿದ ದಿಯಾ ಉದಯ್  ಇವರ ಮಗಳು. ಕಥೆ, ಕವನ ಬರಹದ ಜೊತೆ ನೃತ್ಯ, ತುಳು ಕಲ್ಪುಗ ಯೂಟ್ಯೂಬ್ ಚಾನೆಲ್ ನ ಸಹಭಾಗಿ. 

        ಖ್ಯಾತ ಭಾರತನಾಟ್ಯ ಕಲಾವಿದೆ, ಕವಯತ್ರಿ , ವಕೀಲೆ ಪರಿಮಳಾ ಮಹೇಶ್ ಇವರ ಕವನ ಸಂಕಲನ "ರಾಜ ಬೀದಿಯ ಹೂವಾಡಗಿತ್ತಿ" ಎಂಬ ಪುಸ್ತಕಕ್ಕೆ ಮುನ್ನುಡಿ ಬರೆದುದೆ ಅಲ್ಲದೆ ಹಲವಾರು ಎಲೆಮರೆಯ ಕವಿಗಳಿಗೆ ಪ್ರೋತ್ಸಾಹ ನೀಡಿ ಬೆಳಕಿಗೆ ತಂದವರು ಇವರು.  2021 ಡಿಸೆ೦ಬರ್ ನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಮೂಲ್ಕಿ, ಮಂಗಳೂರು ತಾಲೂಕು ಇಲ್ಲಿಗೆ ವರ್ಗಾವಣೆಗೊಂಡು ಅಲ್ಲಿಯೇ ತಮ್ಮ ವೃತ್ತಿಯನ್ನು ಮುಂದುವರೆಸುತ್ತಿದ್ದಾರೆ. ಅಲ್ಲಿಯೂ ಆಂಗ್ಲ ಭಾಷಾ ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ಒಬ್ಬರಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕವಿಗೋಷ್ಠಿಗಳಲ್ಲಿ , ಕವಿ ಸಮ್ಮೇಳನಗಳಲ್ಲಿ ಭಾಗವಹಿಸುವುದರ ಜೊತೆಗೆ ಸಾಹಿತ್ಯದ ಕೃಷಿಯನ್ನೂ ಮುಂದುವರೆಸುತ್ತಿದ್ದಾರೆ. ಬೋಧನೆಯ ಜೊತೆಗೆ ಬರವಣಿಗೆ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್ , ಪ್ರವಾಸ, ಗೆಳೆತನ, ವಿದ್ಯಾರ್ಥಿಗಳ ಕೌನ್ಸೆಲಿಂಗ್, ಬೇರೆ ಬೇರೆ ಕವಿಗಳ ಕವನ ವಾಚನ, ಓದು, ತನ್ನ ಮಿತಿಯಲ್ಲಿ ಸಮಾಜ ಸೇವೆ,  ಇತರ ಕವಿಗಳನ್ನೂ ಪ್ರೋತ್ಸಾಹಿಸಿ ಬೆಳೆಸುವುದು ಇವರ ಹವ್ಯಾಸ. "ನಮ್ಮ ಬಂಟ್ವಾಳ"ವಾರಪತ್ರಿಕೆ, ಡಿಜಿಟಲ್ ಪತ್ರಿಕೆಗಳಲ್ಲೂ ಪ್ರಕಟವಾದ ಬಳಿಕ ಈಗ  ' ಹಾಸನವಾಣಿ  ' ದಿನಪತ್ರಿಕೆ ಗಳಲ್ಲಿ ಇವರ ಅಂಕಣ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" 236 ವಾರಗಳವರೆಗೆ ಪ್ರಕಟವಾಗುತ್ತಿತ್ತು. ಪ್ರತಿಲಿಪಿ ಬರವಣಿಗೆಯ ಆ್ಯಪ್ ನಲ್ಲಿ ಇವರ ಬರವಣಿಗೆಗಳಿಗೆ 50  ಸಾವಿರಕ್ಕೂ ಅಧಿಕ ಓದುಗರಿದ್ದು ಗೋಲ್ಡನ್ ಬ್ಯಾಡ್ಜ್ ಪಡೆದಿರುವ ಕವಿ ಇವರು. ಅಲ್ಲದೆ ಪ್ರಸ್ತುತ ಸಂಗಾತಿ ಎಂಬ ಆನ್ಲೈನ್ ಪತ್ರಿಕೆಯಲ್ಲಿ ಹವ್ಯಾಸಿ ಸಹಾಯಕ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಯಾ ಮೂಲಕ ಕವಿ, ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

  "ಲಿಟರೇಚರ್ ಆಫ್ ಹನಿ ಬಿಂದು" ಇದು  ಇವರ ಬ್ಲಾಗ್. ಇಲ್ಲಿ ಎರಡು ಸಾವಿರಕ್ಕೂ ಅಧಿಕ ಬರಹ, ಕವನ, ಗಝಲ್, ಲೇಖನ, ಚುಟುಕು,  ಕಥೆ ಮೊದಲಾದ ಸಾಹಿತ್ಯ ಪ್ರಕಾರಗಳ ಕೃಷಿ ಇವರದಾಗಿದೆ. ಪ್ರತಿ ಲಿಪಿ ಆಪ್ ನ ಬರಹಗಾರರು ಅಲ್ಲಿ
 ತನ್ನ ಹಾಗೇ ಬೆಳೆದ ಮತ್ತು ಜೀವನದಲ್ಲಿ ಸಾಧನೆ ಮಾಡಿ ಮೆರೆದ ಸಾಧಕರ ಬಗೆಗಿನ ಲೇಖನ ಮಾಲೆ " ಯಶೋಗಾಥೆ" ,  ಶಾಲಾ ವೃತ್ತಿ ಜೀವನದ ಅನುಭವಗಳ ಲೇಖನಮಾಲೆ "ಶಿಕ್ಷಕರ ಕಕ್ಷೆಯೊಳಗೆ". ಚುಟುಕು, ಟಂಕಾ, ಗಝಲ್, ಕಾದಂಬರಿ, ಕಥೆ, ಲೇಖನ, ಕವನ,  ಹೀಗೆ ಅನೇಕ ಬರಹಗಳು ತುಳು, ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ  ಪ್ರಕಟವಾಗುತ್ತಿವೆ.

       ತುಳು ಕಲಿಕೆಗಾಗಿ ಯೂ ಟ್ಯೂಬ್ ಹಾಗೂ ಇನ್ಸ್ಟಾ ಗ್ರಾಮ್ , ಮುಖಪುಟಗಳಲ್ಲಿ ತುಳು ಕಲ್ಪುಗ ಎಂಬ ಚಾನಲ್ ಒಂದನ್ನು ತೆರೆದು ಮಗಳು ದಿಯಾ ಜೊತೆ ಪ್ರತಿನಿತ್ಯ ಕನ್ನಡ ಮತ್ತು ಆಂಗ್ಲ ಭಾಷೆ ಬಲ್ಲವರಿಗೆ ತುಳು ಭಾಷೆಯನ್ನು ಕಲಿಸುವ ಕಾರ್ಯವನ್ನೂ ಸದ್ದಿಲ್ಲದೆ ಮಾಡುತ್ತಿರುವವರು ಇವರು. ಯೂಟ್ಯೂಬ್ ನಲ್ಲಿ 40 ಸಾವಿರ ನೋಡುಗರನ್ನು ಪಡೆದಿದ್ದಾರೆ. ಅಲ್ಲದೆ ದಿನಕ್ಕೊಬ್ಬ ಕವಿಯ ಕವನ ವಾಚನ ಮಾಡುತ್ತಾ ಇಂದಿನ ಸಾಮಾಜಿಕ ಜಾಲ ತಾಣಗಳನ್ನು ಉತ್ತಮ ಕಾರ್ಯಕ್ಕಾಗಿ ಹಾಗೂ ಸಾಹಿತ್ಯಕ್ಕಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿ ಕೊಟ್ಟವರು.ಸುಮಾರು 150 ಕವಿಗಳ ಕವನ ವಾಚನವನ್ನು ಇದುವರೆಗೆ ಪೂರೈಸಿ ಮುಂದುವರೆಯುತ್ತಾ ಸಾಹಿತ್ಯಕ್ಕಾಗಿ ತಮ್ಮ ಜೀವನ ಮುಡಿಪಾಗಿ ಇಟ್ಟವರು. ಈಗ ಪರಿಸರದ ಬಗ್ಗೆ ತಮ್ಮ ದೃಷ್ಟಿಯನ್ನು ಇಟ್ಟಿರುವ ಇವರು ನೇಚರ್ ಲವರ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಪರಿಸರ ಉಳಿಸಿ ಎಂಬ ಸಂದೇಶವನ್ನು ಪ್ರಕೃತಿ ಚಿತ್ರ, ವಿಡಿಯೋಗಳ ಮೂಲಕ ರೀಲ್ಸ್ ಮಾಡುತ್ತಾ ಪರಿಸರ ಉಳಿಸಿ ಎಂಬ ಅರಿವು ಮೂಡಿಸಲು, ಆ ಮೂಲಕ ಪರಿಸರ ಉಳಿಸುವ ಹೋರಾಟಕ್ಕೆ ನಿಂತಿರುವರು.

      "ಭಾವ ಜೀವದ ಯಾನ " ಇವರ ಪ್ರಕಟಿತ ಕವನ ಸಂಕಲನ.2019ರಲ್ಲಿ ಬಿಡುಗಡೆ ಆಗಿದೆ. "ಗವಿಯಡವಿಯ ಗಝಲ್ ಗಳು - ಗಝಲ್ ಸಂಕಲನ, ಶಿವ ಭಕ್ತಿ ಗೀತಾಮೃತ - ಭಕ್ತಿ ಗೀತೆಗಳ ಸಂಕಲನ, ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - ಅಂಕಣ ಬರಹಗಳ ಸಂಕಲನ, ಕುಟುಕದ ಚುಟುಕುಗಳು - ಚುಟುಕು ಸಂಕಲನ, Poems Of Me -  ಆಂಗ್ಲ ಕವನಗಳ ಸಂಕಲನ , ತುಳುತ ತಲಮಲಕ - ತುಳು ಕವಿತೆಗಳ ಸಂಕಲನ , ಪುಟ್ಟನ ಕವನ (ಶಿಶು ಗೀತೆಗಳ ಸಂಕಲನ )..ಹೀಗೆ ಹಲವಾರು ಪುಸ್ತಕಗಳು ಅಚ್ಚಿನಲ್ಲಿ ಪ್ರಕಟಣೆಗಾಗಿ ಸಿದ್ಧವಾಗುತ್ತಿವೆ.
         "ದಶಕಗಳು" ಎಂಬ 10 ಸಾಲಿನ ಕವನ ಇವರದೇ ಕಾವ್ಯ ಪ್ರಕಾರ. 120 ಕ್ಕೂ ಹೆಚ್ಚು ದಶಕಗಳನ್ನು ಬರೆದ ಇವರು ಹಲವಾರು ಪ್ರಾರ್ಥನಾ ಗೀತೆಗಳನ್ನೂ ರಚಿಸಿರುವುದೆ ಅಲ್ಲದೆ ಗಝಲ್, ಸಣ್ಣ ಕಥೆ, ನ್ಯಾನೋ ಕಥೆ, ಕವನ, ಕಾವ್ಯ, ಟoಕಾ, ಚುಟುಕು, ಮಕ್ಕಳ ಕವಿತೆ (ಶಿಶುಗೀತೆ), ಭಕ್ತಿಗೀತೆ, ಭಾವಗೀತೆ, ಕಥನ ಕವನ, ಲಘು ಪ್ರಬಂಧ, ಲೇಖನ, ಪ್ರಬಂಧ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ  ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ತಾಯಿಯ ಸೇವೆಯಲ್ಲಿ ನಿರತರಾಗಿರುವರು.

        ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ನಿಂದ "ಕನ್ನಡ  ಸೇವಾ ರತ್ನ" ಪ್ರಶಸ್ತಿ, ರಾಜ್ಯ ಮಟ್ಟದಲ್ಲಿ ಸ್ನೇಹ ಸಂಗಮ ಬರಹಗಾರರ ಬಳಗ ತುಮಕೂರು ಇವರು ಕೊಡಮಾಡಿದ "ಕನ್ನಡ ಸಾಹಿತ್ಯ ರತ್ನ" ಪ್ರಶಸ್ತಿ, ಸುಳ್ಯದ ಚಂದನ ಸಾಹಿತ್ಯ ವೇದಿಕೆ ಕೊಡಮಾಡುವ ರಾಜ್ಯ ಮಟ್ಟದ "ಕನ್ನಡ ಕಾವ್ಯ ರತ್ನ" ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ದಿನಾಂಕ 26.03.23 ರಂದು ಕರುನಾಡ ಹಣತೆ ಕಲ್ಪತರೋತ್ಸವ ಐದನೇ ವಾರ್ಷಿಕ ಸಮ್ಮೇಳನ ತುಮಕೂರು ಇಲ್ಲಿ ರಾಜ್ಯ ಮಟ್ಟದ "ಕುವೆಂಪು ರತ್ನ " ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹಾಗೆಯೇ ಮ್ಯಾಕ್ಸ್ ಲೈಫ್ ಇನ್ಸೂರನ್ಸ್ ಮಂಗಳೂರು ಇವರ ಶಿಕ್ಷಕ Achievement ಸನ್ಮಾನ ಹಾಗೂ ಶಿಕ್ಷಕ ರತ್ನ ಸರ್ಟಿಫಿಕೆಟ್ ಕೂಡಾ ಲಭಿಸಿದೆ.  ಇವರು 200ಕ್ಕೂ ಹೆಚ್ಚು ರಾಷ್ಟ್ರ, ಅಂತರರಾಜ್ಯ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ  ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವರು. ಸಕಲೇಶಪುರ ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಇವರು ಬೆಂಗಳೂರು, ಕಾಸರಗೋಡಿನ ಪೆರ್ಲ ದ ವಿವಿಧ ಸಾಹಿತ್ಯ ಕಾರ್ಯಕ್ರಮಗಳಲ್ಲಿ  ಉದ್ಘಾಟಕರು ಹಾಗೂ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ.  

        "ಕರ್ನಾಟಕದ ಮಹಿಳಾ ಕವಿ ರತ್ನಗಳು"  ಎಂಬ ವಾಟ್ಸ್ ಆ್ಯಪ್ ಗುಂಪು ರಚಿಸಿ ಬರೆಯುವ ಮಹಿಳೆಯರಿಗೆ ಅವಕಾಶ ಹಾಗೂ ಉತ್ತೇಜನ ಕೊಡುತ್ತಾ, ಪ್ರತಿವರ್ಷ ಅಲ್ಲಿ ಕವನ ಸ್ಪರ್ಧೆಗಳನ್ನು ಏರ್ಪಡಿಸಿ, ನಾಡಿನ ಖ್ಯಾತ ಬರಹಗಾರರನ್ನು ತೀರ್ಪುಗಾರರಾಗಿ ಮಾಡಿ ಪುಸ್ತಕ ಬಹುಮಾನ ನೀಡುತ್ತಿದ್ದಾರೆ. ಹಾಗೆಯೇ "ಲೇಡೀಸ್ ಗ್ಯಾಲರಿ" ಎಂಬ ವಾಟ್ಸ್ ಆ್ಯಪ್  ಗುಂಪಿನ ಮೂಲಕ ಮಹಿಳೆಯರಿಗೆ ನ್ಯಾಯ, ಸುಲಭವಾದ ಡಾಕ್ಟರ್ ಸಲಹೆಗಳ ಜೊತೆಗೆ ಉತ್ತಮ ಮಾಹಿತಿ 10 ವರ್ಷಗಳಿಂದ ಹಂಚಲಾಗುತ್ತಿದೆ. ಹಾಗೆಯೇ "ಸ್ಟೂಡೆಂಟ್ಸ್ ಟೀಮ್" ಗುಂಪನ್ನು ರಚಿಸಿ ಹಲವಾರು ಹಿರಿಯ ವಿದ್ಯಾರ್ಥಿಗಳಿಗೆ ಮುಂದಿನ ಕೆಲಸ, ಓದು, ಉನ್ನತ ಶಿಕ್ಷಣ, ಉದ್ಯೋಗದ  ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕಡಬದ ಯುವ ತೇಜಸ್ಸು ಟ್ರಸ್ಟ್ ನ ಸಹಾಯಕರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ ಕಡಬದ ವಿದ್ಯಾ ಸಂಸ್ಥೆಯೊಂದಕ್ಕೆ ಟ್ರಸ್ಟಿ ಗಳಲ್ಲಿ ಒಬ್ಬರಾಗಿ ಸಣ್ಣ ಸಹಾಯ ನೀಡುತ್ತಾ ಬಂದಿರುತ್ತಾರೆ. ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉನ್ನತ ವ್ಯಾಸಂಗಕ್ಕೆ ಕಾಲೇಜಿಗೆ ಸೇರಲು ಸಹಾಯ, ಮುಂದಿನ ವಿದ್ಯಾರ್ಹತೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. 

    ನೈರುತ್ಯ, ನಮ್ಮ ಬಂಟ್ವಾಳ, ಪ್ರಜಾ ಪ್ರಗತಿ, ಮಂಗಳ, ವಿಜಯ ಕರ್ನಾಟಕ,  ಸ್ತ್ರೀ ಜಾಗೃತಿ, ಸಂಪದ ಸಾಲು,ಹಾಸನ ವಾಣಿ ಇನ್ನೂ ಮುಂತಾದ ಹಲವಾರು ಪತ್ರಿಕೆ ಹಾಗೂ ವಾರ್ಷಿಕ ಸಂಚಿಕೆಗಳಲ್ಲಿ, ಹಲವಾರು ಪುಸ್ತಕಗಳಲ್ಲಿ ಇವರ ಕವನ, ಕಥೆ, ಲೇಖನಗಳು ಪ್ರಕಟವಾಗಿವೆ. ಹಲವಾರು ಶಾಲಾ, ಸಂಘಗಳ ವಾರ್ಷಿಕ ಸ್ಮರಣ ಸಂಚಿಕೆಗಳಲ್ಲಿ ಇವರ ಕವನ ಹಾಗೂ ಲೇಖನಗಳು ಪ್ರಕಟವಾಗಿವೆ.ತಮ್ಮ ಕನ್ನಡ ಆಂಗ್ಲ ಹಾಗೂ ತುಳು ಸಾಹಿತ್ಯ ಸೇವೆಗೆ 2023 ನೇ ಸಾಲಿನ  All India women's Achievement Award (AIVAA)ನ್ನು TWELL media ದಿಂದ ದಿನಾಂಕ 25.06.2023ರಂದು ಬೆಂಗಳೂರಿನಲ್ಲಿ ಪಡೆದಿರುತ್ತಾರೆ. ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಿ 2021ನೆ ಸಾಲಿನ ಸಲ್ - ಸಬೀಲ್ ಎಕ್ಸೆಲೆನ್ಸ್ ಅವಾರ್ಡ್ ಪಡೆದಿದ್ದಾರೆ. ಸ್ಪಂದನ ಟಿವಿ ಯ ಕವಿ ಸಮಯ ಕಾರ್ಯಕ್ರಮದಲ್ಲೂ ಇವರ ಸಂದರ್ಶನ ಪ್ರಸಾರವಾಗಿದೆ. 

2022-23 , 2023 -24 ನೆ ಸಾಲಿನಲ್ಲಿ ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲೂ ಮೂಲ್ಕಿ ಸರಕಾರಿ ಪ್ರೌಢ ಶಾಲೆಯ  ಶೇಕಡಾ 100 ಫಲಿತಾಂಶ ಪಡೆದುದಲ್ಲದೆ , ತಮ್ಮ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಪೋಷಿಸಿ ಬೆಳೆಸುತ್ತಾ, ಬರೆಯುವ ಆಸಕ್ತಿ ಇರುವವರನ್ನು ಹಾಗೂ ವಿದ್ಯಾರ್ಥಿಗಳಿಗೂ ಆಸಕ್ತಿ ಬೆಳೆಸುತ್ತಾ, ಇದೀಗ ರೋಶನಿ ನಿಲಯ ಮಂಗಳೂರು ಇಲ್ಲಿ ಆನ್ ಲೈನ್ ಮೂಲಕ counselling of Adolescents ಎಂಬ ಸರ್ಟಿಫಿಕೇಟ್ ಕೋರ್ಸ್ ಗೆ ಸೇರಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರು ಮೋಟಿವೇಷನಲ್  ಸ್ಪೀಕರ್ ಆಗಿದ್ದರೂ ಕೂಡಾ ಸದಾ ವಿದ್ಯಾರ್ಥಿ. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವ ಇವರು ಸಾಹಿತ್ಯದಲ್ಲಿ ಡಾಕ್ಟರೇಟ್ ಕಲಿಯಬೇಕು ಎಂಬ ಗುರಿಯನ್ನು ಹೊಂದಿರುವವರು.

ಭಾನುವಾರ, ಅಕ್ಟೋಬರ್ 13, 2024

ಟಾಟಾ

ಟಾಟಾ ಹೇಳಿದ ಟಾಟಾ 

ಬೇಕಾದ್ದೆಲ್ಲ ಭಾರತೀಯರಿಗೆ ಕೊಟ್ಟು
ಬಡವರ ಉದ್ಧಾರಕ್ಕೆ ಮನಸಿಟ್ಟು 
ದಾನದ ಮಹತ್ವ ತಿಳಿಸಿ ಕೊಟ್ಟು
ದುಡಿಮೆಯ ಮಹತ್ವ ಕಲಿಸಿಕೊಟ್ಟು

ಟಾಟಾ ಸರ್ವರ ಹಿತೈಷಿಯಾಗಿ 
ಭಾರತೀಯರ ಬೆಂಬಲಿಸಿ ಬಾಗಿ
ದುಡಿತದ ಹಣದ ದಾನಿಯಾಗಿ
ಭಾರತೀಯರ ರಾಯಭಾರಿಯಾಗಿ

ಒಂಟಿತನದಲಿ ಸಾಧನೆ ಮಾಡಿ
ಜಂಟಿ ಶಕ್ತಿಯಲಿ ಕಾರ್ಯವ ನೀಡಿ
ಮನದ ಒಳಗೆ ಧೈರ್ಯವ ದೂಡಿ
ನಿಜವಾದ ಪ್ರೀತಿಯ ಆಳವ ನೋಡಿ

ಭಾರತ ದೇಶಕೆ ನೀನೇ ವೀರ
ವ್ಯಾಪಾರ ಗೆದ್ದ ಸರದಾರ
ವಿವೇಕರ ಮಾತಿಗೆ ಹಾಕಿದೆ ದ್ವಾರ
ಭಾರತ ಮುನ್ನಡೆಸಿದ ಶೂರ
@ಹನಿಬಿಂದು@
14.10.2024

ಚುಂಗುಡಿ

ಚುಂಗುಡಿ
ಆಯೆ ನಾಡೊಂದು ಪೊಯೆ ತಾದಿಡ್ ಪರಿಯರೆ ಪಂದ್ ಬಾರ್
ಕಾಸ್ ದಾಂತೆ  ಪತೊಂದು ಪೋಯೆ ಇಲ್ಲಡ್ ಬುಲೆಯಿನ ಬಾರ್
@ಹನಿಬಿಂದು@
13.10.2024

ಶನಿವಾರ, ಅಕ್ಟೋಬರ್ 12, 2024

ಜಯವಾಗಲಿ

ಭಕ್ತಿ ಗೀತೆ

ಜಯವಾಗಲಿ ಜಯವಾಗಲಿ
ಮೊದಲು ಪೂಜ್ಯ ಗಣಪತಿಗೆ
ವಿದ್ಯೆ ಕೊಡುವ ಸರಸ್ವತಿಗೆ
ದುಡ್ಡು ತರುವ ಮಹಾಲಕ್ಷ್ಮಿಗೆ

ಖುಷಿಯ ತರುವ ಹರಿನಾಮಕೆ
ಜಗವ ಪೊರೆವ ಶಿವ ರೂಪಕೆ
ಪ್ರೀತಿ ಕೊಡುವ ದುರ್ಗೆಗೆ
ಕಾದು ಪೊರೆವ ಶಕ್ತಿಗೆ

ಜಯವು ವೀರ ಸೈನಿಕರಿಗೆ
ಅನ್ನ ಕೊಡುವ ರೈತರಿಗೆ
ಬಿತ್ತಿ ಬೆಳೆದು ಹೊತ್ತು ತಂದ 
ತಂದೆ ತಾಯಿ ಪಾದಕೆ

ವಿದ್ಯೆ ಬುದ್ಧಿ ಕಲಿಸಿದ
ಗುರು ಸ್ಥಾನದ ದೇವಗೆ
ತಿದ್ದಿ ಬೆಳೆಸೋ ಹಿರಿಯರ
ಪದ ಪಾದ ಕಮಲಕೆ 
@ಹನಿಬಿಂದು@
13.10.2024

ಉಪದ್ರ

ಹಾಗೆ ನೋಡಿದರೆ ದಸರಾ ಮೆರವಣಿಗೆಯಲ್ಲಿ ಪ್ರಾಣಿಗಳಿಗೂ ಉಪದ್ರವೇ.. ಆನೆ, ಕುದುರೆ...ಟ್ರಾಫಿಕ್ ಹೆಚ್ಚಾಗಿ ಅಲ್ಲಿ ಸಾಗುವವರಿಗೆ ಉಪದ್ರ, ಪ್ರತಿದಿನ ಲೆಕ್ಕಾಚಾರ ಹಾಕಲು ಹೋದರೆ ಆಫೀಸ್ ವರೆಗೆ ಹೋಗುವುದು ಉಪದ್ರ, ಪುನಃ ಮನೆಯವರೆಗೆ ತಿರುಗಿ ಬರುವುದು ಉಪದ್ರ, ವರ್ಕ್ ಫ್ರಮ್ ಹೋಮ್ ಆದರೆ ಮನೆಯವರ ಉಪದ್ರ, ಸಂಬಳ ಬಾರದೆ ಇದ್ದರೆ ತಿಂಡಿ ತಿನಸಿಗೆ , ಮನೆ ದಿನಸಿ ತರಲು ಮನೆಯವರ ಉಪದ್ರ, ದಿನಕ್ಕೆ ಐದಾರು ಸಲ ಜೋರಾಗಿ ಕೇಳುವ ಬಾಂಗ್ ನ ಸದ್ದು ಕಿವಿಗೆ ಉಪದ್ರ, ನವರಾತ್ರಿಯಲ್ಲಿ ಬಡಿದುಕೊಂಡು ಬರುವ ವಿವಿಧ ವೇಷಗಳ ಶಬ್ಧ, ಕುಣಿತ ,ಹಣಕ್ಕಾಗಿ ಉಪದ್ರ, ದೇವಸ್ಥಾನ, ದೈವಸ್ಥಾನ ಕಟ್ಟಿ. ಪೂಜೆ. ಪುನರ್ ಪ್ರತಿಷ್ಠೆಗಾಗಿ ಹಣ ಸಂಗ್ರಹಣೆಗಾಗಿ ಬರುವವರ ಉಪದ್ರ, ಮನೆಗೆ ಬಂದರೆ ಹೆಂಡತಿ ಮಕ್ಕಳ ಉಪದ್ರ. ಆಫೀಸಿಗೆ ಹೋದರೆ ಮೇಲಧಿಕಾರಿಯ ಉಪದ್ರ, ಹೊರಗೆ ಹೋದರೆ ಟ್ರಾಫಿಕ್, ಸಾಲದವರ ಉಪದ್ರ.ಮನೆಯ ಒಳಗೆ ಸೊಳ್ಳೆಯ ಉಪದ್ರ ಬದುಕೇ ನಡೆವುದು ಈ ಉಪದ್ರದಿoದ..ಇತರರು ಹುಟ್ಟಿದ್ದೇ ಉಪದ್ರ ಕೊಡಲು..ಇದು ಸರ್ವರಿಗೂ ಅನ್ವಯ ಆಗುತ್ತದೆ ಅಲ್ಲವೇ?. ಏನು ಮಾಡೋದು? ಸಹನೆಯೇ ದೇವರು. ನೀವೇನಂತೀರಿ?
ಹನಿ ಬಿಂದು

ಹನಿ

ಹನಿ 
ಅರ್ಹತೆಗೆ ತಕ್ಕಷ್ಟು
ಸ್ಥಾನಮಾನ ಸಿಕ್ಕಿದರೆ
ಅದು ಖುಷಿ!
ಅರ್ಹತೆ ಇದ್ದೂ
ಏನೂ ಸಿಗದೆ ಹೋದರೆ
ಮಂಡೆ ಬಿಸಿ!
ಅರ್ಹತೆ ಇಲ್ಲದವನಿಗೆ
ಆ ಸ್ಥಾನ ಇದ್ದರೆ
ಇತರರಿಗೆ ಮಸಿ!
@ಹನಿಬಿಂದು@
13.10.2024

ಹಾಯ್ಕು

ಹಾಯ್ಕು

ಸಮಾಜ ಮಲ್ಲ!
ಲೆಕ್ಕ, ಭಾಷೆ ಎಲ್ಯವಾ??
ಮಾತಲ ಬೋಡು!!
@ಹನಿಬಿಂದು@
12.10.2024

ಶುಕ್ರವಾರ, ಅಕ್ಟೋಬರ್ 11, 2024

ಚುಟುಕು

ಚುಟುಕು

ಸರ್ವಧರ್ಮ ಒಂದು ಎಂದು ಹೇಳಬಲ್ಲೆವು
ಪರರ ಕೆಲಸವನ್ನು ನಾವು ಸಹಿಸಲೊಲ್ಲೆವು
ಹಿಂಸೆ ಮೋಸ ಅನ್ಯಾಯ ತಡೆಯಲೊಲ್ಲೆವು
ಪರರೂ ನಮ್ಮ ಹಾಗೆಯೆಂದು ಒಪ್ಪಲೊಲ್ಲೆವು..
@ಹನಿಬಿಂದು@
12.10.2024

ಪನಿ ಕವಿತೆ

ಪನಿ ಕವಿತೆ

ಆಲ್ ಪಾಪ
ದಾಲಾ ಗೊತ್ತಾಪುಜಿ
ದಾಲಾ ಗೊತ್ತಿಜ್ಜಿ
ಏರೆಡಲ ಪಾತೆರ್ರೆ ಇಜ್ಜೀ 
ಒರ್ತಿಯೇ ಇಲ್ಲಲ್
ಪ್ರತಿ ರಾತ್ರೆಡ್ 
ಪರ್ಪಿನಿ ಜೆಪ್ಪುನಿ!
@ಹನಿಬಿಂದು@
11.10.2024

ಭಾವಗೀತೆ ಧ್ವನಿ

ಭಾವಗೀತೆ

ಧ್ವನಿ

ಅಲ್ಲೇ ಕೇಳುತಿದೆ ಮಧುರ ಧ್ವನಿಯಿದು 
ನಾಲ್ಕು ಸಾಲು ಬಂದು
ಇಲ್ಲೇ ಬೀಳುತ್ತಿದೆ ಮಳೆಯ ಹನಿಗಳು
ಬಾಳು ಬೆಳಗಲೆಂದು//

ಮಧುರ ಬೆರೆತ ಪ್ರೇಮ ನಾದವಿದು
ಮೋಡಿಯ ಮಾಡುತಿದೆ 
ಸಿಂಧೂರ ಧರಿಸಿದ ಮಾತೆಯ ರೀತಿ
ನಗುವ ಚೆಲ್ಲುತಿದೆ..//

ಅಂದದ ಬಾಳಿಗೆ ಸಿಂಚನ ಸಂಕೇತ
ಮಾತು ಹೊರಗೆ ಬಂದು
ಚಂದದ ಮನಕೆ ಶೃಂಗಾರ ಕಾವ್ಯ
ಧಾತು ಇದುವೆ ಇಂದು//

ಸಿಹಿಯೂ ಸುಗಮವು ಕೀಳಲು ನಿಧಿಯು
ಮೋಹ ಪಾಶವಿಲ್ಲ
ಸವಿಯೂ ರುಚಿಯೂ ಸ್ನೇಹದ ಸುಧೆಯು
ಸತ್ಯ ನಾಶವಿಲ್ಲ..//
@ಹನಿಬಿಂದು@
11.10.2024

ಗುರುವಾರ, ಅಕ್ಟೋಬರ್ 10, 2024

ಟoಕಾ

ಟoಕಾ 

ಮನಿಪ್ಪಂದೆನೆ
ಕುಲ್ಲಂದೇ ನಡಪ್ಪೊಡು 
ಬೇಲೆ ಮಲ್ಪೊಡು 
ನಾಲ್ ಜನತೆಡ್ಡೆಗ್
ನಂಕಾದೆ  ಬದ್‌ಕೊಡು
@ಹನಿಬಿಂದು@
10.10.2024

ಮಂಗಳವಾರ, ಅಕ್ಟೋಬರ್ 8, 2024

ಚುಟುಕು

ಚುಟುಕು ಬಗ್ಗೆ ಚುಟುಕು ಮಾಹಿತಿ

ಚುಟುಕು ಅಂದರೆ ಚಿಕ್ಕದಾಗಿ ಚೊಕ್ಕ ಅರ್ಥ ಕೊಡುವಂಥದ್ದು.
ಹನಿಗವನ ,ಹಾಯ್ಕು,ಟಂಕಾ, ರುಬಾಯಿ ಎಲ್ಲವೂ ಚುಟುಕಿನ ಸಾಹಿತ್ಯಗಳೇ.
ಆದರೆ ಸಾಂಪ್ರದಾಯಿಕ ಚುಟುಕು ಬರವಣಿಗೆಯ ಪ್ರಕಾರದಲ್ಲಿ ಇವೆಲ್ಲಕ್ಕೂ ಭಿನ್ನ.
ದಿನಕರ ದೇಸಾಯಿ ಮಾದರಿ ಚುಟುಕಿಗೆ ಉತ್ತಮ ಉದಾಹರಣೆ.
ಅದು ೧೮ ಮಾತ್ರೆಗಳ ೪ ಸಾಲು.ಅಂತ್ಯ ಪ್ರಾಸ ಯುಕ್ತ.
ಅದಲ್ಲದೆ ಆದಿ ಪ್ರಾಸ ಮಧ್ಯಪ್ರಾಸ ಅಂತ್ಯಪ್ರಾಸ ಸಹಿತ ಬರೆಯ ಬಹುದು.
ಅಂತ್ಯ ಪ್ರಾಸ ಮೊದಲೆರಡು ಉಳಿದೆರಡು ಸಾಲುಗಳಲ್ಲಿ ಒಂದೇ ಅಥವಾ ಬೇರೆ ಬೇರೆಯಾಗಿಯೂ ಇರ ಬಹುದು.
ಮಾತ್ರೆಗಳು ೧೮ ರ ಬದಲಿ ಇತರ ಸಂಖ್ಯೆ ಆದರೂ ನಿಶಿದ್ಧವಲ್ಲ.
ಹಾಗೆಯೇ ೧೪ ೧೩ ೧೪ ೧೩ ಮಾತ್ರಾ ಪ್ರಕಾರ ಬರೆದವರೂ ಇದ್ದಾರೆ.

# ಡಾ ಸುರೇಶ ‌ನೆಗಳಗುಳಿ

ಖುಷಿಯ ಕ್ಷಣ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -210

      ನನ್ನೊಳಗಿನ ನಾನೆಂಬ ಗೆಳತಿಯ ಜೊತೆಗೆ ಒಂದಿಷ್ಟು ಹರಟೆ, ಮಾತು, ಸಿಂಹಾವಲೋಕನ, ಪರೀಕ್ಷೆ, ಸರಿ ತಪ್ಪುಗಳ ಲೆಕ್ಕಾಚಾರ, ಬೇಕಾದ್ದು ಬೇಡದರ ಚೂರು ಕ್ಲೀನಿಂಗ್.
ನಾನು ಸೌಮ್ಯ ಸ್ವರೂಪಿ. ಆದರೆ ಸ್ವಲ್ಪ ಹಠಮಾರಿ. ಯಾರಾದರೂ ನನ್ನನ್ನು ಡಿ ಗ್ರೇಡ್ ಮಾಡಿದರೆ ನಾ ಒಪ್ಪಿಕೊಳ್ಳಲಾರೆ. ಕಾರಣ ನನಗೆ ಒಳ್ಳೆ ಮನಸ್ಸಿದೆ, ಹೃದಯ ಚೆನ್ನಾಗಿದೆ. ಮನದ ಯಾವುದೇ ಮೂಲೆಯಲ್ಲಿ ದುರಾಸೆ, ಕಪಟ, ರೋಷ, ದ್ವೇಷಗಳು ಇಲ್ಲ. ಬಹಳ ಜನರಿಂದ ಆದ ನೋವಿದೆ. ಆ ನೋವಿಗೆ ನಾನು ದ್ವೇಷ ಸಾಧಿಸಲು ಹೋಗುತ್ತಿಲ್ಲ. ಬದಲಾಗಿ ಶಾಂತ, ನಿಶಬ್ದ, ಸೈಲೆಂಟ್ ಇವೇ ನನ್ನ ಅಸ್ತ್ರಗಳು.
  ಮಂಡೆ ಗಟ್ಟಿ ಇದೆ ಎಂದು ಬಂಡೆಗೆ ಗುದ್ದುವ ಸ್ವಭಾವ ನನ್ನದಲ್ಲ. ಎದುರಿನ ವ್ಯಕ್ತಿ ಹೇಗೆ ಇದ್ದಾನೆ, ಅವನ ಶಕ್ತಿಯ ಇತಿ ಮಿತಿಗಲೇನು ಎಂದು ಸದಾ ತಿಳಿಯುತ್ತೇನೆ. ಪರರ ಬಗ್ಗೆ ಅವರಿವರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಫಿಲ್ಮ್ ಆಕ್ಟರ್ಸ್, ಸೀರಿಯಲ್ ಆಕ್ಟರ್ಸ್, ಕ್ರಿಕೆಟರ್ಸ್, ಡಾನ್ಸರ್ಸ್ ಇಂಥವರ ಖಾಸಗಿ ಜೀವನದ ಬಗ್ಗೆ ಮಾತನಾಡಿ ಅವರನ್ನು ಡಿ ಗ್ರೇಡ್ ಮಾಡುವ ಸ್ವಭಾವ ನನಗಿಲ್ಲ. ಏಕೆಂದರೆ ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳು. ಯಾರು ಯಾವ ಕಾಲದಲ್ಲಿ ಯಾರೊಡನೆ ಬದುಕುತ್ತಾರೆ, ಎಲ್ಲಿ ಬದುಕುತ್ತಾರೆ, ಎಲ್ಲಿ ಸಾಯುತ್ತಾರೆ ಅಂತ ಡಿಸೈಡ್ ಮಾಡಿರುವುದು ವಿಧಿ. ನಾನಲ್ಲ ನೀವಲ್ಲ. ಪ್ರತಿ ಒಬ್ಬರ ಮನೆಯ ದೋಸೆಯು ತೂತಿರುವಾಗ ಇನ್ನು ಯಾರ ಮನೆಯ ದೋಸೆಯ ಬಗ್ಗೆ ಮಾತನಾಡಲು ಇನ್ನೇನು ಹೊಸತು ಉಳಿದಿದೆ ಅಲ್ಲವೇ?
   ಮಾನವತೆ ಇದೆ ನನ್ನಲ್ಲಿ. ಕಷ್ಟಕ್ಕೆ ಕರಗುತ್ತೇನೆ, ಇಲ್ಲದೆ ಇದ್ದರೂ ಸಹಾಯ ಮಾಡಲು ಹೋಗಿ ನಾನೇ ಸಿಕ್ಕಿ ಬೀಳುತ್ತೇನೆ. ಮತ್ತೆ ಆ ಬಲೆಯಲ್ಲಿ ಒದ್ದಾಡಿ ನೋವು ತಂದುಕೊಳ್ಳುತ್ತೇನೆ. ಪರರನ್ನು ಪಾಪ ಎಂದು ಸಹಾಯ ದೃಷ್ಟಿಯಿಂದ ನೋಡಿ, ಸಹಾಯ ಮಾಡಲು ಹೋದಾಗ ಅವರೇ ನನ್ನ ಗುಂಡಿಗೆ ನೂಕಿ ಹೋಗುತ್ತಾರೆ. ಕಷ್ಟ ಪಟ್ಟು ಎದ್ದು ಬರುತ್ತೇನೆ. ಸಡನ್ ಕೋಪದ ಕೈಗೆ ಬುದ್ಧಿ ಕೊಡುವ ಗುಣ ನನ್ನದು ಅಲ್ಲ. ಯೋಚಿದುವೆ.
  ಸ್ವಲ್ಪ ಉಡಾಫೆ ಸ್ವಭಾವ. ಮಾಡಬೇಕಾದ ಕೆಲಸವನ್ನು ಲಾಸ್ಟ್ ಡೇಟ್ ವರೆಗೆ ಪೆಂಡಿಂಗ್ ಇಟ್ಟು ಕೊನೆ ಕ್ಷಣದಲ್ಲಿ ಮಾಡಲು ಹೋಗಿ ಎಡವಟ್ ಮಾಡಿಕೊಳ್ಳೋದು ನನ್ನ ಕೆಲಸ. ಅದು ಪರೀಕ್ಷೆಯೇ ಇರಲಿ, ಜೀವನ ಪರೀಕ್ಷೆಯೇ ಇರಲಿ, ಬೇರೆ ಕೆಲಸವೇ ಇರಲಿ. 
ಮತ್ತೆ ಬೇರೆಯವರು ನನ್ನ ಬಗ್ಗೆ ಕೆಟ್ಟದಾಗಿ ಕೆಟ್ಟ ಯೋಚನೆ ಮಾಡುತ್ತಾರೆ ಅಂತ ನಾನು ಅಂದುಕೊಳ್ಳುವುದಿಲ್ಲ. ಕಾರಣ ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಆಲೋಚಿಸುವುದಿಲ್ಲ ಮತ್ತು ನನ್ನ ಬಗ್ಗೆ ಕೆಟ್ಟದಾಗಿ ಆಲೋಚಿಸಲು ಏನೂ ಇಲ್ಲ, ನಾನು ಸೊಳ್ಳೆ,ಇರುವೆ,  ಜಿರಳೆ, ಜೇಡದ ಹೊರತು ಯಾವ  ಪ್ರಾಣಿ, ಪಕ್ಷಿ, ಕೀಟವನ್ನು ಕೂಡಾ ಸಾಯಿಸಿಲ್ಲ. ಮನುಷ್ಯರಿಗೆ ಅನ್ಯಾಯ ಮಾಡಲಿಲ್ಲ, ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಮೋಸ ಮಾಡಲಿಲ್ಲ, ಪಾರ್ಶಿಯಾಲಿಟಿ ಅಂತೂ ಮಾಡಲೇ ಇಲ್ಲ. ಎಲ್ಲಾ ಮಕ್ಕಳಿಗೂ ತಿದ್ದಿ ಬುದ್ಧಿ ಹೇಳುತ್ತೇನೆ, ಕೇಳದೆ ಹಠ ಮಾಡಿದವನಿಗೆ ಸ್ವಲ್ಪ ಖಾರವಾಗಿಯೇ ಹೇಳುತ್ತೇನೆ. ಅದು ಅವನ ಒಳ್ಳೆಯದಕ್ಕೆ. ಎಲ್ಲರಿಗೂ ತುಂಬಾ ಪ್ರೀತಿ ಕೊಡುತ್ತೇನೆ ನನ್ನಲ್ಲಿ ಸಾಧ್ಯ ಆದಷ್ಟು. ನೋವು ಕೊಟ್ಟವರಿಗೂ ಕೆಟ್ಟದು ಬಯಸುವುದಿಲ್ಲ. ಬದಲಾಗಿ ದೇವರೇ ಅವರನ್ನು ನನ್ನ ಬದುಕಿನಿಂದ ದೂರ ಇರಿಸು ಎಂದು ಬೇಡುತ್ತೇನೆ.
  ದೇವರಲ್ಲಿ ನಾನು ಮನಸ್ಸಿಗೆ ಹಾಗೂ ದೇಹಕ್ಕೆ ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯ ಇಷ್ಟನ್ನು ಬಿಟ್ಟು ಮತ್ತೆ ಕೇಳುವುದು ಸರ್ವೇ ಜನಾಃ ಸುಖಿನೋ ಭವಂತು ಇಷ್ಟೇ. ಎಲ್ಲರೂ ಚೆನ್ನಾಗಿರಲಿ, ಎಲ್ಲರನ್ನೂ ಚೆನ್ನಾಗಿ ಇಡಿ ಎಂದು. ಮಾನವನ ಕ್ರೂರತೆ ತೊಲಗಲಿ ಎಂದು ಬೇಡುತ್ತೇನೆ. ರಾಕ್ಷಸ ಪ್ರವೃತ್ತಿ ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಸಣ್ಣ ಮಕ್ಕಳ ಮೇಲೂ ಅತ್ಯಾಚಾರ ಇವುಗಳೆಲ್ಲ ಮನ ನೋಯಿಸುವ ಕಾರ್ಯಗಳು ಅಲ್ಲವೇ? ವಿಷ ಉಣಿಸಿ ಮಾನವ ಹಾಗೂ ಪ್ರಾಣಿ ಪಕ್ಷಿ ಮೀನುಗಳನ್ನು ಸಾಯಿಸುವುದು, ತಲ್ವಾರ್, ಚಾಕು ಚೂರಿ ಹಾಕಿ ಸಾಯಿಸುವುದು ಇವೆಲ್ಲ ಕರುಳು ಹಿಂಡುವ ನೋವುಗಳು. 
  ಎಲ್ಲಾ ಧರ್ಮಗಳ ತಿರುಳು ಒಂದೇ ಆಗಿದ್ದರೂ ಪರ ಧರ್ಮದವರನ್ನು ಹೀಗಳೆಯುವುದು ನನಗೆ ಆಗದ ವಿಷಯ. ಬೈಬಲ್, ಕುರಾನ್, ಗೀತೆ ಓದಿರುವ ನನಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್ ಎಲ್ಲರ ಜೊತೆಗೂ ಗೆಳೆತನವೂ ಇದೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಜನರನ್ನು ಕೂಲಂಕುಷವಾಗಿ ಬರಹಗಾರ್ತಿಯ ಕಣ್ಣಲ್ಲಿ ನೋಡಿದಾಗ ನನ್ನ ಅರಿವಿಗೆ ಬಂದದ್ದು ಎಲ್ಲಾ ಜಾತಿ ಧರ್ಮಗಳಲ್ಲಿ ಜನರು ಒಳ್ಳೆಯವರೂ ಇದ್ದಾರೆ, ಕೆಟ್ಟವರು ಕೂಡಾ ಇದ್ದಾರೆ. ಒಳ್ಳೆಯ ಜನರನ್ನು ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕೆ ಉದಾಹರಣೆ ಪುನೀತ್ ರಾಜಕುಮಾರ್, ಡಾ. ಎ.ಪೀ.ಜೆ. ಅಬ್ದುಲ್ ಕಲಾಂ, ಮದರ್ ತೆರೆಸಾ, ರಾಜ್ ಕುಮಾರ್, ಕಲ್ಪನಾ ಚಾವ್ಲಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ , ಸಾಲುಮರದ ತಿಮ್ಮಕ್ಕ, ಅಬ್ರಹಾಂ ಲಿಂಕನ್. ಜನರ ಎದೆಯಲ್ಲಿ ಇನ್ನೂ ಒಳ್ಳೆಯತನಕ್ಕೆ ಪ್ರೀತಿ, ಜಾಗ ಇದ್ದೇ ಇದೆ ಅಲ್ಲವೇ?
       ಮನುಷ್ಯರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕೆಟ್ಟವರೆ..ಕಾರಣ ಇತರರು ಬಯಸದ ಯಾವುದಾದರೂ ಕೆಟ್ಟ ಗುಣ ನಮ್ಮೊಳಗೆ ಇರಬಹುದು.  ಅಥವಾ ನನಗೆ ಇಷ್ಟ ಆದ ನನ್ನ ಗುಣ ಇತರರಿಗೆ ಇಷ್ಟ ಆಗದೆ ಇರಬಹುದು. ಎಲ್ಲರೂ ಐಶ್ವರ್ಯ ರೈ ಅವರ ಸೌಂದರ್ಯವನ್ನು ಹೊಗಳಿದರೆ "ಅವಳಿಗಿಂತ ಸುಂದರಿಯರು ಬೇರೆ ಇಲ್ವಾ?" ಎನ್ನುವವರೂ ಇರಬಹುದು. ಅದು ಅವರವರ ಭಾವಕ್ಕೆ ನಿಳುಕಿದ್ದು. ನಮ್ಮ ನಮ್ಮ ಜ್ಞಾನದ ಎತ್ತರಕ್ಕೆ ನಾವು ಮಾತನಾಡಬಲ್ಲೆವು ಅಲ್ಲವೇ! ವಿಜ್ಞಾನಿಗಳಿಗೆ ತಿಳಿದ ಮಾಹಿತಿ ಬಹುಶಃ ಕನ್ನಡ ಪ್ರಾಧ್ಯಾಪಕರಿಗೆ ಗೊತ್ತಿಲ್ಲ. ಕನ್ನಡ ಪಂಡಿತರಿಗೆ ತಿಳಿದ ಭಾಷಾಜ್ಞಾನ ಡಾಕ್ಟರಿಗೆ ಗೊತ್ತಿರಲಿಕ್ಕಿಲ್ಲ, ವ್ಯಕ್ತಿತ್ವ ಬದಲಾವಣೆ ಇದೆ. ಹಾಗಂತ ಯಾರೂ ಮೇಧಾವಿಗಳು ಅಲ್ಲ ಎಂದಲ್ಲ, ಯಾರೂ ದಡ್ಡರು ಕೂಡ ಅಲ್ಲ, ಅವರವರ ಜ್ಞಾನ ಅವರಿಗೆ ಇದೆ. ಯಾವುದೋ ಒಂದು ವಿಷಯ ಎಲ್ಲರಿಗೂ ತಿಳಿದಿರಬೇಕು ಎಂದೇನೂ ಇಲ್ಲ ಅಲ್ವಾ? 
ಇನ್ನು ಬಟ್ಟೆ ಬರೆಗಳ ವಿಷಯಕ್ಕೆ ಬಂದಾಗ ಕೆಲವೊಂದು ಮಾಡೆಲ್ ಗಳು, ಸಿನೆಮಾ ನಟರು, ನಟಿಯರು, ಟಿವಿ ಧಾರಾವಾಹಿ, ಸಿನೆಮಾ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಅವರು ಧರಿಸುವ ಅರ್ಧಂಬರ್ಧ ಮಾನವನ್ನೂ ಮುಚ್ಚಲು ಹಿಂದುಳಿದ ಬಟ್ಟೆಗಳು ನನಗೆ ಇಷ್ಟ ಆಗದು. ನಾನು ಅವುಗಳನ್ನು ಹಾಕುವುದೂ ಇಲ್ಲ, ಇಷ್ಟ ಪಡುವುದು ಕೂಡ ಇಲ್ಲ. ನಾವು ಹಿರಿಯರು ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ಮಾದರಿ ಆಗಿರಬೇಕು, ಹಿರಿಯರೇ ಬಿಕಿನಿಯಲ್ಲಿ ಕುಣಿದರೆ ಕಿರಿಯರು ಬಟ್ಟೆ ಬಿಚ್ಚಿ ಕುಣಿಯುವುದರಲ್ಲಿ ತಪ್ಪಿಲ್ಲ. ಅಲ್ಲಿಗೆ ನಮ್ಮ ಸಂಸ್ಕೃತಿ ನಾಶ ಮಾಡುವುದು ನಾವೇ ಅಲ್ಲವೇ? ಅದಕ್ಕೆ ನನ್ನ ಸಹಮತ ಇಲ್ಲ. 
   ಬದುಕು ನಾಲ್ಕು ದಿನ, ಪಾಪ ಪುಣ್ಯಗಳ ನಂಬುವವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಎಲ್ಲಾ ಧರ್ಮಗಳೂ, ಧರ್ಮ ಗ್ರಂಥಗಳೂ ಇದರ ಬಗ್ಗೆ ಹೇಳಿವೆ. ಸ್ವರ್ಗ, ನರಕದ ಕಲ್ಪನೆ ಜಗತ್ತಿನ ಎಲ್ಲಾ ಮೂಲೆಯಲ್ಲೂ ಇದೆ. ಹಾಗಾಗಿ ಒಳ್ಳೆಯತನಕ್ಕೆ ನನ್ನ ಮತ. 
  ಪರಿಸರ ನನ್ನ ಲವರ್. ತುಂಬಾ ಪ್ರೀತಿಸುವೆ ಹಸಿರನ್ನು. ನನ್ನ ಕಾರ್ಯಗಳಲ್ಲಿ ಇಪ್ಪತ್ತು ವರ್ಷಗಳ ಮೊದಲೇ ಪ್ಲಾಸ್ಟಿಕ್ ಭೂಮಿಗೆ ಬಿಸಾಡಲಾರೆ ಎಂಬ ಪ್ರತಿಜ್ಞೆ ಮಾಡಿ ಅದರಂತೆ ನಡೆಯುತ್ತಿರುವ ವ್ಯಕ್ತಿ ನಾನು. ಯಾವುದೇ ಚಾಕಲೇಟು ಕವರ್, ಬಾಟಲಿಯನ್ನು ಮನೆ ತನಕ ತಂದು ಮತ್ತೆ ಕಸದ ತೊಟ್ಟಿಗೆ ಹಾಕುವ ಪರಿಪಾಠ ಇದೆ. ಅದಕ್ಕೆ ನನ್ನ ಮೇಲೆ ನನಗೆ ಹೆಮ್ಮೆ.
ನೋವಿದೆ, ನಲಿವಿದೆ, ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದ ಖುಷಿ ಇದೆ. ಸಾಧನೆಯ ಗೆಲುವಿದೆ , ಇನ್ನೂ ಸಾಧಿಸ ಬೇಕೆಂಬ ಛಲವಿದೆ, ಸಾಧಿಸಲು ಬಹಳ ಇದೆ ಕಲಿತದ್ದು ಏನೂ ಸಾಲದು ಎಂಬ ತಿಳಿವಿದೆ, ಕೆಲವೊಂದು ವಿಷಯದಲ್ಲಿ ಅಸಹಾಯಕಳಾಗಿ ಬಿಟ್ಟೆ ಎಂಬ ಕಣ್ಣೀರಿದೆ, ಬದುಕು ನಾವು ಅಂದುಕೊಂಡ ಹಾಗೆ ಇಲ್ಲ, ವಿಧಿ ಲಿಖಿತದಂತೆ ಇದೆ ಎಂಬ ಅರಿವಿದೆ, ಕಷ್ಟ ಪಟ್ಟರೆ ಸುಖ ಖಂಡಿತ ಎಂಬ ಜ್ಞಾನವಿದೆ, ಬದುಕಿನ ದಾರಿಯ ಎಡರು ತೊಡರುಗಳ ಬಗ್ಗೆ, ನೋವು ನಲಿವಿನ ಬಗ್ಗೆ ತಿಳಿದಿದೆ. ಪರರಿಗೆ ನೋವು ಕೊಡದೆ ಬದುಕಿದ ಸಮಾಧಾನವೂ ಇದೆ. ಮುಂದೆ ಸಾಗುವಾಗ ಇರುವ ತೊಂದರೆಗಳ ಬಗ್ಗೆ ಭಯವಿದೆ. ಪ್ರತಿ ಹೆಜ್ಜೆಯ ಮೇಲೂ ಗಮನ ಇದೆ. 
   ನನ್ನ ಗುಣವನ್ನು ನಾ ಬಹಳ ಪ್ರೀತಿಸುವೆ, ಸೋಮಾರಿತನ ದ್ವೇಷಿಸುವ ನಾನು ಪರರಿಗೆ ನೋವು ಕೊಡಲಾರೆ. ಸರ್ವರಿಗೂ ನನ್ನಲ್ಲಿ ಪ್ರೀತಿ, ಸ್ನೇಹವಿದೆ. ಮೋಸವಿಲ್ಲ. ಸಹಾಯ ಬಯಸುವವರು ಬಹಳ ಜನ , ಸಹಾಯ ಮಾಡಲಾಗದ ಅಶಕ್ತತೆಗೆ ನೋವಿದೆ. ನನ್ನತನವಿದೆ. ಪರರಿಗೆ ಸಹಾಯ ಮಾಡಿದ ಹೆಮ್ಮೆ ಇದೆ. ಬೇಡದ್ದನ್ನು ತಿರಸ್ಕರಿಸಿದ ತೃಪ್ತಿ ಇದೆ. ಒಂಥರಾ ಡೇರಿಂಗ್ ಇದೆ, ಅಳುಕುತನವೂ ಇದೆ. ಒಟ್ಟಿನಲ್ಲಿ ಮಾನವತೆ ಇರುವ ಮಾನವ ಗುಣವಿದೆ. 
ಎಲ್ಲವೂ ಸರಿ, ಎಲ್ಲವೂ ಸತ್ಯ, ಹೀಗಿದ್ದರೆ ಮನುಷ್ಯ ದೇವರಾಗಿ ಬಿಡುತ್ತಾನೆ. ಮನುಷ್ಯ ಹಾಗಿದ್ದರೆ ದೇವರಿಗೆ ರೆಸ್ಪೆಕ್ಟ್, ಮೌಲ್ಯ, ಬೆಲೆ ಇಲ್ಲ. ಆದ ಕಾರಣ ದೇವರು ಮನುಷ್ಯನನ್ನು ದೇವರಾಗಲು ಬಿಡಲಾರ ಅಲ್ಲವೇ? ತನ್ನ ಸೀಟು ಹೋದರೆ? ಭೂ ಲೋಕದಲ್ಲಿ ಎಲ್ಲಾ ಕುರ್ಚಿಗಾಗಿಯೇ ಕಾದಾಟ, ಜಗಳ, ಓಟು, ಮೃತ್ಯು ಎಲ್ಲಾ ನಡೆಯುತ್ತದೆ. ಹೆಸರು, ಖ್ಯಾತಿಗೆ ಜನ ಬೇಗ ಬಲಿಯಾಗುತ್ತಾರೆ. 
ಎಲ್ಲರ ಬದುಕಿನ ತಿರುಳು ಇಷ್ಟೇ. ಬರುವಾಗ ತರಲಿಲ್ಲ, ಹೋಗುವಾಗ ಕೊಂಡು ಹೋಗುವುದಿಲ್ಲ, ಬರಿಗೈಲಿ ಬಂದು ಹಾಗೆಯೇ ಹೋಗುವ ಬದುಕಿನಲ್ಲಿ ಆಸೆ, ಆಮಿಷ, ಅಧಿಕಾರ, ಮದ, ಮಾತ್ಸರ್ಯ, ಹೊಟ್ಟೆಕಿಚ್ಚು, ನಂಜು. 
ಹತ್ತಿರವಿದ್ದರೂ  ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ..
ಸದಾ ನಾ ನೇನೆಸುವ ಕವಿ ಸಾಲುಗಳು. ನೀವೇನಂತೀರಿ?
@ಹನಿಬಿಂದು@
16.11.2023

ಸಮರ್ಪಣೆ

ಶೋಷಣೆ

ಘೋಷಣೆ ಕೂಗಲು ಎಲ್ಲರೂ ಮುಂದು
ಶೋಷಣೆ ಮಾತ್ರ ಮಹಿಳೆಗೆ ಸಿಂಧು
ಸಮರ್ಪಣೆ ಜಗದಲಿ ಅವಳಲಿ ಮಾತ್ರವೇ
ಆಕರ್ಷಣೆ ಇದ್ದರೂ ಒಮ್ಮೆಗೆ ಮರೆವರು

ಘರ್ಷಣೆ ನಿತ್ಯವೂ ಬದುಕಿನ ಪಥದಲಿ 
ಪೋಷಣೆ ಮಾಡಲು ಸರ್ವರ ಮನೆಯಲಿ
ಬವಣೆಯು ಬಾಳಲಿ ಹೆಣ್ಣಿನ ಬದುಕಲಿ
ವಿವರಣೆ ಹೇಗೆ ಶೀಲಕೆ ಬೇಡಲಿ

ಮಣೆಯನು ಹಾಕದು ಸರಕಾರ ಇಲ್ಲಿ
ಕೆನೆಯನ್ನು ಬೇಡುವ ಕೃಷ್ಣನ ತೆರದಲಿ
ಜಾಗರಣೆ ಬದುಕಲಿ ಆಗದು ಎಂದೂ
ತ್ಯಾಗವೇ ಸ್ತ್ರೀಯ ಕ್ಷಣದಲಿ ಮುಂದೂ

ಪ್ರೀತಿಯ ಮಾತನು ಕೇಳಲು ಬೇಕು
ಹಾಸಿಗೆಯಡಿಯಲಿ ಬೀಳಲು ಬೇಕು
ಅಮ್ಮ ಅಕ್ಕ ಮಡದಿಯೂ ಬೇಕು
ಹೆಣ್ಣು ಮಗು ಮಾತ್ರ ಸಾಯಲು ಬೇಕು..
@ಹನಿಬಿಂದು@

ಶಿಶು ಗೀತೆ

ಜೋಕ್ಲೆನ ಬರವು (ಶಿಶು ಗೀತೆ)

ಕುಪುಲೋ ಕುಪುಲೊ 
ಓಡೆ ಪೋಪ ಕುಪುಲೋ 
ಮಲ್ಲಕ್ಲೆಗ್ ಬಾರ್ ಗುದ್ದೆರೆ ಪೋಪೆ 
ಬಾರ್ ಡ್ ಏರ್ ಉಲ್ಲೆರ್ 
ಬಾರ್ ಡ್ ಪುರಿಕುಲು ಉಲ್ಲೆರ್ 
ಪುರಿಕುಲು ದಾದ ಕೊರ್ಪೆರ್ 
ಪುರಿಕುಲು ತಿನಿಯೆರೆ ತಿಕ್ವೆರ್ 
ಪುರಿ ತಿಂದ್ ದ್ ದಾದ ಮಲ್ಪುವ
ಬಿನ್ನೆರೆಗ್ ದೋಸೆ ಮೈಪುವೆ
@ಹನಿಬಿಂದು@
07.07.2024

ಮೋಕೆ

ಟoಕಾ 

ಎನ್ನ ಮರ್ಮಲ್
ಬಾರೀ ಪೊರ್ಲುದ ಪೊಣ್ಣು 
ರಡ್ಡ್ ನುಪ್ಪಾಡ್ 
ಪಂಡೆಡ ಪಾಡ್ವಲಾಲ್
ಅರ್ಧ ಸೇರ್ದ ನುಪ್ಪುನು 
@ಹನಿಬಿಂದು@
19.09.2024

ಗಝಲ್

ಗಝಲ್ 

ಭಾರತದ ಸ್ವಾತಂತ್ರ್ಯಕ್ಕೆ ಕೀ ಕೊಟ್ಟವರು ನಮ್ಮ ಮಹಾತ್ಮ
ಭಾರತೀಯರ ಮುಕ್ತ ಬದುಕಿಗೆ ದೀಪ ಬೆಳಗಿದವರು ನಮ್ಮ ಮಹಾತ್ಮ

ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು
ದೇಶದುದ್ದಕ್ಕೂ ದೇಶದಾಚೆಗೂ ಖ್ಯಾತಿ ಪಡೆದವರು ನಮ್ಮ ಮಹಾತ್ಮ

ಸತ್ಯದೊಂದಿಗಿನ ತನ್ನ ಪರಿಕಲ್ಪನೆಗಳ ಬರೆದವರು
ಶಾಂತಿ ಮಂತ್ರಗಳ ಪ್ರಪಂಚಕ್ಕೆ ಸಾರಿದವರು ನಮ್ಮ ಮಹಾತ್ಮ

ದೇಶದ ಜನತೆಯನ್ನು ದೇಶ ಸುತ್ತಿ ಸುತ್ತಿ ಒಗ್ಗೂಡಿಸಿದವರು
ಪರಂಗಿಗಳನ್ನು ಯುದ್ಧ ಇಲ್ಲದೆಯೆ ಓಡಿಸಿ ಬಿಟ್ಟವರು ನಮ್ಮ ಮಹಾತ್ಮ

ಆಟೋಟಗಳಿಂದ ಹೊರತಾದವರು,   ತನ್ನದೇ ಕೆಟ್ಟ ಅಕ್ಷರಗಳನ್ನು ದೂಷಿಸಿದವರು 
ಆಟೋಟಗಳ ಜೊತೆ ಮೂಲ ಶಿಕ್ಷಣಕ್ಕೆ ಒತ್ತು ಕೊಟ್ಟವರು ನಮ್ಮ ಮಹಾತ್ಮ 

ದೇಶದಲ್ಲಿ ಸ್ನೇಹ ಪ್ರೇಮ ಒಗ್ಗಟ್ಟಿನ ಸೂತ್ರ ಬಿತ್ತಿದವರು 
ದ್ವೇಷ, ಮದ ಮತ್ಸರ ಅಳಿಸಿ ಎಲ್ಲರೂ ಒಂದೆಂದವರು ನಮ್ಮ ಮಹಾತ್ಮ.
@ಹನಿಬಿಂದು@
30.09.2024

ಚಿಟ್ಕಾ

ಚಿಟ್ಕಾ 

ಮೊಬೈಲ್ ಪನ್ಪಿನ ಉಂದು ದಾದನ 
ಎಂಚಿನ ಮಾಯೆ ಎರೆನ ಬೇಲೆನ
ತೂಯಿನಾತ್ ಮುಗಿಯoದ್ ಮಲ್ತಿನಾತ್ ಕಮ್ಮಿಯೆನ
ನೂಕು ತೂದುಮಾತೆರ್ನಲ ಕಣ್ ಬೇನೆನ 
@ಹನಿಬಿಂದು@
08.10.2024

ಸೋಮವಾರ, ಅಕ್ಟೋಬರ್ 7, 2024

ತುಳು

ಐನೆಸಲ್ 

ಮಾಮಿ ಮರ್ಮಲೆಗ್ ಮಲ್ಲ ಲಡಾಯಿ
ಮರ್ಮಲ್ ಕೊಚ್ಚೊಂದು ಇತ್ತಲ್ ಬಡಾಯಿ
ಮಗಕ್ ಬಾರಿ ಬೇಜಾರ್ ಪಾತೆರ್ನು ಏರ್ನoಚಿ
ಬಾಲೆಗ್ಲಾ ಬೇಜಾರ್ ನಡುಟು ಪೋಂಡ ಬೂರು ಮುಂಚಿ
ಮಾಮಣ್ಣೆ ಮಾತ್ರ ಆರಾಮಡ್ ಇತ್ತೆರ್ ಗುದ್ದೊಂದು ಬಜ್ಜೆಯಿ
@ಹನಿಬಿಂದು@
07.10.2024

ಭಾನುವಾರ, ಅಕ್ಟೋಬರ್ 6, 2024

ಚಂಗುಡಿ

ಚುoಗುಡಿ 

ಅರೆಗ್ ಬೋಡುಗೆ ಪೊಸ ಕಾರ್
ಬೈಕ್‌ಡ್ ಎಕ್ಕುಜಿಗೆ ನೆಲಕ್ ಕಾರ್
@ಹನಿಬಿಂದು@
06.10.2024

ಚುoಗುಡಿ

ಚುoಗುಡಿ 


ಮಾಮಿನ ಮೇಕಪ್‌ದ ಏಸ ತೂದು ಮರ್ಮಲ್ ತೆಲಿತಲ್ ಉಲಯಿ ಉಲಯಿ!
ಮರ್ಮಲ್‌ನನೇ ಲಿಪ್ ಸ್ಟಿಕ್ ಕಂಡ್‌ದ್ ಪಾಡ್ ದಿತ್ತೆರ್ ಮಾಮಿ ಮೆಲ್ಲ  ಉಲಯಿ!!
@ಹನಿಬಿಂದು@
06.10.2024

ಶನಿವಾರ, ಅಕ್ಟೋಬರ್ 5, 2024

ಹಾಯ್ಕು

ಹಾಯ್ಕು
ಎಲ್ಯ ಜೋಕ್ಲೆನ್ 
ಸರಿ ತಾದಿಡ್ ಲೆತೋ 
ಪೊಪಿನ ಎಡ್ಡೆ
@ಹನಿಬಿಂದು@
05.10.2024

ಟoಕಾ

ಹಾಯ್ಕು

ಬಾಲೆ ಎಲ್ಯಾಲ್ !
ನನ ಎಡ್ಡೆ ಕಲ್ಪೊಡು 
 ಪನ್ನ ಕೇನಂದೆ
ತಪ್ಪು ಪೂರಾ ತಿದ್ದಂದೆ
ಪೋಂಡ ಸರ್ಯಾವೇ ಬದ್ಕ್?
@ ಹನಿಬಿಂದು@
05.10.2024

ಶುಕ್ರವಾರ, ಅಕ್ಟೋಬರ್ 4, 2024

ಮದುವೆ

ಮದುವೆ

ಆ.  ಹುಡುಗಿಗೆ ಮದುವೆಯೇ ಆಗಲಿಲ್ಲ ಕಾರಣ ಬಡತನ. ಬಡತನವನ್ನೇ ಮೈ ಹೊದ್ದುಕೊಂಡು ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ಶಾಲೆಗೆ ಸೇರಿ ಓದಿದ ಹುಡುಗಿ ಬಡತನದಲ್ಲೇ ಜೀವನ ಕಳೆಯುವ ಸ್ಥಿತಿ ಇತ್ತು.
  ಆದರೆ ಆಕೆ ಓದಿನಲ್ಲಿ ಸಿರಿವಂತಲಾಗಿದ್ದಳು. ಹೆಸರು ಕಲಾವತಿ. ಹೆಸರಿನ ಹಾಗೆ ಹಲವು ಕಲೆಗಳ ಒಡತಿ. ಹಾಡು, ನಾಟಕ, ಭಾಷಣ, ಕಲಿಕೆ ಎಲ್ಲದರಲ್ಲೂ ಆಕೆ ಮುಂದು. ಪೋಷಕರಿಗೆ ಅವಳ ಮೇಲೆ ಬಹಳ ಧೈರ್ಯ. ನಮ್ಮನ್ನು ಸಾಕುವಳು ಎಂಬ ನಂಬಿಕೆ. ಅವಳಿಗೊಬ್ಬ ಅಣ್ಣನಿದ್ದ. ಕಲಾ ರಾಮ್. ಆದರೆ ಕಲಾರಾಮ್ ಓದುವುದರಲ್ಲಿ ಅಷ್ಟಕ್ಕಷ್ಟೇ. ಮನೆಯ ಕಷ್ಟಕ್ಕೆ ಹೊರ ಹೋಗಿ ದಿನ ಕಳೆಯ ತೊಡಗಿದ. ಬೇಡದ ಅವನ ಹಾಗೆಯೇ ಇರುವ ಕೊಳಕು ಸ್ನೇಹಿತರು ಸಿಕ್ಕಿದರು. ಅವರ ಜೊತೆ ಜೂಜು, ಕುಡಿತ, ಹೊಗೆಸೊಪ್ಪು ಸೇವನೆ, ಧೂಮಪಾನ ಎಲ್ಲವನ್ನೂ ಕಲಿತ. ಇದರಿಂದ ಮನೆ ತೊರೆದ. ಅದೆಲ್ಲೋ ಬಾರಿನಲ್ಲಿ ಕೆಲಸಕ್ಕೆ ಸೇರಿದ. ಅದೊಂದು ಕಾಲದಲ್ಲಿ ತಾನು ಮಾಡಿದ್ದೆಲ್ಲ ಕೆಟ್ಟದು ಎಂಬ ಬುದ್ಧಿ ಬಂದು ಸರಿ ಆಗಲು ಹೊರಟ. ಆಗ ಕಾಲ ಮಿಂಚಿ ಹೋಗಿತ್ತು. ಅದು ಯಾರೋ ಒಬ್ಬಳು ತಮಿಳು ಹುಡುಗಿಯನ್ನು ಮದುವೆ ಆದ. ಅವಳಿಗೆ ಮೊದಲೇ ಒಂದು ಮದುವೆ ಆಗಿತ್ತು. ಅವಳು ಇವನನ್ನು ಕ್ಯಾರೆ ಮಾಡದೆ ಕೆಲಸಕ್ಕೆ ಹೋಗಿ ಸಂಪಾದಿಸಿ ಚೆನ್ನಾಗಿ ಬದುಕುತ್ತಿದ್ದಳು. ಗಂಡ ಎಂಬ ಹೆಸರಿಗಾಗಿ ನೋಡಲು ಚೆನ್ನಾಗಿದ್ದ ಇವನನ್ನು ಕಟ್ಟಿಕೊಂಡಿದ್ದಳು ಅಷ್ಟೇ.
   ಇತ್ತ ಕಲಾವತಿ ಚೆನ್ನಾಗಿ ಓದಿ ಬಿ ಎಸ್ಸಿ ನರ್ಸಿಂಗ್ ಮಾಡಿ ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದಳು. ಒಳ್ಳೆಯ ಸಂಬಳ ಸಿಗುತ್ತಿತ್ತು. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡಳು. ಆದರೆ ಎದುರು ನಿಂತು ಅವಳ ಮದುವೆ ಮಾಡಿ ಕೊಡುವವರು ಯಾರೂ ಇರಲಿಲ್ಲ. ತಂದೆ ರೋಗಿಯಾಗಿದ್ದರು. ತಾಯಿ ಏನೂ ತಿಳಿಯದವರಾಗಿದ್ದರು. ಬಡತನ ಬಂಧುಗಳನ್ನು ದೂರಕ್ಕೆ ಅಟ್ಟಿ ಬಿಟ್ಟಿತ್ತು.
     ಮನೆಯ ಪರಿಸ್ಥಿತಿ, ಪೋಷಕರ ಬಗ್ಗೆ ತಿಳಿದಿದ್ದ ಕಲಾವತಿ ಮದುವೆಯ ಬಗ್ಗೆ ಯೋಚನೆ ಮಾಡಲಿಲ್ಲ. ಪೋಷಕರಿಗೂ ಅದೇ ಬೇಕಿತ್ತು. ಮದುವೆಯಾಗಲು ಭಯಂಕರ ವರದಕ್ಷಿಣೆ ಕೂಡಾ ಅಡ್ಡಿ ಬಂದಿತ್ತು. ಹುಡುಗನ ಕಡೆಯವರು ಹುಡುಗಿ ನೋಡುವ ಮೊದಲೇ ಲಕ್ಷಗಟ್ಟಲೆ ರೇಟ್ ಫಿಕ್ಸ್ ಮಾಡಿ ಕೇಳುತ್ತಿದ್ದರು. ಹಾಗಾಗಿ ಅವಳು ಆಹ್ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ. ಬಂಧುಗಳು ಎರಡನೇ ಸಂಬಂಧದ ವರ ಹುಡುಕಲು ಆರಂಭಿಸಿದಾಗ ಕೋಪ ಅವಳಿಗೆ ನೆತ್ತಿಗೇರಿತು. ಆದರೂ ಅವಳು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಳು.ಗೆಳೆಯರೆಲ್ಲ ಸೇರಿ  ಪಕ್ಕದ ಊರಿನ ನವೀನ ಎಂಬ ಹುಡುಗನನ್ನು ಹೇಳಿ ಅವನು ಅವಳನ್ನು ಚೆನ್ನಾಗಿ ನೋಡಿಕೊಳ್ಳುವೆ ಎಂದು ಹೇಳಿ ಕಡಿಮೆ ವರದಕ್ಷಿಣೆ ಕೇಳಿ ಇವಳ ಹಣದಲ್ಲೇ ಮದುವೆಯಾದ.
        ಮದುವೆಯ ಬಳಿಕ ನವೀನ  ದುಡಿಯದಾದ. ಕಾರಣ ಸೋಮಾರಿತನ. ಮಡದಿ ದುಡಿಯುವಳು ಎಂಬ ತಾತ್ಸಾರ. ಮನೆಯಲ್ಲೇ ಕುಳಿತು ಗೆಳೆಯರ ಕರೆದು ಅವರೊಂದಿಗೆ ಲಲ್ಲೆ ಹೊಡೆಯುವುದು ಅಭ್ಯಾಸವಾಯಿತು. ಊರಿನಲ್ಲೇ ಇದ್ದುದರಿಂದ ಹಲವಾರು ಬಾಲ್ಯ ಸ್ನೇಹಿತರಿದ್ದರು. ಕಲಾವತಿ ತನ್ನ ತಂದೆ ತಾಯಿಗಳನ್ನು ನೋಡಿಕೊಳ್ಳುವ ಒಪ್ಪಿಗೆ ಮೊದಲೇ ಪಡೆದಿದ್ದ ಕಾರಣ ಅವರ ಮನೆಯಲ್ಲೇ ಉಳಿದಳು. ನವೀನನಿಗೆ  ಪರರ ಜೊತೆ ಸೇರಿ ಸಮಾಜ ಸೇವೆ ಮಾಡುವುದು ಹವ್ಯಾಸ ಆಗಿ ಬಿಟ್ಟಿತು. ಹಾಗಾಗಿ ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಆದ. ಹೊರಗೆ ಹಾರ, ತುರಾಯಿ ಹಾಕಿ ಜನ ಸನ್ಮಾನಿಸುತ್ತಿದ್ದರು. ಅದರಿಂದ ಅವನ ಮದ ಇನ್ನಷ್ಟು ಹೆಚ್ಚಾಯಿತು. ತಾನು ಗಣ್ಯ ವ್ಯಕ್ತಿ ಅಂದುಕೊಂಡ.
ಕಲಾವತಿಯ ತಂದೆ ತಾಯಿ ಹಾಸಿಗೆ ಹಿಡಿದರು. ಅವರನ್ನು ನೋಡಿಕೊಳ್ಳಲು ನವೀನ ಹೋಗಲಿಲ್ಲ. ತಂದೆ ತಾಯಿ ಮಗಳ ಬದುಕು ನೋಡಿ ಮರುಗಿದರು. ಎಷ್ಟು ದುಡಿದರೂ ಪೋಷಕರ ಔಷಧಿಗೆ ಸರಿ ಹೋಗುತ್ತಿತ್ತು. ಬಡತನದಲ್ಲೇ ಹುಟ್ಟಿ ಬಡತನದಲ್ಲೇ ಬೆಳೆದು, ಮದುವೆ ಎಂಬುದೂ ಬಡತನದಲ್ಲೇ ಅಂತ್ಯಗೊಂಡು, ಬಡತನವೇ ಮೈವೆತ್ತು ತಂದೆ ತಾಯಿ ಸತ್ತ ಬಳಿಕ ತನಗೆ  ಯಾರೂ ಇಲ್ಲ ಎಂದು ತಾನೂ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳು.
@ಹನಿಬಿಂದು@
05.10.2024


ಗುರುವಾರ, ಅಕ್ಟೋಬರ್ 3, 2024

ಟoಕಾ

ಟoಕಾ

ಗಂಗಸರದ
ಅಮಲ್ ಜಪ್ಪು ಅಣ್ಣ
ಬೊಡೆದಿ ಜೋಕ್ಲು 
ಬಂಜಿಗ್ ದಾಂತೆ  ತಾದಿಡ್ 
 ಬೂರ್ದು  ನುಪ್ಪು ನಟ್ನಗ 
@ಹನಿಬಿಂದು@
03.10.2024

ಬುಧವಾರ, ಅಕ್ಟೋಬರ್ 2, 2024

ಹಳ್ಳಿ ಹುಡುಗಿ

ಹಳ್ಳಿ ಹುಡುಗಿ

ಒಂದು ಕಾಲದಲಿ ಮುಗ್ಧತೆ ಹೊತ್ತ
ಹೆಣ್ಣದು ಅಲ್ಲವೇ ಹೇಳಿ
ಟೀವಿ ಮೊಬೈಲ್ ಏನೂ ಇಲ್ಲದ
ಕಣ್ಣದು ಆರೋಗ್ಯ ಕೇಳಿ..

ತಾನು ತನ್ನದು ತನಗೆ ಎನ್ನದೆ
ಸರ್ವ ಜನರ ಜೊತೆ ಬದುಕಿರುವ
ಕುಟುಂಬ ಜನರಿಗೆ ಆದ್ಯತೆ ಕೊಟ್ಟು
ಊಟ ತಿಂಡಿಯ ತಯಾರಿಸುವ

ದಾವಣಿ ಲಂಗ ಮೊಗ್ಗಿನ ಜಡೆಯ 
ಸುರ ಸುಂದರಿಗೆ ಸಾಟಿಯೇ
ಇಳಕಲ್ ಸೀರೆ ಜರತಾರಿ ಕುಪ್ಪಸ
ಹಳ್ಳಿಯ ಹುಡುಗಿ ಘಾಟಿಯೇ! 

ಹಂಚಿ ತಿನ್ನುವ ಮಿಂಚಿನ ಗುಣದ
ಕೊಂಚ ಸಹನೆಯ ಹೆಣ್ಣಿವಳು
ಮಂಚವ ಅರಿಯದ ಹೊಂಚನು ಕಾಣದ
ಕಂಚಿನ ಕಂಠದ ಸಿರಿಯಿವಳು

ಮೋಸವ ನೆನೆಯದ ಪ್ರೀತಿಯ ಹಂಚುವ
ಮುಗ್ಧ ಮನದ ಕನ್ಯೆ
ತೋಷದಿ ಬದುಕುವ ಗೆಳೆಯರ ಕೂಡುವ
ಶುದ್ಧ ಮನಸಿನ ಹೆಣ್ಣೇ
@ಹನಿಬಿಂದು@
03.10.2024

ಸರಿಪಡಿಸೋಣ

ಸರಿಪಡಿಸೋಣ

ಕುಡಿತವು ಮಾರಕ ಚಟ ಎಂದಿದ್ದರೂ
ಕುಡಿತದ ದಾಸರು ನಾವು
ಹೆಣ್ಣಿನ ದೇಹ ಮನಸನು ತಿಳಿಯದೆ
ಆಟವ ಆಡುವ ನೋವು!

ಗಾಂಜಾ ಸಿಗರೇಟು ಅಫೀಮು ಕೆಟ್ಟದು
ಜನರೇ ಕೊಳ್ಳೋದಲ್ವ?
ನಾಯಿ ಬೆಕ್ಕು ನರಿಯೂ ಮುಟ್ಟದು 
ಕೊಳಕು ಮಾನವ ಅನ್ನಿಸೋದಿಲ್ವ!

)ಜನರ ಆಹಾರಕೆ  ವಿಷವನು ಸುರಿದು
ಜನರೇ ಸಾಯೋದು ಏಕೆ?
ತಾಯಿ ತಂದೆ ಬಂಧುಗಳ ಕೊಂದ 
ಆಸ್ತಿಯ ಬದುಕದು ಸಾಕೆ?

ಆರೋಗ್ಯ ಭಾಗ್ಯ ಬೇಕು ಎಂದರೂ
ನಿದ್ದೆ ಆಹಾರ ಸರಿ ಇದೆಯೇ?
ತಿಳಿದ ಹಿರಿಯರು ಬುದ್ಧಿ ಹೇಳಿದರೆ
ಕೇಳುವ ವ್ಯವಧಾನ ಬಂದಿದೆಯೇ?

ಚಿಕ್ಕವ ದೊಡ್ಡವ ಎನ್ನದೆ ಮೊಬೈಲ್
ಗೀಳಿನ ಕಾಟ ಹೋಗಿದೆಯೇ?
ಕಣ್ಣು ಕಿವಿ ನರ ಕೈ ಕಾಲು
ಅಂಗದ ಮಹತ್ವ ತಿಳಿದಿದೆಯೇ?

ರಾತ್ರಿ ಹಗಲು ದುಡಿಯುವ ನಮಗೆ
ಸಂಬಳ ಹಣ ಸಾಕಾಗುವುದೇ?
ದರೋಡೆ ಲೂಟಿ ಲಂಚದ  ಹಣವು
ಒಳ್ಳೆಯ ಕಾರ್ಯಕೆ ಹೋಗುವುದೇ?

ಮರಗಳ ಕಡಿದು ರಸ್ತೆಯ ಮಾಡಿ
ವಿಧ ವಿಧ ರಂಗಿನ ಮನೆ ಕಟ್ಟಿ
ಸ್ವರಗಳ ಸಾಯಿಸಿ ಪರಿಸರ ಕೊಂದು 
ಬದುಕುವ ಅಡಿಪಾಯ ಏನ್ ಗಟ್ಟಿ?
@ಹನಿಬಿಂದು@
01.10.2024

ರುಬಾಯಿ -1

ರುಬಾಯಿ
ನನಲ ಬೈದಿಜೆ ಪೋಯಿನ ಮದಿಮಾಯೆ
ಅಲ್ಪಮುಲ್ಪ ಪೋಪಿನಾಯಗ್‌ ಪೊನ್ನು ದಾಯೆ 
ಬೊಡೆದಿ ಕಾಪುವಲ್ ಪನ್ಪಿನ ನೆoಪಿಜ್ಜ
ಒರಿಯೊರಿ ತಿರ್ಗುನಾಯಗ್ ಮದ್ಮೆದಾಯೆ?
@ಹನಿಬಿಂದು@
02.10.2024

ಮಂಗಳವಾರ, ಅಕ್ಟೋಬರ್ 1, 2024

ಚಿಟ್ಕಾ

ಚಿಟ್ಕಾ

ಆಲ್

ಮಾಮಿನ ಮಗಲೆನ್ ಎಂಕ್ಂದೆ ಎನ್ನಿಯೆ
ಬೆಂದಿನ ಪೂರ ಅಲೆಗೇ ಕೊರಿಯೆ 
ಮೋಕೆನ್ ಪನಿಯರೆ ಕೈತಲ್ ಪೋಯೆ
ನನ ಒರಿ ಆನನ್ ಅಲೆನೊಟ್ಟು ತೂಯೆ
@ಹನಿಬಿಂದು@
01.10.2024

ಸೋಮವಾರ, ಸೆಪ್ಟೆಂಬರ್ 30, 2024

ಐನೆಸಲ್

ಐನೆಸಲ್ 

ಜೋಕ್ಲೆನ ಅಪ್ಪೆಗ್ ಬೋಡುಗೆ ಕೋರಿಲ
ಪುದರವು ಬಾಲೆದ ತಿನ್ಪುಜೆ ದಾದಲ
ಕಟ್ಟುನಿ ಅಮ್ಮನೆ ಬಾಲೆದ ಪುದರ್‌ಡ್ 
ಪನಿಯರೆ ಆವೇ ಮಾತೆರ್ನ ಎದ್‌ರ್‌ಡ್ 
ಬಾಲೆ ಈ ತಿಂದ್‌ದ್  ಶೋಕುಡು ಬಲಪುಲ..
@ಹನಿಬಿಂದು@
30.09.2024

ಭಾನುವಾರ, ಸೆಪ್ಟೆಂಬರ್ 29, 2024

ಗಝಲ್

ಗಝಲ್ 

ಸರ್ವರಿಗೆ ಶಾಂತಿಯ ನಗೆ ಬೀರುವ ಚಿಟ್ಟೆಗಳಾಗೋಣ 
ಜನರಿಗೆ ಸಹಾಯ ಸಹಕಾರ ನೀಡುವ ಸಾಥಿಗಳಾಗೋಣ

ನಿತ್ಯವೂ ಬದುಕು ಬರ್ಭರ ಹಲವಾರು ಜನರಿಗೆ ಇಲ್ಲಿ
ಕೈಗಳ ಹಿಡಿದೆತ್ತಿ ಮುನ್ನಡೆಸುವ ಊರುಗೋಲುಗಳಾಗೋಣ 

ನರಕ ಸದೃಶ ಬಡತನ ಮೆಟ್ಟಿದ ಬಾಳಿನ ಗೋಳು
ವಿದ್ಯೆ ಬುದ್ಧಿ ಕಲಿಸಿ ತಿಳಿ ಹೇಳುವ ಗುರುಗಳಾಗೋಣ

ಕತ್ತಲೆಯ ಕೂಪದೊಳಗೆ ಅವೈಜ್ಞಾನಿಕ ಆಲೋಚನೆಗಳ ಕೂಸುಗಳಿವೆ
ಬೆಳಕ ತೋರಿಸಿ ಬಲಪಡಿಸಿ ಮುನ್ನಡೆಸುವ ಕರಗಳಾಗೋಣ

ನಾನು ನನ್ನದು ನಾನೇ ನನಗೆ ನಾನೊಬ್ಬನೇ ಎನ್ನುವ ಅಹಂಕಾರಿಗಳಿರುವರು
ಆರೋಗ್ಯ ಭಾಗ್ಯ, ಶಿಕ್ಷಣ ಮೇಲೆಂದು ಹನಿ ಹನಿಯಾಗಿ ತಿಳಿಸಿಕೊಡುವ ಹಿತೈಷಿಗಳಾಗೋಣ
@ಹನಿಬಿಂದು@
30.09.2024

ಗಝಲ್

ಗಝಲ್ 

ಭಾರತದ ಸ್ವಾತಂತ್ರ್ಯಕ್ಕೆ ಉದ್ಘಾಟನೆ ಇತ್ತವರು ನಮ್ಮ ಮಹಾತ್ಮ
ಭಾರತೀಯರ ಮುಕ್ತ ಬದುಕಿಗೆ ದೀಪ ಬೆಳಗಿದವರು ನಮ್ಮ ಮಹಾತ್ಮ

ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು
ದೇಶದುದ್ದಕ್ಕೂ ರಾಷ್ಟ್ರದಾಚೆಗೂ ಖ್ಯಾತಿ ಪಡೆದವರು ನಮ್ಮ ಮಹಾತ್ಮ

ಸತ್ಯದೊಂದಿಗಿನ ತನ್ನ ಪರಿಕಲ್ಪನೆಗಳ ಬರೆದವರು
ಶಾಂತಿ ಮಂತ್ರಗಳ ಪ್ರಪಂಚಕ್ಕೆ ಸಾರಿದವರು ನಮ್ಮ ಮಹಾತ್ಮ

ದೇಶದ ಜನತೆಯನ್ನು ದೇಶ ಸುತ್ತಿ ಸುತ್ತಿ ಒಗ್ಗೂಡಿಸಿದವರು
ಪರಂಗಿಗಳನ್ನು ಯುದ್ಧ ಇಲ್ಲದೆಯೆ ಓಡಿಸಿ ಬಿಟ್ಟವರು ನಮ್ಮ ಮಹಾತ್ಮ

ಆಟೋಟಗಳಿಂದ ಹೊರತಾದವರು,   ತನ್ನದೇ ಕೆಟ್ಟ ಅಕ್ಷರಗಳನ್ನು ದೂಷಿಸಿದವರು 
ಆಟದ ಜೊತೆ ಜೊತೆಗೆ ಮೂಲ ಶಿಕ್ಷಣಕ್ಕೆ ಒತ್ತು ಕೊಟ್ಟವರು ನಮ್ಮ ಮಹಾತ್ಮ 

ದೇಶದಲ್ಲಿ ಸ್ನೇಹ ಪ್ರೇಮ ಒಗ್ಗಟ್ಟಿನ ಸೂತ್ರ ಬಿತ್ತಿದವರು 
ದ್ವೇಷ, ಮದ ಮತ್ಸರ ಅಳಿಸಿ ಎಲ್ಲರೂ ಒಂದೆಂದವರು ನಮ್ಮ ಮಹಾತ್ಮ.
@ಹನಿಬಿಂದು@
30.09.2024

ಮೆಲುಕು

ಮೆಲುಕು

ಹಲವಾರು ಬಾರಿ ಬದುಕಿನ ಮೆಟ್ಟಿಲುಗಳನ್ನು ಮೆಲುಕು ಹಾಕಿದಾಗ ನಮಗೆ ಸಿಗುವುದು ಸಿಹಿ ಕಹಿಗಳ ನೆನಪಿನ ಹೂರಣ 

ಬಂದು ಹೋಗುವ ಈ ಸಣ್ಣ ನಾಲ್ಕು ದಿನಗಳ ನಡುವೆ ಹಲವಾರು ಕಷ್ಟ ಸುಖಗಳ ಮುದ್ದಾದ ಒಟ್ಟಾದ ಸಮ್ಮಿಲನದ ಅನುರಣನ 

ಜನಮನಗಳ ಜೊತೆ ತಣಿ ತಣಿಯುತ ಕೋಪ ದ್ವೇಷ ಜಗಳ ಹೊಂದಾಣಿಕೆಗಳೆಂಬ ವಿವಿಧ ಭಾವಗಳ ಸಮ್ಮಿಳಿತ ಸಂಬಂಧಗಳ ಕಣ 

ದೇಶ ಭಾಷೆ ರಾಷ್ಟ್ರ ರಾಜ್ಯ ನಾನು ನನ್ನದು ನೀನು ನಿನ್ನದು ಅವನು ಅವನದು ಆಸ್ತಿ ಅಂತಸ್ತು ದೇಶ ಜಾಗ ಮನೆ ಅರಮನೆ ಋಣ

ಮೆಲುಕು ಹಾಕುವಾಗ ಕೊನೆಗೊಮ್ಮೆ ಅನ್ನಿಸುವುದು ಎಲ್ಲಕ್ಕಿಂತಲೂ ಮುಖ್ಯ ಉತ್ತಮ ಆರೋಗ್ಯ ಶಾಂತಿ ನೆಮ್ಮದಿಯ ಬದುಕು ಮಿಕ್ಕೆಲ್ಲವೂ ಸುಮ್ಮನೆ...
@ಹನಿಬಿಂದು@
22.08.2024

ಚುಂಗುಡಿ

ಚುಂಗುಡಿ 

ಬರಿಯರೆ ಪಂತೆ ಇನಿಯೇ ಇಲ್ಲಗ್ ಅಲೆನ್ 
ಕನೆಯೆರೆ ಪoತೆ ಬನ್ನಗ ಒಂಜಿ ಚೊಂಬು ಅಲೆನ್
@ಹನಿಬಿಂದು@
29.09.2024

ಶುಕ್ರವಾರ, ಸೆಪ್ಟೆಂಬರ್ 27, 2024

ಗಝಲ್

ಗಝಲ್ 

ಮೌನ ಮಾತಾಡಿತು ಮಾತಿಗೆ ಉತ್ತರ ಇರಲಿಲ್ಲ
ಕಣ್ಣು ಗುಯ್‌ಗುಟ್ಟಿತು  ಶಬ್ದಕ್ಕೆ ದನಿ ಇರಲಿಲ್ಲ

ಹೂವು ಹಾವಾಯಿತು ಬೇಲಿ ಹೊಲ ಮೇಯಿತು
ಮನದಲಿ ಕಾಮನೆಗಳ ನಿಶಬ್ದಕ್ಕೆ ಎಣೆ ಇರಲಿಲ್ಲ

ಮಾತು ಮೌನಗಳ ನಡುವೆ ಜೇಡ ಗೂಡು ಕಟ್ಟುತ್ತಿತ್ತು
ನೊಣ ಬಿದ್ದು ಅಂಟಿಕೊoಡರೂ ತಿನ್ನಲು ಜೇಡವೇ ಇರಲಿಲ್ಲ!

ಮೋಹ ಮದ ಮಾತ್ಸರ್ಯಗಳ ಬದುಕಿದು
ಇತರರ ಕಂಡು ಹೊಟ್ಟೆ ಉರಿಯದೆ ಇರಲಿಲ್ಲ

ತೋಟ ಕೆರೆ ಬಾವಿ ಕುಂಟೆ ಎಲ್ಲೆಲ್ಲೂ ನೀರಿದೆ
ಬಿಸಿಯಾಗಿ ಹರಿವ ಪ್ರೇಮದ  ಕಣ್ಣೀರಿಗೆ ಬೆಲೆ ಇರಲಿಲ್ಲ..
@ಹನಿಬಿಂದು@
27.09.2024

ಪನಿ ಕವಿತೆ

ಪನಿಕವಿತೆ ಬೇಲೆ

ತೂವೊಂದೇ ಕುಲ್ಲುದಿತ್ತೆ 
ಅಕ್ಳು ರಡ್ ಜನ ಪಾತೆರುನ..
ಮರತೇ ಪೋಯೆ ದಿಕ್ಕೆಲ್‌ಡ್
ದೀತಿನ ಪೇರ್ ಉರ್ಕುದಿನ!!
ಆತೇ ಅತ್ ಬಾಜನ ಪೂರಾ
ಪೊತ್ತುದು ಕರ್ಂಟ್‌ದ್ ಪೋಯಿನ!!!!
@ಹನಿಬಿಂದು@
27.09.2024

ಗುರುವಾರ, ಸೆಪ್ಟೆಂಬರ್ 26, 2024

ಟoಕಾ

ಟoಕಾ 

ತೆಲಿಕೆ ಬೋಡು 
ಮೋನೆಡ್ ನಿಲಿಕೆಲಾ 
ಉಡಲ್‌ದುಲೈ
ಮನಸ್‌ದ ಕೊಡಿಟ್
ಬದ್‌ಕ್‌ದ ಬಿಲೆಟ್
@ಹನಿಬಿಂದು@
26.09.2024

ಪುರಿ

ಪುರಿ 

ಪುರಿಕ್‌ಲೆ ಶೋಕುದ ರಂಗ್‌ನ್ ತೂಲೆ
ಪ್ರಕೃತಿ ಪೊಸ ಪೊಸ ವಿಸ್ಮಯ  ಸಾಲೆ
ಬೇನೆ ಬೇಜಾರ್ ಮಾತು ಕಲೆಲೆ
ಮಲ್ತೊಂದು ನಮ್ಮ ಪೂರಾ ಬೇಲೆ 

ಕೆಂಪು ಕಪ್ಪು ಪಚ್ಚೆಲ ಉಂಡು
ನೀಲಿ ಬೊಲ್ದು ಕಾಪಿದ ಲೆಕೊoಡು
ನಿಧಾನ ಬತ್ ಏಪನ ಕುಲ್ದುoಡು
ಕೈತಲ್ ಪೋಯರೆ ಪೋಡಿಗೆ ಆಪುಂಡು 

ಸಿರಿ ಸಿಂಗಾರದ ಐಸಿರ ತೂಲೆ 
ಮಂಡೆಡ್ ರಡ್ ಕೊಂಬುದ ಲೀಲೆ
ಮಿತ್ ಪೋಪಿನ ಕತೆನೊರ ಪನ್ಲೆ 
ಇರೆ ಪತ್ ಮೆಲ್ಲ ಪಿದಾಯಿ ಪಾಡ್ಲೇ 
@ಹನಿಬಿಂದು@
26.09.2024

ಬುಧವಾರ, ಸೆಪ್ಟೆಂಬರ್ 25, 2024

ರುಬಾಯಿ

ರುಬಾಯಿ 

ಆ ಪೊoಜೆವೆಗ್ ಏಪಾಲ ವಾ ಅಜಕ್ಕೆ ಮಾರ್ರೆ 
 ಪೂರಾ ಇಲ್ಲದ ಕಾನೂನು ಪಾತೆರಿಯರೆ !
ಬತ್ ಇಲ್ಲಡ್ ಕಾಂಡೆಡ್ದ್ ಬಯ್ಯ ಮುಟ್ಟ ಕುಲ್ದು
ಎನ್ನ ಇಲ್ಲದ ಸುದ್ದಿನ್ ಬರಿತ ಇಲ್ಲಲ್ ಪನಿಯರೆ !!!
@ಹನಿಬಿಂದು@
25.09.2024

ಮಂಗಳವಾರ, ಸೆಪ್ಟೆಂಬರ್ 24, 2024

ಚಿಟ್ಕ

ಚಿಟ್ಕಾ
ನರಮಾನಿ ನರಮಾನಿ ಲೆಕ್ಕಾಪಿನಿ ಏಪ 
ಜನಕ್ಲೆಗ್ ಬುದ್ಧಿ ಸರಿಯಾಪಿನಿ ಏಪ
ಪಸುಪಕ್ಕಿಲು ಮೋಕೆದ ಪಾಠ ಪನ್ಪ 
ನಮ ಜೋಕ್ಲೆಗ್ಲಾ ಮೊಬೈಲ್ ಕೊರ್ಪ 
@ಹನಿಬಿಂದು@
24.09.2024

ಸೋಮವಾರ, ಸೆಪ್ಟೆಂಬರ್ 23, 2024

ಐನೆಸಲ್

ಐನೆಸಲ್ 

ಅಲೆನೇ ತೂಯೆ ತೂವೊಂದೆ ಇತ್ತೆ
ಬೆಲೆನೆ ಇಜ್ಜಿ ಬೇಲೆ ಮರತಿತ್ತೆ
ಬಂಜಿದ ಬಡವು ಬಾಜೆಲ್ ಕಟ್ಟ್‌ದ್
 ಅಲೆನ ಪಿರವು ತಿರ್ಗೊಂದು ಪತ್ತೊಂದು
ಅಲೆಗ್ ಮದಿಮೆ ಆಯಿ ಬೊಕ್ಕ ನೆನೆತೊಂದಿತ್ತೆ !!!
@ಹನಿಬಿಂದು@
23.09.2024

ಹಣದ ಹೊಳೆ ಹರಿದಾಗ

ಹಣದ ಹೊಳೆ ಹರಿದಾಗ

ಹಣದ ಹೊಳೆ ಹರಿದಾಗ 
ಹೆಣವು ಬಂದು ಕರೆವುದು
ಮನದ ಭಾವ ಬೆಳಗುವುದು
ಕಾಣದ ಕನಸು ಬರುವುದು

ಜನರ ಭಾವ ಬದಲಾಗುವುದು
ಗುಣದ ಬಣ್ಣ ಬಯಲಾಗುವುದು
ಕಣ್ಣ ಕಾಂತಿ ಹೆಚ್ಚುವುದು 
ನಿನ್ನ ನನ್ನ ಎನುವುದು

ತನ್ನತನವ ಮರೆವುದು
ಸಣ್ಣತನವು ಬೆಳೆವುದು
ರನ್ನ ವಜ್ರ ಬರುವುದು
ಹೆಣ್ಣ ಗುಂಪು ಹೆಚ್ಚುವುದು

ಮಣ್ಣ ಪರಿಮಳ ದೂರಾಗುವುದು
ಭಿನ್ನ ಭಾವ ಉದುರುವುದು
ಹೊನ್ನ ಆಲೋಚನೆ ಮೊಳೆವುದು 
ಪಿನ್ನು ಕೂಡ ನಲಿವುದು 
@ಹನಿಬಿಂದು@
24.09 2024

ಚoಗುಡಿ

ಚoಗುಡಿ 

ವನಸ್ ಕೊರ್ರ್ದು ಬೇಗ ದೆಪ್ಪುಲೆ ಇರೆನ್ 
ಬಂಜಿಗ್ ಪಾಡಿಜರ್oಡ ಬೇಗ ದೆಪ್ಪುವ ಇರೆನ್..
@ಹನಿಬಿಂದು@
23.09.2024

ಭಾನುವಾರ, ಸೆಪ್ಟೆಂಬರ್ 22, 2024

ಚಂಗುಡಿ

ಚುಂಗುಡಿ

ಆಯಗ್ ಬೋಡುಗೆ ಪರಿಯರೆ ಕೋಲ್ಡ್..
ಹಟ ಪತ್ ಕೇನಿನೆಕ್ ಅಮ್ಮ ಕೊರಿಯೆರ್ ರಡ್ ಕೋಲ್ಡ್ 
@ಹನಿ ಬಿಂದು@
22.09.2024

ಶನಿವಾರ, ಸೆಪ್ಟೆಂಬರ್ 21, 2024

ಹಾಯ್ಕು

ಹಾಯ್ಕು

ಇಲ್ಲದ ಮಾನಿ
ಪಿದಯಿ ಪೋಯಿ ಬೊಕ್ಕ
ತೆಲ್ಕೆ ಮಾರಿನಿ 
@ಹನಿಬಿಂದು@
21.09.2024

ಶುಕ್ರವಾರ, ಸೆಪ್ಟೆಂಬರ್ 20, 2024

ಬೇಕಿದೆ

ಬೇಕಿದೆ

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ
ಎಂದ ಭಾರತದ ಸರ್ವತೋಮುಖ ಜನರ ಮತ
ನಾರೀಮಣಿಗಳ ಉತ್ತಮ ಕಾರ್ಯ, ತಾಳ್ಮೆಯ ಸತತ
ಅನುಕರಣೀಯ ಗುಣದ, ನೋವು ನುಂಗುವ ಹಿತ!

ಸೀತೆಯ ಹೊಂದಾಣಿಕೆ, ಪಾವಿತ್ರ್ಯತೆ, ಸತ್ಯ
ಊರ್ಮಿಳೆಯ ಕಾಯುವ ತಾಳ್ಮೆಯ ಸೆಳೆತ
ಕೈಕೇಯಿಯ ಮಾತೃ ಪ್ರೇಮದ ರಗಳೆ
ಮಂಥರೆಯ ಮನೆ ಮನೆತನದ ಪ್ರೀತಿಯ ಕಳೆ 

ಅಕ್ಕನ ವಚನಗಳು ಸುರಿಸಿದ ಮಳೆ
ಸಾಯಿಸುತೆಯವರ ಕಾದಂಬರಿಗಳ ಕನಸು
ಕಿರಣ್ ಬೇಡಿಯವರ ಧೈರ್ಯ ಸಾಹಸ
ನಾಟ್ಯರಾಣಿ ಶಕುಂತಲೆಯ ಕಲಾ ವೈಭವ

ಬೆಲೆ ಕಟ್ಟಲಾಗದ ಅಮ್ಮನ ಪ್ರೀತಿಯ ಅಮೃತ
ಕೈ ಹಿಡಿದು ನಡೆಸುವ ಅಕ್ಕನ ಕಾಳಜಿ 
ತುತ್ತು ಕೊಟ್ಟು ಸಾಕಿದ ಅಜ್ಜಿಯ ಹಿತನುಡಿ
ಮುತ್ತು ನೀಡಿ ಬೆಳೆಸಿದ ತಂಗಿಯ ಅಕ್ಕರೆ

ಹೆಣ್ಣಿಲ್ಲದೆ ಮಣ್ಣಿಲ್ಲ ಹೊನ್ನಿಲ್ಲ ಕತೆಯಿಲ್ಲ
ಹೆಣ್ಣಲ್ಲದೆ ಬಣ್ಣ ವೈಯ್ಯಾರದ ಒನಪಿಲ್ಲ
ಭಾರತಿಯೂ ಮಹಿಳೆ, ಭುವನೇಶ್ವರಿ ಸಹಿತ
ದೇವಿಯ ಶಕ್ತಿಯಲಿ ಭಸ್ಮಾಸುರನೂ ಭಸ್ಮ

ಬಾಳಿ ಬದುಕಬೇಕಿದೆ ಹೆಣ್ಣು ಕೂಸುಗಳು
ಇರಿತ ಅತ್ಯಾಚಾರ ಕೊಚ್ಚಿ ಕೊಚ್ಚಿ ಕೊಲೆ !
ಘೋರ ನರಕದ ಬದುಕು ತುಂಡಾಗಿ
ಕಲಿತಷ್ಟು ಸಣ್ಣ ಮಾನವ ಬುದ್ಧಿ ಇಂದು

ಬೇಕಿದೆ ಸ್ವಚ್ಛ ಸುಂದರ ಮಾನಸಿಕ ಪರಿಸರ
ಹೊಡೆದಟ್ಟ ಬೇಕಾಗಿದೆ ವಿಕೃತ ರೋಗಗಳ
ಮೊಬೈಲ್ ಮಾಯೆಯೋ, ತಾಂತ್ರಿಕ ಬದುಕೋ
ಮಹಿಳೆಗೆ ಬೇಕಿದೆ ಒಂದಿಷ್ಟು ಸಾಂತ್ವನ..
@ಹನಿಬಿಂದು@
10.09.2024

ಪನಿ ಕವಿತೆ ಪಾಲಿಶ್

ಪನಿ ಕವಿತೆ
ಪಾಲಿಶ್ 

ಕಣ್ ಕಣ್ ಬಿಡ್ದು
ತೂವೊಂದೇ ಕುಲ್ದಿತ್ತೆ
ಅಲೆನ ಉಗುರುಗು ಪಾಡಿನ 
ನೇಲ್ ಪಾಲಿಶ್!!

ಗೊತ್ತೇ ಆಯಿಜಿ
ಎನ್ನ ಮೋನೆಡ್ 
ಅಚ್ಚಾಯಿನ ಅಲೆನ
ಬೂಟ್ ಪಾಲಿಶ್!!
@ಹನಿಬಿಂದು@
20.09.2024

ಗುರುವಾರ, ಸೆಪ್ಟೆಂಬರ್ 19, 2024

ಕವಿತೆ

ಕವಿತೆ
ರಾಗ - ಗಜಮುಖನೆ

ಎಡ್ಡೆ ಮಲ್ತಿ ಜನಕ್‌ಲೆಗ್ ನ್ಯಾಯ ತಿಕ್ಕುಂಡು 
ರಡ್ಡ್ ಬಗೆಪಿ ಮಾನ್ಯನ್ ದೇವೆರ್ ತೂವೊನೊಡು//ಪಲ್ಲವಿ//

ಕಾಸ್ ಕೈಟ್ ಪತ್ತ್ ಮೆರೆಪಿ ಶೋಕಿ ದಾಯೆ?
ಮೋಸ ಮಲ್ತ್ ಬದುಕುನೈನ್ ಬುಡ್ದು  ಆಯೇ /೨ಸರಿ/
ಮಾತೆರ್ಲಾ ನಮ್ಮಲೆಕನೆ  ಪಂದ್ ಬದ್‌ಕಿಯೆರ್ಡಾ
ದೇವೆರ್ಲಾ ಮರಪಯೇರ್ ಎಡ್ಡೆ ಮದಿಪು ಕೊರ್ದು //೧//

ತಾನ್ ತನ್ನ ತನ್‌ಕೆ ಪಂದ್ ದಿನಲ ಕಲೆಯೆoದಾoಡ 
ದಾನೆ ಪಂದ್ ಕೇನರೇಗ್ ಏರ್ ಬರುವೆ ಪನ್ಲೇ/೨ಸರಿ/
ಈರ್ಲ ಬೋಡು ಮೇರ್ಲ ಬೋಡು ನಮ ಪೂರ ಒಂಜೇ
ಪನ್ಪಿ ಎಡ್ಡೆ ಮನಸ್ದಾಯಗ್  ದೇವೆರೆ ದಯೆ  ಉಂಡು//೨//
@ಹನಿಬಿಂದು@
19.04.2024

ಮೋಕೆ

ರಾಗ: ಜೊತೆಯಲಿ ಜೊತೆ ಜೊತೆಯಲಿ 

ಕವಿತೆ
ಮೋಕೆ

ಪಕ್ಕಿ ಪಾರುನ ಮೋಡ ಸೇರುನ
ಉಂದು ಮೋಕೆ ಅತಾ...//೩//
ಓ.. ಏತ್ ಎಡ್ಡೆಂತಿನ ಉಡಲ್..
ಎನ್ನ ಮನಸ್‌ದ ಪಾತೆರ ಈರೆ ಪಂಡರಾ....//ಪಕ್ಕಿ//

ಕಂಡ ಗುಡ್ಡೆ ನೀರ್ ಕಡಲ್ ನಮಕೆ ಪಂತಿನ...//೩//ಆಹಾ....
ಸೇರ್‌ದ್ ನಲಿಪುಗ ಒಟ್ಟು ನಡಪುಗ
ಕನತ ಊರುನು ನಮ ಸೇರ್‌ಗ
ಬದ್‌ಕ್‌ದಾ ಪೊಸ ಕತೆನ್‌ಲಾ
ಒಟ್ಟಾದೇ ನಮ ಬರೆವೊಡು
ಬಲೆ..ಇಡೆಗೆ..ನಮ್ ಸೇರ್ದ್ ನಲಿಪುಗಾ.../ಪಕ್ಕಿ/
@ಹನಿಬಿಂದು@
19.06.2022

ಟoಕಾ

ಟoಕಾ 

ಎನ್ನ ಮರ್ಮಲ್
ಬಾರೀ ಪೊರ್ಲುದ ಪೊಣ್ಣು 
ರಡ್ಡ್ ನುಪ್ಪಾಡ್ 
ಪಂಡೆಡ ಪಾಡ್ವಲಾಲ್
ಅರ್ಧ ಸೇರ್ದ ನುಪ್ಪುನು 
@ಹನಿಬಿಂದು@
19.09.2024

ಬುಧವಾರ, ಸೆಪ್ಟೆಂಬರ್ 18, 2024

ರುಬಾಯಿ

ರುಬಾಯಿ 

ಒಂಜಿ ದಿನ

ಮಾತ ಕುಲುದು ತಿಂಡಿ ತಿಂತ
ಬೇಲೆ ಮದತ್ ಪಾರಿ ಪಂತ 
ಕಂತೆ ಕನತ್ ಕುಲ್ದು ನಲಿತ್ತ್ 
ಸಂತೆ ತಿರ್ಗ್‌ದ್ ಪಾರ್ ಬತ್ತ
@ಹನಿಬಿಂದು@
18.09.2024

ಮಂಗಳವಾರ, ಸೆಪ್ಟೆಂಬರ್ 17, 2024

ಗಝಲ್

ಗಝಲ್ 

ಪರರ ಮಕ್ಕಳನ್ನು ತಮ್ಮ ಮಕ್ಕಳೆಂಬ ಹಾಗೆ ಬೆಳೆಸುವ ನಾವು ಶಿಕ್ಷಕರು
ತಿದ್ದಿ ತೀಡಿ ಓದು ಬರಹ ಕಲಿಸಿ ಬೆಳೆಸುವ ನಾವು ಶಿಕ್ಷಕರು 

ತಾನು ತಿಂದೆನೋ ಬಿಟ್ಟೆನೋ ತನಗೇ ತಿಳಿಯದ ಮನದ ತೊದಲಾಟ 
ಬಿಸಿಯೂಟ ಮೊಟ್ಟೆ ಚಿಕ್ಕಿ ಹಾಲು ಹಣ್ಣು ರಾಗಿ ಮಾಲ್ಟ್ ತರಕಾರಿಯೂ ತರುವ ನಾವು ಶಿಕ್ಷಕರು 

ಊರು, ಬಸ್ಸು, ಕಟ್ಟೆ ಸಂಭಾಷಣೆಯ ಜನರ ಬಾಯಿಗೆ ಸುಲಭದಿ ಸಿಗುವವರು
ಸಮಾಜದಲಿ ಯಾರು ತಪ್ಪು ಮಾಡಿದರೂ ತಪ್ಪು ಮಾಡಲು ಅವಕಾಶ ಇಲ್ಲದೆ ಇರುವ ನಾವು ಶಿಕ್ಷಕರು 

ಮನದಲೇನಿದೆ,  ತಲೆಯಲೆಷ್ಟು ಕಾರ್ಯದ ಒತ್ತಡವಿದೆ ಯಾರೂ ಕೇಳರು!
ಒಂದಾದರೂ ತಪ್ಪೆಸಗಿದರೆ ರಸ್ತೆ ಮಧ್ಯೆ ಕತ್ತಿ ಹಿಡಿದು ನಿಲ್ಲುವವರ ಭಯದಿಂದ ಬದುಕುತ್ತಿರುವ ನಾವು ಶಿಕ್ಷಕರು 

ಯಾರು ಬಂದರೂ ಹೋದರೂ ಸಮಾಧಾನಿಸಿ ಕಳುಹಿಸುವವರು
ಬಂದ ಹೋದವರ, ಪೋಷಕರ, ಮಕ್ಕಳ ಬಾಯಿಗೆ ಆಹಾರವಾಗುವ ನಾವು ಶಿಕ್ಷಕರು 


ಮಣ್ಣಿನ ಮುದ್ದೆಗಳ ಸರ್ವಜ್ಞರಾಗಿ ಬೆಳೆಸುವ ಹೊಣೆಯ ಹೊತ್ತವರು
ಮಕ್ಕಳ ರಕ್ಷಣೆಯ ಪೋಷಕರ ತೆರದಿ
ಎಳೆ ಎಳೆಯಾಗಿ ಬಿಡಿಸಿ ನಡೆಸಿರುವ ನಾವು ಶಿಕ್ಷಕರು...

ಪ್ರೇಮದ ಕಾಣಿಕೆಯನು ಸರ್ವರಿಗೆ ಉಣ ಬಡಿಸುವವರು
ಊಟಕ್ಕಿಲ್ಲದ ಉಪ್ಪಿನ ಕಾಯಿಯ ಹಾಗೆ ಬದುಕಿನ ದೋಣಿಯಲಿ ಇದ್ದೂ ಇಲ್ಲದವ,  ನಾವು ಶಿಕ್ಷಕರು!
@ಹನಿಬಿಂದು@
17.09.2024

ಚಿಟ್ಕಾ

ಚಿಟ್ಕಾ 

ಬೆಲೆ..

ಮನಸ್ ಗ್ ಮನಸ್ ದ ಪಾತೆರ ಕೇನುಂಡುಗೆ 
ಉಡಲ್ ಗ್ ಉಡಲ ಬೇನೆ ಗೊತ್ತಾಪುಂಡುಗೆ
ಮೋಕೆ ಮಲ್ತಿನಕ್ಲೆಗ್ ಅವೆತ ಮಹಿಮೆ ತೆರಿವುಂಡುಗೆ
ಮೋಕೆ ಕಲೆವೊನ್ಯ ಜನಕ್ಲೆಗ್ ಮಾತ್ರ ಅವೆತ ಬೆಲೆ ಗೊತ್ತಿಪ್ಪುನಿಗೆ..
@ಹನಿಬಿಂದು@
17.09.2024

ಸೋಮವಾರ, ಸೆಪ್ಟೆಂಬರ್ 16, 2024

ಐನೆಸಲ್

ಐನೆಸಲ್ ದ ಕಬಿತೆ

ಮಾಜಂದಿ ಬದ್ಕ್ ದ ಉಬೇರ ಬೆಲೆ
ನಾಡಂದಿ ಮದಿಪುದ ಮಲ್ಲ ಕಲೆ
ನೂಕಂದಿ ನೆನೆಪು ನಮ್ಮ ಭೂಮಿಡ್ 
ದಕ್ಕಂದಿ ಪೊಲಬು  ಇತ್ತಿನ ಜಾಗೆಡ್ 
ಸೇರಂದಿ ಉಡಲ ಮೋಕೆದ ಸೆಲೆ 
@ಹನಿಬಿಂದು@
16.09.2021

ಶನಿವಾರ, ಸೆಪ್ಟೆಂಬರ್ 14, 2024

ಸಜ್ಜಿಗೆದ ಗೌಜಿ

ಸಜ್ಜಿಗೆದ ಗೌಜ್ಜಿ

ಕಾಂಡೆದ ತಿಂಡಿಗ್ ದಾದಂದ್ ಕೇನ್ನಗ 
ಸಜ್ಜಿಗೆ ಪoಡೆರ್ ದೊಡ್ಡ
ಬೋಂಟೆಗ್ ಪೋಯಿನ ಮಾಮಣ್ಣೆ ಬನ್ನಗ 
ಬಜ್ಜಿಲ ಗುದ್ಯೆರ್ ಅಡ್ಡ..

ಸಜ್ಜಿಗೆ ಕಂತೆರ್ ಎಣ್ಣೆನ್ ಪಾಡ್ಯೆರ್ 
ಬಣಲೆನ್ ದಿಕ್ಕೆಲ್ ದೀದಾಂಡ್ 
ಕಾಯ್ಮುಂಚಿ ನೀರುಳ್ಳಿ ಮೂರುದು ದೀದ್ 
ಕಮ್ಮನೆದೊಗ್ಗರ್ಣೆ ಬಲ್ತಾoಡ್ ..

ಕೈದಿನ ಸಜ್ಜಿಗೆ ಪಾಡ್ ದ್ ಮಗ್ ತೆರ್
ರಡ್ಡ್ ಲೋಟೆ ನೀರ್ ಲ ಪಾಡ್ಯೆರ್
ಉಪ್ಪು ಸಕ್ಕರೆ ಬಿರ್ಕ್ ದ್ ಬುಡ್ಯೆರ್
ತಾರಯಿದ ಪೂ ಪಾಡ್ದ್ ಮಗ್ ತ್ತೆರ್..

ರುಚಿತ್ತ ಸಜ್ಜಿಗೆ ರೆಡಿ ಆಂಡ್ ತೂಲೆಗೆ 
ಕಡಕ್ ಚಾ ಒಂಜಿ ಕೊದ್ದಿoಡ್ 
ಬಟ್ಟಲ್ ದೀಯೆರ್ ಮಾತೆರ್ಲ  ಬತ್ತೆರ್ 
ರುಚಿ ರುಚಿ ಸಜ್ಜಿಗೆ ಮುಗಿದಾಂಡ್.
@ಹನಿಬಿಂದು@
15.09.2024

ತುಳು ಹಾಯ್ಕು

ತುಳು ಹಾಯ್ಕು
ಮಲೆತ ಬರಿ 
ತುದೆತ ನೀರ ಸೊರ
ಕುಸಿತ ದಿನ
@ಹನಿಬಿಂದು@
14.09.2024

ಭಾನುವಾರ, ಸೆಪ್ಟೆಂಬರ್ 8, 2024

ಗಣಪನ ಸುಗಿಪು

ಗಣಪನ ಸುಗಿಪು

 ಬೂರೊಂದೆ ಅಡ್ಡ ಬೂರೊಂದೆ 
ಇರೆನ ಪಾದೊಗು ಗಣಪ //
ಕೇನೊಂದು ಎಡ್ಡೆ ಕೇನೊಂದು
ಸರ್ವರೆ ಬಾಳ್ ಗ್ ಮದಿಪು//

ಸುರುತ ಪೂಜೆದ ದೇವರ್ ಈರ್ 
ಎಡ್ಡೆ ಬುದ್ಧಿನ್  ಕೊರ್ಪಿನಾರ್
ಪಪ್ಪ ಅಮ್ಮನೇ ಪ್ರಪಂಚ ಪಂದಿನ
 ಮಲ್ಲ ಮನಸ್ ದ ದೇವರ್ ಈರ್ //

ಆನೆದ ಮೋನೆ ಎಲಿಲ ವಾಹನ
ಉಚ್ಚುನು ಬಂಜಿಗ್ ಸುತ್ತೊಂದು
ಚಂದ್ರನ್ ತೂಂಡ ಚೌತಿದ ದಿನಟ್ 
ಅಪವಾದೊಲು ನಮಕ್ ತಪ್ಪಂದ್ //

ಗಣಕ್ ಲೆ ಅಧಿಪತಿ ಕೆಬಿಕುಲು ಮಲ್ಲ
ಪಂಡಿನ  ಕೇನ್ ಲೆ ಪನ್ಪಿ ಆದೇಶ
ಸೀಪೆ ತಿಂಡಿದ ಆಸೆ ಇರೆಗ್ ಲಾ
ಕೈಟ್ ಪತ್ಯರ್  ಪಾಶ ಅಂಕುಶ //

ಶಿವ ಪಾರ್ವತಿನ ಮೋಕೆದ ಮಗೆಲ
ಸುಬ್ರಹ್ಮಣ್ಯನ ಅಣ್ಣೆಗೆ  ಮೇರ್ ಲ
ಸರ್ವೆರ್ ಒಟ್ಟಾದ್ ಕೇನಿನ ವರೊನು
ಕೊರ್ಪಿನ ದೇವೆರೆ ಕಾಪೊಡು ನನಲ
@ಹನಿಬಿಂದು@ 
08.09.2024


ಗುರುವಾರ, ಆಗಸ್ಟ್ 29, 2024

ಪ್ರೀತಿಯ ಉಡುಗೊರೆ

ಪ್ರೀತಿಯ ಉಡುಗೊರೆ

ಪ್ರೀತಿಯೇ ನಿನಗೆ ನೀಡುವೆ ಇಂದು
ಪ್ರೇಮದ ಕಾಣಿಕೆ ನನ್ನೊಲವು 
ಶಾಂತಿಯೇ ಬಾಳಿನ ಮೂಲಕೆ ಸಿಂಧು
ಕ್ರೋಧವ ಮಾಡಲು ತನ್ನಳಿವು

ಮಾತಾ ಪಿತರ ವರವದು ಇರಲು
ಬದುಕಿನ ದಾರಿಯು ಸುಗಮವದು
ಮನಗಳ ಭಾವವೆ ಸರ್ವಗೆ ಸಲಹಲು
ಕೆಡುಕಿನ ಹೃದಯದಿ ಕಷ್ಟವದು

ನಾನು ನೀನು ಒಂದೇ ಎನಲು
ಅವರಿವರೆಲ್ಲಿ ತಡೆಯಲು ಸಾಧ್ಯ
ಪ್ರೀತಿಗೆ ಗೆಲುವು ಜಗದಲಿ ಕೊನೆಗೂ
ಶಾಂತಿಯ ನೆಮ್ಮದಿ ಜನತೆಗೆ ಹೃದ್ಯ..

ಕಾಂತಿ ಬರಲದು ಸ್ಪೂರ್ತಿಯು ಬೇಕು
ಸ್ವಾತಂತ್ರ್ಯದಿ  ನಿತ್ಯ ಹಿತವಿಹುದು
ನ್ಯಾಯ ನೀತಿಯ ಪಾಲಿಪ ಉಸಿರಿಗೆ
ಮೋಹದ ಉಡುಗೊರೆ ನಿಜವಿಹುದು
@ಹನಿಬಿಂದು@
30.08.2024

ಮಂಗಳವಾರ, ಆಗಸ್ಟ್ 27, 2024

ವಲಸೆ

ವಲಸೆ

ನಾ ನಿನ್ನ ನೆನೆಸಿಕೊಂಡು ನಿನ್ನನ್ನೇ ನನ್ನ ಮನದಲ್ಲಿ ಅಪ್ಪಿ ಆಲಂಗಿಸಿಕೊಂಡು
ನನ್ನ ಕವನದ ಸಿಹಿಯಾದ ಸಾಲುಗಳನ್ನು ಮತ್ತೆ ಮತ್ತೆ ನೆನೆಸಿಕೊಂಡು
ಒಂದೆರಡು ಪದಗಳ ಮತ್ತೆ ಮತ್ತೆ ಹುಡುಕಿ ಕಿವಿದು ಕೆದಕಿ
ಗೀಚುವ ಹೊತ್ತಲ್ಲಿ ವಲಸೆ ಬಂದಿವೆ ಹಲವು ಪದಗಳು..

ಹೊಸತಾದ ಪದವೇನು ಹೊಸದಾದ ಜೀವವೇನು
ನಯವಾದ ನುಡಿಗಳೇನು ಹೊಸತನದ ಅಮಲೇನು
ನೀ ನನ್ನ ನಾ ನಿನ್ನ ನೋಡುತ್ತಾ ಕುಳಿತಿರಲು
ಮತ್ತದೆ ಪದಗಳು ಮತ್ತೆ ಮತ್ತೆ ಬಂದು ರಾಡಿ ಎಬ್ಬಿಸಿಬಿಟ್ಟಿವೆ..
ಹನಿ ಬಿಂದು
27.08.2024

ಬುಧವಾರ, ಆಗಸ್ಟ್ 21, 2024

ಮೆಲುಕು

ಮೆಲುಕು

ಹಲವಾರು ಬಾರಿ ಬದುಕಿನ ಮೆಟ್ಟಿಲುಗಳನ್ನು ಮೆಲುಕು ಹಾಕಿದಾಗ ನಮಗೆ ಸಿಗುವುದು ಸಿಹಿ ಕಹಿಗಳ ನೆನಪಿನ ಹೂರಣ 

ಬಂದು ಹೋಗುವ ಈ ಸಣ್ಣ ನಾಲ್ಕು ದಿನಗಳ ನಡುವೆ ಹಲವಾರು ಕಷ್ಟ ಸುಖಗಳ ಮುದ್ದಾದ ಒಟ್ಟಾದ ಸಮ್ಮಿಲನದ ಅನುರಣನ 

ಜನಮನಗಳ ಜೊತೆ ತಣಿ ತಣಿಯುತ ಕೋಪ ದ್ವೇಷ ಜಗಳ ಹೊಂದಾಣಿಕೆಗಳೆಂಬ ವಿವಿಧ ಭಾವಗಳ ಸಮ್ಮಿಳಿತ ಸಂಬಂಧಗಳ ಕಣ 

ದೇಶ ಭಾಷೆ ರಾಷ್ಟ್ರ ರಾಜ್ಯ ನಾನು ನನ್ನದು ನೀನು ನಿನ್ನದು ಅವನು ಅವನದು ಆಸ್ತಿ ಅಂತಸ್ತು ದೇಶ ಜಾಗ ಮನೆ ಅರಮನೆ ಋಣ

ಮೆಲುಕು ಹಾಕುವಾಗ ಕೊನೆಗೊಮ್ಮೆ ಅನ್ನಿಸುವುದು ಎಲ್ಲಕ್ಕಿಂತಲೂ ಮುಖ್ಯ ಉತ್ತಮ ಆರೋಗ್ಯ ಶಾಂತಿ ನೆಮ್ಮದಿಯ ಬದುಕು ಮಿಕ್ಕೆಲ್ಲವೂ ಸುಮ್ಮನೆ...
@ಹನಿಬಿಂದು@
22.08.2024

ಸೋಮವಾರ, ಆಗಸ್ಟ್ 19, 2024

ಕಟ್ಟಿರುವೆ

ಕಟ್ಟಿದ್ದೆ ರಕ್ಷೆಯನು ಬಿಡಬೇಡ ಎಂದು
ಬಂಧನವು ಅನುದಿನವು ಬಿಡಬಾರದೆಂದು
ಅದೇಕೆ ಹಾಗಾಯ್ತೋ ನೋವು ನೂರಾಯ್ತು
ಕಾಳಜಿ ಕಡಿಮೆಯಾಗಿ ಮನವು ಚೂರಾಯ್ತು

ಮನವು ಮರ್ಕಟವಿಲ್ಲಿ ಇಂದಿನಂತೆ ನಾಳಿಲ್ಲ
ತನುವ ಬಯಸಲು ಜನರಿಗೇನು ಕಮ್ಮಿಯಿಲ್ಲ
ಅಕ್ಕ ತಂಗಿಯ ತೆರದಿ ಕಾಣುವವರಿಲ್ಲ
ಬೇಕೇ ಬೇಕು ತಮಗೆ ಸಿಕ್ಕಿದ್ದ ಅನುಭವಿಸಲಿಕ್ಕೆಲ್ಲ

ಬಾಳು ಚೂರಾಗಿ ಮಾತು ನೀರಾಗಿ ಹೋಗಿತ್ತು
ಕಾಳು ನುಂಗಿದ ಹಕ್ಕಿ ಪರರ ಪಾಲಾಗಿತ್ತು
ಹಾಲು ಮನವದು ಹೋಳು ಹೋಳಾಗಿತ್ತು
ಬಾಳುವೆಯು ಆಸೆ ಮುಗಿಸಿ ಹೊರಡಲನುವಾಗಿತ್ತು

ತಾನು ತನ್ನದು ಎಂದು ಏನಿಹುದು ಜಗದೊಳಗೆ
ಬಂದಾಗ ಬೇರೆಯೇ ಮನೆಯಿಂದ ಹೊರಗೆ
ದೈವ ದೇವರಿಗೆ ಮೊರೆ ಇಡಬೇಕು ಅರೆ ಘಳಿಗೆ
ಇಲ್ಲವಾದರೆ ತುಂಬದು ನಮ್ಮೀ ಮನದ ಜೋಳಿಗೆ
@ಹನಿಬಿಂದು@
19.08.2024

ಚುಟುಕು



ರಕ್ಷಾ ಬಂದನ

ಸಂಬಂಧಗಳು ಚೆನ್ನಾಗಿರಲಿ ನಮ್ನಿಮ್ಮ ಅವರೊಳಗೆ
ಬಾಂಧವ್ಯ ಬೇಸುಗೆಯಾಗಿರಲಿ ಸ್ನೇಹಹೊಳೆ ಹರಿದ್ಹಾಂಗೆ
ರಕ್ಷೆ ಕ್ಕೈಯಲಿರಲಿ  ಭಾವಬೆಸುಗೆ ಬಿಡದಾಂಗೆ
ನೂರ್ಕಾಲ ಜೊತೆಗಿರಲಿ ನಾಣ್ಯದೆರಡು ಮುಖದಾಂಗೆ 
@ಹನಿಬಿಂದು@
19.08.2024

ಮಂಗಳವಾರ, ಆಗಸ್ಟ್ 13, 2024

ಕಂದ

ಕಂದನ ಕೈಲಿ ಕಂದನಿದೆ
ಕಂದಗೆ ಕಂದನ ಆಸರೆಯು
ಕಂದನು ಜವಾಬ್ದಾರಿ ಹೊರಲು ಇದೆ
ಕಂದನು ಬೆಳೆದ ಹಿಗ್ಗು ಇದೆ

ಅಜ್ಜಿಯ ಪಟ್ಟವ ಹೊರಲು ಇದೆ
ಅಜ್ಜನ ಹಾಗೆ ಆಡಲಿದೆ
ಮಗುವನು ಕುಣಿಸೋ ತವಕವಿದೆ
ಹಿರಿಯರು ಎನಿಸಿದ ನೋವು ಇದೆ

ಮಗುವಿನ ಮನದ ಮಗಳಾಸೆ
ವಯಸ್ಸು ಆದುದೇ ತಿಳಿಯದ ಕ್ಷಣದಲಿ
ಮದುವೆಯೂ ಮಗುವು ಖುಷಿ ಇರಲಿ
ಬಾಳಿನ ಹಾದಿಯು ಸೊಗವಿರಲಿ
@ಹನಿಬಿಂದು@
14.08.2024


ತುಳು ಕವನ

@prem Ramesh shetty
ಮೋಕೆ 

ಮೋಕೆ ಬೊರ್ಚ ಬಾಳ ತೇರ್ 
ನೂಕು ನೂಕು ಪೋಯೆರೆ 
ತೂಕ ನಾಲ್ ದಿನಲ ನಮ
ಮಿತ್ ಪೋಯರಾಪುಜಾ...

ನ್ಯಾಯ ನೀತಿ ತತ್ ಪೋಪಿ
ಗುಣಲ ನಮ್ಮ ಅತ್ ಯೇ
ಕಾಯ ಮಾಯ ಗೊತ್ತೇ ಇಜ್ಜಿ
ಪೊಯರುಂಡು ಪೂರಯೆ

ತಾಲ್ವೆ ಮೋಕೆ ಶಾಂತಿ ಕುಸಿ
ಬೋಡು ನಮಕ್ ಏಪಲ 
ತಾದಿ ತತ್ತಿನಾಂಡ ಬರೊಲಿ 
ಕೇಂದ್ ಪತ್ ಇಲ್ಲಗ್ಲ 

ಯಾನ್ ಈರ್ ಪನ್ ಪಿ ವಚನ
ಬೊರ್ಚಿ ನಮಕ್ ಏಪಲ 
ನಮ ಪನ್ ಪಿ ಧ್ಯೇಯ ವಾಕ್ಯ
ದೊರೆಯದೊಂತೆ ದಿನಕ್ಲ
@ಹನಿಬಿಂದು@

ಚುಟುಕು

ಚುಟುಕು

ಹೊಸದಾದ ಮಾದರಿಯು ಇತ್ತೀಚಿನ ಹೊಗಳಿಕೆ
ಅದರೊಳಿಹುದು ಬರಿಯ ಬೂಟಾಟದ ತೆಗಳಿಕೆ
ಜನರ ಕಣ್ಣಿಗೆ ಮಣ್ಣೆರೆಚೊ ಸಾಧನ
ಬಡವರಡು ಊಟ ಬಟ್ಟೆಯಿಲ್ಲದ ರೋಧನ
@ಹನಿಬಿಂದು@
13.08.2024

ಹೂವ ತಂದೆಯ

ಹೂವ ತಂದೆಯಾ?

ಹೂವ ತಂದೆಯಾ ಮಗಳೇ ಮೋಹಿನಿ
ಹೂವ ಮೂಡಿದೆಯಾ ತಲೆಗೆ ಕಾಮಿನಿ
ಹೂವ ಹಿಡಿದೆಯಾ ಕರದಿ ಮೇದಿನಿ 
ಹೂವ ನಗೆಯ ಬೀರುತಿರುವ ರಾಗಿಣಿ

ತಲೆಯಲೊಂದು ಹಾರೋ ಯೋಚನೆ
ಮನದ ಒಳಗೆ ಏನೋ ಕಾಮನೆ
ಜೀವ ಬಿಡುತ ಕಾಯೋ ಮನದನ್ನೆ
ಬಾರೆ ಸಖಿಯೇ ಮುದ್ದು ಕನ್ಯೆ..

ಹಾರೋ ಹಕ್ಕಿ ಮೋಡ ತಡೆದು
ತಲೆಯ ಮೇಲೆ ಕುಳಿತು ಮೆರೆದು
ಯಾರೋ ಏನೋ ಓಡಿ ಬಂದು
ನಾಲ್ಕು ದಿಕ್ಕಿನಲ್ಲು ಹೂವ ಹಿಡಿದು...

ಜಾರಿ ಬೀಳದಂತೆ ಸಣ್ಣ ಹೂವು
ನೋಟದಲ್ಲೇ ಏನೋ ಹೊಸ ಕಾವು
ಮನದ ಒಳಗೆ ಸಣ್ಣ ನೋವು
ಬರದೆ ಇರಲಿ ಎಲ್ಲೂ ಬಾವು..
@ಹನಿಬಿಂದು@
13.08.2024

ಶನಿವಾರ, ಆಗಸ್ಟ್ 10, 2024

ಆರ್ತನಾದ

ಹೌದು, ನೀವು, ದೇವರು ಮಾಡುವುದು ಎಲ್ಲವೂ ಒಳ್ಳೆಯದೇ. ಆದರೆ ಒಂದು ಹೆಣ್ಣಿಗೆ ನೋವು ಕೊಡುವುದು ಅದು ಯಾವ ನ್ಯಾಯ? "ತನಗೆ ಬೇಕಾದುದೆಲ್ಲವ ಪಡೆದುಕೊoಡು, "ನಿನಗೆ ಉತ್ತಮ ಬಾಳು ಕೊಡುವೆ, ಸದಾ ನಿನ್ನ ಬಾಳಲ್ಲಿ ನಿನ್ನ ಅರ್ಧಾಂಗಿಯಾಗಿ ಜೊತೆಯಾಗುವೆ" ಎಂಬ ಭರವಸೆಯನ್ನು ಆಯಾ ದೇವರ ಎದುರಿನಲ್ಲಿ ನೀಡಿ, ಅದಕ್ಕೆ ಸಾಕ್ಷಿಯಾಗಿ a ಹೆಣ್ಣಿನ ಕುತ್ತಿಗೆಗೆ ತಾಳಿ ಕಟ್ಟಿದ ಮೇಲೆ ಸದಾ ಕಷ್ಟ ಸುಖದಲ್ಲಿ ಆ ಹೆಣ್ಣಿಗೆ ನೆರಳಾಗಿ ಬದುಕಬೇಕು" ಎಂದು ನನಗೆ ಹೇಳಿಕೊಟ್ಟವರು ನೀವೇ. ಈಗ ನೀವೇ ಒಂದು ಹೆಣ್ಣಿನ ಕಣ್ಣಲ್ಲಿ ನೀರು ತರುವುದು, ಮೌನದಲ್ಲಿ ಮನಸು ಕೆಡಿಸಿ, ನೋವು ತರಿಸಿ ತನಗೆ ಬೇಕಾದಾಗ ಮಾತ್ರ ಬಯಸುವ, ಸ್ವಾರ್ಥ ಏಕಾಗಿ?
  ಗಂಡಸರೆಂದರೆ ಹಾಗೆ ಎನ್ನುವ ಹಾಗೆ ತನ್ನ ಸ್ವಾರ್ಥಕ್ಕೆ ಹೆಣ್ಣನ್ನು ಬಳಸಿ, ಕೊನೆಗೆ ಏನೂ ಸಿಗದಾಗ ಹೆಣ್ಣನ್ನು ಕಸದ ರೀತಿ ಎಸೆದು ಬಿಡುವ, ಗಂಡಸು ಕುಲಕ್ಕೆ ಧಿಕ್ಕಾರ. ಸ್ವಾರ್ಥಿ ಗಂಡಸು ತನ್ನ ಜೀವನದಲ್ಲಿ ತನ್ನ ತಾಯಿ, ಮಡದಿ, ಮಗಳು, ಅಕ್ಕ ತಂಗಿ ಯಾರನ್ನೂ ಸುಖವಾಗಿ ಸಾಕಲಾರ. ಎಲ್ಲರಿಗೂ ಮಾನಸಿಕ ಹಿಂದೆ ನೀಡುತ್ತಾ ತಾನು ಚೆನ್ನಾಗಿ ಬದುಕುವ. ಇಂತಹ ಗುಣ ಒಳ್ಳೆಯ ಗುಣವಲ್ಲ. ಹೆಣ್ಣಿನ ಕಣ್ಣೀರಿಗೆ ಬಹಳ ಶಕ್ತಿ ಇದೆ. ಮಂಡ್ಯ ಇದಕ್ಕೆ ಉದಾಹರಣೆ. ಮರಳು ಪೂರ್ತಿ ಆವರಿಸಿದ್ದು ಒಬ್ಬ  ಹೆಣ್ಣಿನ ಶಾಪದಿಂದ. 
    ಮಡದಿಯನ್ನು7 ಗೌರವಿಸಿದ ಗಂಡನನ್ನು ದೇವರೇ ಮೆಚ್ಚುತ್ತಾನೆ. ಅದರ ಹೊರತುಪಡಿಸಿ, ಬೇರೆ ಯಾರ ಮೇಲೆ ತನ್ನ ಆಸೆ ಆಕಾಂಕ್ಷೆಗಳನ್ನು ಹೊರಿಸಿ, ಕಾರ್ಯ ಸಾಧಕನಾದ ಯಾವ ಮನುಷ್ಯನೂ ಎಲ್ಲೂ ಶಾಶ್ವತ .....
  ಈ ಕರ್ಮಕ್ಕೆ ಅದು ಯಾವ sety.. 
@HoneyBindu@
10.08.2024

ಮಂಗಳವಾರ, ಆಗಸ್ಟ್ 6, 2024

ಒಂಟಿತನ

ತೀರಾ ಒಂಟಿತನ ಕಾಡುವ ಹಲವಾರು ಕ್ಷಣಗಳು ಬದುಕಿನಲ್ಲಿ ಎಲ್ಲರಿಗೂ ಬರಬಹುದು. ತುಂಬಾ ದೊಡ್ಡ ಕುಟುಂಬದಲ್ಲಿ ಹಲವಾರು ಜನರ ಜೊತೆ ಮಾತುಕತೆಯಲ್ಲಿ ಸದಾ ಇದ್ದರೂ, ನೂರಾರು ಜನ ಸುತ್ತಮುತ್ತ ಇರುವ ಹಾಸ್ಟೆಲ್ ನಲ್ಲಿ ಇದ್ದರೂ, ಪೂರ್ತಿ ತುಂಬಿದ ಬಸ್ಸಿನೊಳಗೆ ಇದ್ದರೂ ಒಂಟಿತನ ಕಾಡದೇ ಇರದು. ಅಂತೆಯೇ ಆರುನೂರು ಕೋಟಿ ಜನಸಂಖ್ಯೆ ಇರುವ ಈ ಭೂಮಿಯ ಮೇಲೂ ಒಂಟಿತನ ಕಾಡಿಯೇ ಕಾಡುವುದು ಸಹಜ. 
     ಒಂಟಿತನಕ್ಕೆ ಕಾರಣಗಳು ಇಲ್ಲದೇ ಇಲ್ಲ. ತನ್ನ ಹಾಗೆಯೇ ಯೋಚಿಸದ ವ್ಯಕ್ತಿ ತನ್ನೊಡನೆ ಇಲ್ಲದೆ ಇರುವುದು, ತನ್ನ ನೋವನ್ನು, ಅಳುವನ್ನು, ಸಂತಸವನ್ನು, ದುಃಖವನ್ನು, ಪ್ರೀತಿಯನ್ನು ಯಾರಲ್ಲೂ ಹಂಚಿಕೊಳ್ಳಲು ಸಾಧ್ಯವಾಗದೇ ಇರುವಾಗೆಲ್ಲ ""ಎಲ್ಲವನ್ನೂ ಹೇಳಿ ಕೊಳ್ಳಲು, ಭುಜದ ಮೇಲೊರಗಲು ತನಗಾಗಿ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ಇರಬೇಕಿತ್ತು"  ಅನ್ನಿಸಿದಾಗೆಲ್ಲ ಒಂಟಿತನ ಕಾಡುತ್ತದೆ. ನನ್ನ ಕಣ್ಣೀರ ಒರೆಸುವ ಕೈಗಳು ಬೇಕು, ಹಾಯಾಗಿ ಮಲಗಿ ನನ್ನ ನೋವನ್ನು ಹೊರ ಹಾಕಲು , ತೊಡೆಯ ಮೇಲೆ ಹಿತವಾಗಿ ಮಲಗಿ ನೋವು ಹಗುರಾಗಿಸಲು ನನ್ನದೇ ಅಂತ ಒಬ್ಬರು ಜೀವದ ಗೆಳೆಯ/ಗೆಳತಿ ಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇದೆ. ಬಾಳ ಸಂಗಾತಿ ಕೆಲವೊಮ್ಮೆ ನೂರರಲ್ಲಿ ಎಂಬತ್ತು ಭಾಗ ಈ ರೀತಿ ಅರ್ಥ ನಮ್ಮನ್ನು ಮಾಡಿಕೊಂಡವರೆ  ಅಲ್ಲ, ಅರ್ಥ ಮಾಡಿಕೊಂಡು ತಿಳಿದು ಬದುಕುವರಿದ್ದಿದ್ದರೆ ಇಷ್ಟೊಂದು ಕೋರ್ಟು ಕೇಸುಗಳು, ಡೈವೋರ್ಸ್ಗಳು, ಸೆಪರೇಶನ್ ಗಳು ಆಗಲು ಹೇಗೆ ತಾನೇ ಸಾಧ್ಯ ಅಲ್ಲವೇ? 
     ಮಹಿಳೆ ಪುರುಷನನ್ನು ಅವಲಂಬಿಸಿದ್ದರೆ, ಆ ಪುರುಷ ಇನ್ಯಾರೋ ಬೇರೆ ಮಹಿಳೆಯನ್ನು ಅವಲಂಬಿಸಿ ಇದ್ದಾಗ ಕುಟುಂಬದಲ್ಲಿ ಜಗಳ, ನೋವು, ಗಲಾಟೆ ಬರುತ್ತದೆ. ಅದು ಹುಡುಗನ ಅಮ್ಮ, ಅಕ್ಕ, ತಂಗಿ, ಗೆಳತಿ, ಗರ್ಲ್ ಫ್ರೆಂಡ್, ಹಳೆ ಲವರ್, ಪ್ರೇಯಸಿ, ಆಂಟಿ, ಅತ್ತೆ ಅಜ್ಜಿ, ಪಕ್ಕದ ಮನೆಯ ಮಹಿಳೆ , ಕ್ಲಾಸ್ಮೇಟ್,  ಯಾರಾದರೂ ಆಗಿರಬಹುದು.  ಮಹಿಳೆಯರೂ ಅಷ್ಟೇ, ಗಂಡನನ್ನು ಹೊರತುಪಡಿಸಿ ಇತರರ ಬಳಿ ಮಾತನಾಡಿಸಿದರೆ  ಸಮಾಜದಲ್ಲಿ ಅದು ತಪ್ಪೇ.... ಕಾರಣ? ಅವನು/ಅವಳು ಯಾರೆಂದು ಗೊತ್ತಿಲ್ಲ, ಅವರಿಬ್ಬರ ನಡುವೆ ಪರರು ಬಂದು ಕಡ್ಡಿ ಅಲ್ಲಾಡಿಸಲು ಕುಟುಂಬದ ಜನ ಬಿಡಬಾರದು. 
    ಒಂಟಿತನ ಮರ, ರಾಣಿ, ಪ್ರಾಣಿ,ಪಕ್ಷಿ, ಸಣ್ಣ ಸಾಕು ಪ್ರಾಣಿಗಳ ಕುರಿತಾದ ಹಲವು ಕಥೆಗಳಕೇಳಬೇಕು..
ಮುಂದುವರೆಯುವುದು....
@ಹನಿಬಿಂದು@

ಶನಿವಾರ, ಆಗಸ್ಟ್ 3, 2024

5 ಚುಟುಕುಗಳು

ಚುಟುಕು -1
ಆಂತರ್ಯ

ಅರವತ್ತಾದರೆ ಏನು ಮನಸು ಕುಗ್ಗಿಲ್ಲ
ಅನುಭವದ ಮೂಟೆ ಕಟ್ಟಿಕೊಂಡಿರುವೆ 
ನಗುವಿಗಂತೂ ಕೊರತೆ ಇದೆಯೆಂಬುದಿಲ್ಲ
ಮಕ್ಕಳು ಮರಿ ಜೊತೆ ಹೊಂದಿಕೊಂಡಿರುವೆ 

ಚುಟುಕು -2
ಫಲ
ಮಣ್ಣು ಅಗೆದೆ ಒಳ್ಳೆಯ ಮಣ್ಣು ಸಿಕ್ಕಿತು
ಮತ್ತೂ ಅಗೆದೆ ಶುದ್ಧೋದಕ ಸಿಕ್ಕಿತು
ಇನ್ನೂ ಅಗೆಯುತ್ತಲೇ ಇರಲು ತೊಡಗಿದೆ 
ಫಲವತ್ತಾದ ಆರೋಗ್ಯ ನನಗಾಗಿ ಸಿಕ್ಕಿತು..


ಚುಟುಕು -3
ಬಂತು
ಆಷಾಢ ಬಂತು ಹಿರಿಯರ ನೆನೆಯುತ್ತಾ
ಶ್ರಾವಣವು ಬಂತು ಹಬ್ಬಗಳ ತರುತ್ತಾ
ಮಳೆಯೂ ಬಂತು ಗುಡ್ಡಗಳ ಬೀಳಿಸುತ್ತಾ
ನಾವೂ (ಸತ್ತು) ಬದುಕಿಹೆವು ಮರಗಳ ಉರುಳಿಸುತ್ತಾ...

ಚುಟುಕು -4
ಪರಿಸ್ಥಿತಿ
ಮುತ್ತಜ್ಜಿ ಬಂದರು ಮತ್ತೆ ತಿರುಗಿ ಹೋದರು
ಅಜ್ಜಿ ಬಂದಿದ್ದರು ವಾಪಸ್ ಹೋದರು
ತಾಯಿ ಬಂದಿದ್ದಾರೆ ಮರಗಳ ನೆಟ್ಟಿಹರು 
ನಾ ಮನೆ ಕಟ್ಟಲು ಮರ ಹುಡುಕುತಿಹೆ...

ಚುಟುಕು -5
ಬರೆ 
ಅವರು ಮಹಾ ಬರಹಗಾರರು ನಿತ್ಯ
ಬರೆಯುವುದು ಮಾತ್ರ,  ಓದುವುದಿಲ್ಲ ಸತ್ಯ
ಕಾರಣ ಅವರಿಗೆ ತಿಳಿದುಹುದು ಎಂದಿಗೂ
ಅವರು ಬರೆದುದು ಅರ್ಥವಾಗಲಿಕ್ಕಿಲ್ಲ ಯಾರಿಗೂ

ಗುರುವಾರ, ಆಗಸ್ಟ್ 1, 2024

ಕವನ

ಒಂದಾಗಿ ಬಾಳೋಣ 

ಭಾರತ ಮಾತೆಯ ಹೆಮ್ಮೆಯ ಕುಡಿಗಳು
ಹೆದರದೆ  ಬೆದರದೆ ಬಾಳೋಣ
ಜಾತಿ ಧರ್ಮಗಳ ಮೇಲು ಕೀಳುಗಳ
ಮರೆಯುತ  ಹರುಷದಿ ನಲಿಯೋಣ//

ಹಸಿರ ಪರಿಸರ ಉಳಿಸುತ ನಿತ್ಯವು
ಕಾಡನು ಕಡಿಯದೆ ಬೆಳೆ ಬೆಳೆಸಿ
ಪ್ಲಾಸ್ಟಿಕ್ ಫೈಬರ್ ಎಸೆಯದೆ ಧರೆಗೆ
ಹಸಿ ಕಸ ಒಣ ಕಸ ಬೇರ್ಪಡಿಸಿ//

 ಸಹಕಾರ ಬೇಡಲು ನೋವಿಗೆ ಸ್ಪಂದಿಸಿ
ಸಹಾಯ ಹಸ್ತವ ಚಾಚೋಣ 
ಎದುರಿಗೆ ಬಂದರೆ ಕೋವಿಯ ಹಿಡಿದು
ಶಾಂತಿಯ ಮಂತ್ರವ ಕಲಿಸೋಣ//

ಹಿರಿಯರ ದಾರಿಯ ನೆನೆಯುತ ಸಾಗಿ
ಗೌರವ ನಮನದಿ ಬಾಗೋಣ 
ಹಿರಿ ಕಿರಿಯರಲಿ ಜ್ಞಾನವ ಹಂಚುತ
ಹೊಂದಾಣಿಕೆಯಲಿ  ಸಾಗೋಣ..

ಪ್ರೀತಿಯ ಸರ್ವೆಡೆ ಹಂಚುತ ನಾವು
ನಾಡಿನ ಸಂಸ್ಕೃತಿ ಉಳಿಸೋಣ
ಸಕಲ ಭಾಷೆಗಳ ಗೌರವಿಸುತಲಿ 
ಸರ್ವ ಸಮಾನತೆ ಸಾರೋಣ//
@ಹನಿಬಿಂದು@
24.07.2024

ಭಾನುವಾರ, ಜುಲೈ 21, 2024

ಗುರು ನಮನ

ಪ್ರಾರ್ಥನಾ ಗೀತೆ

ರಾಗ: ಸೋಜಿಗದ ಸೂಜಿ ಮಲ್ಲಿಗೆ 

ಓ ಗುರುವೇ....
ಕಾಯೋ ನಮ್ಮನು ವರವ ನೀಡುತಲಿ
ಓ ಗುರುವೇ ನೀನು
ರಕ್ಷಿಸೆಮ್ಮನು  ತಪ್ಪು ತಿದ್ದುತಲಿ..
ಕಂದರು ನಾವೆಲ್ಲ... ತಪ್ಪು ಸಹಜವು ತಾನೇ?
ಕ್ಷಮಿಸಿ ಪ್ರತಿ ಹೆಜ್ಜೆ ಹೆಜ್ಜೆಯಲೂ ...
ಓ ಗುರುವೇ ನಮ್ಮ....
ಕ್ಷಮಿಸಿ ಪ್ರತಿ ಹೆಜ್ಜೆ..... ಹೆಜ್ಜೇಗೂ ನಮ್ಮನ್ನು
ಒಳ್ಳೆಯ ಬದುಕು ನೀಡಯ್ಯಾ ..... .....
ಓ ಗುರುವೇ ನಮ್ಮ... ಕಾಯೋ..

ಕರ ಮುಗಿದು ಬೇಡುವೆ
ಹರಸೆಂದು ಕೇಳುವೆ
ಶಿರವನ್ನು ಬಾಗಿ ನಮಿಸುವೆನೂ...
ಓ ಗುರುವೇ ನಿಮಗೆ
ಶಿರವನ್ನು ಬಾಗಿ ನಮಿಸುವೆ ನಿತ್ಯವೂ
ಶಾಂತಿಯ ಬದುಕು ನೀಡಯ್ಯಾ .......
ಓ ಗುರುವೇ ನಮ್ಮ...ಕಾಯೋ....
@ಹನಿಬಿಂದು@
21.07.2024

ಪ್ರಾರ್ಥನಾ ಗೀತೆ

ಪ್ರಾರ್ಥನಾ ಗೀತೆ

ರಾಗ: ಸೋಜಿಗದ ಸೂಜಿ ಮಲ್ಲಿಗೆ 

ಓ ದೇವಾ....
ಕಾಯೋ ನಮ್ಮನು ವರವ ನೀಡುತಲಿ
ಓ ದೇವಾ ನೀನು
ರಕ್ಷಿಸೆಮ್ಮನು  ತಪ್ಪು ತಿದ್ದುತಲಿ..
ಕಂದರು ನಾವೆಲ್ಲ... ತಪ್ಪು ಸಹಜವು ತಾನೇ?
ಕ್ಷಮಿಸಿ ಪ್ರತಿ ಹೆಜ್ಜೆ ಹೆಜ್ಜೆಯಲೂ ...
ಓ ದೇವ ನಮ್ಮ....
ಕ್ಷಮಿಸಿ ಪ್ರತಿ ಹೆಜ್ಜೆ..... ಹೆಜ್ಜೇಗೂ ನಮ್ಮನ್ನು
ಒಳ್ಳೆಯ ಬದುಕು ನೀಡಯ್ಯಾ ..... .....
ಓ ದೇವ ನಮ್ಮ... ಕಾಯೋ..

ಕರ ಮುಗಿದು ಬೇಡುವೆ
ಹರಸೆಂದು ಕೇಳುವೆ
ಶಿರವನ್ನು ಬಾಗಿ ನಮಿಸುವೆನೂ...
ಓ ದೇವ ನಿಮಗೆ
ಶಿರವನ್ನು ಬಾಗಿ ನಮಿಸುವೆ ನಿತ್ಯವೂ
ಶಾಂತಿಯ ಬದುಕು ನೀಡಯ್ಯಾ .......
ಓ ದೇವ ನಮ್ಮ...ಕಾಯೋ....
@ಹನಿಬಿಂದು@
21.07.2024

ಗುರುವಾರ, ಜುಲೈ 18, 2024

ಅಪರ್ಣಾ ಗೆ ಅರ್ಪಣೆ

ಅಪರ್ಣಾ ಗೆ ಅರ್ಪಣೆ

ಬಂಧುಗಳು ಬಳಗದವರು
ಸ್ನೇಹಿತರು ಊರವರು
ಎಲ್ಲರೂ ನೆನೆಯುತಿಹರು
ಈಗ, ಎಲ್ಲಾ ಮುಗಿದ ಬಳಿಕ

ನೆನಪುಗಳ ಹಾಡುವರು
ಬರೆಯುವರು ಹೇಳುವರು
ಅಸೌಖ್ಯದ ಕಾರಣವ
ಇದೀಗ, ಎಲ್ಲಾ ಮುಗಿದ ಬಳಿಕ 

ರೇಡಿಯೋ ಧಾರಾವಾಹಿ
ಚಂದನದ ಕಾರ್ಯಕ್ರಮ
ನಿರೂಪಣೆ ನಟನೆ
ಅಂದದ ಕನ್ನಡಾಲಾಪನೆ 
ಇದೆಲ್ಲವೂ ನಿಂತಿತು
ಕರ್ನಾಟಕ ಬರಿದಾಯಿತು
ತುಂಬಲಾರದ ನಷ್ಟವಾಯ್ತು

ಹುಟ್ಟಿ ಬರಲಿ ಇನ್ನೂ
ನಿನ್ನಂಥ ಹೆಣ್ಣು ಮಗಳು
ಕನ್ನಡವ ಉಳಿಸಲು
ಕನ್ನಡಮ್ಮ ಹರಸಲು
ಬೆಳೆದು ಭಾಷೆ ಬೆಳೆಸಲು

ಕನ್ನಡ ನುಡಿ ನುಡಿಗಳಲಿ
ಇಲ್ಲಿ ನಿನ್ನ ಹೆಸರಿಹುದು
ಹೋಗಲಿಲ್ಲ ಮೆಟ್ರೋ ಧ್ವನಿ
ಎಂದೆಂದಿಗೂ ಶಾಶ್ವತ ಖನಿ 
ಸತ್ಯಕ್ಕೆ ಎಂದೂ ಸಾವಿಲ್ಲ
ಎಂದು ತೋರಿಸಿದ ಮಣಿ 
@ಹನಿಬಿಂದು@
12.07.2024

ಅಪ್ಪ

ಅಪ್ಪ

ಅದ್ಯಾವ ಉಡುಗೊರೆ ನಾ ಕೊಡಬಲ್ಲೆ ನಿನಗೆ
ನೀನೇ ನನ್ನುಸಿರು ಆಗಿರುವಾಗ
ಅದು ಯಾವ ರೀತಿಯ ಪೂಜೆ ಮಾಡಬಲ್ಲೆ
ನೀನೇ ಸರ್ವ ಕೊಡುಗೈ ಆದಾಗ


ಅದು ಯಾವ ಪದಗಳಿಂದ ತಾನೇ ಹಾಡಬಲ್ಲೆ 
ಎಲ್ಲ ಅಕ್ಷರ ಪದ ಪುಂಜಗಳೂ ನಿನ್ನದಾಗಿರುವಾಗ
ಅದು ಯಾವ ರೀತಿ ಭಜಿಸಿ ಸ್ತುತಿಸಬಲ್ಲೆ 
ಎಲ್ಲ ಭಜನೆ ಹಾಡು ಸ್ತುತಿಗಳೂ ನಿನ್ನದೇ ಆದಾಗ

ಅದೆಲ್ಲಿಯ ಮಂತ್ರ ತಂತ್ರ ಪೂಜೆಗಳು
ಹೃದಯದಲ್ಲಿ ನಿನ್ನ ಲಿಂಗ ಪ್ರತಿಷ್ಠಿತ ಆಗಿರುವಾಗ
ಅದೆಲ್ಲಿಯ  ವೃತ ಉಪವಾಸ ಪೂಜೆ
ನಾನು ನಿನ್ನಂಶ ಆಗಿರುವಾಗ

ಅದ್ಯಾವ ನೀತಿ ನಿಯಮ ಚೌಕಟ್ಟು
ನೀನೇ ಕೈ ಹಿಡಿದು ನಡೆಸುವಾಗ
ಅದು ಯಾವ ಪರಿಯ ಭಕ್ತಿ ಭಾವ
ಕನಸು ಮನಸಲ್ಲೂ ನೀನಿರುವಾಗ
@ಹನಿಬಿಂದು@
16.07.2024

ವರ

ವರ 

ವರ ಕೇಳಿದಳು ಆಕೆ
ದೀರ್ಘ ತಪಸ್ಸು ಮಾಡಿ
ಮುಂದಿನ ಜನ್ಮದಲಿ 
ಬಂಜೆಯಾಗದಿರಲೆಂದು..

"ತಥಾಸ್ತು" ಎಂದ ದೇವ
ಕಣ್ಮುಚ್ಚಿ ಕುಳಿತೇ !
ಮತ್ತೆ ತಿಳಿಯಿತು ಆಕೆಯ
ಪೂರ್ವ ಜನ್ಮದ ಪರಿ !!

"ವರವ ಕೊಟ್ಟಾಗಿದೆ
ಮಾತು ಉಳಿಸಬೇಕಿದೆ
ಮಾಡಲಿ ಇನ್ನೇನು?"
ಯೋಚಿಸಿದ ದೇವರು.

ಹುಟ್ಟಿಸಿದ ಮರವಾಗಿ!
ಹೂವಿಲ್ಲದ ಬೋಳು ಸಸಿಯಂತೆ!!
ಇದ್ದೂ ಇಲ್ಲದ ವೃಕ್ಷದಂತೆ!!
ಆಶೀರ್ವಾದಕ್ಕೆ ತಕ್ಕುದಾಗಿ!
ಬಂಜೆಯಲ್ಲದ ಬಂಜೆಯಾಗಿ!!

ಒಂದೇ ಕಾಯಾಗಿ ಹಣ್ಣಾಗಿ
ಬದುಕಿನಲಿ ಮುಕ್ತಿಗಾಗಿ!
ಮಾತು ಪರಿ ಪಾಲನೆಯಾಗಿ
ಕೊಟ್ಟ ವಾಕ್ಯದ ಸಲುವಾಗಿ!!
@ಹನಿಬಿಂದು@
08.07.2024

ಭಾನುವಾರ, ಜುಲೈ 7, 2024

ಬಿಸು

ಬಿಸು 

ಬಿಸು ಪರ್ಬ ಬತ್oಡ್ ಯೇ 
ಯುಗಾದಿ ಪನ್ ಪೆರ್ ಯೆ.....ನೆಕ್..
ಪೊಸ ವರ್ಷದ ಆರಂಭಯೇ
ನಮ್ಮ...  ತುಳುತ...ಪೊಸ ವರ್ಸ...

ಕುಲೆಕ್ಲೆ  ಪೂರ ಬಳಸ್ ದೀದ್ 
ಲತ್ ಬೀಜ ಪದೆಂಗಿ ಸಲಾಯಿ
ಪಾಯ್ಸ ತಿನ್ಕಯೆ ನಮಲ..
ಸೋಜಿ ಪರ್ಕಯೆ..

ಸೆಕೆ ಬೆಚ್ಚ ಪೂರಾ ಪೋದು
ಎಲ್ಯ ಕುಂಟು  ಗೆತೊಂದು ಬತ್ತ್
ಪಾಡ್ದ್ ಸೆಕನ್ ಮರಪುಗತ್ತೆ
ಕುಕ್ಕುದ ನಿನೆ ಇತ್ತೆ.. ಆಂಡ ನೀರ್ ಇಜ್ಜತ್ತೆ...

ಎಡ್ಡೆ ಪರ್ಬಯೇ ಉಂದು 
ಬತ್ತ್ ಪೋನಗ ತೂದು
ಪರತ್ ನ್ ನೂಕುದು
ಪೊಸ ಸಂವತ್ಸರ / ಬತ್ತ್ ದಾಂಡತ್ತೇ

ಸೂರ್ಯನ ಅತ್ತೆ ಚಾಲನೆ
ಚಂದಿರೆ ಅಡ್ಡ ಬರ್ಪಿನಿ
ಯಾವು ಪಂಡಲ  ಪೊಸತ್ ಕ್ರೋಧಿ 
ಬರಂದೆ ಕುಲ್ದುಂಡೆಯೇ
@ಹನಿಬಿಂದು@
10.04.2024

/

ಮಾನಾದಿಗೆ

ಮಾನಾದಿಗೆ

ಮಾನಾದಿಗೆ ಕೊರಿಯರೆ ನಮ
ಮಾನವೆರಾದ್ ಮಾನವತೆನ್ 
ಮೆರೆಯೊಡಾಯಿನ ಕಾಲ
ಇತ್ತೆ ಬೈದ್ oಡ್ ಅಣ್ಣಾ ಅಕ್ಕಾ ಅಕ್ಯೆರೆ 

ಕೊರ್ದು ಗೆತೊನ್ನ ಮನಸ್
ಉಡಲ್ ದಿoಜಿದಿ ಮೋಕೆಡ್ 
ಕಡಲ ಇಸ್ತಾರದ ಕುಸಿಟ್ 
ಮಾನಾದಿಗೆ ಕೊರ್ಪಿನವು 
ನಮ್ಮ ತುಳುವೆರೆ ಕಟ್ಟ್ 

ಐಸಿರದ ಮಾನಾದಿಗೆ
ಗೆತೊನರೆಗ್ಲಾ ಪುಣ್ಯ ಬೋಡು 
ಕೊರ್ಪಿನ ಕೈಕ್ ಲಾ ತಾಕತ್ ಬರೊಡು 
ಮನಸ್ ಮೈದಾನ ಅವೊಡು 
ಪರಪ್ಪತ್ತಿಗೆ ತೂಪಿನoಚ ಆವೋಡು

ಮಾನಾದಿಗೆ ಕೊರೊಡು 
ಮಾನಾದಿಗೆ ಗೆತೊನೊಡು 
ಕೊಚ್ಚೊನರೆ ಬಲ್ಲಿ ಏಪಲ 
ಯಾನ್ ಎನ್ನನೇ ಪನ್ಪಿನ 
ಮೂಲು ದಾಲ ಇಜ್ಜಿ 
ಬನ್ನಗ ಪೋನಗ ಕಾಲಿ
ಕೈಲ ಮೈಲ ಮಾತ್ರ!
ತಿಕ್ಕಿನ ಮಾನಾದಿಗೆಲ
ಮೂಲೆ ಬಾಕಿ!
@ಹನಿಬಿಂದು@
07.05.2024

ಪಿಟ್ಟಿ ಕತೆ

ಪಿಟ್ಟಿ ಕತೆ

ಮದಿಮೆ 
"ಬೋಡಿತ್ತ್ಂಡಾ ಎಂಕ್ ಈ ಮದಿಮೆ? " ರೇಖಾ ಎನ್ನ್ ಎನ್ನ್ ದ್ ಬುಲಿತೊಂದು ಇತ್ತಲ್. ಪದಿನೈನ್‌ ವರ್ಸ ಮೋಕೆ ಮಲ್ತ್ ದ್ ಮದಿಮೆ ಆಯಿನ , ಅಪ್ಪೆನ ಮೋಕೆ ಕೊರುವೆ ಪಂದ್ ಎನ್ನಿನ ಕಂಡನಿ ಮದಿಮೆ ಆಯಿನ ರಾತ್ರೆಡ್ ಗೊತ್ತಾಂಡ್, " ಆಯೆ ಊರುಡು ಬಾರೀ ಪುದರ್ ಪೋಯಿನ ಡಾಕ್ಟರ್. ಆಂಡ ಆಯೆ ಆಣ್ ಅತ್ತ್. ಆಂಡ ಇತ್ತೆ ದಾದ ಮಲ್ಪುನಿ ಏರೆಡ ಪನ್ಪಿನಿ ಎನ್ನ ಕಷ್ಟ? ವಾ ಆಣ್ ಬತ್ತ್ ಕೇಂಡಲಾ ಬೊರ್ಚಿ ಪಂದ್ ಕಡೆಕ್ ದೇವೆರ್ ಎಂಕ್ ಕೊರ್ನಿ ಉಂದುವೆ ಸಿಕ್ಷೆ . ಇತ್ತೆ ಎರೆನ್ ಪಂಡಲಾ ತಪ್ಪೆ! ಈ ಜನ ಒಂಜಿ ದಿನಲೂ ನೆತ್ತ ಬಗ್ಗೆ ಎನಡ ಪಂತಿಜೆರ್. ಮಲ್ಲ ಮೋಸ. ಆಯಿನ ಆವಡ್ ಬದ್ಕ್ ತ್ಯಾಗ ಮಲ್ಪುವೆ" ಎನ್ಕ್ ದ್ ಕಣ್ ಮುಚ್ಚಿದ್ ಜೆತ್ತಲ್.
@ಹನಿಬಿಂದು@
16.05.2024

ತುಳು ಗಝಲ್

ಗಝಲ್ (ತುಳು)

ಬೇನೆ ತಿನ್ಪಿನ ಮನಸ್ ದೇವೆರ್ ಪೊಣ್ಣಗಾದೇ ಕೊರ್ತಿನ 
ನೇನೆ ದಾಲ ಇಜ್ಜಿ ನೆಟ್, ಬೇನೆಗ್ ಆಲಾದೇ ಬೂರುನಾ 

ಬದ್ ಕ್ ಪಂಡ ಯಾನ್, ಎನ್ನ  ಮಾತ್ರ ಅತ್ತಾ ಏಪಲಾ
ನಮ, ನಮಕ್ ಪನ್ಪಿನ ಯೋಚನೆ ಅಲೆನವಾದೇ ಇಪ್ಪುನಾ

ಮೆಗ್ಯೆ ಪಲಯೆ ಅಮ್ಮೆರ್ ಕಂಡನಿ ಅಜ್ಜೆರ್ ದೋಸ್ತಿಲು ಉಲ್ಲೆರ್
ಮಾನ ಪೋನಗ ದ್ರೌಪತಿಲಾ ದೇವೆರೆನ್ ಲೆಪ್ಪೊಡಾದೇ ಬತ್ತಿನಾ

ಇಡೆ ಬೈದಿನಿ ಒರಿಯೆ ಕಡೆಕ್ ಪಿರ ಪೋಪಿನಿಲಾ ಒರಿಯೆ 
ನಾಲ್ ದಿನೊತ ಕುಸಿಕ್ ನಮ ತ್ಯಾಗ ಮಲ್ತ್ ದೇ ಬದುಕುನಾ

ಮೋಕೆ, ಪ್ರೇಮ, ಸತ್ಯ, ನೀತಿ, ನಿಯಮ ಮಾತೆರೆಗ್ಲ ಒಂಜೇ
ಪನಿ ಬರ್ಸದ ಲೆಕ್ಕನೇ ಮಾತಾ ದಿನಲ ನಲಿತೊಂದೇ ಬೂರುನಾ
@ ಹನಿಬಿಂದು@
27.05. 2024

ತುಳು ಗಝಲ್

ಗಝಲ್ (ತುಳು)

ಬೇನೆ ತಿನ್ಪಿನ ಮನಸ್ ದೇವೆರ್ ಪೊಣ್ಣಗಾದೇ ಕೊರ್ತಿನ 
ನೇನೆ ದಾಲ ಇಜ್ಜಿ ನೆಟ್, ಬೇನೆಗ್ ಆಲಾದೇ ಬೂರುನಾ?

ಬದ್ಕ್ ಪಂಡ ಯಾನ್, ಎನ್ನ  ಮಾತ್ರ ಅತ್ತಾ ಏಪಲಾ,
ನಮ, ನಮಕ್ ಪನ್ಪಿನ ಯೋಚನೆ ಅಲೆನವಾದೇ ಇಪ್ಪುನಾ?

ಮೆಗ್ಯೆ, ಪಲಯೆ, ಅಮ್ಮೆರ್, ಕಂಡನಿ, ಅಜ್ಜೆರ್, ದೋಸ್ತಿಲು ಉಲ್ಲೆರ್
ಮಾನ ಪೋನಗ ದ್ರೌಪತಿಲಾ ದೇವೆರೆನ್ ಲೆಪ್ಪೊಡಾದೇ ಬತ್ತಿನಾ?

ಇಡೆ ಬೈದಿನಿ ಒರಿಯೆ, ಕಡೆಕ್ ಪಿರ ಪೋಪಿನಿಲಾ ಒರಿಯೆ !
ನಾಲ್ ದಿನೊತ ಕುಸಿಕ್ ನಮ ತ್ಯಾಗ ಮಲ್ತ್ ದೇ ಬದುಕುನಾ?

ಮೋಕೆ, ಪ್ರೇಮ, ಸತ್ಯ, ನೀತಿ, ನಿಯಮ ಮಾತೆರೆಗ್ಲ ಒಂಜೇ!
ಪನಿ ಬರ್ಸದ ಲೆಕ್ಕನೇ ಮಾತ ದಿನಲ ನಲಿತೊಂದೇ ಬೂರುನಾ?
@ ಹನಿಬಿಂದು@
27.05. 2024

ಕುಪುಲು

ಜೋಕ್ಲೆನ ಬರವು (ಶಿಶು ಗೀತೆ)

ಕುಪುಲೋ ಕುಪುಲೊ 
ಓಡೆ ಪೋಪ ಕುಪುಲೋ 
ಮಲ್ಲಕ್ಲೆಗ್ ಬಾರ್ ಗುದ್ದೆರೆ ಪೋಪೆ 
ಬಾರ್ ಡ್ ಏರ್ ಉಲ್ಲೆರ್ 
ಬಾರ್ ಡ್ ಪುರಿಕುಲು ಉಲ್ಲೆರ್ 
ಪುರಿಕುಲು ದಾದ ಕೊರ್ಪೆರ್ 
ಪುರಿಕುಲು ತಿನಿಯೆರೆ ತಿಕ್ವೆರ್ 
ಪುರಿ ತಿಂದ್ ದ್ ದಾದ ಮಲ್ಪುವ
ಬಿನ್ನೆರೆಗ್ ದೋಸೆ ಮೈಪುವೆ
@ಹನಿಬಿಂದು@
07.07.2024

ಬರಬೇಕು

ಬರಬೇಕು (ವಿಡಂಬನೆ)

ಬರಬೇಕು ಬರಬೇಕು ನಮ್ಮನೆಗೆ ತಾವು
ಬರುವಾಗ ಕಳೆಯಲಿ ಒಂದಷ್ಟು ನೋವು

ಸಹಾಯ ನೀಡಲು ಮುಂದೆ ಬರಬೇಕು
ವಿಹಾರ ಹೋಗಲೂ ಸಹಕರಿಸಬೇಕು
ಸಹವಾಸ ದೋಷದಲಿ ನಾವ್ ಬೆಳೆಯಬೇಕು
ಮಹಾಜನಗಳಂತೆ ನಾವ್ ಗಳಿಸಬೇಕು

ಬರುವಾಗ ತಿಂಡಿ ತೀರ್ಥ ಸಿಹಿ ತರಲು ಮರೆಯದಿರಿ
ಹೋಗುತ್ತ ಮಕ್ಕಳಿಗೆ ಧನ ದಾನ ತೊರೆಯದಿರಿ
ಹಿರಿಯರಿಗೆ ಮದ್ದಿಗೆ ಕೈಲೊಂದಿಷ್ಟು ಇರಲಿ
ಕಿರಿಯರ ಓದಿಗೆ ಸಹಾಯ ಆಗುವಂತಿರಲಿ

ಆಗಾಗ ಬರುತ್ತಿರಿ ನಮ್ಮನೆಗೆ ನೀವು
ಬರುವಾಗ ಖಾಲಿ ಕೈ ತರದಿರಿ ತಾವು
ಹೊಸದೇನೂ ಇಲ್ಲ ಸ್ನೇಹ ತೊರೆಯದಿರಿ
ಹಳೆಯ ನೋವನು ಮರೆತು ನಮ್ಮನ್ನು ಕರೆಯುತಿರಿ..
@ಹನಿಬಿಂದು@
07.07.2024

ಗುರುವಾರ, ಜೂನ್ 27, 2024

ಸತ್ಯಕ್ಕೆ ಸತ್ವವಿಲ್ಲ

ಸತ್ಯಕ್ಕೆ ಸತ್ವವಿಲ್ಲ 

ಮನದ ಭಾವವೆಲ್ಲ ಇಂದು
ಬತ್ತಿ ಹೋದ ಹಾಗಿದೆ
ಹಕ್ಕಿ ಹಾರಿ ಹೋಗಿ ತಾನು
ಮರದ ಮೇಲೆ ಕುಳಿತಿದೆ

ಹಿಗ್ಗಿನಿಂದ ಬೇರೆ ಮರಿಗೆ
ಗುಟುಕು ನೀಡಿ ಸಲಹಿದೆ
ಬೇಡ ಬೇಡವೆಂದು ತನ್ನ
ಬಳಿಯೆ ಕರೆದುಕೊಂಡಿದೆ

ಕಣ್ಣೀರೆಲ್ಲ ಹೆಪ್ಪುಗಟ್ಟಿ
ಮಂಜುಗಡ್ಡೆಯಾಗಿದೆ
ನೋವ ಕಡಲು ಉಕ್ಕಿ ಹರಿದು
ಸಾವು ಸನಿಹ ಕರೆದಿದೆ

ಬೇನೆ ಬೇಸರೆಲ್ಲ ಸೇರಿ
ಯಾಕೋ ನಗೆಯು ಮಾಸಿದೆ
ಆದರೇನು ತನಗೆ ತಾನೇ
ಸರಿಯ ಪಡಿಸದಾಗಿದೆ

ಬೇರೆ ಬೇರೆ ಮನವು ನಿತ್ಯ
ಆಲೋಚನೆ ಬೇರೆ ಸತ್ಯ
ನಂಬಿಕೆಯೂ ಆಯ್ತು ಮಿಥ್ಯ
ಭರವಸೆಗೆ ಇಲ್ಲ ಸತ್ವ

@ಹನಿಬಿಂದು@
28.06.2024