[12/28/2020, 10:25 AM] @PREM@: ಚುಟುಕು
ಜೀರುಂಡೆಯಂತೆ ಸುಂಯ್ ಗುಡಬೇಕು ಕವಿಯ ಚುಟುಕು
ಅದರಂತೆಯೇ ಕುಟುಕಬೇಕು ಚುಟುಕಿನ ಬಳುಕು!
ಮಾಡಿ ಬರೆ ಬಹಳವೇ ಮೊಟಕು
ಕುಡಿದಂಗಾಗಲಿ ಮಲೆನಾಡ ಕಾಫಿಯ ಗುಟುಕು!
@ಪ್ರೇಮ್@
28.12.2020
🐞🐞🐞🐞📚📚📚📚
[12/28/2020, 12:08 PM] @PREM@: ಚುಟುಕು-2
ಮಸ್ತಕವೆಂಬ ಪುಸ್ತಕವ ಓದಿದವರುಂಟೆ ಜಗದಲಿ
ಪ್ರಸ್ತುತ ಕಾಲದಲಿ ನಿಜವರುಹರುಂಟೆ ಜಗದಲಿ
ಹಸ್ತ ರೇಖೆಯಲಿ ಅದೇನಿಹುದೋ ಭವಿಷ್ಯದಲಿ
ಕರವಿಲ್ಲದವನಿಗೂ ಕೋಟ್ಯಾಧೀಶನಾಗುವ ಭರವಸೆಯಿದೆ ಬದುಕಲಿ!!!
@ಪ್ರೇಮ್@
28.12.2020
📚📚📚📚🐞🐞🐞🐞
[12/28/2020, 12:18 PM] @PREM@: ಚುಟುಕು-3
ಮಂಡೆಯಲಿ ಏನಿಲ್ಲದವರಿಗೂ ಹಲವರ ನಗಿಸೊ ಗುಣವಿಹುಹುದು
ಹಂಡೆಯಲಿ ಬಿಸಿಯಾಗಿಸಿದ ನೀರೇ ಉತ್ತಮವದು
ಜೀರುಂಡೆಯಲೂ ಝೇಂಕಾರದ ಸಂಗೀತವಿಹುದು
ನದಿದಂಡೆಯ ಸೊಬಗ ಸವಿಯುವ ಜನವಿಹುದು.!!!
@ಪ್ರೇಮ್@
28.12.2020
🐞🐞🐞🐞📚📚📚📚
[12/28/2020, 12:25 PM] @PREM@: ಚುಟುಕು-4
ಬಹು ಬೇಡಿಕೆಗಳಿಲ್ಲ ಈತ್ತೀಚೆಗೆ ಪುಸ್ತಕಕೆ
ಕವಿಗಳಿಗೆ ಓದುವುದು ತುಸು ವಾಡಿಕೆ
ದೇಶ ಸುತ್ತಿದಂತೆ ಕೋಶ ಓದಲೂ ಬೇಕಲ್ಲವೇ?
ಜ್ಞಾನದರಿವ ಹೆಚ್ಚಿಸಲು ತಂತ್ರಜ್ಞಾನ ಸಾಕಲ್ಲವೇ!!!
@ಪ್ರೇಮ್@
28.12.2020
📚📚📚📚🐞🐞🐞🐞
[12/28/2020, 12:28 PM] @PREM@: ಚುಟುಕು-5
ಜೀರುಂಡೆಯ ಹಿಡಿದು ಬೆಂಕಿ ಪೆಟ್ಟಿಗೆಯೊಳಗ್ಹಾಕಿ
ಶಾಲೆಗದನು ಕೊಂಡ್ಹೋಗಿ ನೆಲದ ಮೇಲ್ಹಾಕಿ
ಗಣಿತದವಧಿಯಲಿ ಕಿರ್ರೆನ್ನೆನುವ ಸಂಜ್ಞೆಯನು ನೀಡಿ
ಕಾಲಲಿ ಒತ್ತಿದರೂ ಅದು ಕಿರ್ರೆನುವುದೇ ನೋಡಿ!
@ಪ್ರೇಮ್@
28.12.2020
🐞🐞🐞🐞📚📚📚📚
[12/28/2020, 12:30 PM] @PREM@: ಚುಟುಕು-6
ಓದುವ ಹವ್ಯಾಸವದು ಹೆಚ್ಚಿಸುವುದು ಜ್ಞಾನವನು
ಗೋಂದಿನ ಗುಣವದು ಅಂಟಿಸುವುದು ಪುಟವನು
ಮೋದದಿ ಕಲೆತು ಒಂದಾಗಿಸಬೇಕು ಕುಟುಂಬವನು
ಹೋದ ಮೇಲೆ ಬರಲುಂಟೆ ಬಿಟ್ಟೀ ಜಗವನು???
@ಪ್ರೇಮ್@
28.12.2020
📚📚📚📚🐞🐞🐞🐞
[12/28/2020, 12:33 PM] @PREM@: ಚುಟುಕು-7
ಉಂಡೆ ಕಟ್ಟಲಾರದು ಗುಂಯೆನುವ ಜೀರುಂಡೆ
ಮಂಡೆ ಬಿಸಿ ಮಾಡಬಾರದು ಗಂಡೆ
ರಜೆಯು ಸಿಗುವುದು ಬಂದೊಡನೆ ಪ್ರತಿ ಸಂಡೆ
ಮುಚ್ಚಲಾಗದು ಜನರ ಬಾಯೆಂಬ ಹಂಡೆ!!!
@ಪ್ರೇಮ್@
28.12.2020
📚📚📚📚🐞🐞🐞🐞
[12/28/2020, 12:37 PM] @PREM@: ಚುಟುಕು-8
ಮೊಟಕಾಗಿಹ ಚುಟುಕಲೂ ಇಹುದು ವಸ್ತು!
ಕುಟುಕುವುದು ಸಮಾಜದ ತಪ್ಪುಗಳ, ಬಳಸಿ ಶಿಸ್ತು!
ಗುಟುಕು ನೀರನು ಕುಡಿದು ಹೇಳು ತಥಾಸ್ತು!
ಓದಿದ ಬಳಿಕ ಓದುಗನಿಗಾಗಬಾರದು ಸುಸ್ತು!!!
@ಪ್ರೇಮ್@
28.12.2020
🐞🐞🐞🐞📚📚📚📚
[12/28/2020, 12:40 PM] @PREM@: ಚುಟುಕು-9
ಮಸ್ತಕವೆಂಬ ತೋಟದೊಳಡಗಿದೆ ಹಲವು ವಿಚಾರ
ಪುಸ್ತಕಕಿಳಿಸೆ ಓದಿ ತಿಳಿವರು ಜನ ಸುವಿಚಾರ
ಗಸ್ತು ತಿರುಗುವ ಪೋಲೀಸನಿಗೂ ಇರಬೇಕು ಆಚಾರ-ವಿಚಾರ
ಎಲ್ಲದಕೂ ಸರ್ವಕಾಲದೊಳು ನೆಟ್ಟಗಿರಬೇಕು ಗ್ರಹಚಾರ!!!
@ಪ್ರೇಮ್@
28.12.2020
📚📚📚📚🐞🐞🐞🐞
[12/28/2020, 12:58 PM] @PREM@: ಚುಟುಕು-10
ಜೀರುಂಡೆಯ ಸಂಗೀತಕೆ ಮಳೆತರುವ ಉನ್ಮಾದ
ಮನಕಲುಕುವ ಬಡವನ ಬದುಕಿಗೆಲ್ಲಿಯ ವಾದ?
ಹದವರಿತು ನಡೆದಲ್ಲಿ ಬದಲಾವಣೆ ಬರದೆ?
ಮದವಿರಲು ಜಗದಲ್ಲಿ ಜನ ಮೇಲೇರಬಹುದೆ?
@ಪ್ರೇಮ್@
28.12.2020
🐞🐞🐞🐞📚📚📚📚
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ