ಶುಕ್ರವಾರ, ಜನವರಿ 1, 2021

ಗಡಿಗೆ

ಗಡಿಗೆ

ಮಣ್ಣಿನ ಗಡಿಗೆಯ ಮಾಡಿಹ ಕುಂಬಾರ
ಕಣ್ಣಿಗೆ ಚಂದವ ತೋರುವ ಸೃಷ್ಟಿಯು
ಬೆಣ್ಣೆಯ ತರಹದ ಮನವನು ಇಟ್ಟು
ಸುಣ್ಣದ ಹೃದಯವು ಹಲಜನಕೆ ಧರೆಯಲಿ..

ಮಡಿಕೆಯು ನುಣ್ಣಗೆ ಹದದಲಿ ಬೆರೆಸಿದೆ
ಕುಡಿಕೆಯು ಹಲವು ಬಳಿಯಲಿ ನಿಂತಿವೆ
ಸಡಿಲಿಕೆಯಿಲ್ಲವು ಪಾಪ ಪುಣ್ಯದಿ
ಕಡಿದಾದ ದಾರಿಯು ಬದುಕಿನ ಕ್ಷಣದಲಿ..

ಜರಡಿಯನಾಡಿಸಿ ತಂದಿಹ ಧರೆಗೆ
ಕರಡಿಯ ಹಾಗೆ ಕುಣಿಯಲು ಬುವಿಗೆ
ಹರಡಿರಿ ಹೆಸರನು ಜಗದಲಿ ಪ್ರೀತಿಗೆ
ಗರಡಿಯಲೆಂದು ಪಳಗುತ ಅಡಿಗಡಿಗೆ..

ಕುಂಬಾರ ತಾನಿಹ ನೋಡುತ ಕೆಳಗೆ
ಮಂದಾರ ಹೂವಿನಂತೆ ಬೀರುತ ಕಿರುನಗೆ
ಜಂಜಾಟ ನೀಡಿ ಬದುಕಿಹ ಜೀವಿಗೆ
ಮಂಗಾಟವಾಡುತ ಕಳೆವೆವು ಪ್ರತಿ ಧಗೆ!
@ಪ್ರೇಮ್@
24.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ