ಮಕ್-ಕಳು
ಕಳುವಾಗಬಾರದು ನಮ್ಮ ಮಕ್ಕಳು
ಕಳುವಾದರೆ ಕಷ್ಟ ಅವರ ಹುಡುಕಲು
ಮೆಕ್ಕಕ್ಕೇ ಹೋದರೂ ಹಿಂದಿರುಗಿ ಬರುವಂತಾಗಬೇಕು ಮಕ್ಕಳು
ಅದಕೆಂದೇ ಕಲಿಸಿ ಕರಾಟೆ ದಿನಾಲು
ತನುವಲಿ ಶಕ್ತಿಯ ಹೆಚ್ಚಿಸೆ ಬೇಕು
ಮನದಲಿ ಭಕ್ತಿಯ ಉಳಿಸಲು ಬೇಕು
ಮನಸಲಿ ಧೈರ್ಯವ ತುಂಬಲು ಬೇಕು
ಬಾಳಲಿ ನಗುವನು ಚೆಲ್ಲಲು ಬೇಕು..
ಕಟ್ಟಿಗೆ ತುಂಡಾದರು ತುಂಡರಿಸಲು ಸೈ
ಹೆಂಚಾದರೂ ಸಾಕು ಒಡೆಯಲು ಕೈ
ಮಿಂಚುವ ಬಾಳಿಗೆ ಹೇಳಿರಿ ಜೈ
ಹೆಣ್ಣದು ಮಾಡುವಳು ರಕ್ಷಣೆ ತನ್ನ ಮೈ
ಕಲಿತೊಡೆ ಕರಾಟೆ ಬಗ್ಗಿಸಿ ಮೈಕೈ
@ಪ್ರೇಮ್@
19.12.2020
🐍🐍🐍🐍
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ