ಶುಕ್ರವಾರ, ಆಗಸ್ಟ್ 31, 2018

441. What's what

Who's what
When we watch
With witty warm
Wonder....
Wonderful or weak..
Worry or weary..
From west
or whatever ...
Which wind we
would want..
Wao work !
well will..
Why worry?
Wet weather..
who's way ..
Whole for wheat ..
When winding
Who worry..
Worth winning..
We'll wait..
Wear white wit..
Without words..
@prem@

ಗುರುವಾರ, ಆಗಸ್ಟ್ 30, 2018

440. ಕವನ-ಪುಟ್ಟಿ

ಪುಟ್ಟಿ

ನಮ್ಮ ಪುಟ್ಟಿ ಬಹಳ ತುಂಟಿ
ತಮ್ಮನೊಡನೆ ಜಗಳಗಂಟಿ
ಮಾಡುತ್ತ ಸದಾ ತರ್ಲೆ ತಂಟೆ
ಕೂರುವಳು ನಿತ್ಯ ಅಮ್ಮಗಂಟಿ..

ಓದು ಬರಹದಲ್ಲಿ ಎಂದೂ ಮುಂದು
ಓಟ ಆಟದಲ್ಲು ತಾನೇ ಮುಂದು
ಊಟ ತಿನ್ನಲು ತಾನು ಹಿಂದೆ
ಕುರುಕುರು ತಿಂಡಿ ತಿನಲು ಮುಂದೆ ಮುಂದೆ..

ಸಣ್ಣ ಸಣ್ಣ ವಸ್ತು ಬೇಕು
ಆಟಕೆಲ್ಲ ಜನರು ಸಾಕು
ಟಿವಿ ಮೊಬೈಲ್ ಎಲ್ಲ ಬೇಕು
ಅಮ್ಮ ನನಗೆ  ಕೈ ತುತ್ತು ಹಾಕು..

ಮನದ ಒಳಗೆ ಅಪರಂಜಿ
ಒಂದೆ ಓಟ ಅಪ್ಪಗಂಜಿ
ಎಲ್ಲರ ಮುದ್ದು ಪುಟಾಣಿ
ತಿನ್ನುಲಿಷ್ಟ ಹುರಿದ ಬಟಾಣಿ..
@ಪ್ರೇಮ್@
💞💞💞💞💞💞💞ಪ್ರೇಮ್ ಸರ್ ಅವರ ತುಂಟಿ ಎಂಬ ಕವನ 👌👌👌👌

೧ ತುಂಟ ಎಂದಾಕ್ಷಣ ಎಲ್ಲರೂ ಕೃಷ್ಣನ ಬೆನ್ನು ಬಿದ್ದಿದ್ದಾರೆ ಅಂತ ಕಾಣಿಸುತ್ತೆ ಆದ್ರೆ ನೀವು ವಿಭಿನ್ನವಾಗಿ ನಿಮ್ಮ ಕಂದನ ಬೆನ್ನು ಬಿದ್ದಿದ್ದೀರಾ ತುಂಬಾ ಸೊಗಸಾಗಿ ಮೂಡಿ ಬಂದಿದೆ 👌👌👌👌👌👌👌👌

೨ ಮಕ್ಕಳ ತುಂಟಾಟಗಳು ಅವರು ಚೆಲ್ಲಾಟಗಳು ಅವರ ವಾರೆ ನೋಟ ಗಳು ಅವರು ಸುಂದರೇಶ್ಗೆ ನಿಮ್ಮ ಕವನದ 👍👍👍👍👍👍👍👍ಮೂಲಕ ನಿರೂಪಿಸಿದ್ದಾರ

೩ ಹೀಗೆ ಸಾಗುತ್ತಿರಲಿ ನಿಮ್ಮ ಬರವಣಿಗೆಯ ಪರ್ವ ಶುಭವಾಗಲಿ ನಿಮಗೆ ಒಂದು ಉತ್ತಮ ಕವನವನ್ನು ಬಳಗಕ್ಕೆ ನೀಡಿದ್ದಕ್ಕೆ ಧನ್ಯವಾದಗಳು  🙏🙏🙏🙏🙏🙏🙏🙏

❤ತುರುವೇಕೆರೆ ❤

439. ಕವನ-ಖಾದ್ಯ

ಖಾದ್ಯ

ಅಬ್ಬಬ್ಬ ಎಷ್ಟೊಂದು ಖಾದ್ಯ
ಇದನ್ನು ಮರೆಸಿಲ್ಲ ಮಾಡೆರ್ನಿಟಿ ಸದ್ಯ!

ಬಿಸಿಬಿಸಿ ವಡೆ ಬೋಂಡ ಬಜ್ಜಿ
ನೆನಪಾಗುವಳು ಅಜ್ಜಿಗೆ ಅಜ್ಜಿ!!

ಘಮ್ಮೆನುವ  ತರತರ ಮಸಾಲೆ
ಬೆರೆಸಿಹುದು ಟೇಸ್ಟ್ ಪೌಡರ್ ಅಲ್ಲೆ

ಉಪ್ಪುಪ್ಪು ವೆಜಿಟೇಬಲ್ ಬಾತ್
ಹುಳಿಹುಳಿ ಟೊಮೆಟೋ ಸಾಸ್
ಖಾರಖಾರ ಮಸಾಲ ನೂಡಲ್ಸ್
ಸಿಹಿಸಿಹಿ ಪಿಝಾ ಬರ್ಗರ್!!!

ಮುಂದಿನ ಜನ್ಮವಿದ್ದರೆ ಅಜ್ಜಿಯಂತೆ
ಫೇಮಸ್ ಆಗ್ಬೇಕು ಟೇಸ್ಟಿಗೆ
ಕಲಿಸಬೇಕು ನಮ್ಮ ಮೇಸ್ಟ್ರಿಗೆ!!

ಹೊಟ್ಟೆಯ ಸವರುತ ಮಲಗಿದೆ  ನಾನು
ಅಜ್ಜಿಯ ಕೈರುಚಿ ಉಂಡೆನು ನಾನು
ಮರೆಯಲಾರೆ ರುಚಿಯ ತಿಂದರೆ ನೀನು!!
@ಪ್ರೇಮ್@

ಪ್ರೇಮ್ ಸರ್🙏🏼..

ನೋಡು..

👉ನೋಡಿದೆ‌..ಚೆನ್ನಾಗಿದೆ... ಅಮ್ಮನಡುಗೆಯಲಿ..ರುಚಿ ಮಾತ್ರ ವಲ್ಲ...

👉ಪ್ರೀತಿಯ ಮಹಾಪೂರವೇ..ತುಂಬಿದೆ..

👉ಅಡುಗೆಯಲ್ಲಿ... ಅನಾರೋಗ್ಯ ಕೆ.ಔಷಧ ವನೂ...ಕೊಡುವಳು..
ಒಳಿತಿಗೆ..ಬೈದಾದರೂ..
ಎಂದು..ತಿಳಿ ಹೇಳಿದ.‌.

ಕವನಕ್ಕೆ..
ಧನ್ಯವಾದಗಳು🙏🏼💐

ಎಸ್. ನಾಗಮ್ಮ

438-ಕವನ-ಒಮ್ಮೆ

ಒಮ್ಮೆ

ಮಡದಿ ಮುಂದಿಟ್ಟಳು ತಟ್ಟೆ ಯಲ್ಲಿ
ಮಾಮೂಲಿ ಚಿತ್ರಾನ್ನ

ಸುರಿದಳು ಅನ್ನ ಸಾರು ಪಲ್ಲೆ
ಹಿಂದಿನ ರಾತ್ರಿ ಉಳಿದ ಸಾರನ್ನ!!

ಮೈಸೂರು ಪಾಕ್ ತಂದಳಾಕಿ ಪಕ್ಕದ
ಮನೆಯಾಂಟಿ ಕೊಟ್ಟ ಪಾರ್ಸೆಲನ್ನ

ಪ್ರೀತಿಯಿಂದ ನನ್ನೆಡೆ ನೋಡಿದಳಾಕಿ
ಇವನೆಲ್ಲ ತಿಂದಾನು ಇದನ್ನ!!

ಅವಳ ಅಡುಗೆಯಂದ್ರ  ಎಲ್ಲೋ
ಓಡಿ ಹೋಗುತ್ತೆ ನನ್ನ ಪ್ರಾಣ!!!

@ಪ್ರೇಮ್@

437. ಕವನ-ಅಡುಗೆ

ಅಡುಗೆ

ನನ್ನವನ ಅಡಿಗೆ
ಹೊಸ ಮುತ್ತಿನ ಸರ ಇದ್ದಂತೆ

ತಿಂದರೆ ಮತ್ತೆ ಮತ್ತೆ
ಬಾಯಿ ಚಪ್ಪರಿಸುತಲಿರಬೇಕು

ತಿನ್ನದಿರೆ ಕಣ್ಣು ರಾವಣನಂತಾಗುವುದು..

ಹೊಗಳಿದರೆ ಮರುದಿನ ಮತ್ತೊಂದು
ಸಿಹಿ ರೆಡಿಯಾಗುವುದು

ತೆಗಳಿದರೆ ಮರುದಿನ ನಾನೇ
ಅಡಿಗೆ ಮಾಡಬೇಕಾಗುವುದು!!

ದಿನವೂ ತಿಂದು ತಿಂದು
ನಾನಾಗಿರುವೆ ಗುಂಡು ಗುಂಡು!!

@ಪ್ರೇಮ್@

ಬುಧವಾರ, ಆಗಸ್ಟ್ 29, 2018

436. ಭಾವಗೀತೆ-13

ನೋಡು

ತಿಂದು ನೋಡು ಸವಿದು ನೋಡು
ಅಮ್ಮನಡಿಗೆಯ ರುಚಿಯಾ
ಎಲ್ಲೇ ಹೋದರು ಏನೇ ಬಂದರೂ
ಬಿಡಲೊಲ್ಲೆ ಆ ಸವಿಯಾ..

ಜ್ವರವೇ ಬರಲಿ ಶೀತವೆ ಇರಲಿ
ಊಟವೇ ಮದ್ದು
ತಿನ್ನದೆ ಹೋದರೆ ಬಿಡಳು ಎಂದು
ಕೊಟ್ಟಾದರು ಗುದ್ದು..

ಏನನು ಮರೆತರೂ ಎಲ್ಲೇ ಹೋದರು
ಮರೆಯಲಾರೆ ನೀ
ಅಪ್ಪನ ಪ್ರೀತಿ ಅಮ್ಮನ ಕೈ ರುಚಿ
ತೊರೆಯಲಾರೆ ನೀ..

ಅಮ್ಮನ ಅಡುಗೆಯ ಜೊತೆಯಲಿ
ಪ್ರೀತಿ ಸೇರಿದೆ
ಅಪ್ಪನ ಜೋರಿನ ದನಿಯಲು ಕೂಡಾ
ಜವಾಬ್ದಾರಿ ಇಣುಕಿದೆ

ನಾವೆಲ್ಲೇ ಹೋದರೂ ಏನೇ ಮರೆತರೂ
ರುಚಿಯ ಮರೆಯೆವು
ಅಮ್ಮನ ರುಚಿಕರ ಊಟದ
ರುಚಿಯ ಎಂದೂ ಮರೆಯವು..
@ಪ್ರೇಮ್@

435. ಲೇಖನ-1

ನನ್ನ ಮಾತೃಭೂಮಿಗೊಂದು ಪತ್ರ

ಪ್ರೀತಿಯ ಅಮ್ಮಾ,
ಯಾರೆಂದೇ ಗೊತ್ತಿರದ ನನ್ನ ಭಾರತೀಯಳೆಂದು ಗುರುತಿಸುವಂತೆ ಮಾಡಿದ್ದು ನೀನು. ನಿನ್ನ ಮಡಿಲಲ್ಲಿ ನನ್ನ ಸುತ್ತಿ ಬೆಳೆಸಿ,ಹರಸಿ,ಪೋಷಿಸುತ್ತಿರುವುದು ನೀನು. ನಿನ್ನ ಹೊರತು ನಾ ಯಾರೊಡನೆ ಬಾಳಲಿ.. ಪ್ರಪಂಚದ ಯಾವ ಮೂಲೆಗೆ ನಾ ಹೋದರೂ ನನ್ನನ್ನು ನಿನ್ನ ಮಗುವೆಂದೇ ಗುರುತಿಸುವರು! ನನ್ನುಸಿರಿಗೆ, ನನ್ನ ಹೆಸರಿಗೆ ನೀನೇ ಮಾತೆ, ಅನ್ನದಾತೆ!
  ನಿನ್ನ ನೆಲದ ಮೇಲೆ ಓಡಾಡಿದ ನನ್ನ ಪಾದಗಳೆ ಧನ್ಯ, ನಿನ್ನೊಡಲಲಿ ನಲಿದಾಡಿದ ನನ್ನ ಬದುಕೇ ಪಾವನ. ನನ್ನ ಲಾಲಿ ಹಾಡಿ, ತಿನ್ನಿಸಿ, ಪಾಲಿಸಿ, ಪೋಷಿಸಿದ ನಿನ್ನೊಲವೇ ಮಾನ್ಯ, ತಾಯಿ ಭಾರತಿ ನನ್ನುಸಿರ ಸಿರಿ ನೀನು, ನಿನ್ನೊಡಲ ಮರಿ ನಾನು, ರಕ್ಷಿಸೆನ್ನ ಅನವರತ ನಿನ್ನೊಡಲ ಬಳ್ಳಿ ನಾ, ನಿನ್ನೊಡಲಲಿಟ್ಟು ಪೊರೆವೆಯೋ, ದೂಡಿ ಘರ್ಜಿಸಿ ಬೆದರಿಸುವೆಯೋ ನಾನರಿಯೆ, ನಿನ್ನ ಮೇಲೆ ಕಸ ಮುಸುರೆ ಬಿಸುಟರೂ,ನೀನೆನ್ನ ಊಟ, ತಿಂಡಿ ಮನೆ,ಬಟ್ಟೆಯೊಂದಿಗೆ ಶಾಂತಿ, ಪ್ರೀತಿ,ನೀತಿ,ಭಕ್ತಿಯನ್ನು ನನಗೆ ನೀಡಿ ಬೆಳೆಸುತಿಹ ಮಾತೆ, ನಿನಗೆ ಹೇಗೆ ಧನ್ಯಳಾಗಿರಲಿ ನಾ?
ಅಮ್ಮಾ, ನಿನ್ನ ಮಕ್ಕಳು ನಿನ್ನ ಕರುಳನ್ನೆ ಬಗೆಯುತಿಹರು, ತಾವೂ ವಿಷವುಂಡು ವಿಷಮನಸ್ಕರಾಗಿ ಬೆಳೆಯುತ್ತಾ ನಿನಗೂ ವಿಷವುಣಿಸುತಿಹರು. ನಿನ್ನ ತಾಳ್ಮೆಗೂ ಮಿತಿಯಿಹುದಲ್ಲವೇ ಮಾತೇ? ಹೇಗೆ ತಾನೇ ಎಲ್ಲವನ್ನೂ, ಎಲ್ಲರನ್ನೂ ಸಹಿಸಬಲ್ಲೆ? ನಿನ್ನ ಹೊಟ್ಟೆಯನ್ನೇ ಬಗೆದು ಕರುಳನ್ನು ಕೀಳುತ್ತಿರುವಾಗಲೂ ಆ ನೋವನ್ನು ತಡೆದುಕೊಂಡು ನೀನು ಹೇಗೆ ತಾನೇ ಪ್ರೀತಿ, ಆಶ್ರಯ ಹಾಗೂ ವರವನೀಯಬಲ್ಲೆಯಮ್ಮ? ತೋರಿಬಿಟ್ಟೆ ನಿನ್ನ ನೋವ. ಮನುಜ ಮರೆತು ತನ್ನ ಹೀನ ಕೃತ್ಯವ ದೂಷಿಸ ಹೊರಟಿಹನು ನಿನ್ನ! ತನ್ನ ಮಕ್ಕಳಿಗೆ ನೀನೇ ಬುದ್ಧಿ ಕಲಿಸಬೇಕಲ್ಲದೆ ಇನ್ಯಾರಿಹರಮ್ಮ? ಭಾರತಿ ನಿನ್ನ ಮಕ್ಕಳಿಗೆ ಒಳ್ಳೆಯ ಬುದ್ಧಿಯಿತ್ತು ಸಾಕಿ ಸಲಹುವ ಜವಾಬ್ದಾರಿ ನಿನ್ನದೇ ಅಮ್ಮ. ಧನ್ಯವಾದಗಳು ನಿನಗೆ. ನಿನ್ನ ಪ್ರೀತಿಯ ಕಂದ,
@ಪ್ರೇಮ್@

ಮಂಗಳವಾರ, ಆಗಸ್ಟ್ 28, 2018

434. ಭಾವಗೀತೆ-12

ಅಕಟಕಟಾ

ಬಂದಿತು ಧರೆಗೆ ನೋವಿನ ಸಂಕಟ
ತಡೆವನೆ ವಿಧಿ ಅವನ ತುಂಟಾಟ
ಜನಗಳ ಮನಗಳು ಆಗಿವೆ ಮರ್ಕಟ
ತಾಳ್ಮೆಯೆ ಇರದು ಅಕಟಕಟಾ..

ಮೋಡವು ಕಟ್ಟಿತು ಮಳೆಯು ಸುರಿಯಿತು
ನೀರದು ಬಂತು ಮನೆಗೇ ನುಗ್ಗಿತು
ಜೀವ ಜಂತುಗಳು ಹೂತು ಹೋಯಿತು
ಜಾತಿ,ರಾಜಕೀಯ ಎಲ್ಲ ನಾಶವಾಯಿತು

ಮಾನವತೆ ಮೆರೆಯಲು ಅವಕಾಶ ಬಂತು
ಸಹಾಯಕೆ ಜನರ ಗುಂಪೆ ಹಾರಿತು
ಕಳ್ಳರ ದಂಡು ಜೊತೆಗೇ ಸೇರಿತು
ಕಟುಕರ ಬುದ್ಧಿ ಸರಿಯಾಗದೆ ಹೋಯಿತು..

ಬಾನು ಬಿದ್ದರೂ ಕಾಡು ಬೆಂದರೂ
ಭೂಮಿ ಬಿರಿದರೂ ಸಾಗರ ಹರಿದರೂ
ಬದುಕದು ಕಮರಿ ಸೆರೆಗೆ ಬಿದ್ದರೂ
ಬುದ್ಧಿ ಬಾರದು ಬಾಳು ಸರಿದರೂ..
@ಪ್ರೇಮ್@

ಪ್ರೇಮರವರ ನನ್ನಮ್ಮ ಪ್ರಸ್ತುತ ಘಟನೆಗಳಾದಾರಿತ ಧರಿತ್ರಿಯ ವಿಕೋಪದ ಕಾರಣಗಳನ್ನು ಸಮಾಜದ ಕುಸಿದ ಮೌಲ್ಯಗಳನ್ನು ಅಲಲೋಕಿಸಿ ಬರೆದು ಓದುಗರಿಗೆ ಉತ್ತಮ ಸಂದೇಶ ಕೊಡುತ್ತದೆ.”ತಾ ಹಾಲುಣಿಸಿದ ಕಂದ ತನಗೆ ಒದ್ದಾಗ’ ಆಗುವ ನೋವು ಭೂಮಿ ತಾಯಿಗೆ ಆಗುವುದು ಸಹಜ. .....ವಿದ್ಯಾಧರ

ಸೋಮವಾರ, ಆಗಸ್ಟ್ 27, 2018

433.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-10

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -10

ಶ್ರಾವಣ ತಿಂಗಳು ಬಂತು. ಹಬ್ಬಗಳ ಸರಮಾಲೆಯೂ ಬಂತು. ಸಾಲು ಸಾಲು ಹಬ್ಬಗಳು! ನಾಗರ ಪಂಚಮಿಯಿಂದ ಪ್ರಾರಂಭವಾದರೆ ಚೌತಿ, ರಕ್ಷಾಬಂಧನ, ಋಗುಪಕರ್ಮ ಹೀಗೆ ಹಬ್ಬಗಳು ನಮಗಾಗಿಯೇ ಬರುತ್ತವೆ ಎಂದು ಸಂತಸವಾಗುತ್ತವೆ. ಇದು ಸಂಬಂಧಗಳನ್ನು ಒಂದಾಗಿಸುತ್ತದೆ. ಎಲ್ಲರೊಡನೆ ಬೆರೆಯುವಂತೆ ಮಾಡುತ್ತದೆ. ಭಕ್ತಿ ಹೆಚ್ಚಾಗುತ್ತದೆ. ಹೀಗೆ ಮನಗಳೂ ಒಂದಾಗಿ ಜೀವನ ಬೆಳಗುತ್ತದೆ. ಹೀಗೆ ಹಿರಿಯರು ಜೀವನವನ್ನು ಉತ್ತಮಗೊಳಿಸಲು ಹಲವಾರು ಹಬ್ಬಗಳನ್ನು ಆಚರಿಸಿಕೊಂಡು ಬಂದು ಇಂದಿನ ತಲೆಮಾರಿಗೆ ಇಟ್ಟಿದ್ದಾರೆ. ತುಳುನಾಡ ಮಣ್ಣನ್ನು ಸರ್ಪಗಳು ಫಲವತ್ತು ಮಾಡಿಸಿದ್ದಕ್ಕಾಗಿ, ಉಳಿದೆಡೆ ಮಹಿಳೆಯರು ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ಆಚರಿಸುವರು. ಸಿರಿ ತರುವ ಲಕ್ಷ್ಮಿಯನ್ನು ಮನೆಯಲ್ಲಿ ಪೂಜಿಸಿ, ಸುಮಂಗಲಿಯರಿಗೆ ಅರಶಿನ-ಕುಂಕುಮ ಕೊಟ್ಟು ಆಚರಿಸುವ ಹಬ್ಬ. ರಕ್ಷಾಬಂಧನ ಅಣ್ಣ-ತಂಗಿಯರ ಸುಮಧುರ ಬಂಧನದ ಸಂಕೇತ.ನೋವು ನಲಿವಿನಲ್ಲಿ ಜೊತೆಯಲ್ಲಿದ್ದು ತನಗೆ ರಕ್ಷಣೆ ನೀಡಲು ಅಭಯ ಕೊಡುವಂತೆ ಅಣ್ಣನಲ್ಲಿ ಬೇಡಿ,ಸಂಬಂಧವನ್ನು ಗಟ್ಟಿಗೊಳಿಸುವ, ರಕ್ಷಾಬಂಧನದ ಮೂಲಕ ಅದನ್ನು ರಕ್ಷಿಸುವ ಹಬ್ಬ. ತದನಂತರ ಈ ವರ್ಷದ ತ್ಯಾಗ ಬಲಿದಾನದ ಸಾಂಕೇತಿಕ ಹಬ್ಬ ಬಕ್ರೀದ್ ಕೂಡಾ ಈ ಶ್ರಾವಣ ಮಾಸದಲ್ಲೇ ಬಂದಿದೆ!
ಗೌರಿ-ಗಣೇಶ ಹಬ್ಬ ಜಾತಿ ಬೇಧ ಮರೆತು ಊರಿಡೀ ಆಚರಿಸುವ ಹಬ್ಬ! ಗಂಗೆ-ಗೌರಿ-ಗಣೇಶನನ್ನು ಪೂಜಿಸುವ ಹಬ್ಬ. ಗೌರಿ ಹಬ್ಬವೂ ಮಹಿಳೆಯರಿಗೆ,ಮನೆಮಗಳಿಗೆ ಮೀಸಲು. ಮಗಳನ್ನು ತವರಿಗೆ ಕರೆದು ಉಡಿ ತುಂಬುವ ಕೆಲಸ ಈ ಹಬ್ಬದಲ್ಲಾಗುತ್ತದೆ!
    ಆಷಾಡದಲ್ಲಿ ಹಾಗೇ ನಿಲ್ಲಿಸಿದ್ದ ಕಾರ್ಯಕ್ರಮಗಳೆಲ್ಲ ಶ್ರಾವಣದಲ್ಲಿ ಆರಂಭ. ಮದುವೆ,ಸೀಮಂತ, ಮಗುವಿನ ನಾಮಕರಣ, ನಿಶ್ಚಿತಾರ್ಥ ಹೀಗೆ ಕಾರ್ಯಕ್ರಮಗಳ ಸರಮಾಲೆ! ದೇಶಕ್ಕೂ ಸಡಗರ, ಸ್ವಾತಂತ್ರ್ಯ ದಿನಾಚರಣೆಯೂ ಶ್ರಾವಣದಲ್ಲೆ ಬರುತ್ತದೆ!
ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ ಹೀಗೆ ಪ್ರತಿದಿನವೂ ವಿಶೇಷವೇ.
ಈ ವರ್ಷ ಮಳೆ ಎಲ್ಲವನ್ನೂ ನುಂಗಿ ಹಾಕಿದೆ. ಕೇರಳ, ಕೊಡಗು ಮುಳುಗಿವೆ. ಆದರೂ ಕೇರಳದ ಜನ ತಾವಿರುವ ಕ್ಯಾಂಪ್  ಗಳಲ್ಲೆ ಓಣಂ ಆಚರಿಸಿದ್ದನ್ನು ಮೀಡಿಯಾಗಳಲ್ಲಿ ನೋಡಿದ್ದೇವಲ್ಲವೇ.. ಅದೇ ಶ್ರಾವಣದ ಮಹತ್ವ!
     ಏನೇ ಇರಲಿ ತನ್ನ ಕೈಲಾದ ಸಹಾಯ ಮಾಡುತ್ತಾ ಯಾರಿಗೂ ಕೆಟ್ಟದು  ಮಾಡದೆ, ಕೆಟ್ಟದನ್ನು ಬಯಸದೆ ಚೆನ್ನಾಗಿರಿ ಎಂಬುದೇ ಎಲ್ಲಾ ಜಾತಿ ಧರ್ಮಗಳ, ಎಲ್ಲಾ ಹಬ್ಬಗಳ ಸಂಕೇತ. ನಮ್ಮ ಹಬ್ಬಗಳ ಆಚರಣೆ ಇತರರಿಗೆ ಭಂಗ ತರದೆ ಚೆನ್ನಾಗಿರಲಿ.
@ಪ್ರೇಮ್@

433.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-10

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -10

ಶ್ರಾವಣ ತಿಂಗಳು ಬಂತು. ಹಬ್ಬಗಳ ಸರಮಾಲೆಯೂ ಬಂತು. ಸಾಲು ಸಾಲು ಹಬ್ಬಗಳು! ನಾಗರ ಪಂಚಮಿಯಿಂದ ಪ್ರಾರಂಭವಾದರೆ ಚೌತಿ, ರಕ್ಷಾಬಂಧನ, ಋಗುಪಕರ್ಮ ಹೀಗೆ ಹಬ್ಬಗಳು ನಮಗಾಗಿಯೇ ಬರುತ್ತವೆ ಎಂದು ಸಂತಸವಾಗುತ್ತವೆ. ಇದು ಸಂಬಂಧಗಳನ್ನು ಒಂದಾಗಿಸುತ್ತದೆ. ಎಲ್ಲರೊಡನೆ ಬೆರೆಯುವಂತೆ ಮಾಡುತ್ತದೆ. ಭಕ್ತಿ ಹೆಚ್ಚಾಗುತ್ತದೆ. ಹೀಗೆ ಮನಗಳೂ ಒಂದಾಗಿ ಜೀವನ ಬೆಳಗುತ್ತದೆ. ಹೀಗೆ ಹಿರಿಯರು ಜೀವನವನ್ನು ಉತ್ತಮಗೊಳಿಸಲು ಹಲವಾರು ಹಬ್ಬಗಳನ್ನು ಆಚರಿಸಿಕೊಂಡು ಬಂದು ಇಂದಿನ ತಲೆಮಾರಿಗೆ ಇಟ್ಟಿದ್ದಾರೆ. ತುಳುನಾಡ ಮಣ್ಣನ್ನು ಸರ್ಪಗಳು ಫಲವತ್ತು ಮಾಡಿಸಿದ್ದಕ್ಕಾಗಿ, ಉಳಿದೆಡೆ ಮಹಿಳೆಯರು ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ಆಚರಿಸುವರು. ಸಿರಿ ತರುವ ಲಕ್ಷ್ಮಿಯನ್ನು ಮನೆಯಲ್ಲಿ ಪೂಜಿಸಿ, ಸುಮಂಗಲಿಯರಿಗೆ ಅರಶಿನ-ಕುಂಕುಮ ಕೊಟ್ಟು ಆಚರಿಸುವ ಹಬ್ಬ. ರಕ್ಷಾಬಂಧನ ಅಣ್ಣ-ತಂಗಿಯರ ಸುಮಧುರ ಬಂಧನದ ಸಂಕೇತ.ನೋವು ನಲಿವಿನಲ್ಲಿ ಜೊತೆಯಲ್ಲಿದ್ದು ತನಗೆ ರಕ್ಷಣೆ ನೀಡಲು ಅಭಯ ಕೊಡುವಂತೆ ಅಣ್ಣನಲ್ಲಿ ಬೇಡಿ,ಸಂಬಂಧವನ್ನು ಗಟ್ಟಿಗೊಳಿಸುವ, ರಕ್ಷಾಬಂಧನದ ಮೂಲಕ ಅದನ್ನು ರಕ್ಷಿಸುವ ಹಬ್ಬ. ತದನಂತರ ಈ ವರ್ಷದ ತ್ಯಾಗ ಬಲಿದಾನದ ಸಾಂಕೇತಿಕ ಹಬ್ಬ ಬಕ್ರೀದ್ ಕೂಡಾ ಈ ಶ್ರಾವಣ ಮಾಸದಲ್ಲೇ ಬಂದಿದೆ!
ಗೌರಿ-ಗಣೇಶ ಹಬ್ಬ ಜಾತಿ ಬೇಧ ಮರೆತು ಊರಿಡೀ ಆಚರಿಸುವ ಹಬ್ಬ! ಗಂಗೆ-ಗೌರಿ-ಗಣೇಶನನ್ನು ಪೂಜಿಸುವ ಹಬ್ಬ. ಗೌರಿ ಹಬ್ಬವೂ ಮಹಿಳೆಯರಿಗೆ,ಮನೆಮಗಳಿಗೆ ಮೀಸಲು. ಮಗಳನ್ನು ತವರಿಗೆ ಕರೆದು ಉಡಿ ತುಂಬುವ ಕೆಲಸ ಈ ಹಬ್ಬದಲ್ಲಾಗುತ್ತದೆ!
    ಆಷಾಡದಲ್ಲಿ ಹಾಗೇ ನಿಲ್ಲಿಸಿದ್ದ ಕಾರ್ಯಕ್ರಮಗಳೆಲ್ಲ ಶ್ರಾವಣದಲ್ಲಿ ಆರಂಭ. ಮದುವೆ,ಸೀಮಂತ, ಮಗುವಿನ ನಾಮಕರಣ, ನಿಶ್ಚಿತಾರ್ಥ ಹೀಗೆ ಕಾರ್ಯಕ್ರಮಗಳ ಸರಮಾಲೆ! ದೇಶಕ್ಕೂ ಸಡಗರ, ಸ್ವಾತಂತ್ರ್ಯ ದಿನಾಚರಣೆಯೂ ಶ್ರಾವಣದಲ್ಲೆ ಬರುತ್ತದೆ!
ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ ಹೀಗೆ ಪ್ರತಿದಿನವೂ ವಿಶೇಷವೇ.
ಈ ವರ್ಷ ಮಳೆ ಎಲ್ಲವನ್ನೂ ನುಂಗಿ ಹಾಕಿದೆ. ಕೇರಳ, ಕೊಡಗು ಮುಳುಗಿವೆ. ಆದರೂ ಕೇರಳದ ಜನ ತಾವಿರುವ ಕ್ಯಾಂಪ್  ಗಳಲ್ಲೆ ಓಣಂ ಆಚರಿಸಿದ್ದನ್ನು ಮೀಡಿಯಾಗಳಲ್ಲಿ ನೋಡಿದ್ದೇವಲ್ಲವೇ.. ಅದೇ ಶ್ರಾವಣದ ಮಹತ್ವ!
     ಏನೇ ಇರಲಿ ತನ್ನ ಕೈಲಾದ ಸಹಾಯ ಮಾಡುತ್ತಾ ಯಾರಿಗೂ ಕೆಟ್ಟದು  ಮಾಡದೆ, ಕೆಟ್ಟದನ್ನು ಬಯಸದೆ ಚೆನ್ನಾಗಿರಿ ಎಂಬುದೇ ಎಲ್ಲಾ ಜಾತಿ ಧರ್ಮಗಳ, ಎಲ್ಲಾ ಹಬ್ಬಗಳ ಸಂಕೇತ. ನಮ್ಮ ಹಬ್ಬಗಳ ಆಚರಣೆ ಇತರರಿಗೆ ಭಂಗ ತರದೆ ಚೆನ್ನಾಗಿರಲಿ.
@ಪ್ರೇಮ್@

ಶನಿವಾರ, ಆಗಸ್ಟ್ 25, 2018

432. ಭಾವಗೀತೆ-13

ಬದುಕು

ಭಯದ ಬದುಕು ಬಂಧನವೇ
ಬಾಹ್ಯ ಭವ್ಯ ಬಾಂಧವ್ಯಕೆ
ಬರಹ ಬಳುವಳಿ ಬಾಳಿಗೆ
ಬಡ ಜೀವಕೆ ಇದುವಾಸರೆ..

ಬನದ ಭವಿತ ಭಂಡ ಮನಕೆ
ಬಾಹ್ಯ ಬೀಜ ಭಾರ ಜಗಕೆ
ಬೇಡ ಬೇಕು ಆಕಾಂಕ್ಷೆ ಭವಕೆ
ಬಯಕೆ ಅನಂತ ಬಾಡದಿರಲಿ.

ಬಾರೊ ಜೀವ ಬದುಕ ಗಾಲಿ
ಎಳೆಯುವಂಥ ಕೈಯು ಬೇಕು
ಬಳಪ ಹಿಡಿದು ಬರೆಯೊ ಮನಕೆ
ಬದುಕ ದಾರಿ ಖುಷಿಯ ಎಣಿಕೆ..

ಭೋಗ ಭಾಗ್ಯ ಬರದು ಎಂದು
ಸುಖ ಜೀವನ ಬರಲಿ ಇಂದು
ಬಾನಿನಲ್ಲಿ ಭಾನಿನಂತೆ ಬೆಳಗಬೇಕು
ಬೆರಳ ತುದಿಯು ಗಾನ ಮೀಟಬೇಕು..
@ಪ್ರೇಮ್@

ಶುಕ್ರವಾರ, ಆಗಸ್ಟ್ 24, 2018

431.ಭಾವಗೀತೆ-12

ನನ್ನಮ್ಮ

ತಾ ಹಾಲುಣಿಸಿದ ಕಂದ
ತನ್ನೊಡಲಲ್ಲೆ ಮಲಗಿ ಒದ್ದಾಗ
ತನ್ನ ಹೊಟ್ಟೆಯನ್ನೆ ಸೀಳ ಹೊರಟಾಗ

ಕ್ಷಮಯಾ ಧರಿತ್ರಿಯೂ ಹೀಗಿರಲು
ಕ್ಷಮೆಯ ಮರೆತು ಬಿಡುವಳು
ವಿಕೋಪಕ್ಕೆ ತಿರುಗಿ ಬಿಡುವಳು

ಮಾಡಿದ ತಪ್ಪಿಗೆ ಶಿಕ್ಷೆಯನುಭವಿಸ ಬೇಕು
ಮೇಲು ಕೀಳು ನಾಶವಾಗ ಬೇಕು
ಬಡವ ಬಲ್ಲಿದ ಒಂದಾಗಬೇಕು..

ಮಾನವಗೆ ಬುದ್ಧಿ ನೀ ನೀಡಿದೆಯಮ್ಮ
ತನ್ನ ತಪ್ಪಿನ ಅರಿವು ಮೂಡಿಸಿದೆಯಮ್ಮ
ತನ್ನೊಳಗೆ ತಾನೆ ಬೇಸರಿಪನಮ್ಮ

ಹಲವರಿಗೆ ಇನ್ನೂ ಸಾಲದು ಶಿಕ್ಷೆ ನಿನ್ನ
ಹಾಕಿಹರು ಮುರಿದ್ಹೋದ ಮನೆಗೆ ಕನ್ನ
ತೋರಿಸವರಿಗೆ ನಿನ್ನ ಉಗ್ರ ಪ್ರತಾಪವನ್ನ

ಬರಲಿ ಬುದ್ಧಿ ಮಾತೆ ಮಗಳ ರಕ್ಷಿಸಲು
ಹೆಣ್ಣು ಮಕ್ಕಳಿಗೆ ಗೌರವ ಕೊಡಲು
ಕಷ್ಟಪಟ್ಟು ದುಡಿದು ಬದುಕಿ ಪ್ರೀತಿ ಹಂಚಲು..
@ಪ್ರೇಮ್@

ಗುರುವಾರ, ಆಗಸ್ಟ್ 23, 2018

430. ಭಾವಗೀತೆ-11

ಲಕುಮಿ

ಕಾಲ ಎಂದೂ ಬದಲಾಗಿಲ್ಲ
ಮನಗಳು ಹಲವು ಬದಲಾಗಿವೆ
ಈಗಿನ ಮನುಜ ಬದಲಾಗಿಹನು
ಏನಾದರೂ ಭಕ್ತಿಯು ಬದಲಾಗದು..

ವರಮಹಾಲಕ್ಷ್ಮಿಯು ಬರುವಳು
ಎಂದಿನಂತೆಯೇ ಸಿರಿಯ ಹೊತ್ತು
ಸಮಯಕೆ ಸರಿಯಾಗಿ ಮನೆಗೆ
ಎಲ್ಲಾ ಮಹಿಳೆಯರ ಬಳಿಗೆ

ವರವನು ಹೊತ್ತು ಅಭಯವ ಇತ್ತು
ಪೊರೆವಳು ಜನರ ಕಂದರಂತೆ
ಮಾನವಗೆ ಭಯ ಭಕ್ತಿ ಇಲ್ಲದೆ
ಆಡುವರವರು ಮರ್ಕಟದಂತೆ

ಜನರನೆ ಸಾಯಿಸಿ ಕಾಡನು ಕಡಿಯುತ
ವಿಷವನು ಧರಣಿಗೆ ತಾ ಚೆಲ್ಲುತ್ತ
ತನ್ನ ಮಾತೆಗೆ ಬೆಲೆಯ ಕೊಡದವ
ದೇವರ ನಂಬಲು ತಯಾರಿಹನೇ...
@ಪ್ರೇಮ್@

429. ಭಾವಗೀತೆ-10

ದೀಪ

ಬೆಳಕು ನಿತ್ಯ ಬಾಳಿಗೆ
ಶರಣು ಹೆತ್ತ ತಾಯಿಗೆ
ನಮನ ಹೊತ್ತ ನಾಡಿಗೆ
ಬುದ್ಧಿ  ಕೊಟ್ಟ ದೇವಗೆ..

ಬದುಕು ಕೊಟ್ಟ ಕೆಲಸಕೆ
ಓದು ಕೊಟ್ಟ ಗುರುವಿಗೆ
ತನುವ ಕೊಟ್ಟ ತಂದೆಗೆ
ಜೀವ ಕೊಟ್ಟ ಮಾತೆಗೆ

ಮಳೆಯ ತರುವ ವರುಣಗೆ
ಬಿಸಿಲ ಹೊರುವ ಸೂರ್ಯಂಗೆ
ಚಳಿಯ ಕರೆವ ವಸಂತಗೆ
ಮನವ ತಣಿಪ ಮಂಜಿಗೆ

ಪೊರೆವ ದೇವಿ ನಿಸರ್ಗಕೆ
ಗಾಳಿ ಕೊಡುವ ಹಸಿರಿಗೆ
ಕಿರಣ ತರುವ ರಭನಿಗೆ
ನೀವೆ ಬೆಳಕು ಬಾಳಿಗೆ..
@ಪ್ರೇಮ್@

ಮಂಗಳವಾರ, ಆಗಸ್ಟ್ 21, 2018

428. Poem-mind

Mind

Be kind
In mind
While sound
Don't bend..

Mad mind
Accept wind
Blow mad
Gives sad..

Grow mind
As kid
Help dad
To get rid

Try, bend
Work hard
Grow glad
No sad..

Who did
Like head
Leave bed
Well said

@prem@

427. ಭಾವಗೀತೆ-8

ಬಾಳ ದಾರಿ

ಬಾಳದಾರಿಯಲ್ಲಿ ನಿತ್ಯ
ಒಂಟಿ ಪಯಣ ಎಂದೂ ಸತ್ಯ
ಪಯಣಿಗನಿಗೆ ಬೇಕು ಬೆಳಕು
ನಡೆಸುತಿರಲು ನಿತ್ಯ ಬದುಕು..

ನಮ್ಮ ಮನವೆ ನಮ್ಮೊಡಲಿಗೆ
ಬೆಳಕ ಕೇಂದ್ರ ಬಿಂದುವು
ಮನದರಿವೆ ಬಾಳಿನೊಡನೆ
ಬೆಳಕ ತರುವ ಮಂತ್ರವು..

ತನುಮನವ ಬೆಳಗಬೇಕು
ವಿದ್ಯೆಯೆಂಬ ಬೀಜವು
ಗಿಡಮರವ ಬೆಳೆಸಬೇಕು
ಸತ್ಯ ಧರ್ಮ ನ್ಯಾಯವು..

ಕರುಣೆ ಮೆರೆದು ಬಾಳುವಂಥ
ಶಕ್ತಿ ನೀಡು ಭಗವಂತ
ಪರ ಜೀವಿಗೆ ಬೆಳಕಾಗಿ
ಬಾಳಬೇಕು ಹಿತವಾಗಿ..
@ಪ್ರೇಮ್@

426.ಭಾವಗೀತೆ-9

ನುಡಿನಮನ

ಎತ್ತಲೆತ್ತಲೆತ್ತ ಸಾಗಿ ತಿರುಗಿ
ಬಂತು ಮಧುರವಾದ ಮಾತು
ಜೀವವೆಲ್ಲ ಕಲೆತು ಸೇರಿ
ಮನವನೆಲ್ಲ ತಾನೆ ಬೆಳೆಸಿ

ಮಾನವನೆ ಮಾತಿನೊಡೆಯ
ಎಂದಿತು ಮನ ಜಗ ಮರೆತು
ತಮ್ಮ  ಬಳಿಯ ಮನೆಯ ಜನರ
ಒಮ್ಮೆ ತಿರುಗಿ ನೋಡಲೊಳಿತು..

ಮಾತಿಗೇನು ವರಮಾನವೆ,
ಹಣ ವಸ್ತು ಒಡವೆಯೆ?
ಮಾತಿನಿಂದ ಜಗಳ ಕದನ
ಪೆಟ್ಟು ರಟ್ಟು  ಗಲಾಟೆಯೇ!!

ಇರಲಿ ಮಧುರ ಮಾತು ಅಮರ
ನುಡಿ ನಮನ ನೊಂದವರಿಗೆ
ವಿವೇಕರಂತೆ ಬಾಳಿ ಬದುಕಿ
ಸಂತಸ ಕೊಡಿ ಬಾಳಿನುದ್ದಕೆ..

ನಾನೆ ಎನ್ನಲೇನು ಇಲ್ಲ
ಜಗದ ತುಂಬ ನೀರಿದೆ..
ತಾನೆ ಬದುಕಿ ಬಾಳಬೇಕು
ಸಹಾಯಮಾಡಿ ಪರರಿಗೆ

ಸರ್ವಜನರ ಹಿತವಿರಲಿ
ನಮ್ಮ ಒಂದು ಮಾತಿಗೆ
ಶಿವನೂ ಮೆಚ್ಚಿ ಹರಸುವನು
ಮುತ್ತಿನಂಥ ಮಾತಿಗೆ.

@ಪ್ರೇಮ್@

425. ಸುನೀತ ಕಾವ್ಯ

ಇಳೆ

ಹಸಿರು ಸೀರೆಯ ತಿರೆಯೇ
ನೀಲಿ ಕೂದಲಿನ ಚೆಲುವೆ
ಸೂರ್ಯನ ಕರೆದೆ ಬೆಳಕು ಕೊಡೆಂದೆ
ಚಂದಿರನೊಡನೆ ತಂಪನು ಕಂಡೆ
ಚುಕ್ಕೆದಳಾ ತನ್ನ ತಲೆಯಲಿ ಮುಡಿದು
ಜೀವಿಗಳನು ತನ್ನ ಬಸಿರಲಿ ಪಡೆದು
ಸಲಹಿ ಸಾಕುವ ಮಹಾಮಾತೆ
ತಾಳ್ಮೆ ತಳೆದಿಹ ಪ್ರಕೃತಿ ಮಾತೆ..

ಜನಮನಕೆ ನೀ ಆರೋಗ್ಯದಾತೆ
ಬಿಸುಟುವರು ಕರಗದ ಕಸವ ನಿನ್ನ ಮೇಲೆ
ಹಾಳುಗೆಡಹುವರು ನೆಲ,ನೀರು, ಗಾಳಿಯ
ಮಣ್ಣು, ಗಿಡ ಮರ ಎಲ್ಲವೂ ಮಾಯ
ಬುದ್ಧಿಯ ಕಲಿಸು ಸಿದ್ಧಿಯ ಮಾತೆ
ಪೊರೆ ನೀ ಸಕಲ ಜಗವ
ನೀಡಿ ಒಳ್ಳೆ ಮನವ...
@ಪ್ರೇಮ್@

424. ಭಾವಗೀತೆ-7

ನಮನ

ಕುಸಿದ ಮನಕೆ ಮುದವ ನೀಡಿ
ಬಾಡಿದ ಬಳ್ಳಿ ಬೆಳೆಸಿ ಕಾಪಾಡಿ
ಬರಡಾದ ಬದುಕ ಕಟ್ಟಿ ಬೆಳೆಸಿ
ಎದೆಗೆ ಉಸಿರ ನೀರ ಸುರಿಸಿ...

ತನುವ ಬಳಸಿ ಶಕ್ತಿ ಸ್ಪುರಿಸಿ
ಗಗನದಾಚೆ ಹೊಂಗನಸ ಹರಿಸಿ
ಚುಕ್ಕೆಯಂದ ಕಾದು ಕದ್ದು ತಂದು
ಚಕ್ರದಂತೆ ತಿರುಗಿ ಮನಕೆ ಬಂದು..

ವದನ ತಣಿದು ತಿರೆಯ ಜರಿದು
ಕೊಬ್ಬು ಕರಗಿ ವಿಷವೆಲ್ಲ ತಿವಿದು
ಮದವ ಅಳಿಸಿ ಮೌನ ಬೆರೆಸಿ
ಬರಹ ಉಳಿಸಿ ಕಸುವ ಬಳಸಿ

ಸನಿಹ ಬಳಸಿ ಶಕ್ತಿ ತುಂಬಿ
ಭವದ ಭಾವ ನಲಿವು ದುಂಬಿ
ಪ್ರಾಣ ಮಾನ ನಯನ ಕರುಣ
ಗುಣವ ತರುವ ಮನಕೆ ನಮನ...
@ಪ್ರೇಮ್@

[8/21, 9:36 PM] Prem: *೨೧.೦೮.೨೦೧೮ ಮಂಗಳವಾರದ ಫಲಿತಾಂಶ ಪಟ್ಟಿ*
🌹🌹🌹🌹🌹🌹🌹🌹🌹
ಕುಸಿದಾಗ ಕುಗ್ಗದೆ ಏರಿದಾಗ ಬೀಗದೆ ನಡೆದರೆ ಮಾತ್ರ ನಾವು ಮನುಷ್ಯರಾಗುತ್ತೆವೆ. ಜೀವನದಲ್ಲಿ ಏರುಪೇರು ಗಳು ಇದ್ದುದ್ದೆ. ಸಮಾನವಾಗಿ ತೆಗೆದು ಬದುಕಿದರೆ ಅದು ಜೀವನ.

ಇಂದು *ಕುಸಿತ* ಪದಕ್ಕೆ ಹಲವಾರು ಕವನಗಳು ನಮ್ಮಿಂದ ಹರಿದು ಬಂದಿವೆ.
ಹೀಗೆಯೇ ಹರಿದು ಬರಲಿ ಹಾಗೆಯೇ ಇಂದು ಭಾಗವಹಿಸಿದ ಪ್ರತೀ ಕವಿಮನಗಳಿಗೆ ವಂದನೆಗಳು
🙏🙏🙏🙏🙏🙏🙏🙏🙏🙏
ಇಂದಿನ ಕವನಗಳಲ್ಲಿ ಅತ್ಯುತ್ತಮ

*✍ ಪ್ರೇಮ್ ಅವರ ~ನಮನ*

ಉತ್ತಮ ಎನಿಸಿದ ಕವನಗಳು
*✍ ಜೆ ಕೆ ಕಂಟ್ಲಿ ಅವರ ~ಮುನಿಸು*

*✍ ಪ್ರಮೀಳಾ ಅವರ ~ಮತ್ತೆ ಬಾರದಿರು*

*✍ ರಮೇಶ್ ಅವರ ಮನದ ಮಾತುಗಳು*
💐💐💐💐💐💐💐💐💐💐
ಇಂದಿನ ಕವನಗಳ ವಿಮರ್ಶೆ ಮಾಡಿ ವಿಮರ್ಶಕರು ಎನಿಸಿಕೊಂಡವರು
*📋ವರಲಕ್ಷ್ಮಿ ಮೇಡಮ್*

👏👏👏👏👏👏👏👏👏👏
ನಾಳಿನ ಪ್ರಕಾರ- *ಕವನ*
                ಪದ- *ಮಾತು*

*ನಾಳಿನ ಅಡ್ಮಿನ್ ~ಯತೀಶ್ ಕಮಾಜೆ*

ಹನಿ ಹನಿ ಬಳಗದ ಕವನಗಳನ್ನು ಚಾವಡಿಯಲ್ಲಿ ವಿಮರ್ಶಿಸುವವರು ಬಳಗದ ಸದಸ್ಯರು

🌺🌺🌺🌺🌺🌺🌺🌺🌺🌺
ಅವಕಾಶವನ್ನು, ಪ್ರೋತ್ಸಾಹವನ್ನು ನೀಡುತ್ತಿರುವ ಅಡ್ಮಿನ್ ಖುಷಿ ಕೃಷ್ಣ ಸರ್ ಅವರಿಗೆ ವಂದನೆಗಳು.
🙏🙏🙏🙏🙏🙏🙏🙏🙏🙏
ಶುಭರಾತ್ರಿ
☘☘☘☘☘☘☘☘☘☘
[8/21, 9:36 PM] Prem: ನಮನ

ಕುಸಿದ ಮನಕೆ ಮುದವ ನೀಡಿ
ಬಾಡಿದ ಬಳ್ಳಿ ಬೆಳೆಸಿ ಕಾಪಾಡಿ
ಬರಡಾದ ಬದುಕ ಕಟ್ಟಿ ಬೆಳೆಸಿ
ಎದೆಗೆ ಉಸಿರ ನೀರ ಸುರಿಸಿ...

ತನುವ ಬಳಸಿ ಶಕ್ತಿ ಸ್ಪುರಿಸಿ
ಗಗನದಾಚೆ ಹೊಂಗನಸ ಹರಿಸಿ
ಚುಕ್ಕೆಯಂದ ಕಾದು ಕದ್ದು ತಂದು
ಚಕ್ರದಂತೆ ತಿರುಗಿ ಮನಕೆ ಬಂದು..

ವದನ ತಣಿದು ತಿರೆಯ ಜರಿದು
ಕೊಬ್ಬು ಕರಗಿ ವಿಷವೆಲ್ಲ ತಿವಿದು
ಮದವ ಅಳಿಸಿ ಮೌನ ಬೆರೆಸಿ
ಬರಹ ಉಳಿಸಿ ಕಸುವ ಬಳಸಿ

ಸನಿಹ ಬಳಸಿ ಶಕ್ತಿ ತುಂಬಿ
ಭವದ ಭಾವ ನಲಿವು ದುಂಬಿ
ಪ್ರಾಣ ಮಾನ ನಯನ ಕರುಣ
ಗುಣವ ತರುವ ಮನಕೆ ನಮನ...
@ಪ್ರೇಮ್@

ಭಾನುವಾರ, ಆಗಸ್ಟ್ 19, 2018

423.ಭಾವಗೀತೆ-6

ನಿಧಿ

ಮುಕ್ಕಾಲು ಭಾಗ ಭೂಮೀಲಿ ನಿನಗೆ
ಸರ್ವಸ್ವ ಅವಿತಿಹುದು ನಿನ್ನೊಡಲೊಳಗೆ
ಸಾಗರ ಮಾತೆ ನೀಡು ಎಮಗೆ
ಸದ್ಗತಿಯ, ತೂರುವೆವು ಕಸ ನಿನ್ನಲ್ಲಿಗೆ..

ಎಣ್ಣೆ,ರಾಸಾಯನಿಕ ತಂದು ಸುರಿದು
ಪ್ಲಾಸ್ಟಿಕ್ ಮಾಲೆಯನು ಅಲ್ಲೆ ಎಸೆದು
ವಾಹನದ ಭಾಗಗಳ ನೀರಲ್ಲೆ ತೊಳೆದು
ಅದರ ಮೀನನ್ನು ಜನರೇ ತಿಂದು

ಸಾರಿಗೆ ಸಂವಹನಕೆ ನೀನೇ ಬೇಕು
ಜಲಚರಗಳ ಊಟ ನಿನ್ನಿಂದ ಸಿಗಬೇಕು
ಖುಷಿಗೂ ನಿನ್ನ ದಡವೆ ಸಾಕು
ಮನುಜನೇ ಇನ್ನಷ್ಟು ಕಸ ತಂದು ಹಾಕು!!!?

ಬೇಡಿದ್ದು ಕೊಡುವ ನೀ ನವನಿಧಿಯು
ಜೀವನಾಧಾರಕ್ಕೆ ನೀ ತಪೋಸಿರಿಯು
ಆರೋಗ್ಯ ಆನಂದ ಸರ್ವವ ನೀಡುವೆ
ನಾ ನಿನಗೆ ಬೇಡದ ಕಸಗಳ ಎಸೆವೆ...
@ಪ್ರೇಮ್@

422. ಭಾವಗೀತೆ-5

ಕವನ

ನಿಧಿಯಂತಿರುವ ಸಾಲುಗಳೇ
ಈ ಕವನದ ಪದ ಪುಂಜಗಳೇ
ಜೋಡಿಯಾಗಿ ಕುಳಿತ ಅಕ್ಷರಗಳೆ
ಗುಂಪಾಗಿ ನೆರೆದ ಸಾಲುಗಳೆ..

ಹೃದಯದಿ ಜನಿಸಿ ಬೆಳೆಯುತಲಿದ್ದು
ಮನದಲಿ ಗೂಡನು ಕಟ್ಟುತ ಬಂದು
ಬಾಯಿಗೆ ರಾಗದಿ ಹಾಡಲಿ ತಂದು
ಕಿವಿಗೆ ತಣ್ಣನೆ ತಂಪ ನೀಡಿತಿಂದು..

ಎದೆಯಾಳದ ಖುಷಿಯು ಹೊರಬಂತು
ಮನಮಲ್ಲಿಗೆಯ ಕಂಪನು ಹರಡಿತು
ಗಾಯಕನಿಂದ ಸೊಂಪಾಗಿ ಬೆಳೆಯಿತು
ಜನಮನರಲ್ಲಿ ಮೆಚ್ಚುಗೆ ಗಳಿಸಿತು..

ಮನಕಾನಂದವ ನೀಡಿದ ಗೀತೆ
ಜನಮನ ತಣಿಸಿದ ಸಂಪ್ರೀತೆ
ಮೆದುಳಲಿ ನಲಿದ ತನುಜಾತೆ
ಕೈಯನು ಹಿಡಿದು ನಡೆಸಿದ ಮಾತೆ..
@ಪ್ರೇಮ್@

421. ಭಾವಗೀತೆ-4

ಮಗಳು

ಮಗನೆಂದರೆ ಅಕ್ಕರೆ ಮಾತೆಯ ಮನಕೆ
ಮಗಳೂ ಸಕ್ಕರೆಯಂತಲ್ಲವೆ ಜಗದಗಲಕೆ..
ಕನಸಿನ ರಾಣಿಯಾಗಿ ಮೆರೆಯುವಳು ಆಕೆ
ಮನಸಿಟ್ಟು ಬೆಳೆಸಿದರೆ ಆಕೆಯ ಅರಿಕೆ..

ತಿದ್ದಿ ತೀಡುತ್ತ ಸುತೆಯ ಬೆಳೆಸಲು ಬೇಕು
ಕನಸು ನನಸಾಗಿಸುವ ಮುದ್ದು ಮನಸು ಸಾಕು
ತನ್ನುಸಿರು ಇರೊವರೆಗೆ ಪ್ರೀತಿ ಹಂಚಬೇಕು
ಮಗನಿಂದ ತಾನು ಕಡಿಮೆ ಇಲ್ಲದಿರೆ ಸಾಕು!

ಕನಸಿನ ಕೂಸವಳು ಬೆಳೆದಷ್ಟು ಎತ್ತರ
ಅಪ್ಪನೂ ಬೆಳೆಯುವನು ಬಾನಿಗೆ ಹತ್ತಿರ
ಪುತ್ರಿಯ ಸಾಧನೆಯದು ಹೆಮ್ಮೆ ಜನರ
ಗುಣಕೆ ತಲೆಬಾಗುವೆವು ಮನ-ಮಂದಿರ.

ಕನ್ಯೆ ಜನಿಸಿದರೆ ಹಸುಗೂಸ ಮುರುಟುವರು
ಜನರೆಲ್ಲ ಹೊರಗಿನ ಕುವರಿಯೆನ್ನುವರು
ಬೆಳೆಸಿ ತೋರಿಸಿ ಮಗಳ ಹೇಳಲಿ ಅವರು
ಸಾಧನೆಯಾದಾಗ ಬಾಯಿ ಮುಚ್ಚುವರು!

420.ಭಾವಗೀತೆ-3

ಕೊಡದಿರು ನೋವ

ನನ್ನ ಬದುಕು ಬರಡು ಎಂದು
ನೀನು ಬಳಿಯ ಬರದಿರಲು ಇಂದು
ನಿನ್ನ ನಗೆಯೆ ನನ್ನ ನಗುವು
ನಿನ್ನ ಒಲವು ನನಗೆ ಗೆಲುವು...

ನನ್ನ ನಲ್ಲೆ ಬದುಕಲೊಲ್ಲೆ
ನೀನು ಇರದೆ ನಾನಿರಲು ಒಲ್ಲೆ..
ಜಾಣೆ ನೀನು ನಾನು ಬಲ್ಲೆ
ನಿನ್ನ ಬಿಟ್ಟು ಇರಲು ಒಲ್ಲೆ...

ಮನದಿ ಹೃದಯದಲ್ಲಿ ನೀನೆ
ಏತಕೀ ಕೋಪ ನನ್ನ ಕನ್ಯೆ
ಕೆಂಪಾಗಿದೆ ನಿನ್ನ  ಮಧುರ ಕೆನ್ನೆ
ಕೊಡುವೆ ನಿನಗೆ ನನ್ನ ಜೀವವನ್ನೆ

ನೀನೆ ನನ್ನ ಬದುಕ ಹೂವು
ನೀನೆ  ಬಾಳು ಬೆಳಗೊ ಕಾವು
ನೀನಿರದಿರೆ ನನ್ನ ಸಾವು
ಕೊಡದಿರೆಂದು ನನಗೆ ನೋವು..
@ಪ್ರೇಮ್@

419. .ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-9

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-9

ಎಲ್ಲರ ತಾಳ್ಮೆಗೂ ಒಂದು ಮಿತಿ ಇದೆ. ಅಂತೆಯೇ ಪ್ರಕೃತಿಗೂ ಕೂಡಾ. ಮಳೆ ಕಡಿಮೆ ಆದಾಗ ಜನ 'ನಮಗೆಲ್ಲಾ ಗೊತ್ತು,ನಾವೇನೂ ಕಡಿಮೆ ಇಲ್ಲ' ಎನ್ನುವಂತೆ ಕಪ್ಪೆ, ಕತ್ತೆ, ಮಂಗನಿಗೆ ಮದುವೆ ಮಾಡಿದ್ದೇನು? ಮೋಡ ಬಿತ್ತನೆ ಮಾಡಿದ್ದೇನು! ಆದರೆ ಒಂದೂ ಫಲಿಸಲಿಲ್ಲ!
   ತಾಯಿಯಾದವಳಿಗೆ ಖಂಡಿತಾ ಗೊತ್ತು, ತನ್ನ ಮಕ್ಕಳನ್ನು ಹೇಗೆ ಹತೋಟಿಗೆ ತರುವುದೆಂದು! ಇದಕ್ಕೆ ಭೂತಾಯ ಅಸ್ತ್ರಗಳು ಒಂದೇ,ಎರಡೇ? ತನ್ನಲ್ಲಿರುವ ಪಂಚ ಭೂತಗಳು ಅಥವಾ ಮನುಜ ಮಾಡಿದ ಕೆಲಸಗಳೇ! ಅಗ್ನಿ  ತನ್ನ ಕೆನ್ನಾಲಿಗೆಗಳಿಂದ ಜಗತ್ತೆಲ್ಲ ಸುಡಬಲ್ಲುದು! ಗಾಳಿ ತನ್ನ ಬೀಸುವ ಶಕ್ತಿಯಿಂದ ಭೂತಾಯ ಮೇಲಿರುವ ಸಮಸ್ತ ವಸ್ತುಗಳನ್ನು ತನ್ನೊಡನೆ ಹೊತ್ತೊಯ್ಯಬಲ್ಲುದು! ನೀರು ತನ್ನೊಡನೆ ತೃಣವನ್ನೂ ಉಳಿಸದೆ ಎಳೆದುಕೊಂಡು ಹೋಗುವ ಶಕ್ತಿಯನ್ನು ಹೊಂದಿದೆ! ಆಕಾಶ ವಿಷದ ಮಳೆಯನ್ನೂ ಸುರಿಸಬಲ್ಲುದು , ಭೂಮಿ,ಸೂರ್ಯ-ಚಂದ್ರರನ್ನು  ಆಚೀಚೆ ಮಾಡಬಲ್ಲುದು, ಉಲ್ಕೆಗಳ ದೂಡ ಬಲ್ಲದು, ಹಗಲಿರುಳ ಏರುಪೇರು ಮಾಡಬಲ್ಲುದು, ಮೋಡಗಳ ಡಿಕ್ಕಿ ಹೊಡೆಸಿ ಗುಡುಗು-ಸಿಡಿಲು ತರಿಸಿ ಹಾನಿಗೊಳಿಸಬಹುದು! ಭೂತಾಯಿ ಬಿರುಕು ಬಿಟ್ಟು ತನ್ನೊಳಗೆ ಎಲ್ಲವನ್ನೂ ಸೇರಿಸಿ ನುಂಗಬಹುದು! ಬೆಂಕಿಯುಂಡೆಗಳಾದ ಲಾವಾರಸ ಹರಿಸಿ ಸುಟ್ಟು ಬಿಡಬಹುದು!
  ಇದೀಗ ಕೋಪಗೊಂಡ ಭೂತಾಯಿ ಮಳೆ ನೀರಿನಿಂದ ತನ್ನ ಶಕ್ತಿ ಪ್ರದರ್ಶಿಸಿ, 'ಹೇ ಮಾನವರೇ, ನೀವು ಕ್ಷಣಿಕರು, ಏನೂ ಮಾಡಲಾರಿರಿ, ನನ್ನ ಶಕ್ತಿಯೆದುರು'ಎಂಬಂತಿದೆ! ನಿಜ ಮಾತೆಯ ಮುಂದೆ ನಾವೇನೂ ಇಲ್ಲ, ಪ್ರಕೃತಿಗೆ ಜಾತಿ, ಮತ,ಪಂಗಡಗಳ ಬೇಧವೂ ಇಲ್ಲ! ಎಲ್ಲರೂ ಸಮಾನರು! ಕೊಡಗಿನ, ಕೇರಳದ ಪರಿಸ್ಥಿತಿ ನೋಡಿದರೆ 'ದೇವರಾಟ ಬಲ್ಲವರಾರು?' ಎನಿಸುವುದಂತೂ ಖರೆ!
    ಕೊನೆಯಲ್ಲಿ ಎಲ್ಲಾ ಮಾನವರ ಬಾಯಲ್ಲೂ 'ಅಮ್ಮಾ, ದೇವಾ ರಕ್ಷಿಸು' ಎಂಬುದಷ್ಟೆ ಉದ್ಗಾರ! ಆ  ಪ್ರಾರ್ಥನೆಯಲ್ಲಿ ರಾಜಕೀಯವಿಲ್ಲ, ಜಾತಿ ಬೇಧವಿಲ್ಲ! ಗಡಿನಾಡು, ರಾಜ್ಯ, ಜಿಲ್ಲೆಗಳ ಹೋರಾಟವಿಲ್ಲ! ಸ್ವಚ್ಛ ಹೃದಯದ ಮೊರೆಯದು! ಅದು ದೇವರಿಗೆ ಖಂಡಿತಾ ಕೇಳುತ್ತದೆ!
  ಪ್ರಕೃತಿ ತನ್ನ ಮಕ್ಕಳಿಗೆ ಬುದ್ಧಿ ಕಲಿಸ ಹೊರಟರೆ ಅದಕ್ಯಾರೂ ಎದುರಿಲ್ಲ ಎಂಬುದನ್ನು ಸಾಧಿಸಿದೆ! ಹುಲು ಮಾನವ ಇನ್ನಾದರೂ ಜಾತಿ,ಮತ, ಧರ್ಮ ಎಂದು ಕಚ್ಚಾಡದೆ,ಗರಾಜಕೀಯ ಬಿಟ್ಟು, ದ್ವೇಷ, ಮತ್ಸರ ಅಸೂಯೆಗಳ ಬದಿಗಿಟ್ಟು ಸತ್ಯ, ನ್ಯಾಯಯುತವಾಗಿ ಬದುಕಲು ಕಲಿಯುತ್ತಾನೆಯೇ?
@ಪ್ರೇಮ್@

420. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-8

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-8
   ಮಹಿಳೆಯರೇ, ನಿಮ್ಮ ಗಂಡನಿಗೆ ಕೆಟ್ಟ ಚಟಗಳಿವೆ, ದುಡಿದುದನ್ನು ಮನೆಗೆ ವ್ಯಯಿಸದೆ ಚಟಗಳಿಗೇ ದಾಸನಾದ ಗಂಡ ಅದಕ್ಕೇ ವ್ಯಯಿಸುತ್ತಾನೆಂದು ನಿಮಗೆ ಅನ್ನಿಸುತ್ತದೆಯೇ? ಅಕ್ಕ,ತಂಗಿ,ಗೆಳತಿಯರು, ಬಂಧುಗಳನ್ನು ನೋಡಿ 'ನನಗೂ ಅವಳಂಥ ಗಂಡ ಸಿಗಬೇಕಿತ್ತು, ನನ್ನ ಜೀವನ ಸರಿಯಿಲ್ಲ' ಎಂದು ಹಲವಾರು ಬಾರಿ ಅನ್ನಿಸಿರಬಹುದು. ಆದರೆ ಹಾಗೆ ಕೊರಗಬೇಕೆಂದಿಲ್ಲ, ಬದಲಾಗಿ ಬೇಡದ್ದನ್ನು ದ್ವೇಷಿಸುವ ಬೆಂಕಿಯುಂಡೆಗಳಾಗಿ! ಕೆಲವರಿಗೆ ಕೆಲವನ್ನು ತಡೆಯಬೇಕೆನಿಸಿದರೂ ತಡೆಯಲು ಸಾಧ್ಯವಾಗದೇ ಇರಬಹುದು! ಕುಟುಂಬ, ಸಮಾಜ ಗಂಡನ್ನೇ ನಾಯಕನನ್ನಾಗಿ ಮಾಡಿದೆ, ಅದಕ್ಕೆ ಪ್ರತಿಯೊಂದು ಮಹಿಳೆ ತಲೆಬಾಗಿ ಬದುಕಲೇ ಬೇಕು. ರಸ್ತೆಯಲ್ಲಿ ಯಾರದೋ ಬೈಕ್ ಬಂದರೆ ಅಡ್ಡ ಹಾಕಿ ಹತ್ತಿಕೊಂಡು ಹೋಗುವ ಸ್ವಾತಂತ್ರ್ಯ ಗಂಡಸರಿಗೆ ಮಾತ್ರ ಇದೆ ಈ ದೇಶದಲ್ಲಿ!
  ನಾಲ್ಕು ಜನ ಗಂಡಸರು ಒಟ್ಟಾಗಿ ಧಾಳಿ ಮಾಡಿದರೆ ಎಲ್ಲರನ್ನು ಒಟ್ಟಾಗಿ ತಡೆಯುವಷ್ಟು ಶಕ್ತಿ ಆ ಸೃಷ್ಠಿಯೇ ನಮಗೆ ಒದಗಿಸಿ ಕೊಡಲಿಲ್ಲ! ಇದು ನಮ್ಮ ಮಿತಿಯಾದರೂ ನೆನಪಿಡಿ, ಶಕ್ತಿಗಿಂತ ಯುಕ್ತಿ ಮೇಲು!
   ಗಂಡ ಸತ್ತರೂ ನಾನೇನೂ ಸಮಾಜದಲ್ಲಿ ಕಡಿಮೆಯಿಲ್ಲ ಎಂದು ಬದುಕುತ್ತಾ, ಮಕ್ಕಳನ್ನೂ ಸಾಕುತ್ತಾ ಬದುಕುತ್ತಿರುವ ದಿಟ್ಟ ಮಹಿಳೆಯರು ಸಮಾಜದಲ್ಲಿ ಹಲವಾರು ಧೀರ ಮಹಿಳೆಯರಿದ್ದಾರೆ!! ಆದರೆ ಹೆಂಡತಿ ಸತ್ತ ಬಳಿಕ ಮಕ್ಕಳಿಗಾಗಿ ತನ್ನ ಜೀವನ ಸವೆಸಿ ಬೆಳೆಸುತ್ತಿರುವ ಗಂಡಸರು ಲಕ್ಷಕ್ಕೊಬ್ಬರು ಸಿಗಬಹುದು ಅಷ್ಟೆ! ಅಲ್ಲೆ ಮಹಿಳೆಯ ದಿಟ್ಟ ಶಕ್ತಿ ಬೆಳಕಿಗೆ ಬರುತ್ತದೆ!
  ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆಯೂ ಮಹಿಳೆಯೊಬ್ಬಳಿದ್ದೇ ಇರುತ್ತಾಳೆ! ಮಹಿಳೆಯರಿಲ್ಲದೆ ಪುರುಷರ ಜೀವನ ಬರಡು, ಮಹಿಳೆಯರಿಗೆ ಪುರುಷರ ಅಗತ್ಯ ಎಷ್ಟಿದೆಯೋ,ಅಷ್ಟೆ ಅಗತ್ಯ ಜೀವನದಲ್ಲಿ ಪುರುಷರಿಗೂ ಇದೆ. ಪರಸ್ಪರ ಅವಲಂಬನೆ ಪ್ರಕೃತಿ ಸಹಜ ಧರ್ಮ. ಪ್ರೀತಿ-ಪ್ರೇಮ ಜೀವನದ ಅವಿಭಾಜ್ಯ ಅಂಗ. ಹಿರಿಯರು ಅದಕ್ಕೇ ಮದುವೆಯಂಥ ಕಟ್ಟುಪಾಡುಗಳನ್ನು ತಂದು ಗಂಡು-ಹೆಣ್ಣನ್ನು ಜೋಡಿ ಮಾಡಿ ಒಟ್ಟಿಗೆ ಬದುಕಲು ದಾರಿ ಮಾಡಿ ಬಿಟ್ಟಿರುವರು. ಅಂಥ ಮದುವೆಯಲ್ಲಿ ಗೊತ್ತಿದ್ದೋ ಇಲ್ಲದೆಯೋ ಸರಿಯಾದ ವ್ಯಕ್ತಿ ಬದುಕಿನಲ್ಲಿ ಸಿಗದಿದ್ದರೆ ಬದುಕು ಹಾಳಾಗಿ ಹೋಯಿತು, ಬದುಕು ಮುಗಿದೇ ಹೋಯ್ತು ಅಂತ ಕೊರಗುತ್ತೇವೆ. ಆದರೆ ಒಂದು ಮಾತು ನೆನಪಿಡಬೇಕು, ಜೀವನದ ಅರ್ಧ ಭಾಗವನ್ನು ತಂದೆ ತಾಯಿಯರೊಡನೆ ಓದು-ಆಟ-ಪಾಠ-ಕೆಲಸದಲ್ಲಿ ಕಳೆದ ನಮಗೆ ಜೀವನದ ಅರ್ಧದಲ್ಲಿ ಬಂದ ಗಂಡ ಬದುಕು ಬರಡಾಗಿಸಲು ನಾವೇಕೆ ಬಿಡಬೇಕು? ನಮ್ಮ ಜೀವನಕ್ಕೆ ಸಂಗಾತಿ ಬೇಕು, ಸಂಗಾತಿ ಸಂಗಾತಿಯಾಗಿರಬೇಕೇ ಹೊರತು ಒರಟ, ಕಟುಕನಾಗಿರಬಾರದು. ನಮ್ಮ ಕನಸುಗಳನ್ನು ಮುರಿಯುವ, ನಮ್ಮ ಆಸೆಗಳಿಗೆ ತಣ್ಣೀರೆರಚುವವ ಉತ್ತಮ ಸಂಗಾತಿಯಾಗಲು ಎಂದೂ ಸಾಧ್ಯವಿಲ್ಲ! ಹಾಗಂತ ಎಲ್ಲ ಹೆಣ್ಣು ಮಕ್ಕಳಿಗೂ ನನಗೆ ಬೇಡವೆನಿಸಿದ ಸಂಬಂಧವನ್ನು ಕಿತ್ತೊಗೆಯಲೂ ಸಾಧ್ಯವಿಲ್ಲ ಅಲ್ಲವೇ? ಕಾನೂನು ಕಟ್ಟಳೆಗಳಿಗೆ ತಲೆಬಾಗಿ, ಮಕ್ಕಳಿಗಾಗಿ ತುಟಿಕಚ್ಚಿ ನೋವು ಸಹಿಸಿ ಬದುಕದೆ ವಿಧಿಯಿಲ್ಲ ನೂರಾರು ಬಾರಿ!! ಸಮಾಜದಲ್ಲಿ ಮಹಿಳೆಯೊಬ್ಬಳು ತನಗಾಗಿ ಅಲ್ಲದೆ ಇತರರಿಗಾಗಿ ಬದುಕಬೇಕಾಗುತ್ತದೆ. ಮಾನ ಮರ್ಯಾದೆಗಾಗಿ ಅಂಜಿ, ತಂದೆ-ತಾಯಿಯರ ಮಾನ ಉಳಿಸಲು, ಮಕ್ಕಳ ಜೀವನ ರಕ್ಷಿಸಲು ನಮ್ಮನ್ನು ನಾವು ಧಾರೆಯೆರೆದು, ನಮ್ಮ ಜೀವನವ ಬರಡಾಗಿಸಿ, ಇತರರಿಗಾಗಿ ನಮ್ಮ ಬದುಕನ್ನು ಬಲಿಕೊಟ್ಟು, ಸತ್ತಂತೆ ಬದುಕಬೇಕಾದ ಸಂದರ್ಭಗಳು ಬರಲೂ ಬಹುದು! ನಮ್ಮೆಲ್ಲ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿಯೋ, ಗಾಳಿಗೆ ತೂರಿಯೋ ಇತರರಿಗಾಗಿ ಬದುಕಬೇಕು, ವಿಧಿಯಿಲ್ಲ! ಆದರೆ ಆ ಬದುಕನ್ನು ಬರಡಾಗಿಸದೆ ಸಂತಸದಿ ಬಾಳ್ವೆ ನಡೆಸುವ ಸೂತ್ರ ನಮ್ಮೊಳಗೇ ಇದೆ.
   ನಾವು ಆಲೋಚನೆ ಮಾಡಿದಂತೆ ನಮ್ಮ ಬದುಕಿರುತ್ತದಂತೆ. ನಮ್ಮ ಬದುಕನ್ನು ರೂಪಿಸಲು ಬೇರೆಯವರಿಗೆ ಬಿಡಬಾರದು, ನಾವೇ ನಮ್ಮ ಜೀವನದ ರೂವಾರಿಗಳಾಗಬೇಕು, ಬದುಕಲು ಒಳ್ಳೆಯದಾದ ನೂರೆಂಟು ದಾರಿಗಳಿವೆ. ಹಸಿದ ರಣಹದ್ದುಗಳ ಕಣ್ಣಿಗೆ ಬೀಳದೆ, ನಮ್ಮ ಜೀವನದ ನಾವೆಯನ್ನು ಸಲೀಸಾಗಿ ಮುಂದೊಯ್ಯುವ ಕ್ಯಾಪ್ಟನ್ ಗಳು ನಾವೇ ಆದಾಗ ಮಾತ್ರ ಹೆಣ್ಣು ಅಬಲೆಯಲ್ಲ ಸಬಲೆಯೆಂದು ತೋರಿಸಬಹುದು.
'ನನ್ನ ಜೀವನ ಮುಗಿಯಿತೆಂದು ' ತಲೆ ಕೆಳಗೆ ಹಾಕದೆ, ನಾನೀಗ ಕೆಸರಿನ ಕಮಲ,ಚೆನ್ನಾಗಿ ಅರಳಿ ನಗಬೇಕೆಂಬ ಸಂಕಲ್ಪ ನಾವೇ ತೊಡಬೇಕು. 'ನನ್ನ ಬದುಕಿನ ನೈದಿಲೆಯನ್ನರಳಿಸಲು ಯಾರೂ ಬರದಿದ್ದರೆ ಬೇಡ ನಾನೇ ಅರಳುತ್ತೇನೆ, ತಂದೆಯಾಗಿ ಮೇಲೆ ಆ ದೇವನಿರುವನು' ಎಂದುಕೊಂಡು ಬದುಕಿನ ಹುಟ್ಟು ಹಾಕಿದವರಾರೂ ಇದುವರೆಗೂ ಸೋತಿಲ್ಲ!
   ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳೋಣ. ಅಕ್ಷರವನ್ನೆ ಕಲಿಯದ ಸಾಲು ಮರದ ತಿಮ್ಮಕ್ಕ,ನರಸಮ್ಮ ನಮಗೆ ದ್ರೋಣಾಚಾರ್ಯರಂಥ ಗುರುಗಳಾಗಲಿ. ನಾವೇನೂ ಕಡಿಮೆಯಿಲ್ಲ, ಮಹಿಳೆಯರು ಮನಸ್ಸು ಮಾಡಿದರೆ ಒಂದು ಸಂಸಾರವನ್ನು ಸಾಗರ ಮಾಡಲೂ ಬಹುದು, ಮೆಗಾ ಸೀರಿಯಲ್ ಗಳಲ್ಲಿ ಮಾಡುವಂತೆ ಹಾಳು ಮಾಡಿ ನುಂಗಿ ನೀರು ಕುಡಿಯಲೂ ಬಹುದು! ಆದರೆ ಒಳಿತಿನ ಕಡೆ ಮನವಿರಲಿ! ತಾವೂ ಬದುಕಿ, ಇತರರ ಬದುಕಿಗೂ ಸಾಧ್ಯವಾದರೆ ಆಸರೆಯಾಗೋಣ. ಇಲ್ಲದಿದ್ದರೆ ನಮ್ಮ ಬದುಕನ್ನಾದರೂ ಉತ್ತಮವಾಗಿ ಕಟ್ಟಿಕೊಂಡು ಮನುಷ್ಯತ್ವದಿಂದ ಮನುಷ್ಯರಾಗಿ ಬದುಕೋಣ. ನಮ್ಮ ಸುತ್ತಲಿನವರೊಡನೆ ಅತ್ತೆ- ಸೊಸೆಯರಂತೆ ಕಾದಾಡದೆ ತಾಯಿ-ಮಗಳಂತೆ ಬದುಕಲು ನಮಗೆ ಸಾಧ್ಯವಿಲ್ಲವೇ? ಇಂದೇ ಪ್ರಯತ್ನಿಸೋಣ,ನೀವೇನಂತೀರಿ?
@ಪ್ರೇಮ್@