ಕವನ
ನಿಧಿಯಂತಿರುವ ಸಾಲುಗಳೇ
ಈ ಕವನದ ಪದ ಪುಂಜಗಳೇ
ಜೋಡಿಯಾಗಿ ಕುಳಿತ ಅಕ್ಷರಗಳೆ
ಗುಂಪಾಗಿ ನೆರೆದ ಸಾಲುಗಳೆ..
ಹೃದಯದಿ ಜನಿಸಿ ಬೆಳೆಯುತಲಿದ್ದು
ಮನದಲಿ ಗೂಡನು ಕಟ್ಟುತ ಬಂದು
ಬಾಯಿಗೆ ರಾಗದಿ ಹಾಡಲಿ ತಂದು
ಕಿವಿಗೆ ತಣ್ಣನೆ ತಂಪ ನೀಡಿತಿಂದು..
ಎದೆಯಾಳದ ಖುಷಿಯು ಹೊರಬಂತು
ಮನಮಲ್ಲಿಗೆಯ ಕಂಪನು ಹರಡಿತು
ಗಾಯಕನಿಂದ ಸೊಂಪಾಗಿ ಬೆಳೆಯಿತು
ಜನಮನರಲ್ಲಿ ಮೆಚ್ಚುಗೆ ಗಳಿಸಿತು..
ಮನಕಾನಂದವ ನೀಡಿದ ಗೀತೆ
ಜನಮನ ತಣಿಸಿದ ಸಂಪ್ರೀತೆ
ಮೆದುಳಲಿ ನಲಿದ ತನುಜಾತೆ
ಕೈಯನು ಹಿಡಿದು ನಡೆಸಿದ ಮಾತೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ